ಅಭಿಪ್ರಾಯ / ಸಲಹೆಗಳು

ಎಂ.ಬಿ ನಗರ ಪೊಲೀಸ್‌ ಠಾಣೆ :- ದಿನಾಂಕ 09.11.2023 ರಂದು ಜಿಮ್ಸ್ ಜಿಲ್ಲಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಫಿರಾದಿ ಗಾಯಾಳು ಖಾಜಾ ಮೈನುದ್ದೀನ ತಂದೆ ಶೇಖ ಮೈಬೂಬಸಾಬ ವ|| 32 ವರ್ಷ ಉ|| ಕೆಕೆಆರ್ಟಿಸಿ ಯಲ್ಲಿ ದ್ವೀತಿಯ ದರ್ಜೆ ಸಹಾಯಕ ಸಾ|| ಮ.ನಂ 5-997 ಟಿಪ್ಪು ಸುಲ್ತಾನ ಚೌ ಸನಾ ಹೋಟೆಲ್ ಆಯೇಶ ಮರ್ಜಿದ ಹತ್ತಿರ ಕಲಬುರಗಿ ಇವರು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು ಸದರಿಯವರಿಗೆ ವಿಚಾರಣೆ ಮಾಡಿ ಅವರ ಹೇಳಿಕೆ ಪಡೆದುಕೊಂಡು ಮರಳಿ ಠಾಣೆ 05.15 ಪಿ.ಎಮ್ ಕ್ಕೆ ಠಾಣೆಗೆ ಬಂದಿದ್ದು ಸದರಿ ಫಿರ್ಯಾದಿಯ ಹೇಳಿಕೆ ಸಾರಾಂಶವೆನೆಂದರೆ, ಈ ಮೇಲ್ಕಾಣಿಸಿದ ಹೆಸರು ಮತ್ತು ವಿಳಾಸದ ನಿವಾಸಿತನಾದ ನಾನು ಕೆಕೆಆರ್ಟಿಸಿ ಯಲ್ಲಿ ದ್ವೀತಿಯ ದರ್ಜೆ ಸಹಾಯಕ ಅಂತಾ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೆನೆ. ನಾನು 2019 ನೇ ಸಾಲಿನಲ್ಲಿ ಸಮೀರಾ ಬೇಗಂ ಎಂಬುವವಳನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿರುತೆನೆ. ಅವಳಿಗೂ ಕೆಪಿಟಿಸಿಎಲ್ ಕಾವೇರಿ ಭವನದಲ್ಲಿ ಜೆಇ ಅಂತಾ ಕೆಲಸ ಮಾಡಿಕೊಂಡಿರುತ್ತಾಳೆ. ನಾನು ಸಮೀರಾ ಬೇಗಂ ಇವಳಿಗೆ ಮದುವೆ ಮಾಡಿಕೊಂಡಿರುವುದು ಅವರ ತಾಯಿ  ನಸೀಮ ಬೇಗಂ ಮಾವ ಮಹಮದ್ ಮತ್ತು ಖಾದರ ಹಾಗೂ ನನ್ನ ಹೆಂಡತಿಯ ತಮ್ಮ ಜಿಲಾನಿ ಹಾಗೂ ಸಂಬಂದಿ ಅಹೆಮದ್ ಇವರ್ಯಾರಿಗೂ ಇಷ್ಟ ಇರುವುದಿಲ್ಲ. ಮದುವೆ ಆದಾಗಿನಿಂದಲೂ ಈ ಮೇಲಿನ ಎಲ್ಲಾ ವ್ಯಕ್ತಿಗಳೂ ಒಂದಲ್ಲಾ ಒಂದು ವಿಷಯ ಇಟ್ಟು ಕೊಂಡು ನಮ್ಮ ಜೊತೆ ಜಗಳ ಆಡುತ್ತಲೇ ಬಂದಿರುತ್ತಾರೆ. ನಾವು ಇಂದಲ್ಲಾ ನಾಳೆ ಸರಿ ಹೋಗಬಹುದು ಅಂತಾ ಸುಮ್ಮನೆ ಇದ್ದಿರುತ್ತವೆ. ದಿನಾಂಕ 26.10.2023 ರಂದು ನನ್ನ ಹೆಂಡತಿ ಸಮೀರಾ ಬೇಗಂ ಇವಳಿಗೆ ಹೆರಿಗೆ ಆಗಿದ್ದು ಇರುತ್ತದೆ. ನಾವು ಬೇರೆ ಮನೆ ಮಾಡಿಕೊಂಡು ವಾಸವಾಗಿರುವುದರಿಂಧ ಹೇರಿಗೆ ಆದ ನಂತರ ನನ್ನ ಹೆಂಡತಿಗೆ ನಮ್ಮ ಅತ್ತೆ ಹತ್ತಿರ ನೋಡಿಕೊಳ್ಳಲು ಬಿಟ್ಟಿರುತ್ತೆನೆ. ದಿನಾಂಕ 31.10.2023 ರಂದು ನನ್ನ ಹೆಂಡತಿಯ ಇನ್ನೊಬ್ಬ ತಮ್ಮ ಅಫ್ರೋಜ ಈತನು ನನಗೆ ಕರೆ ಮಾಡಿ ಅಕ್ಕ ಸಮೀರಾ ಇವಳಿಗೆ ತುಂಬಾ ಆರೋಗ್ಯ ಸರಿಯಿಲ್ಲ ನೀವು ಬೇಗ ಬರಿ ಅಂತಾ ತಿಳಿಸಿದನು. ನಂತರ ನಾನು ತಕ್ಷಣ ನನ್ನ ಹೆಂಡತಿ ಇರುವ ಮನೆಗೆ ಹೋಗಿ ನನ್ನ ಹೆಂಡತಿಗೆ ಚಿಕಿತ್ಸೆ ಕುರಿತು ಸನಾ ಹೋಟೆಲ ಹತ್ತಿರ ಇರುವ ಫಾತಿಮಾ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ನನ್ನ ಹೆಂಡತಿಗೆ ಪಿಡ್ಸ ಬಂದಿರೋ ತರಹ ಮಾಡಿತ್ತಿರುವಾಗ ನಾನು ಹೆಚ್ಚಿನ ಚಿಕಿತ್ಸೆ ಕುರಿತು ಮಣೂರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೆನೆ. ದಿನಾಂಕ 08.11.2023 ರಂದು ಬೆಳಿಗ್ಗೆ ನನ್ನ ಹೆಂಡತಿಗೆ ಮಾತನಾಡಲು ಬಂದ ನನ್ನ ಅತ್ತೆ ನಸೀಮಾ ಬೆಗಂ ಮಾವಂದಿರಾದ ಮಹಮದ್ ಮತ್ತು ಖಾದರ ನನ್ನ ಹೆಂಡತಿಯ ತಮ್ಮ ಜಿಲಾನಿ ಹಾಗೂ ಸಂಬಂದಿ ಅಹೆಮದ್ ಇವರೆಲ್ಲರೂ ಕೂಡಿ ಬಂದು ಮಾತನಾಡಿ ಮದ್ಯಾಹ್ನ 12.00 ಗಂಟೆಯಿಂದ 12.30 ಗಂಟೆಯ ಒಳಗಡೆ ಈ ಮೇಲಿ ವ್ಯಕ್ತಿಗಳು ನನ್ನ ಬಳಿ ಬಂದು ನನಗೆ ನಮ್ಮ ಅತ್ತೆ ವಿನಾ ಕಾರಣ ಅವಾಚ್ಯವಾಗಿ ಬೈದು ನೀನು ಮಗು ಮಾಡಿದ್ದು ಯಾಕೆ ನಾನು  ಹೇಳಿಲ್ಲವೇ ಬೇಡ ಅಂತಾ ನನಗೆ ಮೊದಲು ಮನೆ ಕಟ್ಟಿಸಿಕೊಡು ಅಂತಾ ಹೇಳದ್ದಿನಿ ಅಂತಾ ಸುಖಾ ಸುಮ್ಮನೆ ನಮ್ಮ ತಾಯಂದಿರಿಗೆ ಅಕ್ಕಂದಿರಿಗೆ (ತೇರೆ ಮಾಕೋ, ತೇರೆ ಬೇಹನಕೋ) ಅಂತಾ ಬೈಯುತ್ತಿರುವಾಗ ನಾನು ಅವರಿಗೆಲ್ಲಾ ಯಾಕೆ ಬೈತಿರಾ ಮದುವೆ ಮಾಡಿಕೊಂಡರುವುದು ನಾನು ಎಂದಾಗ ಅಲ್ಲೆ ಇರುವ ಮಹಮದ್, ಖಾದರ, ಜಿಲಾನಿ, ಅಹೆಮದ್ ಎಲ್ಲಾರೂ ಸೇರಿ ಕೈಯಿಂದ ಕಾಲಿನಿಂದ ಹೊಡೆಯಿತ್ತಿರುವಾಗ, ಒದೆಯುತ್ತಿರುವಾಗ ನಾನು  ಅಲ್ಲಿಂದ (ಆಸ್ಪತ್ರೆಯಿಂದ) ತಪ್ಪಿಸಿಕೊಂಡು ಕೆಳಗಡೆ ಮಣುರ ಆಸ್ಪತ್ರೆಯಿಂದ ಬರುತ್ತಿರುವಾಗ ನಮ್ಮ ಅತ್ತೆ ಅವನಿಗೆ ಹಿಡಿದು ಸಾಯಿಸಿರಿ ಎಂದು ಹೇಳುತ್ತಿದ್ದು ನಾನು ಆಸ್ಪತ್ರೆ ಕೆಳಗೆ ಇಳಿದು ಓಡುತ್ತಿರುವಾಗ ಆಸ್ಪತ್ರೆಯ ಪಕ್ಕದಲ್ಲಿರುವ ಚಹಾದ ಅಂಗಡಿ ಹತ್ತಿರ ಜಿಲಾನಿ ಈತನು ನನಗೆ ಹಿಡಿದು ಅವನ ಹತ್ತಿರ ಇರುವ ಕಬ್ಬಿಣದ ಪಂಚಿನಿಂದ ಹೊಡೆದಿದ್ದು ಅದು ನನ್ನ ಎಡಕಣ್ಣಿ ಕೆಳಗಡೆ ಹತ್ತಿದ್ದು ರಕ್ತ ಬರುತ್ತಿರುವುದು ನೋಡಿ ಅಲ್ಲಿಂದ ಓಡಿ ಹೋಗಿರುತ್ತಾನೆ ಇನ್ನೂಳಿದ ಎಲ್ಲಾರೂ ಬಂದು ಹೋಡೆಯುತ್ತಿರುವಾಗ ಅಲ್ಲೆ ಇರುವ ಸುತ್ತ ಮುತ್ತಲಿನ ಜನ ಜಗಳ ಬಿಡಿಸಿರುತ್ತರೆ. ನಾನು ರಕ್ತ ಬರುತ್ತಿರುವುದನ್ನು ನೋಡಿ ನನ್ನ ಅಣ್ಣ ಅಬ್ದುಲ ಹಮೀದ ಮತ್ತು ಮಹಮದ್ ದಸ್ತಗಿರ ಇವರಿಗೆ ಫೊನ ಮಾಡಿ ನಡೆದ ವಿಷಯ ತಿಳಿಸಿದ್ದು ನಮ್ಮ ಅಣ್ಣ ಅಬ್ದಲ ಹಮೀದ ಮತ್ತು ಇವರ ಹೆಂಡತಿ ಹಾಜರಾ ಬೇಗಂ ಇವರು ಬಂದು ನನಗೆ ಉಪಚಾರ ಕುರಿತು ಸಕರ್ಾರಿ ಜಿಲ್ಲಾ ಆಸ್ಪತ್ರಗೆ ತಂದು ಸೇರಿಕೆ ಮಾಡಿರುತ್ತರೆ. ನಿನ್ನೆ ನಾನು  ಹೇಳಿಕೆ ನೀಡುವಾಗ ಮನೆಯಲ್ಲಿ ವಿಚಾರ ಮಾಡಿ ಹೇಳಿಕೆ ನೀಡುತ್ತೆನೆ ಅಂತಾ ತಿಳಿಸಿದ್ದು ಇರುತ್ತದೆ. ಆದರೆ ಇಂದು ನಾನು ಮನೆಯಲ್ಲಿ ವಿಚಾರ ಮಾಡಿ ಹೇಳಿಕೆ ನೀಡುತ್ತಿದ್ದು ನಿನ್ನೆ ದಿನಾಂಕ08.11.2023 ಮದ್ಯಾಹ್ನ 12.00 ರಿಂದ 12.30 ಪಿ.ಎಮ್ ರವರೆಗೆ ನನಗೆ ಅವಾಚ್ಯವಾಗಿ ಬೈದು ಕೈಯಿಂದ ಕಾಲಿನಿಂದ ಕಬ್ಬಿಣ್ಣದ ಪಂಚಿನಿಂದ ಹೊಡೆದು ಜೀವ ಬೇದರಿಕೆ ಹಾಕಿರುವ ನಸೀಮಾ ಬೇಗಂ ಮಾವಂದಿರಾದ ಮಹಮದ್, ಖಾದರ ಮತ್ತು ಹೆಂಡತಿಯ ತಮ್ಮ ಜಿಲಾನಿ, ಸಂಬಂದಿ ಅಹೇಮದ್ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾನು ಹಿಂದಿಯಲ್ಲಿ ಹೇಳಿದ್ದನ್ನು ಕನ್ನಡದಲ್ಲಿ ಅನುವಾದಿಸಿ ಹೇಳಿ ಬರೆಯಿಸಿದ ಹೇಳಿಕೆ ನಿಜವಿರುತ್ತದೆ ಅಂತಾ ಇತ್ಯಾದಿಕೊಟ್ಟ ಹೇಳಿಕೆ ದೂರು ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 133/2023 ಕಲಂ- 143,147,323,324,504,506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಎಂ.ಬಿ ನಗರ ಪೊಲೀಸ್‌ ಠಾಣೆ :- ದಿನಾಂಕ 09.11.2023 ರಂದು 09: 00 ಗಂಟೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದ ಮೇರೆಗೆ ಸ.ತ ಫಿರ್ಯಾದಿ ಶ್ರೀ ದೀಲಿಪ ಸಾಗರ ಪಿ.ಐ ಸಿಸಿಬಿ ಘಟಕ ಕಲಬುರಗಿ ನಗರ ಇವರು ಠಾಣೆಗೆ ಹಾಜರಾಗಿ ಒಂದು ವರದಿ, ಜಪ್ತಿ ಪಂಚನಾಮೆ ಹಾಗೂ ಒಬ್ಬ ಆರೋಪಿಯೊಂದಿಗೆ ಮುಂದಿನ ಕ್ರಮಕ್ಕಾಗಿ ವರದಿಯನ್ನು ಹಾಜರು ಪಡಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 09-11-2023 ರಂದು ಸಾಯಂಕಾಲ 6-00 ಗಂಟೆಗೆ ನಾನು ಕಛೇರಿಯಲ್ಲಿದ್ದಾಗ ನನಗೆ ಕಲಬುರಗಿ ನಗರದ ಹಳೆ ಆರ್.ಟಿ.ಓ. ಆಫೀಸ್ ಎದುರುಗಡೆ ಇರುವ ನಿಯೋ ಲೈಫ್ ಆಸ್ಪತ್ರೆ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ತನ್ನ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಯನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕುರಿತು ಇಬ್ಬರೂ ಪಂಚರಾದ 1) ಶ್ರೀ ಮಲ್ಲಿಕಾರ್ಜುನ ತಂದೆ ಸೋಮಶೇಖರ ಚಿನ್ನಮಳ್ಳಿ, ವ:26 ವರ್ಷ, ಉ:ಹೊಟೇಲ ಕೆಲಸ, ಸಾ:ಕಾಂತಾ ಕಾಲೋನಿ ಕಲಬುರಗಿ, 2) ಶ್ರೀ ರವಿ ತಂದೆ ಬಸವರಾಜ ತಳವಾರ, ವ:22 ವರ್ಷ, ಉ:ಕಿರಾಣಿ ವ್ಯಾಪಾರ, ಸಾ:ಕಾಂತಾ ಕಾಲೋನಿ, ಕಲಬುರಗಿ ಇವರನ್ನು ಸಿ.ಸಿ.ಬಿ. ಘಟಕಕ್ಕೆ ಸಾಯಂಕಾಲ 6-30 ಗಂಟೆಗೆ ಬರಮಾಡಿಕೊಂಡು ಸದರಿ ಪಂಚರಿಗೆ ವಿಷಯ ತಿಳಿ ಹೇಳಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ನಾನು, ಪಂಚರು, ಮತ್ತು ಸಿ.ಸಿ.ಬಿ ಘಟಕ ಸಿಬ್ಬಂದಿಯವರಾದ 1) ಯಲ್ಲಪ್ಪ ಸಿಪಿಸಿ-496, 2)ಅಶೋಕ ಕಟಕೆ ಸಿಪಿಸಿ-134, 3) ಶಿವಕುಮಾರ ಸಿಪಿಸಿ-398, 4) ನಾಗರಾಜ ಸಿಪಿಸಿ-450 ಮತ್ತು 5) ಸುನೀಲಕುಮಾರ ಸಿ.ಹೆಚ್.ಸಿ-167 ಎಲ್ಲರೂ ಕೂಡಿ ಸರ್ಕಾರಿ ಜೀಪ ನಂ.ಕೆಎ-32-ಜಿ-0874 ನೇದ್ದರಲ್ಲಿ ಹಾಗೂ ಕೆಲವು ಸಿಬ್ಬಂದಿಯವರು ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ಸಾಯಂಕಾಲ 6-35 ಗಂಟೆಗೆ ಸಿ.ಸಿ.ಬಿ. ಕಛೇರಿಯಿಂದ ಹೊರಟಿದ್ದು, ಸದರಿ ಬಾತ್ಮಿ ಬಂದ ಸ್ಥಳವಾದ ಕಲಬುರಗಿ ನಗರದ ಹಳೆ ಆರ್.ಟಿ.ಓ. ಆಫೀಸ್ ಎದುರುಗಡೆ ಇರುವ ನಿಯೋ ಲೈಫ್ ಆಸ್ಪತ್ರೆ ಹತ್ತಿರ ಸಾಯಂಕಾಲ 6-55 ಗಂಟೆಗೆ ತಲುಪಿ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ವಾಹನದಿಂದ ಇಳಿದು ಅಲ್ಲಿಯೇ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಅಲ್ಲಿ ಹೋಗಿ ಬರುವ ಸಾರ್ವಜನಿಕರಿಂದ 1 ರೂ.ಗೆ 80 ರೂ. ಕೊಡುವುದಾಗಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿ ಬರೆದುಕೊಳ್ಳುವುದನ್ನು ನಾನು ಮತ್ತು ಪಂಚರು ನೋಡಿ ಖಚಿತಪಡಿಸಿಕೊಂಡು, ಪಂಚರ ಸಮಕ್ಷಮ ಸಾಯಂಕಾಲ 7-00 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ಒಮ್ಮಲ್ಲೇ ಎಲ್ಲರೂ ಕೂಡಿ ಸದರಿ ವ್ಯಕ್ತಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಯೊಗೇಶ ತಂದೆ ಶರಣಪ್ಪ ಕಲಶೆಟ್ಟಿ, ವ:34 ವರ್ಷ, ಉ: ಅಟೋಚಾಲಕ, ಸಾ:ಬ್ರಹ್ಮಕುಮಾರಿ ಆಶ್ರಮ ಹತ್ತಿರ ಆದರ್ಶ ನಗರ, ಕಲಬುರಗಿ, ಅಂತಾ ತಿಳಿಸಿದನು. ನಂತರ ಸದರಿಯವನ ಅಂಗ ಶೋಧನೆ ಮಾಡಲಾಗಿ ಈತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ರೂ.2,210/- ನಗದು ಹಣ, ಮತ್ತು ಒಂದು ಮಟಕಾ ಚೀಟಿ ಅ.ಕಿ.ರೂ.00/-, ಒಂದು ಬಾಲ ಪೆನ್ ಅ.ಕಿ.ರೂ.00/-, ದೊರೆತಿದ್ದು ಇರುತ್ತದೆ.  ನಂತರ ಸದರಿ ಜಪ್ತುಪಡಿಸಿಕೊಂಡ ಮುದ್ದೇಮಾಲುಗಳಿಗೆ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ಒಂದು ಕವರನಲ್ಲಿ ಹಾಕಿ ನನ್ನ ತಾಬಾಗೆ ತೆಗೆದುಕೊಂಡನು. ಸದರಿ ಜಪ್ತಿ ಪಂಚನಾಮೆಯನ್ನು ಸಾಯಂಕಾಲ 7-00 ಗಂಟೆಯಿಂದ 8-00 ಗಂಟೆಯವರೆಗೆ ಸ್ಥಳದಲ್ಲಿಯೇ ಪಂಚರ ಸಮಕ್ಷಮ ಲ್ಯಾಪಟ್ಯಾಪನಲ್ಲಿ ಲೈಟಿನ ಬೆಳಕಿನಲ್ಲಿ ಟೈಪ ಮಾಡಿ ಪೋರ್ಟೆಬಲ್ ಪ್ರಿಂಟರ್ ಮುಖಾಂತರ ಪ್ರಿಂಟ್ ತೆಗೆಯಲಾಯಿತು.  ನಂತರ ಜಪ್ತಿ ಪಂಚನಾಮೆಯ ಮೇಲೆ ಪಂಚರ ಸಹಿ ತೆಗೆದುಕೊಳ್ಳಲಾಯಿತು. ನಂತರ ಎಂ.ಬಿ.ನಗರ ಪೊಲೀಸ್ ಠಾಣೆಗೆ ಬಂದು ನನ್ನ ವರದಿಯನ್ನು ತಯಾರಿಸಿ, ಜಪ್ತಿಪಂಚನಾಮೆ, ಮತ್ತು ಮುದ್ದೇಮಾಲು ಹಾಗೂ ಒಬ್ಬ ಆರೋಪಿಯನ್ನು ಹಾಜರಪಡಿಸಿದ್ದು, ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ.  ಅಂತಾ ಇತ್ಯಾದಿ ಕೊಟ್ಟ ದೂರು ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 134/2023 ಕಲಂ- 78(III)  ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡ ಬಗ್ಗೆ ವರದಿ

 

 

ಫರಹತಾಬಾದ ಪೊಲೀಸ್‌ ಠಾಣೆ :- ದಿನಾಂಕ: 09.11.2023 ರಂದು 13:00 ಗಂಟೆ ಪಿ,ಎಮ್ಕ್ಕೆ ನಮ್ಮ ಠಾಣೆಯ ಹೆಚ್,ಸಿ 126 ರವರು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಾನಂದ ತಂದೆ ಬಸವರಾಜ ಹೂಗಾರ ಸಾ|| ಕವಲಗಾ(ಬಿ) ಇವರ ಹೇಳಿಕೆ ಪಡೆದುಕೊಂಡು ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ನನಗೆ ಮದುವೆಯಾಗಿ ಒಂದು ಗಂಡು ಮಗು ಇದ್ದು ನಾನು ನನ್ನ ಹೆಂಡತಿ ಮಗ ಹಾಗೂ ನನ್ನ ತಾಯಿಯೊಂದಿಗೆ ಕವಲಗಾ(ಬಿ) ಗ್ರಾಮದಲ್ಲಿ ಉಪ ಜೀವಿಸುತ್ತಿರುತ್ತೆನೆ. ಹೀಗಿರುವಾಗ ದಿನಾಂಕ: 08.11.2023 ರಾತ್ರಿ ಅಂದಾಜು 08:00 ಗಂಟೆಗೆ ನನ್ನ ಹೆಂಡತಿಯು ಅವಳ ತವರು ಮನೆಗೆ ಹೋಗಿದ್ದು ನಾನು ನಮ್ಮ ಮನೆಯಲ್ಲಿ ಇದ್ದು ಆಕೆಗೆ ಪೋನು ಹಚ್ಚಿ ಮಾತನಾಡುತ್ತಿರುವಾಗ ನಾನು ನನ್ನ ಹೆಂಡತಿಗೆ ಪೋನನ್ನಲ್ಲಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದೆ ಆಗ ನಮ್ಮ ಅಣ್ಣನ ಹೆಂಡತಿ ಅಂದರೆ ನಮ್ಮ ಅತ್ತಿಗೆ ಕಮಲಾಬಾಯಿ ಇವಳು ನನ್ನ ಬಳಿ ಬಂದು ನೀನು ನನಗೆ ಉದ್ದೇಶ ಪೂರ್ವಕವಾಗಿ ಬೈಯುತ್ತಿದಿಯಾ ಅಂತಾ ಅವಳ ಗಂಡ ಹಾಗೂ ಅವಳ ಮಕ್ಕಳನ್ನು ಕರೆಸಿದಳು. ಆಗ ಅವರು ಬಡಿಗೆ ಹಾಗೂ ಕಬ್ಬಿಣದ ರಾಡು ಮತ್ತು ಸೊಂಟಕ್ಕೆ ಹಾಕುವ ಬೆಲ್ಟ ತಗೆದುಕೊಂಡು ಬಂದು ಸಿದಾ ನನ್ನ ಹತ್ತಿರ ಬಂದು ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಲಕ್ಷ್ಮಿಕಾಂತ ಇತನು ಒಂದು ಕಬ್ಬಿಣದ ರಾಡಿನಿಂದ ನನ್ನ ಎಡಗೈ ಮುಂಗೈ ಮೇಲೆ ಜೋರಾಗಿ ಹೊಡೆದನು ತದನಂತರ ಮಲ್ಲು, ನಾಗಣ್ಣ, ಅಂಬ್ರೆಶ, ಇವರೆಲ್ಲಾ ಸೇರಿ ಬಡಿಗೆ ಹಾಗೂ ಬೆಲ್ಟ ಮತ್ತು ಕೈಯಿಂದ ನನ್ನ ಮೇಲೆ ಹಲ್ಲೆ ಮಾಡಿದ್ದು ಇದರಿಂದ ನನ್ನ ಎಡಗೈ, ಹೊಟ್ಟೆ ಎಡಭಾಗ ಹಾಗೂ ಬೆನ್ನ ಮೇಲೆ ಗಾಯವಾಗುವ  ಹಾಗೆ ಹಲ್ಲೇ ಮಾಡಿದ್ದು ನಾನು ಚಿರಾಡುತ್ತಿರುವಾಗ ಅಕ್ಕ ಪಕ್ಕದ ಜನ ಬಂದರು ಅವಾಗ ಅವರು ನನ್ನನ್ನು ಬಿಟ್ಟು ಹೋದರು, ತದನಂತರ ನನ್ನ ತಾಯಿ ನನಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಅಂಬುಲೇನ್ಸನಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಸದ್ಯ ನಾನು ಚಿಕಿತ್ಸೆ ಪಡೆಯುತ್ತಿದ್ದು. ಆದರಿಂದ ಸದರಿ ಘಟನೆಗೆ ಕಾರಣರಾದ 1) ಕಮಲಬಾಯಿ ಗಂಡ ನಾಗಣ್ಣ ಹೂಗಾರ 2) ಲಕ್ಷ್ಮಿಕಾಂತ ತಂದೆ ನಾಗಣ್ಣ 3) ಮಲ್ಲು ತಂದೆ ನಾಗಣ್ಣ 4) ಅಂಬ್ರೆಶ ತಂದೆ ನಾಗಣ್ಣ 5) ನಾಗಣ್ಣ ತಂದೆ ಗುರಣ್ಣ ಹೂಗಾರ ಸಾ: ಎಲ್ಲರ ವಿಳಾಸ ಕವಲಗಾ(ಬಿ) ತಾ:ಜಿ: ಕಲಬುರಗಿ ರವರ ಮೇಲೆ ಕ್ರಮ ಕೈಕೋಳಬೇಕೆಂದು ಬರೆಸಿದ ಹೇಳಿಕೆ ನಿಜವಿದೆ ಅಂತಾ ಇದ್ದ ಸದರಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 151/2023 ಕಲಂ 323, 324, 504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡ ಬಗ್ಗೆ ವರದಿ

 

 

ಆರ್.ಜಿ ನಗರ ಪೊಲೀಸ್‌ ಠಾಣೆ :- ದಿನಾಂಕಃ 09.11.2023 ರಂದು ಸಾಯಾಂಕಾಲ 7.00 ಗಂಟೆಯಗೆ ಠಾಣೆಗೆ ಹಾಜರಾಗಿ ಹಣಮಂತ ಕಟ್ಟಿ ಎಎಸ್ಐ ರಾಘವೇಂದ್ರ ನಗರ ಪೊಲೀಸ್ ಠಾಣೆ  ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ವರದಿ ನೀಡಿದರ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಮಾನ್ಯ ನ್ಯಾಯಾಲಯದ ಆದೇಶದ ಪ್ರಕಾರ  ದಿನಾಂಕ:09.11.2023 ರಂದು ಸಾಯಾಂಕಾಲ 4.00 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಸಂತೋಷ ಕಾಲೋನಿ ಹನುಮಾನ ಗುಡಿ  ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ತನ್ನ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಯನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕುರಿತು ಇಬ್ಬರೂ ಪಂಚರನ್ನು ರಾಘವೇಂದ್ರ ನಗರ ಪೊಲಿಸ್ ಠಾಣೆಗೆ ಮಧ್ಯಾಹ್ನ 4.30 ಗಂಟೆಗೆ ಬರಮಾಡಿಕೊಂಡು ಸದರಿ ಪಂಚರಿಗೆ  ಸದರಿ ವಿಷಯ ತಿಳಿ ಹೇಳಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ನಾನು, ಪಂಚರು, ಮತ್ತು ಸಿಬ್ಬಂದಿಯವರಾದ ಶ್ರೀ ಮಲ್ಲಣ್ಣಾ ಗೌಡ ಹೆಚ್.ಸಿ 158, ಶ್ರೀ ಸಿಕ್ರೇಶ್ವರ ಹೆಚ್.ಸಿ 128, ಶ್ರೀ ಉಮೇಶ ಪಿಸಿ 105,  ಮುಜಾಹಿದ ಪಿಸಿ 154, ಆರೇಶ ಪಿಸಿ 238 , ಶ್ರೀ ಶರಣಬಸವ ಪಿಸಿ 508 ಎಲ್ಲರೂ ಕೂಡಿ ನಮ್ಮ ನಮ್ಮ  ಮೋಟಾರ ಸೈಕಲಗಳ ಮೇಲೆ ಮಧ್ಯಾಹ್ನ 4.35 ಗಂಟೆಗೆ ಹೋರೆಟ್ಟು ಸದರಿ ಬಾತ್ಮಿ ಬಂದ ಸ್ಥಳವಾದ ಕಲಬುರಗಿ ನಗರದ ಸಂತೋಷ ಕಾಲೋನಿ ಹನುಮಾನ ಗುಡಿ  ಹತ್ತಿರ ಸಾಯಾಂಕಾಲ 5.00 ಗಂಟೆಗೆ ತಲುಪಿ ಸ್ವಲ್ಪ ದೂರದಲ್ಲಿ ನಮ್ಮ ನಮ್ಮ ವಾಹನಗಳನ್ನು ನಿಲ್ಲಿಸಿ ಎಲ್ಲರೂ ವಾಹನದಿಂದ ಇಳಿದು ಅಲ್ಲಿಯೇ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಅಲ್ಲಿ ಹೋಗಿ ಬರುವ ಸಾರ್ವಜನಿಕರಿಂದ 1 ರೂ.ಗೆ 80 ರೂ. ಕೊಡುವುದಾಗಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿ ಬರೆದುಕೊಳ್ಳುವುದನ್ನು ನಾನು ಮತ್ತು ಪಂಚರು ನೋಡಿ ಖಚಿತಪಡಿಸಿಕೊಂಡು, ಪಂಚರ ಸಮಕ್ಷಮ ಸಾಯಾಂಕಾಲ 5.15 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ಒಮ್ಮಲ್ಲೇ ಎಲ್ಲರೂ ಕೂಡಿ ಸದರಿ ವ್ಯಕ್ತಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ವಿರೇಶ ತಂದೆ ಶಂಕರರಾವ ಚಿಕ್ಕನಾಗಂವ ವಯಃ 39  ವರ್ಷ ಉಃ ಖಾಸಗಿ ಕೆಲಸ ಸಾಃ ಸಂತೋಷ ಕಾಲೊನಿ ಕಲಬುರಗಿ ಅಂತಾ ತಿಳಿಸಿದನು. ನಂತರ ಸದರಿಯವನ ಅಂಗ ಶೋಧನೆ ಮಾಡಲಾಗಿ ಈತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ರೂ.950/- ನಗದು ಹಣ, ಮತ್ತು ಒಂದು ಮಟಕಾ ಚೀಟಿ ಅ.ಕಿ.ರೂ.00/-, ಒಂದು ಬಾಲ ಪೆನ್ ಅ.ಕಿ.ರೂ.00/- ಇದ್ದು, ನಂತರ ಸದರಿ ಜಪ್ತಿ ಪಡಿಸಿಕೊಂಡ ಮುದ್ದೇಮಾಲುಗಳಿಗೆ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ಒಂದು ಕವರನಲ್ಲಿ ಹಾಕಿ ನನ್ನ ತಾಬಾಗೆ ತೆಗೆದುಕೊಂಡನು. ಸದರಿ ಜಪ್ತಿ ಪಂಚನಾಮೆಯನ್ನು ಸಾಯಾಂಕಾಲ 5.30 ಗಂಟೆಯಿಂದ 6.30 ಗಂಟೆಯವರೆಗೆ ಸ್ಥಳದಲ್ಲಿಯೇ ಟೈಪ ಮಾಡಿದ್ದು ನಂತರ ಜಪ್ತಿ ಪಂಚನಾಮೆಯ ಮೇಲೆ ಪಂಚರ ಸಹಿ ತೆಗೆದುಕೊಳ್ಳಲಾಯಿತು. ನಂತರ ರಾಘವೇಂದ್ರ ನಗರ ಪೊಲೀಸ್ ಠಾಣೆಗೆ ಬಂದು ನನ್ನ ವರದಿಯನ್ನು ತಯಾರಿಸಿ, ಜಪ್ತಿಪಂಚನಾಮೆ, ಮತ್ತು ಮುದ್ದೇಮಾಲು ಹಾಗೂ ಒಬ್ಬ ಆರೋಪಿಯನ್ನು ಹಾಜರಪಡಿಸಿದ್ದು, ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ.ಅಂತ ಇತ್ಯಾದಿಯಾಗಿ ದೂರು ನೀಡಿದೆರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 172/2023 ಕಲಂ 78(3) ಕೆಪಿ ಆಕ್ಟ್ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡ ಬಗ್ಗೆ ವರದಿ

 

 

ಸ್ಟೇಷನ ಬಜಾರ ಪೊಲೀಸ್‌ ಠಾಣೆ :- ದಿನಾಂಕ: 09-11-2023 ರಂದು ಸಂಜೆ 06-00 ಗಂಟೆಗೆ ಪಿರ್ಯಾಧಿದಾರರಾದ.ಶ್ರಿ.ಸೈಯ್ಯದ್ ಮಜರ ಹುಸೇನಿ ತಂದೆ ಸೈಯ್ಯದ್ ಮಕ್ಬೂಲ್ ವಯಸ್ಸು 42 ವರ್ಷ, ಉ: ವ್ಯಾಪಾರ, ಸಾ:ಮನೆ ನಂ, 5-992/29 ಬಿ ಯಾದುಲ್ಲಾ ಕಾಲೋನಿ ಕಲಬುರಗಿ ನಗರ ಎಂಬುವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಮತ್ತು ಸೈಯ್ಯದ್ ಅಹ್ಮದ ಹುಸೇನ್, ಹಾಗೂ ಮಹಮ್ಮದ ಖಧೀರ, ಮಹಮ್ಮದ್ ಫಯಾಜ್ವುದ್ದೀನ್ ನಾಲ್ಕು ಜನರು ಸೇರಿಕೊಂಡು ಪಾರ್ಟನರ್ನಲ್ಲಿ ದಿನಾಂಕ:20-01-2020 ನೇ ಸಾಲಿನಲ್ಲಿ ಐವಾನ ಇ ಶಾಹಿ ಏರಿಯಾದಲ್ಲಿ ಮಾಣಿಕ್ಯರಾವ್. ಗೋವಿಂದರಾವ್, ಶಶಿಕಾಂತ, ಮಂಜುಳಾ, ರವರಿಗೆ ಸಂಬಂಧಪಟ್ಟ ಹಳೆ ಮನೆಯನ್ನು ಎಫ್,ಕೆ.ಎಂ, ಬಿಲ್ಡರ್ಸ್ ಮತ್ತು ಡೆವಲಪರ್ಸ್ ಎಂಬ ಹೆಸರಿನಲ್ಲಿ ನಾನು ಮತ್ತು ಸೈಯ್ಯದ್ ಅಹ್ಮದ ಹುಸೇನಿ, ಹಾಗೂ ಮಹಮ್ಮದ ಖಧೀರ, ಮಹಮ್ಮದ್ ಫಯಾಜ್ವುದ್ದೀನ್ ಎಲ್ಲರೂ ಸೇರಿಕೊಂಡು ಜಂಟಿ  ಅಭಿವೃದ್ದಿ ಅಗ್ರ್ರಿಮೆಂಟ್ ಮಾಡಿಕೊಂಡು ಸುಮಾರು 8 ಶೆಟರ್ಗಳನ್ನು (ಅಂಗಡಿಗಳನ್ನು) ಕಟ್ಟಿರುತ್ತೇವೆ. ಅದರಲ್ಲಿ ಕೆಳಗಿನ 4 ಶೆಟರಗಳನ್ನು ನಾವು ನಾಲ್ಕು ಜನರು ಕೂಡಿಕೊಂಡು ಮಾರಾಟ ಮಾಡಿರುತ್ತೇವೆ. ಇನ್ನೂಳಿದ  ಮೇಲೆ ಇರುವ 4 ಶೆಟರಗಳನ್ನು ಹಾಗೆಯೇ ಉಳಿದುಕೊಂಡಿರುತ್ತವೆ. ಎರಡು ತಿಂಗಳ ಹಿಂದೆ ಖಾಲಿ ಉದಿರುವ ಶೆಟರಗಳ ಮೇಲೆ ಸೆಲ್ ಫಾರ್ ರೆಂಟ್ ಅಂತಾ ಬರೆದು ಪೋನ ನಂ, 9886690091- ಹಾಕಿದ್ದರು ಆ ಪೋನ್ ನಂಬರ ನೇದ್ದಕ್ಕೆ ನನ್ನ ಸ್ನೇಹಿತನಾದ ಪಾರೂಕ್ ಅಹ್ಮದ ಪೋನ್ ಮಾಡಿ ನಿಮ್ಮ ಅಂಗಡಿಗಳನ್ನು ಬಾಡಿಗೆ ಅಥವಾ ಮಾರಾಟ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಅವರು ಬಾಡಿಗೆ ಕೋಡುತ್ತೇವೆ ಎಂದು ಹೇಳಿ ನಾನು ಆ ಅಂಗಡಿಗಳನ್ನು ದಿನಾಂಕ;15-09-2023 ರಂದು ಖರೀಧಿ ಮಾಡಿರುತ್ತೇನೆ. ಎಂದು ತಿಳಿಸಿದರು ನಮ್ಮ ಜೊತೆಯಲ್ಲಿ ಪಾರ್ಟನರ್ ಆಗಿದ್ದ ಮಹಮ್ಮದ್ ಫಯಾಜ್ವುದ್ದೀನ್ ತಂದೆ ಶೇಖ್ ಬೂರಾನುದ್ದೀನ್ ಸಾ:ಅಕ್ಬರಬಾಗ್ ಟಿಪ್ಪು ಚೌಕ್ ಕಲಬುರಗಿ ನಗರ ರವರು ನಮಗೆ ಗೊತ್ತಿರದೆ ಹಾಗೆಯೇ ಎಫ್,ಕೆ.ಎಂ, ಬಿಲ್ಡರ್ಸ್ ಮತ್ತು ಡೆವಲಪರ್ಸ್ ನಲ್ಲಿರು 4  ಶೆಟರಗಳನ್ನು 80 ಲಕ್ಷ ರೂಗಳಿಗೆ ಹಾರೂನ್ ಸಾ:ಬಂದೆ ನವಾಜ್ ದರ್ಗಾ ಹತ್ತಿರ ಕಲಬುರಗಿ ನಗರ ಎಂಬುವನಿಗೆ ಮಾರಾಟ ಮಾಡಿ ಮೋಸ ಮಾಡಿರುತ್ತಾನೆ. ನಾನು ಸದರಿ ವಿಷಯದ ಬಗ್ಗೆ ನನ್ನ ಜೊತೆಯಲ್ಲಿ ಇದ್ದ ಪಾರ್ಟನಗಳ ಜೊತೆಯಲ್ಲಿ ವಿಚಾರಿಸಿಕೊಂಡು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ನಮ್ಮ  ಜೊತೆಯಲ್ಲಿ ಪಾರ್ಟನ್ ಇದ್ದು ನಮಗೆ ಗೊತ್ತಿರದೆ ಹಾಗೇಯ ಎಫ್,ಕೆ.ಎಂ, ಬಿಲ್ಡರ್ಸ್ ಮತ್ತು ಡೆವಲಪರ್ಸ್ ನಲ್ಲಿರು 4 ಶೆಟರಗಳನ್ನು ಮಾರಾಟ ಮಾಡಿದ ಫಯಾಜ್ವುದ್ದೀನ್ ತಂದೆ ಶೇಖ್ ಬೂರಾನುದ್ದೀನ್ ಇತನು ಮೇಲೆ ಕಾನೂನು ಕ್ರಮ ಜರುಗಿಸಿ ನ್ಯಾಯವನ್ನು ಒದಗಿಸಿ ಕೊಡಿಸಬೇಕೆಂದು ಕೊಟ್ಟ ದೂರನ್ನು ಪಡೆದು ಠಾಣೆಯ ಗುನ್ನೆ ನಂ.184/2023 ಕಲಂ. 420 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡ ಬಗ್ಗೆ ವರದಿ

 

 

ಸಂಚಾರಿ ಪೊಲೀಸ್‌ ಠಾಣೆ - 02 :- ದಿನಾಂಕ 09/11/2023 ರಂದು 9:00 ಎ.ಎಮ್ ಶ್ರೀಮತಿ. ಶೋಭಾ ಗಂಡ ರಾಜಶೇಖರ ಸುತಾರ ವಯಃ 55 ವರ್ಷ ಉಃ ಮನೆ ಕಲಸ ಮುಕ್ಕಾಂ: ಕಗ್ಗನಮಡ್ಡಿ ಸಧ್ಯ ಹೀರಾಪೂರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸಾರಂಶವೆನೆಂದರೆ, ಕಳೆದ 2 ವರ್ಷಗಳ ಹಿಂದೆ ನನ್ನ ಗಂಡನವರು ತೀರಿಕೊಂಡಿದ್ದು, ನಮಗೆ ಮೋಹನ ಎಂಬ 32 ವರ್ಷದ ಮಗನಿದ್ದು, ಆತನು ಕಾರಪೆಂಟರ್ ಕೆಲಸ ಮಾಡಿಕೊಂಡಿರುತ್ತಾನೆ. ನಮ್ಮದೊಂದು ಹೊಂಡಾ ಕಂಪನಿಯ ಮೋಟರ ಸೈಕಲ ನಂ. ಕೆಎ 32 ಇ.ಹೆಚ್ 6659 ನೇದ್ದು ಇರುತ್ತದೆ. ನಾನು ಮತ್ತು ನನ್ನ ಮಗ ಕಳೆದ 7-8 ದಿವಸಗಳಿಂದ ಕಗ್ಗನಮಡ್ಡಿ ಗ್ರಾಮದಲ್ಲಿ ಉಳಿದುಕೊಂಡಿರುತ್ತೆವೆ. ಹೀಗಿದ್ದು, ನಿನ್ನೆ ದಿನಾಂಕ 08/11/2023 ರಂದು ಮಗ ಮೋಹನ ಈತನು ಕಮಲಾಪೂರದಲ್ಲಿ ಮತ್ತು ಕಲಬುರಗಿಯಲ್ಲಿ ಕಾರಪೆಂಟರ ಕೆಲಸವಿರುತ್ತದೆ ಎರಡು ಕಡೆಗೆ ಹೊಗಿ ಬರುತ್ತೆನೆಂದು ಹೋದನು ರಾತ್ರಿ 10:00 ಗಂಟೆ ಸುಮಾರಿಗೆ ಮಗನು ಮಾತನಾಡಿ ಕಮಲಾಪೂರದಿಂದ ಕೆಲಸ ಮುಗಿಸಿಕೊಂಡು ಕಲಬುರಗಿಗೆ ಬಂದು ಈಗ ಕಲಬುರಗಿಯಿಂದ ಊರಿಗೆ ಸ್ವಲ್ಪ ಹೊತ್ತಿನಲ್ಲಿ ಬರುತ್ತೆನೆ ಅಂತಾ ಹೇಳಿದ್ದು, ನಾನು ಆತನಿಗೆ ಕಾಯುತ್ತಾ ಇದ್ದಾಗ ಆತನು ಬರಲಿಲ್ಲಾ. ಆತನಿಗೆ ಫೋನ್ ಮಾಡಲು ಫೋನ್ ಬಂದ ಆಗಿತ್ತು. ಮುಂದೆ ಇಂದು ದಿನಾಂಕ 09/11/2023 ರಂದು ಬೆಳಗಿನ ಜಾವಾ 4:00 ಗಂಟೆ ಸುಮಾರಿಗೆ ಮಣ್ಣೂರ ಆಸ್ಪತ್ರೆಯಿಂದ ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಮೋಹನ ತಂದೆ ರಾಜಶೇಖರ ಸುತಾರ ಎಂಬುವರಿಗೆ ತಾವರಗೇರಾ ಕ್ರಾಸಿನ ಹತ್ತೀರ ಮೋಟರ ಸೈಕಲ ಮತ್ತು ಕ್ಯಾಂಟಿನರ ಲಾರಿಯ ಮಧ್ಯೆ ಅಪಘಾತವಾಗಿ ಈತನು ಗಾಯಗೊಂಡು ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಧಿತಿಯಲ್ಲಿ ಉಪಚಾರ ಪಡೆಯುತ್ತಿರುತ್ತಾನೆ ಅಂತಾ ಮಾಹಿತಿ ತಿಳಿಸಿದ್ದಕ್ಕೆ, ನಾನು ಗಾಬರಿಗೊಂಡು ನಾನು, ನನ್ನ ತಮ್ಮ ಬಸವರಾಜ ಸುತಾರ ಹಾಗು ಇನ್ನೊಬ್ಬ ತಮ್ಮ ರೇವಣಸಿದ್ದಪ್ಪಾ ಸುತಾರ ಇಬ್ಬರು ಕೂಡಿಕೊಂಡು ಮಣ್ಣೂರ ಆಸ್ಪತ್ರೆಗೆ ನಸುಕಿನಲ್ಲಿ ಬಂದು ಮಗನಿಗೆ ನೋಡಲಾಗಿ ಆತನ ತಲೆಗೆ ಭಾರಿ ಪ್ರಮಾಣದ ಗಾಯವಾಗಿ ತಲೆ ಸಿಳಿದ್ದು, ಮುಖಕ್ಕೆ, ಬಲಗೈ ಮುಂಡಿಗೆ ಮತ್ತು ಬಲ ಹಾಗು ಎಡಗಾಲಿನ ತೊಡೆಗಳಿಗೆ ಮತ್ತು ಬಲಗಾಲಿನ ಮೊಳಕಾಲಿನ ಕೆಳಭಾಗಕ್ಕೆ ಭಾರಿ ಪ್ರಮಾಣದ ಗಾಯವಾಗಿದ್ದು, ಮಾತನಾಡದ ಪರಸ್ಧಿತಿಯಲ್ಲಿದ್ದು, ಘಟನೆ ಬಗ್ಗೆ ನಾನು ಮತ್ತು ನನ್ನ ತಮ್ಮಂದಿರು ಕುಲಂಕುಶವಾಗಿ ವಿಚಾರಿಸಲು ನಿಂಗಣ್ಣ ತಂದೆ ಶರಣಪ್ಪಾ ಹರಸೂರ ಹಾಗು ಮಾಣೀಕ ದಿಕ್ಸಂಗಿ ಇವರಿಂದ ವಿಷಯ ಗೊತ್ತಾಗಿದ್ದೆನೆಂದರೆ, ನಿನ್ನೆ ದಿನಾಂಕ 08/11/2023 ರಂದು ರಾತ್ರಿ 11:30 ಗಂಟೆ ಸುಮಾರಿಗೆ ನಮ್ಮ ಮಗ ಮೋಹನ ಈತನು ತನ್ನ ಮೋಟರ ಸೈಕಲ ನಂ. ಕೆಎ 32 ಇ.ಹೆಚ್ 6659 ನೇದ್ದರ ಮೇಲೆ ಕಲಬುರಗಿಯಿಂದ ಹುಮ್ನಾಬಾದ ರೋಡಿನ ಕಡೆಗೆ ಹೋಗುತ್ತಿರುವಾಗ ಅದೆ ವೇಳೆಗೆ ಹುಮ್ನಾಬಾದ ರೋಡಿನ ಕಡೆಯಿಂದ ಒಂದು ಲಾರಿ ಕ್ಯಾಂಟಿನರ್ ನಂ. ಕೆಎ 56-6016 ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ತಾವರಗೇರಾ ಕ್ರಾಸಿನ ಬಸ ಸ್ಟ್ಯಾಂಡಿನ ಹತ್ತೀರ ಮಗ ಮೋಹನನ ಮೋಟರ ಸೈಕಲಗೆ ಡಿಕ್ಕಿ ಹೊಡೆದ ಪರಿಣಾಮ ಮಗನು ಈ ಮೇಲಿನಂತೆ ಗಾಯಗೊಂಡಿದ್ದು, ಅವರೆ ಯಾವುದೋ ವಾಹನದಲ್ಲಿ ಹಾಕಿಕೊಂಡು ಮಣ್ಣೂರ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿರುವ ಬಗ್ಗೆ ತಿಳಿಸಿರುತ್ತಾರೆ. ವಿಚಾರಣೆಯಲ್ಲಿ ಈ ಲಾರಿ ಕ್ಯಾಂಟಿನರ ಚಾಲಕನ ಹೆಸರು ಅಫ್ರೋಜ ತಂದೆ ಮೆಹೆಬೂಬಸಾಬ ಮುಕ್ಕಾಂ: ಸಿರಸಿ ತಾ.ಜಿಃ ಬೀದರ ಅಂತಾ ಗೊತ್ತಾಗಿರುತ್ತದೆ. ಸದ್ಯಕ್ಕೆ ಮಗನು ಪ್ರಜ್ಞಾಹೀನ ಸ್ಧಿತಿಯಲ್ಲಿಯೇ ಆಸ್ಪತ್ರೆಯಲ್ಲಿಯೇ ಉಪಚಾರ ಪಡೆಯುತ್ತಿರುತ್ತಾನೆ. ಘಟನೆ ಬಗ್ಗೆ ನಿಖರವಾಗಿ ತಿಳಿದುಕೊಂಡು ಈಗ ತಡಮಾಡಿ ಈ ಫಿರ್ಯಾದಿಯನ್ನು ಸಲ್ಲಿಸುತ್ತಿದ್ದು, ಈ ಅಪಘಾತಕ್ಕೆ ಕಾರಣಿಭೂತನಾದ ಈ ಲಾರಿ ಕ್ಯಾಂಟಿನರ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿ  ಅಂತಾ ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ನಂ. 298/2023 ಕಲಂ 279, 338 ಐಪಿಸಿ ಸಂ 187 ಐ.ಎಂ.ವ್ಹಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

 

 

ಸಂಚಾರಿ ಪೊಲೀಸ್‌ ಠಾಣೆ - 02 :- ದಿನಾಂಕ 09/11/2023 ರಂದು 4:00 ಪಿ.ಎಮ್ ಕ್ಕೆ ಧನ್ವಂತರಿ ಆಸ್ಪತ್ರೆಯಿಂದ ಸೊಹೇಲ ಬಿಲಾ & ಸುನೀಲ ಎಂಬುವರ ಆರ್.ಟಿ.ಎ ಎಮ್.ಎಲ್.ಸಿಗಳು ವಸೂಲಾಗಿರುವ ಬಗ್ಗೆ ಮಾಹಿತಿ ಬಂದಿದಕ್ಕೆ ನಾನು ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳುವಿಗೆ ವಿಚಾರಿಸಲಾಗಿ ಅವರಿಬ್ಬರು ಮಾತನಾಡದೆ ಇರುವಾಗ ಅಲ್ಲೆವಿರುವ ಸುನೀಲ ರವರ ತಂದೆ ಶ್ರೀ. ರಾಜಕುಮಾರ ತಂದೆ ರಾಮಚಂದ್ರ ಗಾಯಕ್ವಾಡ ವಯಃ 48 ವರ್ಷ ಉಃ ಸೆಂಟ್ರಿಂಗ ಕೆಲಸ ಸಾಃ ಬುದ್ದ ನಗರ 1ನೇ ಕ್ರಾಸ್ ತಾರಫೈಲ ಕಲಬುರಗಿ ರವರು ಫಿರ್ಯಾದಿ ಅರ್ಜಿಯನ್ನು 4:30 ಪಿ.ಎಮ್ ಕ್ಕೆ ಹಾಜರು ಪಡಿಸಿದ್ದು, ಪಡೆದುಕೊಂಡು ಮರಳಿ ಠಾಣೆಗೆ 4:45 ಪಿ.ಎಮ್ ಕ್ಕೆ ಬಂದಿದ್ದು ಫಿರ್ಯಾದಿ ಅರ್ಜಿ ಸಾರಂಶವೆನೆಂದರೆ, ನನಗೆ ಸುನೀಲ ವಯಃ 24 ವರ್ಷದ ಮಗನಿದ್ದು, ಈತನು ಟೆಂಟಹೌಸದಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ಹೀಗಿದ್ದು, ಇಂದು ದಿನಾಂಕ 09/11/2023 ರಂದು ನನ್ನ ಮಗ ಸುನೀಲ ಈತನು ಹಾಗು ಆತನ ಗೆಳೆಯ ಸೊಹೇಲ ಬಿಲಾಲ ತಂದೆ ಚೋಟುಮಿಯಾ ಇಮಾಮದಾರ ಇಬ್ಬರು ಕೂಡಿಕೊಂಡು ಆತನ ಪಲ್ಸರ 220 ಮೋಟರ ಸೈಕಲ ನಂ. ಕೆಎ 32 ಇ.ಡಬ್ಲೂ 5396 ನೇದ್ದರ ಮೇಲೆ ಆತನ ಕೆಲಸಕ್ಕಾಗಿ ಕಲಬುರಗಿಯಿಂದ ಫರಹತಾಬಾದಿಗೆ ಹೋಗುವ ಕುರಿತು ಹೋಗುತ್ತಿರುವಾಗ ಮಧ್ಯಾಹ್ನ 1:50 ಗಂಟೆ ಸುಮಾರಿಗೆ ಕೋಟನೂರ ತಿರುವಿನ ನಂತರ ಬ್ರಿಡ್ಜಿನ ಮೇಲೆ ಹೋಗುತ್ತಿರುವಾಗ ಅದೆ ವೇಳೆಗೆ ಎದುರುಗಡೆ ರೋಡಿನಿಂದ ಒಂದು ಐಚರ ವಾಹನ ನಂ. ಕೆಎ 16 ಬಿ 4610 ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ತಿರುವಿನಲ್ಲಿ ನಡೆಯಿಸಿಕೊಂಡು ಬಂದು ನೇರವಾಗಿ ಸೊಹೇಲ ಬಿಲಾಲ ಈತನು ಮಗನಿಗೆ ಕೂಡಿಸಿಕೊಂಡು ಹೋಗುವ ಈ ಮೋಟರ ಸೈಕಲಗೆ ಮತ್ತು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ತಲೆಯ ಭಾಗಕ್ಕೆ, ಮುಖದ ಭಾಗಕ್ಕೆ ಹಾಗು ಕೈ ಕಾಲುಗಳಿಗೆ ಭಾರಿಗಾಯಗೊಂಡು ಧನ್ವಂತರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವ ಬಗ್ಗೆ ನಮ್ಮ ಪರಿಚಯದ ರಮೇಶ ತಂದೆ ನಿಂಗಪ್ಪಾ ಕೊಗನೂರ ಇವರು ತಿಳಿಸಿದಕ್ಕೆ ನಾನು ಕೂಡಲೆ ಧನ್ವಂತರಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಸೊಹೇಲ ಬಿಲಾಲ ಇವರ ತಾಯಿ ಜರಿನಾಬೇಗಂ ಹಾಗು ತಂಗಿ ಬೇಬಿ ಫಾತೀಮಾ ಇವರು ಬಂದಿದ್ದು, ಎಲ್ಲರೂ ಕೂಡಿಕೊಂಡು ಮಕ್ಕಳಿಗೆ ನೋಡಲಾಗಿ ಮೇಲಿನಂತೆ ಗಾಯಗಳಾಗಿ ಇಬ್ಬರು ಮಾತನಾಡದ ಪರಸ್ಧಿತಿಯಲ್ಲಿದ್ದು, ಘಟನೆ ಬಗ್ಗೆ ವಿಚಾರಿಸಲಾಗಿ ರಮೇಶ ಕೊಗನೂರ ಈ ಮೇಲಿನ ವಿಷಯವನ್ನೆ ತಿಳಿಸಿದ್ದು, ಅಲ್ಲದೆ ಘಟನೆಯನ್ನು ಅಲ್ಲಿ ಕೆಲವರು ನೋಡಿ ಸಹಾಯ ಮಾಡಿರುವ ಬಗ್ಗೆ ತಿಳಿದು ಬಂದಿರುತ್ತದೆ. ಐಚರ ವಾಹನದ ಚಾಲಕನು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುವ ಬಗ್ಗೆ ಗೊತ್ತಾಗಿರುತ್ತದೆ. ಈ ವಿಷಯದಲ್ಲಿ ಐಚರ ವಾಹನ ನಂ. ಕೆಎ   16 ಬಿ 4610 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗು ಮಕ್ಕಳಿಬ್ಬರಿಗೆ ಪ್ರಜ್ಞೆ ಬಂದ ನಂತರ ಅವರಿಂದ ಕೂಡಾ ಮಾಹಿತಿಯನ್ನು ನಿಖರವಾಗಿ ತಿಳಿದುಕೊಳ್ಳಬಹುದು ಅಂತಾ ವಿನಂತಿ ಅಂತಾ ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ನಂ. 299/2023 ಕಲಂ 279, 338 ಐಪಿಸಿ ಸಂ. 187 ಐ.ಎಮ್.ವಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

 

 

ಸಂಚಾರಿ ಪೊಲೀಸ್‌ ಠಾಣೆ - 02 :- ದಿನಾಂಕ 09/11/2023 ರಂದು 5:20 ಪಿ.ಎಮ್ ಕ್ಕೆ ಕ್ಯೂಪಿ ಆಸ್ಪತ್ರೆಯಿಂದ ಎಮ್.ಡಿ ಖಲೀಲ ತಂದೆ ಅಬ್ದುಲ ಕರಿಂ & ಎಮ್.ಡಿ ಮಸ್ತಾನ ತಂದೆ ಅಬ್ದುಲ ಕರಿಂ ರವರುಗಳ ಆರ್.ಟಿ.ಎ ಎಮ್.ಎಲ್.ಸಿ ಗಳು ವಸೂಲಾಗಿರುವ ಬಗ್ಗೆ ಮಾಹಿತಿ ತಿಳಿಸಿದಕ್ಕೆ ನಾನು ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳುದಾರರಿಗೆ ವಿಚಾರಿಸಲು ಇವರಲ್ಲಿ ಶ್ರೀ. ಮಹಮ್ಮದ ಖಲೀಲ ತಂದೆ ಅಬ್ದುಲ ಕರಿಂ ಮೋಮಿನ ವಯಃ 34 ವರ್ಷ ಉಃ ರೂಲರ ಚಾಲಕ ಸಾಃ ಮದಿನಾ ಕಾಲೋನಿ ಶಹಾಜಿಲಾನಿ ದರ್ಗಾದ ಹತ್ತೀರ ಕಲಬುರಗಿ ಇವರು ಫಿರ್ಯಾದಿ ಅರ್ಜಿಯನ್ನು 6:00 ಪಿ.ಎಮ್ ಕ್ಕೆ ಹಾಜರು ಪಡಿಸಿದ್ದು, ಮರಳಿ ಠಾಣೆಗೆ 6:15 ಪಿ.ಎಮ್ ಕ್ಕೆ ಬಂದಿದ್ದು, ಸದರಿ ಫಿರ್ಯಾದಿ ಅರ್ಜಿ ಸಾರಂಶವೆನೆಂದರೆ, ನಾನು ರೂಲರ ಚಾಲಕ ಅಂತಾ ಕೆಲಸ ಮಾಡಿಕೊಂಡಿದ್ದು, ಇಂದು ದಿನಾಂಕ 09/11/2023 ರಂದು ನಾನು ಮತ್ತು ನನ್ನ ತಮ್ಮ ಮಹಮ್ಮದ ಮಸ್ತಾನ ತಂದೆ ಅಬ್ದುಲ ಕರಿಂ ಇಬ್ಬರು ಕೂಡಿಕೊಂಡು ನಮ್ಮ ಪ್ಯಾಶನ ಪ್ರೋ ಮೋಟರ ಸೈಕಲ ನಂ. ಕೆಎ 32 ಇ.ಪಿ 4117 ನೇದ್ದರ ಮೇಲೆ ನಮ್ಮ ಮನೆಯಿಂದ ಡಬರಾಬಾದ ಕ್ರಾಸ್ ಮುಖಾಂತರವಾಗಿ ಪೀರ ರಂಜಾನಿ ದರ್ಗಾದ ರೋಡಿನ ಖಬರಸ್ತಾನದ ಟರ್ನಿಂಗದ ಹತ್ತೀರ ಹೋಗುತ್ತಿರುವಾಗ ಮದ್ಯಾಹ್ನ 12.30 ಗಂಟೆ ಸುಮಾರಿಗೆ ತಮ್ಮ ಮಹಮ್ಮದ ಮಸ್ತಾನನಿಗೆ ಮೋಟರ ಸೈಕಲನ್ನು ನಿಧಾನವಾಗಿ ನಡೆಸು ಅಂತಾ ಹೇಳಿದಾಗಿಯು ಹಾಗೆ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸುವಾಗ ರೋಡಿನ ಸೈಡಿಗೆ ಮೋಟರ ಸೈಕಲ ತೆಗೆದುಕೊಂಡಾಗ ಕಚ್ಚಾ ರೋಡಿಗೆ ಒಮ್ಮೇಲೆ ಸ್ಕೀಡ್ ಆಗಿ ಇಬ್ಬರು ಮೋಟರ ಸೈಕಲ ಸಮೇತವಾಗಿ ಬಿದ್ದಿದ್ದರಿಂದ ನನಗೆ ಬಲಮೊಳಕಾಲಿನ ಕೆಳಗೆ ಗುಪ್ತಗಾಯ ಬಲಗಾಲಿನ ತೊಡೆಯ ಮೇಲ್ಭಾಗದಲ್ಲಿ ಟೊಂಕದ ಹತ್ತೀರ ಭಾರಿಗಾಯವಾಗಿ ಕಾಲು ಮುರಿದಿದ್ದು, ಅಲ್ಲಲ್ಲಿ ತರಚಿದಗಾಯಗಳಾಗಿದ್ದು, ತಮ್ಮನಿಗೆ ನೋಡಲಾಗಿ ಆತನ ಬಲಗೈ ಮೊಳಕೈ ಕೆಳಗೆ ಹಾಗು ಪಾದದ ಮೇಲೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ರೋಡಿನಿಂದ ಹೋಗುತ್ತಿರುವ ಮಹಮ್ಮದ ಇನಾಯತ ತಂದೆ ಮಹಮ್ಮದ ಮಸ್ತಾನ ಹಾಗು ಮಹಮ್ಮದ ಆಸೀಫ ತಂದೆ ಶೇಖ ಹನೀಫ ಇವರು ಎಬ್ಬಿಸಿದ್ದು, ಹಾಗೆ ಯಾವುದೋ ಅಟೋದಲ್ಲಿ ಅವರೆ ಹಾಕಿ ತಮ್ಮ ಮಹಮ್ಮದ ಮಸ್ತಾನ ಈತನು ನಾನು ಆಸ್ಪತ್ರೆಗೆ ಬಂದು ಉಪಚಾರ ಕುರಿತು ಕ್ಯೂಪಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುತ್ತೆವೆ ಈ ವಿಷಯದಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕೆಂದು ನನ್ನ ಫೀರ್ಯಾದಿ ಅರ್ಜಿ ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ನಂ. 300/2023 ಕಲಂ 279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ - 02 :- ದಿನಾಂಕ 09/11/2023 ರಂದು 6:50 ಪಿ.ಎಮ್ ಕ್ಕೆ ಕ್ಯೂಪಿ ಆಸ್ಪತ್ರೆಯಿಂದ ಎಮ್.ಡಿ ಶಫಿ ತಂದೆ ಅಬ್ದುಲಸಾಬ ಎಂಬುವರ ಆರ್.ಟಿ.ಎ ಎಮ್.ಎಲ್.ಸಿ ವಸೂಲಾಗಿರುವ ಬಗ್ಗೆ ಮಾಹಿತಿ ಬಂದಿದಕ್ಕೆ ನಾನು ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳು ಮಹಮ್ಮದ ಶಫಿ ತಂದೆ ಅಬ್ದುಲ ಸಾಬ ವಯಃ 40 ವರ್ಷ ಉಃ ಟ್ರ್ಯಾಲಿ ವರ್ಕಶಾಪನಲ್ಲಿ ಕೆಲಸ ಸಾಃ ಮದಿನಾ ಕಾಲೋನಿ ಎಮ್.ಎಸ್.ಕೆ ಮಿಲ್ ಕಲಬುರಗಿ ಇವರಿಗೆ ವಿಚಾರಿಸಲು 7:45 ಪಿ.ಎಮ್ ಕ್ಕೆ ಫಿರ್ಯಾದಿ ಅರ್ಜಿಯನ್ನು ಹಾಜರು ಪಡಿಸಿದ್ದು, ಪಡೆದುಕೊಂಡು ಮರಳಿ ಠಾಣೆಗೆ 8:15 ಪಿ.ಎಮ್ ಕ್ಕೆ ಬಂದಿದ್ದು, ಫಿರ್ಯಾದಿ ಅರ್ಜಿಯ ಸಾರಂಶವೆನೆಂದರೆ, ಅಫಜಲಪೂರದಲ್ಲಿ ಟ್ರ್ಯಾಲಿ ಕೆಲಸದ ಮಾತನಾಡಬೇಕಾಗಿರುವುದರಿಂದ ನಾನು ಮತ್ತು ನನ್ನಂತೆ ಕೆಲಸ ಮಾಡುವ ಮಹಮ್ಮದ ಯಾಸೀನ ತಂದೆ ಅಬ್ದುಲ ರಹಿಂ ಇಬ್ಬರು ಕೂಡಿಕೊಂಡು ಹೊಂಡಾ ಶೈನ್ ಮೋಟರ ಸೈಕಲ ನಂ. ಕೆಎ 17 ಹೆಚ್.ಎನ್ 7467 ನೇದ್ದರ ಮೇಲೆ ಅಫಜಲಪೂರಕ್ಕೆ ಹೋಗುವಾಗ ನಾನೆ ಮೋಟರ ಸೈಕಲ ನಡೆಯಿಸಿಕೊಂಡು ಹೋದೆ ಅಲ್ಲಿ ಕೆಲಸ ಮುಗಿದ ನಂತರ ಮರಳಿ ಕಲಬುರಗಿಗೆ ಬರುವಾಗ ಮೋಟರ ಸೈಕಲನ್ನು ಮಹಮ್ಮದ ಯಾಸೀನ ಈತನೆ ನಡೆಯಿಸಿಕೊಂಡು ಬರುತ್ತಿರುವಾಗ ಮಧ್ಯಾಹ್ನ 12:30 ಗಂಟೆ ಆಗಿರಬಹುದು ಹೈಕೊರ್ಟನ ಹಿಂಭಾಗದಲ್ಲಿ ದರ್ಗಾದ ಹತ್ತೀರ ಬರುತ್ತಿರುವಾಗ ಮಹಮ್ಮದ ಯಾಸೀನ ಈತನು ಮೋಟರ ಸೈಕಲನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೆ ಎದುರುಗಡೆ ರೋಡಿನಿಂದ ಯಾವುದೋ ಒಂದು ದೊಡ್ಡವಾಹನವು ಎದುರಿಗೆ ಬಂದಿದ್ದಕ್ಕೆ ಸೈಡಿಗೆ ತೆಗೆದುಕೊಳ್ಳುವಾಗ ಒಮ್ಮೇಲೆ ಸ್ಕೀಡ್ ಆಗಿ ಮೋಟರ ಸೈಕಲದ ಮೇಲಿಂದ ಬಿದ್ದಿದ್ದಕ್ಕೆ ನನಗೆ ಬಲಗೈ ಭುಜಕ್ಕೆ ಭಾರಿಗಾಯವಾಗಿದ್ದು, ಬಲಗಾಲಿನ ತೊಡೆಯ ಭಾಗಕ್ಕೆ ಮತ್ತು ಎಡಕಪಾಳಿಗೆ ಗಾಯವಾಗಿತ್ತು. ಮಹಮ್ಮದ ಯಾಸೀನನಿಗೆ ಕೂಡಾ ಹಣೆಯ ಭಾಗಕ್ಕೆ ಮತ್ತು ಬಲ ಭಾಗಕ್ಕೆ ಗುಪ್ತಗಾಯವಾಗಿದ್ದು, ಹೈಕೊರ್ಟ ಮೂಲಿಗೆ ನಿಂತ ಇಬ್ಬರು ನೋಡಿ ಓಡಿ ಬಂದು ನಮಗೆ ಸಹಾಯ ಮಾಡಿದ್ದು, ಅವರ ಹೆಸರು ಮಹಮ್ಮದ ಅಮದೋದ್ದಿನ ಮತ್ತು ಮಹಮ್ಮದ ವಾಸಿಂ ಅಂತಾ ಗೊತ್ತಾಯಿತು. ಮುಂದೆ ನಾವು ಯಾವುದೋ ಒಂದು ಅಟೋದಲ್ಲಿ ಕ್ಯೂಪಿ ಆಸ್ಪತ್ರೆಗೆ ಬಂದು ನಾನು ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆಯಾಗಿದ್ದು, ಮಹಮ್ಮದ ಯಾಸೀನನು ಆತನು ತೊರಿಸಿಕೊಂಡಿರುವುದಿಲ್ಲಾ. ಕಾರಣ ಮಹಮ್ಮದ ಯಾಸೀನ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನನ್ನ ಫೀರ್ಯಾದಿ ಅರ್ಜಿ ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ನಂ. 301/2023 ಕಲಂ 279, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್-‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 09/11/2023 ರಂದು ಪಿರ್ಯಾದಿ ಮೈಬೂಬಸಾಬ ತಂದೆ ಪಥ್ರು ಪಟೇಲ  ಇವರು ಮನೂರು ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ ಸಾರಾಂಶವೇನೆಂದರೆ ನಾನು ಮೈಬೂಬಸಾಬ ತಂದೆ ಪಥ್ರು ಪಟೇಲ ವಯ: 35 ವರ್ಷ ಉ: ಆಟೋ ಚಾಲಕ ಸಾ: ಮುಸ್ಲಿಂ ಸಂಘ ತಾಜ ನಗರ ಕಲಬುರಗಿ ಈ ಮೇಲೆ ನಮೂದಿಸಿದ ವಿಳಾಸದವನಿದ್ದು, ಆಟೋ ಚಾಲನೆ ಮಾಡಿಕೊಂಡು ಉಪಜೀವಿಸುತ್ತಾ ಬಂದಿದ್ದು, ನಮ್ಮ ತಂದೆಗೆ ನಾಲ್ಕು ಜನ ಮಕ್ಕಳಿದ್ದು, ನಮ್ಮ ತಮ್ಮ ರಫೀಕ್ ವಯ: 28 ವರ್ಷ ಇತನು ಸೆಂಟ್ರಿಂಗ್ ಗುತ್ತೆದಾರ ಕೆಲಸ ಮಾಡಿಕೊಂಡು ತನ್ನ ಹೆಂಡತಿಯೊಂದಿಗೆ ಉಪಜೀವಿಸುತ್ತಾ ಬಂದಿದ್ದು ಇರುತ್ತದೆ. ಹೀಗಿದ್ದು ನಮ್ಮ ತಮ್ಮ ರಫೀಕ್ ಇತನು ಮಿಲತ್ ನಗರದ ಖಂಡಲ ಗ್ರೌಂಡ ಹತ್ತಿರ ಇರುವ ಆಸೀಪ್ ಪಟೇಲ ತಂದೆ ಸಾಹೇಬ ಪಟೇಲ ರವರ ಎರಡು ಅಂತಸ್ತಿನ ಕಟ್ಟಡದವನ್ನು ಕಟ್ಟಲು ಗುತ್ತಿಗೆ ತೆಗೆದುಕೊಂಡಿರುತ್ತಾರೆ. ಎಂದಿನಂತೆ ಎರಡನೇ ಅಂತಸ್ತಿನ ಕಟ್ಟಡದ ಕೆಲಸಕ್ಕೆ ಹೋಗಿರುತ್ತಾನೆ. ನಂತರ ಇಂದು ದಿನಾಂಕ: 09/11/2023 ರಂದು 4:30 ಪಿ.ಎಂ. ಸುಮಾರಿಗೆ ನನಗೆ ನಮ್ಮ ತಮ್ಮನೊಂದಿಗೆ ಕೆಲಸ ಮಾಡುವ ಇಸ್ಮಾಯಿಲ್  ತಂದೆ ಗಪೂರ ಸಾಬ ಇತನು ತಿಳಿಸಿದ್ದೆನೆಂದರೆ, ನಿಮ್ಮ ತಮ್ಮ ರಫೀಕ್ ಇತನು ಸೆಂಟ್ರಿಂಗ್ ಕೆಲಸ ಮಾಡುವಾಗ ಕಟ್ಟಡದ ಮುಂದುಗಡೆ ಇರುವ ವಿದ್ಯುತ್ ಕಂಬದ ಮುಖ್ಯ ವೈಯರ್ ಕೈಗೆ ತಗುಲಿದ್ದರಿಂದ ಮಹಡಿಯ ಮೇಲಿಂದ ಕೆಳಗೆ ಬಿದ್ದು, ತಲೆಗೆ ಬಾರಿ ಗುಪ್ತಗಾಯ ಹೊಂದಿ ಬೆಹೋಶ್ ಸ್ಥಿತಿಯಲ್ಲಿ ಬಿದ್ದಿರುತ್ತಾನೆ. ನಾನು ಮತ್ತು ಆಟೋ ಚಾಲಕನಾದ ಫೀರೋಜ್ ಅಹಿಮದ್ ಕೂಡಿಕೊಂಡು ಮಣ್ಣೂರು ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಅಂತಾ ಹೇಳಿದಾಗ ನಾನು ಆಸ್ಪತ್ರೆಗೆ ಬಂದು ವಿಚಾರಿಸಲು ಘಟನೆ ನಿಜವಿದ್ದು, ನನ್ನ ತಮ್ಮ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನನ್ನ ತಮ್ಮ ಕಟ್ಟಡದ ಕಾರ್ಮಿಕ ಕೆಲಸ ಮಾಡುತ್ತಿದ್ದನು. ಕಾರಣ ನನ್ನ ತಮ್ಮನಿಗೆ ಸೆಟ್ರಿಂಗ್ ಗುತ್ತಿಗೆದಾರ ಕೆಲಸ ಕೊಟ್ಟು ನನ್ನ ತಮ್ಮನಿಗೆ ಯಾವುದೇ ಸುರಕ್ಷತೆಗೆ ಉಪಕರಣಗಳನ್ನು ನೀಡದೇ ನಿರ್ಲಕ್ಷತನ ವಹಿಸಿದ ಆಸೀಪ್ ಪಟೇಲ ತಂದೆ ಸಾಹೇಬ ಪಟೇಲ ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಮತ್ತು ನಮ್ಮ ತಮ್ಮ ರಫೀಕ್ ಇತನಿಗೆ ವಿದ್ಯುತ್  ತಗುಲಿ ಕೆಳಗೆ ಬಿದ್ದು ಗಾಯ ಹೊಂದಲು ಕಾರಣನಾದ ಆಸೀಪ್ ಪಟೇಲ ಇತನ ಮೇಲೆ ಕ್ರಮ ಜರುಗಿಸಿ ನಮಗೆ ನ್ಯಾಯ ಒದಗಿಸಿ ಕೊಡಬೆಕು ಅಂತಾ ವಿನಂತಿಸಿಕೊಳ್ಳುತ್ತೇನೆ ಅಂತಾ ಹೇಳಿ ಬರೆಯಿಸಿದ ಹೇಳಿಕೆ ನಿಜ ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ನಂ. 334/2023 ಕಲಂ: 288, 336 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ:10/11/2023 ರಂದು 1:00ಪಿ.ಎಮ್.ಕ್ಕೆ ಫಿರ್ಯಾಧಿ ನರೇಶ ಸಿ. ಪ್ರಬಂಧಕರು ಕೃಷ್ಣ ಭೀಮಾ ಸಮೃದ್ಧಿ ಲೋಕಲ್ ಏರಿಯಾ ಬ್ಯಾಂಕ್, ವಯ:40ವರ್ಷ ಸಾ: ಆದರ್ಶ ನಗರ 2ನೇ ಪೇಸ್ ಕಲಬುರಗಿ ಮೊ.ನಂ: 9740482655 ರವರು ಠಾಣೆಗೆ ಹಾಜರಾಗಿ ದೂರು ಅರ್ಜಿ ನೀಡಿದ ಸಾರಾಂಶವೇನಂದರೆ ಶ್ರೀ ವಿನೋದ ತಂದೆ ರಮೇಶರಾವ ಪಾಟೀಲ್ ಪ್ಲಾಟ್ ನಂ. 79, ಬ್ರಹ್ಮಪೂರ ರೋಡ್, ನ್ಯೂ ರಾಘವೇಂದ್ರ ಕಾಲೋನಿ, ಅಂಬಾ ಭವಾನಿ ದೇವಸ್ಥಾನದ ಹತ್ತಿರ, ಕಲಬುರಗಿ-585 103 ಮೊ.ನಂ. 9538207774 ಇವರು ಈ ಮೊದಲು ಕೆ.ಬಿ.ಎಸ್ ಬ್ಯಾಂಕ್ ಕಲಬುರಗಿ ಶಾಖೆಯಲ್ಲಿ ಗ್ರಾಹಕ ಸೇವಾ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿ ಇವರು ಕರ್ತವ್ಯ ನಿರ್ವಹಿಸುತ್ತಿರುವ ಅವಧಿಯಲ್ಲಿ ನಮ್ಮ ಬ್ಯಾಂಕಿನಿಂದ ಗ್ರಾಹಕರು ಪಡೆದುಕೊಂಡ ಸಾಲದ ಹಣವನ್ನು ಮರುಪಾವತಿಗಾಗಿ ಇವರು ಸಾಲಗಾರರಿಂದ ರೂ. 1,05,054/- ಹಣವನ್ನು ವಸೂಲಿ ಮಾಡಿ ಸದರಿ ಹಣವನ್ನು ಕೆಲಸದ ದಿನದಂದು ಇಲ್ಲದೇ ಮರು ದಿವಸ ಸಂಬಂಧಪಟ್ಟ ಖಾತೆಗಳಿಗೆ ಜಮಾಗೊಳಿಸಬೇಕಿತ್ತು. ಆದರೆ ಇವರು ಸದರಿ ಹಣವನ್ನು ಜಮಾಗೊಳಿಸದೇ ತಮ್ಮ ಸ್ವಂತಕ್ಕೆ ಬಳಸಿಕೊಂಡಿರುತ್ತಾರೆ. ಈ ವಿಷಯವು ದಿನಾಂಕ: 30.09.2023 ರಂದು ಬ್ಯಾಂಕಿನ ಗಮನಕ್ಕೆ ಬಂದಿರುತ್ತದೆ .ಬ್ಯಾಂಕಿನ ಹಣವನ್ನು ಅಪ್ರಾಮಾಣಿಕವಾಗಿ ಸ್ವಂತಕ್ಕೆ ಬಳಸಿಕೊಂಡಿರುವ 35 ಗ್ರಾಹಕರ ಹಣವನ್ನು ರೂ. 1,05,054/- ಹಣವನ್ನು ಶ್ರೀ ವಿನೋದ ತಂದೆ ರಮೇಶರಾವ ಪಾಟೀಲ್ ರವರಿಂದ ವಸೂಲಿ ಮಾಡಿ ಸಂಬಂಧಪಟ್ಟ ಗ್ರಾಹಕರ ಖಾತೆಗಳಿಗೆ ಮರಳಿ ಜಮಾ ಮಾಡಲಾಗಿದೆ. ಕಾರಣ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಸದರಿ ಶ್ರೀ ವಿನೋದ ತಂದೆ ರಮೇಶರಾವ ಪಾಟೀಲ್ ಇವರು ಬ್ಯಾಂಕಿನ ಹಣವನ್ನು ಅಪ್ರಾಮಾಣಿಕವಾಗಿ ಸ್ವಂತಕ್ಕೆ ಬಳಸಿಕೊಂಡು ಬ್ಯಾಂಕಿಗೆ ನಂಬಿಕೆ ದ್ರೋಹ ಮಾಡಿರುತ್ತಾರೆ. ರಿಸರ್ವ ಬ್ಯಾಂಕ್ ಆಫ್ ಇಂಡಿಯಾದ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಪ್ರಕಾರ ಇವರ ಮೇಲೆ ದೂರು ದಾಖಲಿಸಬೇಕಾಗಿರುವುದರಿಂದ ಇವರ ಮೇಲೆ ಕಾನೂನಿನ ರೀತ್ಯ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರಲಾಗಿದೆ.  ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ್ ಠಾಣೆ ಗುನ್ನೆ ನಂ:214/2023 ಕಲಂ:420.406.409 ಐ.ಪಿ.ಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡ ಬಗ್ಗೆ ವರದಿ

 

 

ಚೌಕ ಪೊಲೀಸ್‌ ಠಾಣೆ :- ದಿನಾಂಕ:10.11.2023 ರಂದು ಮಧ್ಯಾಹ್ನ 13.00 ಪಿಎಂಕ್ಕೆ ಪ್ರಕರಣದ ಫಿರ್ಯಾಧಿ ಶ್ರೀ ರವಿಕುಮಾರ ತಂದೆ ಧೂಳಪ್ಪಾ ನಾಟಿಕರ ವ:39 ವರ್ಷ ಉ: ಟಾಟಾ ಎಸಿ ಡ್ರೈವರ ಸಾ:ಮನೆ ನಂ.23 ಅಂಬೇಡ್ಕರ ಆಶ್ರಯ ಕಾಲೋನಿ ಫೀಲ್ಟರಬೇಡ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ಫಿರ್ಯಾದಿ ಅರ್ಜಿ ಹಾಜರ ಪಡಿಸಿದ್ದು ಸದರಿ ಅರ್ಜಿಯ ಸಾರಾಂಶ  ಈ ಕೆಳಗಿನಂತಿರುತ್ತದೆ. ಈ ಮೂಲಕ ತಮ್ಮಲ್ಲಿ ನಾನು ದೂರು ಸಲ್ಲಿಸುವುದೇನೆಂದರೆ ನಾನು ಟಾಟಾ ಎಸಿ ಡ್ರೈವರ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ದಿನಾಂಕ:09.11.2023 ರಂದು ಬೆಳಿಗ್ಗೆ 10.00 ಗಂಟೆಗೆ ನಾನು ಟಾಟಾ ಎಸಿ ನಡೆಸುವ ಕುರಿತು ಮನೆಯಿಂದ ಹೋಗಿದ್ದು ಮನೆಯಲ್ಲಿ ನನ್ನ ಹೆಂಡತಿ ಸುನೀತಾ ಗಂಡ ರವಿಕುಮಾರ ನಾಟಿಕರ ವ:32 ವರ್ಷ ಇವಳು ಮನೆಯಲ್ಲಿದ್ದು, ಮಕ್ಕಳು ಶಾಲೆಗೆ ಹೋಗಿದ್ದರು. ನಾನು ಸಾಯಂಕಾಲ 4.00 ಗಂಟೆ ಸುಮಾರಿಗೆ ಕಮಲಾಪೂರದಲ್ಲಿದ್ದಾಗ ನನ್ನ ಹಿರಿಯ ಮಗಳು ಸೃಷ್ಟಿ ಇವಳು ನನಗೆ ಫೋನ ಮಾಡಿ ವಿಷಯ ತಿಳಿಸಿದೇನೆಂದರೆ ಅಮ್ಮ ಸುನೀತಾ ಇವಳು ಮನೆಯಲ್ಲಿ ಇರುವುದಿಲ್ಲಾ. ಎಲ್ಲಿ ಹೋಗಿರುತ್ತಾಳೆ ಅಂತಾ ಗೋತ್ತಿರುವುದಿಲ್ಲಾ ಅಂತಾ ನನಗೆ ತಿಳಿಸಿದ್ದು ಅದಕ್ಕೆ ಅವಳಿಗೆ ನಾನು ಕಮಲಾಪೂರದಲ್ಲಿದ್ದೇನೆ ಆ ಮೇಲೆ ಮನೆಗೆ ಬಂದು ನೋಡುತ್ತೇನೆ ಅಂತಾ ಹೇಳಿದೇನು. ನಂತರ ನಾನು ಸಾಯಂಕಾಲ 7.00 ಗಂಟೆಗೆ ಮನೆಗೆ ಬಂದಾಗ ಮನೆಯಲ್ಲಿ ನನ್ನ ಹೆಂಡತಿ ಸುನೀತಾ ಇವಳು ಇರಲಿಲ್ಲಾ. ನಂತರ ಮನೆಯ ಅಕ್ಕಪಕ್ಕದವರಿಗೆ ಅವಳ ಬಗ್ಗೆ ವಿಚಾರಿಸಿದಾಗ ಪಕ್ಕದ ಮನೆಯ ಹುಡುಗಿಗೆ ವಿಚಾರಿಸಿದಾಗ ಅವಳು ನನಗೆ ಹೇಳಿದೇನೆಂದರೆ ಇಂದು ಬೆಳಿಗ್ಗೆ 11.30 ಗಂಟೆಯಿಂದ 12.30 ಗಂಟೆಯ ಅವಧಿಯಲ್ಲಿ ನಿಮ್ಮ ಹೆಂಡತಿ ಸುನೀತಾ ಇವರು ಮನೆಯಿಂದ ಹೋಗುತ್ತಿದ್ದಾಗ ನಾನು ನೋಡಿರುತ್ತೇನೆ. ಅವಳಿಗೆ ನಾನು ಎಲ್ಲಿಗೆ ಹೋಗುತ್ತಿದ್ದೀರಿ ಅಂತಾ ಅವಳಿಗೆ ಕೇಳಿರುವುದಿಲ್ಲಾ. ಅವಳಿಗೆ ನಾನು ಮಾತನಾಡಿಸಿರುವುದಿಲ್ಲಾ ಅಂತಾ ತಿಳಿಸಿದಳು. ನಂತರ ನಾನು ನನ್ನ ಹೆಂಡತಿ ಸುನೀತಾ ಇವಳ ಬಗ್ಗೆ ಅವರ ತಂದೆ ತಾಯಿ ಮತ್ತು ನಮ್ಮ ಎಲ್ಲಾ ಸಂಬಂಧಿಕರುಗಳಲ್ಲಿ ಫೋನ ಮಾಡಿ ಅವಳು ಅಲ್ಲಿ ಬಂದಿರುತ್ತಾಳೆ ಹೇಗೆ? ಎನ್ನುವ ಬಗ್ಗೆ ವಿಚಾರಿಸಿದ್ದು ಅವಳು ಅಲ್ಲಿ ಬಂದಿರುವುದಿಲ್ಲಾ ಅಂತಾ ತಿಳಿಸಿರುತ್ತಾರೆ. ನನ್ನ ಹೆಂಡತಿ ಸುನೀತಾ ಇವಳು ಮನೆಯಲ್ಲಿ ಯಾರಿಗೂ ಯಾವುದೇ ವಿಷಯವನ್ನು ತಿಳಿಸದೇ ಮನೆ ಬಿಟ್ಟು ಹೋಗಿರುತ್ತಾಳೆ. ನಾವು ದಿನಾಂಕ:09.11.2023 ರಿಂದ ಇಂದಿನವರೆಗೆ ಎಲ್ಲಾ ಕಡೆಗಳಲ್ಲಿ ನಮ್ಮ ಸಂಬಂಧಿಕರಲ್ಲಿ ಹುಡುಕಾಟ ಮಾಡಿದರೂ ಸಹ ನನ್ನ ಹೆಂಡತಿ ಸುನೀತಾ ಇವಳು ಇಲ್ಲಿಯವರೆಗೆ ಪತ್ತೆಯಾಗಿರುವುದಿಲ್ಲಾ. ಕಾರಣ ಇಂದು ತಡಮಾಡಿ ಠಾಣೆಗೆ ಬಂದು ಕಾಣೆಯಾದ ನನ್ನ ಹೆಂಡತಿ ಸುನೀತಾ ಇವಳು ಕಾಣೆಯಾದ ಬಗ್ಗೆ ದೂರು ಸಲ್ಲಿಸುತ್ತಿದ್ದು ಕಾರಣ ಕಾಣೆಯಾದ ನನ್ನ ಹೆಂಡತಿ ಸುನೀತಾ ಇವಳಿಗೆ ಪತ್ತೆ ಮಾಡಿಕೊಡಲು ವಿನಂತಿ.  ಕಾಣೆಯಾದವಳ ವೈಯಕ್ತಿಕ ವಿವರಗಳು ಈ ಕೆಳಗಿನಂತೆ ಇರುತ್ತದೆ. ಹೆಸರು: ಶ್ರೀಮತಿ ಸುನೀತಾ ಗಂಡ: ರವಿಕುಮಾರ ನಾಟಿಕರ,  ವಯ: 32 ವರ್ಷ, ಎತ್ತರ: 5'.1, ಬಣ್ಣ: ಗೋಧಿ ಬಣ್ಣ ಮುಖ : ದುಂಡು ಮುಖ, ಕೂದಲು : ಕರಿ ಕೂದಲು, ಧರಿಸಿರುವ ಬಟ್ಟೆ : ಚಾಕಲೇಟ ಮತ್ತು ನೀಲಿ ಮಿಶ್ರಿತ ಸೀರೆ, ಭಾಷೆ : ಕನ್ನಡ, ಹಿಂದಿ, ವಿಧ್ಯಾರ್ಹತೆ : 10 ನೇ ತರಗತಿ ಪಾಸ್. ಕಾರಣ ದಯಾಳುಗಳಾದ ತಾವು ಕಾಣೆಯಾದ ನನ್ನ ಹೆಂಡತಿ ಸುನೀತಾ ಗಂಡ ರವಿಕುಮಾರ ನಾಟಿಕರ ಇವಳಿಗೆ ಪತ್ತೆ ಹಚ್ಚಿ ಕೊಡಲು ಮಾನ್ಯರವರಲ್ಲಿ ವಿನಂತಿ ಅಂತಾ ಕೊಟ್ಟ ಫಿರ್ಯಾದಿ ದೂರು ಅರ್ಜಿಯ ಸಾರಾಂಶದ ಮೇಲಿಂದ ಚೌಕ ಪೊಲೀಸ ಠಾಣೆಯ ಗುನ್ನೆ ನಂ. 217/2023 ಕಲಂ ಹೆಣ್ಣುಮಗಳು ಕಾಣೆಯಾದ ಬಗ್ಗೆ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

 

 

ಸಬ್‌ - ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 10.11.2023 ರಂದು 14.00 ಪಿ.ಎಮ ಗಂಟೆಗೆ ಪಿರ್ಯಾದಿ ಶ್ರೀಮತಿ ಪೂಜಾ ಗಂಡ ಅಭೀಮನ್ಯು  ಕಮಲಾಪೂರಕರ ವಯಾ:38 ಉ: ಕೂಲಿ ಸಾ: ಪಟ್ಟಣ ಗ್ರಾಮ ತಾ: ಜಿ ಕಲಬುರಗಿ ಮೋನಂ: 7204465599 ಠಾಣೆಗೆ ಬಂದು ಕನ್ನಡದಲ್ಲಿ ಟೈಪ ಮಾಡಿಸಿದ ದೂರಿನ ಸಾರಾಂಶವೆನೆಂದರೇ, ನಾನು   ನನ್ನ ಗಂಡ ಹಾಗೂ ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದು , ನನ್ನ ಗಂಡ ಅಭಿಮನ್ಯ ಇವರು ಶ್ರೀಗುರು  ಕಾಲೇಜನಲ್ಲಿ ಬಸಚಾಲಕನಾಗಿ ಕೆಲಸ ಮಾಡುತ್ತಿದ್ದರು , ದಿನಾಂಕ 25.10.2023 ರಂದು ಬೆಳಿಗ್ಗೆ 08.00 ಗಂಡೆಗೆ ಮನೆಯಿಂದ ಕೆಲಸಕ್ಕೆ ಹೋದವರು ಮರಳಿ ಮನೆಗೆ ಬಂದಿರುವದಿಲ್ಲಾ .ನಂತರ ನಾನು ಮತ್ತು ನನ್ನ ತಂಗಿ ಚೆನ್ನಮ್ಮ ಮತ್ತು ಮಗ ನಿಖಿಲ ಎಲ್ಲರೂ ಕೂಡಿ ಕೆಲಸ ಮಾಡುವ ಸ್ಥಳ, ಸಂಬಂದಿಕರು, ಸ್ನೇಹಿತರು ಮನೆಯಲ್ಲಿ ಹುಡಕಾಡಿದರೂ ನನ್ನ ಗಂಡನ ಬಗ್ಗೆ ಯಾವದೇ ಮಾಹಿತಿ ಸಿಕ್ಕರುವದಿಲ್ಲಾ ನನ್ನ ಗಂಡ ಉಪಯೋಗಿಸುತ್ತಿರುವ  ಮೋನಂ 9606568678, 7738313463 ಇರುತ್ತವೆ. ನನ್ನ ಗಂಡನ ಚಹರಾ ಪಟ್ಟಿ ಈ ಕೆಳಕಂಡಂತೆ ಇರುತ್ತದೆ. ಹೆಸರು:- ಅಭಿಮನ್ಯ ತಂದೆ ಅಮೃತ ಕಮಲಾಪೂರಕರ ವಯಾ: 40 ಉ: ಚಾಲಕ ಎತ್ತರ:- 5.6 ಇಂಚ, ಬಾಷೆ:- ಕನ್ನಡ ಮತ್ತು ಹಿಂದಿ ತೆಲಗು ,ಮರಾಠಿ  ಭಾಷೆ ಮಾತನಾಡುತ್ತಾನೆ. ಆಕಾರ:- ಬಿಳಿ ಮೈಬಣ್ಣ ,ದುಂಡು ಮುಖ, ಕಪ್ಪು ಕೂದಲು. ಬಟ್ಟೆ:- ಬಿಳಿ ಬಣ್ಣದ ಶರ್ಟ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.      ಕಾರಣ ನನ್ನ ಗಂಡ ಅಭಿಮನ್ಯ ಇವನನ್ನು ಪತ್ತೆ ಮಾಡಿಕೊಡಬೇಕು ಅಂತಾ ಈ ದೂರಿನ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳಲಾಗಿದೆ. ಅಂತಾ ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ನಂ. 335/2023 ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 02-12-2023 07:32 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080