ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ: 08-12-2022 ರಂದು ಮದ್ಯ ರಾತ್ರಿ ೦೧:೦೦ ಗಂಟೆಯಿಂದ ೦೪:೦೦ ಗಂಟೆಯ ಅವದಿಯಲ್ಲಿ ಫಿರ್ಯಾದಿ ತಮ್ಮ ಮನೆಯಲ್ಲಿಟ್ಟಿದ್ದ ೧) ಬೆಳ್ಳಿ ತೆಂಬಿಗೆ ಗ್ರಾಂ ೨೫೦ ಗ್ರಾಂ ಅ.ಕಿ 11250/-ರೂ ೨) ಎರಡು ಬೆಳ್ಳಿ ಗ್ಲಾಸ್ ಗ್ರಾಂ ೧೦೦ ಗ್ರಾಂ ಅ.ಕಿ 4500/- ೩) ಎರಡು ಬೆಳ್ಳಿ ಬಟಲಗಳು ಗ್ರಾಂ ೨೦೦ ಗ್ರಾಂ ಅ.ಕಿ 9000/- ೪) ಎರಡು ಬೆಳ್ಳಿ ಚಮಚೆ ಗ್ರಾಂ ೫೦ ಗ್ರಾಂ ಅ.ಕಿ 2250/- ೫) ೬ ಬೆಳ್ಳಿ ಕೊಯಿನ್‌ಗಳು ಗ್ರಾಂ ೨೦೦ ಗ್ರಾಂ ಅ.ಕಿ 9000/- ರೂ ೭) ಎರಡು ಕುಂಕಮ ಡೆಬ್ಬಿ ೫೦ ಗ್ರಾಂ ಅ.ಕಿ 2250/- ೮) ಎರಡು ಬೆಳ್ಳಿ ಬಳೆಗಳು ೫೦ ಗ್ರಾಂ ಅ.ಕಿ 2250/- ೯) ಬಂಗಾರದ ೫ ಗ್ರಾಂ ಚೈನ್ ಅ.ಕಿ 18000/-ರೂ ಹೀಗೆ ಒಟ್ಟು ಬೆಳ್ಳಿ ಆಭರಣಗಳು ೯೦೦ ಗ್ರಾಂ, ಅ.ಕಿ 40500/-ರೂ, ೫ ಗ್ರಾಂ ಬಂಗಾರ ಚೈನ ಅ.ಕಿ 18000/-ರೂ ಒಟ್ಟು 58500/- ಕಿಮ್ಮತ್ತಿನ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ:09-12-2022 ರಂದು 4:45 ಪಿಎಮ್ಕ್ಕೆ ಶ್ರೀ ಗಡ್ಡೆಪ್ಪ ಸಿಹೆಚ್ಸಿ:165 ಫರಹತಾಬಾದ ಠಾಣೆ ರವರು ಠಾಣೆಗೆ ಹಾಜರಾಗಿ ಮುದ್ದೆ ಮಾಲು, ಜಪ್ತಿ ಪಂಚನಾಮೆ, 5 ಜನ ಆರೋಪಿತರೊಂದಿಗೆ ಮುಂದಿನ ಕ್ರಮಕ್ಕಾಗಿ ವರದಿ ಹಾಜರ ಪಡಿಸಿದ್ದರ ಸಾರಾಂಶವೇನೆಂದರೆ,  ದಿನಾಂಕ:09-12-2022 ರಂದು ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ ನಾನು ಪೊಲೀಸ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ತಾಡತೆಗನೂರ ಸೀಮಾಂತರದ ಲಕ್ಷ್ಮೀ ಗುಡುಯ ಹತ್ತಿರ ಸಾರ್ವಜನಿಕ ಸ್ಥಳದ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ನಮ್ಮ ಠಾಣಾ ಸಿಬ್ಬಂದಿ ಜನರಾದ 1) ಶಿವರಾಜ ಪಿಸಿ 475 2) ಮಹೇಬೂಬ ಸಿಪಿಸಿ:271 3) ಆನಂದ ಸಿಪಿಸಿ:290 4) ಕಾಶಪ್ಪ ಸಿಪಿಸಿ:269 ಇವರಿಗೆ ಜೂಜಾಟದ ಬಗ್ಗೆ ಮಾಹಿತಿ ತಿಳಿಸಿ ಮಾನ್ಯ ಪಿ.ಐ ಸಾಹೇಬರು ಫರಹತಾಬಾದ ರವರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಠಾಣೆಯಿಂದ 3.00 ಪಿಎಮ್ ಗಂಟೆಗೆ ಸಿಬ್ಬಂದಿ ಜನರೊಂದಿಗೆ ಖಾಸಗಿ ವಾಹನದಲ್ಲಿ  ಕರೆದುಕದೊಂಡು ಹೊರಟಿರುತ್ತೇನೆ. ಭಾತ್ಮೀ ಸ್ಥಳಕ್ಕೆ ಹೋಗುವಾಗ ದಾರಿ ಹೊಕ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೂ ಕೂಡಾ ಮಾಹಿತಿ ತಿಳಿಸಿ ನಮ್ಮ ಜೀಪನಲ್ಲಿ ಕರೆದುಕೊಂಡು ಹೊರಟು ಭಾತ್ಮಿ ಸ್ಥಳದ ಹತ್ತಿರ 3:15 ಪಿಎಮ್ ಗಂಟೆಗೆ ಹೋಗಿ ಲಕ್ಷ್ಮೀ ಗುಡಿಯ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಕುಳಿತು ಕೆಲವು ಜನರು ದುಂಡಾಗಿ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು  3:20 ಗಂಟೆಗೆ ಏಕಕಾಲಕ್ಕೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ ಕೆಲವು ಜನರು ಓಡಿ ಹೋಗಿದ್ದು ಇನ್ನೂ ಕೆಲವು ಜನರು ಸಿಕ್ಕಿದ್ದು ಸಿಕ್ಕ ಜನರಿಗೆ ಹಿಡಿದು ಅವರಿಗೆ ಅಂಗಶೋಧನೆ ಮಾಡಿ ಹೆಸರು ವಿಳಾಸ ಕೇಳಲು 1) ಮಂಜುನಾಥ ತಂದೆ ಶಿವಶರಣಪ್ಪ ನಡಕಟ್ಟಿ ವಯ||26 ವರ್ಷ ಉ||ಖಾಸಗಿ ಕೆಲಸ ಜಾ||ಕಬ್ಬಲಿಗ ಸಾ||ತಾಡತೆಗನೂರ ತಾಜಿ|| ಕಲಬುರಗಿ ಅಂತಾ ತಿಳಿಸಿ ಈತನ ಹತ್ತಿರ 1370/- ರೂ ಸಿಕ್ಕಿದ್ದು 2) ಸಿದ್ದಾರಾಮ ತಂದೆ ಶಾಂತಪ್ಪ ಸಿರವಾಳ ವಯ||30 ವರ್ಷ ಉ||ಟಂಟಂ ಚಾಲಕ ಜಾ||ಲಿಂಗಾಯತ ಸಾ||ತಾಡತೆಗನೂರ ತಾಜಿ|| ಕಲಬುರಗಿ ಅಂತ ತಿಳಿಸಿ ಈತನ ಹತ್ತಿರ 850/- ರೂ ಸಿಕ್ಕಿದ್ದು 3) ಶರಣು ತಂದೆ ಶಂಕ್ರಪ್ಪ ಸಿರವಾಳ ವಯ||31 ವರ್ಷ ಉ||ವ್ಯಾಪಾರ ಕೆಲಸ ಜಾ||ಲಿಂಗಾಯತ ಸಾ||ತಾಡತೆಗನೂರ ತಾಜಿ||ಕಲಬುರಗಿ ಅಂತ ತಿಳಿಸಿ ಈತನ ಹತ್ತಿರ 950/- ರೂ ಸಿಕ್ಕಿದ್ದು 4) ಅಣ್ಣಾರಾಯ ತಂದೆ ಚನ್ನಪ್ಪ ಜೋಗುರ  ವಯ||27 ವರ್ಷ ಉ|| ಕೂಲಿ ಕೆಲಸ  ಜಾ||ಲಿಂಗಾಯತ ಸಾ|| ತಾಡತೆಗನೂರ ತಾಜಿ||ಕಲಬುರಗಿ ಅಂತಾ ತಿಳಿಸಿ ಈತನ ಹತ್ತಿರ 550/- ರೂ ಸಿಕ್ಕಿದ್ದು 5) ವಿಜಯಕುಮಾರ ತಂದೆ ತುಕಾರಾಮ ಚವ್ಹಾಣ ವಯ||31 ವರ್ಷ ಉ||ಕೂಲಿ ಕೆಲಸ ಜಾ||ಲಂಬಾಣಿ ಸಾ|| ಕವಲಗಾ ತಾಂಡಾ ತಾಜಿ|| ಕಲಬುರಗಿ ಅಂತಾ ತಿಳಿಸಿ ಈತನ ಹತ್ತಿರ 900/- ರೂ ಸಿಕ್ಕಿದ್ದು, ಸದರಿ ಸ್ಥಳದಲ್ಲಿ 52 ಇಸ್ಪೇಟ್ ಎಲೆಗಳು ಹಾಗೂ ನಗದು ಹಣ 1250/- ರೂ ಸಿಕ್ಕಿದ್ದು, ಹೀಗೆ ಒಟ್ಟು ನಗದು 5870/- ರೂ ಸಿಕ್ಕಿದ್ದು, ಇವುಗಳನ್ನು ಪಂಚರ ಸಮಕ್ಷಮದಲ್ಲಿ 3:25 ಪಿಎಮ್ ಗಂಟೆಯಿಂದ 4:25 ಪಿಎಮ್ ಗಂಟೆಯವರೆಗೆ ಗುನ್ನೆ ಸ್ಥಳದಲ್ಲಿ ಕುಳಿತು ಜಪ್ತಿ ಪಂಚನಾಮೆ ಬರೆದು ಮುಗಿಸಲಾಯಿತು. ನಂತರ ಮುದ್ದೆಮಾಲು ಮತ್ತು ಆರೋಪಿತರೊಂದಿಗೆ 4:45 ಪಿಎಮ್ ಗಂಟೆಗೆ ಠಾಣೆಗೆ ಬಂದಿದ್ದು, ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರೂಗಿಸಲು ಕೋರಲಾಗಿದೆ ಅಂತ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 12-12-2022 03:56 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080