Feedback / Suggestions

ಸಂಚಾರಿ ಪೊಲೀಸ್ ಠಾಣೆ-೨ :- ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ, ದಿನಾಂಕ 11/01/2022 ರಂದು ರಾತ್ರಿ ೧೧:೦೦ ಗಂಟೆಗೆ ಸುಲ್ತಾನ ತಂದೆ ಹುಣಚಪ್ಪಾ ಹುಣಚಗೊಂಡ ಇವರು ಪೊಲೀಸ್ ಠಾಣೆಗೆ ಪೋನ್ ಮಾಡಿ ಮಾಹಿತಿ ತಿಳಿಸಿದಂತೆ ನಾನು ಕಾಮರೆಡ್ಡಿ ಆಸ್ಪತ್ರೆಗೆ ಭೆಟಿ ಕೊಟ್ಟು ಮೃತ ಹೊಂದಿದ ಫಿರ್ಯಾಧಿ ತಂದೆಯ ಶವವನ್ನು ನೋಡಿ ರಾತ್ರಿ ೧೧-೧೫ ಗಂಟೆಗೆ ಪುರಾವಣೆ ಹೇಳಿಕೆಯನ್ನು ಆಸ್ಪತ್ರೆಯಲ್ಲಿ ಪೆಡದುಕೊಂಡು ಪುರಾಣೆ ಹೇಳಿಕೆ ಸಾರಾಂಶವೆನೆಂದರೆ, ದಿನಾಂಕ 26/12/2021  ರಂದು ರಾತ್ರಿ ೮-೩೦ ಗಂಟೆ ಸುಮಾರಿಗೆ ಶರಣಸಿರಸಗಿ ತಾಂಡಾ ಎದುರುಗಡೆ ಇರುವ ಮುಖ್ಯ ರಸ್ತೆಯಿಂದ ನಮ್ಮ ತಂದೆಯವರಾದ ಹುಣಚಪ್ಪ ತಂದೆ ಸುಲ್ತಾನಪ್ಪ ಹುಣಚಗೊಂಡ ಇವರು ಮೂತ್ರ ವಿಸರ್ಜನೆ ಮಾಡುವ ಸಲುವಾಗಿ ಮುಖ್ಯ ರಸ್ತೆಯ ಮುಖಾಂತರ ನಡೆದುಕೊಂಡು ಹೋಗುವಾಗ ಕಲಬುರಗಿ ಕಡೆಯಿಂದ ಆಫಜಲಪೂರ ಕಡೆಗೆ ಹೋಗುವ  ಕುರಿತು ಟಂ ಟಂ ವಾಹನ ಸಂಖ್ಯೆ ಕೆಎ-೩೨ ಬಿ-೮೮೪೮ ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ತಂದೆಯವರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು ಪರಿಣಾಮ ನಮ್ಮ ತಂದೆಯವರು ಗಂಭೀರ ಸ್ವರೂಪ ಗಾಯ ಹೊಂದಿದ್ದು ಅವರನ್ನು ಉಪಚಾರ ಕುರಿತು ಅದೆ ದಿವಸ ರಾತ್ರಿ ನಗರದ ಕಾಮರೆಡ್ಡಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ನಾನು ಆಸ್ಪತ್ರೆಯಲ್ಲಿದ್ದಾಗ ದಿನಾಂಕ ೨೭/೧೨/೨೦೨೧ ರಂದು  ಸಂಚಾರಿ ಪೊಲೀಸ ಠಾಣೆ-೦೨ ಪೊಲೀಸ ಅಧಿಕಾರಿಯವರು ಆಸ್ಪತ್ರೆಗೆ ಭೇಟಿ ನೀಡಿದ್ದು ಅವರಿಗೆ ಎಲ್ಲಾ ವಿಷಯ ತಿಳಿಸಿ ವಾಹನ ಚಾಲಕನ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ಹೇಳಿಕೆ ಮುಖಾಂತರ ಫಿರ್ಯಾದಿಯನ್ನು ನೀಡಿ ಕೇಸು ದಾಖಲಿಸಿರುತ್ತೇನೆ.ನಮ್ಮ ತಂದೆಯವರು ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದು ನಮ್ಮ ಹತ್ತಿರ ದುಡ್ಡಿನ ಕೊರತೆ ಇದ್ದುದ್ದರಿಂದ ಆಸ್ಪತ್ರೆಯ ಬಿಲ್ಲು ಕಟ್ಟಲು ಸಾಧ್ಯತೆ ಇರದ ಕಾರಣ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸುವ ಸಲುವಾಗಿ ನಿರ್ಧರಿಸಿ ದಿನಾಂಕ ೧೧.೦೧.೨೦೨೨ ರಂದು ಸಾಯಂಕಾಲ ೬-೪೫ ಗಂಟೆಗೆ ಕಾಮರೆಡ್ಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು ನಮ್ಮ ತಂದೆಯನ್ನು ನಾನು ಮತ್ತು ತಮ್ಮ ಬಸವರಾಜ ಹಾಗೂ ಸಂಬಂದಿ ಅಣ್ಣನಾದ ಮಲ್ಲಪ್ಪ  ಮೂವರು ಕೂಡಿಕೊಂಡು ಅಟೋರಿಕ್ಷಾದಲ್ಲಿ ಗಾಯಾಳು ನಮ್ಮ ತಂದೆಯನ್ನು ಕೂಡಿಸಿಕೊಂಡು ಕಾಮರೆಡ್ಡಿ ಆಸ್ಪತ್ರೆಯಿಂದ ಹೊರಟು ಅಲ್ಲಿಯೇ ಸಮೀಪ ಇರುವ ಮುಖ್ಯ ರಸ್ತೆಯಿಂದ ಹೋಗುವಾಗ ನಮ್ಮ ತಂದೆಯವರಿಗೆ ಉಸಿರು ನಿಂತಿತ್ತು ಪುನಃ ಕಾಮರೆಡ್ಡಿ ಆಸ್ಪತ್ರೆಗೆ ತಂದಿದ್ದು ಅಲ್ಲಿ ವೈಧ್ಯರು ಸಾಯಂಕಾಲ ೭-೧೫ ಗಂಟೆಗೆ ನೋಡಿ ಪರೀಕ್ಷಿಸಿ  ಮೃತ ಪಟ್ಟಿರುತ್ತಾರೆ ಅಂತಾ ತಿಳಿಸಿರುತ್ತಾರೆ. ಈ ವಿಷಯ ನಾನು ಸಂಚಾರಿ ಪೊಲೀಸ ಠಾಣೆ-೦೨ ಗೆ ಪೋನ ಮಾಡಿ ತಿಳಿಸಿದ್ದು  ಮುಂದಿನ ಕಾನೂನು  ಕ್ರಮ ಕೈಕೊಂಡು ಪ್ರಕ್ರೀಯೆ ಪೂರ್ಣಗೊಳಿಸಿ ನಮ್ಮ ತಂದೆಯ ಶವವನ್ನು ನಮಗೆ ಒಪ್ಪಿಸಬೇಕೆಂದು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 18-01-2022 05:26 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080