ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ 09-12-2022 ರಂದು ೫:೦೦ ಪಿ.ಎಮ್ ದಿಂದ ದಿನಾಂಕ ೧೦.೧೨.೨೦೨೨ ರಂದು ರಾತ್ರಿ ೧೨:೩೦ ಗಂಟೆ ಸುಮಾರಿಗೆ ಕಲಬುರಗಿ ಮಾಲಗತ್ತಿ ರೋಡ ಎಮ್.ಎಮ್ ಗಾರ್ಡನ್ ಹತ್ತಿಕೊಂಡಿದ್ದ ಕಾಂಪೌಂಡ ಹತ್ತಿರ ಫಿರ್ಯಾದಿ ಮಗ ಸಚೀನ್ ಈತನು ಬಿದ್ದಿದ್ದು ಕಂಡು ಸಮೀಪ ಹೋಗಿ ನೋಡಲಾಗಿ ಸತ್ತು ಬಿದ್ದಿದ್ದು ಅವನ ಕುತ್ತಿಗೆಗೆ ಹರಿದ ಭಾರಿ ರಕ್ತಗಾಯ ಕಂಡು ಬಂದಿದ್ದು, ಮತ್ತೆ ನೋಡಲಾಗಿ ಹೊಟ್ಟೆಯ ಭಾಗದಲ್ಲಿ ೩ ಕಡೆ ಚುಚ್ಚಿದ ಭಾರಿ ರಕ್ತಗಾಯ ಕಂಡು ಬಂದಿದ್ದು ಇರುತ್ತದೆ. ಯಾರೋ ದುಷ್ಕರ್ಮಿಗಳೂ ಯಾವುದೋ ಉದ್ದೇಶಕ್ಕಾಗಿ ಹರಿತವಾದ ಮಾರಕಾಸ್ತçಗಳಿಂದ ಕುತ್ತಿಗೆ ಕೊಯ್ದು, ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿ ತಂದು ಬಿಸಾಕಿದ್ದು ಇರುತ್ತದೆ ಅಂತಾ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ :  10-12-2022ರಂದು ಫಿರ್ಯಾದಿ ದೂರು ಸಲ್ಲಿಸಿದರ ಸಾರಾಂಶವೇನೆಂದರೆ  ಪಟ್ಟಣ ಗ್ರಾಮದಲ್ಲಿ ಸಾರ್ವಜನಿಕರಿಂದ ಪಡೆದ ಪಡಿತರ ದಾನ್ಯ ಅಕ್ಕಿ ಹಾಗೂ ಸರಕಾರದಿಂದ ಬರುವ ವಿವಿಧ ಯೋಜನೆಗಳ ಅಕ್ಕಿ ಹಾಗು ಅಕ್ಷರ ದಾಸೋಹ ಯೋಜನೆಗೆ ಸಂಬಂದಿಸಿದ ಹಾಲಿನ ಪುಡಿ ಪಾಕೇಟಗಳನ್ನು ಸದರಿ ಆರೋಪಿತರು ಖರೀದಿ ಮಾಡಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದನ್ನು  ಸಾರ್ವಜನಿಕರು ನೋಡಿ 112 ನೇದ್ದಕ್ಕೆ ಕರೆ ಮಾಡಿದ್ದರಿಂದ ಫಿರ್ಯಾದಿ ಮತ್ತು ಠಾಣಾ ಸಿಬ್ಬಂದಿ ಜೊತೆ ಇಬ್ಬರು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ನೋಡಲು ಟಂ ಟಂ ಆಟೋ ನಂ ಕೆಎ 32 ಡಿ 6690 ನೇದ್ದರಲ್ಲಿ ಅಕ್ಕಿ ಪಾಕೇಟಗಳು ಹಾಗು ಹಾಲಿನಪುಡಿ ಪಾಕೇಟಗಳು ಕಂಡುಬಂದಿದ್ದು, ಒಟ್ಟು ಅಕ್ಕಿ ತೂಕ ಮಾಡಿಸಲು 1490 ಕೆಜಿ ಇದ್ದು ಅ;ಕಿ 37000/- ಹಾಗು ವಾಹನ ಟಂಟಂ ಅ:ಕಿ: 4೦,೦೦೦/- ಒಟ್ಟು ಅ:ಕಿ  77೦೦೦/- ರೂ ಗಳಾಗಿರುತ್ತವೆ. ಪಂಚರ ಸಮಕ್ಷಮ ಸದರಿ ಮುದ್ದೆ ಮಾಲನ್ನು ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 12-12-2022 04:03 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080