ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್ ಠಾಣೆ-೨ :- ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ, ದಿನಾಂಕ 11/01/2022 ರಂದು ರಾತ್ರಿ ೧೧:೦೦ ಗಂಟೆಗೆ ಸುಲ್ತಾನ ತಂದೆ ಹುಣಚಪ್ಪಾ ಹುಣಚಗೊಂಡ ಇವರು ಪೊಲೀಸ್ ಠಾಣೆಗೆ ಪೋನ್ ಮಾಡಿ ಮಾಹಿತಿ ತಿಳಿಸಿದಂತೆ ನಾನು ಕಾಮರೆಡ್ಡಿ ಆಸ್ಪತ್ರೆಗೆ ಭೆಟಿ ಕೊಟ್ಟು ಮೃತ ಹೊಂದಿದ ಫಿರ್ಯಾಧಿ ತಂದೆಯ ಶವವನ್ನು ನೋಡಿ ರಾತ್ರಿ ೧೧-೧೫ ಗಂಟೆಗೆ ಪುರಾವಣೆ ಹೇಳಿಕೆಯನ್ನು ಆಸ್ಪತ್ರೆಯಲ್ಲಿ ಪೆಡದುಕೊಂಡು ಪುರಾಣೆ ಹೇಳಿಕೆ ಸಾರಾಂಶವೆನೆಂದರೆ, ದಿನಾಂಕ 26/12/2021  ರಂದು ರಾತ್ರಿ ೮-೩೦ ಗಂಟೆ ಸುಮಾರಿಗೆ ಶರಣಸಿರಸಗಿ ತಾಂಡಾ ಎದುರುಗಡೆ ಇರುವ ಮುಖ್ಯ ರಸ್ತೆಯಿಂದ ನಮ್ಮ ತಂದೆಯವರಾದ ಹುಣಚಪ್ಪ ತಂದೆ ಸುಲ್ತಾನಪ್ಪ ಹುಣಚಗೊಂಡ ಇವರು ಮೂತ್ರ ವಿಸರ್ಜನೆ ಮಾಡುವ ಸಲುವಾಗಿ ಮುಖ್ಯ ರಸ್ತೆಯ ಮುಖಾಂತರ ನಡೆದುಕೊಂಡು ಹೋಗುವಾಗ ಕಲಬುರಗಿ ಕಡೆಯಿಂದ ಆಫಜಲಪೂರ ಕಡೆಗೆ ಹೋಗುವ  ಕುರಿತು ಟಂ ಟಂ ವಾಹನ ಸಂಖ್ಯೆ ಕೆಎ-೩೨ ಬಿ-೮೮೪೮ ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ತಂದೆಯವರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು ಪರಿಣಾಮ ನಮ್ಮ ತಂದೆಯವರು ಗಂಭೀರ ಸ್ವರೂಪ ಗಾಯ ಹೊಂದಿದ್ದು ಅವರನ್ನು ಉಪಚಾರ ಕುರಿತು ಅದೆ ದಿವಸ ರಾತ್ರಿ ನಗರದ ಕಾಮರೆಡ್ಡಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ನಾನು ಆಸ್ಪತ್ರೆಯಲ್ಲಿದ್ದಾಗ ದಿನಾಂಕ ೨೭/೧೨/೨೦೨೧ ರಂದು  ಸಂಚಾರಿ ಪೊಲೀಸ ಠಾಣೆ-೦೨ ಪೊಲೀಸ ಅಧಿಕಾರಿಯವರು ಆಸ್ಪತ್ರೆಗೆ ಭೇಟಿ ನೀಡಿದ್ದು ಅವರಿಗೆ ಎಲ್ಲಾ ವಿಷಯ ತಿಳಿಸಿ ವಾಹನ ಚಾಲಕನ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ಹೇಳಿಕೆ ಮುಖಾಂತರ ಫಿರ್ಯಾದಿಯನ್ನು ನೀಡಿ ಕೇಸು ದಾಖಲಿಸಿರುತ್ತೇನೆ.ನಮ್ಮ ತಂದೆಯವರು ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದು ನಮ್ಮ ಹತ್ತಿರ ದುಡ್ಡಿನ ಕೊರತೆ ಇದ್ದುದ್ದರಿಂದ ಆಸ್ಪತ್ರೆಯ ಬಿಲ್ಲು ಕಟ್ಟಲು ಸಾಧ್ಯತೆ ಇರದ ಕಾರಣ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸುವ ಸಲುವಾಗಿ ನಿರ್ಧರಿಸಿ ದಿನಾಂಕ ೧೧.೦೧.೨೦೨೨ ರಂದು ಸಾಯಂಕಾಲ ೬-೪೫ ಗಂಟೆಗೆ ಕಾಮರೆಡ್ಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು ನಮ್ಮ ತಂದೆಯನ್ನು ನಾನು ಮತ್ತು ತಮ್ಮ ಬಸವರಾಜ ಹಾಗೂ ಸಂಬಂದಿ ಅಣ್ಣನಾದ ಮಲ್ಲಪ್ಪ  ಮೂವರು ಕೂಡಿಕೊಂಡು ಅಟೋರಿಕ್ಷಾದಲ್ಲಿ ಗಾಯಾಳು ನಮ್ಮ ತಂದೆಯನ್ನು ಕೂಡಿಸಿಕೊಂಡು ಕಾಮರೆಡ್ಡಿ ಆಸ್ಪತ್ರೆಯಿಂದ ಹೊರಟು ಅಲ್ಲಿಯೇ ಸಮೀಪ ಇರುವ ಮುಖ್ಯ ರಸ್ತೆಯಿಂದ ಹೋಗುವಾಗ ನಮ್ಮ ತಂದೆಯವರಿಗೆ ಉಸಿರು ನಿಂತಿತ್ತು ಪುನಃ ಕಾಮರೆಡ್ಡಿ ಆಸ್ಪತ್ರೆಗೆ ತಂದಿದ್ದು ಅಲ್ಲಿ ವೈಧ್ಯರು ಸಾಯಂಕಾಲ ೭-೧೫ ಗಂಟೆಗೆ ನೋಡಿ ಪರೀಕ್ಷಿಸಿ  ಮೃತ ಪಟ್ಟಿರುತ್ತಾರೆ ಅಂತಾ ತಿಳಿಸಿರುತ್ತಾರೆ. ಈ ವಿಷಯ ನಾನು ಸಂಚಾರಿ ಪೊಲೀಸ ಠಾಣೆ-೦೨ ಗೆ ಪೋನ ಮಾಡಿ ತಿಳಿಸಿದ್ದು  ಮುಂದಿನ ಕಾನೂನು  ಕ್ರಮ ಕೈಕೊಂಡು ಪ್ರಕ್ರೀಯೆ ಪೂರ್ಣಗೊಳಿಸಿ ನಮ್ಮ ತಂದೆಯ ಶವವನ್ನು ನಮಗೆ ಒಪ್ಪಿಸಬೇಕೆಂದು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 18-01-2022 05:26 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080