ಅಭಿಪ್ರಾಯ / ಸಲಹೆಗಳು

ಸಬ್‌ ಅರ್ಬನ್‌ ಪೊಲೀಸ ಠಾಣೆ :- ಫಿರ್ಯಾದಿಯು ಹುಮನಾಬಾದ ರಿಂಗ್ ರೋಡಿಗೆ ವಿಜಯ ಇಂಡಸ್ಟ್ರೀಸ್ ಹೆಸರಿನಲ್ಲಿ ಒಂದು ವರ್ಕಶಾಪ್ ಇಟ್ಟುಕೊಂಡಿದ್ದು ದಿನಾಂಕ: 08-03-2023 ರಂದು ಹೋಳಿ ಹಬ್ಬವಿದ್ದಿದ್ದರಿಂದ ವರ್ಕಶಾಪ್ ಅನ್ನು ಬಾಗಿಲು ಮುಚ್ಚಿದ್ದು ದಿನಾಂಕ: 09-03-2023 ರಂದು ಬೆಳಗ್ಗೆ 10:00 ಗಂಟೆಗೆ ಬಂದು ನೋಡಲು ಬೀಗ ಮುರಿದಿದ್ದು ಯಾರೋ ಕಳ್ಳರು ಕಳುವು ಮಾಡಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ: 08-03-2023 ರಂದು ರಾತ್ರಿ 8:30 ಗಂಟೆಗೆ ಫಿರ್ಯಾದಿಯ ಮನೆಗೆ ಬಂದು ಏರಂಡಿ ಮಗನೆ ನಮಗೆ ದುಡ್ಡು ಕೇಳುತ್ತಿ ಮೋಟಾರು ಸೈಕಲ್ ಕೇಳುತ್ತಿ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ಫಿರ್ಯಾದಿಗೆ ಫಿರ್ಯಾದಿಯ ತಂದೆಗೆ, ತಾಯಿಗೆ ಮತ್ತು ಅಕ್ಕಳಿಗೆ  ತಲೆಗೆ ರಾಡದಿಂದ ಹೊಡೆದಿದ್ದು ಮತ್ತು ಮತ್ತು ಅಲ್ಲಿಯೇ  ಜೀವದ ಬೆದರಿಕೆ ಹಾಕಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ಕಪನೂರ ಇಂಡಸ್ಟ್ರೀಯಲ್ ಏರಿಯಾದಲ್ಲಿ ಸದರಿ ಫಿರ್ಯಾದಿದಾರರ ಹೆಸರಿಗೆ ಒಂದು ಪ್ಲಾಟ್ ಇದ್ದು ಅದರಲ್ಲಿ ಅವರು ಮನೆಯನ್ನು ಕಟ್ಟಿಸುತ್ತಿದ್ದು ಸದರಿ ಆರೋಪಿತರು ದಿನಾಂಕ 24-02-2023 ರಂದು ಜೆಸಿಬಿಯನ್ನು ತೆಗೆದುಕೊಂಡು ಬಂದು ಅತಿಮಕ್ರಮ ಪ್ರವೇಶ ಮಾಡಿ ಅದನ್ನು ಸಂಪೂರ್ಣವಾಗಿ ಹಾಳು ಮಾಡಿದ್ದು ಅದನ್ನು ಮತ್ತು ನಾವು ಎಷ್ಟೇ ಬೇಡ ಎಂದರೂ ಕೇಳದೆ ಸಿಮೆಂಟ್ ಮತ್ತು ಕಬ್ಬಿಣವನ್ನು ಹಾಳು ಮಾಡಿದವರ ವಿರುದ್ದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ: 09-03-2023 ರಂದು ಸರಕಾರಿ ತರ್ಫೆ ಫಿರ್ಯಾದಿಯು ದೂರು ಸಲ್ಲಿಸಿದರ ಸಾರಾಂಶವೇನೆಂದರೆ ಸದರಿಯವರಿಗೆ ಖಚಿತ ಬಾತ್ಮಿ ಬಂದಿದ್ದೇನೆಂದರೆ ಇಂಡಸ್ಟ್ರೀಯಲ್ ಏರಿಯಾದಲ್ಲಿ ಕೆಲವು ಜನರು ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಅಂದರ್ ಬಾಹರ್ ಎಂಬ ದೈವಾಲೀಲೆ ಆಟವನ್ನು ಆಡುತ್ತಾ ಕುಳಿತಿದ್ದಾರೆಂದು ಹೇಳಿದ ಮೇರೆಗೆ ಪಂಚರ ಸಮಕ್ಷಮದಲ್ಲಿ ಖಚಿತ ಪಡಿಸಿಕೊಂಡು ದಾಳಿ ಮಾಡಲಾಗಿ ಸದರಿ ಆರೋಪಿತರು ಮತ್ತು ಮುದ್ದೆ ಮಾಲನ್ನು ವಶಕ್ಕೆ ಪಡೆದು ಸದರಿ ಆರೋಪಿತರ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ ಠಾಣೆ :- ದಿನಾಂಕ: 09/03/2023 ರಂದು ಸಂಜೆ 07:30 ಗಂಟೆಗೆ ನಮ್ಮ ಠಾಣೆಯ ಶ್ರೀ ಹುಸೇನಬಾಷಾ ಎ.ಎಸ್.ಐ.  ಚೌಕ ಪೊಲೀಸ ಠಾಣೆ ಕಲಬುರಗಿ ರವರು ಮಟಕಾ ಜೂಜಾಟ ನಿರತ ಇಬ್ಬರು  ಆರೋಪಿತರು ಮತ್ತು ಮುದ್ದೆಮಾಲು ಹಾಗೂ  ಮಟಕಾ ಜೂಜಾಟ ದಾಳಿ ಮಾಡಿದ  ಸರಕಾರಿ ತರ್ಫೇ ದೂರು ಮತ್ತು ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ತಮ್ಮ ಸರಕಾರಿ ತರ್ಫೇ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ, ನಾನು, ಹುಸೇನಬಾಷಾ ಎ.ಎಸ್.ಐ. ಚೌಕ ಪೊಲೀಸ ಠಾಣೆ ಕಲಬುರಗಿ ನಗರ,  ಸರ್ಕಾರ ತರ್ಫೆ ದೂರು ಕೊಡುವುದೆನೆಂದೆರೆ, ದಿನಾಂಕ: 09/03/2023 ರಂದು ಮಧ್ಯಾಹ್ನ 04:30 ಗಂಟೆಗೆ ಕಲಬುರಗಿ ಚೌಕ ಪೊಲೀಸ ಠಾಣೆಯಲ್ಲಿ ಇದ್ದಾಗ ನಮ್ಮ ಚೌಕ ಠಾಣೆಯ ಶ್ರೀ ವಿಜಯಕುಮಾರ ಸಿನ್ನೂರು ಪಿ.ಐ. ರವರು  ನನಗೆ ಕಲಬುರಗಿ ನಗರ ಮೋಮಿನಪೂರ ಏರಿಯಾದಲ್ಲಿ ಬರುವ ನಬೀ ಹೋಟಲ ಎದುರುಗಡೆ ಇರುವ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ನಿಂತುಕೊಂಡು ಹೋಗಿ-ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದಿದೆ. ನೀವು ದಾಳಿ ಮಾಡಿ ಮುಂದಿನ ಕಾನೂನು ಕ್ರಮ ಕೈ ಕೊಳ್ಳಲು ಆದೇಶಿಸಿದ ಪ್ರಕಾರ ನಾನು, ಪಿ.ಐ. ಸಾಹೇಬರ ಬಾತ್ಮಿ ಮೇರೆಗೆ ಮಟಕಾ ಜೂಜಾಟದಲ್ಲಿ ನಿರತನಾದವರ ಮೇಲೆ ದಾಳಿ ಮಾಡಿ ಹಿಡಿದು ಅವರುಗಳ ವಿರುದ್ಧ ಅಸಂಜ್ಞೇಯ ಕಲಂ 78 (3) ಕೆ.ಪಿ.ಎಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಕೋರಿ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಕೋರಿಕೊಂಡು, ಇಬ್ಬರು ಪಂಚರಾದ 1)ಶ್ರೀ ಶರಣಪ್ಪ ತಂದೆ ಹಣಮಂತಪ್ಪ ಡೋರನಳ್ಳಿ ವ:52 ವರ್ಷ ಉ:ಗೌಂಡಿ ಕೆಲಸ ಸಾ:ಯಲ್ಲಮ್ಮ ಗುಡಿ ಹತ್ತಿರ ಗಂಗಾ ನಗರ ಕಲಬುರಗಿ  2) ಶ್ರೀ ಮಾಹಾದೇವ ತಂದೆ ಶ್ರೀಪತರಾವ ಮೇತ್ರೆ ವ:32 ವರ್ಷ ಉ:ಕಂಬಾರ ಕೆಲಸ ಸಾ:ಸಿಟಿ ಬಸಸ್ಟ್ಯಾಂಡ ಎದುರುಗಡೆ ಜೋಪಡಪಟ್ಟಿ ಕಲಬುರಗಿ ಇವರುಗಳನ್ನು ಮತ್ತು ನಮ್ಮ ಠಾಣಾ ಸಿಬ್ಬಂದಿಯವರಾದ ಸಿದ್ರಾಮಯ್ಯ ಸಿಹೆಚಸಿ 222 ಶ್ರೀ ಮೋಸಿನ ಸಿಪಿಸಿ 285, ಶ್ರೀ ರಾಜಕುಮಾರ ಸಿಪಿಸಿ 166, ಶ್ರೀ ಸೈಯ್ಯದ ತೌಸೀಫ ಹುಸೇನ ಸಿಪಿಸಿ 189, ಶ್ರೀ ಅಶೋಕ ಸಿಪಿಸಿ 06 ಇವರಿಗೂ ಬರಮಾಡಿಕೊಂಡು ಈ ಮೇಲಿನ ಮಟಕಾ ಜೂಜಾಟದ ಬಾತ್ಮಿ ವಿಷಯ ತಿಳಿಸಿ, ಪಂಚರಿಗೆ ನಾವು ಮಾಡುವ ದಾಳಿ ಜಪ್ತಿ ಪಂಚನಾಮೆಯ ಪಂಚರಾಗಿ ಜಪ್ತಿ ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಪಂಚರು ಒಪ್ಪಿಕೊಂಡರು. ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ನಮ್ಮ ಜೊತೆಯಲ್ಲಿ ದಾಳಿಗೆ ಬರಲು ಸೂಚಿಸಿದಾಗ ಅವರು ಕೂಡಾ ಒಪ್ಪಿಕೊಂಡರು. ಆಗ ನಾನು ಮಟಕಾ ಜೂಜಾಟ ದಾಳಿ ಕುರಿತು ನಾನು ಮತ್ತು ಸಿಬ್ಬಂದಿಯವರು ಹಾಗೂ ಪಂಚರು ನಮ್ಮ ನಮ್ಮ ಮೋಟಾರ ಸೈಕಲಗಳ ಮೇಲೆ ಕುಳಿತುಕೊಂಡೇವು. ನಮ್ಮ ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ದಾಳಿ ಕುರಿತು, ಠಾಣೆಯಿಂದ ಸಂಜೆ 05-00  ಗಂಟೆಗೆ ಹೊರಟಿದ್ದು, ಬಾತ್ಮಿ ಸ್ಥಳವಾದ ಕಲಬುರಗಿ ನಗರ ಮೋಮಿನಪೂರ ಏರಿಯಾದಲ್ಲಿ ಬರುವ ನಬೀ ಹೋಟಲ ಇನ್ನೂ ಸ್ವಲ್ಪ ದೂರ ಇರುವಂತೆ  ಎಲ್ಲರೂ ನಮ್ಮ ನಮ್ಮ ಮೋಟಾರ ಸೈಕಲಗಳನ್ನು ನಿಲ್ಲಿಸಿ  ಎಲ್ಲರೂ ಇಳಿದು ಒಂದು ಪಾನ ಡಬ್ಬಿ ಮನೆಯ ಮರೆಯಲ್ಲಿ ನಿಂತು ನೋಡಲಾಗಿ  ಇಬ್ಬರು  ಕಲಬುರಗಿ ನಗರ ಮೋಮಿನಪೂರ ಏರಿಯಾದಲ್ಲಿ ಬರುವ ನಬೀ ಹೋಟಲ ಎದುರುಗಡೆ ಇರುವ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ನಿಂತುಕೊಂಡು ಹೋಗು-ಬರುವ ಸಾರ್ವಜನಿಕರಿಗೆ 1 ರೂ.ಗೆ 80 ರೂ. ಗೆಲ್ಲಿರಿ ಕಲ್ಯಾಣ ಮಟಕಾ ಇದೆ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ ನನ್ನ ಜೊತೆಯಲ್ಲಿ ಬಂದಿದ್ದ ಪಂಚರಿಗೆ ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ತೋರಿಸಿ ಖಚಿತಪಡಿಸಿಕೊಂಡು, ಪಂಚರ ನಮ್ಮ ಸಮಕ್ಷಮದಲ್ಲಿ ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ಸಂಜೆ 5-30 ಗಂಟೆಗೆ ದಾಳಿ ಮಾಡಿದಾಗ ಮಟಕಾ ಚೀಟಿಗಳು ಬರೆಯಿಸಲು ಬಂದಿದ್ದ ಸಾರ್ವಜನಿಕರು ಅಲ್ಲಿಂದ ಓಡಿ ಹೋದರು. ಮಟಕಾ ಬರೆದುಕೊಳ್ಳುತ್ತಿದ್ದ ಇಬ್ಬರಿಗೆ ಹಿಡಿದಿದ್ದು, ಅವರಲ್ಲಿ ಒಬ್ಬನು ಹೆಸರು ವಿಳಾಸ ವಿಚಾರಿಸಲೂ ಅವನು ತನ್ನ ಹೆಸರು ಮಕಬೂಲಮಿಯ್ಯಾ ತಂದೆ ಬಸೀರಮಿಯ್ಯಾ ಜಮಾದಾರ ವ:41 ವರ್ಷ ಉ:ಸೆಂಟ್ರಿಂಗ ಕೆಲಸ ಸಾ:ಗಡಿಕೇಶ್ವರ ಗ್ರಾಮ ತಾ:ಚಿಂಚೋಳಿ ಹಾ:ವ: ಜುಬೇರ ಕಾಲನಿ ಹಾಗರಗಾ ಕ್ರಾಸ ಕಲಬುರಗಿ ಅಂತಾ ತಿಳಿಸಿದನು. ಆತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ:ಕಿ:00 ರೂ. ಮತ್ತು ಒಂದು ಬಾಲಪೆನ್ನು ಅ:ಕಿ:00 ರೂ. ಹಾಗೂ ನಗದು ಹಣ 310/- ರೂ. ಮತ್ತು ಒಂದು  Poco ಅಂತಾ ಬರೆದ ಮೋಬಾಯಿಲ್  ಅ:ಕಿ: 1000/- ರೂ. ದೊರೆತವು. ಎರಡನೆಯವನಿಗೆ  ಅವನ ಹೆಸರು ವಿಳಾಸ ವಿಚಾರಿಸಲೂ ಅವನು ತನ್ನ ಹೆಸರು ನೌಸಾದ ಅಲಿ ತಂದೆ ಉಸ್ಮಾನ ಅಲಿ ವ:60 ವರ್ಷ ಉ:ಆಟೋ ಚಾಲಕ ಸಾ: ನಯಾ ಮೊಹಲ್ಲಾ ಹಜ್ಜ ಕಮೀಟಿ ಕಲಬುರಗಿ ಅಂತಾ ತಿಳಿಸಿದನು. ಆತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ:ಕಿ:00 ರೂ. ಮತ್ತು ಒಂದು ಬಾಲಪೆನ್ನು ಅ:ಕಿ:00 ರೂ. ಹಾಗೂ ನಗದು ಹಣ 1210/- ರೂ. ದೊರೆತವು. ನಂತರ ಅವರಿಬ್ಬರಿಗೆ ಮಟಕಾ ಚೀಟಿ ಯಾರಿಗೆ ಒಯ್ದು ಕೊಡುತ್ತೀ ಅಂತಾ ವಿಚಾರಿಸಿದಾಗ, ಅವನು ರೇವಣಸಿದ್ಧಪ್ಪ ಸಾ: ರೇವಣಸಿದ್ದೇಶ್ವರ ಕಾಲನಿ ಕಲಬುರಗಿ ಇತನಿಗೆ ಕೊಡುವುದಾಗಿ ತಿಳಿಸಿದರು. ಆಗ ನಾನು ಕೇಸಿನ ಪುರಾವೆಗೋಸ್ಕರ ಒಂದು ದಸ್ತಿಯಲ್ಲಿ ಮಟಕಾ ಚೀಟಿ, ಬಾಲಪೆನ್ನು, ಹಣ ಹಾಕಿ ಗಂಟು ಕಟ್ಟಿ ಅದಕ್ಕೆ ಪಂಚರು ಸಹಿಸಿದ ಚೀಟಿ ಅಂಟಿಸಿ ವಶಕ್ಕೆ ತೆಗೆದುಕೊಂಡು ಜಪ್ತಪಡಿಸಿಕೊಂಡು ಮತ್ತು ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ ಸರ್ಕಾರ ಪರ ದೂರು ಎಸ್.ಎಚ.ಓ. ರವರಿಗೆ ಕೊಟ್ಟ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 11-03-2023 12:03 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080