ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ  ಠಾಣೆ :- ಮಾನ್ಯ ಪ್ರಿನ್ಸಿಪಲ್‌ ಜೆಎಮ್‌ಎಫ್‌ಸಿ ನ್ಯಾಯಾಲಯ ಕಲಬುರಗಿರವರಲ್ಲಿ, ಫಿರ್ಯಾದಿ ಶ್ರೀ ಸುಭಾಶ್ಚಂದ್ರ ತಂದೆ ಮಾಳಪ್ಪಾ ಕಣ್ಣಿ ವಯ|| ೬೯ ವರ್ಷ ಉ|| ನಿವೃತ್ತಿ ಸರ್ಕಾರಿ ನೌಕರರು ಸಾ|| ಎಲ್,ಐ,ಜಿ ೪೯, ೩ನೇ ಕ್ರಾಸ್ ಬಡೇಪೂರ ಕಾಲೋನಿ ಕಲಬುರಗಿ ಇತನು  ಸಲ್ಲಿಸಿದ ಖಾಸಗಿ ದೂರು ಅರ್ಜಿ  ಸಂ. ೧೨೪/೨೧ ನೇದ್ದರ ದೂರಿನ ಸಾರಾಂಶವೆನೆಂದರೆ, ಬಡೇಪುರ ಸಿಮಾಂತರದ  ಜಮೀನು ಸರ್ವೇ ನಂ:೮/೧ ಒಟ್ಟು ವಿಸ್ತಿರಣ ೧೦ ಎಕರೆ ಇರುತ್ತದೆ. ಸದರಿ ಜಮೀನಿನಲ್ಲಿ ವಿಸ್ತಿರಣ ೪ ಎಕರೆ ನಗರಾಭಿವೃದ್ದಿ ಪ್ರಾಧೀಕಾರ ಕಲಬುರಗಿಗೆ ನೀಡಲಾಗಿರುತ್ತದೆ. ಉಳಿದ ವಿಸ್ತಿರಣ ೬ ಎಕರೆಯಲ್ಲಿ ವಾಸಸ್ಥಳಕ್ಕಾಗಿ ಕೃಷಿಯೇತರ ಜಮೀನಾಗಿ ಪರಿವರ್ತಿಸಲಾಗಿರುತ್ತದೆ. ಅದರಂತೆ ಒಟ್ಟಾಗಿ ೮೦ ಪ್ಲಾಟಗಳನ್ನಾಗಿ ಮಾಡಲಾಗಿರುತ್ತದೆ. ದೂರುದಾರರ ತಂದೆಯವರಾದ ದಿ,ಮಾಳಪ್ಪಾ ತಂದೆ ನಿಂಗಪ್ಪಾ ಕಣ್ಣಿ ಇವರು ಸದರಿ ಜಮೀನಿನ ಬಿನ್ ಶೇತಕಿ ಆದೇಶ ಹಾಗೂ ಲೇಔಟ ಮಂಜೂರಾತಿ ಪಡೆದುಕೊಂಡಿರುತ್ತಾರೆ. ದೂರುದಾರರ ತಂದೆಯವರಾಗಲೀ ಅಥವಾ ಅವರ ತಂದೆಯವರ ಖಾಸಾ ಮಕ್ಕಳು ಕೂಡಾ ಸದರಿ ಲೇಔಟನಲ್ಲಿ ಸದರಿ ಖರೀದಿದಾರರಿಗೆ ಯಾವುದೇ ಪ್ಲಾಟನ್ನು ಮಾರಾಟ ಮಾಡಿರುವುದಿಲ್ಲ. ಹೀಗಿದ್ದು ಶ್ರೀ ಖಾಜಾಮೈನುದ್ದೀನ್ ತಂದೆ ಶೇಖ್ ಮಹೆಬೂಬ್ ಸಾಬ್ ಎಂಬುವವರು ದೂರುದಾರರ ತಂದೆಗೆ ಹೋಲುವಂತ ವ್ಯಕ್ತಿಯನ್ನು ಕೂಡಿಸಿ ಅವರೇ ಮಾಳಪ್ಪ ಎಂದು ತಿಳಿಸಿ ನಕಲಿ ದಾಖಲೆ ಸೃಷ್ಠಿಸಿ ನೀವೇಶನವನ್ನು ನೊಂದಣಿ ಮಾಡಿಕೊಂಡ ಸದರಿಯವರ ವಿರುದ್ದ ಮೋಸ ವಂಚನೆ ನಕಲಿ ದಾಖಲಿ ಸೃಷ್ಠಿಸಿ ಸೃಷ್ಠಿ ವಿರುದ್ದ ಕ್ರಮಕ್ಕಾಗಿ ದೂರು ಸಲ್ಲಿಸಿರುತ್ತೇನೆ.ಅಲ್ಲದೇ ಅಲ್ಲದೇ ದೂರುದಾರರ ಜಮೀನಿನ ಲೇಔಟ ನಕಾಶೆಯಲ್ಲಿ ನಕಲೀ ದಾಖಲೆಗಳನ್ನು ಸೃಷ್ಟಿಸಿ ದೂರುದಾರರ ಹಕ್ಕು ಹಾಗೂ ಹಿತಾಶಕ್ತಿಗೆ ತೊಂದರೆ ಮಾಡಿ ಅಮುಲ್ಯವಾದ ಆಸ್ತಿಯನ್ನು ಮುಳಿಗಿಸಬೇಕು ಎಂಬ ದುರುದ್ದೇಶದಿಂದ ಈ ರೀತಿ ನಕಲೀ ದಾಖಲೆಯನ್ನು ಸೃಷ್ಟಿಸಿಕೊಟ್ಟ ವ್ಯಕ್ತಿಯ ವಿರುದ್ದ ಹಾಗೂ ಇದರಲ್ಲಿ ಭಾಗಿಯಾದ ಇನ್ನಿತರ ವ್ಯಕ್ತಿಗಳ ವಿರುದ್ದ ಇತ್ಯಾದಿಯಾಗಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಖಾಸಗಿ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ  ಠಾಣೆ :- ಮಾನ್ಯ ಪ್ರಿನ್ಸಿನಪಲ್‌ ಜೆಎಮ್‌ಎಫ್‌ಸಿ ನ್ಯಾಯಾಲಯ ಕಲಬುರಗಿರವರಲ್ಲಿ ಫರ‍್ಯಾದಿ ಶ್ರೀ ಸುಭಾಶ್ಚಂದ್ರ ತಂದೆ ಮಾಳಪ್ಪಾ ಕಣ್ಣಿ ವಯ|| ೬೯ ವರ್ಷ ಉ|| ನಿವೃತ್ತಿ ಸರ್ಕಾರಿ ನೌಕರರು ಸಾ|| ಎಲ್,ಐ,ಜಿ ೪೯, ೩ನೇ ಕ್ರಾಸ್ ಬಡೇಪೂರ ಕಾಲೋನಿ ಕಲಬುರಗಿ ಇವರು ಸಲ್ಲಿಸಿದ ಖಾಸಗಿ ದೂರು ಅರ್ಜಿ ಸಂ. ೨೬೭/೨೧ ನೇದ್ದರ ಸಾರಾಂಶವೆನಂದರೆ, ಫರ‍್ಯಾದಿ ಸಲ್ಲಿಸಿದ ಖಾಸಗಿ ದೂರಿನ ಸಾರಾಂಶವೆನೆಂದರೆ, ದೂರುದಾರರ ತಂದೆಯವರಾದ ದಿ,ಮಾಳಪ್ಪಾ ತಂದೆ ನಿಂಗಪ್ಪಾ ಕಣ್ಣಿ ಇವರು ಸದರಿ ಜಮೀನಿನ ಬಿನ್ ಶೇತಕಿ ಆದೇಶ ಹಾಗೂ ಲೇಔಟ ಮಂಜೂರಾತಿ ಪಡೆದುಕೊಂಡಿರುತ್ತಾರೆ. ದೂರುದಾರರ ತಂದೆಯವರಾಗಲೀ ಅಥವಾ ಅವರ ತಂದೆಯವರ ಖಾಸಾ ಮಕ್ಕಳು ಕೂಡಾ ಸದರಿ ಲೇಔಟನಲ್ಲಿ ಶ್ರೀ ಮಾರೂತಿ ಡೆವಲರ‍್ಸ್ ಇವರಿಗೆ ಯಾವುದೇ ನಿವೇಶನಗಳನ್ನು ಮಾರಾಟ ಮಾಡಿರುವುದಿಲ್ಲಾ ಆದರೇ ಶ್ರೀ ಮಾರೂತಿ ಡೆವಲಪರ್ಸ ಜಿ/೧೬ ಬಿಲಗುಂದಿ ಮೇನಶನ್ ಸ್ಟೇಷನ ರೋಡ ಕಲಬುರಗಿ ಇದರ ಮಾಲೀಕರಾದ ರಮೇಶ ತಂದೆ ಮಾರೂತಿ ಗಡೇಕರ್ ಇವರು ನಮ್ಮ ಲೇಔಟ ನಕಾಶೆಯಲ್ಲಿರುವ ಪ್ಲಾಟಗಳನ್ನು ಅಕ್ರಮವಾಗಿ ಬೇರೆಯವರಿಗೆ ಮಾರಾಟ ಮಾಡಿರುತ್ತಾರೆ. ದಸ್ತಾವೇಜು ಸಂಖ್ಯೆ ೬೫೧೩/೨೦೦೦-೦೧ ದಿನಾಂಕ: ೦೩.೦೩.೨೦೦೦ ರಂದು ಸತೀಶ ತಂದೆ ಲಿಂಗರಾಜ ಗದಿಗೆಣ್ಣವರ ಸಾ|| ಕಲಬುರಗಿ ಇವರಿಗೆ ನಿವೇಶನ ಸಂಖ್ಯೆ ೪೦ ಇದನ್ನು ಮಾರಾಟ ಮಾಡಿರುತ್ತಾರೆ. ಈ ರೀತಿ ಸದರಿಯವರು ದೂರುದಾರರ ಲೇಔಟ ನಕಾಶೆಯಲ್ಲಿ ತಮ್ಮದೇ ಯಾವುದೇ ರೀತಿ ಹಕ್ಕು, ಹಿತಾಶಕ್ತಿ ಇಲ್ಲದಿದ್ದರೂ ಕೂಡಾ ನಕಲೀ ದಾಖಲೆಯನ್ನು ಸದರಿಯವರಿಗೆ ಮಾರಾಟ ಮಾಡಿ ಕೊಟ್ಟಿರುತ್ತಾರೆ. ಸದರಿ ದಸ್ತಾವೇಜು ಸಂಖ್ಯೆ ಸಂಪರ‍್ಣವಾಗಿ ನಕಲೀ ದಾಖಲೆ ಸೃಷ್ಟಿ ಆಗಿದ್ದು ಮೋಸ ವಂಚನೆಯಿಂದ ಕೂಡಿರುತ್ತದೆ. ಅಲ್ಲದೇ ದೂರುದಾರರ ಜಮೀನಿನ ಲೇಔಟ ನಕಾಶೆಯಲ್ಲಿ ನಕಲೀ ದಾಖಲೆಗಳನ್ನು ಸೃಷ್ಟಿಸಿ ನನ್ನ ಹಕ್ಕು ಹಾಗೂ ಹಿತಾಶಕ್ತಿಗೆ ತೊಂದರೆ ಮಾಡಿ ಅಮುಲ್ಯವಾದ ಆಸ್ತಿಯನ್ನು ಮುಳಿಗಿಸಬೇಕು ಎಂಬ ದುರುದ್ದೇಶದಿಂದ ಈ ರೀತಿ ನಕಲೀ ದಾಖಲೆಯನ್ನು ಸೃಷ್ಟಿಸಿಕೊಟ್ಟ ವ್ಯಕ್ತಿಯ ವಿರುದ್ದ ಹಾಗೂ ಇದರಲ್ಲಿ ಭಾಗಿಯಾದ ಇನ್ನಿತರ ವ್ಯಕ್ತಿಗಳ ವಿರುದ್ದ ಇತ್ಯಾದಿಯಾಗಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಖಾಸಗಿ  ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ  ಠಾಣೆ :- ಮಾನ್ಯ ಪ್ರಿನ್ಸಿಪಲ್‌ ಜೆಎಮ್‌ಎಫ್‌ಸಿ ನ್ಯಾಯಾಲಯ ಕಲಬುರಗಿರವರಲ್ಲಿ, ಫಿರ್ಯಾದಿ ಶ್ರೀ ಸುಭಾಶ್ಚಂದ್ರ ತಂದೆ ಮಾಳಪ್ಪಾ ಕಣ್ಣಿ ವಯ|| ೭೦ ವರ್ಷ ಉ|| ನಿವೃತ್ತಿ ರ‍್ಕಾರಿ ನೌಕರರು ಸಾ|| ಎಲ್,ಐ,ಜಿ ೪೯, ೩ನೇ ಕ್ರಾಸ್ ಬಡೇಪೂರ ಕಾಲೋನಿ ಕಲಬುರಗಿ ಇತನು  ಸಲ್ಲಿಸಿದ ಖಾಸಗಿ ದೂರು ಅರ್ಜಿ ಸಂ. ೨೬೫/೨೧ ನೇದ್ದರ ದೂರಿನ ಸಾರಾಂಶವೆನೆಂದರೆ, ಬಡೇಪುರ ಸಿಮಾಂತರದ  ಜಮೀನು ಸರ್ವೇ ನಂ:೮/೧ ಒಟ್ಟು ವಿಸ್ತರ‍್ಣ ೧೦ ಎಕರೆ ಇರುತ್ತದೆ. ಸದರಿ ಜಮೀನಿನಲ್ಲಿ ವಿಸ್ತೀರ್ಣ ೪ ಎಕರೆ ನಗರಾಭಿವೃದ್ದಿ ಪ್ರಾಧೀಕಾರ ಕಲಬುರಗಿಗೆ ನೀಡಲಾಗಿರುತ್ತದೆ. ಉಳಿದ ವಿಸ್ತೀರ್ಣ ೬ ಎಕರೆಯಲ್ಲಿ ವಾಸಸ್ಥಳಕ್ಕಾಗಿ ಕೃಷಿಯೇತರ ಜಮೀನಾಗಿ ಪರಿರ‍್ತಿಸಲಾಗಿರುತ್ತದೆ. ಅದರಂತೆ ಒಟ್ಟಾಗಿ ೮೦ ಪ್ಲಾಟಗಳನ್ನಾಗಿ ಮಾಡಲಾಗಿರುತ್ತದೆ. ದೂರುದಾರರ ತಂದೆಯವರಾದ ದಿ,ಮಾಳಪ್ಪಾ ತಂದೆ ನಿಂಗಪ್ಪಾ ಕಣ್ಣಿ ಇವರು ಸದರಿ ಜಮೀನಿನ ಬಿನ್ ಶೇತಕಿ ಆದೇಶ ಹಾಗೂ ಲೇಔಟ ಮಂಜೂರಾತಿ ಪಡೆದುಕೊಂಡಿರುತ್ತಾರೆ. ದೂರುದಾರರ ತಂದೆಯವರಾಗಲೀ ಅಥವಾ ಅವರ ತಂದೆಯವರ ಖಾಸಾ ಮಕ್ಕಳು ಕೂಡಾ ಸದರಿ ಲೇಔಟನಲ್ಲಿ ಸದರಿ ಖರೀದಿದಾರರಿಗೆ ಯಾವುದೇ ಪ್ಲಾಟನ್ನು ಮಾರಾಟ ಮಾಡಿರುವುದಿಲ್ಲ. ಪ್ರಸ್ತುತ ಖರೀದಿದಾರರು ಕಲಬುರಗಿ ಮಹಾನಗರ ಪಾಲಿಕೆಯಿಂದ ನಮ್ಮ ಜಮೀನಿನ ಬೇರೆ ಭಾಗದಲ್ಲಿ ದೂರುದಾರರು ಪರ‍್ವಜರು ನೀಡಿದ ಲೇಔಟ್ ನಲ್ಲಿ ಪ್ಲಾಟ ನಂ:೨೯ ದಸ್ತಾವೇಜು ಸಂಖ್ಯೆ ೪೨೫೬/೨೦೦೪-೦೫ ದಿನಾಂಕ:೧೬/೦೮/೨೦೦೪ ರ ಪ್ರಕಾರ ಖರೀದಿಸಿರುತ್ತಾರೆ. ಸದರಿ ಲೇಔಟಿಗು ಹಾಗು ದೂರುದಾರರು ಹೊಂದಿದ ಲೇಔಟಿಗು ಸಂಬಂದ ಇರುವುದಿಲ್ಲ ಆದರೆ ಶ್ರೀಮತಿ ಗ್ರೇಸ್ ಶೀಲಾ ಇವರು ಕಲಬುರಗಿ ಮಹಾನಗರ ಪಾಲಿಕೆ ಹೊಂದಿದ ಲೇಔಟ್ ನಕಾಶೆ ನಿವೇಶನ ಸಂಖ್ಯೆ ೨೨ ರಲ್ಲಿ ಕಟ್ಟಿದ ರಚನೆಮಾಡುವುದನ್ನು ಬಿಟ್ಟು ಅಕ್ರಮವಾಗಿ ಪ್ರವೇಶಿಸಿ ದೂರುದಾರರಿಗೆ ಸಂಬಂದಪಟ್ಟ ಲೇಔಟ್ ನಕಾಶೆಯ ನಿವೇಶನ ಸಂಖ್ಯೆ ೨೯ ರಲ್ಲಿ ಕಟ್ಟಡ ರಚನೆ ಮಾಡುತ್ತಿದ್ದಾರೆ. ಈ ರೀತಿ ಅಕ್ರಮ ಪ್ರವೇಶ ಗೂಂಡಾಗಿರಿಯಿಂದ ದೂರುದಾರರ ನಿವೇಶನವನ್ನು ಲಪಟಾಯಿಸುವ ದುರುದ್ದೇಶ ಹೊಂದಿದ್ದು ಇರುತ್ತದೆ ಅಲ್ಲದೆ ದೂರುದಾರರ ಜಮೀನಿನ ಲೇಔಟ ನಕಾಶೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ದೂರುದಾರರ ಹಕ್ಕು ಹಾಗು ಹೀತಾಸಕ್ತಿಗೆ ತೊಂದರೆ ಮಾಡಿ ದೂರುದಾರರ ಅಮೂಲ್ಯವಾದ ಆಸ್ತಿಯನ್ನು ಮುಳುಗಿಸಬೇಕೆಂಬ ದುರುದ್ದೇಶದಿಂದ ಈ ರೀತಿ ನಕಲಿ ದಾಖಲೆಯನ್ನು ಸೃಷ್ಠಿಸಿಕೊಟ್ಟ ವ್ಯಕ್ತಿಯ ವಿರುದ್ದ ಹಾಗು ಇದರಲ್ಲಿ ಇನ್ನಿತರ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇತ್ಯಾದಿಯಾಗಿ ಖಾಸಗಿ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ  ಠಾಣೆ :- ಮಾನ್ಯ ಪ್ರಿನ್ಸಿಪಲ್ ಜೆಎಮ್‌ಎಫ್‌ಸಿ ನ್ಯಾಯಾಲಯ ಕಲಬುರಗಿರವರಲ್ಲಿ ಫಿರ್ಯಾದಿ ಶ್ರೀ ಸುಭಾಶ್ಚಂದ್ರ ತಂದೆ ಮಾಳಪ್ಪಾ ಕಣ್ಣಿ ವಯ|| ೭೦ ವರ್ಷ ಉ|| ನಿವೃತ್ತಿ ಸರ್ಕಾರಿ ನೌಕರರು ಸಾ|| ಎಲ್,ಐ,ಜಿ ೪೯, ೩ನೇ ಕ್ರಾಸ್ ಬಡೇಪೂರ ಕಾಲೋನಿ ಕಲಬುರಗಿ ಇವರು ಸಲ್ಲಿಸಿದ ಖಾಸಗಿ ದೂರು ಅರ್ಜಿ ಸಂ. ೨೬೮/೨೧ ನೇದ್ದರ ಸಾರಾಂಶವೆನಂದರೆ, ಫರ‍್ಯಾದಿ ಸಲ್ಲಿಸಿದ ಖಾಸಗಿ ದೂರಿನ ಸಾರಾಂಶವೆನೆಂದರೆ, ದೂರುದಾರರ ತಂದೆಯವರಾದ ದಿ,ಮಾಳಪ್ಪಾ ತಂದೆ ನಿಂಗಪ್ಪಾ ಕಣ್ಣಿ ಇವರು ಸದರಿ ಜಮೀನಿನ ಬಿನ್ ಶೇತಕಿ ಆದೇಶ ಹಾಗೂ ಲೇಔಟ ಮಂಜೂರಾತಿ ಪಡೆದುಕೊಂಡಿರುತ್ತಾರೆ. ದೂರುದಾರರ ತಂದೆಯವರಾಗಲೀ ಅಥವಾ ಅವರ ತಂದೆಯವರ ಖಾಸಾ ಮಕ್ಕಳು ಕೂಡಾ ಸದರಿ ಲೇಔಟನಲ್ಲಿ ಶ್ರೀ ಮಾರೂತಿ ಡೆವಲರ‍್ಸ್ ಇವರಿಗೆ ಯಾವುದೇ ನಿವೇಶನಗಳನ್ನು ಮಾರಾಟ ಮಾಡಿರುವುದಿಲ್ಲಾ ಆದರೇ ಶ್ರೀ ಮಾರೂತಿ ಡೆವಲಪರ್ಸ ಜಿ/೧೬ ಬಿಲಗುಂದಿ ಮೇನಶನ್ ಸ್ಟೇಷನ ರೋಡ ಕಲಬುರಗಿ ಇದರ ಮಾಲೀಕರಾದ ರಮೇಶ ತಂದೆ ಮಾರೂತಿ ಗಡೇಕರ್ ಇವರು ನಮ್ಮ ಲೇಔಟ ನಕಾಶೆಯಲ್ಲಿರುವ ಪ್ಲಾಟಗಳನ್ನು ಅಕ್ರಮವಾಗಿ ಬೇರೆಯವರಿಗೆ ಮಾರಾಟ ಮಾಡಿರುತ್ತಾರೆ. ದಸ್ತಾವೇಜು ಸಂಖ್ಯೆ ೧೭೪೪/೨೦೦೧-೦೨ ದಿನಾಂಕ: ೧೯.೦೬.೨೦೦೧ ರಂದು ಬಸನಗೌಡ ತಂದೆ ದ್ಯಾವನಗೌಡ ಸಾ: ಕೆ ಹೆಚ್ ಬಿ ಕಾಲೋನಿ ಇಂದಿರಾ ನಗರ ಮನೆ ನಂ: ಎಲ್ ಐ ಜಿ ೧೮ ಕಲಬುರಗಿ ಇವರಿಗೆ ನಿವೇಶನ ಸಂಖ್ಯೆ ೪೪ ಇದನ್ನು ಮಾರಾಟ ಮಾಡಿರುತ್ತಾರೆ. ಈ ರೀತಿ ಸದರಿಯವರು ದೂರುದಾರರ ಲೇಔಟ ನಕಾಶೆಯಲ್ಲಿ ತಮ್ಮದೇ ಯಾವುದೇ ರೀತಿ ಹಕ್ಕು, ಹಿತಾಶಕ್ತಿ ಇಲ್ಲದಿದ್ದರೂ ಕೂಡಾ ನಕಲೀ ದಾಖಲೆಯನ್ನು ಸದರಿಯವರಿಗೆ ಮಾರಾಟ ಮಾಡಿ ಕೊಟ್ಟಿರುತ್ತಾರೆ. ಸದರಿ ದಸ್ತಾವೇಜು ಸಂಖ್ಯೆ ಸಂಪರ‍್ಣವಾಗಿ ನಕಲೀ ದಾಖಲೆ ಸೃಷ್ಟಿ ಆಗಿದ್ದು ಮೋಸ ವಂಚನೆಯಿಂದ ಕೂಡಿರುತ್ತದೆ. ಅಲ್ಲದೇ ದೂರುದಾರರ ಜಮೀನಿನ ಲೇಔಟ ನಕಾಶೆಯಲ್ಲಿ ನಕಲೀ ದಾಖಲೆಗಳನ್ನು ಸೃಷ್ಟಿಸಿ ನನ್ನ ಹಕ್ಕು ಹಾಗೂ ಹಿತಾಶಕ್ತಿಗೆ ತೊಂದರೆ ಮಾಡಿ ಅಮುಲ್ಯವಾದ ಆಸ್ತಿಯನ್ನು ಮುಳಿಗಿಸಬೇಕು ಎಂಬ ದುರುದ್ದೇಶದಿಂದ ಈ ರೀತಿ ನಕಲೀ ದಾಖಲೆಯನ್ನು ಸೃಷ್ಟಿಸಿಕೊಟ್ಟ ವ್ಯಕ್ತಿಯ ವಿರುದ್ದ ಹಾಗೂ ಇದರಲ್ಲಿ ಭಾಗಿಯಾದ ಇನ್ನಿತರ ವ್ಯಕ್ತಿಗಳ ವಿರುದ್ದ ಇತ್ಯಾದಿಯಾಗಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಖಾಸಗಿ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ  ಠಾಣೆ :- ದಿನಾಂಕ:27-07-2022  ರಂದು  ಮದ್ಯಾಹ್ನ ೦೨-೦೦ ಗಂಟೆಯಲ್ಲಿ ಪೇಷಲ್ ವಾಷ್ ಮಾಡಿಸಿಕೊಳ್ಳುಲು ಲಾಹೊಟಿ ಪೆಟ್ರೋಲ್ ಪಂಪ ಹತ್ತಿರ ಇರುವ ಮೊನಾಲಿಸ್ ಬ್ಯೂಟಿ ಪಾರ್ಲರ್ ಒಳಗಡೆ ಹೋಗಿ ಟೇಬಲ್ ಮೇಲೆ ನನ್ನ ಕತ್ತಿನಲ್ಲಿರುವ ೧೫ ಗ್ರಾಂ ಬಂಗಾರದ ಮಂಗಳ ಸೂತ್ರ ತೆಗೆದು ಇಟ್ಟು ನಾನು ಪೇಷಲ್ ವಾಷ್ ಮಾಡಿಸಿಕೊಂಡು ನಾನು ಜೇವರಗಿ ಹೋಗುವ ರಸ್ತೆಯ ಮಧ್ಯದಲ್ಲಿ ನನ್ನ ಮಂಗಳ ಸೂತ್ರ  ನೆನಪಾಗಿ ಸಂಜೆ ೦೪-೦೦ ಗಂಟೆಯಲ್ಲಿ ಸದರಿ ಮೊನಾಲಿಸ್ ಬ್ಯೂಟಿ ಪಾರ್ಲರ್ ಮಾಲೀಕರಿಗೆ ಪೋನ್ ಮಾಡಿ ನನ್ನ ಮಂಗಳ ಸೂತ್ರ ನಿಮ್ಮ ಬ್ಯೂಟಿ ಪಾರ್ಲರ್‌ನಲ್ಲಿ ಬಿಟ್ಟು ಹೋಗಿರುತ್ತೇನೆ ಎಂದು ಕೇಳಿದಾಗ ಅವರು  ಮಂಗಳ ಸೂತ್ರ ಇರುವುದಿಲ್ಲ ಎಂದು ಹೇಳಿರುತ್ತಾರೆ. ನನ್ನ ಬಂಗಾರದ ಮಂಗಳ ಸೂತ್ರ ಮೊನಾಲಿಸ್ ಬ್ಯೂಟಿ ಪಾರ್ಲರ್‌ನಲ್ಲಿ ಕಳ್ಳತನ ಆಗಿರುತ್ತದೆ. ನನ್ನ ಮಂಗಳ ಸೂತ್ರ ಅ,ಕಿ ೫೫೦೦೦/-ರೂ ಆಗಿದ್ದು. ನನ್ನ ಮಂಗಳ ಸೂತ್ರ ಕಳ್ಳತನ ಆದ ಬಗ್ಗೆ ಮೊನಾಲಿಸ್ ಬ್ಯೂಟಿ ಪಾರ್ಲರ್ ಮಾಲಿಕರ ಮೇಲೆ ಮತ್ತು ಸದರಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುವರ ಮೇಲೆ ಅನುಮಾನ ಇರುತ್ತದೆ ಎಂದು ನೀಡಿದ  ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 10-08-2022  ರಂದು ಮಧ್ಯಹ್ನ ೧೨:೩೬ ಪಿ.ಎಮ್ ದಿಂದ ೧:೦೦ ಪಿ.ಎಮ್ ಮಧ್ಯದ ಅವಧಿಯಲ್ಲಿ ನಾನು ರಾವೂರ ಗ್ರಾಮದ ಬಸ್ಟಾಂಡ ದಿಂದ ನಮ್ಮೂರ ಮಿಣಜಗಿ ಗ್ರಾಮಕ್ಕೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ರಾವೂರ ಗ್ರಾಮದಿಂದ – ಕಲಬುರಗಿ ಶಹಾಬಾದ ರಿಂಗ ರೋಡ ಮಾರ್ಗ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಪರ್ಸದಲ್ಲಿಟ್ಟಿದ ೩೦ ಗ್ರಾಂ ಬಂಗಾರ ಲಾಂಗ ಚೈನ್ ಅ.ಕಿ.೧,೩೫,೦೦೦/- ನೆದ್ದು ಕಳ್ಳತನ ಮಾಡಿಕೊಂಡು ಹೋಗಿದ್ದ ಬಗ್ಗೆ ದೂರು ಇರುತ್ತದೆ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 10-08-2022  ೨೦:೦೦ ರಿಂದ ೨೧:೦೦ ಗಂಟೆಗೆ ರವೀಂದ್ರನಾಥ ಹೊನ್ನಳ್ಳಿ ರವರ ಮಹಡಿ ಮನೆಯಲ್ಲಿ ಆರೋಫಿತರು ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಹೋಗಿ ದಾಳಿ ಮಾಡಿ ನಗದು ಹಣ 15,120/- , ೫೨ ಇಸ್ಪೇಟ ಎಲೆಗಳು ೯ ಮೊಬೈಲ, ೭ ಕುರ್ಚಿಗಳು,  ಒಂದು ಟೇಬಲ್ ಹೀಗೆ ಒಟ್ಟು ಅ:ಕಿ: ೫೬,೬೨೦ ದಾಳಿ ಮಾಢಿ ಜಪ್ತ ಮಾಡಿ ದೂರು ದಾಖಲಿಸಿಕೊಂಡ ಬಗ್ಗೆ ವರದಿ.

 

 

ಇತ್ತೀಚಿನ ನವೀಕರಣ​ : 29-08-2022 05:23 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080