ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ ಠಾಣೆ :- ದಿನಾಂಕ: 10.02.2023 ರಂದು ಸಾಯಂಕಾಲ 5 ಗಂಟೆಗೆ ಫಿರ್ಯಾದಿ ಶ್ರೀ ವಿಜಯಕುಮಾರ ತಂದೆ ನರಸಿಂಹರಾವ ವಯ|| 52 ವರ್ಷ ಜಾ|| ಹೊಲೆಯ ಉ|| ಎಮ್,ಎಸ್,ಐ,ಎಲ್ ಸಂಸ್ಥೆಯಲ್ಲಿ ಜಿಲ್ಲಾ ಸಂಪರ್ಕಾಧಿಕಾರಿ(ಡಿ,ಎಲ್,ಓ) ಸಾ|| ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಇಂಗ್ಲೀಷನಲ್ಲಿ ಕೊಟ್ಟ ಫಿರ್ಯಾದಿ ದೂರಿನ ಸಾರಾಂಶವೆನೆಂದರೆ, ನಾನು ಕೊಪ್ಪಳದಲ್ಲಿರುವ ಎಮ್,ಎಸ್,ಐ,ಎಲ್ ಸಂಸ್ಥೆಯಲ್ಲಿ ಜಿಲ್ಲಾ ಸಂಪರ್ಕಾಧಿಕಾರಿ (ಡಿ,ಎಲ್,ಓ) ಅಂತಾ ಕೆಲಸ ಮಾಡಿಕೊಂಡಿರುತ್ತೆನೆ. ಸದ್ಯ ಕಲಬುರಗಿಯಲ್ಲಿರುವ ಎಮ್,ಎಸ್,ಐ,ಎಲ್ ಶಾಖಾ ಮುಖ್ಯಸ್ಥರು ಹಾಗೂ ಜಿಲ್ಲಾ ಸಂಪರ್ಕಾಧಿಕಾರಿಯವರು ಇಲ್ಲದ ಕಾರಣ ನಾನು ಉಸ್ತುವಾರಿ ನೋಡಿಕೊಂಡು ಬಂದಿರುತ್ತೆನೆ. ಕಲಬುರಗಿ ನಗರದ ತಿಮ್ಮಾಪೂರಿ ಸರ್ಕಲ್ ಹತ್ತಿರ ಇರುವ ನಮ್ಮ ಎಮ್,ಎಸ್,ಐ,ಎಲ್ ಶಾಖೆಯಲ್ಲಿ ಚಂದ್ರಕಾಂತ ಕಂಠೀ ಇವರು ಸುಮಾರು 18 ವರ್ಷದಿಂದ ಡಾಟಾ ಎಂಟ್ರೀ ಆಪರೇಟರ್ ಆಗಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿಕೊಂಡು ಇರುತ್ತಾರೆ ಅದರಂತೆ ಶ್ರೀನಾಥ ಎಂಬುವವರು ಕೂಡಾ ಎಮ್,ಎಸ್,ಐ,ಎಲ್ ಶಾಖೆಯಲ್ಲಿ ಕಲಬುರಗಿ ಜಿಲ್ಲೆಯ ಮಳಿಗೆ ಮೇಲ್ವೀಚಾರಕರು (ಆರ್,ಐ,ಸಿ) ಅಂತಾ ಕೆಲಸ ಮಾಡಿಕೊಂಡಿದ್ದು ಇವರಿಬ್ಬರ ವಿರುದ್ದ ದೂರುಗಳು ಬಂದ ಕಾರಣ ಅವರನ್ನು ಸಂಸ್ಥೆಯ ಮುಖ್ಯಸ್ಥರು ಬೆಂಗಳೂರು ರವರು ಚಂದ್ರಕಾಂತ ಕಂಠೀ ಮತ್ತು ಶ್ರೀನಾಥ ರವರನ್ನು ಕಲಬುರಗಿಯಿಂದ ಬೆಂಗಳೂರಿನಲ್ಲಿರುವ ಪ್ರಧಾನ ಕಛೇರಿಗೆ ವರ್ಗಾವಣೆ ಮಾಡಿದ್ದು ಇರುತ್ತದೆ. ಸ್ವಲ್ಪ ದಿನಗಳ ನಂತರ ಶ್ರೀನಾಥ ಇವರನ್ನು ಪುನಃ ಕಲಬುರಗಿ ಜಿಲ್ಲೆಗೆ ವರ್ಗಾವಣೆ ಮಾಡಲಾಯಿತು. ನಂತರ ಚಂದ್ರಕಾಂತ ಕಂಠೀ ಇವರ ಹೆಂಡತಿಯಾದ ಸಾವಿತ್ರಿ ಕಂಠೀ ಇವರು ದಿನಾಂಕ: 06.02.2023 ರಂದು ಬೆಂಗಳೂರಿನಲ್ಲಿರುವ ಪ್ರಧಾನ ಕಛೆರಿಗೆ ಭೇಟಿ ನೀಡಿ ನೀವು ಶ್ರೀನಾಥ ಇವರಿಗೆ ಪುನಃ ಕಲಬುರಗಿ ಜಿಲ್ಲೆಗೆ ವರ್ಗಾವಣೆ ಮಾಡಿದ್ದಿರೀ, ನನ್ನ ಗಂಡನಾದ ಚಂದ್ರಕಾಂತ ಕಂಠೀ ಇವರಿಗೆ ಕಲಬುರಗಿಯಲ್ಲಿರುವ ಚೀಟ್ ಫಂಡ ವಿಭಾಗದಲ್ಲಿ ಖಾಲಿ ಹುದ್ದೆ ಇದ್ದ ಸ್ಥಳದಲ್ಲಿ ವರ್ಗಾವಣೆ ಮಾಡಬೇಕು ಅಂತಾ ಕೋರಿಕೊಂಡ ಮೇರೆಗೆ ಆಗ ಪ್ರಧಾನ ಕಛೇರಿಯ ಮುಖ್ಯಸ್ಥರು ನಿಮ್ಮ ಗಂಡನಾದ ಚಂದ್ರಕಾಂತ ಕಂಠೀ ಇವರ ವಿರುದ್ದ ಗಂಭಿರ ದೂರುಗಳು ಬಂದಿದ್ದು ಆದ್ದರಿಂದ ನಿಮ್ಮ ಗಂಡ ಚಂದ್ರಕಾಂತ ಕಂಠೀ ಇವರನ್ನು ಪುನಃ ಅದೇ ಸ್ಥಳದಲ್ಲಿ ಅಥವಾ ಚೀಟ ಫಂಡ ವಿಭಾಗದಲ್ಲಿ ವರ್ಗಾವಣೆ ಮಾಡಲು ಬರುವುದಿಲ್ಲಾ, ಬೇಕಾದರೇ ಮದ್ಯ ಮಾರಾಟ ಮಳಿಗೆಯಲ್ಲಿ ವರ್ಗಾವಣೆ ಮಾಡುವುದಾಗಿ ತಿಳಿಸಿದಾಗ, ಸಾವಿತ್ರಿ ಇವರು ಶ್ರೀನಾಥ ಇವರಿಗೆ ಮೊದಲಿನ ಸ್ಥಳದಲ್ಲಿ ವರ್ಗಾವಣೆ ಮಾಡಿದ್ದಿರಿ ನನ್ನ ಗಂಡನಿಗೂ ಮೊದಲಿನ ಸ್ಥಳದಲ್ಲಿಯೇ ವರ್ಗಾವಣೆ ಮಾಡಬೇಕು ಒಂದು ವೇಳೆ ನೀವು ವರ್ಗಾವಣೆ ಮಾಡದೇ ಹೋದರೇ ನಾನು ಕುಟುಂಬ ಸಮೇತ ನಿಮ್ಮ ಕಛೇರಿ ಮುಂದುಗಡೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೇದರಿಕೆ ಹಾಕಿದ್ದು ಇರುತ್ತದೆ. ನಮ್ಮ ಮೇಲಾಧಿಕಾರಿಯವರು ನನಗೆ ಸೂಚಿಸಿದ್ದೆನೆಂದರೆ, ಶ್ರೀಮತಿ ಸಾವಿತ್ರಿ ಗಂಡ ಚಂದ್ರಕಾಂತ ಕಂಠೀ ಇವರ ವಿರುದ್ದ ದೂರು ಸಲ್ಲಿಸಲು ಸೂಚಿಸಿದ ಮೇರೆಗೆ ನಾನು ಇಂದು ದಿನಾಂಕ:10.02.2023 ರಂದು ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ.   ಕಾರಣ ಸಾವಿತ್ರಿ ಗಂಡ ಚಂದ್ರಕಾಂತ ಕಂಠೀ ಇವರು ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೇದರಿಕೆ ಹಾಕಿದ್ದರಿಂದ ಇವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 10-02-2023 ರಂದು ಸಾಯಂಕಾಲ 6-00 ಗಂಟೆಗೆ ಶ್ರೀ ಸಯ್ಯದ ಸಮೀರ ತಂದೆ ಅಬ್ದುಲ ಮಜೀದ ಇವರು  ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ನನಗೆ ಎರಡು ಜನ ಗಂಡು ಮಕ್ಕಳು ಜನ ಹೆಣ್ಣು ಮಕ್ಕಳೀದ್ದು ಸಣ್ಣ ಮಗ ಅಪಾನ ವ: 4 ವರ್ಷದವನು ಇರುತ್ತಾನೆ. ನನ್ನ ತಂದೆ ತಾಯಿಯವರು ಖಾದ್ರಿ ಚೌಕ ಹತ್ತೀರ ಇರುವ ಮನೆಯಲ್ಲಿ ವಾಸವಿರುತ್ತಾರೆ. ನಾವು ಆಗಾಗ ನಾನು ಮತ್ತು ನನ್ನ ಹೆಂಡತಿ ಮಕ್ಕಳು ಅವರ ಹತ್ತೀರ ಹೋಗಿ ಬಂದು ಮಾಡಿಕೊಂಡು ಇರುತ್ತೇವೆ.  ನಿನ್ನೆ ದಿನಾಂಕ 09.02.2023 ರಂದು ಮದ್ಯಾಹ್ನ ನಾನು ಮತ್ತು ನನ್ನ ಹೆಂಡತಿ ಸಾಬೀರಾ ಬೇಗಂ ಹಾಗೂ ಸಣ್ಣ ಮಗ ಅಪಾನ ಮೂರು ಜನರು ನನ್ನ ತಂದೆ ತಾಯಿಯವರ ಹತ್ತೀರ ಖಾದ್ರಿ ಚೌಕ ಹತ್ತೀರ ಬರುವ ಮನೆಗೆ ಹೋಗಿರುತ್ತೇವೆ. ಸಾಯಂಕಾಲ 4-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಸಬೀರಾ ಬೇಗಂ ಹಾಗೂ ನನ್ನ ಮಗ ಅಪನ ಮೂರು ಜನರು ವಾಪಸ್ಸ ಪಂಡಿತ ದಿನ ದಯಾಳ ಉಪಾದ್ಯಯ ನಗರದಲ್ಲಿರುವ ನಮ್ಮ ಮನೆಗೆ ಹೋಗುವ ಸಲುವಾಗಿ ಖಾದ್ರಿ ಚೌಕ ಹತ್ತೀರ ಆಟೋರಿಕ್ಷಾ ಸಲುವಾಗಿ ರೋಡ ಪಕ್ಕದಲ್ಲಿ ನಿಂತಿರುವಾಗ ಒಬ್ಬ ಹೊಸ ಮೋಟಾರ ಸೈಕಲ ಸವಾರನು ಶಹಾಬಾಜಾರ ನಾಕಾ ಕಡೆಯಿಂದ ಆಳಂದ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಜೊತೆಗೆ ನಿಂತಿದ್ದ ನನ್ನ ಮಗ ಅಪನ ಇತನಿಗೆ ಡಿಕ್ಕಿಪಡಿಸಿ ಅಪಘಾತ  ಮಾಡಿದನು. ನನ್ನ ಮಗ ಪುಟಿದು ಕೆಳಗಡೆ ಬಿದ್ದಾಗ ನಾನು ಎತ್ತುಕೊಂಡು ರೋಡ ಪಕ್ಕದಲ್ಲಿ ಕೂಡಿಸಿದೆನು. ಸದರ ಘಟನೆ ನೋಡಿದ ನನಗೆ ಪರಿಚಯದ ಮಹ್ಮದ ಗೌಸ ತಂದೆ ನಸೀರಮಿಯಾ ರವರು ನಮ್ಮ ಹತ್ತೀರ ಬಂದನು ನಾನು ನನ್ನ ಮಗನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಮೋಟಾರ ಸೈಕಲ ನೋಡಲು ಹೊಸ ಮೋಟಾರ ಸೈಕಲ ಇದ್ದು ಅದಕ್ಕೆ ಇನ್ನು ನಂಬರ ನಮೂದು ಮಾಡಿರಲಿಲ್ಲ, ನಾನು ಮತ್ತು ಮಹ್ಮದ ಗೌಸ ಇಬ್ಬರೂ ಅದರ ಚೆಸ್ಸಿ ನಂಬರ ನೋಡಲು ಒಆ2ಃ77ಂಘಿ7ಕಘಏ15563 ಇದ್ದಿತ್ತು. ಆತನ ಹೆಸರು ಪ್ರಕಾಶ ತಂದೆ ಶಿವರಾಜ ಪಾಟೀಲ ಅಂತಾ ಗೋತ್ತಾಯಿತು. ಸದರ ಘಟನೆಯಿಂದ ನನ್ನ ಮಗನ ತೆಲೆಗೆ ಭಾರಿ ಒಳಪೆಟ್ಟು ಮತ್ತು ಎಡ ಟೊಂಕಿಗೆ ತರಚಿದಗಾಯವಾಗಿದ್ದರಿಂದ ನಾನು ಮತ್ತು ನನ್ನ ಹೆಂಡತಿ ಹಾಗೂ ಅಪಘಾತ ಪಡಿಸಿದ ಮೋಟಾರ ಸೈಕಲ ಸವಾರ ಮೂರು ಜನರು ಸೇರಿಕೊಂಡು ನನ್ನ ಮಗನ ಉಪಚಾರ ಕುರಿತು ಒಂದು ಆಟೋರಿಕ್ಷಾ ವಾಹನದಲ್ಲಿ ಕುಳಿತು ಖಾಸಗಿ ಯುನೈಟೆಡ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ನಿನ್ನೆ ಯುನೈಟೆಡ ಆಸ್ಪತ್ರೆಯಲ್ಲಿ ನಾನು ಒಬ್ಬನೆ ಇದ್ದು ನನ್ನ ತಾಯಿ ಮತ್ತು ಅಣ್ಣತಮ್ಮಂದಿರರಿಗೆ ವಿಚಾರಿಸುವ ಸಂಬಂದ ದೂರು ನೀಡಿರುವದಿಲ್ಲ ಇಂದು ನಾನು ನನ್ನ ತಾಯಿ ಮತ್ತು ನನ್ನ ಅಣ್ಣತಮ್ಮಂದಿರಿಗೆ ವಿಚಾರಿಸಿ ದೂರು ನೀಡಲು ತಡವಾಗಿರುತ್ತದೆ.    ಕಾರಣ ನನ್ನ ಮಗನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನಿಗೆ ಭಾರಿಗಾಯಗೊಳಿಸಿದ ಹೊಸ ಮೋಟಾರ ಸೈಕಲ ಚೆಸ್ಸಿ ನಂಬರ MD2B77AX7PÀWÀK15563 ನೇದ್ದರ ಸವಾರ ಪ್ರಕಾಶ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಫಿರ್ಯಾದಿ ದೂರು ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ್‌ ಠಾಣೆ :-  ದಿನಾಂಕ:10.02.2023  ರಂದು  ಸಾಯಂಕಾಲ 6.55 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸ್ವೀಕೃತಮಾಡಿಕೊಂಡು  ಮರಳಿ ಠಾಣೆಗೆ ರಾತ್ರಿ 19.10 ಗಂಟೆಗೆ ಠಾಣೆಗೆ ಬಂದು ಸದರಿ ಫಿರ್ಯಾದಿ ದೂರು ಅರ್ಜಿಯ ಸಾರಾಂಶವೆನೆಂದರೆ  ನಾನು ಶ್ರೀ ಬಸವ¸Àರಾಜ ತಂದೆ ಭೀಮಸಿಂಗ ಚವ್ಹಾಣ ವ: 29 ವರ್ಷ ಉ: ಕಾರ ಚಾಲಕ  ಜಾತಿ ಲಂಬಾಣಿ ಸಾ:ಬೆಡಸೂರ ತಾಂಡಾ ತಾ:ಚಿತ್ತಾಪೂರ ಇದ್ದು ಈ ಮೂಲಕ ತಮಗೆ ದೂರು ಕೊಡುವುದೆನೆಂದೆರೆ, ಇಂದು ದಿನಾಂಕ:10/02/2023 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಸೋನಾಲಗಿರಿ ಮಠದಿಂದ ನಾನು ಮತ್ತು ಮಾಹಾರಾಜ ಶ್ರೀ  ಪರ್ವತಲಿಂಗ ಚವ್ಹಾಣ ಮತ್ತು ಅವರ ಶಿಷ್ಯ ಶಿವಾನಂದ ಮೂವರು ಇನೋವಾ ಕಾರ ನಂ.ಕೆಎ 32 ಎನ್ 6214 ರಲ್ಲಿ ಕುಳಿತುಕೊಂಡು, ದಿನಾಂಕ:18, 19/02/2023 ರಂದು ನಡೆಯಲ್ಲಿರುವ ಶಿವ ಮಂದಿರ ಜಾತ್ರೆ ನಿಮಿತ್ಯ ದವಸ ಧಾನ್ಯ ಖರೀದಿಸಲು ಕಲಬುರಗಿ ನಗರದ ನೆಹರು ಗಂಜಿಗೆ ಹೊರಟಿದ್ದು, ಇನೋವಾ ಕಾರು ನಾನು ಚಾಲನೆ ಮಾಡುತ್ತಿದ್ದು, ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಕಲಬುರಗಿ ನಗರ ದ ನೆಹರು ಗಂಜ ಕುಮಸಿ ಹೋಟಲ ಹತ್ತಿರ ಬಂದಾಗ ಆಗ ನಮ್ಮ ಹಿಂದಿನಿಂದ ಇಬ್ಬರು ಒಂದು ಮೋಟರ ಸೈಕಲ ಮೇಲೆ ಕುಳಿತುಕೊಂಡು ಜಿಗ್ಗ ಜಾಗ ಮಾಡುತ್ತಾ ಬರುವುದನ್ನು ನೋಡಿ ಅವರು ನನ್ನ ಕಾರಿಗೆ ಡಿಕ್ಕಿ ಹೊಡೆಯಬಹುದೆಂದು ತಿಳಿದುಕೊಂಡು  ನನ್ನ ಕಾರಿನ ಹಾರ್ನ ಹಾಕಲು ಮೋಟರ ಸೈಕಲ ಸವಾರರು  ಇಬ್ಬರು ನನಗೆ ನನ್ನ ಕಾರು ನಿಲ್ಲಿಸುವಂತೆ ಕೈ ಸನ್ನೆ ಮಾಡಿದರು. ನಾನು ನನ್ನ ಕಾರು ಸೈಡಿಗೆ ತೆಗೆದುಕೊಳ್ಳಬೇಕೆನ್ನುವಷ್ಟರಲ್ಲಿ ಅವರಿಬ್ಬರು ನನ್ನ ಕಾರಿಗೆ ತಮ್ಮ ಮೋಟಾರ ಸೈಕಲಿನಿಂದ ಅಡ್ಡಗಟ್ಟಿ ನಿಲ್ಲಿಸಿ  ಇಬ್ಬರು ಮೋಟರ ಸೈಕಲನಿಂದ ಇಳಿದು ನನ್ನ ಹತ್ತಿರ ಬಂದು ಕಾರಿನಲ್ಲಿ ಕುಳಿತ ನನಗೆ ಅವರಿಬ್ಬರು ಶರ್ಟ ಹಿಡಿದು ಎಳೆದಾಡಿ ನನ್ನ ಶರ್ಟ  ಹರಿದು,  ನನಗೆ ಕಾರು ನೋಡಿ ನಡೆಸಲಿಕ್ಕೆ ಬರುವುದಿಲ್ಲಾ ರಂಡಿ ಭೋಸಡಿ ಮಗನೇ ಅಂತಾ ಹೊಲಸು ಹೊಲಸು ಬೈಯ್ಯುತ್ತಾ  ನನಗೆ  ಕಾರಿನಿಂದ ಕೆಳಗೆ ಇಳಿಸಿ ಇಬ್ಬರು ಕೈ ಮುಷ್ಠಿ ಮಾಡಿ ನನ್ನ ಬಾಯಿ, ಮೂಗಿನ ಮೇಲೆ ಬಲಟೊಂಕಕ್ಕೆ ಮತ್ತು ಬೆನ್ನಿಗೆ ಹೊಡೆದು ರಕ್ತಗಾಯ ಗುಪ್ತಗಾಯ ಮಾಡಿದರು. ಈ ಜಗಳಾ ಅಲ್ಲೇ ಕಾರಿನಲ್ಲಿ ಕುಳಿತಿದ್ದ ನಮ್ಮ  ಮಾಹಾರಾಜ ಶ್ರೀ ಪರ್ವತಲಿಂಗ ಮತ್ತು ಅವರ ಶಿಷ್ಯ ಶಿವಾನಂದ ಚವ್ಹಾಣ ಮತ್ತು ಇತರರು ಕೂಡಿಕೊಂಡು ಜಗಳಾ ಬಿಡಿಸಿಕೊಂಡರು. ಅವರ ಮೋಟರ ಸೈಕಲ ನಂಬರ ನೋಡಿರುವುದಿಲ್ಲಾ ಪುನ:ಹ ನೋಡಿದರೆ ಗುರುತಿಸುತ್ತೇನೆ. ಅಲ್ಲಿ ನೆರೆದಿದ್ದ ಜನರಿಂದ  ನನಗೆ ಹೊಡೆದವರ ಹೆಸರು ವಿಶಾಲ ತಂದೆ ಭೀಮಾಶಂಕರ ಅಣಕಲ್ ಸಾ: ಅಶೋಕ ಕಾಂಪ್ಲೆಕ್ಸ ಬ್ರಹ್ಮಪೂರ ಕಲಬುರಗಿ ಮತ್ತೊಬ್ಬನ ಹೆಸರು ಅಶ್ವಿನಿ ಸಾ: ಕಲಬುರಗಿ ಎಂದು ಕೇಳಿ ಗೊತ್ತಾಗಿರುತ್ತದೆ. ನನಗೆ ಹೊಡೆದ ಈ ಮೇಲಿನ ಎರಡು ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಅಂತಾ ಕೊಟ್ಟ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ:10-02-2023 ರಂದು 8:05 ಪಿಎಮ್ ಕ್ಕೆ ಶ್ರೀ ಗಡ್ಡೆಪ್ಪ ಹೆಚ್.ಸಿ:165 ಫರಹತಾಬಾದ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಇಂದು ದಿನಾಂಕ: 10-02-2023 ರಂದು ಸಾಯಂಕಾಲ 4:30 ಗಂಟೆಯ ಸುಮಾರಿಗೆ ನಾನು ಪೊಲೀಸ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ಕವಲಗಾ(ಬಿ) ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಕುಳಿತು ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಸಾರ್ವಜಿನಿಕರಿಗೆ ಹೇಳಿ ಸಾರ್ವಜನಿಕರಿಂದ ಹಣ ಪಡೆದು ದೈವ ಲೀಲೇಯ ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಭಾತ್ಮಿ ಬಂದ ಮೇರೆಗೆ ಪಿ.ಐ ಸಾಹೇಬರಿಗೆ ವಿಷಯ ತಿಳಿಸಿ ಅವರ ಮೌಖಿಕ ಆದೇಶದ ಮೇರಗೆ ನಾನು ಠಾಣೆಗೆ ಇಬ್ಬರೂ ಪಂಚರಾದ 1) ದೀಪಕ ತಂದೆ ಶ್ರೀಮಂತ ಹರಸೂರ ವಯ|| 35 ವರ್ಷ ಜಾ||ಹರಿಜನ ಉ||ಕೂಲಿ ಕೆಲಸ 2) ರವಿ ತಂದೆ ಗುರುಬಸಪ್ಪ ಮಡಿವಾಳ ವಯ|| 29 ವರ್ಷ ಜಾ||ಮಡಿವಾಳ ಉ||ಕೂಲಿ ಕೆಲಸ ಸಾ:ಇಬ್ಬರು ಫರಹತಾಬಾದ ತಾಜಿ:ಕಲಬುರಗಿ ಇವರನ್ನು ಬರ ಮಾಡಿಕೊಂಡು ನಮ್ಮ ಠಾಣೆಯ ಸಿಬ್ಬಂದಿ ಜನರಾದ 1) ರೇವಣಸಿದ್ದ ಸಿಹೆಚ್ಸಿ:157 2) ಶ್ರೀ ಸಾಜೀದ   ಸಿಪಿಸಿ:284 ರವರಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಠಾಣೆಯಿಂದ ಸಾಯಂಕಾಲ 5:00 ಗಂಟೆಗೆ ಹೊರಟು ವಾಹನದಲ್ಲಿದ್ದ ಸಿಬ್ಬಂದಿ ಜನರಿಗೆ ಮತ್ತು ಪಂಚರಿಗೆ ಮಟಕಾ ಜೂಜಾಟದ ಮಾಹಿತಿ ತಿಳಿಸಿ, ಭಾತ್ಮೀ ಸ್ಥಳದ ಹತ್ತಿರ ಸಾಯಂಕಾಲ 5:30 ಗಂಟೆಗೆ ಕವಲಗಾ(ಬಿ) ಗ್ರಾಮಕ್ಕೆ ಹೋಗಿ ಮನೆಗಳ ಹತ್ತಿರ ಮರೆಯಾಗಿ ನಿಂತು ನೋಡಲು ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಒಬ್ಬ ವ್ಯಕ್ತಿ ಸಾರ್ವಜನಿಕರನ್ನು ಕೂಗಿ ಕರೆದು 1 ರೂಪಾಯಿ ಗೆ 80 ರೂಪಾಯಿ ಗೆಲ್ಲಿರಿ ಅಂತಾ ಮಟಕಾ ದೈವ ಲೀಲೆಯ ನಂಬರ ಬರೆದುಕೊಳ್ಳುತ್ತಿದ್ದು ಅವನ ಜೊತೆಗೆ ಇತರರು ಇರುವುದನ್ನು ಖಚಿತ ಪಟ್ಟಾಗ 5:45 ಪಿಎಮ್ ಕ್ಕೆ ಏಕಕಾಲಕ್ಕೆ ದಾಳಿ ಮಾಡಲು ಮಟಕಾ ಬರೆಯಿಸುತ್ತಿದ್ದು ಜನರು ನಮ್ಮನ್ನು ನೋಡಿ ಓಡಿ ಹೋದರು ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಸಿಕ್ಕಿ ಬಿದಿದ್ದು ಆತನ ಹೆಸರು ವಿಳಾಸ ವಿಚಾರಿಸಲು ಮಲ್ಲಣ್ಣ ತಂದೆ ಶಿವಶಂಕ್ರಪ್ಪ ಕಲ್ಲಶೆಟ್ಟಿ ವಯ||61 ವರ್ಷ ಉ||ಟಿ.ವ್ಹಿ ರಿಪೇರಿ ಜಾ||ಗಾಣಿಗ ಸಾ||ಕವಲಗಾ(ಬಿ) ತಾಜಿ||ಕಲಬುರಗಿ ಅಂತ ತಿಳಿಸಿದ್ದು ಆತನಿಗೆ ಅಂಗ ಶೋಧನೆ ಮಾಡಲಾಗಿ 1) ಒಂದು ಮಟಕಾ ನಂಬರ ಚೀಟಿ ಅ.ಕಿ 00=00 2) ಒಂದು ಬಾಲ ಪೆನ್ನ ಅ.ಕಿ 00=00 3) ನಗದು ಹಣ 2180/- ರೂ ಸಿಕ್ಕಿದ್ದು ಹೀಗೆ ಒಟ್ಟು ನಗದು ಹಣ 2180/- ರೂ ಸಿಕ್ಕಿರುತ್ತದೆ. ಸದರಿಯವನ ಹತ್ತಿರ ಸಿಕ್ಕಿದ್ದ  ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಪಂಚರ ಸಮಕ್ಷಮದಲ್ಲಿ 6:30 ಪಿಎಮ್ ದಿಂದ 7:30 ಪಿಎಮ್ ದವರೆಗೆ ಕೈಕೊಂಡಿರುತ್ತೇನೆ. ನಂತರ ಜಪ್ತಿ ಪಂಚನಾಮೆ, ಮುದ್ದೆ ಮಾಲು ಮತ್ತು ಒಬ್ಬ ಆರೋಪಿತನೊಂದಿಗೆ 8:05 ಪಿಎಮ್ ಕ್ಕೆ  ಠಾಣೆಗೆ ಬಂದಿದ್ದು ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 12-02-2023 12:59 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080