ಅಭಿಪ್ರಾಯ / ಸಲಹೆಗಳು

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ: 08-11-2022 ರಂದು ಸಾಯಂಕಾಲ ೦೭:೦೦ ಪಿ.ಎಮ್ ಕ್ಕೆ ಫಿರ್ಯಾದಿದಾರರಾದ ರೇಣುಕಾ ಗಂಡ ಶ್ರೀಮಂತ ಮಾಂಗ ವಯ:೪೦ವರ್ಷ ಜಾ:ಮಾದರ ಉ:ಕೂಲಿ ಕೆಲಸ ಸಾ//ರಾಣೇಶ್ ಪೀರ್ ದರ್ಗಾ ಹತ್ತಿರ ಕೃಷ್ಣಾ ಕಾಲೋನಿ ಜಫರಾಬಾದ ರೋಡ್ ಕಲಬುರಗಿ ನಗರ. ರವರು ಠಾಣೆಗೆ ಹಾಜರಾಗಿ ನೀಡಿದ ದೂರು ಅರ್ಜಿ ಎನೆಂದರೆ ನಾನು ನನ್ನ ಮಗಳಾದ ಕಾವೇರಿ ಇವಳ ಮದುವೆಯು ಇದೆ ತಿಂಗಳಲ್ಲಿ ಇರುವದರಿಂದ ನಾನು ನನ್ನ ಮಗಳ ಮದುವೆಯ ಸಲುವಾಗಿ ಕಲಬುರಗಿ ನಗರದ ಸರಫ ಬಜಾರದಲ್ಲಿರುವ ನಾಗಶೇಟ್ಟಿ ಇವರ ಬಂಗಾರದ ಅಂಗಡಿಯಲ್ಲಿ ೧೦ ಗ್ರಾಂ ಬಂಗಾರದ ಚೈನ್ ಅಂದಾಜು ಕಿಮ್ಮತ್ತು ೫೦೦೦೦/-ರೂಪಾಯಿ ಕಿಮ್ಮತ್ತಿನದು ಖರಿದಿಮಾಡಿದ್ದು, ನಂತರ ನಾನು ಮನೆಯಲ್ಲಿ ತೋರಿಸಿದಾಗ ಬಂಗಾರದ ಚೈನ್ ಡಿಸೈನ್ ಸರಿಯಾಗಿ ಇಲ್ಲ ಅಂತಾ ನನ್ನ ಗಂಡ ಶ್ರೀಮಂತ ಹಾಗೂ ಮಗಳು ಕಾವೇರಿ ಅಂದಾಗ ನಾನು ಅದನ್ನು ಬದಲಾಯಿಸಿಕೊಂಡು ಹೋಗಬೇಕು ಅಂತಾ ದಿನಾಂಕ ೧೭/೧೦/೨೦೨೨ ರಂದು ಮದ್ಯಾಹ್ನದ ವೇಳೆಯಲ್ಲಿ ಪ್ಲಾಸ್ಟೀಕ್ ಚೀಲದಲ್ಲಿ ಬಂಗಾರದ ಚೈನಿನ ಡಬ್ಬಿ ಹಾಕಿಕೊಂಡು ಅಂಗಡಿಗೆ ಬಂದು ನೋಡಲಾಗಿ ಅಂಗಡಿಯಲ್ಲಿ ಬಹಳಷ್ಟು ಜನರಿದ್ದು ಆಗ ನಾನು ಅಂಗಡಿಯ ಮುಂದೆ ನಿಂತಿದ್ದೆ. ನಂತರ ಸ್ವಲ್ಪ ಸಮಯದ ಮೇಲೆ ನಾನು ತಂದಿದ್ದ ಪ್ಲಾಸ್ಟೀಕ್ ಚೀಲವನ್ನು ನೋಡಲಾಗಿ ಪ್ಲಾಸ್ಟೀಕ್ ಚೀಲದ ಹಿಂಬಾಗ ಪೂರ್ತಿ ಹರಿದಿದ್ದು ಅದನ್ನು ಪರಿಶೀಲಿಸಲಾಗಿ ಒಳಗಿದ್ದ ೧೦ ಗ್ರಾಂ ಬಂಗಾರದ ಚೈನ್ ಇರಲಿಲ್ಲಾ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಕಾರಣ ಯಾರೋ ಅಪರಿಚಿತ ಕಳ್ಳರು ದಿನಾಂಕ ೧೭/೧೦/೨೦೨೨ ರಂದು ಮದ್ಯಾಹ್ನ ೦೧:೦೦ ಗಂಟೆಯಿಂದ ೦೩:೦೦ ಗಂಟೆ ಮಧ್ಯದ ಅವದಿಯಲ್ಲಿ ನನ್ನ ಕೈಯಲ್ಲಿದ್ದ ಪ್ಲಾಸ್ಟೀಕ್ ಚೀಲವನ್ನು ಹರಿದು ಒಳಗಡೆ ಡಬ್ಬಿಯಲ್ಲಿದ್ದ ೧೦ ಗ್ರಾಂ ಬಂಗಾರದ ಚೈನ್ ಅಂದಾಜು ಕಿಮ್ಮತ್ತು ೫೦೦೦೦/-ರೂಪಾಯಿ ಕಳ್ಳತನ ಮಾಡಿಕೊಂಡು ಹೋಗಿದ್ದು ಕಳುವಾದ ಬಂಗಾರ ಮತ್ತು ಆರೋಪಿತರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈ ಕೊಳ್ಳಬೇಕು ಮತ್ತು ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ವಿಚಾರಮಾಡಿ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ದಿನಾಂಕ- 25-01-2022 ರಂದು ಸಚೀನ ಕುಮಾರ ತಂದೆ ಭರತ ಮಾಲಿ ಇವರು ಕಲಬುರಗಿ ನಗರದ  ಜಯ ನಗರದ ಮೂತ್ತೂಟ್ ಫಿನ್‌ಕಾರ್ಪ ಲಿಮಿಟೆಡ್ ಶಾಖೆಯಲ್ಲಿ ೦೩ ಬಂಗಾರದ  ಚೈನಗಳು  ಮತ್ತು  ಒಂದು  ಬ್ರಾಸಲೈಟ ಆಭರಣಗಳು  ಒಟ್ಟು  ೧೫೫.೫ ಗ್ರಾಂ  ನಕಲಿ ಬಂಗಾರ ಅಡವಿಟ್ಟು ೫,೧೪,೫೩೫ ರೂಪಾಯಿಗಳನ್ನು ಖಾತೆ ಸಂಖ್ಯೆ ಎಫ್೧೫೨೯೩ ನೇದ್ದರ ಮುಂಖಾತರ ಪಡೆದುಕೊಂಡು  ಹಣ ಕಟ್ಟದೇ ಮೋಸ ಮಾಡಿ ಪರಾರಿಯಾಗಿದ್ದು ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ : 08-11-2022  ರಂದು ೩.೦೦ ಎ.ಎಮ್ ದಿಂದ ೦೭.೦೦ ಎ.ಎಮ್ ಮಧ್ಯ  ಅವಧಿಯಲ್ಲಿ ಸದರಿ ಆರೋಪಿತರು ಅಕ್ರಮವಾಗಿ ಗೋವುಗಳ ಚರ್ಮವನ್ನು ಲಾರಿ ನಂ. ಟಿ.ಎಸ್-೧೨ ಯುಬಿ ೬೨೩೪ ನೇದ್ದರಲ್ಲಿ ಕಲಬುರಗಿ ಯಿಂದ ಸೊಲ್ಲಾಪೂರಕ್ಕೆ ಸಾಗಿಸುತ್ತಿದ್ದ ಸಯಮದಲ್ಲಿ ಖಚಿತಮ ಬಾತ್ಮಿ ಮೇರೆಗೆ ಆರೋಪಿತರನ್ನು ದಸ್ತಗಿರಿ ಮಾಡಿ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :-  ದಿನಾಂಕ 08.11.2022 ರಂದು  ಸಾಯಂಕಾಲ 4:45 ಗಂಟೆಯಿಂದ 6-15 ಗಂಟೆಯವರೆಗೆ ಸದರಿ  ಆರೋಪಿತರು ನಂದೂರ ಗ್ರಾಮದ ಸಿದ್ದಣ್ಣಾ ಫರಹತಾಬಾದ ಇವರ ಮನೆಯ ಪಕ್ಕದ ಮನೆಹ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸದರಿ ಆರೋಪಿತರು ಇಸ್ಪೀಟ ಜೂಜಾಟ ಡುತ್ತಿದ್ದ ಸಮಯದಲ್ಲಿ ಖಚಿತ ಬಾತ್ಮಿ ಮೇರೆಗೆ ಆರೋಪಿತರನ್ನು ದಸ್ತಗಿರಿ ಮಾಡಿ ಆಟಕ್ಕೆ ಉಪಯೋಗಿಸಿದ ಹಣ 21100/- ರೂ ಹಾಗೂ 52 ಇಸ್ಪೀಟ ಲೆಗಳನ್ನು ಜಪ್ತಿ ಮಾಡಿ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

 

 

ಸಿ.ಇ.ಎನ್. ಪೊಲೀಸ್‌ ಠಾಣೆ :-  ದಿನಾಂಕ: 08-11-2022  ರಂದು ೨೦-೩೦ ಗಂಟೆಗೆ, ಶ್ರೀ ಹುಣಚಿರಾಯ @ ಕೇಶವ ಮೋಟಗಿ ಸಾ|| ಫರತಾಬಾದ್ ಇವರು ಠಾಣೆಗೆ ಹಾಜರಾಗಿ ದಿನಾಂಕ: ೦೪/೧೧/೨೦೨೨ ರಂದು ತಾವು ಸಲ್ಲಿಸಿದ ಎಲ್,ಪಿ,ಟಿ ನಂ: ೨೨೫/೨೦೨೨ ನೇದ್ದರಂತೆ ಅರೋಪಿತನ ವಿರುದ್ದ ಎಫ್,ಐ,ಆರ್ ದಾಖಲಿಸಲು ವಿನಂತಿಸಿಕೊಂಡಿದ್ದು ಸದರಿ ಎಲ್,ಪಿ,ಟಿಯನ್ನು ಪರಿಶೀಲಿಸಿ ನೋಡಿದ್ದು, ದೂರಿನಲ್ಲಿ ಅಸಂಜ್ಞೆ ಅಪರಾಧ ಇದ್ದು ದೂರಿನ ಸಾರಾಂಶವೆನೆಂದರೆ, ಪ್ರರಕಣದ ಫಿರ್ಯಾಧಿದಾರನಿಗೆ ಆರೋಪಿ ಪ್ರೀನ್ಸ್ ಪವನ್ ಎಂಬ ವ್ಯಕ್ತಿ ತನ್ನ ಪೇಸ್‌ಬುಕ್ ಐ.ಡಿಯಾದ “ಪ್ರೀನ್ಸ್ ಪವನ್ ನಂ ೪೩೫೬” ಪೇಸ್‌ಬುಕ್ ಐ,ಡಿಯಿಂದ ಅರ್ಜಿದಾರರಿಗೆ ಜೀವದ ಬೇದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ಬೈದ ವಿಡಿಯೋಗಳನ್ನು ಅಪ್‌ಲೋಡ್ ಮಾಡಿರುತ್ತಾನೆ. ಸದರಿ ಪ್ರಕರಣವು “ ಅಸಂಜ್ಞೆ ಅಪರಾಧ ಆಗಿರುವುದರಿಂದ ಇಂದು ದಿನಾಂಕ: ೦೮/೧೧/೨೦೨೨ ರಂದು  ಮಾನ್ಯ ೦೧ ನೇ ಹೆಚ್ಚುವರಿ ನ್ಯಾಯಾಧೀಶರಿಂದ “ಅಸಂಜ್ಞೆಯ ಪ್ರಕರಣದ” ಕುರಿತು ಪ್ರಕರಣದಾಖಲಿಸಲು ಅನುಮತಿ ಪಡೆದುಕೊಂಡು ಸದರಿ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

ಇತ್ತೀಚಿನ ನವೀಕರಣ​ : 22-11-2022 01:48 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080