ಅಭಿಪ್ರಾಯ / ಸಲಹೆಗಳು

ಸಬ್‌ ಅರ್ಬನ್‌ ಪೊಲಿಸ್‌ ಠಾಣೆ :- ದಿನಾಂಕಃ-೧೦-೧೦-೨೦೨೨ ರಂದು ಸರಕಾರಿ ತರಪೆ ಫಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೇನೆಂದರೆ ಸದರಿಯವರಿಗೆ ಮಾಹಿತಿ ಬಂದ ಮೇರೆಗೆ ತಾವರೆಗೆರಾ ಗ್ರಾಮದಲ್ಲಿ ಸದರಿ ಆರೋಪಿತರು ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಅನ್ನು ತುಂಬುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ಮಾಡಲಾಗಿ ಸದರಿವರನ್ನು ಹಿಡಿದು ವಿಚಾರಿಸಲು ಅವರ ಬಳಿ ಯಾವ್ಯದೆ ರೀತಿಯ ಲೈಸನ್ಸ ಹೊಂದದೆ ಗ್ಯಾಸ್ ಸಿಲಿಂಡರ್ ಸಂಗ್ರಹಿಸಿದ್ದು ಅವರ ವಿರುದ್ದ ಪ್ರಕರಣವನ್ನು ದಾಖಲಿಸಿಕೊಂಡ ಬಗ್ಗೆ ವರದಿ. 

 

ಅಶೋಕ್‌ ನಗರ ಪೊಲೀಸ್‌ ಠಾಣೆ:- ಇಂದು ದಿನಾಂಕ:10.10.2022 ರಂದು 07:00 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ನವೀನ್ ತಂದೆ ಶಿವಪ್ಪ ನಾಯಕ್ ವಯ: 32 ವರ್ಷ ಜಾ: ಲಂಬಾಣಿ ಉ: ಕಾರ ಚಾಲಕ ಸಾ|| ಮುರುಡಿ ತಾಂಡಾ ಪೊ|| ಬಾಗೇವಾಡಿ ತಾ|| ಮುಂಡರಗಿ ಜಿ|| ಗದಗ ಹಾ|| ವ|| ಕೋರಿವರಿಂ (ಗೋವಾ ರಾಜ್ಯ) ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ 2021 ನೇ ಸಾಲಿನಲ್ಲಿ ಒಂದು ಬಜಾಜ ಪ್ಲಾಟೀನಾ ಮೋಟರ ಸೈಕಲ್ ನಂ. ಕೆ.ಎ-26-ಇ.ಇ.-8706 ಎಬೋನಿ ಬ್ಲಾಕ್  ಬ್ಲೂ ಬಣ್ಣದ್ದು ಚೆಸ್ಸಿ ನಂ MD2A76AX7MWG23694  ಇಂಜಿನ್ ನಂ PFXWMG92473  ಅ.ಕಿ. 50,000/- ನೇದ್ದು ನನ್ನ ಹೆಸರಿನಿಂದ ಖರೀದಿಸಿದ್ದು ಇರುತ್ತದೆ. ಹೀಗಿದ್ದು ದಿನಾಂಕ:15.08.2022 ರಂದು 06:30 ಪಿ.ಎಂ.ಕ್ಕೆ ಕಲಬುರಗಿಯ ಅಫಜಲಪೂರ ರೋಡದಲ್ಲಿರುವ ದರ್ಶನ ಡಾಬಾ ಹತ್ತಿರ ನಿಲ್ಲಿಸಿ ನನ್ನ ವೈಯಕ್ತಿಕ ಕೆಲಸದ ನಿಮಿತ್ಯ ಗದಗ ಪಟ್ಟಣಕ್ಕೆ ಹೋಗಿದ್ದು ದಿನಾಂಕ:20.08.2022 ರಂದು 04;00 ಪಿ.ಎಂ.ಕ್ಕೆ ಮರಳಿ ನಾನು ನನ್ನ ದ್ವಿ-ಚಕ್ರ ವಾಹನ ನಿಲ್ಲಿಸಿದ್ದ ಸ್ಥಳವಾದ ದರ್ಶನ ಡಾಬಾ ಹತ್ತಿರ ಬಂದು ನೋಡಲಾಗಿ ನನ್ನ ವಾಹನ ಇದ್ದಿರುವುದಿಲ್ಲ. ಯಾರೋ ಕಳ್ಳರು ನನ್ನ ದ್ವಿ-ಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ನಾನು ಇಲ್ಲಿಯ ವರೆಗೆ ಕಲಬುರಗಿ ನಗರದಲ್ಲಿ ಮತ್ತು ಹೊರವಲಯಗಳಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ಸಹ ನನ್ನ ವಾಹನ ನನಗೆ ದೊರಕಿರುವುದಿಲ್ಲ. ಕಾರಣ ಇಂದು ದಿನಾಂಕ:10.10.2022 ರಂದು ತಡಮಾಡಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ನನ್ನ ದ್ವಿ-ಚಕ್ರ ವಾಹನವನ್ನು ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆಮಾಡಿ  ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಬೇಕು ಅಂತ ವಿನಂತಿ ಅಂತ ಇತ್ಯಾದಿಯಾಗಿದ್ದ ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 09-11-2022 01:16 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080