ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ:09/10/2022 ರಂದು ರಾತ್ರಿ 7:00 ಗಂಟೆಗೆ ಫಿರ್ಯಾದಿ ಶ್ರೀ ದೀಲಿಪ ತಂದೆ ಇಂದ್ರಚಂದ ವರ್ಮಾ ವಯ:36 ವರ್ಷ ಜಾ:ಮಾರವಾಡಿ ಉ:ಜ್ವೇಲರಿ ಶಾಪ್ ಸಾ:ಫ್ಲಾಟ ನಂ.ಟಿ-2, 3 ನೇ ಮಹಡಿ, ಎಸ್.ಆರ್. ಕನ್ಸಟ್ರಕ್ಸನ್ ಪಾರ್ಟಮೆಂಟ್ ಹಳೆ ಜೇವರ್ಗಿ ರಸ್ತೆ ಕಲಬುರಗಿ ಇದ್ದು, ನಾನು ನಮ್ಮ ತಂದೆಯವರ ಕಾಲದಿಂದ ಅಂದರೆ ಸುಮಾರು 30 ವರ್ಷಗಳಿಂದ ಸರಾಫ್ ಬಜಾರದಲ್ಲಿ ಜ್ವೇಲರಿ ವ್ಯಾಪಾರ ಮಾಡಿಕೊಂಡು ಬಂದಿದ್ದು ಇರುತ್ತದೆ. ನಾನು ಸಹ ಸುಮಾರು 15 ವರ್ಷಗಳಿಂದ ಜ್ವೇಲರಿ ವ್ಯವಹಾರ ಮಾಡಿಕೊಂಡು ಬಂದಿರುತ್ತೆನೆ. ನಮ್ಮ ಹತ್ತಿರ ಸುಮಾರು 7 ವರ್ಷಗಳಿಂದ ದ್ರುಮಿಲ್ ಪಟೇಲ್ ತಂದೆ ಘನಶ್ಯಾಮ ಪಟೇಲ್ ಸಾ:ಸೂರತ್ ಇತನು ಬಂದು ತಾನು ತೆಗೆದುಕೊಂಡು ಬಂದಿರುವ ರಾಶಿ ರತ್ನದ ಹರಳುಗಳನ್ನು ತಂದು ಕೊಟ್ಟು ಅದರ ಹಣವನ್ನು ತೆಗೆದುಕೊಂಡು ಹೋಗುವದು ಮತ್ತು ನಮ್ಮ ಹತ್ತಿರ ಇರುವ ರಾಶಿ ರತ್ನದ ಹರಳುಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಆ ಹಣವನ್ನು ನಂತರ ತೆಗೆದುಕೊಂಡು ಬಂದು ಕೊಡುತ್ತಿದ್ದನು. ದ್ರುಮಿಲ್ ಪಟೇಲ್ ಇತನು ನಂ.5 ವ್ಹಿ.ಎಸ್. ಲೇನ್, 1 ನೇ ಮಹಡಿ, 10/1 ಎ.ಎಮ್.ಲೇನ್ ಚಿಕ್ಕಪೇಟ ಬೆಂಗಳೂರಿನ ವಿಳಾಸದಲ್ಲಿ ವಾಸವಾಗಿರುತ್ತಾನೆ. ಎಂದಿನಂತೆ ದಿನಾಂಕ:13/09/2022 ರಂದು ದ್ರುಮಿಲ್ ಪಟೇಲ್ ಇತನು ತನ್ನ ಮೊಬೈಲ್ ನಂ. 8866202650 ರಿಂದ ನಾನು ಬಳಕೆ ಮಾಡುವ ಮೊಬೈಲ್ ನಂ. 9741426899 ಕ್ಕೆ ಕರೆ ಮಾಡಿ ನನಗೆ ನಿಮ್ಮ ಹತ್ತಿರ ಪಚ್ಚೆ ಹರಳ ಮತ್ತು ಹವಳ ಹರಳ ಇದಾವೆ ಹೇಗೆ ಅಂತ ಕೇಳಿದಾಗ, ನಾನು ಇದಾವೆ ಅಂತ ತಿಳಿಸಿರುತ್ತೆನೆ. ಆಗ ನಾನು ನನ್ನ ಹತ್ತಿರ ಇರುವ ಪಚ್ಚೆ ಹರಳುಗಳನ್ನು ಮತ್ತು ಹವಳ ಹರಳುಗಳ ವಿಡೀಯೊ ಕಾಲ್ ಮುಖಾಂತರ ಕರೆ ಮಾಡಿ ತೊರಿಸಿರುತ್ತೆನೆ. ಆಗ ಅವನು ಆಯಿತು ನನಗೆ ಇವುಗಳೆ ಬೇಕಾಗಿರುತ್ತೆವೆ ಯಾವುದಾದರು ಕೊರಿಯರ್ ಮುಖಾಂತರ ಕಳುಹಿಸಿಕೊಡಿ, ನಾನು ಅವುಗಳನ್ನು ಮಾರಾಟ ಮಾಡಿ ನಂತರ ಬಂದು ಹಣ ಕೊಡುತ್ತೆನೆ ಅಂತ ಹೇಳಿದಕ್ಕೆ, ನಾನು ಅವನ ಮೇಲಿನ ನಂಬಿಕೆಯಿಂದ ದ್ರುಮಿಲ್ ಪಟೇಲ್ನು ಹೇಳಿದಂತೆ ಪಚ್ಚೆ ಹರಳು 97 ಪೀಸ್ 524 ಕ್ಯಾರೇಟ್ ತೂಕವುಳ್ಳವುಗಳು  ರೂ. 723120/- ಗಳು ಮತ್ತು ಹವಳ ಹರಳುಗಳು 20 ಪಿಸ್ 334 ಕ್ಯಾರೇಟ್ ರೂ 307280/- ಗಳು ನೇದ್ದವುಗಳನ್ನು ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಆಕಾಶ ಇತನ ಸಮಕ್ಷಮದಲ್ಲಿ ಒಂದು ಬಾಕ್ಸ್ನಲ್ಲಿ ಪ್ಯಾಕ್ ಮಾಡಿರುತ್ತೆನೆ. ಅಂದೆ ದಿನಾಂಕ:13/09/2022 ರಂದು ರಾತ್ರಿ 8:00 ಗಂಟೆಗೆ ವ್ಹಿ.ಆರ್ಎಲ್ ಕೊರಿಯರ್ ನ್ಯೂ ಜೇವರ್ಗಿ ರಸ್ತೆಯ ಕಲಬುರಗಿಯಿಂದ ದ್ರುಮಿಲ್ ಪಟೇಲನು ವಾಸವಿರುವ ವಿಳಾಸಕ್ಕೆ ಕೊರಿಯರ್ ಮಾಡಿದ್ದು, ಕೊರಿಯರ್ ಮಾಡುವಾಗ ವ್ಹಿ.ಆರ್.ಎಲ್ ಮ್ಯಾನೇಜರ ಬಸವರಾಜ ಅಂತ ಇದ್ದಿರುತ್ತಾರೆ. ನಂತರ ನಾನು ಕೊರಿಯರ್ ಮಾಡಿ ದ್ರುಮಿಲ್ ಪಟೇಲ್ನಿಗೆ ಮಾಹಿತಿ ತಿಳಿಸಿದ್ದು ಇರುತ್ತದೆ. ನಂತರ ನಾನು ದ್ರುಮಿಲ್ ಪಟೇಲ್ನಿಗೆ ಕರೆ ಮಾಡಿ ಹಣ ಕೊಡಲು ಕೇಳಿದಾಗ ನೀವು ಕಳುಹಿಸಿ ಪಚ್ಚೆ ಹರಳುಗಳು ನಕಲು ಇದ್ದಿರುತ್ತೆವೆ, ಹವಳ ಹರಳು ಕೇವಲ 15 ಮಾತ್ರ ನನ್ನ ಕೈಗೆ ಸಿಕ್ಕಿರುತ್ತವೆ. ಎಲ್ಲಿಂದ ಹಣ ಕೊಡಲಿ ಅಂತ ಹೇಳಿದಾಗ ನಾನು ಬೆಂಗಳೂರಿನ ವ್ಹಿ.ಆರ್.ಎಲ್ ಆಫಿಸ್ಗೆ ಹೋಗಿ ಅಲ್ಲಿನ ಮ್ಯಾನೇಜರ್ ಮಹಾಂತೇಶ ಇವರಿಗೆ ಬೇಟಿಯಾಗಿ ವಿಚಾರಿಸಲು ನಮ್ಮ ಹತ್ತಿರ ಯಾವುದೆ ಬದಲಾವಣೆ ಮಾಡುವದಿಲ್ಲ ಅಂತ ತಿಳಿಸಿ ಸಿಸಿ ಫುಟೇಜ್ ತೆಗೆದು ತೊರಿಸಿದ್ದು ನಾನು ಕಳುಹಿಸಿದ ಬಾಕ್ಸ ಹಾಗೆ ಇದ್ದಿದ್ದು ಕಂಡು ಬಂದಿರುತ್ತದೆ. ನಂತರ ನಾವು ನಮ್ಮ ರಾಶಿ ಹರಳುಗಳ ಬಾಕ್ಸನ್ನು ಡೆಲಿವರಿ ಮಾಡಿದ ವ್ಹಿ.ಆರ್.ಎಲ್ ಡೆಲಿವರಿ ವ್ಯಕಿ ರಾಜು ಎನ್ನುವವನಿಗೆ ವಿಚಾರಿಲಸು ನಾನು ಡೇಲಿವರಿ ಮಾಡುವಾಗ ಬಾಕ್ಸ್ ಸರಿಯಾಗಿದ್ದು, ಯಾವುದೆ ಭಾಗದಲ್ಲಿ ಹರಿದಿರುವದಿಲ್ಲ ದಿನಾಂಕ:14/09/2022 ರಂದು ಮದ್ಯಾಹ್ನ 2:05 ನಿಮೀಷಕ್ಕೆ ಡೆಲಿವರಿ ಮಾಡಿ ಸಹಿ ಪಡೆದುಕೊಂಡಿರುತ್ತೆನೆ ಅಂತ ತಿಳಿಸಿದ್ದು ಇರುತ್ತದೆ. ನಾನು ದ್ರುಮಿಲ್ ಪಟೇಲನಿಗೆ ಬೇಟಿಯಾಗಿ ಕೇಳಲು ನನಗೆ ನೀವು ಕಳುಹಿಸಿರುವ ಪಚ್ಚೆ ಹರಳು ನಕಲು ಇದ್ದಿರುತ್ತವೆ. ಮತ್ತು ಹವಳ ಹರಳುಗಳಲ್ಲಿ 15 ಸಿಕ್ಕಿರುತ್ತವೆ ಅಂತ ತಿಳಿಸಿರುತ್ತಾನೆ. ದ್ರುಮಿಲ್ ಪಟೇಲ್ ಇತನು ಸುಮಾರು 7 ವರ್ಷಗಳಿಂದ ನಮ್ಮ ಹತ್ತಿರ ರಾಶಿಗಳ ಹರಳುಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಿ ನಂತರ ಹಣವನ್ನು ಕೊಡುವದು ಮಾಡುತ್ತಿದ್ದರಿಂದ ಅವನನ್ನ ನಂಬಿ ವ್ಯವಹಾರ ಮಾಡಿರುತ್ತೆವೆ. ನಾವು ಕಳುಹಿಸಿರುವ ಹರಳುಗಳನ್ನು ತೆಗೆದುಕೊಂಡು, ಅವುಗಳನ್ನು ತನ್ನ ಸ್ವಂತ ಉಪಯೋಗಕ್ಕೆ ದುರುಪಯೋಗ ಮಾಡಿಕೊಂಡಿರುತ್ತಾನೆ. ಅಲ್ಲದೆ ದ್ರುಮಿಲ್ ಪಟೇಲ್ ಇತನು ನನ್ನ ಪಚ್ಚೆ ಹರಳುಗಳನ್ನು ಮತ್ತು ಹವಳ ಹರಳುಗಳು ಎರಡು ಸೇರಿ ಒಟ್ಟು ರೂಪಾಯಿ 1030400/- ಕಿಮ್ಮತ್ತಿನಷ್ಟು ತೆಗೆದುಕೊಂಡು ಅವುಗಳನ್ನು ಅವನೆ ಬದಲಾವಣೆ ಮಾಡಿ ನಕಲು ಬಂದಿರುತ್ತವೆ ಅಂತ ಹೇಳಿ ಹಣವನ್ನಾಗಲಿ, ಹರಳುಗಳನ್ನಾಗಲಿ ಮರಳಿ ಕೊಡದೆ ಮೊಸ ಮಾಡಿರುತ್ತಾನೆ. ನಾನು ವಸ್ತುಗಳನ್ನು ಪ್ಯಾಕ್ ಮಾಡಿರುವ ಬಗ್ಗೆ ಮತ್ತು ಬೆಂಗಳೂರಿನ ವ್ಹಿ.ಆರ್.ಎಲ್ ಆಫಿಸನಲ್ಲಿನ ಬಾಕ್ಸ್ ನೋಡಿದ ಸಿಸಿ ಫುಟೇಜನ್ನು ಇದರೊಂದಿಗೆ ಲಗತ್ತು ಮಾಡಿದ್ದು ಇರುತ್ತದೆ. ಕಾರಣ ದ್ರುಮಿಲ್ ಪಟೇಲ್ ಇತನು ಮೇಲೆ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಂಚಾರಿ ಪೊಲೀಸ್ ಠಾಣೆ -1 :- ದಿನಾಂಕ 09.10.2022 ರಂದು ಸಾಯಂಕಾಲ 7-00 ಗಂಟೆಗೆ ಶ್ರೀ ಇಮಾಮೊದ್ದೀನ ತಂದೆ ಅಬ್ದುಲ ರಹಮೀದ ಮುಲ್ಲಾಗೊಳ ಸಾ: ನದಿ ಸಿನ್ನೂರ ಗ್ರಾಮ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ 09-10-2022 ರಂದು ಮದ್ಯಾಹ್ನ ನಾನು ನಮ್ಮೂರಿನಲ್ಲಿರುವಾಗ ನನ್ನ ತಮ್ಮ ಅಬ್ದುಲ ರೆಹಮಾನ ಇತನು ಕಲಬುರಗಿಗೆ ಹೋಗಿ ಬರುತ್ತೆನೆ ಅಂತಾ ಆತನ ಗೆಳೆಯನ ಮೋಟಾರ ಸೈಕಲ ನಂಬರ ಕೆಎ-32/ಇಎಲ್-1247 ನೇದ್ದನ್ನು ಚಲಾಯಿಸಿಕೊಂಡು ಹೋದನು ಸ್ವಲ್ಪ ಸಮಯದ ನಂತರ ನನ್ನ ತಮ್ಮನ ಮೊಬೈಲ ಪೊನಿನಿಂದ ಅಂಬುಲೇನ್ಸ ವಾಹನದವರು ಕಾಲ ಮಾಡಿ ನನಗೆ ತಿಳಿಸಿದ್ದೆನೆಂದರೆ ರಾಷ್ಟ್ರೀಯ ಹೆದ್ದಾರಿ-50 ರ ಮೇಲೆ ಬರುವ ಸಿರನೂರ ಗ್ರಾಮದ ಪಾರ್ಮಹೌಸ ಹತ್ತೀರ ರೋಡ ಮೇಲೆ ಯಾವುದೋ ಒಂದು ಮೋಟಾರ ಸೈಕಲ ಸವಾರ ಮೋಟಾರ ಸೈಕಲ ನಂಬರ ಕೆಎ-32/ಇಎಲ್-1247 ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದು ಗಾಯಾಳುವಿನ ಹೆಸರು ಅಬ್ದುಲ ರೆಹಮಾನ ತಂದೆ ಅಬ್ದುಲ ಹಮೀದ ಅಂತಾ ಹೇಳುತಿದ್ದು ಸದರಿ ಘಟನೆ ಅಂದಾಜು ಮದ್ಯಾಹ್ನ 1-15 ಗಂಟೆಗೆ ಜರುಗಿರುತ್ತದೆ. ಅಬ್ದುಲ ರೆಹಮಾನ ಇತನಿಗೆ ಭಾರಿ ಪೆಟ್ಟು ಬಿದ್ದಿರುತ್ತದೆ ಆತನಿಗೆ ಅಂಬುಲೇನ್ಸ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ತಗೆದುಕೊಂಡು ಹೋಗುತ್ತಿದ್ದೆವೆ ಅಂತಾ ತಿಳಿಸಿದ್ದರಿಂದ ನಾನು ಮತ್ತು ನಮ್ಮೂರಿನ  ಮಾಜೀದ ತಂದೆ ಮಹಿಬೂಬಸಾಬ ಇಬ್ಬರೂ ಮೋಟಾರ ಸೈಕಲ ಮೇಲೆ ಕಲಬುರಗಿ ಕಡೆಗೆ ಬರುವಾಗ ಸಿರನೂರ ಪಾರ್ಮ ಹೌಸ ಹತ್ತೀರ ನನ್ನ ತಮ್ಮ ಚಲಾಯಿಸಿಕೊಂಡು ಬಂದಿರುವ ಮೋಟಾರ ಸೈಕಲ ನಂಬರ ಕೆಎ-32/ಇಎಲ್-1247 ರೋಡ ಪಕ್ಕದಲ್ಲಿ ಇದ್ದಿತ್ತು. ನಾವು ಅಲ್ಲಿ ವಿಚಾರಿಸಲು ಅಪಘಾತ ಪಡಿಸಿ ಹೋದ ಮೋಟಾರ ಸೈಕಲ ಬಗ್ಗೆ ಯಾವುದೇ ಮಾಹಿತಿ ಗೋತ್ತಾಗಲಿಲ್ಲ ನಾವು ಇಬ್ಬರೂ ಸರಕಾರಿ ಆಸ್ಪತ್ರೆಗೆ ಹೋಗಿ ನನ್ನ ತಮ್ಮ ಅಬ್ದುಲ ರಹೆಮಾನ ಇತನಿಗೆ ನೋಡಲು ಆತನ ಬಲಗೈ ರಿಸ್ಟ ಹತ್ತೀರ ಬಲಗೈ ಹಸ್ತದ ಹಿಂದುಗಡೆ ಭಾರಿ ರಕ್ತಗಾಯ ತೆಲೆಯ ಹಿಂದುಗಡೆ ರಕ್ತಗಾಯ ಬಲಗಾಲು ಮೊಳಕಾಲ ಹತ್ತೀರ ತರಚಿದಗಾಯವಾಗಿತ್ತು .ಆತನಿಗೆ ವಿಚಾರಿಸಲು ಆತನು ಕೂಡಾ ಅಪಘಾತ ಪಡಿಸಿ ಹೋದ ವಾಹನದ ನಂಬರ ಗೋತ್ತಿರುವದಿಲ್ಲ ಅಂತಾ ತಿಳಿಸದನು ಆತನ ಹೆಚ್ಚಿನ ಉಪಚಾರ ಕುರಿತು ನಾನು ಖಾಸಗಿ ಯುನೈಟೆಡ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ನನ್ನ ತಮ್ಮ ಉಪಚಾರದಲ್ಲಿದ್ದು ಆತನಿಗೆ ಸರಿಯಾಗಿ ಮಾತನಾಡಲಿಕ್ಕೆ ಬರುವದಿಲ್ಲ.  ಯಾವುದೋ ಒಂದು ಮೋಟಾರ ಸೈಕಲ ಸವಾರನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನನ್ನ ತಮ್ಮ ಅಬ್ದುಲ ರಹೆಮಾನ ಇತನು ಚಲಾಯಿಸಿಕೊಂಡು ಹೋಗುತ್ತೀರುವ ಮೋಟಾರ ಸೈಕಲ ನಂಬರ ಕೆಎ-32/ಇಎಲ್-1247 ನೆದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ತಮ್ಮನಿಗೆ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.  

ಇತ್ತೀಚಿನ ನವೀಕರಣ​ : 09-11-2022 12:56 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080