ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್‌ ಠಾಣೆ :- ದಿನಾಂಕ:10/01/2023 ರಂದು ಸಾಯಂಕಾಲ 05-00  ಗಂಟೆಗೆ ಚೌಕ ಪೊಲೀಸ ಠಾಣೆಯಲ್ಲಿ ನನಗೆ ಮಾಹಿತಿ ಬಂದಿದ್ದೇನೆಂದರೆ, ಕಲಬುರಗಿ ನಗರದ ಲಾಲ ಹನುಮಾನ ಗುಡಿಯಿಂದ ಮಹಾದೇವ ನಗರ ಕಮಾನ ಕಡೆಗೆ ಹೋಗುವ ರಸ್ತೆಯಲ್ಲಿ ಮಾಹಾಂತಪ್ಪ ಅಲ್ಲದ ಶಾಲೆ ಕಂಪೌಂಡ ಹತ್ತಿರ ಇರುವ ಖುಲ್ಲಾ ಜಾಗೆಯಲ್ಲಿ  ಕೆಲವು ಜನರು ಕಾನೂನು ಬಾಹಿರ ಅಂದರ ಬಾಹರ ಎಂಬ ದೈವಲೀಲೆಯ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ  ಈ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ, ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕುರಿತು ಇಬ್ಬರೂ ಪಂಚರಾದ 1)ಶ್ರೀ  ಶರಣಪ್ಪ ತಂದೆ ಹಣಮಂತ ಡೋರನಳ್ಳಿ ವ:53 ವರ್ಷ ಉ:ಗೌಂಡಿ ಕೆಲಸ ಜಾತಿ ಕಬ್ಬಲೀಗ ಸಾ: ಯಲ್ಲಮ್ಮಾ ಗುಡಿ ಹತ್ತಿರ ಗಂಗಾ ನಗರ ಕಲಬುರಗಿ 2)ಶ್ರೀ ಮಾಹಾದೇವ ತಂದೆ ಶ್ರೀಪತರಾವ ಮೇತ್ರಿ ವ:33 ವರ್ಷ ಉ: ಕುಂಬಾರ ಕೆಲಸ ಜಾತಿ ಗಿಸಾಡಿ ಸಾ:ಸಿಟಿ ಬಸಸ್ಟ್ಯಾಂಡ ಎದುರುಗಡೆ ಜೋಪಡಪಟ್ಟಿ ಕಲಬುರಗಿ  ಸಾಯಂಕಾಲ 5-15 ಗಂಟೆಗೆ ಬರಮಾಡಿಕೊಂಡು ನಮ್ಮ ಠಾಣೆಯ ಸಿಪಿಸಿ 08 ಅಶೋಕ, ಸಿಪಿಸಿ 136 ಸುರೇಶ, ಸಿಪಿಸಿ 299 ಮೋಸಿನ   ರವರಿಗೆ ಪಂಚರಿಗೆ ಪರಿಚಯಿಸಿ ದಾಳಿ ಮಾಡಿ ಪಂಚನಾಮೆಗೆ ಸಹಕರಿಸಬೇಕೆಂದು ತಿಳಿಹೇಳಿದ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ. ಅದರಂತೆ ಈ ಮೇಲಿನ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ನನ್ನ ಜೊತೆಯಲ್ಲಿ ದಾಳಿ ಬರುವಂತೆ ತಿಳಿಸಿದೆನು.  ನಂತರ  ನಾನು ಮತ್ತು ಪಂಚರು ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಸಿಪಿಸಿ 08 ಅಶೋಕ, ಸಿಪಿಸಿ 136 ಸುರೇಶ, ಸಿಪಿಸಿ 299 ಮೋಸಿನ   ಎಲ್ಲರೂ ಸರ್ಕಾರಿ ಜೀಪು ಕೆಎ 32 ಜಿ 874 ರಲ್ಲಿ ಕುಳಿತುಕೊಂಡೇವು. ಸಾಯಂಕಾಲ 5-30 ಗಂಟೆಗೆ ಚೌಕ ಪೊಲೀಸ ಠಾಣೆಯಿಂದ ಹೊರಟು ಮಾಹಿತಿ ಬಂದ ಸ್ಥಳವಾದ ಕಲಬುರಗಿ ನಗರದ ಲಾಲ ಹನುಮಾನ ಗುಡಿಯಿಂದ ಮಹಾದೇವ ನಗರ ಕಮಾನ ಕಡೆಗೆ ಹೋಗುವ ರಸ್ತೆಯಲ್ಲಿ ಮಾಹಾಂತಪ್ಪ ಅಲ್ಲದ ಶಾಲೆ ಕಂಪೌಂಡ ಹತ್ತಿರ ಇರುವ ಖುಲ್ಲಾ ಜಾಗೆಯಲ್ಲಿ  ಸಾಯಂಕಾಲ 5-40 ಗಂಟೆಗೆ ತಲುಪಿ ಸ್ವಲ್ಪ ದೂರದಲ್ಲಿ ಜೀಪು ನಿಲ್ಲಿಸಿ ಅಲ್ಲಿಯೇ ಹೋಗಿ ಮರೆಯಲ್ಲಿ ನಾನು ಮತ್ತು ಪಂಚರು ಹಾಗೂ ಈ ಮೇಲಿನ ಅಧಿಕಾರಿ ಮತ್ತು ಸಿಬ್ಬಂದಿಯವರೆಲ್ಲರೂ  ನಿಂತು ನೋಡಲಾಗಿ, ಮಾಹಾಂತಪ್ಪ ಅಲ್ಲದ ಶಾಲೆ ಕಂಪೌಂಡ ಹತ್ತಿರ ಇರುವ ಖುಲ್ಲಾ ಜಾಗೆಯಲ್ಲಿ  04 ಜನರು ದುಂಡಾಗಿ ಕುಳಿತು ಇಸ್ಪೇಟ ಎಲೆಗಳ ಸಹಾಯದಿಂದ  ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ದೈವಲೀಲೆಯ ಇಸ್ಪೇಟ ಜೂಜಾಟ ಆಡುತ್ತಿದ್ದು, ಅವರಲ್ಲಿ ಒಬ್ಬನು ಎಲೆಗಳು ಪೀಸ್ ಮಾಡಲು ಮತ್ತೋಬ್ಬನು ಅರ್ಧ ಕಟ್ ಮಾಡಿ ಒಂದು ಎಲೆ ಅಂಗಾತವಾಗಿಡಲು ಎಲೆ ಪೀಸ್ ಮಾಡಿದವನು ಎಲೆಗಳನ್ನು ಅಂದರ್-ಬಾಹರ್ ಅನ್ನುತ್ತಾ ಅಂಗಾತವಾಗಿ ಒಗೆಯುತ್ತಿದ್ದನು. ಉಳಿದವರೆಲ್ಲರೂ ಅಂದರಕ್ಕೆ-ಬಾಹರಕ್ಕೆ ಅಂತಾ ಹಣವನ್ನು ಪಣಕ್ಕೆ ಹಚ್ಚುತ್ತಿದ್ದರು & ಆಡುತ್ತಿರುವುದನ್ನು ನೋಡಿ ಖಾತ್ರಿ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನನ್ನ  ನಿರ್ದೇಶನದಂತೆ ಈ ಮೇಲಿನ ಅಧಿಕಾರಿ ಮತ್ತು ಸಿಬ್ಬಂದಿಯವರ ಸಹಾಯದಿಂದ ಸುತ್ತುವರೆದು ಸಾಯಂಕಾಲ 5-45 ಗಂಟೆಗೆ ಒಮ್ಮಲ್ಲೇ ದಾಳಿ ಮಾಡಿ ಜೂಜಾಟ ಆಡುತ್ತಿರುವ ಒಟ್ಟು 04 ಜನರಿಗೆ ಹಿಡಿಡಿದ್ದು, ಅವರ ಹೆಸರು ವಿಳಾಸ ವಿಚಾರಿಸಲೂ ಅವರಲ್ಲಿ ಒಬ್ಬನು ತನ್ನ ಹೆಸರು 1) ಶರಣು ತಂದೆ ರಾಜಶೇಖರ ಕಲ್ಯಾಣಿ ವ:34 ವರ್ಷ ಉ: ಒಕ್ಕಲುತನ ಜಾತಿ ಲಿಂಗಾಯತ ಸಾ: ತೋನಸಳ್ಳಿ (ಟಿ) ಗ್ರಾಮ ಹಾ:ವ: ಶಹಾಬಜಾರ ಲಾಲ ಹನುಮಾನ ಗುಡಿ ಹತ್ತಿರ ಕಲಬುರಗಿ ಅಂತಾ ತಿಳಿಸಿದ್ದು, ಈತನ ಎದುರುಗಡೆ ನಗದು ಹಣ 4340/- ರೂ ಮತ್ತು ಕೆಲವು ಇಸ್ಪೇಟ ಎಲೆಗಳು ದೊರೆತವು 2) ವೀರಭದ್ರಯ್ಯ ತಂದೆ ಮಡಿವಾಳಯ್ಯ ಮಠಪತಿ ವ:36 ವರ್ಷ ಉ: ಒಕ್ಕಲುತನ ಜಾತಿ ಜಂಗಮ ಸಾ: ತೋನಸಳ್ಳಿ (ಟಿ) ಗ್ರಾಮ ಹಾ:ವ: ಸದಾಶಿವ ನಗರ ರಾಮ ಮಂದಿರ  ಕಲಬುರಗಿ ಅಂತಾ ತಿಳಿಸಿದ್ದು, ಈತನ ಎದುರುಗಡೆ  ನಗದು ಹಣ 3,500/- ರೂ  ದೊರೆತವು. 3) ಸಂತೋಷ ತಂದೆ ಸಿದ್ಧಯ್ಯ ಮಠ ವ:37 ವರ್ಷ ಉ:ಖಾಸಗಿ ಕೆಲಸ ಜಾತಿ ಜಂಗಮ ಸಾ: ಕಮಲಾಪೂರ ಗ್ರಾಮ ಹಾ:ವ: ದೇವಾ ನಗರ ಕಲಬುರಗಿ  ಅಂತಾ ತಿಳಿಸಿದ್ದು, ಈತನ ಎದುರುಗಡೆ ನಗದು ಹಣ 2,500/- ರೂ  ದೊರೆತವು4) ರಾಚಣ್ಣಾ ತಂದೆ ಸಿದ್ರಾಮ ಮಠಪತಿ ವ:36 ವರ್ಷ ಉ: ಮೆಕ್ಯಾನಿಕ ಕೆಲಸ ಜಾತಿ ಜಂಗಮ ಸಾ: ನಂದಿಕೂರ ಗ್ರಾಮ ಹಾ:ವ: ಮಿಲನ ಚೌಕ ಗಾಜಿಪೂರ ಕಲಬುರಗಿ ಅಂತಾ ತಿಳಿಸಿದ್ದು, ಈತನ ಎದುರುಗಡೆ ನಗದು ಹಣ 4,000/- ರೂ  ದೊರೆತವು.  ಮತ್ತು ಜೂಜಾಟದಲ್ಲಿ ತೊಡಗಿಸಿದ  ಕೆಳಗಡೆ ಇದ್ದ ಹಣ 3,000/- ರೂ ಇದ್ದವು. ಮೊದಲು ಎಲ್ಲಾ ಇಸ್ಪೇಟ ಎಲೆಗಳು ಒಟ್ಟುಗೂಡಿಸಿ ಎಣಿಕೆ ಮಾಡಲಾಗಿ 52  ಇಸ್ಪೇಟ ಎಲೆಗಳು ಇದ್ದವು. ತದನಂತರ ಎಲ್ಲಾ ಹಣ ಒಟ್ಟುಗೂಡಿಸಿ ಎಣಿಕೆ ಮಾಡಲಾಗಿ  ಒಟ್ಟು ನಗದ ಹಣ 17,340/-ರೂ  ಇದ್ದವು.  ಸದರಿ ಹಣ ಮತ್ತು ಇಸ್ಪೇಟಗಳನ್ನು ಜಪ್ತಿ ಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 10-01-2023 ರಂದು ಮಧ್ಯಾಹ್ನ 02-00 ಗಂಟೆಗೆ ನಾನು ಕಛೇರಿಯಲ್ಲಿದ್ದಾಗ ಕಲಬುರಗಿ ನಗರದ ಡಾ||ಬಿ.ಆರ್.ಅಂಬೇಡ್ಕರ ಡಿಗ್ರಿ ಕಾಲೇಜ ಕಂಪೌಂಡ ಎದುರುಗಡೆ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದಿದ್ದು ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ಫೋನ್ ಮೂಲಕ ಮಾಹಿತಿ ನೀಡಿ ಅವರ ಮಾರ್ಗದರ್ಶನದಲ್ಲಿ ಸದರಿ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಇಬ್ಬರೂ ಸರ್ಕಾರಿ ಪಂಚರನ್ನು ಮತ್ತು ಪತ್ರಾಂಕಿತ ಅಧಿಕಾರಿಯವರನ್ನು ಬರ ಮಾಡಿಕೊಳ್ಳಲು ಮಾನ್ಯ ಉಪ ಪೊಲೀಸ್ ಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ, ಕಲಬುರಗಿ ರವರಿಗೆ ಪತ್ರದ ಮುಖಾಂತರ ಕೋರಿದ್ದು, ಅದರಂತೆ ಮಾನ್ಯ ಸಹಾಯಕ ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ ಕಲಬುರಗಿ ರವರಿಗೆ ಜಪ್ತಿಪಡಿಸಿಕೊಂಡ ಗಾಂಜಾವನ್ನು ಅಳತೆ ಮತ್ತು ತೂಕ ಮಾಡಲು ಒಬ್ಬ ಸಿಬ್ಬಂದಿಯನ್ನು ನಿಯೋಜಿಸಿ ಅಳತೆ ಮತ್ತು ತೂಕ ಮಾಡುವ ಯಂತ್ರದೊಂದಿಗೆ ಕಳುಹಿಸಿಕೊಡಲು ಪತ್ರದ ಮುಖಾಂತರ ಕೋರಿದ್ದು ಇರುತ್ತದೆ.  ಅದರಂತೆ ಮಧ್ಯಾಹ್ನ 2-45 ಗಂಟೆ ಸುಮಾರಿಗೆ ಪಂಚರಾದ 1) ಶ್ರೀ ರಮೇಶಕುಮಾರ ತಂದೆ ಭೀಮರಾಯ ಸುಬೇದಾರ, ವ:22 ವರ್ಷ ಜಾ:ಬೇಡರ,  ಉ:ದ್ವೀತಿಯ ದರ್ಜೆ ಸಹಾಯಕರು, ಪೊಲೀಸ್ ಆಯುಕ್ತರ ಕಾರ್ಯಾಲಯ, ಸಾ:ಕಮಲನಗರ, ಕಲಬುರಗಿ,  ಮೊ.ನಂ.8951419947, 2) ಶ್ರೀ ಸಂತೋಷ ತಂದೆ ಕುಬೇರ ಮಾಳಗೆ, ವ:35 ವರ್ಷ, ಜಾತಿ:ಎಸ್.ಸಿ.,   ಉ:ದ್ವೀತಿಯ ದರ್ಜೆ ಸಹಾಯಕರು, ಪೊಲೀಸ್ ಆಯುಕ್ತರ ಕಾರ್ಯಾಲಯ, ಕಲಬುರಗಿ, ಸಾ:ಮನೆ ನಂ.24(ಬಿ), ಡಿಎಆರ್ ಲೈನ್, ಪೊಲೀಸ್ ಕ್ವಾಟರ್ಸ, ಕಲಬುರಗಿ ಮೊ.ನಂ.9535166800 ರವರನ್ನು ನಿಯೋಜಿಸಿ ಕಳುಹಿಸಿಕೊಟ್ಟಿದ್ದು, ಅಲ್ಲದೇ ಪತ್ರಾಂಕಿತ ಅಧಿಕಾರಿಯಾಗಿ ಶ್ರೀ ಶರಣಬಸಪ್ಪ ರೆಡ್ಡಿ, ಸಹಾಯಕ ಆಡಳಿತಾಧಿಕಾರಿಗಳು, ಪೊಲೀಸ್ ಆಯುಕ್ತರ ಕಾರ್ಯಾಲಯ ಕಲಬುರಗಿ ರವರು ಕೂಡಾ ಹಾಜರಾಗಿದ್ದು ಇರುತ್ತದೆ. ಮತ್ತು ಶ್ರೀ ಶಶಿಧರ ತಂದೆ ಮನೋಹರ ದೇವದುರ್ಗ ಇವರು ಹಾಗೂ ಅಳತೆ ಮತ್ತು ತೂಕ ಮಾಡುವ ಕುರಿತು ತೂಕ ಮತ್ತು ಅಳತೆ ಯಂತ್ರದೊಂದಿಗೆ ಅವರು ಕೂಡಾ ಮಧ್ಯಾಹ್ನ 2-45 ಗಂಟೆಗೆ  ಹಾಜರಾಗಿದ್ದು ಇರುತ್ತದೆ.  ನಂತರ ಸಿ.ಸಿ.ಬಿ. ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯವರಾದ 1) ಬಸವರಾಜ ಪಿ.ಎಸ್.ಐ. 2) ರವೀಂದ್ರಕುಮಾರ ಸಿ.ಹೆಚ್.ಸಿ-48, 3) ವೇದರತ್ನಂ ಸಿ.ಹೆಚ್.ಸಿ-51, 4) ಮಲ್ಲಿಕಾರ್ಜುನ ಸಿ.ಹೆಚ್.ಸಿ-79, , 5) ಕೇಸುರಾಯ ಸಿ.ಹೆಚ್.ಸಿ-223, 6) ಸುನೀಲಕುಮಾರ ಸಿ.ಹೆಚ್.ಸಿ-167, 7) ಅಂಬಾಜಿ ಪಿ.ಸಿ-131, 8) ಅರವಿಂದ ಪಿ.ಸಿ-955, 9) ಶ್ರೀಶೈಲ ಪಿ.ಸಿ-692 10) ಯಲ್ಲಪ್ಪ ಸಿಪಿಸಿ-220, 11) ಶಿವಕುಮಾರ ಸಿಪಿಸಿ-16715, 12) ಅಶೋಕ ಕಟಕೆ ಸಿಪಿಸಿ-966,  13) ಅಶೋಕ ಸಿಪಿಸಿ-647, 14) ನಾಗರಾಜ  ಸಿಪಿಸಿ-1257 ರವರುಗಳು ಹಾಜರಿದ್ದು, ಅವರನ್ನು ಪರಿಚಯಿಸಿ ಕಲಬುರಗಿ ನಗರದ ಡಾ||ಬಿ.ಆರ್.ಅಂಬೇಡ್ಕರ ಡಿಗ್ರಿ ಕಾಲೇಜ ಕಂಪೌಂಡ ಎದುರುಗಡೆ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದು, ಸದರಿ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ.   ಅಲ್ಲದೇ ಶ್ರೀ ಶಶಿಧರ ದೇವದುರ್ಗ ತೂಕ ಮತ್ತು ಅಳತೆ ಮಾಡುವವರಿಗೆ ದಾಳಿ ಕಾಲಕ್ಕೆ ದೊರೆತ ಗಾಂಜಾ ಅಳತೆ ಮಾಡಿಕೊಡುವಂತೆ ಕೇಳಿಕೊಂಡ ಮೇರೆಗೆ ಅವರು ಕೂಡಾ ಒಪ್ಪಿಕೊಂಡಿರುತ್ತಾರೆ. ನಂತರ ನಾನು, ಪಂಚರು, ಪತ್ರಾಂಕಿತ ಅಧಿಕಾರಿಗಳು, ತೂಕ ಮತ್ತು ಅಳತೆ ಮಾಡುವವರು ಹಾಗೂ ಸಿ.ಸಿ.ಬಿ. ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ಜನರು ಎಲ್ಲರೂ ಕೂಡಿ ಮಧ್ಯಾಹ್ನ 3-00 ಗಂಟೆಗೆ  ಸರ್ಕಾರಿ ಜೀಪ ನಂ.ಕೆಎ-32-ಜಿ-1249 ನೇದ್ದರಲ್ಲಿ  ಹೊರಟಿದ್ದು, ಉಳಿದ ಸಿಬ್ಬಂದಿಯವರು ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ಹೊರಟು ಮಾಹಿತಿ ಬಂದ ಸ್ಥಳದಂತೆ ನಾವು ಕಲಬುರಗಿ ನಗರದ ಡಾ||ಬಿ.ಆರ್.ಅಂಬೇಡ್ಕರ ಡಿಗ್ರಿ ಕಾಲೇಜ ಹತ್ತಿರ ಮಧ್ಯಾಹ್ನ 3-20 ಗಂಟೆ ಸುಮಾರಿಗೆ ತಲುಪಿ ಎಲ್ಲರೂ ಜೀಪಿನಿಂದ ಇಳಿದು ಅಲ್ಲಿಯೇ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಡಾ||ಬಿ.ಆರ್.ಅಂಬೇಡ್ಕರ ಡಿಗ್ರಿ ಕಾಲೇಜ ಕಂಪೌಂಡ ಎದುರುಗಡೆ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಗಾಂಜಾ ಮಾರುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಮಧ್ಯಾಹ್ನ 3-30  ಗಂಟೆಗೆ ನಾನು ಮತ್ತು ಸಿಬ್ಬಂದಿಯವರು ಒಮ್ಮೇಲೇ ದಾಳಿ ಮಾಡಿ ಸದರಿ ವ್ಯಕ್ತಿಯನ್ನು ಹಿಡಿದಿದ್ದು, ನಂತರ ಆತನ ಹೆಸರು ವಿಳಾಸ ವಿಚಾರಿಸಲು ಚಕ್ರದಾರಿ ತಂದೆ ಚಂಪಾಲಾಲ ಪಾಟೀಲ ವಯಾ:30 ವಷರ್ಷ, ಜಾ:ಎಸ್.ಸಿ ಮಂಗಾರವಾಡಿ, ಉ: ಆಟೋ ಚಾಲಕ ಸಾ: ಬಾಪುನಗರ, ಕಲಬುರಗಿ ನಗರ.  ಅಂತಾ ತಿಳಿಸಿದನು. ನಂತರ ಪಂಚರ ಸಮಕ್ಷಮ ಆರೋಪಿತನ ಕೈಯಲ್ಲಿಒಂದು ಬಿಳಿಯ ಪ್ಲಾಸ್ಟಿಕ್ ಚೀಲ ದೊರತಿದ್ದು ಅದರಲ್ಲಿ ಗಾಂಜಾ ಇದ್ದಿದ್ದನ್ನು ನೋಡಿ ಪರಿಶೀಲಿಸಿ ಅದು ಎಲೆ ಬೀಜ ಮಿಶ್ರಿತ ಹಸಿ ಗಾಂಜಾ ಆಗಿದ್ದು  ಅದನ್ನು ಶ್ರೀ ಶಶಿಧರ ದೇವದುರ್ಗ ಇವರಿಂದ ತೂಕ ಮಾಡಿಸಿ ನೋಡಲಾಗಿ ಒಟ್ಟು 1 ಕೆ.ಜಿ. 200 ಗ್ರಾಂ ಇದ್ದು, ಪ್ರತಿ ಕೆ.ಜಿ.ಗೆ ರೂ.10,000/- ಅಂತೆ ಒಟ್ಟು 1. ಕೆ.ಜಿ. 200 ಗ್ರಾಂ ಗಾಂಜಾಕ್ಕೆ ಅ.ಕಿ. ರೂ.12,000/- ಇರುತ್ತದೆ.  ಸದರಿ ಗಾಂಜಾದಿಂದ ರಾಸಾಯನಿಕ ಪರೀಕ್ಷೆಗೆ ಕಳುಹಿಸಿಕೊಡಲು ಮಾದರಿಗಾಗಿ ಸದರಿ ಪ್ಲಾಸ್ಟಿಕದಿಂದ ಅಂದಾಜು 50 ಗ್ರಾಂ ತೂಕದಷ್ಟು ಗಾಂಜಾವನ್ನು ಪ್ರತ್ಯೇಕವಾಗಿ ತೆಗೆದು ಒಂದು ಬಿಳಿಯ ಬಟ್ಟೆಯಲ್ಲಿ ಹಾಕಿ ಬಾಯಿ ಹೊಲೆದು ಅದರ ಮೇಲೆ “M” ಎಂಬ ಇಂಗ್ಲೀಷ ಅಕ್ಷರದ ಅರಗಿನಿಂದ ಸೀಲ್ ಮಾಡಿ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿದ್ದು,   ಉಳಿದ 1 ಕೆ.ಜಿ. 150 ಗ್ರಾಂ ಗಾಂಜಾವನ್ನು ಒಂದು ಬಿಳಿ ಬಟ್ಟೆಯಲ್ಲಿ ಹಾಕಿ ಬಾಯಿ ಹೊಲೆದು ಅದರ ಮೇಲೆ “M” ಎಂಬ ಇಂಗ್ಲೀಷ ಅಕ್ಷರದ ಅರಗಿನಿಂದ ಸೀಲ್ ಮಾಡಿದ್ದು ಇರುತ್ತದೆ.  ನಂತರ ಆರೋಪಿತನ ದೇಹವನ್ನು ಅಂಗಶೋಧನೆ ಮಾಡಲು ಕೇಳಿದಾಗ ಅವರು ಯಾವುದೇ ಅಭ್ಯಂತರ ಇರುವುದಿಲ್ಲ ಅಂತಾ ತಿಳಿಸಿದಾಗ ಪತ್ರಾಂಕಿತ ಅಧಿಕಾರಿಗಳಾದ ಶ್ರೀ ಶರಣಬಸಪ್ಪ ರೆಡ್ಡಿ ಸಹಾಯಕ ಆಡಳಿತಾಧಿಕಾರಿ, ರವರು ಆರೋಪಿತನಾದ ಚಕ್ರದಾರಿ ತಂದೆ ಚಂಪಾಲಾಲ ಪಾಟಿಲ ಈತನ ದೇಹ ಅಂಗ ಶೋಧನೆ ಮಾಡಲು ಆತನ ಜೇಬಿನಲ್ಲಿ ಒಂದು ಸ್ಯಾಮಸಂಗ ಮೊಬೈಲ್ ದೊರೆತ್ತಿದ್ದು ಅದರ ನಂಬರ ವಿಚಾರಿಸಲು 9060177994 ಅಂತಾ ತಿಳಿಸಿದ್ದು, ಹಾಗೂ ಸದರಿ ಮೋಬೈಲ್ ನ ಐ.ಎಮ್.ಇ.ಐ. ನಂಬರ ಪರಿಶೀಲಿಸಲು (355458115997216/01,355459115997214/01) ಇರುತ್ತದೆ. ಸದರಿ ಮೋಬೈಲ್ ಅಂದಾಜ ಕಿಮ್ಮತ್ತು ರೂ.3,000/- ಇದ್ದು, ಸದರಿ ಮೋಬೈಲದಿಂದ ಗಾಂಜಾ ಗಿರಾಕಿಗಳನ್ನು ಕರೆಯಿಸುತ್ತಿದ್ದೇನೆ ಎಂದು ತಿಳಿಸಿರುತ್ತಾನೆ.  ನಂತರ ಇನ್ನೊಂದು ಜೇಬಿನಲ್ಲಿ ರೂ.400/- ನಗದು ಹಣ ದೊರೆತಿದ್ದು ಇರುತ್ತದೆ.  ಆರೋಪಿತನಿಗೆ ವಿಚಾರಿಸಿದಾಗ ಗಾಂಜಾ ಮಾರಾಟದಿಂದ ಬಂದ ಹಣ ಇರುತ್ತದೆ ಅಂತಾ ತಿಳಿಸಿರುತ್ತಾನೆ. ಸದರಿ ಮಾಲು ಜಪ್ತಿ ಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ:10/01/2023 ರಂದು ಸಾಯಾಂಕಾಲ 5-00 ಗಂಟೆಯಿಂದ 6-00 ಗಂಟೆಯ ಅವದಿಯಲ್ಲಿ  ಸದರಿ ಆರೋಪಿಯು ಕಲಬುರಗಿನಗರ ಚುನ್ನಾ ಭಟ್ಟಿ ಸರ್ಕಲ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿರುತ್ತಾರೆ ಅಂತಾ ಮಾಹಿತಿ ಬಂದ ಮೇರೆಗೆ ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿ ಆಟಕ್ಕೆ ಉಪಯೋಗಿಸಿದ ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ ಹಾಗೂ ನಗದು ಹಣ 1500/- ರೂ ಜಪ್ತಿ ಪಡಿಸಿ ದೂರು ದಾಖಲಿಸಿದ್ದು ಎಂದು ವರದಿ ನೀಡಿರುತ್ತಾರೆ. ಕಾರಣ ಸದರಿ ಆರೋಪಿಯರ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರಾಘವೇಂದ್ರ ನಗರ ಪೊಲೀಸ ಠಾಣೆ :- ಶ್ರೀಮತಿ ರಾಂಪತಿ ವಯ; 48 ವರ್ಷ ನಿವಾಸಿಯನ್ನು ದಿನಾಂಕ; 21/11/2022 ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾಳೆ. ನಿವಾಸಿಯು ತನಗೆ ಏನಾಗುತ್ತಿದೆ ಎಂದು ಹೇಳಲು ಬಾರದ ಸ್ಥಿತಿಯಲ್ಲಿ ಇರುತ್ತಾಳೆ ನಿವಾಸಿಗೆ ಶಾರೀರಿಕ ಸೂಕ್ಷ್ಮ ಜಾಗದಲ್ಲಿ (ಜೆನೆಟಿಕ್ ಪಾರ್ಟ) ದಲ್ಲಿ ಲಿಗ್ಮೆಂಟ್ ಗಡ್ಡೆಯಾಗಿದ್ದು ಅದು ಕೀವು ತುಂಬಿ ಸೂಕು ಆಗಿರುವ ಪ್ರಯುಕ್ತ ಹೆಚ್ಚಿನ ಚಿಕಿತ್ಸೆಗಾಗಿ ಐ.ಸಿ.ಯು ವಾರ್ಡಿನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಇವಳಿಗೆ ದಿನನಿತ್ಯದ ಚಟುವಟಿಕೆಗಳು ಆಯಾಗಳಿಂದಲೆ ಮಾಡಸಬೇಕಾಗುತ್ತಿತ್ತು ಹಾಗೂ ನಿವಾಸಿಯ ಕುರಿತು ದಿನಾಂಕ: 25/11/2022 ರಂದು ಅಧೀಕ್ಷಕರು ಮತ್ತು ಸಮಾಜ ವಿಷಯ ಪರೀಶೀಲಕರು ವೈದ್ಯಾಧಿಕಾರಿಗಳಿಗೆ ಭೇಟಿ ನೀಡಿ ವಿಚಾರಿಸಲಾಯಿತು. ನಿವಾಸಿಯ ಮೆದುಳು ಜ್ವರ ಏರುತ್ತಿದೆ ಬೆನ್ನಿನಲ್ಲಿ ನೀರು ತುಂಬಿದೆ, ರಕ್ತದಲ್ಲಿ ಇನ್ಫೆಕ್ಷನ ಆಗಿದೆ ಹಾಗೂ ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ   ಬೇರೆ ಬೇರೆ ರೀತಿಯ ಹೊಸ ಖಾಯಿಲೆಗಳು ಮತ್ತು ಕಿಡ್ನೆ ಸ್ಪಂದಿಸುತ್ತಿಲ್ಲಾ ನಿವಾಸಿಯು ಬದುಕುವ ಸಾದ್ಯತೆ ಕಡಿಮೆ ಇದೆ ಇನ್ನೂ 20 ದಿವಸಗಳ ವರೆಗೆ ನಿರಂತರ ಚಿಕಿತ್ಸೆ ನೀಡಲಿದ್ದು OBSERVATION  ಅಲ್ಲಿ ಇಡಲಾಗಿದೆ. ಎಂದು ವೈದ್ಯರು ತಿಳಿಸಿರುತ್ತಾರೆ. ನಿವಾಸಿಯ ಆರೋಗ್ಯ ಸ್ಥಿತಿ ಗಂಭಿರವಾಗಿರುವ ಕಾರಣ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾಳೆ. ಇಂದು ಬೆಳಿಗ್ಗೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಾದ ಶ್ರೀಮತಿ ರಾಮಬಾಯಿ ಇವರು ನಿವಾಸಿಯ ಅನಾರೋಗ್ಯ ಕಂಡು ಬಂದ ತಕ್ಷಣ ಅಂಬುಲೆನ್ಸದಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲೆ ಮಾಡಲಾಯಿತು. ಸ್ವಲ್ಪ ಸಮಯದ ನಂತರ ಕಾರ್ಯನಿರ್ವಹಿಸುತ್ತಿರುವ ವೈದ್ಯರು ತಪಾಸಣೆ ನಡೆಸಿ ಸದರಿ ನಿವಾಸಿ ಮರಣ ಹೊಂದಿದ್ದನ್ನು ಧೃಢಪಡಿಸಿರುತ್ತಾರೆ. ಹಾಗೂ ಮುಂದಿನ ಅಗತ್ಯ ಕ್ರಮಗಳನ್ನು ಕೈಕೊಂಡಿರುತ್ತಾರೆ. ಕಾರಣ ಸದರಿ ನಿವಾಸಿಯ ಸಾವಿನಲ್ಲಿ ಯಾರ ಮೇಲೂ ಯಾವುದೇ ರೀತು ಸಂಶಯ ಇರುವದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ. ಅಂತಾ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ನಾನು ಸುಮಾರು 2 ವರ್ಷಗಳಿಂದ ರಾಜಶೇಖರ ಪಾಟೀಲ್ ಇವರ ಪೆಂಟ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಸ್ಟೇಷನ ಏರಿಯಾದ ಅಪ್ಪರ ಲೈನ್ನಲ್ಲಿ ಇರುವ ನಮ್ಮ ಮಾಲೀಕರ ಮನೆಯ ಕೋಣೆಯಲ್ಲಿ ವಾಸವಾಗಿರುತ್ತೆನೆ. ನಾನು ದಿನಾಲೂ ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಬಂದು ರಾತ್ರಿ ಮನೆಗೆ ಹೋಗುವ ಮುಂಚೆ ರಾತ್ರಿ 8 ರಿಂದ 8.30 ಗಂಟೆಯ ಅವಧಿಯೊಳಗೆ ನಮ್ಮ ಮಾಲೀಕರ ಪೆಂಟ್ಗಳನ್ನು ಇಡುವ ಗೋದಾಮಗೆ ಹೋಗಿ ಚೆಕ್ ಮಾಡಿಕೊಂಡು ಬರುತ್ತಿದ್ದೆನು. ಇದಲ್ಲದೇ ನಮ್ಮ ಮಾಲೀಕರಿಗೆ ಮತ್ತು ವಿವೇಕಾನಂದ ಬಿರಾದಾರ, ಅವರ ಅಣ್ಣ-ತಮ್ಮಂದಿರೊಂದಿಗೆ ಗೋದಾಮ ಮಾಡಿರುವ 2 ಕೋಣೆಯ ವಿಷಯಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಜಗಳವಾಗಿ ಕೊರ್ಟ ಕಛೇರಿ ನಡೆದಿರುತ್ತವೆ. ಎಂದಿನಂತೆ ನಾನು ದಿನಾಂಕ: 06.01.2023 ರಂದು ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋಗಿ ನಮ್ಮ ಮಾಲೀಕರು ರಾತ್ರಿ 8:15 ಗಂಟೆಯ ಸುಮಾರಿಗೆ ಗೋದಾಮ ಕಡೆಗೆ ಹೋಗಿ ಚೆಕ್ ಮಾಡಿಕೊಂಡು ಬರಲು ಹೇಳಿದಂತೆ ರಾತ್ರಿ 8:25 ಗಂಟೆಯ ಸುಮಾರಿಗೆ ಗೋದಾಮಗೆ ಹೋದಾಗ ನಮ್ಮ ಮಾಲೀಕರ ಸಂಬಂಧಿಕರಾದ ವಿವೇಕಾನಂದ ಬಿರಾದಾರ, ವಿನಾಯಕ ಬಿರಾದಾರ ಜೊತೆಗೆ ಇನ್ನೂ 3 ಜನ ಸೇರಿಕೊಂಡು ನೀನು ಈ ಗೋದಾಮ ಕಡೆಗೆ ಬರಬೇಡ, ಗೋದಾಮ ಲಾಕ್ ಮಾಡಿದ ಬಗ್ಗೆ ಫೋಟೊ, ವಿಡಿಯೋಗಳನ್ನು ಮಾಡಬೇಡ ಅಂತಾ ಹೇಳಿದಾಗ ನಮ್ಮ ಮಾಲೀಕರು ಮಾಡಿಕೊಂಡು ಬಾ ಅಂತಾ ಹೇಳಿದಾರೆ ಅಂತಾ ಹೇಳಲು ವಿವೇಕಾನಂದ ಬಿರಾದಾರ ಇವನು ಮಗನೇ ನೀನು ನನಗೆ ಎದುರು ಮಾತನಾಡುತ್ತಿ ಅಂತಾ ಬೈಯ್ಯುತ್ತಿದ್ದಾಗ ನಾನು ಹೇದರಿ ಅಲ್ಲಿಂದ ಅವಸರದಲ್ಲಿ ಬರುವಾಗ ವಿವೇಕಾನಂದನು ಓಡಿ ಬಂದು ನನಗೆ ಹಿಡಿದು ತಡೆದು ನಿಲ್ಲಿಸಿ ಕೈಯಿಂದ ಬೆನ್ನು ಮೇಲೆ ಹೊಡೆದಿರುತ್ತಾನೆ. ನಂತರ ವಿನಾಯಕ ಬಿರಾದಾರ ಇತನು ಬಂದು ಸಣ್ಣ ಬಡಿಗೆಯಿಂದ ಭುಜದ ಮೇಲೆ ಹೊಡೆದಿರುತ್ತಾನೆ. ಅವರ ಜೊತೆಗಿದ್ದ ಇನ್ನೂ 3 ಜನ ಚೊಟುದ್ದು ಇದ್ದಾನ ಮಗಾ ಎಷ್ಟು ಮಾತನಾಡುತ್ತಾನ ನೋಡ್ರಿ ಅಂತಾ ಅಂದು ಖಲ್ಲಾಸ ಮಾಡ್ರಿ ಮಗನಿಗೆ ಅಂತಾ ಜೀವ ಬೇದರಿಕೆ ಹಾಕಿರುತ್ತಾರೆ. ನನಗೆ ಹೊಡೆ-ಬಡೆ ಮಾಡಿದ್ದು, ಸಣ್ಣ-ಪುಟ್ಟ ಗಾಯಗಳು ಆಗಿರುವುದರಿಂದ ಆಸ್ಪತ್ರೆಗೆ ತೊರಿಸಿಕೊಂಡಿರುವುದಿಲ್ಲಾ ಮತ್ತು ನನಗೆ ಹೊಡೆ-ಬಡೆ ಮಾಡಿ ಬೇದರಿಕೆ ಹಾಕಿರುವುದರಿಂದ ಭಯಗೊಂಡು ನಮ್ಮ ಊರಿಗೆ ಹೋಗಿ ಇಂದು ತಡವಾಗಿ ಬಂದು ದೂರು ಸಲ್ಲಿಸಿರುತ್ತೆನೆ ಕಾರಣ ನನ್ನ ಮೇಲೆ ಹೊಡೆ-ಬಡೆ ಮಾಡಿ ಜೀವ ಬೇದರಿಕೆ ಹಾಗೂ ಅವಾಚ್ಯವಾಗಿ ಬೈದವರ ವಿರುದ್ದ ಕಾನೂನು ಕ್ರಮ ಕೈಕೊಳ್ಳುವಂತೆ ಮಾನ್ಯರವರಲ್ಲಿ ವಿನಂತಿ ಅಂತಾ ನೀಡಿದ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 12-01-2023 05:31 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080