ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ ಠಾಣೆ:-  ದಿನಾಂಕ:೦೯.೦೨.೨೦೨೨ ರಂದು ಸಂಜೆ ೦೭-೦೦ ಗಂಟೆಗೆ ಶ್ರೀ ಮಲ್ಲಿಕಾರ್ಜುನ ತಂದೆ ಮಾದಪ್ಪ ಐನಾಪೂರೆ ಸಾ:ಯುನಾನಿ ಆಸ್ಪತ್ರೆ ಹತ್ತಿರ ದುಬೈ ಕಾಲನಿ ಕಲಬುರಗಿ ಇತನು ಅರಕ್ಷಕ ನಿರೀಕ್ಷಕರು ಚೌಕ ಪೊಲೀಸ ಠಾಣೆ ಕಲಬುರಗಿ ರವರಿಗೆ ವಿಳಾಸ ಮಾಡಿದ ಗಣಕೀಕೃತ ದೂರುನ್ನು ತನ್ನ ಮಗ ಶ್ರೀ ಯಲ್ಲಾಲಿಂಗ ಐನಾಪೂರೆ ಇತನು ಹಾಜರಪಡಿಸಿದ್ದರ ಸಾರಾಂಶವೆನೆಂದೆರೆ, ನನ್ನ ಮಗಳಾದ ರೇಖಾ ಇವಳಿಗೆ ನಮ್ಮ ಓಣಿಯ ಅಂಬಣ್ಣಾ ಲಕ್ಕಣಗಾಂವ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಸಧ್ಯ ಅವರಿಗೆ ೦3 ವರ್ಷದ ಪ್ರೀತಮ ಎಂಬ ಗಂಡು ಮಗು ಇರುತ್ತದೆ. ಗಂಡ ಹೆಂಡತಿ ಮಧ್ಯೆ ಸಂಸಾರಿಕ ವಿಷಯದಲ್ಲಿ ತಕರಾರು ಆಗಿದ್ದರಿಂದ ನನ್ನ ಮಗಳು ರೇಖಾ ಇವಳು ಸುಮಾರು ೫-೬ ತಿಂಗಳಿಂದ ಗಂಡನ ಮನೆ ಬಿಟ್ಟು ನಮ್ಮ ಮನೆಯಲ್ಲಿ ತನ್ನ ಮಗನೊಂದಿಗೆ ವಾಸವಾಗಿರುತ್ತಾಳೆ.   ದಿನಾಂಕ ೦೭/೦೨/೨೦೨೨ ರಂದು ರಾತ್ರಿ ೯-೩೦ ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಜಗದೇವಿ ಮಗಳು  ರೇಖಾ ಮಗ ಯಲ್ಲಾಲಿಂಗ ಎಲ್ಲರೂ ಮನೆಯ ಮುಂದಿನ ಅಂಗಳದಲ್ಲಿ ಇದ್ದಾಗ  ಆಗ ನನ್ನ ಅಳಿಯ ಸುನೀಲ ತಂದೆ ಅಂಬಣ್ಣಾ ಲಕ್ಕಣಗಾಂವ ಇತನು ನಮ್ಮ ಮನೆ ಎದುರುಗಡೆ ಬಂದು ನನ್ನ ಮಗಳಿಗೆ  ತನ್ನ ಮಗ ಪ್ರೀತಮ ಕೊಡು ಅವನಿಗೆ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಕೇಳಿದನು. ಅದಕ್ಕೆ ಅವಳು ಮಗನಿಗೆ ಕೊಡುವುದಿಲ್ಲಾ ಮತ್ತು ನಿನ್ನ ಮನೆಗೆ ಬರುವುದಿಲ್ಲಾ ಅಂತಾ ಹೇಳಿ ತಕರಾರು ಮಾಡುತ್ತಿದ್ದಾಗ ಅಲ್ಲೇ ಇದ್ದ ನಾನು ಮಗಳು ನಿನ್ನ ಮನೆಗೆ ಬರುವುದಿಲ್ಲಾ ಅಂತಾ ಹೇಳಿದರೆ ಕೇಳುವುದಿಲ್ಲಾ ಅಂತಾ ಹೇಳಿದಾಗ ನನ್ನ ಅಳಿಯ ಇತನು ನನಗೆ ಭೋಸಡಿ ಮಗನೇ ರಂಡಿ ಮಗನೇ ಅಂತಾ ಅವಾಚ್ಯ ಬೈಯ್ಯುತ್ತಿದಾಗ, ಅವನು ಹೊಲಸು ಬೈಯ್ಯುವುದು ಮಾಡುತ್ತಿದ್ದಾಗ ಅವನು ಬೈಗಳ ಕೇಳದೇ ಎದ್ದು ಮನೆಯಲ್ಲಿ ಹೋಗುತ್ತಿದ್ದ ನನಗೆ ತಡೆದು ನಿಲ್ಲಿಸಿ ಕೈ ಮುಷ್ಟಿ ಮಾಡಿ ನನ್ನ ಎಡ ಎದೆ ಪಕ್ಕೆಯಲ್ಲಿ ಹೊಡೆದು ಗುಪ್ತಗಾಯಗೊಳಿಸಿದನು. ಈ ಜಗಳಾ ಇಲ್ಲೇ ಇದ್ದ  ನನ್ನ ಹೆಂಡತಿ, ಮಗ, ಮಗಳು ಎಲ್ಲರೂ ನೋಡಿ ಜಗಳಾ ಬಿಡಿಸಿಕೊಂಡರು. ನಂತರ ನನಗೆ ನನ್ನ ಅಳಿಯ ಸುನೀಲ ಇತನು ನನ್ನ ಮಗನಿಗೆ ಕೊಡದೇ ಹೋದರೆ ಜೀವದಿಂದ ಹೊಡೆಯುತ್ತೇನೆ ಎಂದು ಜೀವ ಬೆದರಿಕೆ ಹಾಕಿದನು. ನಂತರ ನಾನು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ ಬಂದು ಸೇರಿಕೆ ಆಗಿರುತ್ತೇನೆ. ಆ ದಿನ ಪೊಲೀಸರು ರಾತ್ರಿ ಪೊಲೀಸರು ಎಂ.ಎಲ್.ಸಿ. ವಿಚಾರಣೆಗಾಗಿ ಬಂದಾಗ ನನ್ನ ಅಳಿಯ ನನಗೆ ಹೊಡೆದಿದ್ದರಿಂದ ವಿಚಾರಿಸಿಕೊಂಡು ನಂತರ ದೂರು ಕೊಡುತ್ತೇನೆ ಎಂದು ಹೇಳಿರುತ್ತೇನೆ. ಈ ದೂರು ನನ್ನ ಮಗ ಯಲ್ಲಾಲಿಂಗ ಇತನ ಕೈಯಲ್ಲಿ ಕೊಟ್ಟು ಕಳುಹಿಸಿಕೊಟ್ಟಿದ್ದು ಈ ಕಾರಣದಿಂದ ನನಗೆ ದೂರು ಕೊಡಲು ತಡವಾಗಿರುತ್ತದೆ.  ಕಾರಣ ನನಗೆ ಹೊಡೆದ  ನನ್ನ ಅಳಿಯ ಸುನೀಲ ತಂದೆ ಅಂಬಣ್ಣಾ ಲಕ್ಕಣಗಾಂವ ಸಾ:ದುಬೈ ಕಾಲನಿ ಕಲಬುರಗಿ  ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿಕೆ ಎಂದು ಕೊಟ್ಟ ದೂರಿನ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 11-02-2022 12:23 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080