Feedback / Suggestions

ಸಂಚಾರಿ ಪೊಲೀಸ ಠಾಣೆ -2 :- ದಿನಾಂಕ: 10-03-2023 ರಂದು ಬೆಳಿಗ್ಗೆ 7-30 ಗಂಟೆಗೆ ಶ್ರೀ ಜುಲಕರ್ ನೈನ್ ತಂದೆ ಚಾಂದಪಾಶಾ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ನನ್ನ ತಂದೆ ಚಾಂದಪಾಶಾ ಇವರು ಬುಲೇರೊ ಪಿಕಪ ಗೂಡ್ಸ ವಾಹನದ ಡ್ರೈವರ ಕೆಲಸ ಮಾಡಿಕೊಂಡು ಇದ್ದರು. ದಿನಾಂಕ : 09-03-2023 ರಂದು ರಾತ್ರಿ ಸಮಯದಲ್ಲಿ ನನ್ನ ತಂದೆ ಚಾಂದಪಾಶಾ ಇವರು ಚಲಾಯಿಸುತ್ತೀರುವ ಬುಲೇರೊ ಪಿಕಪ ಗೂಡ್ಸ ನಂಬರ ಕೆಎ-39/ಎ-1448 ನೇದ್ದರ ಮಾಲಿಕರು ಸದರಿ ವಾಹನದಲ್ಲಿ ಕಬ್ಬಿಣ್ಣದ ರಾಡಗಳನ್ನು ತೆಗೆದುಕೊಂಡು ಹುಣಸಗಿ ಪಟ್ಟಣ್ಣಕ್ಕೆ ಹೋಗಲು ತಿಳಿಸಿದ್ದರಿಂದ ನನ್ನ ತಂದೆ ಚಾಂದಪಾಶಾ ಇವರು ಜೋತೆಯಲ್ಲಿ ನನಗೆ ಬರಲು ತಿಳಿಸಿದ್ದರಿಂದ ಪಿಕಪ ಗೂಡ್ಸ ವಾಹನದಲ್ಲಿ ಕಬ್ಬಿಣ್ಣದ ರಾಡಗಳನ್ನು ಲೋಡ ಆದ ನಂತರ ಮದ್ಯ ರಾತ್ರಿ ನನ್ನ ತಂದೆ ಚಲಾಯಿಸುತ್ತೀರುವ ವಾಹನದಲ್ಲಿ ಕುಳಿತು ನಾನು ಹುಮನಾಬಾದ ಹಳ್ಳಿಖೇಡ್, ಕಮಲಾಪೂರ ಮುಖಾಂತರವಾಗಿ ಕಲಬರಗಿಗೆ ಬಂದು ಸೇಡಂ ರಿಂಗ ರೋಡ, ಮುಖಾಂತರವಾಗಿ ರಾಮ ಮಂದಿರ ರಿಂಗ ರೋಡ ಕಡೆಗೆ ಹೋಗುವಾಗ ನಾಗನಹಳ್ಳಿ ರಿಂಗ ರೋಡ ದಾಟಿದ ನಂತರ ನನ್ನ ತಂದೆ ಬುಲೇರೊ ಪಿಕಪ ಗೂಡ್ಸ ವಾಹನ ಅತಿವೇಗವಾಗಿ ಮತ್ತು ಅಲಕ್ಷತನದಿಂದ ರೋಡ ಎಡ ಬಲ ಕಟ್ ಹೊಡೆಯುತ್ತಾ ಚಲಾಯಿಸಿಕೊಂಡು ಹೋಗಿ ಕಲಬುರಗಿ ನಗರದ ಆರ್ಯನ ಶಾಲೆ ಕ್ರಾಸ ಹತ್ತೀರ ರೋಡ ಡಿವೈಡರ ಮೇಲೆ ವಾಹನ ಚಲಾಯಿಸಿ ಅಪಘಾತ ಮಾಡಿದಾಗ ಗೂಡ್ಸ ವಾಹನವು ಪಲ್ಟಿಯಾಗಿ ರೋಡ ಮೇಲೆ ಬಿದ್ದಿತ್ತು. ಸದರಿ ಘಟನೆ ನೋಡಿದ ಕಲಬುರಗಿ ನಗರದಲ್ಲಿರುವ ನನ್ನ ಚಿಕ್ಕಪ್ಪ ಗುಲಾಮ ಮಹಿಬೂಬ ತಂದೆ ತಾಹೇರಸಾಬ ಹಾಗೂ ಅವರೊಂದಿಗೆ ಇದ್ದ ಗೌಸಪಾಶಾ ತಂದೆ ಖಾಜಾ ಮೈನೊದ್ದೀನ  ರವರು ಹಾಗೂ ಹೈ ವೇ ಪೆಟ್ರೊಲಿಂಗ ಪೊಲೀಸನವರು ಬಂದು ನನಗೆ ವಾಹನದಿಂದ ಹೊರಗಡೆ ತಂದರು ಮತ್ತು ನನ್ನ ತಂದೆ ಚಾಂದಪಾಶಾ ಇವರನ್ನು ಕೂಡಾ ವಾಹನದಿಂದ ಹೊರಗಡೆ ತಂದು ರೋಡ ಪಕ್ಕದಲ್ಲಿ ಮಲಗಿಸಿದರು. ನಾನು ನನ್ನ ತಂದೆ ಚಾಂದಪಾಶಾ ಇವರನ್ನು ನೋಡಲು ಅವರ ತಲೆಗೆ ಭಾರಿ ಒಳಪೆಟ್ಟು ಬಿದ್ದು ಅವರ ಉಸಿರಾಟ ನಿಂತು ಮೃತಪಟ್ಟಿದ್ದರು. ಸದರಿ ಘಟನೆ ಜರುಗಿದಾಗ ದಿನಾಂಕ: 10-03-2023 ರಂದು ಬೆಳಿಗ್ಗಿನ ಜಾವಾ ಅಂದಾಜು 4-15 ಗಂಟೆ ಸಮಯವಾಗಿತ್ತು. ಸದರಿ ಘಟನೆಯಿಂದ ನನಗೆ ಸಣ್ಣಪುಟ್ಟಗಾಯಗಳು ಆಗಿತ್ತು. ಆಗ ನಾನು ಮತ್ತು ನನ್ನ ಚಿಕ್ಕಪ್ಪ ಗುಲಾಮ ಮಹಿಬೂಬ ಮತ್ತು ಗೌಸಪಾಶಾ ರವರು ಸೇರಿಕೊಂಡು ನನ್ನ ತಂದೆ ಶವದ ಸುರಕ್ಷತೆಗಾಗಿ ಒಂದು ಅಂಬುಲೇನ್ಸ ವಾಹನದಲ್ಲಿ ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ನಾನು ಆಸ್ಪತ್ರೆಯಲ್ಲಿ ಉಪಚಾರ ಮಾಡಿಕೊಂಡಿರುವದಿಲ್ಲ. ನನ್ನ ತಂದೆ ಚಾಂದಪಾಶಾ ಬುಲೇರೊ ಪಿಕಪ ಗೂಡ್ಸ ಕೆಎ-39/ಎ-1448 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡ ಡಿವೈಡರಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಭಾರಿಗಾಯ ಹೊಂದಿ ಅಪಘಾತ ಸ್ಥಳದಲ್ಲಿ ಮೃತಪಟ್ಟಿದ್ದು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ದೂರು ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ -2 :- ದಿನಾಂಕ: 10-03-2023 ರಂದು ಬೆಳಿಗ್ಗೆ 10-45 ಗಂಟೆಗೆ ಶ್ರೀ ಮಹಾಂತಪ್ಪಾ ತಂದೆ ಮರೇಪ್ಪಾ ಮಂದೆವಾಲ ಸಾ: ಶರಣ ಸಿರಸಗಿ ಮಡ್ಡಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ  ದಿನಾಂಕ: 03-03-2023 ರಂದು ಸಾಯಂಕಾಲದ ಸಮಯದಲ್ಲಿ ನಾನು ನಮ್ಮ ಗುತ್ತಿಗೆದಾರ ಸುನೀಲ ತಂದೆ ಸೇವು ರಾಠೋಡ ಇಬ್ಬರೂ ಸಿರಸಗಿ ಮಡ್ಡಿಯಿಂದ ಕೇಂದ್ರ ಬಸ್ಸ ನಿಲ್ದಾಣ ಹತ್ತೀರ ಅವರ ಕೆಲಸ ಇರುವದರಿಂದ ನನ್ನನ್ನು ಅವರು ಚಲಾಯಿಸುತ್ತೀರುವ ಮೋಟಾರ ಸೈಕಲ ನಂಬರ ಕೆಎ-32/ಇಎಫ್-2068 ನೇದ್ದರ ಹಿಂದುಗಡೆ ನನ್ನನ್ನು ಕೂಡಿಸಿಕೊಂಡು ಹೋಗಿ ಕೆಲಸ ಮುಗಿದ ನಂತರ ವಾಪಸ್ಸ ನಮ್ಮ ಮನೆಯ ಕಡೆಗೆ ಹೋಗುವ ಕುರಿತು ನಾನು ಸುನೀಲ ಇವರ ಮೋಟಾರ ಸೈಕಲ ಹಿಂದುಗಡೆ ಕುಳಿತು ಓವರ ಬ್ರಿಡ್ಜ್ ಮುಖಾಂತರ ಹೋಗುತ್ತೀರುವಾಗ ಓವರ ಬ್ರಿಡ್ಜ್ ದಾಟಿದ ನಂತರ ಸುನೀಲ ಇತನು ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದನ್ನು ನಾನು ಆತನಿಗೆ ಮೋಟಾರ ಸೈಕಲ ನಿಧಾನವಾಗಿ ಚಲಾಯಿಸುವಂತೆ ತಿಳಿಸಿದರೂ ಕೂಡಾ ಆತನು ನನ್ನ ಮಾತು ಕೇಳದೆ ಹಾಗೇ ಚಲಾಯಿಸಿಕೊಂಡು ಹೋಗುತ್ತಿದ್ದನ್ನು ಸುನೀಲ ಅಂತೆ ಇನ್ನೊಬ್ಬ ಮೋಟಾರ ಸೈಕಲ ನಂಬರ ಕೆಎ-38/ಯು-0366 ನೇದ್ದರ ಸವಾರನು ಕೂಡಾ ಶರಣ ಸಿರಸಗಿ ಮಡ್ಡಿ ಕಡೆಯಿಂದ ಬಿದ್ದಾಪೂರ ಕಾಲೋನಿ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದಾಗ ಇಬ್ಬರೂ ಮುಖಾಮುಖಿಯಾಗಿ ಒಂದಕ್ಕೊಂದು ವಾಹನಗಳನ್ನು ಡಿಕ್ಕಿಪಡಿಸಿ ಅಪಘಾತ ಮಾಡಿದಾಗ ನಾನು ಮತ್ತು ಸುನೀಲ ಹಾಗೂ ಇನ್ನೊಬ್ಬ ಮೋಟಾರ ಸೈಕಲ ಸವಾರ ಮೂರು ಜನರು ಕೆಳಗಡೆ ಬಿದ್ದಾಗ ಸದರಿ ಘಟನೆ ನೋಡಿದ ನಮ್ಮ ಒಣಿಯ ರಾಮು ತಂದೆ ಶಂಕ್ರೇಪ್ಪಾ ನೆಡಗಿ ಹಾಗೂ ಮಲ್ಲು ತಂದೆ ಕುಪ್ಪಪ್ಪ ಅರಳಗುಂಡಗಿ ಇಬ್ಬರೂ ಬಂದು ನಮ್ಮ ಮೂರು ಜನರನ್ನು ಎಬ್ಬಿಸಿ ರೋಡ ಪಕ್ಕದಲ್ಲಿ ಕೂಡಿಸಿದರು. ಸದರಿ ಘಟನೆ ಜರುಗಿದಾಗ ಅಂದು ರಾತ್ರಿ ಸಾಯಂಕಾಲ 7-30 ಗಂಟೆ ಸಮಯವಾಗಿತ್ತು. ಸದರಿ ಘಟನೆಯಿಂದ ನನ್ನ ಬಲಗೈ ರಟ್ಟೆಗೆ ಭಾರಿ ಗುಪ್ತಪೆಟ್ಟು ಬಲಗಾಲು ಮೊಳಕಾಲ ಕೆಳೆಗೆ ರಕ್ತಗಾಯ ಬಲ ತೆಲೆಗೆ ರಕ್ತಗಾಯ ಹಾಗೂ ಬಲ ಕಿವಿಗೆ ರಕ್ತಗಾಯವಾಗಿತ್ತು. ಸುನೀಲ ಇತನಿಗೂ ಪೆಟ್ಟು ಬಿದ್ದಿದ್ದವು. ಮೋಟಾರ ಸೈಕಲ ನಂಬರ ಕೆಎ-38/ಯು-0366 ನೇದ್ದರ ಸವಾರನಿಗೂ ಪೆಟ್ಟು ಬಿದ್ದಿತ್ತು. ನನಗೆ ತ್ರಾಸ ಆಗುತ್ತಿದ್ದರಿಂದ ರಾಮು ಮತು ಮಲ್ಲು ಇಬ್ಬರೂ ಸೇರಿಕೊಂಡು ನನ್ನ ಉಪಚಾರ ಕುರಿತು ಸಮೀಪ ಬರುವ ಖಾಸಗಿ ಅಮೃತಸ್ವರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನಾನು ಉಪಚಾರ ಪಡೆದು ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ತಡಮಾಡಿ ಠಾಣೆಗೆ ಬಂದಿರುತ್ತೆನೆ. ಇಬ್ಬರೂ ತಮ್ಮ ವಾಹನವಗಳನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರುನಿಂದ ಮುಖಾಮುಖಿಯಾಗಿ ಒಂದಕ್ಕೊಂದು ವಾಹನಗಳನ್ನು ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಗಾಯಗೊಳಿಸಿದ್ದು ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ: 10-03-2023 ರಂದು ಮದ್ಯಾಹ್ನ 12-15 ಗಂಟೆಗೆ ಶ್ರೀ ಶಿವಾನಂದ ಇವರು ಠಾಣೆಗೆ ಹಾಜರಾಗಿ ತನ್ನ ಹೆಂಡತಿಯಾದ ಶ್ರೀಮತಿ ನಾಗವೇಣಿ @ ನಾಗಮಣಿ ಇವರ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ  ದಿನಾಂಕ: 08-03-2023 ರಂದು ನಾನು ಮದ್ಯಾಹ್ನ ದಿನ ನಿತ್ಯದಂತೆ ಸೇಡಂ ರೋಡಿಗೆ ಬರುವ ಇ.ಎಸ.ಐ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ ಕೆಲಸ ಕುರಿತು ಮನೆಯಿಂದ ಹೋಗಿ ಇ.ಎಸ.ಐ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಹೋಗುವ ಕುರಿತು ಇ.ಎಸ.ಐ ಆಸ್ಪತ್ರೆಯ ಎದುರುಗಡೆ ಒಂದು ಆಟೋರಿಕ್ಷಾ ವಾಹನದಲ್ಲಿ ಕುಳಿತು ವಿರೇಂದ್ರ ಪಾಟೀಲ ಬಡಾವಣೆ ಕ್ರಾಸ ಹತ್ತೀರ ಆಟೋರಿಕ್ಷಾ ವಾಹನದಿಂದ ಇಳಿದು ನಡೆದುಕೊಂಡು ರಸ್ತೆ ದಾಟುತ್ತೀರುವಾಗ ಒಬ್ಬ ಮೋಟಾರ ಸೈಕಲ ಸವಾರನು ವಿಶ್ವ ವಿದ್ಯಾಲಯ ಕಡೆಯಿಂದ ಸೇಡಂ ರಿಂಗ ರೋಡ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದಾಗ ನಾನು ಪುಟಿದು ಕೆಳಗಡೆ ಬಿದ್ದಾಗ ಸದರಿ ಘಟನೆ ನೋಡಿದ ನಮ್ಮ ಬಡಾವಣೆಯ ಮಾರುತಿ ತಂದೆ ಮಲ್ಲಿಕಾರ್ಜುನ ಕಮ್ಮಾರ ಹಾಗೂ ವಿರೇಶ ತಂದೆ ಈಶಯ್ಯಾ ಸ್ವಾಮಿ ರವರು ಬಂದು ನನಗೆ ಎಬ್ಬಿಸಿ ರೋಡ ಪಕ್ಕದಲ್ಲಿ ಕೂಡಿಸಿದಾಗ ನಾನು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಮೋಟಾರ ಸೈಕಲ ನಂಬರ ನೋಡಲು ಕೆಎ-41/ಕ್ಯೂ-4607 ಇದ್ದಿತ್ತು. ಅದರ ಸವಾರನು ತನ್ನ ಮೋಟಾರ ಸೈಕಲ ಅಲ್ಲೇ ನಿಲ್ಲಿಸಿ ನಮ್ಮ ಕಡೆಗೆ ನೋಡುತ್ತಾ ಓಡಿ ಹೋದನು. ಸದರಿ ಘಟನೆ ಜರುಗಿದಾಗ ರಾತ್ರಿ ಅಂದಾಜು 8-30 ಗಂಟೆ ಸಮಯವಾಗಿತ್ತು. ಸದರ ಘಟನೆಯಿಂದ ನನ್ನ ಎಡ ಗಲ್ಲಕ್ಕೆ ತರಚಿದಗಾಯ ಹಾಗೂ ಬಲಗಾಲಿನ ಮೊಳಕಾಲಿನ ಕೆಳೆಗೆ ಭಾರಿ ರಕ್ತಗಾಯವಾಗಿ ನನಗೆ ತ್ರಾಸ ಆಗುತ್ತಿದ್ದರಿಂದ ಮಾರುತಿ ಹಾಗೂ ವಿರೇಶ ಇಬ್ಬರೂ ನನ್ನ ಉಪಚಾರ ಕುರಿತು ನಾನು ಕೆಲಸ ಮಾಡುವ ಇ.ಎಸ.ಐ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಮೋಟಾರ ಸೈಕಲ ಸವಾರನ ಹೆಸರು ಗೋತ್ತಾಗಿರುವುದಿಲ್ಲ ಆತನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೆನೆ. ನಮ್ಮ ಮನೆಯವರು ಬೇರೆ ಊರಿಗೆ ಹೋಗಿ ಇಂದು ಬಂದಿದ್ದು ಅವರನ್ನು ವಿಚಾರಿಸಿ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಮೋಟಾರ ಸೈಕಲ ಸವಾರನ ಮೇಲೆ ದೂರು ನೀಡಲು ತಡವಾಗಿರುತ್ತದೆ. ನನಗೆ ಡಿಕ್ಕಿ ಪಡಿಸಿದ ಬೈಕ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಸಂಚಾರಿ ಪೊಲೀಸ ಠಾಣೆ -2 :- ದಿನಾಂಕ: 10-03-2023 ರಂದು ಸಾಯಂಕಾಲ 6-15 ಗಂಟೆಗೆ ಶ್ರೀಮತಿ ಜಗದೇವಿ ಇವರು ಠಾಣೆಗೆ ಹಾಜರಾಗಿ ಅವರ ಗಂಡ ಶ್ರೀ ಕಲ್ಯಾಣಿ ತಂದೆ ಸಿದ್ರಾಮಪ್ಪಾ ಇವರ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ: 25-02-2023 ರಂದು ಬೆಳಿಗ್ಗೆ ನಾನು ಸುಪರ ಮಾರ್ಕೆಟ ಸಿಟಿ ಬಸ್ಸ ಸ್ಟ್ಯಾಂಡ ಹತ್ತೀರ ಬರುವ ನನ್ನ ಕಿರಾಣಿ ಅಂಗಡಿಗೆ ಹೋಗಿ ಕೆಲಸ ಮಾಡಿದೆನು. ಕಿರಾಣಿ ಅಂಗಡಿಯಲ್ಲಿ ಸಾಮಾನು ಮುಗಿದಿದ್ದರಿಂದ ನೇಹರು ಗಂಜನಲ್ಲಿರುವ ಹೊಲಸೇಲ ಕಿರಾಣಿ ಅಂಗಡಿಯಿಂದ ಸಾಮಾನುಗಳನ್ನು ತರುವ ಸಲುವಾಗಿ ನಾನು ನನ್ನ ಮೋಟಾರ ಸೈಕಲ ನಂಬರ ಕೆಎ-32/ಇಇ-9734 ನೇದ್ದನ್ನು ಚಲಾಯಿಸಿಕೊಂಡು ಪ್ರಕಾಶ ಏಷಿಯನ್ ಮಹಲ್ ಹುಮನಾಬಾದ ಬೇಸ್ ಮುಖಾಂತರ ಹೋಗುತ್ತೀರುವಾಗ ದಾರಿ ಮದ್ಯ ಬಂಬು ಬಜಾರ ಹತ್ತೀರ ರೋಡ ಮೇಲೆ ಹಿಂದಿನಿಂದ ಒಬ್ಬ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲ ಹಿಂದುಗಡೆ ಡಿಕ್ಕಿಪಡಿಸಿ ಅಪಘಾತ ಮಾಡಿದನು. ನಾನು ನನ್ನ ಮೋಟಾರ ಸೈಕಲದೊಂದಿಗೆ ಕೆಳಗಡೆ ಬಿದ್ದಾಗ ಸದರಿ ಘಟನೆ ನೋಡಿದ ಲಕ್ಷ್ಮೀಕಾಂತ ತಂದೆ ಕಲ್ಲಪ್ಪಾ ಮನಗೊಂಡ ಹಾಗೂ ಚನ್ನಮಲ್ಲಪ್ಪಾ ತಂದೆ ಬಸವಣಪ್ಪಾ ಗುಡೂರ ರವರು ಬಂದು ನನಗೆ ಎಬ್ಬಿಸಿ ರೋಡ ಪಕ್ಕದಲ್ಲಿ ಕೂಡಿಸಿದಾಗ ನಾನು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಮೋಟಾರ ಸೈಕಲ ನಂಬರ ನೋಡಲು ಕೆಎ-32/ಇವ್ಹಿ-4417 ಇದ್ದಿತ್ತು. ಅದರ ಸವಾರ ಸ್ವಲ್ಪ ನಿಂತಂತೆ ಮಾಡಿ ತನ್ನ ಮೋಟಾರ ಸೈಕಲ ಚಾಲು ಮಾಡಿಕೊಂಡು ನೆಹರು ಗಂಜ್ ಕಡೆಗೆ ಓಡಿ ಹೋದನು. ಸದರಿ ಘಟನೆ ಜರುಗಿದಾಗ ಸಾಯಂಕಾಲ 4-45 ಗಂಟೆ ಸಮಯವಾಗಿತ್ತು. ಸದರಿ ಘಟನೆಯಿಂದ ನನ್ನ ಬಲಗಾಲು ತೊಡೆಗೆ ಭಾರಿ ಗುಪ್ತಪೆಟ್ಟು ಬಿದ್ದಿತ್ತು. ನನಗೆ ತ್ರಾಸ ಆಗುತ್ತಿದ್ದರಿಂದ ಲಕ್ಷ್ಮಿಕಾಂತ ಇವರು ನನ್ನ ಉಪಚಾರ ಕುರಿತು ಖಾಸಗಿ ಪಿ.ಜಿ ಶಹಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನಾನು ಪಿ.ಜಿ ಶಹಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಹೋಗಿ ಮನೆಯಲ್ಲಿ ವಿಚಾರ ಮಾಡಿ ನನಗೆ ಡಿಕ್ಕಪಡಿಸಿ ಅಪಘಾತ ಮಾಡಿದ ಮೋಟಾರ ಸೈಕಲ ಸವಾರನ ಮೇಲೆ ದೂರು ನೀಡಲು ತಡವಾಗಿರುತ್ತದೆ. ನನಗೆ ಡಿಕ್ಕಪಡಿಸಿ ಅಪಘಾತ ಮಾಡಿದ ಮೋಟಾರ ಸೈಕಲ ಸವಾರನ ಹೆಸರು ಗೊತ್ತಾಗಿರುವುದಿಲ್ಲ ಆತನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೆನೆ. ನನಗೆ ಅಪಘಾತ ಮಾಡಿ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 11-03-2023 12:05 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080