ಅಭಿಪ್ರಾಯ / ಸಲಹೆಗಳು

ಸಿ.ಇ.ಎನ್ ಪೊಲೀಸ್‌ ಠಾಣೆ :- ದಿನಾಂಕ: 11/01/2023 ರಂದು 20:00 ಗಂಟೆಗೆ ಫಿರ್ಯಾಧಿ ಶ್ರೀ ಶಿವಕುಮಾರ ತಂದೆ ಮಲ್ಲಿನಾಥ ವಯಸ್ಸು-43 ವರ್ಷಗಳು, ಉದ್ಯೋಗ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು. ಜಾತಿ-ಲಿಂಗಾಯತ, ವಿಳಾಸ ಜಲಮಾಪನ ಉಪ ವಿಭಾಗ ನಂ.4, ಕಲಬುರಗಿ ರವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ  ದೂರು ಅರ್ಜಿಯ ಸಾರಾಂಶವೆನೆಂದರೆ, ದಿನಾಂಕ: 29-09-2021 ರಿಂದ ಕಲಬುರಗಿ ಕೇಂದ್ರಸ್ಥಾನದಲ್ಲಿ ಜಿಲ್ಲಾ ಪಂಚಾಯತ ಸಭಾಂಗಣ ಕಟ್ಟಡದ ಹತ್ತಿರ ಇರುವ ಜಲಮಾಪನ ಉಪ ವಿಭಾಗ ನಂ.4 ಮುಖ್ಯ ರಸ್ತೆ, ಕಛೇರಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಈ ಉಪವಿಭಾಗ ಕಚೇರಿಯಲ್ಲಿ 2017 ರಿಂದ 2021 ರ ಅವಧಿಯಲ್ಲಿ ಶ್ರೀ ಪ್ರಕಾಶ ಬಶೆಟ್ಟಿ, ಇವರು ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. 2020-21 ನೇ ಸಾಲಿನಲ್ಲಿ ಈ ಉಪವಿಭಾಗದ ವ್ಯಾಪ್ತಿಯಲ್ಲಿ ಕಲಬುರಗಿ, ಯಾದಗಿರಿ, ಬೀದರ ಈ 3 ಜಿಲ್ಲೆಗಳಲ್ಲಿಯ ಮಳೆ ಮಾಪನ ಹಾಗೂ ನದಿ ನೀರಿನ ಮಾಪನ ಕೇಂದ್ರಗಳ ವಾರ್ಷಿಕ ನಿರ್ವಹಣೆ ಮತ್ತು ದುರಸ್ತಿ ಮಾಡಿಸಿರುವ ಬಿಲ್ಲುಗಳನ್ನು ಅಂದಿನ ಶಾಖಾಧಿಕಾರಿಯವರಿಂದ ತಯಾರಿಸಿ ಶ್ರೀ ಪ್ರಕಾಶ ಬಶೆಟ್ಟಿ ಇವರಿಗೆ ಸಲ್ಲಿಸಿರುತ್ತಾರೆ. ಈ ಬಿಲ್ಲುಗಳನ್ನು ಉಪವಿಭಾಗದಲ್ಲಿ ಪಾಸು ಮಾಡಿ ಕಾರ್ಯಪಾಲಕ ಇಂಜಿನೀಯರರು, ಬಾಗಲಕೋಟೆ ವಿಭಾಗಕ್ಕೆ ಸಲ್ಲಿಸಿ  ಮೇಲು ರುಜು ಪಡೆದು, ಕಲಬುರಗಿ ಖಜಾನೆ-2 ಮುಖಾಂತರ ಶ್ರೀ ಆಶೋಕ ಹೌದೆ, ಗುತ್ತಿಗೆದಾರರು ಹೊಂದಿರುವ ಕರ್ನಾಟಕ ಬ್ಯಾಂಕ್ ಲಿಮಿಟೆಡ್, ಸೂಪರ್ ಮಾರ್ಕೆಟ, ಕಲಬುರಗಿಯಲ್ಲಿಯ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ 2542000100215901 ಗೆ ದಿನಾಂಕ: 19-12-2020 ರಿಂದ ದಿನಾಂಕ 20-03-2021 ರ ವರೆಗೆ ಒಟ್ಟು ರೂ.30.82 ಲಕ್ಷ ಜಮಾ ಮಾಡಿರುತ್ತಾರೆ. ಈ ಮೊತ್ತದಲ್ಲಿ ರೂ.25.68 ಲಕ್ಷ ಜಲಮಾಪನ ಕೇಂದ್ರಗಳ ರೇನ್ ಗೇಜ್ ರೀಡರ್ಸ್‌ಗಳ ವೇತನ ಮತ್ತು ದುರಸ್ತಿಯ ಹಣ, ಜಲ ಹವಾಮಾನ ಮಾಪನ ಹಾಗು ನದಿ ಪ್ರವಾಹ ಮಾಪನ ಕೇಂದ್ರಗಳ ವಾರ್ಷಿಕ ನಿರ್ವಹಣೆ  ಹಣ ಸೇರಿರುತ್ತದೆ. ಜಮಾ ಮಾಡಿದ ಈ ಹಣವನ್ನು, ಗುತ್ತಿಗೆದಾರರು ಉದ್ದೇಶಿತ ಸಂದಾಯ ಮಾಡದೇ ಶ್ರೀ ಪ್ರಕಾಶ ಬಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರರ ಮಕ್ಕಳ ಹೆಸರುಗಳಿಗೆ ಗುತ್ತಿಗೆದಾರರು ತಮ್ಮ ಚೆಕ್‌ ಮುಖಾಂತರ ಡಿಸೆಂಬರ್-2020 ರ ಮಾಹೆಯಿಂದ ಎಪ್ರೀಲ್-2021 ರ ಅವಧಿಯಲ್ಲಿ ಒಟ್ಟು ರೂ. 25.68 ಲಕ್ಷಗಳಷ್ಟು ಹಣ ಸಂದಾಯಿಸಿರುವುದು ಗುತ್ತಿಗೆದಾರರ ಬ್ಯಾಂಕ್ ಸ್ಟೇಟ್‌ಮೆಂಟಿನಿಂದ ದೃಢಪಟ್ಟಿರುತ್ತದೆ. ಆದರೆ ರೇನ್ ಗೇಜ್  ರೀಡರ್ಸ್ ಗಳಿಗೆ ಪಾವತಿ ಮಾಡಬೇಕಾದ ವೇತನದ ಹಣ ಪಾವತಿಸಿರುವುದಿಲ್ಲ ಎಂಬ ವಿಷಯವನ್ನು ರೇನ್ ಗೇಜ್ ರೀಡರ್ಸ್‌ಗಳು ಸಲ್ಲಿಸಿರುವ ಅರ್ಜಿಗಳಿಂದ ಖಾತ್ರಿ ಆಗುತ್ತದೆ. ರೂ. 25.68 ಲಕ್ಷಗಳಷ್ಟು ಸರ್ಕಾರದ ಹಣವನ್ನು ಶ್ರೀ ಪ್ರಕಾಶ ಬಶೆಟ್ಟಿ, ಮತ್ತು ಶ್ರೀ ಆಶೋಕ ಹೌದೆ, ಪ್ರಥಮ ದರ್ಜೆಯ, ಗುತ್ತಿಗೆದಾರರು ಸೇರಿ ದುರುಪಯೋಗ ಪಡಿಸಿಕೊಂಡಿರುವುದು ಪೂರಕ ದಾಖಲೆಗಳಿಂದ ರುಜುಪಟ್ಟಿರುತ್ತದೆ.ಶ್ರೀ ಅರ್ಜುನ ಭದ್ರೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) (ಕ್ರಾಂತಿಕಾರಿ), ರಾಜ್ಯ ಸಮಿತಿ ಬೆಂಗಳೂರು ಸದಸ್ಯರು, ದಿನಾಂಕ:10-12-2021 ರಂದು ಮುಖ್ಯ ಇಂಜಿನಿಯರ್‌ರಿಗೆ ಹಣ ದುರುಪಯೋಗದ ಕುರಿತು ದೂರು ಸಲ್ಲಿಸಿದ್ದ ಕಾರಣ, ಮುಖ್ಯ ಇಂಜಿನಿಯ‌ರು, ಅಧೀಕ್ಷಕ ಅಭಿಯಂತರರು, ನೀರಾವರಿ ತನಿಖಾ ವೃತ್ತ, ಯರಮರಸ್ ಶಿಬಿರ, ರಾಯಚೂರು ಇವರಿಗೆ ದೂರಿನ ಸತ್ಯಾನ್ವೇಷಣೆ ಮಾಡುವಂತೆ ದಿನಾಂಕ: 07.01.2022 ರ ಪತ್ರದಲ್ಲಿ ಸೂಚಿಸಿದ್ದರು. ಅಧೀಕ್ಷಕ ಅಭಿಯಂತರರು, ನೀರಾವರಿ ತನಿಖಾ ವೃತ್ತ, ಯರಮರಸ್ ಇವರು ವೃತ್ತ ಕಚೇರಿಯ ಕಾರ್ಯ ವ್ಯಾಪ್ತಿಯ 9 ಜನ ಅಧಿಕಾರಿ/ ಸಿಬ್ಬಂದಿಯವರ ದಿನಾಂಕ: 18-01-2022 ರಂದು ತನಿಖಾ ತಂಡವನ್ನು ರಚಿಸಿ, ತನಿಖಾ ವರದಿ/ಸತ್ಯಶೋಧನಾ ವರದಿಯನ್ನು ಪಡೆದುಕೊಂಡಿರುತ್ತಾರೆ. ಈ ತಂಡದ ಮುಖ್ಯಸ್ಥರಾದ ಶ್ರೀ ಮಹಮ್ಮದ ಖಾದರ ಕಾರ್ಯನಿರ್ವಾಹಕ ಅಭಿಯಂತರರು, ನೀರಾವರಿ ತನಿಖಾ ವಿಭಾಗ, ಕಲಬುರಗಿ ರವರು ಸಲ್ಲಿಸಿದ ವರದಿಯಲ್ಲಿ ರೂ.25.68 ಲಕ್ಷಗಳಷ್ಟು ಮೇಲೆ ವಿವರಿಸಿದಂತೆ, ಶ್ರೀ ಪ್ರಕಾಶ ಬಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಗುತ್ತಿಗೆದಾರರು ಸೇರಿಕೊಂಡು ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದನ್ನು ಸ್ಥಿರಪಡಿಸಿರುತ್ತಾರೆ. ಮಾನ್ಯ ಅಧೀಕ್ಷಕ ಅಭಿಯಂತರರು, ನೀರಾವರಿ ತನಿಖಾ ವೃತ್ತ, ಯರಮರಸ್ ಇವರು ತಮ್ಮ ಪತ್ರ ಸಂ: 851 ದಿನಾಂಕ: 22-03-2022 ರಂದು ಸತ್ಯ ಶೋಧನಾ ವರದಿಯ ಪ್ರತಿ ಹಾಗೂ ಹಣ ದುರುಪಯೋಗ ಆಗಿರುವ ದಾಖಲೆಗಳೊಂದಿಗೆ ರಹಸ್ಯ ಪತ್ರದ ಮುಖಾಂತರ ಮುಖ್ಯ ಇಂಜಿಯ‌ರಿಗೆ ವರದಿ ಸಲ್ಲಿಸಿ, ಶ್ರೀ ಪ್ರಕಾಶ ಬಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಶ್ರೀ ಅಶೋಕ ಹೌದೆ, ಪ್ರಥಮ ದರ್ಜೆಯ ಗುತ್ತಿಗೆದಾರರು. ಸರ್ಕಾರದ ಹಣ ರೂ.25.68 ಲಕ್ಷಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಮತ್ತು ಅದಕ್ಕಾಗಿ ಅನುಸರಿಸಿದ ಕಾರ್ಯನೀತಿಯೊಂದಿಗೆ ವಿವರಿಸಿ ವರದಿ ಸಲ್ಲಿಸಿರುತ್ತಾರೆ. ಇವೆರಡು ವರದಿಗಳ ಹಿನ್ನಲೆಯಲ್ಲಿ ಸದರಿ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಶ್ರೀ ಪ್ರಕಾಶ ಬಶೆಟ್ಟಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಶ್ರೀ 'ಆಶೋಕ ಹೌದೆ, ಪ್ರಥಮ ದರ್ಜೆಯ ಗುತ್ತಿಗೆದಾರರ ವಿರುದ್ಧ ತಮ್ಮ ಕಛೇರಿಯ ವ್ಯಾಪ್ತಿಗೊಳಪಡುವ ಪೋಲಿಸ್ ಠಾಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೇಯನ್ನು ಕೂಡಲೇ ದಾಖಲಿಸುವಂತೆ 'ಶ್ರೀ ರಾಜು,ಜಿ.ಪತಂಗ, ಕಾರ್ಯಪಾಲಕ ಇಂಜಿನೀಯರರು, ಜಲಮಾಪನ ವಿಭಾಗ ನಂ.2, ಬಾಗಲಕೋಟೆ ಇವರು ಉಲ್ಲೇಖ (4) ಮತ್ತು (5)ರ ಪತ್ರದ ಮೂಲಕ ನನಗೆ ನಿರ್ದೇಶನ ನೀಡಿರುತ್ತಾರೆ. ಆದರಂತೆ ಉಲ್ಲೇಖ' (6)ರಲ್ಲಿ ಫಿರ್ಯಾದಿಯನ್ನು ಅವಶ್ಯ ದಾಖಲೆಗಳ ಪ್ರತಿಗಳೊಂದಿಗೆ ನೊಂದಾಯಿತ ಅಂಚೆ ಪತ್ರದ ಮೂಲಕ ತಮ್ಮ ಠಾಣೆಗೆ ಮೋಸ್ಟ ಮಾಡಲಾಗಿದೆ. ತಮ್ಮಿಂದ ಯಾವುದೇ ಕ್ರಮ ಜರಗಿಸದ ಕಾರಣ ಉಲ್ಲೇಖ(7) ರಲ್ಲಿ ನಮ್ಮ ಮೇಲಾಧಿಕಾರಿಗಳು ತಮ್ಮ ಮೇಲಾಧಿಕಾರಿಗಳಿಗೆ ಫಿರ್ಯಾದಿಯನ್ನು ಅವಶ್ಯ ದಾಖಲೆಗಳೊಂದಿಗೆ ಸಲ್ಲಿಸುವಂತೆ ಸೂಚಿಸಿರುತ್ತಾರೆ. ಉಲ್ಲೇಖ (8)ರ ಆದೇಶದಲ್ಲಿ ಶ್ರೀ ಪ್ರಕಾಶ ಬಶೆಟ್ಟಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಇವರನ್ನು ದಿನಾಂಕ:16-12-2022ರಂದು ಸೇವೆಯಿಂದ ಅಮಾನತ್ತುಗೊಳಿಸಿರುತ್ತಾರೆ. ಶ್ರೀ ಪ್ರಕಾಶ ಬಶೆಟ್ಟಿಯವರು ದಿನಾಂಕ:31-12-2022ರಂದು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿರುತ್ತಾರೆ. ಮುಂದುವರೆದು ಮಾನ್ಯರೆ, ಸದರಿ ಪ್ರಕರಣದ ಫಿರ್ಯಾದಿಯನ್ನು ಅವಶ್ಯ ದಾಖಲೆಗಳ: ಪ್ರತಿಗಳೊಂದಿಗೆ ಮತ್ತೊಮ್ಮೆ ತಮಗೆ ಸಲ್ಲಿಸುತ್ತಾ ಶ್ರೀ ಪ್ರಕಾಶ ಬಶೆಟ್ಟಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಶ್ರೀ ಆಶೋಕ ಹೌದೆ, ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನುಗಳಡಿಯಲ್ಲಿ ಕ್ರಿಮಿನಲ್ ಮೊಕದ್ದಮೇಯನ್ನು (FIR) ದಾಖಲಿಸುವಂತೆ ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ: 10/01/2023 ರಂದು ಮದ್ಯಾಹ್ನ 12:30 ಗಂಟೆಗೆ ಫಿರ್ಯದಿ ಶ್ರೀ ಚಂದ್ರಕಾಂತ ತಂದೆ ಭೀಮಾಶಂಕರ ನೀಲೂರು ವಯ|| 20 ವರ್ಷ ಜಾ|| ಲಿಂಗಾಯತ ಉ|| ಕೂಲಿ ಕೆಲಸ ಸಾ|| ಗೋಳಾ (ಬಿ) ಹಾ|| ವ|| ಸ್ಟೇಷನ ಬಜಾರ ಅಪ್ಪರ ಲೈನ್ ಕಲಬುರಗಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನಾನು ಸುಮಾರು 2 ವರ್ಷಗಳಿಂದ ರಾಜಶೇಖರ ಪಾಟೀಲ್ ಇವರ ಪೆಂಟ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಸ್ಟೇಷನ ಏರಿಯಾದ ಅಪ್ಪರ ಲೈನ್ನಲ್ಲಿ ಇರುವ ನಮ್ಮ ಮಾಲೀಕರ ಮನೆಯ ಕೋಣೆಯಲ್ಲಿ ವಾಸವಾಗಿರುತ್ತೆನೆ. ನಾನು ದಿನಾಲೂ ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಬಂದು ರಾತ್ರಿ ಮನೆಗೆ ಹೋಗುವ ಮುಂಚೆ ರಾತ್ರಿ 8 ರಿಂದ 8.30 ಗಂಟೆಯ ಅವಧಿಯೊಳಗೆ ನಮ್ಮ ಮಾಲೀಕರ ಪೆಂಟ್ಗಳನ್ನು ಇಡುವ ಗೋದಾಮಗೆ ಹೋಗಿ ಚೆಕ್ ಮಾಡಿಕೊಂಡು ಬರುತ್ತಿದ್ದೆನು. ಇದಲ್ಲದೇ ನಮ್ಮ ಮಾಲೀಕರಿಗೆ ಮತ್ತು ವಿವೇಕಾನಂದ ಬಿರಾದಾರ, ಅವರ ಅಣ್ಣ-ತಮ್ಮಂದಿರೊಂದಿಗೆ ಗೋದಾಮ ಮಾಡಿರುವ 2 ಕೋಣೆಯ ವಿಷಯಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಜಗಳವಾಗಿ ಕೊರ್ಟ ಕಛೇರಿ ನಡೆದಿರುತ್ತವೆ. ಎಂದಿನಂತೆ ನಾನು ದಿನಾಂಕ: 06.01.2023 ರಂದು ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋಗಿ ನಮ್ಮ ಮಾಲೀಕರು ರಾತ್ರಿ 8.15 ಗಂಟೆಯ ಸುಮಾರಿಗೆ ಗೋದಾಮ ಕಡೆಗೆ ಹೋಗಿ ಚೆಕ್ ಮಾಡಿಕೊಂಡು ಬರಲು ಹೇಳಿದಂತೆ ರಾತ್ರಿ 8.25 ಗಂಟೆಯ ಸುಮಾರಿಗೆ ಗೋದಾಮಗೆ ಹೋದಾಗ ನಮ್ಮ ಮಾಲೀಕರ ಸಂಬಂಧಿಕರಾದ ವಿವೇಕಾನಂದ ಬಿರಾದಾರ, ವಿನಾಯಕ ಬಿರಾದಾರ ಜೊತೆಗೆ ಇನ್ನೂ 3 ಜನ ಸೇರಿಕೊಂಡು ನೀನು ಈ ಗೋದಾಮ ಕಡೆಗೆ ಬರಬೇಡ, ಗೋದಾಮ ಲಾಕ್ ಮಾಡಿದ ಬಗ್ಗೆ ಫೋಟೊ, ವಿಡಿಯೋಗಳನ್ನು ಮಾಡಬೇಡ ಅಂತಾ ಹೇಳಿದಾಗ ನಮ್ಮ ಮಾಲೀಕರು ಮಾಡಿಕೊಂಡು ಬಾ ಅಂತಾ ಹೇಳಿದಾರೆ ಅಂತಾ ಹೇಳಲು ವಿವೇಕಾನಂದ ಬಿರಾದಾರ ಇವನು ಮಗನೇ ನೀನು ನನಗೆ ಎದುರು ಮಾತನಾಡುತ್ತಿ ಅಂತಾ ಬೈಯ್ಯುತ್ತಿದ್ದಾಗ ನಾನು ಹೇದರಿ ಅಲ್ಲಿಂದ ಅವಸರದಲ್ಲಿ ಬರುವಾಗ ವಿವೇಕಾನಂದನು ಓಡಿ ಬಂದು ನನಗೆ ಹಿಡಿದು ತಡೆದು ನಿಲ್ಲಿಸಿ ಕೈಯಿಂದ ಬೆನ್ನು ಮೇಲೆ ಹೊಡೆದಿರುತ್ತಾನೆ. ನಂತರ ವಿನಾಯಕ ಬಿರಾದಾರ ಇತನು ಬಂದು ಸಣ್ಣ ಬಡಿಗೆಯಿಂದ ಭುಜದ ಮೇಲೆ ಹೊಡೆದಿರುತ್ತಾನೆ. ಅವರ ಜೊತೆಗಿದ್ದ ಇನ್ನೂ 3 ಜನ ಚೊಟುದ್ದು ಇದ್ದಾನ ಮಗಾ ಎಷ್ಟು ಮಾತನಾಡುತ್ತಾನ ನೋಡ್ರಿ ಅಂತಾ ಅಂದು ಖಲ್ಲಾಸ ಮಾಡ್ರಿ ಮಗನಿಗೆ ಅಂತಾ ಜೀವ ಬೇದರಿಕೆ ಹಾಕಿರುತ್ತಾರೆ. ನನಗೆ ಹೊಡೆ-ಬಡೆ ಮಾಡಿದ್ದು, ಸಣ್ಣ-ಪುಟ್ಟ ಗಾಯಗಳು ಆಗಿರುವುದರಿಂದ ಆಸ್ಪತ್ರೆಗೆ ತೊರಿಸಿಕೊಂಡಿರುವುದಿಲ್ಲಾ ಮತ್ತು ನನಗೆ ಹೊಡೆ-ಬಡೆ ಮಾಡಿ ಬೇದರಿಕೆ ಹಾಕಿರುವುದರಿಂದ ಭಯಗೊಂಡು ನಮ್ಮ ಊರಿಗೆ ಹೋಗಿ ಇಂದು ತಡವಾಗಿ ಬಂದು ದೂರು ಸಲ್ಲಿಸಿರುತ್ತೆನೆ ಕಾರಣ ನನ್ನ ಮೇಲೆ ಹೊಡೆ-ಬಡೆ ಮಾಡಿ ಜೀವ ಬೇದರಿಕೆ ಹಾಗೂ ಅವಾಚ್ಯವಾಗಿ ಬೈದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಎಂ.ಬಿ. ನಗರ ಪೊಲೀಸ್‌ ಠಾಣೆ :-  ದಿನಾಂಕ: 11/01/2023 ರಂದು ಪಿರ್ಯಾದಿದಾರರು ನಿಡಿದ  ಫಿರ್ಯಾದಿ ಸಾರಾಂಶವೇನೆಂದರೆ,  ಫಿರ್ಯಾಧಿದಾರರು ತಮ್ಮ ಹೆಸರಿನಲ್ಲಿರುವ ಕಪ್ಪು ಮತ್ತು ಹಳದಿ  ಬಣ್ಣದ ಬಜಾಜ್ ಅಟೋ ನಂ ಕೆಎ-32 ಎ-4254 ಅ.ಕಿ 60,000/- ನೇದ್ದನ್ನು ದಿನಾಂಕ: 11/01/2023 ರಂದು ಕಿರಾಯಿ ಮುಗಿಸುಕೊಂಡು ಬಂದು ರಾತ್ರಿ 23:30ರ ಸುಮಾರಿಗೆ ನಿಲ್ಲಿಸಿ ವಿಶ್ರಾಂತಿ ಕುರಿತು ಹೊದೆನು ಮರುದಿನ ಬೆಳಿಗ್ಗೆ 05:30ರ ಸುಮಾರಿಗೆ ಎದ್ದು ನೊಡುವಷ್ಟರಲ್ಲಿ  ಮನೆಯಮುಂದೆ ಸಿಲ್ಲಿಸಿದ ಆಟೋ ಇರಲಿಲ್ಲ ಎಲ್ಲಾ ಕಡೆ ಹುಡುಕಾಡಲಾಗಿ ಸಿಗದ ಕಾರಣ, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರೋಜಾ ಪೊಲೀಸ್‌ ಠಾಣೆ :- ದಿನಾಂಕ: 26/11/2022 ರಂದು ರಾತ್ರಿ 11 ಗಂಟೆಗೆ ಮನೆಯ ಮುಂದೆ ಸೈಡಲಾಕ್ ಮಾಡಿ ನಿಲ್ಲಿಸಿದ್ದು , ಮರುದಿವಸ ಬೆಳಿಗ್ಗೆ  7:00 ಗಂಟೆಗೆ ನನ್ನ ಮೋಟಾರ ಸೈಕಲ ನಂ ಕೆಎ 32 ಇಆರ್-5267 ನೋಡಲಾಗಿ ನನ್ನ ಮೋಟಾರ ಸೈಕಲ ಕಾಣಿಸಲಿಲ್ಲ, ಯಾರೋ ಕಳ್ಳರು ನನ್ನ ಮೋಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅಃಕಿಃ 25.000/- ಕಾರಣ ಮಾನ್ಯರವರು ನನ್ನ ಹೊಂಡಾ ಶೈನ್ ಮೋಟಾರ್ ಸೈಕಲನ್ನು ಪತ್ತೆ ಮಾಡಿಕೊಡಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ್‌ ಠಾಣೆ :- ದಿನಾಂಕ:11/01/2023 ರಂದು ಸಾಯಂಕಾಲ 04.30 ಪಿ.ಎಂಕ್ಕೆ ಫಿರ್ಯಾದಿದಾರರಾದ ಶ್ರೀ ಪ್ರಜ್ವಲ ತಂದೆ ಪ್ರಹ್ಲಾದ ಕುಲಕರ್ಣಿ ವ:25 ವರ್ಷ ಉ: E2WAY ಪ್ರೈವೇಟ ಲಿಮಿಟೆಡ ಕಂಪನಿಯ ನಿರ್ದೇಶಕ ಜ್ಯಾ: ಬ್ರಾಹ್ಮೀಣ ಸಾ:ಮನೆ.ನಂ.10/3-45 ಸತ್ಯ ಸಾಯಿ ಕೃಪಾ , 05ನೇ ಅಡ್ಡ ರಸ್ತೆ ವಿಠಲ ನಗರ ಕಲಬುರಗಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ದೂರು ಸಲ್ಲಿಸಿದನ್ನು ಸ್ವೀಕರಿಸಿಕೊಂಡ ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ನಾನು ಪ್ರಜ್ವಲ ತಂದೆ ಪ್ರಹ್ಲಾದ ಕುಲಕರ್ಣಿ ವ:25 ವರ್ಷ ಉ: E2WAY ಪ್ರೈವೇಟ ಲಿಮಿಟೆಡ್ ಕಂಪನಿಯ ನಿರ್ದೇಶಕ ಜ್ಯಾ:ಬ್ರಾಹ್ಮಣ ಸಾ:ಮನೆ.ನಂ.10/3-45 ಸತ್ಯ ಸಾಯಿ ಕೃಪಾ,5ನೇ ಅಡ್ಡರಸ್ತೆ ವಿಠಲ್ ನಗರ ಕಲಬುರಗಿ ಆಗಿದ್ದು, ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ, ನಾನು ಕಲಬುರಗಿ ನಗರದ ನೆಹರು ಗಂಜ ಗಾಂಧಿನಗರ ಕಮಾನ ಹತ್ತಿರ ಹುಮನಾಬಾದ ರೋಡ ಸರ್ದಾರಜಿ ಕಾಂಪ್ಲೇಕ್ಸನಲ್ಲಿ ಸುಮಾರು 09 ತಿಂಗಳ ಹಿಂದೆ ಈ-ಅಶ್ವಾ ಅಟೋಮೊಟಿವ್ ಕಂಪನಿಯ ಎಲೆಕ್ಟ್ರೀಕಲ್ ಮೋಟಾರ ಸೈಕಲ್ ಅಂಗಡಿ ಹೊಸದಾಗಿ ಪ್ರಾರಂಭಮಾಡಿ ಸದರಿ ಅಂಗಡಿಯ ವ್ಯವಹಾರ ನೋಡಿಕೊಂಡು ನನ್ನ ತಂದೆ ತಾಯಿಯೊಂದಿಗೆ ವಾಸವಾಗಿರುತ್ತೇನೆ. ದಿನಾಂಕ:23.12.2023 ರಂದು ಬೆಂಗಳೂರಿನಲ್ಲಿ ನನ್ನ ಐ.ಇ.ಎಲ್.ಟಿ.ಎಸ್ ಪರೀಕ್ಷೆ ಇರುವುದರಿಂದ ದಿನಾಂಕ:22.12.2022 ರಂದು ರಾತ್ರಿ 09.00 ಗಂಟೆಗೆ ನನ್ನ ಈ-ಅಶ್ವಾ ಅಟೋಮೊಟಿವ  ಎಲೆಕ್ಟ್ರೀಕಲ್ ಮೋಟಾರ ಸೈಕಲ್ ಅಂಗಡಿ ಮುಚ್ಚಿಕೊಂಡು ಹೋಗಿರುತ್ತೇನೆ. ಅದು ಅಲ್ಲದೇ ನನ್ನ ಹತ್ತಿರ ಕೆಲಸ ಮಾಡುವ ವಿಕಾಸ ಇತನು ನನಕ್ಕಿಂತ ಮುಂಚೆ ತನ್ನ ಊರಿಗೆ ಹೋಗಿರುತ್ತಾನೆ. ಹೀಗಿದ್ದು, ದಿನಾಂಕ:07.01.2023 ರಂದು ಬೆಳಿಗ್ಗೆ 08.00ಗಂಟೆಗೆ ನನ್ನ ಅಂಗಡಿಯಲ್ಲಿ ಕೆಲಸ ಮಾಡುವ ವಿಕಾಸ ಇತನಿಗೆ ಕರೆದು ನೆಹರು ಗಂಜನಲ್ಲಿರುವ ಈ-ಅಶ್ವಾ ಅಟೋಮೊಟಿವ್ ಎಲೆಕ್ಟ್ರೀಕಲ್ ಮೋಟಾರ ಸೈಕಲ್ ಅಂಗಡಿ ತೆರೆಯಲು ಹೇಳಿ ಅಂಗಡಿಯ ಕೀಯನ್ನು ಕೊಟ್ಟು ಕಳುಹಿಸಿದ್ದು ಇರುತ್ತದೆ. ನಂತರ ಬೆಳಿಗ್ಗೆ 10:17 ಗಂಟೆಗೆ ವಿಕಾಸ ಇತನು ಫೋನಮಾಡಿ ಅಂಗಡಿಯ ಕೀಲಿ ಯಾರೋ ಮುರಿದಿದ್ದಾರೆ ಬೇಗ ಬನ್ನೀರಿ ಅಂತ ತಿಳಿಸಿದ ಮೇರೆಗೆ ನಾನು ಅಂಗಡಿಗೆ ಹೋಗಿ ನೋಡಿದಾಗ ಶಟರ ಕೀ ಮುರಿದು ಅಲ್ಲಿಯೇ ಬಿಸಾಕಿ ಹೋಗಿದ್ದು, ಅಂಗಡಿಯ ಶಟರ ತರೆದು ನೋಡಿದಾಗ ಅಂಗಡಿಯಲ್ಲಿಟ್ಟ ಹೊಸ ಎಲೆಕ್ಟ್ರೀಕಲ್ ಸ್ಕೂಟಿಗಳಾದ 1) ಈ-ಅಶ್ವಾ ಮ್ಯಾಕ್ಸ ಎಲೆಕ್ಟ್ರೀಕಲ್ ಸ್ಕೂಟಿ ಕಪ್ಪು ಬಣ್ಣದು ಚೆಸ್ಸಿ ನಂ. VIAAN000380 ಮೋಟಾರ ನಂ. VIAAN000212 ಅ.ಕಿ. 60890/-ರೂ2) ಈ-ಅಶ್ವಾ ಮ್ಯಾಕ್ಸ ಎಲೆಕ್ಟ್ರೀಕಲ್ ಸ್ಕೂಟಿ ಬಿಳಿ ಬಣ್ಣದು ಚೆಸ್ಸಿ ನಂ. VIAAN000399 ಮೋಟಾರ ನಂ. VIAAN000078 ಅ.ಕಿ. 60890/-ರೂ 3) ಈ-ಅಶ್ವಾ ಮ್ಯಾಕ್ಸ ಎಲೆಕ್ಟ್ರೀಕಲ್ ಸ್ಕೂಟಿ ನೀಲಿ ಬಣ್ಣದು ಚೆಸ್ಸಿ ನಂ. VIAAN000400 ಮೋಟಾರ ನಂ. VIAAN000200 ಅ.ಕಿ.60890/-ರೂ 4) ಈ-ಅಶ್ವಾ ಫಿಡಾಟೋ ಕ್ಯೂಟಿ ಎಲೆಕ್ಟ್ರೀಕಲ್ ಸ್ಕೂಟಿ ಗ್ರೇ ಬಣ್ಣದು ಚೆಸ್ಸಿ ನಂ. DFP2021J0001425 ಮೋಟಾರ ನಂ. DFP2021J0001731 ಅ.ಕಿ.60890/- ರೂ 5) ಈ-ಅಶ್ವಾ ರೈಡರ್ ಎಲೆಕ್ಟ್ರೀಕಲ್ ಸ್ಕೂಟಿ ಕಪ್ಪು ಬಣ್ಣದು ಚೆಸ್ಸಿ ನಂ. .202110SL2600 ಮೋಟಾರ ನಂ. EHDE/J21/600 ಅ.ಕಿ.64810/-ರೂ 6) ಈ-ಅಶ್ವಾ ರೈಡರ್ ಎಲೆಕ್ಟ್ರೀಕಲ್ ಸ್ಕೂಟಿ ಕಪ್ಪು ಬಣ್ಣದು ಚೆಸ್ಸಿ ನಂ. 202110SL2765 ಮೋಟಾರ ನಂ. EHDE/J21/822 ಅ.ಕಿ.64810/-ರೂ 7) ಈ-ಅಶ್ವಾ ರೈಡರ್ ಎಲೆಕ್ಟ್ರೀಕಲ್ ಸ್ಕೂಟಿ ಕೆಂಪು ಬಣ್ಣದು ಚೆಸ್ಸಿ ನಂ. 202110SL2880 ಮೋಟಾರ ನಂ. EHDE/J21/745 ಅ.ಕಿ.64810/-ರೂ ಮತ್ತು 8) ಒಂದು ಹೆಚ್.ಪಿ ಕಂಪನಿಯ ಲ್ಯಾಪಟಾಪ ಅ.ಕಿ20,000/-ರೂ ಹೀಗೆ  ಒಟ್ಟು ಅ.ಕಿ 4,57,990/-ರೂ ಬೆಲೆವುಳ್ಳ 07 ಎಲೆಕ್ಟ್ರೀಕಲ್ ಸ್ಕೂಟಿಗಳು ಮತ್ತು 01 ಲ್ಯಾಪಟಾಪ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ನನ್ನ ಅಂಗಡಿ ಕಳ್ಳತನವಾದ ಬಗ್ಗೆ ನನ್ನ ತಂದೆ ತಾಯಿಯೊಂದಿಗೆ ಹಾಗೂ ಇನ್ಸೂರೆನ್ಸ ಕಂಪನಿಯವರೊಂದಿಗೆ ಮಾತನಾಡಿಕೊಂಡು ಪೊಲೀಸ ಠಾಣೆಗೆ ಬಂದು ತಡವಾಗಿ ದೂರು ಕೊಟ್ಟಿದ್ದು ಇರುತ್ತದೆ. ದಿನಾಂಕ:06.01.2023 ರಂದು ಶನಿವಾರ ರಾತ್ರಿ 08.00 ಗಂಟೆಯಿಂದ ದಿನಾಂಕ:07.01.2023 ರಂದು ಬೆಳಗಿನ 10.00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ನೆಹರು ಗಂಜ ಗಾಂಧಿನಗರ ಕಮಾನ ಹತ್ತಿರ ಹುಮನಾಬಾದ ರೋಡ ಸರ್ದಾರಜಿ ಕಾಂಪ್ಲೇಕ್ಸನಲ್ಲಿದ್ದ ನನ್ನ ಅಂಗಡಿಯ ಕೀಲಿ ಮುರಿದು ಒಟ್ಟು 07 ಈ-ಅಶ್ವಾ ಕಂಪನಿಯ ಎಲೆಕ್ಟ್ರೀಕಲ್ ಸ್ಕೂಟಿ ಮತ್ತು 01 ಹೆಚ್.ಪಿ ಕಂಪನಿಯ ಲ್ಯಾಪಟಾಪನ್ನು ಕಳುವು ಮಾಡಿಕೊಂಡು ಹೋದ ಯಾರೋ ಅಪರಿಚಿತ ಕಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ್‌ ಠಾಣೆ :- ದಿನಾಂಕ 11/01/2023 ರಂದು ಸಂಜೆ 7-45 ಗಂಟೆಗೆ ಫಿರ್ಯಾದಿ ಶ್ರೀ ಶಬ್ಬೀರಖಾನ ತಂದೆ ಜುಮ್ಮಾ ಖಾನ ವ:50 ವರ್ಷ ಉ: ಲಾರಿ ನಂಬರ ಎಂಪಿ 09 ಹೆಜೆ-1746 ಚಾಲಕ ಜಾತಿ ಮುಸ್ಲಿಂ ಸಾ: ಭಗತಸಿಂಗ ಚೌಕ ಖಾಸಪೂರಾ ತಾ:ಜಿ: ಖಂಡವಾ ಮಧ್ಯಪ್ರದೇಶ ರಾಜ್ಯ ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಗಣಕೀಕೃತ ಮಾಡಿಸಿದ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ, ನಾನು, ಶಬ್ಬೀರಖಾನ ತಂದೆ ಜುಮ್ಮಾ ಖಾನ ವ:50 ವರ್ಷ ಉ: ಲಾರಿ ನಂಬರ ಎಂಪಿ 09 ಹೆಜೆ-1746 ಚಾಲಕ ಜಾತಿ ಮುಸ್ಲಿಂ ಸಾ: ಭಗತಸಿಂಗ ಚೌಕ ಖಾಸಪೂರಾ  ತಾ:ಜಿ: ಖಂಡವಾ ಮಧ್ಯಪ್ರದೇಶ ರಾಜ್ಯ ಇದ್ದು, ಈ ಮೂಲಕ ತಮಗೆ ದೂರು ಕೊಡುವದೆನೆಂದೆರೆ, ನಮ್ಮ ಮಾಲೀಕರಾದ ಪವನಕುಮಾರ ಶರ್ಮಾ ನ್ಯೂ ಇಂಡಿಯಾ ಟ್ರಾನ್ಸಪೋರ್ಟ ರವರು ನನಗೆ ಕರ್ನಾಟಕ ರಾಜ್ಯದ ಕಲಬುರಗಿ ನಗರದ ಗಂಜ ಏರಿಯಾದಲ್ಲಿ ಎಸ್.ವಿ.ಗಾದಾ, ಎಸ್.ಎಸ್. ಮುದ್ದಾ, ವೆಂಕಟೇಶ್ವರ ಕಿರಾಣ ಸ್ಟೋರ, ಅಮನ ಟ್ರೇಡಿಂಗ ಕಂಪನಿ, ಬಾವಗಿ ಸೂಪರ ಶಾಪ್, ಉಮಾಕಾಂತ ಟ್ರೇಡಿಂಗ ಕಂಪನಿ, ವೆಂಕಟೇಶ ಸಾಯಿ, ಜೇಠಮಲ್ಲ ಲಕ್ಷ್ಮೀ ಟ್ರೇಡಿಂಗ ಕಂಪನಿ, ಕೃಷ್ಣಾ ಟ್ರೇಡಿಂಗ ಕಂಪನಿ, ವಿಜಯ ಭೀಮಳ್ಳಿ ಇವರುಗಳಿಗೆ  50 ಕೆ.ಜಿ. ತೂಕವುಳ್ಳ 30 ಟನ್ ರೋಕನ ಗೋಧಿ ಚೀಲಗಳನ್ನು ನಮ್ಮ ಲಾರಿ ಎಂಪಿ 09 ಹೆಜೆ 1746 ರಲ್ಲಿ ಲೋಡ ಮಾಡಿಕೊಂಡು ಅವರಿಂದ ಬರಬೇಕಾದ ಹಣ ವಾಪಸ್ಸು ತೆಗೆದುಕೊಂಡು ಬರುವಂತೆ ಹೇಳಿದಾಗ ಅವರ ಮಾತಿಗೆ ಒಪ್ಪಿಕೊಂಡು, ಲಾರಿ ಎಂಪಿ-09 ಹೆಜೆ-1746 ರಲ್ಲಿ 30 ಟನ್ ಗೋಧಿ ಚೀಲಗಳನ್ನು ಲೋಡ ಮಾಡಿಕೊಂಡು ದಿನಾಂಕ: 05/01/2023 ರಂದು ಸಂಜೆ 06-00 ಗಂಟೆ ಸುಮಾರಿಗೆ ನಮ್ಮ ನ್ಯೂ ಇಂಡಿಯಾ ಟ್ರಾನ್ಸಪೋರ್ಟದಿಂದ ನಾನು ಮತ್ತು ನನ್ನ ಮಗ ಆಯಾನಖಾನ ಕ್ಲೀನರ ಇಬ್ಬರು ಕೂಡಿಕೊಂಡು ಹೊರಟ್ಟಿದ್ದು, ದಿನಾಂಕ 07/01/2023 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ಕಲಬುರಗಿಗೆ ತಲುಪಿ ಅರ್ಧ ಮಾಲು ಶನಿವಾರ ಮತ್ತು ಅರ್ಧ ಮಾಲು ರವಿವಾರ ಸಂಬಂಧಪಟ್ಟ ಈ ಮೇಲಿನ ಹೆಸರಿಸಿದ ಮಾಲೀಕರ ರವರಲ್ಲಿ ಇಳಿಸಿದ ಅವರಿಂದ ಬಂದ 79,500/- ರೂ. ಹಣವನ್ನು ತೆಗೆದುಕೊಂಡೆನು. ಹಣ ಬಂದ ವಿಷಯ ನಮ್ಮ ಮಾಲೀಕರಿಗೆ ದಿನಾಂಕ 09/01/2023 ರಂದು ತಿಳಿಸಿದಾಗ ಅವರು ನನಗೆ ತಮ್ಮ ಬ್ಯಾಂಕ ಖಾತೆ ಸಂಖ್ಯೆ 33146355374 ನೇದ್ದಕ್ಕೆ  ತುಂಬಕ್ಕೆ ತಿಳಿಸಿದಾಗ ಅದಕ್ಕೆ ಒಪ್ಪಿಕೊಂಡೆನು. ಬೆಳಗಿನ 10-30 ಗಂಟೆ ಸುಮಾರಿಗೆ ಎಸ್.ಎಸ್. ಮುದ್ದಾ ಅಂಗಡಿ ಹತ್ತಿರವಿದ್ದಾಗ ಒಬ್ಬನು ನನ್ನ ಹತ್ತಿರ ಬಂದು ತಾನು ಮಧ್ಯಪ್ರದೇಶ ಲಾರಿ ಚಾಲಕ ನನಗೆ ಪರಿಚಯ ಆಗಿದ್ದು, ಅವನು ಅಂದಾಜ 35 ರಿಂದ 40 ವರ್ಷ ವಯಸ್ಸಿವನಿದ್ದು, ಹಿಂದಿ ಭಾಷೆ ಮಾತನಾಡುತ್ತಿದ್ದನು. ನಾನು ಬ್ಯಾಂಕಿಗೆ ಹಣ ತುಂಬಲು ಹೊರಟಾಗ ಅಪರಿಚಿತ ವ್ಯಕ್ತಿಯು ತನಗೆ ಬ್ಯಾಂಕಿನಲ್ಲಿ ಕೆಲಸವಿದೆ ಅಂತಾ ಹೇಳಿ ನನ್ನೊಂದಿಗೆ ಕಲಬುರಗಿ ನಗರದ ಗಂಜ ಏರಿಯಾದಲ್ಲಿ ಎಸ್.ಬಿ.ಐ. ಬ್ಯಾಂಕ ಕಡೆ ಹೊರಟಿದ್ದು, ಬ್ಯಾಂಕಿನ ಎದುರುಗಡೆ ರಸ್ತೆಯ ಮೇಲೆ ನನ್ನ ಜೊತೆಯಲ್ಲಿ ಬಂದ ಅಪರಿಚಿತ ವ್ಯಕ್ತಿಗೆ  500 ರೂ. ಮುಖಬೆಲೆಯ 100 ನೋಟು ಹೀಗೆ ಒಟ್ಟು 50,000/- ರೂ. ಬ್ಯಾಂಕನಲ್ಲಿ ತುಂಬುವಾಗ ಕೊಡುವಂತೆ ಹೇಳಿ ಅಪರಿಚಿತ ವ್ಯಕ್ತಿಯ ಕೈಯಲ್ಲಿ 50,000/- ರೂ. ಹಣ ಕೊಟ್ಟೆನು. ನಾವಿಬ್ಬರು ಬ್ಯಾಂಕಿನಲ್ಲಿ ಹೋದಾಗ ನಾನು ಹಣ ತುಂಬುವ  ಫಾರಂ ತೆಗೆದುಕೊಳ್ಳಲು ಹೋದಾಗ ಅಪರಿಚಿತ ವ್ಯಕ್ತಿಯು ಅಲ್ಲಿಂದ ನನ್ನ ನಗದು ಹಣ 50,000/-ರೂ. ಹಣ ಮೋಸದಿಂದ ತೆಗೆದುಕೊಂಡು ಅಲ್ಲಿಂದ ಹೊರೆಗೆ ಹೋದನು. ಈ ಘಟನೆಯು ಬೆಳಗಿನ 11-30 ಗಂಟೆಯಿಂದ ಮಧ್ಯಾಹ್ನ 12-00 ಗಂಟೆ ಅವಧಿಯಲ್ಲಿ  ನಡೆದಿರುತ್ತದೆ. ಅಪರಿಚಿತ ವ್ಯಕ್ತಿಗೆ ಅಂದಿನಿಂದ ಇಂದಿನ ವರೆಗೆ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ಕೊಡುತ್ತಿದ್ದು,  ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ. ಈ ಮೇಲೆ ಹೇಳಿದಂತೆ ನನ್ನಿಂದ ನಗದು ಹಣ 50,000/- ರೂ. ಹಣ ಮೋಸದಿಂದ ತೆಗೆದುಕೊಂಡು ಹೋದ ಅಪರಿಚಿತ ವ್ಯಕ್ತಿ ಅಂದಾಜ 35 ರಿಂದ 40 ವರ್ಷ ವ್ಯಕ್ತಿಗೆ ಪತ್ತೆ ಹಚ್ಚಿ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 11/01/2023 ರಂದು ಮದ್ಯಾಹ್ನ 1:13 ಕ್ಕೆ ಫಿರ್ಯಾದಿದಾರರಾದ ಶ್ರೀ ಚನ್ನಮಲ್ಲಪ್ಪ ತಂದೆ ಪ್ರಭು ಮಾತಾರಿ ವಯ:23 ವರ್ಷ ಜಾ:ಮಾಲಗಾರ ಉ:ವಿದ್ಯಾರ್ಥಿ ಸಾ||ಮಾಡಿಯಾಳ ತಾ||ಆಳಂದ ಕಲಬುರಗಿ ಜಿಲ್ಲೆ. ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದರ ಸಾರಾಂಶವೆನೆಂದರೆ ನನ್ನ ಮಾವನಾದ ಲಕ್ಷ್ಮೀಣ ತಂದೆ ನಿಂಗಪ್ಪ ನಂದೂರ ಸಾ||ಬಾರದೊಳ ತಾ||ಇಂಡಿ ವಿಜಯಪೂರ ಜಿಲ್ಲೆ. ಇವರ ಹೆಸರಿನಲ್ಲಿ ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟಾರ್ ಸೈಕಲ್ ನಂ. KA-28-EG-0563 ನೇದ್ದು ಇದ್ದು ಸದರಿ ಮೋಟಾರ್ ಸೈಕಲ್ ನಾನೇ ನಡೆಸುತ್ತಿರುತ್ತೇನೆ. ನಾನು ದಿನಾಂಕ: 05/01/2023 ರಂದು ಸಾಯಂಕಾಲ 4:00 ಗಂಟೆ ಸುಮಾರಿಗೆ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ ವಾಹನ ನಿಲ್ಲಿಸುವ ಸ್ಥಳದಲ್ಲಿ ನಿಲ್ಲಿಸಿ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನನ್ನ ತಮ್ಮನನ್ನು ವಿಚಾರಿಸಿಕೊಂಡು ಮರಳಿ ಅದೇ ದಿನ ಸಾಯಂಕಾಲ 5:30 ಗಂಟೆ ಸುಮಾರಿಗೆ ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲಾ ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 12-01-2023 05:35 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080