ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 09/01/2023 ರಂದು ಮಧ್ಯಾಹ್ನ 12:15 ಗಂಟೆಗೆ ಶ್ರೀ. ರಾಮಣ್ಣ ತಂದೆ ಅಮರಪ್ಪಾ ಗೊರ್ ವಯಃ 32 ವರ್ಷ ಜಾತಿಃ ಕುರುಬ ಉಃ ಕಂಡಕ್ಟರ ನಂ. 1823 (ರಾಯಚೂರ ಡಿಪೊ ನಂ.3) ಸಾಃ ಕನ್ನಪೂರ ಹಟ್ಟಿ ತಾಃ ಲಿಂಗಸೂರ ಹಾ.ವಃ ಮಾಣೀಕ ನಗರ ರಾಯಚೂರ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ಅರ್ಜಿ ಸಲ್ಲಿಸಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ: 08/01/2023 ರಂದು ನಾನು ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಶರಣಪ್ಪಾ ತಂದೆ ಭೀಮರಾಯ ವಟ್ಟೆರ ಡ್ರೈವರ ನಂ. 881 ಇಬ್ಬರೂ ಡಿಪೊಕ್ಕೆ ಹೋದಾಗ ನಮ್ಮ ಮೇಲಾಧಿಕಾರಿಗಳು ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ 36 ಎಫ್ 1257 ಇದರ ಮೇಲೆ ರೂಟ ನಂ. 137 ರಾಯಚೂರದಿಂದ ಕಲಬುರಗಿಗೆ ನೇಮಿಸಿದ್ದರಿಂದ, ಆದೇಶದ ಪ್ರಕಾರ ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಈ ಬಸ್ಸನ್ನು ತೆಗೆದುಕೊಂಡು ಪ್ರಯಾಣಿಕರನ್ನು ಕೂಡಿಸಿಕೊಂಡು ಕಲಬುರಗಿಗೆ ಬರುತ್ತಿರುವಾಗ ಮಧ್ಯಾಹ್ನ 2:45 ಗಂಟೆ ಆಗಿರಬಹುದು ಕಲಬುರಗಿ ಸಮೀಪ ನಂದೂರ ಇಂಡಸ್ಟ್ರಿಯಲ ಏರಿಯಾದ ಇಂಡಿಯನ್ ಆಯಿಲ್ ಕ್ರಾಸಿನ ಹತ್ತೀರ ನನ್ನ ರೂಟಿಗೆ ನಾನು ಬರುತ್ತಿರುವಾಗ ಒಳರೋಡಿನ ಕಚ್ಚಾರಸ್ತೆಯಿಂದ ಅಶೋಕ ಲೆಲೈಂಡ ದೋಸ್ತ ಗೂಡ್ಸ ವಾಹನ ನಂ. ಕೆಎ 32 ಡಿ 9809 ನೇದ್ದರ ಚಾಲಕನು ವಾಹನದ ಮೇಲೆ ಡೆಂಜರ ರೀತಿಯಲ್ಲಿ ಉದ್ದನೇಯ ಪಿಯುಸಿ ಪೈಪುಗಳನ್ನು ಮುಂದಕ್ಕೆ ಹಾಗು ಹಿಂದಕ್ಕೆ ಹೊರಬಿಟ್ಟು ವಾಹನವನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೆ ನೇರವಾಗಿ ಬಸ್ಸಿನ ಬಲಭಾಗದ ಪ್ರಯಾಣಿಕರು ಕೂಡುವಂತಹ ಗ್ಲಾಸುಗಳು ಈ ಪೈಪುಗಳು ಡಿಕ್ಕಿ ಹೊಡೆದಿದ್ದರಿಂದ 10 ಗ್ಲಾಸುಗಳು ಒಡೆದು ಹೋಗಿದ್ದು ಮತ್ತು ನಂತರ ಈ ವಾಹನ ಕೂಡಾ ಬಸ್ಸಿನ ಮಧ್ಯಂತರದಲ್ಲಿ ಡಿಕ್ಕಿ ಹೊಡೆದಿದ್ದು ನಾನು ಸೈಡಿಗೆ ನಿಲ್ಲಿಸಿ ನೋಡಲಾಗಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರೆಲ್ಲರೂ ಇಳಿದು ಹೋದರು. ಅವರ ಬಗ್ಗೆ ನಿಖರವಾದ ಮಾಹಿತಿ ಸಿಗಲಿಲ್ಲಾ. ಅಪಘಾತ ಪಡಿಸಿದ ಗೂಡ್ಸ ವಾಹನದ ಚಾಲಕನ ಹೆಸರು ಅಸ್ವಾದ ಅನ್ಸಾರಿ ತಂದೆ ಅಸ್ಪಾಕ ಅನ್ಸಾರಿ ಸಾಃ ಆಳಂದ ಅಂತಾ ತಿಳಿಸಿದ್ದು ಹಾಗು ಆತನ ಸೈಡಿಗೆ ಮಹೇಶ ತಂದೆ ಅಂಬಾರಾಯ ಹತ್ತರಗಿ ಎಂಬುವರು ಇದ್ದು, ಮುಂದೆ ಪ್ರಯಾಣಿಕರು ಯಾವ ಆಸ್ಪತ್ರೆಗೆ ಹೋದರು ಅಥವಾ ಮನೆಗೆ ಹೋದರು ಗೊತ್ತಾಗಲಿಲ್ಲಾ. ರಾತ್ರಿ ವಿಚಾರಿಸಿದರು ಮಾಹಿತಿ ಸಿಗಲಿಲ್ಲಾ.ಕಾರಣ ಈ ವಿಷಯದಲ್ಲಿ  ಅಶೋಕ ಲೆಲೈಂಡ ದೋಸ್ತ ಗೂಡ್ಸ ವಾಹನ ನಂ. ಕೆಎ 32 ಡಿ 9809 ನೇದ್ದರ ಚಾಲಕ ಅಸ್ವಾದ ಅನ್ಸಾರಿ ತಂದೆ ಅಸ್ಪಾಕ ಅನ್ಸಾರಿ ಸಾಃ ಆಳಂದ ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 09/01/2023 ರಂದು 05:30 ಪಿ.ಎಮ್ ಕ್ಕೆ ಶ್ರೀ ರವಿಕುಮಾರ ತಂದೆ ಸುಭಾಷ ರೆಡ್ಡಿ ಸಾ; ಶೇಖ ರೋಜಾ ಶಹಾಬಜಾರ ಕಲಬುರಗಿ  ಇವರು ಪೊಲೀಸ್ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿರ್ಯಾದಿ ಅರ್ಜಿಯನ್ನು ಹಾಜರು ಪಡಿಸಿದ್ದು ಸಾರಂಶವೆನೆಂದರೆ,  ದಿನಾಂಕ: 23-12-2022 ರಂದು ಸಾಯಂಕಾಲ 05:18 ಗಂಟೆ ಸುಮಾರಿಗೆ ಫಿರ್ಯಾದಿ ಮಾವನವರಾದ ಧಶರಥ ರೆಡ್ಡಿ ತಂದೆ ವೆಂಕಟ ರೆಡ್ಡಿ ಇವರು ಮೋಟಾರ ಸೈಕಲ ನಂ KA-32 W-1677 ನೇದ್ದರ ಮೇಲೆ ಶೇಖ ರೋಜಾದಲ್ಲಿ ಇರುವ ಅವರ ಮನೆಯಿಂದ ಆಳಂದ ಚೆಕ್ ಪೋಸ್ಟ್ ಕಡೆಗೆ ಹೋಗುವಾಗ ಮಾಲಗುಡಿ ಶಾಲೆ ಎದುರಿನ ರಸ್ತೆಯ ಮೇಲೆ ಮೋಟಾರ ಸೈಕಲ ನಂ KA-32 EX-8743 ನೇದ್ದರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿಯವರ ಮಾವರಾದ ಧಶರಥ ರಡ್ಡಿ ಅವರ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿದ್ದು ಫಿರ್ಯಾಧಿಯವರು ಗಾಯಾಳು ಅವರ ಕುಟುಂಬದವರೊಂದಿಗೆ  ವಿಚಾರಿಸಿ ಇಂದು ತಡ ಮಾಡಿ ದೂರು ಸಲ್ಲಿಸಿದ್ದು ಇರುತ್ತದೆ,  ಕಾರಣ ಮೋಟಾರ ಸೈಕಲ ನಂ  KA-32 EX-8743 ನೇದ್ದರ ಸವಾರನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

  

ರಾಘವೇಂದ್ರ ನಗರ ಪೊಲೀಸ ಠಾಣೆ :- ದಿನಾಂಕ: 08/01/2023 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ಜೀಮ್ಸ್ ಆಸ್ಪತ್ರೆಯಿಂದ ಎಮ್ಎಲ್.ಸಿ ವಸೂಲಾಗಿದ್ದರ ಪ್ರಯುಕ್ತ ಎಮ್.ಎಲ್.ಸಿ ತರಲು ಹೊರೆಟು ರಾತ್ರಿ 11:30 ಗಂಟೆಯ ಸುಮಾರಿಗೆ ಆಸ್ಪತ್ರೆಗೆ ಬೇಟ್ಟಿ ಮಾಡಿ ಗಾಯಾಳು ಶ್ರೀ ಬಸವರಾಜ ತಂದೆ ರಾಜಶೇಖರ ಹಿರಗೌಡ ವಯಃ 25 ವರ್ಷ ಜಾಃ ಲಿಂಗಾಯತ ಹೊಟೆಲ ಕೆಲಸ ಸಾಃಧನಗರಗಲ್ಲಿ ಬ್ರಹ್ಮಪೂರ ಕಲಬುರಗಿ ಇವರ ಹೇಳಿಕೆ ಪಡೆದು ಕೊಂಡು ಮರಳಿ ದಿನಾಂಕಃ 09.01.2023 ರಂದು 00.45 ಗಂಟೆಗೆ ಠಾಣೆಗೆ ಬಂದು ಸದರಿ ಗಾಯಾಳು ದಾರನ ಹೇಳಿಕೆ ಸಾರಾಂಶವೆನೆಂದರೆ ಈಮೇಲ್ಕಾಣಿಸಿದ ಹೆಸರು ವಿಳಾಸದ ನಿವಾಸಿತನಿದ್ದು ಹೊಟೆಲ ಕೆಲಸ ಮಾಡಿಕೊಂಡು ಧನಗರಗಲ್ಲಿಯಲ್ಲಿ ವಾಸವಾಗಿರುತ್ತೇನೆ ನಮ್ಮ ತಂದೆ-ತಾಯಿಗೆ ನಾವು ಇಬ್ಬರು ಮಕ್ಕಳು ಅದರಲ್ಲಿ ನಾನೆ ಮೊದಲನೆಯ ಮಗನಾಗಿರುತ್ತೇನೆ. ಹೀಗೆ ಇರುವಾಗ ದಿನಾಂಕಃ 08.01.2023 ರಂದು ಮದ್ಯಾಹ್ನ 3.30 ಗಂಟೆಯ ಸುಮಾರಿಗೆ ನಾನು ಕೆಲಸಕ್ಕೆ ಹೋಗ ಬೇಕೆಂದು ಮನೆಯಿಂದ ಚಾಲುಕ್ಯಾ ಬಾರ ಹತ್ತಿರ ಹೋಗುತ್ತಿರುವಾಗ ನನ್ನ ಗೆಳೆಯನಾದದತ್ತು ಜಂಗಲಿ ಮತ್ತು ಇನ್ನೊಬ್ಬ ಕೂಡಿ ಕರೆದಾಗ ನಾನು ಅವರ ಹತ್ತಿರ ಹೋದಾಗ ರಂಡಿ ಮಗನೆ ಮೊನ್ನೆ ನಾನು ಕೊಟ್ಟ ಹಣ ಕೊಡು ಅಂತ ಅಂದಾಗ ನಾನು ಯಾವ ಹಣ ಅಂತ ಕೇಳಿದ್ದಾಗ ಬೋಸಡಿ ಮಗನೆ ಯಾವ ಹಣ ಅಂತ ಕೇಳುತ್ತಿಯಾ ಅಂದು ನನಗೆ ಹೊಡೆಯುವದಕ್ಕೆ ಚಾಲು ಮಾಡಿರುತ್ತಾರೆ. ನಂತರ ನನಗೆ ಅಟೋದಲ್ಲಿ ಕೂಡಿಸಿ ಕೊಂಡು ಕರೆದುಕೊಂಡು ಹೋಗಿ ಕಲ್ಯಾಣಿ ಕಲ್ಯಾಣ ಮಂಟಪದ ಹತ್ತಿರ ಕೆಳಗೆ ಇಳಿಸಿದತ್ತು ಜಂಗಲ್ಲಿ ಬಡಿಗೆಯಿಂದ ಕೈಮೇಲೆ, ಬೆನ್ನಿನ ಮೇಲೆ, ಹೊಟ್ಟೆಯ  ಮೇಲೆ ಹೊಡೆದು ರಕ್ತ  ಗಾಯ ಗುಪ್ತಗಾಯ  ಮಾಡುತ್ತಿರುವಾಗ ದತ್ತು ಸಂಗಡ ಬಂದಿರುವ  ಇನ್ನೊಬ್ಬ  ಅಲ್ಲೆ ಬಿದ್ದಿರುವ  ಕಲ್ಲಿನಿಂದ  ನನ್ನ ಕಾಲ  ಮೇಲೆ  ಹೊಡೆದು  ರಕ್ತಗಾಯ  ಮಾಡುತ್ತಿರುವಾಗ  ನಾನು ತಪ್ಪಿಸಿಕೊಂಡು  ಮನೆಗೆ  ಬಂದು  ನನ್ನ ತಾಯಿ  ಹಾಗೂ ತಮ್ಮನಿಗೆ ಹೇಳಿರುತ್ತೇನೆ. ನಂತರ ನಮ್ಮ ಮನೆಯಲ್ಲಿ  ವಿಚಾರಿಸಿ ನನಗೆ  ನೋವು  ಜಾಸ್ತಿ ಆಗಿದ್ದರಿಂದ ಆಸ್ಪತ್ರೆಗೆ  ಬಂದು ಸೇರಿಕೆ ಆಗಿರುತ್ತೇವೆ. ನನಗೆ ವಿನಾಃ ಕಾರಣ  ಜಗಳ ತೆಗೆದು ಬಡಿಗೆಯಿಂದ ಕಲ್ಲಿನಿಂದ  ಹೊಡೆದು ಜೀವದ ಭಯ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ  ಸಾರಾಂಶದ  ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರಾಘವೇಂದ್ರ ನಗರ ಪೊಲೀಸ ಠಾಣೆ :- ದಿನಾಂಕ:09.01.2023 ರಂದು ಸಾಯಂಕಾಲ 7:30 ಗಂಟೆಗೆ ಶ್ರೀ ಬಸವರಾಜ ಪಿ.ಎಸ್.ಐ., ಸಿ.ಸಿ.ಬಿ. ಘಟಕ, ಕಲಬುರಗಿ ಘಟಕರವರು ಓಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಮುದ್ದೆಮಾಲು ನೀಡಿದ್ದರ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಸಾಯಂಕಾಲ7-40ಕ್ಕೆ ಪರವಾನಿಗೆ  ಪಡೆದುಕೊಂಡು  ಠಾಣೆಗೆ  ಹಾಜರಾಗಿ ದೂರು  ನೀಡಿದ್ದರ  ಸಾರಾಂಶವೆನೆಂದರೆ ಇಂದು ದಿನಾಂಕ:09-01-2023ರಂದು ಮದ್ಯಾಹ್ನ 03:30 ಪಿ.ಎಮ್. ಗಂಟೆಗೆ ನಾನು ಸಿ.ಸಿ.ಬಿ. ಕಛೇರಿಯಲ್ಲಿದ್ದಾಗ ಕಲಬುರಗಿ ನಗರದ ಎಮ್.ಎಸ್.ಕೆ. ಮಿಲ್ಲಎರಿಯಾದ ಮೌಲಾಲಿ ಕಟ್ಟಾ ಹತ್ತಿರ ಸಾರ್ವಜನಿಕ ರಸ್ತೆಯ  ಮೇಲೆ ಒಬ್ಬ ವ್ಯಕ್ತಿ ತಮ್ಮ ಲಾಭಗೋಸ್ಕರ  ಸಾರ್ವಜನಿಕರಿಂದ  ಹಣಪಡೆದು 01 ರೂಪಾಯಿಗೆ  80 ರೂಪಾಯಿ  ಕೊಡುವುದಾಗಿ ಹೇಳಿ  ಕಲ್ಯಾಣ  ಮತ್ತು  ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಯನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ  ಖಚಿತ  ಮಾಹಿತಿ ಬಂದ ಮೇರೆಗೆ ಸದರಿ  ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಅವರ  ಮಾರ್ಗದರ್ಶನದಲ್ಲಿ ದಾಳಿ ಮಾಡುವ  ಕುರಿತು ಇಬ್ಬರೂ  ಪಂಚರಾದ  1)ಶ್ರೀಮಹಾಂತೇಶ ತಂದೆ  ಶಿವನಾಗಯ್ಯ  ಕಡಬೂರ, ವ:27ವರ್ಷ, ಜಾತಿ:ಸ್ವಾಮಿ ಉ:ಅಟೋಚಾಲಕ, ಸಾ:ಸೈಯದ ಚಿಂಚೋಳಿ ಕ್ರಾಸ್ ಹತ್ತಿರ ಕಲಬುರಗಿ ಮೊ.ನಂ. 7760591043, 2) ಶ್ರೀಉಮಾಕಾಂತ ತಂದೆ  ದತ್ತು ಜಮಾದಾರ,  ವ:25 ವರ್ಷ, ಜಾ:ಕಬ್ಬಲಿಗ, ಉ:-ಖಾಸಗಿ ಕೆಲಸ, ಸಾ:ಸೈಯದ ಚಿಂಚೋಳಿ ಕ್ರಾಸ್ ಹತ್ತಿರ ಕಲಬುರಗಿ, ಮೋ.ನಂ:9980203439. ಇವರನ್ನು ಸಿ.ಸಿ.ಬಿ. ಘಟಕಕ್ಕೆ ಸಾಯಂಕಾಲ 04-00 ಗಂಟೆಗೆ ಬರಮಾಡಿಕೊಂಡು  ಸದರಿ  ಪಂಚರಿಗೆ  ವಿಷಯ ತಿಳಿ ಹೇಳಿ ಪಂಚನಾಮೆಗೆ  ಸಹಕರಿಸುವಂತೆ ಕೇಳಿಕೊಂಡ  ಮೇರೆಗೆ ಉಭಯ  ಪಂಚರು ಒಪ್ಪಿಕೊಂಡಿರುತ್ತಾರೆ. ನಂತರನಾನು, ಪಂಚರು, ಮತ್ತು ಸಿ.ಸಿ.ಬಿ ಘಟಕ ಸಿಬ್ಬಂದಿಯವರಾದ 1) ಮಲ್ಲಿಕಾರ್ಜುನ ಹೆಚ್.ಸಿ-79  2) ಕೇಸುರಾಯ ಹೆಚ್.ಸಿ-223 3) ಅಶೋಕ ಪಿ.ಸಿ-647 4)  ನಾಗರಾಜ ಪಿ.ಸಿ-1257 ಎಲ್ಲರೂ ಕೂಡಿ ತಮ್ಮ ತಮ್ಮ ಮೋಟಾರ ಸೈಕಲಗಳ ಮೇಲೆ ಸಾಯಂಕಾಲ 4-15 ಗಂಟೆಗೆ ಸಿ.ಸಿ.ಬಿ. ಕಛೇರಿಯಿಂದ ಹೊರಟು ಮಾಹಿತಿ ಬಂದ ಕಲಬುರಗಿ ನಗರದ ಎಮ್.ಎಸ್.ಕೆ. ಮಿಲ್ ಎರಿಯಾದ ಮೌಲಾಲಿ ಕಟ್ಟಾ ಹತ್ತಿರ ಸಾರ್ವಜನಿಕ ರಸ್ತೆಯ ಹತ್ತಿರ ಸಾಯಂಕಾಲ 4-45 ಗಂಟೆಗೆ ತಲುಪಿ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ವಾಹನದಿಂದ ಇಳಿದು ಅಲ್ಲಿಯೇ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಅಲ್ಲಿ ಹೋಗಿಬರುವ ಸಾರ್ವಜನಿಕರಿಂದ 1ರೂ ಗೆ 80 ರೂ. ಕೊಡುವುದಾಗಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿ ಬರೆದುಕೊಳ್ಳುವುದನ್ನು ನಾನು ಮತ್ತು ಪಂಚರು ನೋಡಿ ಖಚಿತಪಡಿಸಿಕೊಂಡು, ಪಂಚರ ಸಮಕ್ಷಮ ಸಾಯಂಕಾಲ 05-00 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ಒಮ್ಮಲ್ಲೇ ಎಲ್ಲರೂ ಕೂಡಿ ಸದರಿ ವ್ಯಕ್ತಿಗೆ ಹಿಡಿದಿದ್ದು, ನಂತರ ಸದರಿಯವನ ಆತನ ಹೆಸರು ವಿಳಾಸ ವಿಚಾರಿಸಲು ಮಹ್ಮದ ಸಲಿಂ ತಂದೆ ಮಹ್ಮದ ಖಾಲೀದ ಡೈಯ್ಯರ ವಯಾ:25 ವರ್ಷ ಉ :ತರಕಾರಿ ವ್ಯಾಪಾರ ಜಾತಿ:ಮುಸ್ಲಿಂ ಸಾ:ಮೌಲಾಲಿ ಕಟ್ಟಾ ಹತ್ತಿರ, ಎಮ್.ಎಸ್.ಕೆ.ಮಿಲ್ ಕಲಬುರಗಿ ಅಂತಾ ತಿಳಿಸಿದನು. ಮೋ.ನಂ.9635500775 ನಂತರ ಸದರಿ ಆರೋಪಿಯ ಅಂಗ ಶೋಧನೆ ಮಾಡಲಾಗಿ ಈತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದರೂ.15,140/- ನಗದು ಹಣ, ಮತ್ತು ಮಟಕಾ ಚೀಟಿ ಅ.ಕಿ. ರೂ.00/-, ಒಂದು ಬಾಲ ಪೆನ್ ಅ.ಕಿ.ರೂ.00/-, ಮತ್ತು ಒಂದು ಒಪ್ಪೊ ಕಂಪನಿಯ ಮೊಬೈಲ್ ಅ.ಕಿ. ರೂ.2000/- ದೊರೆತಿದ್ದು, ಅದರ ನಂಬರ ವಿಚಾರಿಸಲು 9635500775 ಅಂತಾ ತಿಳಿಸಿದ್ದು, ಅದರ ಐ.ಎಂ.ಇ.ಐ ನಂಬರ ಪರಿಶೀಲಿಸಲು (866778042954655, 866778042954648) ಅಂತಾ ಇರುತ್ತದೆ. ನಂತರ ಸದರಿಯವನಿಗೆ ಮಟಕಾ ಚೀಟಿಗಳನ್ನು ಯಾರಿಗೆ ಕೊಡುತ್ತೀಯಾ ಅಂತಾ ವಿಚಾರಿಸಿದಾಗ ತಬಸುಮ @ತಬ್ಬು ಬಂಬೈ ಮಿಟಾಯವಾಲೆ ಎಮ್.ಎಸ್.ಕೆ.ಮಿಲ್, ಕಲಬುರಗಿ ಈತನಿಗೆ ಕೊಡುತ್ತೇನೆ ಅಂತಾ ತಿಳಿಸಿದನು.  ಸದರಿ ಜಪ್ತುಪಡಿಸಿಕೊಂಡ ಮುದ್ದೇಮಾಲುಗಳಿಗೆ ಪಂಚರು ಸಹಿಮಾಡಿದ ಚೀಟಿಯನ್ನು ಅಂಟಿಸಿ ಒಂದು ಕವರನಲ್ಲಿ ಹಾಕಲಾಯಿತು. ಸದರಿ ಜಪ್ತಿ ಪಂಚನಾಮೆಯನ್ನು ಸಾಯಂಕಾಲ 5-00ಗಂಟೆಯಿಂದ 6-00ಗಂಟೆಯವರೆಗೆ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮದಲ್ಲಿ ಲ್ಯಾಪಟ್ಯಾಪನಲ್ಲಿ ಟೈಪಮಾಡಿ ಮುಗಿಸಲಾಯಿತು. ನಂತರ ರಾಘವೇಂದ್ರ ನಗರ ಪೊಲೀಸ್ ಠಾಣೆಗೆ ಬಂದು ನನ್ನ ವರದಿಯನ್ನು ತಯಾರಿಸಿ, ಜಪ್ತಿ ಪಂಚನಾಮೆ, ಮತ್ತು ಮುದ್ದೇಮಾಲು ಮತ್ತು ಆರೋಪಿಯನ್ನು ವಶಕ್ಕೆ ಪಡೆದು ಸದರಿ ಆರೋಪಿತರ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರಾಘವೇಂದ್ರ ನಗರ ಪೊಲೀಸ ಠಾಣೆ :- ದಿನಾಂಕಃ 09/01/2023 ರಂದು ಸಾಯಾಂಕಾಲ7.45 ಗಂಟೆಯ ಸುಮಾರಿಗೆ ಕೋರ್ಟ ಸಿಬ್ಬಂದಿಯಾಗಿರುವ ಶ್ರೀಮನ ಹೋರ ಪಿಸಿ 75 ನೇದ್ದವರು ಮಾನ್ಯ ನ್ಯಾಯಾಲಯದಿಂದ ಪಿಸಿ ನಂ408/2021 ನೇದ್ದು ತಂದು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶ ವೆನೆಂದರೆ ದಿನಾಂಕಃ22.07.2020 ರಂದು ಶೇಖಖಲೀಲ ಅಹ್ಮದ ತಂದೆ ಲೇಟ ಶೇಖಮಕ್ಬೂಲ ಅಹ್ಮದ ಗಾಡಿವಾಲೆ ಸಾಃಹುಸೇನಿ ನಗರ ಖಾದ್ರಿ ಚೌಕ ಹತ್ತಿರ ಕಲಬುರಗಿ ಇತನು ಫಿರ್ಯಾದಿ ಮನೆಗೆ ಬಂದು ನನಗೆ ವ್ಯಾಪಾರ ಮಾಡುವ ಸಂಬಂದ ಹಣದ ಅವಶ್ಯಕತೆ ಇದೆ ಅದಕ್ಕೆ ನನಗೆ 20 ಲಕ್ಷ ಹಣ ಕೊಡಿ ನಾನು ಹೇಗಾದರೂ ಮಾಡಿ ನಿಮ್ಮ ಹಣ ಮುಟ್ಟಿಸುತ್ತೇನೆ ಅಂತ ಹೇಳಿ ಅವರಿಂದ 20 ಲಕ್ಷ ಹಣ ತೆಗೆದುಕೊಂಡು ಎರಡು ವರ್ಷ ಆದರೂ ಆ ಹಣ ವಾಪಾಸಕೊಡದೆ ಇರುವದಕ್ಕೆ ಕೇಳುವದಕ್ಕೆ ಹೋದ್ದಾಗ ಆರೋಪಿತನು ಅವಾಚ್ಯವಾದ ಶಬ್ಧಗಳಿಂದ ಬೈದು ಯಾವ ಹಣನು ಕೊಡುವದಲ್ಲಿ ಹೋಗಿ ಏನು ಮಾಡಿಕೋಳ್ಳತ್ತಿ ಮಾಡಕೋ ಅಂತ ಬೈದು ಕೈಯಿಂದ ಹೊಡೆದಿರುತ್ತಾನೆ ಅಲ್ಲದೆ ಈ ಹಣದ ಸಂಬಂದ ನನ್ನ ಹತ್ತಿರ ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ನೊಡು ಅಂತ ಜೀವದ ಭಯ ಬೆದರಿಕೆ ಹಾಕಿರುತ್ತಾರೆ, ಕಾರಣ ನನ್ನ ಹತ್ತಿರ ಹಣ ತೆಗೆದು ಕೊಂಡು ನನಗೆ ವಾಪಾಸ ಕೊಡದೆ ಮೊಸ ಮಾಡಿದ್ದು ಅಲ್ಲದೆ ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಬೆದರಿಕೆ ಹಾಕಿದ್ದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 10-01-2023 01:22 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080