ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ ಠಾಣೆ -1 :- ದಿನಾಂಕ 09-11-2022 ರಂದು ಬೆಳಿಗ್ಗೆ ನನ್ನ ತಾಯಿ ನೀಲಮ್ಮಾ ಇವರು ಕಲಬುರಗಿ ಕಣ್ಣಿ ಮಾರ್ಕೆಟನಲ್ಲಿ ತರಕಾರಿ ಖರೀದಿ ಮಾಡಿಕೊಂಡು ಮಾರಾಟ ಮಾಡಿ ಮದ್ಯಾಹ್ನ ಮನೆಗೆ ಬರುತ್ತೆನೆ ಅಂತಾ ಮನೆಯಿಂದ ಹೋದಳು ಮದ್ಯಾಹ್ನ ನಾನು ಅವಳ ದಾರಿ ಕಾಯುತ್ತಾ ಮನೆಯಲ್ಲಿರುವಾಗ ಹೀರಾಪೂರ ಗ್ರಾಮದ ನಮ್ಮ ಅಣ್ಣತಮ್ಮಕಿಯ ಸುನೀಲಕುಮಾರ ತಂದೆ ನಾಗೇಂದ್ರಪ್ಪಾ ಇನಾಮದಾರ ಇವರು ನನಗೆ ಪೋನ ಮಾಡಿ ಮದ್ಯಾಹ್ನ ಅಂದಾಜು 12-10 ಗಂಟೆ ಸುಮಾರಿಗೆ ಕಣ್ಣಿ ಮಾರ್ಕೆಟ ಹತ್ತೀರ ನಾನು ಮತ್ತು ನಮ್ಮ ಓಣಿಯ ಶಿವಕುಮಾರ ತಂದೆ ಹಣಮಂತಪ್ಪಾ ಮದರಿ ಹಾಗೂ ಆಕಾಶ ತಂದೆ ಶಿವಶರಣಪ್ಪಾ ಸೊನ ಕಾಂಬಳೆ ಮೂರು ಜನರು ಇರುವಾಗ ನಿಮ್ಮ ತಾಯಿ ನೀಲಮ್ಮಾ ಇವರು ಕಣ್ಣಿ ಮಾರ್ಕೆಟ ಕಡೆಯಿಂದ ನಡೆದುಕೊಂಡು ಹೀರಾಪೂರ ಕಡೆಗೆ ಹೋಗುತ್ತೀರುವಾಗ ಹೀರಾಪೂರ ರಿಂಗ ರೋಡ ಕಡೆಯಿಂದ ಕೇಂದ್ರ ಬಸ್ಸ ನಿಲ್ದಾಣ ಕಡೆಗೆ ಹೋಗುವ ಕುರಿತು ಒಬ್ಬ ಕೃಜರ ಜೀಪ ಚಾಲಕ ತನ್ನ ಜೀಪನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಮ್ಮ ತಾಯಿಗೆ ಎದುರಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಿಮ್ಮ ತಾಯಿ ಪುಟಿದು ಕೆಳಗಡೆ ಬಿದ್ದಾಗ ಸದರ ಘಟನೆ ನೋಡಿದ ನಾನು ಮತ್ತು ಶಿವಕುಮಾರ ಹಾಗೂ ಆಕಾಶ ಮೂರು ಜನರು ಹೋಗಿ ರೋಡ ಮೇಲೆ ಬಿದ್ದ ನಿಮ್ಮ ತಾಯಿಯನ್ನು ಎಬ್ಬಿಸಿ ರೋಡ ಪಕ್ಕದಲ್ಲಿ ಮಲಗಿಸಿ ಅವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಕೃಜರ ಜೀಪ ನಂಬರ ನೋಡಲು ಕೆಎ-32/ಎಎ-1429 ಇದ್ದಿತ್ತು. ನಿಮ್ಮ ತಾಯಿಗೆ ನೋಡಲು ಅವರ ತೆಲೆಯ ಹಿಂದುಗಡೆ ಭಾರಿ ರಕ್ತಗಾಯ, ಎಡ ಕಣ್ಣಿನ ಹುಬ್ಬಿಗೆ ರಕ್ತಗಾಯ, ಬಾಯಿಗೆ ರಕ್ತಗಾಯ ಹಾಗೂ ಬಲ ಮುಂಗೈ ಹತ್ತೀರ ಭಾರಿ ಗುಪ್ತಪೆಟ್ಟು ಬಿದ್ದಿತ್ತು. ಕೃಜರ ಜೀಪ ಚಾಲಕ ನಾನು ಉಪಚಾರ ಮಾಡಿಸುತ್ತೆನೆ ನನ್ನ ಕೃಜರ ಜೀಪನಲ್ಲಿ ಕೂಡಿಸಲು ತಿಳಿಸಿದ್ದರಿಂದ ನಾವು ಮೂರು ಜನರು ನಿಮ್ಮ ತಾಯಿ ನೀಲಮ್ಮಾ ಇವರಿಗೆ ಕೃಜರ ಜೀಪನ ಸೀಟ ಮೇಲೆ ಮಲಗಿಸಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿ ನಾವು ಸರ್ಕಾರಿ ಆಸ್ಪತ್ರೆಗೆ ಬರುವಷ್ಟರಲ್ಲಿ ಕೃಜರ ಜೀಪ ಚಾಲಕ ನಿಮ್ಮ ತಾಯಿಗೆ ಉಪಚಾರ ಕುರಿತು ಸೇರಿಕೆ ಮಾಡಿ ಆಸ್ಪತ್ರೆಯಿಂದ ಹೋಗಿರುತ್ತಾನೆ. ಅಂತಾ ತಿಳಿಸಿದ್ದರಿಂದ ನಾನು ಮತ್ತು ನನ್ನ ಗಂಡ ಅಶೋಕ ಇಬ್ಬರೂ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲು ನನ್ನ ತಾಯಿ ಉಪಚಾರದಲ್ಲಿದ್ದಳು ಅವಳಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಕೃಜರ ಜೀಪ ಚಾಲಕನು ಕೂಡಾ ಆಸ್ಪತ್ರೆಯಲ್ಲಿ ಇದ್ದನು. ನನ್ನ ತಾಯಿ ರಸ್ತೆ ಅಪಘಾತದಲ್ಲಿ ಆದ ಬಾರಿಗಾಯದ ಉಪಚಾರ ಪಡೆಯುತ್ತಾ ಸರ್ಕಾರಿ ಆಸ್ಪತ್ರೆಯ ತುರ್ತುನಿಘಾ ಘಟಕ ವಾರ್ಡನಲ್ಲಿ ಮದ್ಯಾಹ್ನ 1-25 ಗಂಟೆಗೆ ಮೃತಪಟ್ಟಿರುತ್ತಾಳೆ.  ಕೃಜರ ಜೀಪ ಚಾಲಕನು ತನ್ನ ವಾಹನ ಅಲ್ಲೇ ನಿಲ್ಲಿಸಿ ನಮಗೆ ಹೇಳದೆ ಕೇಳದೆ ಸರ್ಕಾರಿರಿ ಆಸ್ಪತ್ರೆಯಿಂದ ಹೋದನು. ಆತನ ಹೆಸರು ಗೋತ್ತಾಗಿರುವದಿಲ್ಲ ಆತನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೆನೆ. ಕೃಜರ ಜೀಪ ನಂಬರ ಕೆಎ-32/ಎಎ-1429 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತೀರುವ ನನ್ನ ತಾಯಿ ನೀಲಮ್ಮಾ ಇವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವರಿಗೆ ಭಾರಿಗಾಯಗೊಳಿಸಿದ್ದರಿಂದ ನನ್ನ ತಾಯಿ ಉಪಚಾರ ಪಡೆಯುತ್ತಾ ಭಾರಿಗಾಯದ ಉಪಚಾರ ಫಲಕಾರಿಯಾಗದೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಕೃಜರ ಜೀಪ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಅರ್ಜಿ ಸಾರಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 30-10-2022 ರಂದು ರಾತ್ರಿ ೨:೦೦ ಗಂಟೆಯಿಂದ ರಾತ್ರಿ ೨:೩೦ ಗಂಟೆಯ ಮಧ್ಯದ ಅವಧಿಯಲ್ಲಿ ಪರ‍್ಯಾದಿಯ ಟಿಪ್ಪರ ನಂ. ಕೆಎ-೩೨ ಸಿ ೯೭೫೩ ಅ.ಕಿ ೧೪೦೦೦೦೦/- ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ದೂರು ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರೋಜಾ ಪೊಲೀಸ್‌ ಠಾಣೆ :- ದಿನಾಂಕ: 08/11/2022 ರಂದು ರಾತ್ರಿ 20:00 ಗಂಟೆಯ ಸುಮಾರಿಗೆ ನಾನು ಸಿಬ್ಬಂದಿಯವರಾದ, ರಫಿಯುದ್ದಿನ್ ಹೆಚ್ ಸಿ 94, ನಿತ್ಯಾನಂದ ಪಿಸಿ 154, ನಸೀರ ಪಿಸಿ 328, ರವರೊಂದಿಗೆ ಪೆಟ್ರೋಲಿಂಗನಲ್ಲಿದ್ದಾಗ, ಕಲಬುರಗಿ ನಗರದ ಮಿಜಗುರಿಯ ಖಬರಸ್ತಾನ ಹತ್ತಿರ ಇಬ್ಬರೂ ವ್ಯಕ್ತಿಗಳು ಅನುಮಾನಸ್ಪದವಾಗಿ ಕುಳಿತುಕೊಂಡು ಚಿಲುಮೆಯಿಂದ ಗಾಂಜಾ ಸೇವನೆ ಮಾಡುತ್ತಿದ್ದು, ಆಗ ನಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದ್ದು, ಸಿಬ್ಬಂದಿಯವರ ಸಹಾಯದಿಂದ ಅವರನ್ನು ಬೆನ್ನು ಹತ್ತಿ ಹಿಡಿದು ವಿಚಾರಿಸಲಾಗಿ, 01) ಯುಸುಫ್ ಬಾಬಾ@ ಬಾಬಾ ತಂದೆ ಮಹ್ಮದ ಖಾಜಾ ವಯಾ:40 ವರ್ಷ, ಜಾತಿಃಮುಸ್ಲಿಂ ಉಃಆಟೋಚಾಲಕ ಸಾ: ಮಹಿಬೂಬ್ ನಗರ ಕಲಬುರಗಿ 02) ಶಹಬಾಜ ತಂದೆ ಹೈದರ್ ವಯಾಃ21 ವರ್ಷ, ಜಾತಿಃ ಮುಸ್ಲಿಂ ಉಃ ಲಾಡ್ಜನಲ್ಲಿ ಕೆಲಸ ಸಾಃ ಕಾಲಗೋಡಾ ಕಲಬುರಗಿ ಅಂತಾ ತಿಳಿಸಿರುತ್ತಾರೆ. ಇವರುಗಳು ನೋಡಲು ನಶೇಯಲ್ಲಿ ತೇಲಾಡುತ್ತಾ ಸರಿಯಾಗಿ ನಿಲ್ಲದೇ ಜೋಲಿ ಹೊಡೆಯುತ್ತಿದ್ದು, ವಿಚಾರಿಸಲು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿದ್ದರ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 22-11-2022 01:56 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080