ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ್ ಠಾಣೆ :-ಇಂದು ದಿನಾಂಕ: ೧೧.೦೮.೨೦೨೧ ರಂದು ೦೧:೦೦ ಪಿ.ಎಂ. ಕ್ಕೆ ಫರ‍್ಯಾದಿ ಶ್ರೀ  ಮಡಿವಾಳಪ್ಪ ತಂದೆ ಬಸಣ್ಣಾ ನೀರಡಗಿ ವಯ: ೨೫ ವರ್ಷ ಉ: ಬಿ.ಇಡಿ ವಿಧ್ಯಾರ್ಥಿ ಜಾ: ಉಪ್ಪಾರ ಸಾ|| ಮನೆ ನಂ ೧೭೦ ಎಂ.ಹೆಚ್ ಹೂಗಾರ ಮನೆಯಲ್ಲಿ ಬಾಡಿಗೆ ಕರುಣೇಶ್ವರ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫರ‍್ಯಾದಿ ರ‍್ಜಿಯ ಸಾರಾಂಶವೆನೆಂದರೆ. ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ ೨೦೧೯ ನೇ ಸಾಲಿನಲ್ಲಿ ಒಂದು ಪಲ್ಸರ್-೧೮೦ ಮೋಟಾರ ಸೈಕಲ್ ನಂ ಕೆ.ಎ-೩೩ ಎಕ್ಸ್-೫೯೭೫ ಕಪ್ಪು ಬಣ್ಣದ್ದು  ಚೆಸ್ಸಿ ನಂ MD2A12DY4KCL12203 ಇಂಜಿನ್ ನಂ DJYCKL59150  ಅ. ಕಿ.೮೨,೦೦೦/-  ರೂಪಾಯಿ ನೇದ್ದು ಖರೀದಿಸಿದ್ದು ಇರುತ್ತದೆ.

           ಹೀಗಿದ್ದು ದಿನಾಂಕ:.೦೪.೦೮.೨೦೨೧ ರಂದು ರಾತ್ರಿ ೦೯:೪೫ ಪಿ.ಎಂ ಕ್ಕೆ ನಾನು ನನ್ನ ಮೋಟರ್ ಸೈಕಲನ್ನು ನಮ್ಮ ಬಾಡಿಗೆಯ ಮನೆ ಮುಂದೆ ನಿಲ್ಲಿಸಿದ್ದು ಮರುದಿವಸ ದಿನಾಂಕ: ೦೫.೦೮.೨೦೨೧ ರಂದು ಬೆಳಿಗ್ಗೆ ೦೭:೦೦ ಗಂಟೆಗೆ ಎದ್ದು ನೊಡಲಾಗಿ ನನ್ನ ಮೊಟರ್ ಸೈಕಲ್ ನಾನು ನಿಲ್ಲಿಸಿರುವ ಸ್ಥಳದಲ್ಲಿ ಇರುವುದಿಲ್ಲ. ನಂತರ ನಮ್ಮ ಮನೆಯ ಪಕ್ಕದಲ್ಲಿರುವ ವಿವೇಕಾನಂದ ಶಾಲೆಯ ಹತ್ತಿರ ಇರುವ ಸಿ.ಸಿ ಕ್ಯಾಮೇರ ಪರಿಸಿಲಿಸಿ ನೊಡಲು ದಿನಾಂಕ: ೦೫.೦೮.೨೦೨೧ ರಂದು ೦೪:೧೫ ಎ.ಎಂಕ್ಕೆ ಯಾರೋ ಅಪರಿಚಿತ ಕಳ್ಳರೂ ನಮ್ಮ ಮೋಟರ್ ಸೈಕಲನ್ನು ಒಂದು ಟಂಟಂ ವಾಹನದಲ್ಲಿ ಹಾಕಿಕೊಂಡು ಹೋದ ಬಗ್ಗೆ ಗೊತ್ತಾಯಿತು. ನಂತರ ನಾನು ಕಲಬುರಗಿ ನಗರದಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ನನ್ನ ವಾಹನ ನನಗೆ ದೊರಕಿರುವುದಿಲ್ಲ. ಇಲ್ಲಿಯ ವರೆಗೆ ನನ್ನ ವಾಹನ ಹುಡುಕಾಡಿ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ಕಳುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಲು ವಿನಂತಿ ಅಂತ ಇತ್ಯಾದಿ ಇದ್ದ ಫರ‍್ಯಾದಿಯ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡ ಬಗ್ಗೆ ವರದಿ.

      

ಅಶೋಕ ನಗರ ಪೊಲೀಸ್ ಠಾಣೆ :- ಇಂದು ದಿನಾಂಕ: ೧೦.೦೮.೨೦೨೧ ರಂದು ೧೧:೦೦ ಎ.ಎಂ. ಕ್ಕೆ ಫರ‍್ಯಾದಿ ಶ್ರೀ  ಬಸವರಾಜ ತಂದೆ ಸಿದ್ರಾಮಪ್ಪ ಪಾಟೀಲ್ ವಯ: ೩೪ ರ‍್ಷ ಜಾ: ಲಿಂಗಾಯತ ಉ: ಖಾಸಗಿ ಕೆಲಸ ಸಾ|| ಮ.ನಂ. ೧೦೩  ಕೆ.ಹೆಚ್.ಬಿ. ಕಾಲೋನಿ ಡಬರಾಬಾದ ಕ್ರಾಸ್ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫರ‍್ಯಾದಿ ರ‍್ಜಿಯ ಸಾರಾಂಶವೆನೆಂದರೆ. ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ ೨೦೧೧ ನೇ ಸಾಲಿನಲ್ಲಿ ಒಂದು ಹಿರೊ ಸ್ಪ್ಲೇಂಡರ್ ಪ್ಲಸ್  ಮೋಟಾರ ಸೈಕಲ್ ನಂ ಕೆ.ಎ-೩೨ ವಾಯ್ಡಿ-೪೫೦೧ ಸೀಲ್ವರ ಬಣ್ಣದ್ದು  ಚೆಸ್ಸಿ ನಂ  MBLHA10EZBHD40519 ಇಂಜಿನ್ ನಂ HA10EFBHD90102    ಅ. ಕಿ.೧೫,೦೦೦/-  ರೂಪಾಯಿ ನೇದ್ದು ಖರೀದಿಸಿದ್ದು ಇರುತ್ತದೆ.

ಹೀಗಿದ್ದು ದಿನಾಂಕ:.೨೭.೦೭.೨೦೨೧ ರಂದು ಬೆಳಿಗ್ಗೆ ೧೦:೪೫ ಗಂಟೆ ಸುಮಾರಿಗೆ ನನ್ನ ಕೆಲಸದ ನಿಮಿತ್ಯ ಜೇರ‍್ಗಿಗೆ ಹೋಗಲು ನನ್ನದ್ವಿ-ಚಕ್ರ ವಾಹನವನ್ನು  ತೆಗೆದುಕೊಂಡು ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು, ಕೇಂದ್ರ ಬಸ್ ನಿಲ್ದಾಣದ  ಆವರಣದಲ್ಲಿ  ನನ್ನ ವಾಹನವನ್ನು ನಿಲ್ಲಿಸಿ ಜೇರ‍್ಗಿಗೆ ಹೋಗಿರುತ್ತೇನೆ. ನಂತರ ರಾತ್ರಿ ೦೭:೩೦ ಗಂಟೆಗೆ ನಾನು ಮರಳಿ ಕಲಬುರಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ನೋಡಲಾಗಿ ನನ್ನ ವಾಹನ ಇದ್ದಿರುವುದಿಲ್ಲ. ನಾನು ಕಲಬುರಗಿ ನಗರದಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ನನ್ನ ವಾಹನ ನನಗೆ ದೊರಕಿರುವುದಿಲ್ಲ. ಇಲ್ಲಿಯ ವರೆಗೆ ನನ್ನ ವಾಹನ ಹುಡುಕಾಡಿ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ಕಳವುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಲು ವಿನಂತಿ ಅಂತ ಇತ್ಯಾದಿ ಇದ್ದ ಫರ‍್ಯಾದಿಯ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲುಮಾಡಿಕೊಂಡ ಬಗ್ಗೆ ವರದಿ    

ಇತ್ತೀಚಿನ ನವೀಕರಣ​ : 12-08-2021 01:08 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080