ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-1  :- ದಿನಾಂಕ 08.10.2022 ರಂದು ಮದ್ಯಾಹ್ನ 3-30 ಗಂಟೆಗೆ ಶ್ರೀ ಮಂಜುನಾಥ ತಂದೆ ನಾಗೇಂದ್ರಪ್ಪಾ ಬಿರಾದಾರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ನನ್ನ ತಾಯಿ ಪಾರ್ವತಿ ವ: 60 ವರ್ಷ ಇವರು ಈಗ ಸುಮಾರು ದಿವಸಗಳಿಂದ ಸಂಗಮೇಶ್ವರ ಕಾಲೋನಿಯಲ್ಲಿ ಬರುವ ಡಾ|| ಶಿವಾನಂದ ಪಾಟೀಲ ಇವರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಇರುತ್ತಾರೆ. ನಾನು ಆಗಾಗ ಅವರ ಹತ್ತೀರ ಹೋಗಿ ಬರುತ್ತೆನೆ. ದಿನಾಂಕ 08.10.2022 ರಂದು ಬೆಳಿಗ್ಗೆ ನಾನು ಮತ್ತು ನನ್ನ ಅಕ್ಕ ರಾಜೇಶ್ವರಿ ಇಬ್ಬರೂ ಮನೆಯಲ್ಲಿರುವಾಗ ನನ್ನ ತಾಯಿ ಪಾರ್ವತಿ ಇವರು ಸಂಗಮೇಶ್ವರ ಕಾಲೋನಿಯಲ್ಲಿ ಬರುವ ಡಾ|| ಶಿವಾನಂದ ಪಾಟೀಲ ಇವರ ಮನೆಗೆ ಅಡುಗೆ ಕೆಲಸಕ್ಕೆ ಹೋಗುತ್ತೆನೆ ಅಂತಾ ಹೋದರು. ಮದ್ಯಾಹ್ನ ನನ್ನ ತಾಯಿ ನನಗೆ ಪೋನ ಮಾಡಿ ಶಿವಾನಂದ ಪಾಟೀಲ ಇವರ ಮನೆಗೆ ನನಗೆ ಬರಲು ತಿಳಿಸಿದ್ದರಿಂದ ನಾನು ಶಿವಾನಂದ ಪಾಟೀಲ ಇವರ ಮನೆಗೆ ಹೋದೆನು ಅಡುಗೆ ಕೆಲಸ ಮುಗಿದ ನಂತರ ನನ್ನ ತಾಯಿ ನನಗೆ ಮನೆಗೆ ಹೊಗೋಣಾ ನಡೆ ಅಂತಾ ತಿಳಿಸಿದಾಗ ಇಬ್ಬರೂ ಕೇಂದ್ರ ಬಸ್ಸ ನಿಲ್ದಾಣದಲ್ಲಿ ಇರುವ  ಸಿಟಿ ಬಸ್ಸ ಮುಖಾಂತರ ಹೋಗುವ ಕುರಿತು ಸಂಗಮೇಶ್ವರ ಕಾಲೋನಿಯಿಂದ ಕೆಂದ್ರ ಬಸ್ಸ ನಿಲ್ದಾಣವರೆಗೆ ನಡೆದುಕೊಂಡು ಬಂದು ಕೇಂದ್ರ ಬಸ್ಸ ನಿಲ್ದಾಣದ ಪ್ರವೇಶ ದ್ವಾರದ ಮುಖಾಂತರ ನಡೆದುಕೊಂಡು ಸಿಟಿ ಬಸ್ಸ ನಿಲ್ದಾಣ ಕಡೆಗೆ ಇಬ್ಬರೂ ಹೋಗುತ್ತೀರುವಾಗ ಹಿಂದಿನಿಂದ ಪ್ರವೇಶ ದ್ವಾರದ ಮುಖಾಂತರ ಒಬ್ಬ ಕೆ.ಕೆ.ಆರ.ಟಿ.ಸಿ ಬಸ್ಸ ಚಾಲಕನು ಪ್ಲಾಟ ಪಾರಂ ಕಡೆಗೆ ಹೋಗುವ ಕುರಿತು ತನ್ನ ಬಸ್ಸನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನಡೆದುಕೊಂಡು ಹೋಗುತ್ತೀರುವ ನನ್ನ ತಾಯಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದಾಗ ನನ್ನ ತಾಯಿ ಕೆಳಗಡೆ ಬಿದ್ದಾಗ ಬಸ್ಸ ಚಾಲಕನು ನನ್ನ ತಾಯಿ ಮೈಮೇಲೆ ಬಸ್ಸಿನ ಹಿಂದಿನ ಎಡಸೈಡಿನ ಗಾಲಿ ಚಲಾಯಿಸಿದಾಗ ನಾನು ಚೀರಾಡುವದನ್ನು ಕೇಳಿ ಬಸ್ಸ ಚಾಲಕನು ತನ್ನ ಬಸ್ಸನ್ನು ಮುಂದಕ್ಕೆ ಹೋಗಿ ನಿಲ್ಲಿಸಿದನು. ಸದರ ಘಟನೆ ನೋಡಿದ ನಾನು ಮತ್ತು ನನಗೆ ಪರಿಚಯದ ಸಾಗರ ತಂದೆ ಶಿವಪುತ್ರಪ್ಪಾ ಬಾವಿ ವಿಲಾಸಕುಮಾರ ತಂದೆ ಶರಣಪ್ಪಾ ಕುಂಬಾರ ಹಾಗೂ ಬಾಬುರಾಜ ತಂದೆ ನಾಗೆಂದ್ರಪ್ಪಾ ಕಟ್ಟಿಸಂಗಾವಿ ರವರು ಸೇರಿಕೊಂಡು ನನ್ನ ತಾಯಿಗೆ ನೋಡಲು ನನ್ನ ತಾಯಿಯ ಹಣೆಯ ಮೇಲೆ ಭಾರಿ ರಕ್ತಗಾಯ ತೆಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ ಮೆದಳು ಹೊರಗಡೆ ಬಂದಿದ್ದು ಗದ್ದಕ್ಕೆ ಭಾರಿ ಒಳಪೆಟ್ಟು ಬಲಗೈ ರಿಸ್ಟವರೆಗೆ ಭಾರಿ ರಕ್ತಗಾಯ, ಹೊಟ್ಟೆಗೆ ಭಾರಿ ರಕ್ತಗಾಯವಾಗಿ ಮೌಂಸ ಹೊರಗೆ ಬಂದಿತು ಎಡಗಾಲು ತೊಡೆಯಿಂದ ಮೊಳಕಾಲ ಕೆಳಗಿನವರಗೆ ಭಾರಿ ಪೆಟ್ಟು ಬಿದ್ದು ಮೌಂಸ ಹೊರಗೆ ಬಂದಿದ್ದು ಹಾಗೂ ಬಲಗಾಲು ಮೊಳಕಾಲ ಕೆಳೆಗೆ ಭಾರಿ ರಕ್ತಗಾಯವಾಗಿ ಅವಳ ಉಸಿರಾಟ ನಿಂತು ಮೃತಪಟ್ಟಿದ್ದಳು. ಸದರಿ ಘಟನೆ ಜರುಗಿದಾಗ ಅಂದಾಜು ಮದ್ಯಾಹ್ನ 1-15 ಗಂಟೆ ಸಮಯವಾಗಿತ್ತು ಬಸ್ಸ ಚಾಲಕ ನಮ್ಮ ಹತ್ತೀರ ಬಂದನು ಆತನ ಹೆಸರು ಸಂಜಯ ತಂದೆ ಹಣಮಂತರಾಯ ರಾಠೋಡ ಸಾ: ತರಿತಾಂಡಾ ಅಂತಾ ಕಂಡೆಕ್ಟರ ಹೆಸರು ಕಲ್ಯಾಣಿ ಅಂತಾ ಗೋತ್ತಾಯಿತು. ಅಪಘಾತ ಪಡಿಸಿದ ಬಸ್ಸ ನಂಬರ ನೋಡಲು ನಗರ ಸಾರಿಗೆ ಬಸ್ಸ ಇದ್ದು ಅದರ ನಂಬರ ಕೆಎ-32/ಎಫ್-1910 ನೇದ್ದು ಇದ್ದು ಸದರ ಬಸ್ಸ ಶಹಾಬಾದನಿಂದ ಕೇಂದ್ರ ಬಸ್ಸ ನಿಲ್ದಾಣಕ್ಕೆ ಬರುತ್ತೀರುವ ಬಗ್ಗೆ ತಿಳಿದುಕೊಂಡಿರುತ್ತೆನೆ. ಅಪಘಾತ ಸ್ಥಳಕ್ಕೆ ಒಂದು ಅಂಬುಲೇನ್ಸ ವಾಹನ ಬಂದಾಗ ನಾನು ಮತ್ತು ಸಾಗರ, ವಿಲಾಸಕುಮಾರ ಮತ್ತು ಬಾಬುರಾಜ ರವರು ಸೇರಿಕೊಂಡು ನನ್ನ ತಾಯಿಯ ಶವದ ಸುರಕ್ಷತೆಗಾಗಿ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೆವೆ. ಕೆ.ಕೆ.ಆರ.ಟಿ.ಸಿ. ನಗರ ಸಾರಿಗೆ ಬಸ್ಸ ನಂ ಕೆಎ-32/ಎಫ್-1910 ನೇದ್ದರ ಚಾಲಕ ಸಂಜಯ ಇತನು ಬಸ್ಸನ್ನು ಪ್ರವೇಶ ದ್ವಾರದಿಂದ ಕೇಂಧ್ರ ಬಸ್ಸ ನಿಲ್ದಾಣದ ಒಳಗಡೆ ಬರುವಾಗ ಬಸ್ಸನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತೀರುವ ನನ್ನ ತಾಯಿ ಪಾರ್ವತಿ ಇವರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅವರ ಮೈಮೇಲೆ ಬಸ್ಸಗಾಲಿ0 ಚಲಾಯಿಸಿ ಭಾರಿಗಾಯಗೊಳಿಸಿದ್ದರಿಂದ ನನ್ನ ತಾಯಿ ಪಾರ್ವತಿ ಇವರು ಅಪಘಾತ ಸ್ಥಳದಲ್ಲಿ ಮೃತ ಪಟ್ಟಿದ್ದು ಬಸ್ಸ ಚಾಲಕ ಸಂಜಯ ಇತನ ಮೇಲೆ  ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ ೦೮/೧೦/೨೦೨೨ ರಂದು ೦೯:೧೫ ಪಿ.ಎಂಕ್ಕೆ ಪಿರ್ಯಾದಿದಾರರಾದ ಶ್ರೀಮತಿ ಶ್ರೀಮತಿ ಎನ್.ವಿ.ಭವಾನಿ ಗಂಡ ಸಿ.ಎನ್. ಲಕ್ಷ್ಮೀನಾರಾಯಣ ವಯಸ್ಸು ೫೪ ವರ್ಷ ಜಾತಿ; ಬ್ರಾಹ್ಮೀಣ ಉ; ಎಲ್.ಐ.ಸಿ ಬ್ರ್ಯಾಂಚ್ ಮ್ಯಾನೇಜರ್ ಸಾ; ಮನೆ ನಂ;೧೦-೯೩೪/೬೭ ಮಹಾಲಕ್ಷ್ಮೀ  ಲೇ ಔಟ್ ಕಲಬುರಗಿ  ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೇ ಇಂದು ದಿನಾಂಕ ೦೮/೧೦/೨೦೨೨  ರಂದು ಸಾಯಂಕಾಲ ೬-೩೦ ಗಂಟೆಯ ಸುಮಾರಿಗೆ ಹನುಮಾನ ದೇವಾಸ್ಥಾನಕ್ಕೆ ಹೋಗಬೇಕು ಅಂತಾ  ನಾನು ಮನೆಯಿಂದ ಹೊರಟು ಎನ್.ವಿ ಕಾಲೇಜ್ ಎದುರುಗಡೆ ಇರುವ ದೇವಾಸ್ಥಾನಕ್ಕೆ ಬಂದು ಅಲ್ಲಿ ದೇವರ ದರ್ಶನ ಮಾಡಿ ಕುಳಿತುಕೊಂಡಾಗ ನಮ್ಮ ಪರಿಚಯದ ವಾಸಂತಿ ಕರಣಿ ಇವರು ದೇವಾಸ್ಥಾನಕ್ಕೆ ಬಂದಿದ್ದು, ಆಗ ನಾವಿಬ್ಬರು ಕೂಡಿಕೊಂಡು ವಾಕಿಂಗ್ ಹೋಗಬೇಕು ಅಂತಾ ಗೋವಾ ಹೋಟಲ್ ಮುಖಾಂತರ ಕಲ್ಯಾಣಿ ಪೆಟ್ರೋಲ್ ಪಂಪ್ ಸಮೀಪ ಬಂದು ಅಪ್ಪಾ ಕೆರೆ ಗಾರ್ಡನ್ ಕಡೆಗೆ ರೋಡಿನ ಪುಟ್ ಪಾತ್ ಮೇಲಿಂದ ನಡೆದುಕೊಂಡು ಸಪ್ತಗಿರಿ ಹೋಟಲ ದಾಟಿಕೊಂಡು ಶಿವಸಾಯಿ ಡೈಗ್ನೋಸ್ಟಿಕ್ ಸೆಂಟರ್ ಎದರುಗಡೆಯಿಂದ   ಹೋಗುತ್ತಿರುವಾಗ ರೋಡಿನ ಪಕ್ಕದ ಪುಟ್ ಪಾತ್ ಮೇಲೆ  ಇಬ್ಬರು ಅಪರಿಚಿತ ವ್ಯಕ್ತಿಗಳು ತಮ್ಮ ಮೋಟಾರ್ ಸೈಕಲ್ ಮೇಲೆ ನಿಂತುಕೊಂಡಿದ್ದು, ಅವರ ಪಕ್ಕದಲ್ಲಿಂದ ನಾವು ಹೋಗುತ್ತಿರುವಾಗ ಮೋಟಾರ್ ಸೈಕಲ್ ಹಿಂದುಗಡೆ ಕುಳಿತವನು ಒಮ್ಮಿಲೇ ನನ್ನ ಕೊರಳಿಗೆ ಕೈ ಹಾಕಿ ನನ್ನ ಕೊರಳಿಲ್ಲಿದ್ದ ಬಂಗಾರದ ತಾಳಿ ಚೈನ್ ಕಿತ್ತುಕೊಂಡು ಹಾಗೆಯೇ ಕಲ್ಯಾಣಿ ಪೆಟ್ರೋಲ್ ಪಂಪ್ ಕಡೆಗೆ ಹೋದರು.  ಅªರು ಪಲ್ಸರ್ ಮೋಟಾರ್ ಸೈಕಲ್ ಮೇಲೆ ಹೋಗಿದ್ದು ಅವರನ್ನು ನೋಡಿದಲ್ಲಿ ನಾನು ಗುರುತಿಸುತ್ತೇನೆ. ಆಗ ಸಮಯ ಅಂದಾಜು ಸಾಯಂಕಾಲ ೭-೦೦ ಗಂಟೆ ಆಗಿತ್ತು, ಕಾರಣ ನನ್ನ ಕೊರಳಲಿದ್ದ ಸುಮಾರು ೧೮ ಗ್ರಾಂ ಬಂಗಾರದ ಮಂಗಳ ಸೂತ್ರ ಅದರ ಅ:ಕಿ; ೯೦.೦೦೦/- ರೂಪಾಯಿ ನೇದ್ದು, ಕಸಿದುಕೊಂಡು ಹೋದವರನ್ನು ಮತ್ತು ಬಂಗಾರವನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೆಕು  ಅಂತ ಕೊಟ್ಟ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ ೦೮.೧೦.೨೦೨೨ ರಂದು ೭.೩೦ ಎ.ಎಮ್ ದಿಂಧ ೮.೩೦ ಎ.ಎಮ್ ಅವಧಿ ಸುಮಾರಿಗೆ ಸದರಿ ಆರೋಪಿತರು ಒಂದು ಬಿಳಿ ಬಣ್ಣದ ಪಿಕ್‌ಪ್ ವಾಹನದಲ್ಲಿ ೫ ದನಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಸದರಿಯವರನ್ನು ದಸ್ತಗಿರಿ ಮಾಡಿ ದೂರು ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 09-11-2022 12:45 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080