ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ ಠಾಣೆ :-  ದಿನಾಂಕ: 09.02.2023 ರಂದು ಮದ್ಯಾಹ್ನ 1.30 ಗಂಟೆಗೆ ಫಿರ್ಯಾದಿ ಶ್ರೀ ನವೀನ ತಂದೆ ನಿರ್ಮಲ್ ಕುಮಾರ ವಯ|| 19 ವರ್ಷ ಜಾ|| ಮಾದಿಗ ಉ|| ನರ್ಸಿಂಗ್ ವಿದ್ಯಾರ್ಥಿ ಸಾ|| 13 ನೇ ಕ್ರಾಸ್ ತಾರಫೈಲ್ ಕಲಬುರಗಿ ಇವರು ಠಾಣೆಗೆ ಬಂದು ದೂರು ನೀಡಿದರ ಸಾರಾಂಶವೆನೆಂದರೆ, ನಾನು ನರ್ಸಿಂಗ್ ವಿದ್ಯಾಭ್ಯಾಸ ಮಾಡಿಕೊಂಡು ನನ್ನ ತಂದೆ-ತಾಂಯಿಯೊಂದಿಗೆ ವಾಸವಾಗಿರುತ್ತೆನೆ.  ಹೀಗಿದ್ದು ದಿನಾಂಕ: 07.02.2023 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ನಾನು ಹಾಗೂ ನನ್ನ ಗೆಳೆಯರಾದ ಥಾಮಸ್ ತಂದೆ ಜ್ಞಾನಮಿತ್ರ, ಜೇಮ್ಸ್ ತಂದೆ ಮ್ಯಾಥೀವ, ಯೇಸು ತಂದೆ ಸುರೇಶ  ನಾವು ನಾಲ್ಕು ಜನರು ಸೇರಿ ತಾರಫೈಲ್ನ 13ನೇ ಕ್ರಾಸ್ ಹತ್ತಿರ ಮಾತನಾಡುತ್ತಾ ನಿಂತಿರುವಾಗ ಇದೇ ವೇಳೆಗೆ ಅವಿನಾಶ ತಂದೆ ಶಂಕರ ಹಯ್ಯಾಳಕರ್, ಪೃಥ್ವಿ ತಂದೆ ಶೇಖರ ರತ್ನಡಗಿ, ಪ್ರವೀಣ್ ತಂದೆ ದೊಡ್ಡ ಸೈಬಣ್ಣ, ರಂಗಪ್ಪ ತಂದೆ ಸಣ್ಣ ಸೈಬಣ್ಣ, ಅಜಯ ತಂದೆ ಸಾಗರ ನೆಲೋಗಿ, ರಾಜು ಗಾಂಧಿ ತಂದೆ ನಿಂಗಪ್ಪಾ ಹಯ್ಯಾಳಕರ್, ಶೇಖರ ರತ್ನಡಗಿ ಇವರುಗಳು ಗುಂಪುಕಟ್ಟಿಕೊಂಡು ಬಂದವರೇ ಥಾಮಸ್ ಇತನೊಂದಿಗೆ ಜಗಳಕ್ಕೆ ಬಿದ್ದು ಅವಾಚ್ಯ ಶಬ್ದದಿಂದ ಬೈಯ್ಯುತ್ತಾ ಅವಿನಾಶ ಇತನು ಥಾಮಸ ಇತನ ಎದೆಯ ಮೇಲಿನ ಅಂಗಿ ಹಿಡಿದು ಮುಂದೆ ಹೊಗದಂತೆ ತಡೆದು ನಿಲ್ಲಿಸಿ ಕೈಯಿಂದ ಎಡಗಡೆ ಕಪಾಳಿನ ಮೇಲೆ ಹೊಡೆದನು. ಆಗ ನಾನು ಮತ್ತು ಜೇಮ್ಸ್ ಜಗಳ ಬಿಡಿಸಲು ಹೋದಾಗ ಪೃಥ್ವಿ ರತ್ನಡಗಿ ಮತ್ತು ಅವನ ತಂದೆ ಶೇಖರ ರತ್ನಡಗಿ ಇವರಿಬ್ಬರು ಸೇರಿ ನನಗೆ ಕೈಯಿಂದ ನನ್ನ ಹೊಟ್ಟೆಗೆ  ಮತ್ತು ಬೆನ್ನಿನ ಮೇಲೆ ಹೊಡೆದಿರುತ್ತಾರೆ. ಇದರಿಂದ ಗುಪ್ತಪಟ್ಟಾಗಿದ್ದು ಇರುತ್ತದೆ. ಜೇಮ್ಸ್ ಇತನಿಗೆ ಪ್ರವೀಣ್, ರಂಗಪ್ಪ ಇವರಿಬ್ಬರೂ ಸೇರಿ ಅವಾಚ್ಯ ಶಬ್ದದಿಂದ ಬೈದು ಕೈಯಿಂದ ಹೊಟ್ಟೆಗೆ ಹೊಡೆದಿದ್ದು ಅಲ್ಲದೇ ರಂಗಪ್ಪಾ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಜೇಮ್ಸ್ ಇತನ ತಲೆಗೆ ಮತ್ತು ಎಡಗಾಲಿನ ತೊಡೆಗೆ ಹೊಡೆದಿದ್ದು ಇದರಿಂದ ಗುಪ್ತಗಾಯ ಆಗಿದ್ದು ಇರುತ್ತದೆ. ಹಾಗೂ ಯೇಸು ಇತನು ಜಗಳ ಬಿಡಿಸಲು ಬಂದಾಗ ಅವನಿಗೂ ಕೂಡಾ ಅಜಯ, ರಾಜು ಗಾಂಧಿ ಇವರು ಕೈಯಿಂದ ಯೇಸುವಿಗೆ ಹೊಟ್ಟೆಗೆ ಮತ್ತು ಬೆನ್ನಿಗೆ ಹೊಡೆದಿದ್ದು ಇರುತ್ತದೆ. ಆಗ ನಾವು ಎಲ್ಲರೂ ಚಿರಾಡುವುದನ್ನು ಕೇಳಿ ಅವಿನಾಶ ಮತ್ತು ಇತನೊಂದಿಗೆ ಬಂದ ಎಲ್ಲರೂ ಕೂಡಿ ಅಲ್ಲಿಂದ ಹೋಗುವಾಗ ನಮಗೆ ಅವಾಚ್ಯ ಶಬ್ದದಿಂದ ಬೈಯ್ಯತ್ತಾ ಬೊಸಡೀ ಮಕ್ಕಳೇ ಇವತ್ತು ನಿಮಗೆ ಜೀವಂತ ಬಿಟ್ಟಿದ್ದೆವೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೇ ನಮಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ. ನಮ್ಮೊಂದಿಗ ಜಗಳಕ್ಕೆ ಬಿದ್ದು ಹೊಡೆ ಬಡೆ ಮಾಡಿ, ಜೀವದ ಬೇದರಿಕೆ ಹಾಕಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರಾಘವೇಂದ್ರ ನಗರ ಪೊಲೀಸ್‌ ಠಾಣೆ :-  ದಿನಾಂಕ: 09.02.2023 ರಂದು ಶ್ರೀ ರೋಹಿತ ತಂದೆ ಶಿವಶರಣಪ್ಪಾ ಹಾಗರಗುಂಡಗಿ ವಯಃ 23 ವರ್ಷ ಜಾಃ ಸಮಗರ (ಪಜಾತಿ) ಉಃ ಖಾಸಗಿ ಕೆಲಸ ಸಾಃ  ಎಸ್ಬಿ ಕಾಲೇಜ ಹತ್ತಿರ ರಾಮ ನಗರ ಕಲಬುರಗಿ ರವರು ಠಾಣೆಗೆ ಹಾಜರಾಜಿ ಈ-ಎಫ.ಐ.ಆರ್.  ತಂತ್ರಾಂಶದಲ್ಲಿ ದೂರು ದಾಖಲಿಸಿ ಠಾಣೆಗೆ ಹಾಜರಾಗಿ ದೂರು ಅರ್ಜಿನೀಡಿದ್ದು ಸಾರಾಂಶವೆನೆಂದರೆ  ನಾನು ನವಜೀವನ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡು ತಂದೆ ತಾಯಿಯೊಂದಿಗೆ ವಾಸವಾಗಿರುತ್ತೇನೆ ನನ್ನ ಕೆಲಸಕ್ಕೆ ಹೋಗಿ ಬರುವದಕ್ಕೆಂದು ಒಂದು ಹೊಂಡಾ ಡಿಯೋ ಮೋಟಾರ ಸೈಕಲ್ ನಂ ಕೆ-32 ಇಪಿ 7063 ಅಃಕಿಃ 50,000/- ರೂ ಬೆಲೆ ಬಾಳುವದನ್ನು ಪ್ರತಿ ದಿನಾ ನಾನೆ ಉಪಯೋಗ ಮಾಡುತ್ತಾ ಬಂದಿರುತ್ತೇನೆ.          ದಿನಾಂಕಃ 22.12.2022 ರಂದು ಸಾಯಾಂಕಾಲ 7.00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗೆಳೆಯನಾದ ತರುಣ ಎಂಬವರು ಕೂಡಿಕೊಂಡು ಎನ್.ವಿ. ಕಾಲೇಜನಲ್ಲಿ ಕಾಯರ್ಾಕ್ರಮ ಇರುವ ಪ್ರಯುಕ್ತ ನೋಡುವದಕ್ಕೆ ಹೋಗುವ ಸಂಬಂದ ಹೋಗಿದ್ದು ನನ್ನ ಹೊಂಡಾ ಡಿಯೋ ಮೋಟಾರ ಸೈಕಲ್ ನಂ ಕೆ-32 ಇಪಿ 7063 ನೇದ್ದು ಎನ್.ವಿ.ಕಾಲೇಜ ಮುಂದೆ ನಿಲ್ಲಿಸಿ ಹೋಗಿದ್ದು ಮರಳಿ ರಾತ್ರಿ 8.00 ಗಂಟೆಗೆ ಬಂದು ನೋಡಿದ್ದಾಗ ನನ್ನ ಮೋಟಾರ ಸೈಕಲ್ ಇರಲಿಲ್ಲ. ಯಾರೋ ಕಳ್ಳರು ನನ್ನ ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ.  ಸದರಿ ಮೋಟಾರ ಸೈಕಲ್ ವಿವರ ಈ ಕೆಳಗಿನಂತೆ ಇರುತ್ತದೆ.

1)         ಅಟೋವಿಧಃ  : ಹೊಂಡಾ ಡಿಯೋ ಮೋಟಾರ ಸೈಕಲ್

2)         ಮೋಟಾರ ಸೈಕಲ್ ನಂ; ನಂ ಕೆಎ-32 ಇಪಿ 7063

3)         ಚಸ್ಸಿ ನಂ              ; ME4JF39DEH7019186

4)         ಇಂಜಿನ ನಂ            ; JF39E72024977

5)         ಮಾಡಲ್ ನಂ         :2017

6)         ಬಣ್ಣ                 :  ಕೆಂಪ್ಪು ಬಣ್ಣ

7)         ಅ.ಕಿ.                    :50000/-ರೂ

   ಈ ಮೇಲ್ಕಾಣಿಸಿದ ಮೋಟಾರ ಸೈಕಲ್ ನಂ ಕೆಎ-32 ಇಪಿ 7063 ನೇದ್ದನ್ನು ಕಳ್ಳತನವಾಗಿದ್ದು ಮಾನ್ಯರವರು ಕಳೆದು ಹೋದ ಮೋಟಾರ ಸೈಕಲ್ ಪತ್ತೆ ಮಾಡಿಕೊಡಬೇಕೆಂದು ವಿನಂತಿ ಇರುತ್ತದೆ. ಅಂತ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ.03-02-2023 ರಂದು ೧೦-೦೦ ಎ.ಎಂ.ಕ್ಕೆ ದಿಂದ ದಿನಾಂಕ.೯-೨-೨೦೨೩ ರಂದು ೬-೦೦ ಎ.ಎಂ ಮಧ್ಯದ ಅವಧಿಯಲ್ಲಿ ಫಿರ್ಯಾದಿದಾರರು ತಮ್ಮ ಮನೆಯಲ್ಲಿ ಇಟ್ಟಿದ್ದ ೧] ನಗದ ಹಣ ೧,೪೨,೦೦೦/- ರೂಪಾಯಿಗಳು,೨] ೪ ತೊಲೆ ಬೆಳ್ಳಿಯ ಕಾಲುಂಗರ , ಬೆಳ್ಳಿಯ  ಚೈನ್ ಅಕಿ. ೧೨೦೦/- ರೂಪಾಯಿ ಬೆಲೆಬಾಳುವದು. ೩] ೪ ಹೊಸ ಸೀರೆಗಳು  ಅಕಿ.೧,೬೦೦/-ರೂಪಾಯಿಗಳು ,೪] ೨ ಜೊತೆ ಖಾಕಿ ಯುನಿಫಾರಂ. ಅಕಿ.೦೦, ೫] ಒಂದು ಸ್ಲೋ ಚಾಟ ಅಕಿ.೦೦,೬] ೧ ಬ್ಲ್ಯಾಕ್ ಒಂದು ಬೆಲ್ಟ್ ಅಕಿ.೦೦-೦೦ ಹೀಗೆ ಒಟ್ಟು ಅಕಿ.೧,೪೪,೮೦೦/- ರೂಪಾಯಿ ಬೆಲೆಬಾಳುವದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ:10.02.2023 ರಂದು 12:30 ಎ.ಎಂ.ಕ್ಕೆ ಫಿರ್ಯಾದಿ ಶ್ರೀ ಬಸವರಾಜ ತಂದೆ ಮಲ್ಲಿಕಾರ್ಜುನ ಝಳಕಿ ವಯ: 30 ವರ್ಷ ಜಾ: ಲಿಂಗಾಯತ ಉ: ಟ್ಯಾಕ್ಸಿ ಡ್ರೈವರ  ಸಾ|| ಶರಣ ಸಿರಸಗಿ ಮಡ್ಡಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ದಿನಾಂಕ:15.01.2023 ರಂದು ರವಿವಾರ ಸಮಯ 03:30 ಪಿ.ಎಂ.ಕ್ಕೆ ಶರಣಬಸಪ್ಪ ತಂದೆ ಧೂಳಪ್ಪ ಹೊಸ್ಮನಿ ನಮ್ಮ ಮನೆಗೆ ಬಂದು ಕಾರು ಬಾಡಿಗೆಗೆ ಬೇಕಾಗಿದೆ ಬಾ ಎಂದು ಕೆರೆದುಕೊಂಡು ನಮ್ಮ ಏರಿಯಾದ ಹತ್ತಿರ ಇರುವ ಖುಲ್ಲಾ ಪ್ಲಾಟಗಳ ಕಡೆಗೆ ಕರೆದುಕೊಂಡು ಹೋಗಿರುತ್ತಾರೆ. ಅಲ್ಲಿ ಅರುಣ ಭರಣಿ ಇದ್ದಿದ್ದನು, ಮತ್ತು ಆತನ ಸಹಚರರು ಇದ್ದರು, ಅರುಣ ಭರಣಿ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನ ಎರಡು ಕಪಾಳಕ್ಕೆ ಹೊಡೆದನು, ಕಾರಣ ಆತನಿಗೆ ಬೇಕಾದಾಗೆಲ್ಲಾ ನನ್ನ ಕಾರ ಕೊಡಬೇಕು ಮತ್ತು ಹಣ ಕೊಡಬೇಕು ಎನ್ನುವುದು ನೀನು ಮರೆತಿರುವೆಯಾ ಎಂದು ಬೈಯುತ್ತಾ, ಹೊಡೆಯುತ್ತಾ ತನ್ನ ಹತ್ತಿರ ಇರುವ ಪಿಸ್ತೂಲ್ ತೆಗೆದು ನನ್ನ ಹಣೆಗೆ ಹಚ್ಚಿ ನನ್ನ ಹತ್ತಿರ ಇರುವ ರೂ, 12,000/- ನಗದು ಹಣ ಕಸಿದುಕೊಂಡಿರುತ್ತಾನೆ.  ಆತನ ಸಹಚರರಾದ ಶರಣಬಸಪ್ಪ ತಂದೆ ಧೂಳಪ್ಪ ಹೊಸ್ಮನಿ, ವಿನೋದ ಕುಮಾರ ತಂದೆ ವಿಜಯಕುಮಾರ ಹೊಸ್ಮನಿ, ವಿನೋದ ತಂದೆ ಅರ್ಜುನ್ ಸಿಂಧೆ @ ಗುಂಡ್ಯಾ, ಅಂಬ್ರೀಷ ತಂದೆ ಶರಣಪ್ಪ ಯಳಸಂಗಿ ಇವರೆಲ್ಲರೂ ನನ್ನನ್ನು ಕಟ್ಟಿಗೆ, ಬಿಯರ್ ಬಾಟಲಿ ಮತ್ತು ಫರ್ಸಿ ತುಕಡಿಗಳಿಂದ ಮನ ಬಂದಂತೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ. ಏರಿಯಾದವರು ನನ್ನ ಚಿರಾಟವನ್ನು ಕೇಳಿ ಓಡಿ ಬಂದು ಶ್ರೀ ಸಂತೋಷ ತಂದೆ ನಿಜಲಿಂಗಪ್ಪ ಮರ್ತೂರ ಮತ್ತು ಶ್ರೀ ಸಂತೋಷ ಕುಮಾರ ಗಟ್ಟು ಬಂದು ಬಿಡಿಸಿರುತ್ತಾರೆ. ನಾನು ಸೃತಿ ತಪ್ಪಿ ಬಿದ್ದ ಜಾಗದಿಂದ ಯಾರೊ ಮನೆಗೆ ಕರೆದುಕೊಂಡು ಬಂದಿರುತ್ತಾರೆ. ಆಗ ನಮ್ಮ ಮಾವನಾದ ರಾಜಕುಮಾರ ಪಾಟೀಲ್ ಇವರಿಗೆ ನನ್ನ ತಂದೆಯವರು ತಿಳಿಸಿದಾಗ ಅವರು ನನ್ನನ್ನು ಬಾಡಿಗೆ ವಾಹನದ ಮೂಲಕ ಜೀಮ್ಸ ಆಸ್ಪತ್ರೆಗೆ ನನ್ನನ್ನು ಅಡ್ಮಿಟ್ ಮಾಡಿರುತ್ತಾರೆ. ನಾನು ಒಳಪೆಟ್ಟಿನಿಂದ ಇನ್ನೂ ನರಳುತ್ತಿದ್ದೇನೆ. ಆಸ್ಪತ್ರೆಯಿಂದ ನಾನು ಬಿಡುಗಡೆಯಾದ ನಂತರ ಈತನ ಭಯದಿಂದ ಹೆಂಡತಿ ಮಗುವಿನೊಂದಿಗೆ ಮನೆ ಬಿಟ್ಟು ಕಂಗಾಲಾಗಿರುತ್ತೇನೆ. ಮತ್ತು ಅರುಣ ಭರಣಿ ಇವರು ಹಲವಾರು ಬಾರಿ ಫೋನಮಾಡುತ್ತಿರುವುದು ಬೆಸತ್ತು ನಾನು ಫೋನ್ ಬಂದ್ ಮಾಡಿರುತ್ತೇನೆ. ಆಗ ಅರುಣ ಭರಣಿ ಇವರು ನಮ್ಮ ಮನೆಗೆ ಹೋಗಿ ನನ್ನ ತಂದೆ ಮತ್ತು ನನ್ನ ತಮ್ಮನನ್ನು ಹೆದರಿಸಿ ಬೆದರಿಸಿ ಠಾಣೆಗೆ ಕರೆತಂದು ದೂರು ಹಿಂಪಡೆಯಲು ಧಮಕಿ ಹಾಕಿರುತ್ತಾರೆ. ದೂರು ಹಿಂಪಡೆಯಲು ಬಸವರಾಜ ತಂದೆ ಮಲ್ಲಿಕಾರ್ಜುನ ಝಳಕಿ ಇವರೆ ಬೇಕಾಗಿದೆ ಎಂದು ತಿಳಿದು ಅವರನ್ನು ಮರಳಿ ಮನೆಗೆ ಕಳುಹಿಸಿರುತ್ತಾರೆ. ಆಗ ನನಗೆ ಈರಣ್ಣಾ ಝಳಕಿ ಇವರು ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ದೂರು ದಾಖಲಾದರೆ, ನಾನೇ ನಿನ್ನನ್ನು ಕೊಲೆ ಮಾಡಿಸುವುದಾಗಿ ಬೇದರಿಸಿರುತ್ತಾರೆ. ಆಗ ನಾನು ಮೊಬೈಲ್ ಬಂದ್ ಮಾಡಿಬಿಟ್ಟಿರುತ್ತೇನೆ. ನಂತರ ಈರಣ್ಣಾ ಝಳಕಿ ಇವರು ನಮ್ಮ ಮಾವನವರಾದ ರಾಜಕುಮಾರ ಇವರಿಗೆ ಕರೆಮಾಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಅರುಣ ಭರಣಿ ಮತ್ತು ಆತನ ಸಹಚರರ ಮೇಲೆ ದೂರು ದಾಖಲಾದರೆ, ಬಸವರಾಜ ತಂದೆ ಮಲ್ಲಿಕಾರ್ಜುನ ಇವನನ್ನು ನಾನೆ ಕೊಲೆ ಮಾಡಿಸುತ್ತೇನೆ ಮತ್ತು ಆತನು ಸಹ ಈತನನ್ನು ಕಂಡಲ್ಲಿ ಕೊಲ್ಲುತ್ತಾನೆ ಎಂದು ಬೈದುದ್ದನ್ನು ಮೊಬೈಲನಲ್ಲಿ ರಿಕಾರ್ಡ ಆಗಿರುತ್ತದೆ. ಇದನ್ನು ನಾನು ಕೇಳಿಕೊಂಡ ಊರು ಬಿಟ್ಟು ಹೋಗಿರುತ್ತೇನೆ ಆದ್ದರಿಂದ ದೂರು ಸಲ್ಲಿಸಲು ವಿಳಂಬವಾಗಿರುತ್ತದೆ.  ಮತ್ತು ದೂರು ದಾಖಲಾದರೆ ಜಾತಿ ನಿಂದನೆ ದೂರು ಸಲ್ಲಲಿಸುವುದಾಗಿ ಧಮಕಿ ಹಾಕಿರುತ್ತಾರೆ. ದಯಾಳುಗಳಾದ ತಾವು ಇವರ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಕೈಕೊಳ್ಳಬೇಕಾಗಿ ವಿನಂತಿ ಮತ್ತು  ನನ್ನ ಜೀವಕ್ಕೆ ಏನಾದರು ಹಾನಿಯಾದರೆ ಈ ಮೇಲಿರುವ ಹೆಸರಿನವರೆ ಕಾರಣಿಭೂತರೆಂದು ಈ ಮೂಲಕ ತಮ್ಮಲ್ಲಿ ಕಳಕಳಿಯ ಮನವಿ ಮಾಡಿಕೊಳ್ಳುತ್ತೇನೆ ಅಂತ ಇತ್ಯಾದಿಯಾಗಿದ್ದ ದೂರು ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 10-02-2023 06:28 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080