ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ಮಾನ್ಯ ಪ್ರಧಾನ ಜೆ.ಎಮ್.ಎಫ್.ಸಿ ನ್ಯಾಯಾಲಯ ಕಲಬುರಗಿರವರಲ್ಲಿ ಫಿರ್ಯಾದಿ ಶ್ರೀ ಶರಣಬಸಪ್ಪಾ ತಂದೆ ರಾಚಪ್ಪಾ ಬಾಪೂರೆ ವಯ:26 ವರ್ಷ :ಟೇಲರ್ ಕೆಲಸ ಸಾ:ಕಾಳಮೈಂದರ್ಗಿ ತಾ:ಜಿ:ಕಲಬುರಗಿ ಇವರು ಇವರು ಸಲ್ಲಿಸಿದ ಖಾಸಗಿ ದೂರು ಅರ್ಜಿಯ ಸಾರಾಂಶವೇನಂದರೆ, ಫಿರ್ಯಾದಿ ಶರಣಬಸಪ್ಪಾ ತಂದೆ ರಾಚಪ್ಪಾ ಇವರಿಗೆ ದಿನಾಂಕ:01/01/2017 ರಂದು ಅಪಘಾತವಾಗಿದ್ದರಿಂದ ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.1/2017 ಕಲಂ 279 338 ಐಪಿಸಿ ಪ್ರಕಾರ ಆರೋಪಿ ಮಹ್ಮದ ಗೌಸ ತಂದೆ ಮಹ್ಮದ ಉಸ್ಮಾನ ಶೇಖ್ ಇವರ ಮೇಲೆ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕಣದಲ್ಲಿ ಹೊಂಡಾ ಮೋಟಾರ್ ಸೈಕಲ್ ನಂ. ಎಮ್.ಹೆಚ್.-06 ಎಕ್ಸ್-0321(ಫಿರ್ಯಾದಿಗೆ ಸಂಬಂದಿಸಿದ್ದು) ಮತ್ತು ಮಹಿಂದ್ರಾ ಸ್ಕಾರ್ಪಿಯೋ ಜೀಪ್ ನಂ. ಕೆಎ 33 ಎನ್-2999(ಮಹ್ಮದ ಗೌಸ ಇತನಿಗೆ ಸಂಬಂದಿಸಿದ್ದು) ಇರುತ್ತದೆ. ನಂತರ ಕಮಲಾಪೂರ ಪೊಲೀಸ್ ಠಾಣೆಯವರು ಪ್ರಕರಣದಲ್ಲಿ ತನಿಖೆ ಕೈಕೊಂಡು ದಿನಾಂಕ:14/03/2017 ರಂದು ಆರೋಪಿ ಮಹ್ಮದ ಗೌಸ ಇತನ ಮೇಲೆ ಕಲಂ 279, 338 ಐಪಿಸಿ ಅಡಿಯಲ್ಲಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದು ಆರೋಪಿತನು ದಿನಾಂಕ:02.06.2017 ರಂದು ನ್ಯಾಯಾಲಯದಲ್ಲಿ ಪ್ಲೀಡೆಡ್ ಗೀಲ್ಟಿ ಮಾಡಿಕೊಂಡು ಪ್ರತಿಯೊಂದು ಕಲಂ ಗೆ 800/- ರೂ.ಯಂತೆ ಮಾನ್ಯ ಜೇ,ಎಮ್,ಎಫ್,ಸಿ ನ್ಯಾಯಾಲಯವು ದಂಡ ವಿಧಿಸಿರುತ್ತದೆ. ನಂತರ ದಿನಾಂಕ: 15.11.2017 ರಂದು ಫಿರ್ಯಾದಿಯು ಮಾನ್ಯ ಪ್ರೀನ್ಸಿಪಲ್ ಹಿರಿಯ ಸಿವಿಲ್ ನ್ಯಾಯಾಧೀಶರಲ್ಲಿ ಮಹೀಂದ್ರಾ ಸ್ಕಾರ್ಪಿಯೋ ನಂ. ಕೆಎ 33 ಎನ್ 2999 ಇದರ ಮೇಲೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು ವಾಹನದ ಮೇಲೆ ಇನ್ಸುರೇನ್ಸ್ ಪಾಲೀಸಿ ಇದ್ದಿರುವುದಿಲ್ಲಾ. ನಂತರ ಮಾನ್ಯ ನ್ಯಾಯಾಲಯವು ದಿನಾಂಕ: 29.09.2018 ರಂದು ಫಿರ್ಯಾದಿಗೆ 7,47,800/- ರೂಪಾಯಿ ಜೊತೆಗೆ 9% ಬಡ್ಡಿ ಅಂತೆ ಪರಿಹಾರ ನೀಡಲು ಆದೇಶ ಮಾಡಿರುತ್ತಾರೆ. ಇದರಲ್ಲಿ ರವೀಂದ್ರ ತಂದೆ ನರ್ಸಪ್ಪಾ ಇಂಜಳಿಕ ಸುವರ್ಣ ಫೈನನ್ಸ್ ಲಿಜಿಂಗ್(ರಿ) ಮತ್ತು ರಾಮ ಪವಾರ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಮಹ್ಮದ ಗೌಸ ತಂದೆ ಉಸ್ಮಾನ ಶೇಖ ಇವರುಗಳು ಕೂಡಿಕೊಂಡು ಫಿರ್ಯಾದಿಗೆ ಸಿಗಬೇಕಾದ ಅಪಘಾತದ ಪರಿಹಾರ ಧನ 7,47,800/- ರೂಪಾಯಿ ಸೀಗದಂತೆ ಮಾಡಲು ಒಬ್ವಬರಿಗೊಬ್ಬರು ಆಶ್ರಯ ನೀಡಿ, ಅಪರಾದಿಯನ್ನು ದಂಡನೆಗೆ ಒಳಗಾಗದಂತೆ ಹಣವನ್ನು ಪಡೆದುಕೊಂಡಿರುತ್ತಾರೆ ಅಂತಾ ಇತ್ಯಾದಿಯಾಗಿ ವಸೂಲಾದ ಖಾಸಗಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :-  ದಿನಾಂಕ:೧೦-೦೧-೨೦೧೮ ರಂದು ಸಂಜೆ ೦೬-೦೦ ಗಂಟೆಯಿಂದ ದಿನಾಂಕ: ೦೭-೦೯-೨೦೨೨ ರಂದು ಬೆಳಿಗ್ಗೆ ೧೦-೦೦ ಗಂಟೆಯ ನಡುವೆ ಸಮಯದಲ್ಲಿ ಯಾರೋ ಕಳ್ಳರು ಫಿರ್ಯಾಧಿದಾರರ ಮನೆ ಹಾಲಿನ ಆಲಾಮರಿಯಲ್ಲಿ ಇಟ್ಟಿದ್ದ ಪ್ಲಾಟ್ ನಂ ೦೮ ಮೂಲ ದಾಖಲಾತಿಗಳು ಹಾಗೂ ಚೆಕ್ಕಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ಆರೋಪಿತನು ಸಾಯಿ ನಗರದಲ್ಲಿರುವ ಇಂಡಸ್ ಟವರ್ ನಲ್ಲಿ ಕಳ್ಳತನ ಮಾಡುತ್ತಿರುವಾಗ ಪರ‍್ಯಾದಿಮತ್ತು ಸಂಗಡಿಗರು ಹಿಡಿದು ಕಾನೂನು ಕ್ರಮ ಕುರಿತು ದೂರು ನೀಡಿದ ಬಗ್ಗೆ ಇತ್ಯಾದಿ ಪರ‍್ಯಾದಿ  ಇರುತ್ತದೆ.

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ಆಪಾದಿತರು ಫಿರ್ಯಾದಿಗೆ ಸರಿಯಾಗಿ ಹೊಟ್ಟೆ ನೋವಿಗೆ ಚಿಕಿತ್ಸೆ ನೀಡದ್ದರಿಂದ ಹೊಟ್ಟೆ ನೋವು ಹೆಚ್ಚಾಗಿದ್ದು ಆಸ್ಪತ್ರೆಯ ವೈಧ್ಯರು ಮತ್ತು ಸಿಬ್ಬಂದಿಗಳು ನಿರ್ಲಕ್ಷತನದಿಂದ ಚಿಕಿತ್ಸೆ ನೀಡಿದ್ದರಿಂದ ಹೊಟ್ಟೆ ನೋವು ಹೆಚಾಗಿರುತ್ತದೆ ಅಂತಾ ಇತ್ಯಾದಿ ದೂರು ಅರ್ಜಿ ಇರುತ್ತದೆ.  

ಇತ್ತೀಚಿನ ನವೀಕರಣ​ : 20-09-2022 05:11 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080