ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ ಠಾಣೆ-2:-  ದಿನಾಂಕ 11/02/2023 ರಂದು ಬೆಳಿಗ್ಗೆ 9:00 ಗಂಟೆಗೆ ಶ್ರೀ. ಮೆಹೆಬೂಬ ನದಾಫ ಸಿ.ಹೆಚ್.ಸಿ 220 ಸಂಚಾರಿ ಪೊಲೀಸ್ ಠಾಣೆ-2 ಕಲಬುರಗಿ ನಗರ, ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸಾರಂಶವೆನೆಂದರೆ,   ನಾನು ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಿ.ಹೆಚ್.ಸಿ ಅಂತಾ ಕರ್ತವ್ಯ ನಿರ್ವಹಿಸಿಕೊಂಡು  ಬರುತ್ತಿದ್ದು, ನಿನ್ನೆ ದಿನಾಂಕ 10/02/2023 ರಂದು ಮೇಲಾಧಿಕಾರಿಗಳ ಆದೇಶದಂತೆ ಹೈವೆ ವಾಹನ ನಂ. ಕೆಎ 32 ಜಿ 1391 ಇದರ ಮೇಲೆ ರಾತ್ರಿ 11:00 ಗಂಟೆಯಿಂದ ಬೆಳಿಗ್ಗೆ 6:00 ಗಂಟೆ ವರೆಗೆ ಕರ್ತವ್ಯಕ್ಕೆ ನೇಮಿಸಿದ್ದು, ಇದರ ಚಾಲಕ ಶ್ರೀ ಮಹಾದೇವ ಎಪಿಸಿ 269 ರವರಿದ್ದು, ಇಬ್ಬರು ಕೂಡಿ ರಾತ್ರಿ 11:00 ಗಂಟೆಯಿಂದ ಕರ್ತವ್ಯದ ಮೇಲೆ ಹೋದಾಗ ಇಂದು ದಿನಾಂಕ 11/02/2023 ರಂದು ಮಧ್ಯಾರಾತ್ರಿ 1:35 ಗಂಟೆ ಸುಮಾರಿಗೆ ಪೊಲೀಸ್ ಕಂಟ್ರೋಲದಿಂದ ಮಾಹಿತಿ ತಿಳಿಸಿದ್ದೆನೆಂದರೆ, ಹುಮ್ನಾಬಾದ ರಿಂಗರೋಡ ಮೇಲೆ ಎರಡು ಕಾರುಗಳು ಅಪಘಾತ ಮಾಡಿಕೊಂಡು ಬಗ್ಗೆ ಮಾಹಿತಿ ಬಂದಿರುತ್ತದೆ. ಕೂಡಲೆ ಸ್ಧಳಕ್ಕೆ ಹೋಗಿ ಘಟನೆ ವರದಿಯನ್ನು ನೀಡುವಂತೆ ಮತ್ತು ಸುಗಮ ಸಂಚಾರಗೊಳಿಸುವಂತೆ ತಿಳಿಸಿದ್ದರಿಂದ ನಾವು ಕೂಡಲೆ ಹುಮ್ನಾಬಾದ ರಿಂಗರೋಡಿಗೆ ಮಧ್ಯರಾತ್ರಿ ಸ್ಧಳಕ್ಕೆ ಬಂದು ನೋಡಲಾಗಿ ಹುಮ್ನಾಬಾದ ರಿಂಗರೋಡ ಮೇಲೆ ಒಂದು ಹೊಸ ಕಪ್ಪುಬಣ್ಣದ ನಂಬರ ಬಿಳಲಾರದ ಹೊಸ ಕ್ರಿಟಾ ಕಂಪನಿಯ ಕಾರ ಇದ್ದು, ಈ ಕಾರಿನ ಬಲಭಾಗದ ಹಿಂದಿನ ಬಾಗಿಲಕ್ಕೆ ಹಾಗು ಸುತ್ತಲು ಜಖಂಗೊಂಡಿದ್ದು, ಅಲ್ಲದೆ ಇನ್ನೊಂದು ಬಿಳಿ ಬಣ್ಣದ ಕ್ರಿಟಾ ಕಾರ ಇದ್ದು, ಅದರ ನಂಬರ ಕೆಎ 05 ಎಮ್.ಡಬ್ಲೂ 3751 ನೇದ್ದರ ವಾಹನವು ಮುಂಭಾಗದಲ್ಲಿ ಮತ್ತು ಸೈಡಿಗೆ ಜಖಂ ಆಗಿದ್ದು, ಈ ಕಾರಿನಲ್ಲಿ ಮಹಮ್ಮದ ಮಿರಾಜ ಪಟೇಲ ಈತನಿದ್ದು ಮತ್ತು ಹೊಸಾ ಕ್ರಿಟಾ ಕಾರಿನಲ್ಲಿ 1) ಕ್ರಾಂತಿಕುಮಾರ ತಂದೆ ಚಂದ್ರಕಾಂತ, 2) ವಿಕಾಶ ತಂದೆ ಮಾರುತಿ ಜಗದಾಳೆ, 3) ಆಕಾಶ ತಂದೆ ಮಾರುತಿ ಜಗದಾಳೆ, 4) ದಿನೇಶ ರಾಠೋಡ ಅಂತಾ ನಾಲ್ಕು ಜನ ಇದ್ದು, ದಿನೇಶನಿಗೆ ಹೊರತು ಪಟಿಸಿ ಉಳಿದ ಮೂರು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕಾರಿನ ಮತ್ತು ಕಾರಿನವರ ಮಧ್ಯೆ ಒಬ್ಬರಿಗೊಬ್ಬರು ಬೈದಾಡುವುದು ನಿನ್ನದು ತಪ್ಪು ಮತ್ತು ನನ್ನದು ತಪ್ಪು ಅಂತಾ ವಾದ ಮಾಡಿಕೊಳ್ಳುತ್ತಿದ್ದರು.   ಈ ಘಟನೆಯು ಇಂದು ದಿನಾಂಕ 11/02/2023 ಮಧ್ಯರಾತ್ರಿ 1:30 ಗಂಟೆ ಸುಮಾರಿಗೆ ಹೊಸ ಕ್ರಿಟಾ ನಂ. ಕೆಎ 32 ಝಡ್ 4106 ಇದ್ದು, ಇದನ್ನು ಆಕಾಶ ತಂದೆ ಮಾರುತಿ ಜಗದಾಳೆ ಮತ್ತು ಇನ್ನೊಂದು ಬಿಳಿಯ ಬಣ್ಣದ ಕ್ರಿಟಾ ಕಾರ ನಂ. ಕೆಎ 05 ಎಮ್.ಡಬ್ಲೂ 3751 ನೇದ್ದನ್ನು ಮಹಮ್ಮದ ಮಿರಾಜ ಪಟೇಲ ಇವರಿಬ್ಬರು ಅಂದರೆ ಹೊಸ ಕಾರಿನವರು ಹುಮ್ನಾಬಾದ ರಿಂಗರೋಡ ಕಡೆಯಿಂದ ಸಿಟಿ ಬಳಗೆ ಅತಿವೇಗದಿಂದ ಮತ್ತು ಅಲಕ್ಷತನದಿಂದ ಹಾಗು ಬಿಳಿ ಕ್ರಿಟಾ ಕಾರಿನ ಚಾಲಕನು ರಾಮ ನಗರ ರಿಂಗರೋಡ ಕಡೆಯಿಂದ ಹುಮ್ನಾಬಾದ ರಿಂಗರೋಡ ಕಡಗೆ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಪರಸ್ಪರವಾಗಿ ರಿಂಗರೋಡಿನ ಮೇಲೆ ಅಪಘಾತ ಪಡಿಸಿಕೊಂಡಿದ್ದರಿಂದ ಎರಡು ಕಾರುಗಳು ಜಖಂಗೊಂಡಿದ್ದು, ಅಲ್ಲದೆ ಹೊಸ ಕಾರಿನಲ್ಲಿರುವರು ಕಾರು ಪುಟಿದು ಬಿದ್ದಿದ್ದರಿಂದ ಗಾಯಗಳಾಗಿದ್ದು, ಈ ಇಬ್ಬರುಚಾಲಕರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸರಕಾರಿ  ತರ್ಪೆಯಾಗಿ ಈ ಫಿರ್ಯಾದಿಯನ್ನು ಕರ್ತವ್ಯ ಮುಗಿಸಿಕೊಂಡು ತಂದು  ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 12-02-2023 01:18 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080