ಅಭಿಪ್ರಾಯ / ಸಲಹೆಗಳು

ಬ್ರಹ್ಮಪೂರ ಪೊಲೀಸ ಠಾಣೆ :-  ದಿನಾಂಕ: 08-12-2022  ರಂದು ಸಾಯಂಕಾಲ ೬:೩೫ ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸಚೀನ್ ತಂದೆ ರಾಯಪ್ಪ ಯಳಮೇಲಿ ವಯ:೩೧ವರ್ಷ ಜಾ:ಕುರುಬ ಉ:ಖಾಸಗಿ ಕೆಲಸ ಸಾ//ಮನೆ ನಂ 1-891/77/46 ಸಾಯಿಮಂದಿರ ಹಿಂಭಾಗ ಸಾಯಿರಾಮ ನಗರ ಜೇವರ್ಗಿ ರೋಡ ಕಲಬುರಗಿ ನಗರ. ನನ್ನದೊಂದು ಸ್ವಂತ ಹೊಂಡಾ ಡಿಯೋ ಮೋಟಾರ್ ಸೈಕಲ್ ನಂ ಏಂ-೩೨-ಇಏ-೨೮೭೨ ನೇದ್ದು ಇದ್ದು ಸದರಿ ಮೋಟಾರ್ ಸೈಕಲ್ ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ:27-11-2022 ರಂದು ಸಾಯಂಕಾಲ ೫:೩೦ ಗಂಟೆಗೆ ಕಲಬುರಗಿ ನಗರದ ಆರ್ಚಿಡ ಮಾಲ್ ಮುಂದೆ ನಿಲ್ಲಿಸಿ ಮಾಲ್ ಒಳಗಡೆ ಹೋಗಿ ಐನಾಕ್ಸ್ ಟಾಕೀಸ್‌ನಲ್ಲಿ ಪಿಚ್ಚರ್ ನೋಡಿಕೊಂಡು ಮರಳಿ ಅದೇ ದಿನ ಸಾಯಂಕಾಲ ೭:೩೦ ಗಂಟೆಗೆ ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ. ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ ಠಾಣೆ  :- ದಿನಾಂಕ: 08.12.2022 ರಂದು ಸಂಜೆ 07-45   ಗಂಟೆಗೆ ನಮ್ಮ ಠಾಣೆಯ ಶ್ರೀ ಅಣ್ಣಾರಾವ ಮಾನೆ ಪಿ.ಎಸ್.ಐ.. ಚೌಕ ಪೊಲೀಸ ಠಾಣೆ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ  ಒಬ್ಬ ಆರೋಪಿ ಮತ್ತು ಮುದ್ದೇ ಮಾಲಿನೊಂದಿಗೆ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ಸರ್ಕಾರಿ ತರ್ಫೇ ದೂರು ಮತ್ತು ಮಟಕಾ ದಾಳಿ ಜಪ್ತಿಪಂಚನಾಮೆ ಕೊಟ್ಟಿದ್ದರ ಸಾರಾಂಶವೆನೆಂದೆರೆ, ನಾನು, ಅಣ್ಣಾರಾವ ಮಾನೆ ಪಿ.ಎಸ್.ಐ. ಚೌಕ ಪೊಲೀಸ ಠಾಣೆ ಕಲಬುರಗಿ ಕರ್ನಾಟಕ ರಾಜ್ಯ ಸರ್ಕಾರಿ ತರ್ಪೇ ದೂರು ಕೊಡುವುದೆನೆಂದೆರೆ  ದಿನಾಂಕ 08/12/2022 ರಂದು ಸಂಜೆ 5-45 ಗಂಟೆಗೆ ಚೌಕ ಪೊಲೀಸ ಠಾಣೆಯಲ್ಲಿ ಇದ್ದಾಗ ನನಗೆ ಖಚಿತವಾದ ಬಾತ್ಮಿ ಬಂದಿದ್ದೆನೆಂದೆರೆ, ನಮ್ಮ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ನಗರದ ಚೌಕ ಸರ್ಕಲದಲ್ಲಿ ಇರುವ ಮಣಿಯಾರ ಹಾರ್ಡವೇರ್ ಅಂಗಡಿ ಎದುರುಗಡೆ ಇರುವ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ನಿಂತುಕೊಂಡು ಹೋಗಿ-ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾರೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1)ಶ್ರೀ ರೋಹಿತ ತಂದೆ ವಿಜಯಕುಮಾರ ಜಾಧವ ವ:22 ವರ್ಷ ಉ:ಬಂಡಿ ವ್ಯಾಪರ ಜಾತಿ ಲಂಬಾಣಿ ಸಾ:ಶಹಾಬಜಾರ ತಾಂಡಾ ಕಲಬುರಗಿ 2)ಶ್ರೀ ಅಣವೀರ ತಂದೆ ಕಲ್ಯಾಣಿ ಮಾಲಿಪಾಟೀಲ ವ:28 ವರ್ಷ ಉ:ವ್ಯಾಪರ ಜಾತಿ ಲಿಂಗಾಯತ ಸಾ:ಮರಗಮ್ಮ ಗುಡಿ ಹತ್ತಿರ ಶಹಾಬಜಾರ ಕಲಬುರಗಿ ಇವರುಗಳನ್ನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರಾದ ಸಿಪಿಸಿ 328 ಫಿರೋಜ, ಸಿಪಿಸಿ ಮೋಸಿನ 299, ಸಿಪಿಸಿ 08 ಅಶೋಕ ಇವರುಗಳನ್ನು ಬರಮಾಡಿಕೊಂಡು ಪಂಚರಿಗೆ ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ಬಾತ್ಮಿ ವಿಷಯ ತಿಳಿಸಿ, ಪಂಚರಿಗೆ ನಾವು ಮಾಡುವ ದಾಳಿ ಜಪ್ತಿ ಪಂಚನಾಮೆಯ ಪಂಚರಾಗಿ ಜಪ್ತಿ ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಪಂಚರು ಒಪ್ಪಿಕೊಂಡರು. ಮತ್ತು ಈ ಮೇಲಿನ ನಮ್ಮ ಸಿಬ್ಬಂದಿಯವರಿಗೆ ನನ್ನ ಜೊತೆಯಲ್ಲಿ ದಾಳಿಗೆ ಬರಲು ಸೂಚಿಸಿದಾಗ ಅವರು ಕೂಡಾ ಒಪ್ಪಿಕೊಂಡರು. ಆಗ ನಾನು ದಾಳಿ ಕುರಿತು ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ತಮ್ಮ ತಮ್ಮ ಮೋಟಾರ ಸೈಕಲಗಳ ಮೇಲೆ ಕುಳಿತುಕೊಂಡೇವು.ಮತ್ತು ಪಂಚರು ಕೂಡಾ ತಮ್ಮ ಒಂದು ಮೋಟಾರ ಸೈಕಲ ಮೇಲೆ ಕುಳಿತುಕೊಂಡರು.  ನಂತರ ನಾನು  ಮತ್ತು  ಪಂಚರು ಹಾಗೂ ಈ ಮೇಲಿನ ಸಿಬ್ಬಂದಿಯವರು ನಮ್ಮ ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಠಾಣೆಯಿಂದ ಸಂಜೆ 06-00 ಗಂಟೆಗೆ ಹೊರಟಿದ್ದು, ಬಾತ್ಮಿ ಸ್ಥಳವಾದ ಕಲಬುರಗಿ ನಗರದ ಚೌಕ ಸರ್ಕಲದಲ್ಲಿ ಇರುವ ಮಣಿಯಾರ ಹಾರ್ಡವೇರ್ ಅಂಗಡಿ ಎದುರುಗಡೆ ಇನ್ನೂ ಸ್ವಲ್ಪ ಮುಂದೆ ಇರುವಂತೆ ನಮ್ಮ ನಮ್ಮ ಮೋಟಾರ ಸೈಕಲಗಳು ಮತ್ತು ಪಂಚರು ತಮ್ಮ ಮೋಟಾರ ಸೈಕಲ ನಿಲ್ಲಿಸಿದಾಗ ಎಲ್ಲರೂ ಮೋಟಾರ ಸೈಕಲಗಳಿಂದ ಇಳಿದು ಮರೆಯಲ್ಲಿ ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ಹಾಗೂ ಪಂಚರು ನಿಂತು ನೋಡಲಾಗಿ ಒಬ್ಬನು ಚೌಕ ಸರ್ಕಲದಲ್ಲಿ ಇರುವ ಮಣಿಯಾರ ಹಾರ್ಡವೇರ್ ಅಂಗಡಿ ಎದುರುಗಡೆ ಇರುವ ಲೈಟಿನ ಬೆಳಕಿನಲ್ಲಿ ಮತ್ತು ಸಾರ್ವಜನಿಕ ಕೆ.ಇ.ಬಿ. ಕಂಬದ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ರಸ್ತೆ ಮೇಲೆ ನಿಂತುಕೊಂಡು ಹೋಗು-ಬರುವ ಸಾರ್ವಜನಿಕರಿಗೆ 1 ರೂ.ಗೆ 80 ರೂ. ಗೆಲ್ಲಿರಿ ಕಲ್ಯಾಣ ಮಟಕಾ ಇದೆ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಬರೆದುಕೊಡುತ್ತಿದ್ದನು. ನಾನು ನೋಡಿ ಪಂಚರಿಗೆ  ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ತೋರಿಸಿ ಖಚಿತಪಡಿಸಿಕೊಂಡು, ಪಂಚರ ಸಮಕ್ಷಮದಲ್ಲಿ ನಾನು  ಮತ್ತು ಈ ಮೇಲಿನ  ಸಿಬ್ಬಂದಿಯವರು ಸಂಜೆ 06-15 ಗಂಟೆಗೆ ದಾಳಿ ಮಾಡಿ ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲೂ ಅವನು ತನ್ನ ಹೆಸರು ಮಹ್ಮದ ಹಫೀಜ  ತಂದೆ ಮಹ್ಮದ ಬಸೀರ್ ವ:35 ವರ್ಷ ಉ:ಬಟ್ಟೆ ವ್ಯಾಪರ ಜಾತಿ ಮುಸ್ಲಿಂ ಸಾ: ಬಂದೇನವಾಜ ದರ್ಗಾ ಹತ್ತಿರ  ಮಿಲ್ಲತ ನಗರ ಕಲಬುರಗಿ ಅಂತಾ ತಿಳಿಸಿದನು. ಆತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ 1)ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ:ಕಿ:00 ರೂ. 2)ಒಂದು ಬಾಲಪೆನ್ನು ಅ:ಕಿ:00 ರೂ. 3)ನಗದು ಹಣ 3150/- ರೂ. ದೊರೆತವು. ನಂತರ ನಾನು ಅವನಿಗೆ ಮಟಕಾ ಚೀಟಿ ಯಾರಿಗೆ ಒಯ್ದು ಕೊಡುತ್ತೀ ಅಂತಾ ವಿಚಾರಿಸಿದಾಗ ಅವನು ಯಾವುದೇ ಸಮರ್ಪಕವಾದ ಉತ್ತರ ಕೊಡಲಿಲ್ಲಾ. ಆಗ ನಾನು ಕೇಸಿನ ಪುರಾವೆಗೋಸ್ಕರ ಒಂದು ದಸ್ತಿಯಲ್ಲಿ ನಗದು ಹಣ, ಮಟಕಾ ಚೀಟಿ, ಬಾಲಪೆನ್ನು ಹಾಕಿ ಗಂಟು ಕಟ್ಟಿ ಅದಕ್ಕೆ ಪಂಚರು ಸಹಿಸಿದ ಚೀಟಿ ಅಂಟಿಸಿ ನನ್ನ ವಶಕ್ಕೆ ತೆಗೆದುಕೊಂಡು ಜಪ್ತ ಪಡಿಸಿಕೊಂಡೆನು.  ಮತ್ತು ಮಹ್ಮದ ಹಫೀಜ  ತಂದೆ ಮಹ್ಮದ ಬಸೀರ್ ವ:35 ವರ್ಷ ಉ:ಬಟ್ಟೆ ವ್ಯಾಪರ ಜಾತಿ ಮುಸ್ಲಿಂ ಸಾ: ಬಂದೇನವಾಜ ದರ್ಗಾ ಹತ್ತಿರ  ಮಿಲ್ಲತ ನಗರ ಕಲಬುರಗಿ ಇತನು ಜೂಜಾಟದಲ್ಲಿ ನಿರತರಾದ ಬಗ್ಗೆ ಖಚಿತಪಟ್ಟಿದ್ದರಿಂದ ಸ್ಥಳದಲ್ಲಿ ಮಹ್ಮದ ಹಫೀಜ ತಂದೆ ಮಹ್ಮದ ಬಸೀರ್ ವ:35 ವರ್ಷ ಉ:ಬಟ್ಟೆ ವ್ಯಾಪರ ಜಾತಿ ಮುಸ್ಲಿಂ ಸಾ: ಬಂದೇನವಾಜ ದರ್ಗಾ ಹತ್ತಿರ  ಮಿಲ್ಲತ ನಗರ ಕಲಬುರಗಿ ಇತನಿಗೆ ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ವಶಕ್ಕೆ ತೆಗೆದುಕೊಂಡೇವು. ಈ ಬಗ್ಗೆ ಜಪ್ತಿ ಪಂಚನಾಮೆ ಇಂದು ದಿನಾಂಕ 08/12/2022 ರಂದು ಸಂಜೆ 06-15 ಗಂಟೆಯಿಂದ ಸಂಜೆ 07-15 ಗಂಟೆಯವರೆಗೆ ಸದರ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮಲ್ಲಿ ಲ್ಯಾಪಟ್ಯಾಪನಲ್ಲಿ ಜಪ್ತಿ ಪಂಚನಾಮೆ ಸಿಪಿಸಿ 08 ಅಶೋಕ ಇವರ ಕಡೆಯಿಂದ ಗಣಕೀಕೃತ ಮಾಡಿ ಮುಗಿಸಲಾಯಿತು. ಸದರ ಮಟಕಾ ಜೂಜಾಟದಲ್ಲಿ ನಿರತರಾದ ಮಹ್ಮದ ಹಫೀಜ  ತಂದೆ ಮಹ್ಮದ ಬಸೀರ್ ವ:35 ವರ್ಷ ಉ:ಬಟ್ಟೆ ವ್ಯಾಪರ ಜಾತಿ ಮುಸ್ಲಿಂ ಸಾ: ಬಂದೇನವಾಜ ದರ್ಗಾ ಹತ್ತಿರ ಮಿಲ್ಲತ ನಗರ ಕಲಬುರಗಿ ಇತನ ಮೇಲೆ ಕಾನೂನು ಕ್ರಮ ಜರೂಗಿಸಬೇಕೆಂದು ಆರೋಪಿ ಮಹ್ಮದ ಹಫೀಜ  ತಂದೆ ಮಹ್ಮದ ಬಸೀರ್ ವ:35 ವರ್ಷ ಉ:ಬಟ್ಟೆ ವ್ಯಾಪರ ಜಾತಿ ಮುಸ್ಲಿಂ ಸಾ: ಬಂದೇನವಾಜ ದರ್ಗಾ  ಹತ್ತಿರ  ಮಿಲ್ಲತ ನಗರ ಕಲಬುರಗಿ ಮತ್ತು ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ ಸರ್ಕಾರಿ ತರ್ಫೇ ದೂರು ಕೊಟ್ಟಿರುತ್ತೇನೆ.ಎಂದು ಕೊಟ್ಟ ಸರ್ಕಾರಿ ತರ್ಫೇ ದೂರು ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ 07-12-2022 ರಂದು   ರಾತ್ರಿ ೧೧:೦೦ ಗಂಟೆ ಸುಮಾರಿಗೆ ಸದರಿ ಆರೋಪಿತರು  ಕಲಬುರಗಿಯ ನಾಗನಹಳ್ಳಿ ಕ್ರಾಸ್ ಹತ್ತಿರ  ಏಕಾಏಕಿ ಒಮ್ಮಿಂದೊಮ್ಮೇಲೆ ನನಗೆ ಏ ರಂಡಿ ಮಗನೇ ಉಸುಕಿನ ಪರ್ಮಿಶನ್ ಇಲ್ಲದೆ ಹಾಗೇ ಉಸುಕು ತುಂಬಿಕೊAಡು ಹೋಗುತ್ತೀರಿ  ಅಂತಾ ಹೇಳಿ ಅದರಲ್ಲಿ ರಾಹುಲ ಈತನು ನಾನು ಸಂಘಟನೆಯ ಜಿಲ್ಲಾ ಅಧ್ಯಕ್ಷ ಇದ್ದೇನೆ ಅಂತಾ ಹೇಳಿ ರಾಯಾಲಿಟಿ ತೋರಿಸಿದರೂ ಹೊಡೆಬಡೆ ಮಾಡಿ ಅವಾಚ್ಯವಾಗಿ ಬೈದಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 12-12-2022 03:47 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080