ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್ ಠಾಣೆ-೨ :- ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ,  ಇಂದು ದಿನಾಂಕ ೦೮/೧೨/೨೦೨೧ ರಂದು ೩-೩೦ ಎ.ಎಮ್ ಕ್ಕೆ ರಾಜಕುಮಾರ ತಂದೆ ಮಲ್ಲೇಶಪ್ಪಾ ಪಡಸಾಲಿ ವ; ೩೬ ರ‍್ಷ ಜಾ; ಪ.ಜಾತಿ[ಹೊಲೆಯ] ಉ; ಕೂಲಿ ಕೆಲಸ ಸಾ; ನಾಗೂರ ತಾ; ಕಮಲಾಪುರ  ಜಿ; ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫರ‍್ಯಾದಿ ನೀಡಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ-೦೭/೧೨/೨೦೨೧ ರಂದು ರಾತ್ರಿ ಕಲಬುರಗಿಗೆ ಹೋಗುತ್ತೇನೆ ಅಂತಾ ಹೇಳಿ ನಮ್ಮ ಪರಿಚಯದವರ ಮೋಟಾರ ಸೈಕಲ ನಂ ಕೆಎ-೩೯ ಹೆಚ್-೪೭೭೪ ನೇದ್ದನ್ನು ಚಲಾಯಿಸಿಕೊಂಡು ನಾಗೂರದಿಂದ ಕಲಬುರಗಿಗೆ ಹೋಗಿರುತ್ತಾನೆ, ನಾನು ಮತ್ತು ನನ್ನ ಇನ್ನೋಬ್ಬ ತಮ್ಮ ಶಿವಲಿಂಗಪ್ಪಾ ಮನೆಯಲ್ಲಿರುವಾಗ ರಾತ್ರಿ ೧೦-೩೫ ಗಂಟೆ ಸುಮಾರಿಗೆ  ನನ್ನ ತಮ್ಮ ಮೋಹನ ಈತನ ಮೋಬೈಲದಿಂದ ಯಾರೋ ಒಬ್ಬರೂ ನನ್ನ ತಮ್ಮ ಶಿವಲಿಂಗಪ್ಪಾ ಈತನ ಮೋಬೈಲಗೆ ಪೋನ್ ಮಾಡಿ ಈ ಮೋಬೈಲ ಪೋನ್ ಯಾರದೂ ಅಂತಾ ಕೇಳಿದಕ್ಕೆ ನಾವು ನಮ್ಮ ತಮ್ಮ ಮೋಹನದು ಅಂತಾ ಹೇಳಿದಾಗ ಅವರು ನಿಮ್ಮ ತಮ್ಮ ಅವರಾಧ ಕಡೆಯಿಂದ ಕಲಬುರಗಿ ಕಡೆಗೆ ಬರುವಾಗ ಸ್ವಾಮಿ ಸರ‍್ಥ ಹತ್ತಿರ ರಾತ್ರಿ ೧೦-೦೦ ಗಂಟೆ ಸುಮಾರಿಗೆ ಯಾವುದೋ ಒಂದು ವಾಹನದ ಚಾಲಕನು ಕಲಬುರಗಿ ಕಡೆಯಿಂದ ಮಹಾಗಾಂವ್ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು  ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ನಿಮ್ಮ ತಮ್ಮನ ಮೋಟಾರ ಸೈಕಲಗೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಮೋಟಾರ ಸೈಕಲ ಸಮೇತ ಕೆಳಗೆ ಬಿಳಿಸಿ ಅವರಾಧ ಕಡೆಗೆ ಹೋಗಿರುತ್ತಾನೆ. ನಿಮ್ಮ ತಮ್ಮ ಚಲಾಯಿಸಿಕೊಂಡು ಬಂದ ಮೋಟಾರ ಸೈಕಲ ನಂ ಕೆಎ-೩೨ ಹೆಚ್-೪೭೭೪ ನೇದ್ದು ಇರುತ್ತದೆ, ಸದರ ಘಟನೆಯಿಂದ ನಿಮ್ಮ ತಮ್ಮನ ತೆಲೆ ಹಿಂದುಗಡೆ ಭಾರಿ ಒಳಪೆಟ್ಟು ಹಾಗೂ ಎಡಕಿವಿಯಿಂದ ರಕ್ತಸ್ರಾವ, ಎಡಗಡೆ ತೆಲೆಗೆ ತರಚಿದ ಗಾಯ, ಬಲಗಡೆ ಪಕ್ಕೆಗೆ ಹಾಗೂ ತೊಡೆಗೆ, ಬಲಗಾಲಿನ ಪಾದಕ್ಕೆ ರಕ್ತಗಾಯ, ಆಗಿದ್ದು ನಿಮ್ಮ ಮಾತನಾಡುವ ಸ್ಥಿತಿಯಲ್ಲಿ ಇಲ್ಲಾ ಆತನಿಗೆ ೧೦೮ ಅಂಬುಲೈನ್ಸ್ ನಲ್ಲಿ ಹಾಕಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಕಳುಹಿಸಿರುತ್ತೇವೆ ನೀವು ಅಲ್ಲಿಗೆ ಬರಬೇಕು ಅಂತಾ ತಿಳಿಸಿದಾಗ ನಾನು ಮತ್ತು ನಮ್ಮ ತಮ್ಮ ಶಿವಲಿಂಗಪ್ಪಾ ಇಬ್ಬರೂ ಊರಿನಿಂದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ನಮ್ಮ ತಮ್ಮ ಮೋಹನ ಈತನಿಗೆ ನೋಡಲು ೧೦೮ ಅಂಬುಲೈನಸ್ಸನಲ್ಲಿ ಮಲಗಿಸಿದ್ದು ನಾವು ಅಂಬುಲೈನ್ಸ ಸಿಬ್ಬಂದಿಯವರಿಗೆ ವಿಚಾರಿಸಲು ಅವರು ನಿಮ್ಮ ತಮ್ಮನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತರುವಾಗ ಮರ‍್ಗ ಮದ್ಯದಲ್ಲಿ ಅಂದಾಜು ರಾತ್ರಿ ೧೦-೪೫ ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದರು. ಆತನಿಗೆ ನೋಡಲು ಈ ಮೇಲೆ ತಿಳಿಸಿದಂತೆ ಗಾಯಗಳಾಗಿರುತ್ತವೆ, ನಂತರ ನಾನು ಮತ್ತು ನನ್ನ ತಮ್ಮ ಶಿವಲಿಂಗಪ್ಪಾ ವಿಚಾರಣೆ ಮಾಡಿಕೊಂಡು ಠಾಣೆಗೆ ಬಂದಿರುತ್ತೇವೆ, ಕಾರಣ ಯಾವುದೋ ಒಂದು ವಾಹನದ ಚಾಲಕನು ಕಲಬುರಗಿ ಕಡೆಯಿಂದ ಮಹಾಗಾಂವ್ ಕಡೆಗೆ ಹೋಗುವ ಕುರಿತು  ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ರಸ್ತೆ ಬದಿಯಿಂದ ಬರುತ್ತಿದ್ದ ನಮ್ಮ ತಮ್ಮನ ಮೋಟಾರ ಸೈಕಲಕ್ಕೆ ಎದುರಿನಿಂದ ಡಿಕ್ಕಿ ಪಡಿಸಿ ಮೋಟಾರ ಸೈಕಲ ಸಮೇತ ಕೆಳಗೆ ಬಿಳಿಸಿ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು ನಮ್ಮ ತಮ್ಮನಿಗೆ ಉಪಚಾರ ಕುರಿತು ೧೦೮ ಅಂಬುಲೈನ್ಸನಲ್ಲಿ ತರುವಾಗ ಮರ‍್ಗ ಮದ್ಯದಲ್ಲಿ ಮೃತಪಟ್ಟಿದ್ದು ಸದರಿ ಅಪಘಾತ ಪಡಿಸಿ ಓಡಿ ಹೋದ ಯಾವುದೋ ಒಂದು ವಾಹನದ ಚಾಲಕ ಹಾಗೂ ವಾಹನವನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಫರ‍್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 14-12-2021 11:57 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080