ಅಭಿಪ್ರಾಯ / ಸಲಹೆಗಳು

ಫರಹತಾಬಾದ ಪೊಲೀಸ ಠಾಣೆ:-  ದಿನಾಂಕ೧೦.೦೨.೨೦೨೨ ರಂದು ರಾತ್ರಿ ೧೦ ಗಂಟೆಗೆ ಫಿರ್ಯಾಧಿ ಶ್ರೀಕಾಂತ ತಂದೆ ಶಂಕರ ರಾಠೋಡ  ವಯ:೩೦ ವರ್ಷ ಉ:ಕೆಇಬಿ ಯಲ್ಲಿ ಗುತ್ತಿಗೆ ಕೆಲಸ ಜಾತಿ: ಲಂಬಾಣಿ ಸಾ: ಖಣದಾಳ ತಾಂಡಾ ತಾ:ಜಿ:ಕಲಬುರಗಿ ಇವರು ಠಾಣೆಗೆ ಹಾಜರಾಗಿ  ದೂರು ಸಲ್ಲಿಸಿದ್ದರ ಸಾರಾಂಶವೇನೆಂದರೆ, ನಾನು ಕೋಟನೂರ (ಡಿ) ಜೇಸ್ಕಾಂ ಕಚೇರಿಯಲ್ಲಿ ಮ್ಯಾಂಟೆನೇಸ ಕೆಲಸ ಮಾಡಿಕೊಂಡಿರುತ್ತೆನೆ. ದಿನಾಲು ನಾನು ನಮ್ಮೂರಿನಿಂದ ನಮ್ಮ ಅಣ್ಣನ ಹೆಸರಿಗೆ ಇರುವ ಹಿರೋ ಇಗ್ನಿಟರ ಕಂಪನಿಯ ಮೋಟಾರ ಸೈಕಲ ನಂ ಕೆಎ-೩೨ ಇಎಲ್-೭೫೪೮ ನೆದ್ದರ ಮೇಲೆ ಹೋಗಿ ಬಂದು ಮಾಡುತ್ತಿರುತ್ತೆನೆ. ಹೀಗಿರುವಾಗ ಇಂದು ದಿನಾಂಕ:೧೦.೦೨.೨೦೨೨ ರಂದು ರಾತ್ರಿ ವೇಳೆಯಲ್ಲಿ ನಾನು ಕೋಟನೂರ (ಡಿ) ಜೇಸ್ಕಾಂ ಕಚೇರಿಯಲ್ಲಿ ಕೆಲಸ ಮುಗಿಸಿಕೊಂಡು ನಮ್ಮೂರಿಗೆ ನಮ್ಮ ಮೋಟಾರ ಸೈಕಲ ನಂ:ಕೆಎ-೩೨ ಇಎಲ್-೭೫೪೮ ನೆದ್ದರ ಮೇಲೆ ಹೋಗುತ್ತಿರುವಾಗ ಶ್ರೀ ಗುರು ವಿದ್ಯಾಪೀಠ ಶಾಲೆ ದಾಟಿ ಸ್ವಲ್ಪ ಮುಂದೆ ಹೋಗುವಾಗ ರಾತ್ರಿ ೮ ಗಂಟೆಯ ಸುಮಾರಿಗೆ ನನಗೆ ಸಂಡಾಸ ಬಂದಿದ್ದರಿಂದ ನಾನು ರಸ್ತೆಯ ಪಕ್ಕದಲ್ಲಿದ್ದ ಲೇಔಟದಲ್ಲಿ ನನ್ನ ಮೋಟಾರ ಸೈಕಲ ನಿಲ್ಲಿಸಿದಾಗ ನನ್ನ ಹಿಂದಿನಿಂದ ಎರಡು ಮೋಟಾರ ಸೈಕಲಗಳು ಬಂದು ನನ್ನ ಅಕ್ಕ ಪಕ್ಕದಲ್ಲಿ ಮೋಟಾರ ಸೈಕಲ ನಿಲ್ಲಿಸಿದರು, ಅವುಗಳ ಮೇಲೆ ನಾಲ್ಕು ಜನರು ಇದ್ದು ಅವರೆಲ್ಲರೂ ಮುಖಕ್ಕೆ ಮಾಸ್ಕ ಧರಿಸಿದ್ದು, ಅವರು ಅಂದಾಜು ೨೫-೩೦ ವಯಸ್ಸಿನವರಿದ್ದು, ಅವರಲ್ಲೊಬ್ಬ ನನಗೆ ಹಿಂದಿ ಭಾಷೆಯಲ್ಲಿ ಪಕಡೋ ಬೋಸಡಿ ಕ್ಯಾಕೋ ಅಂತಾ ಅಂದನು, ಇನ್ನೊಬ್ಬನು ನನಗೆ ಚಾಕು ತೋರಿಸಿದಾಗ ನಾನು ಗಾಬರಿಗೊಂಡು ಮೋಟಾರ ಸೈಕಲ ಅಲ್ಲೆ ಬಿಟ್ಟು ಲೇಔಟದಲ್ಲಿ ಓಡಿ ಹೋದೇನು. ಸ್ವಲ್ಪ ಮುಂದೆ ಹೋಗಿ ನಾನು ಹಿಂದೆ ತಿರುಗಿ ನೋಡಲಾಗಿ ನನ್ನ ಮೋಟಾರ ಸೈಕಲ ನಂ.ಕೆಎ-೩೨ ಇಎಲ್-೭೫೪೮ ನೆದ್ದು ಅದರ ಅ:ಕಿ;೩೦,೦೦೦/- ರೂ.ನೆದ್ದನ್ನು ಅವರು ಅಲ್ಲಿಂದ ತೆಗೆದುಕೊಂಡು ಹೋಗಿರುತ್ತಾರೆ. ನಂತರ ನಾನು ಗಾಬರಿಗೊಂಡು ನಮ್ಮ ಸಂಬಂಧಿಕನಾದ ಅಜಯ ರಾಠೋಡನಿಗೆ ಫೊನ್ನ ಮಾಡಿ ಆ ಸ್ಥಳಕ್ಕೆ ಕರೆಯಿಸಿ ವಿಚಾರ ಮಾಡಿ ನಂತರ ಬಂದು ದೂರು ಸಲ್ಲಿಸುತ್ತಿದ್ದೆನೆ.   ಕಾರಣ ಎರಡು ಮೊಟಾರ ಸೈಕಲಗಳ ಮೇಲೆ ಬಂದು ನನಗೆ ಅವಾಚ್ಯವಾಗಿ ಬೈದು ಚಾಕು ತೋರಿಸಿ ನನ್ನ ಮೋಟಾರ ಸೈಕಲ ನಂ ಕೆಎ-೩೨ ಇಎಲ್-೭೫೪೮ ನೆದ್ದು ಅದರ ಅ:ಕಿ;೩೦,೦೦೦/- ರೂ ನೆದ್ದನ್ನು ತೆಗೆದುಕೊಂಡು ಹೋದ ನಾಲ್ಕು ಜನರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ದೂರಿನ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

ವಿಶ್ವವಿದ್ಯಾಲಯ ಪೊಲೀಸ್ ಠಾಣೆ:- ಫಿರ್ಯಾಧಿಯ ಮನೆಯ ಮುಂದೆ ಹಚ್ಚಿದ  ಮೋಟರ ಸೈಕಲ್ ನಂ. ಕೆಎ೩೨- ಹೆಚ್-೭೭೩೦ ಅ.ಕಿ ೨೦೦೦೦/- ರೂ ನೇದ್ದನ್ನು ಯಾರೋ ಕಳ್ಳರು ದಿನಾಂಕ ೦೯-೦೨-೨೦೨೨ ರಂದು  ಬೆಳಿಗ್ಗೆ ೭:೦೦ ದಿಂದ ದಿನಾಂಕ ೦೯-೦೨-೨೦೨೨ ರಂದು ಬೆಳಿಗ್ಗೆ ೭:೦೦ ಗಂಟೆ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದು, ನಾನು ಮನೆಯಲ್ಲಿ ವಿಚಾರ ಮಾಡಿ ಇಂದು ತಡ ಮಾಡಿ ಠಾಣೆಗೆ ಹಾಜರಾಗಿ ದೂರು ನೀಡುತ್ತಿದ್ದು ಇರುತ್ತದೆ ಅಂತಾ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 11-02-2022 12:34 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080