ಅಭಿಪ್ರಾಯ / ಸಲಹೆಗಳು

ಮಹಿಳಾ ಪೊಲೀಸ ಠಾಣೆ:-   ಇಂದು ದಿನಾಂಕ ೦೮/೦೯/೨೦೨೧ ರಂದು ಸಾಯಂಕಾಲ ೫.೩೦ ಗಂಟೆಗೆ ಫರ‍್ಯಾದಿ ಶ್ರೀಮತಿ ಶೃತಿ ಗಂಡ ವಿದ್ಯಾಧರ ಕುಂಬಾರ ವಯಾ|| ೩೦ ವರ್ಷ ಉ|| ಮನೆ ಕೆಲಸ  ಜಾ|| ಕುಂಬಾರ ಸಾ|| ನೆಹರೂ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು ದೂರಿನ ಸಾರಾಂಶ ಏನೆಂದರೆ ವಿದ್ಯಾಧರ್ ತಂದೆ ವಿಜಯಕುಮಾರ ಕುಂಬಾರ ಸಾ|| ಪಿಂಪ್ರಿ ಚಿಂಚವಾಡ ಸಾಂಬಾಜಿ ನಗರ ಪೂನಾ ಮಹಾರಾಷ್ರö್ಟ ರಾಜ್ಯ ಇವರೊಂದಿಗೆ ದಿನಾಂಕ ೨೧.೦೫.೨೦೧೭ ರಂದು ಕಲಬುರಗಿಯ ಕಲ್ಯಾಣಿ ಮಂಟಪದಲ್ಲಿ ಮದುವೆ ಆಗಿದ್ದು ಮದುವೆ ಕಾಲಕ್ಕೆ ಅತ್ತೆ ಮಾವನವರು ವರದಕ್ಷಿಣೆ ಅಂತಾ ೮ ತೊಲಿ ಬಂಗಾರ ಬೆಳ್ಳಿಯ ಪೂಜಾ ಸಾಮಗ್ರಿಗಳು ಅಂದಾಜು ೫೦.೦೦೦ ರೂ. ಹಾಗೂ ಗೃಹ ಬಳಕೆಯ ಸಾಮಾನುಗಳು ಅಂದಾಜು ೪೦.೦೦೦ ರೂ. ಮತ್ತು ಕಲ್ಯಾಣ ಮಂಟಪದ ಖರ್ಚು ಅಂತಾ ೫೦.೦೦೦೦ ರೂ. ಕೊಟ್ಟು ನನ್ನ ತಂದೆ ತಾಯಿಯವರು ಮದುವೆ ಮಾಡಿ ಕೊಟ್ಟಿರುತ್ತಾರೆ. ನನ್ನ ಬಿಜಿನೇಸ್ ಮಾಡುತ್ತಾರೆ ಅಂತಾ ಹೇಳಿ ಮದುವೆ ಮಾಡಿದ್ದು ಆದರೆ ಮದುವೆಯಾದ ನಂತರ ಅವರು ಯಾವುದೇ ಬಿಜಿನೇಸ್ ಮಾಡುವುದಿಲ್ಲಾ ಅಂತಾ ಗೊತ್ತಾಯಿತು. ನಾನು ಮನೆಯಲ್ಲಿ ಯಾವುದೇ ಕೆಲಸ ಮಾಡಿದರೂ ನನ್ನ ಮಾವ ವಿಜಯಕುಮಾರ ಹಾಗೂ ನಾದಿನಿ ಕು. ವೀಣಾ ಇವರು ಇಷ್ಟ ಪಡದೇ ನಿನಗೆ ಏನು ಬರುವುದಿಲ್ಲಾ ತೆರಿ ಮಾ-ಕಿ-ಚುತ್, ಮಾದರ್ ಚೋಡ್,ರಾಂಡ್, ಘಾಂಡ್ ಮರೇಗಾ, ಅಂತಾ ಇತ್ಯಾದಿ ಅವಾಚ್ಯ ಶಬ್ದಗಳಿಂದ ಬೈದು ಬೆಲ್ಟನಿಂದ ಹೊಡೆಯುತ್ತಿದ್ದರು. ದಿನಾಂಕ ೧೮.೧೨.೨೦೧೯ ರಂದು ಮದ್ಯಾಹ್ನ ೧.೪೫ ಗಂಟೆಗೆ ನನ್ನ ಗಂಡ ಅವರ ತಾಯಿಯ ಮಾತು ಕೇಳಿ ನನಗೆ ಹೊಡೆ ಬಡೆ ಮಾಡಿದರು. ಇಷ್ಟೆಲ್ಲಾ ಆದರೂ ನಾನು ಸಹಿಸಿಕೊಂಡು ಸಂಸಾರ ಮಾಡುತ್ತಿದ್ದೆ, ದಿನಾಂಕ ೨೮/೦೮/೨೦೨೧ ರಂದು ಬೆಳಿಗ್ಗೆ ೮ ಗಂಟೆಗೆ ಪೂನಾದಿಂದ ಕಲಬುರಗಿಗೆ ಬಂದು ನನ್ನ ಅತ್ತೆಯ ಅಕ್ಕನಾದ ಪಾರ್ವತಿ ಗಂಡ ನೀಲಕಂಠ ಇವರ ಮನೆಗೆ ಹೋಗಿದ್ದು. ಅಲ್ಲಿಂದ ನನ್ನ ಗಂಡ ಹಾಗೂ ನನ್ನ ಅತ್ತೆಯ ಅಕ್ಕ ಪಾರ್ವತಿ ಅವರ ಮಕ್ಕಳಾದ ರಾಜಕುಮಾರ ಇವರೆಲ್ಲರನ್ನು ಕರೆದುಕೊಂಡು ನಮ್ಮ ತವರು ಮನೆಯಾದ ನೆಹರೂ ಕಾಲನಿಗೆ ಬಂದು ಮನೆಯ ಬಾಗಿಲ ಮುಂದೆ ನಿಂತು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ಹೋಗಿದ್ದು ನೀನು ಫೋನ್ ಮಾಡಬೇಡ ಪೂನಾಗೆ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಕೊಲೆ ಬೆದರಿಕೆ ಹಾಕಿ ಹೋಗಿರುತ್ತಾರೆ. ಹಾಗೂ ವರದಕ್ಷಿಣೆ ಕಿರುಕುಳ ನೀಡುತ್ತಾ ಬಂದಿದ್ದು ನನ್ನ ಗಂಡ ಅತ್ತೆ ಮಾವ ನಾದಿನಿ ಹಾಗೂ ನನ್ನ ಅತ್ತೆಯ ಅಕ್ಕಳಾದ ಪಾರ್ವತಿ ಗಂಡ ನೀಲಕಂಠ ಹಾಗೂ ಪಾರ್ವತಿ ಇವಳ ಮಗ ರಾಜಕುಮಾರ ಇವರೆಲ್ಲರ ಮೇಲೆ ಕಾನೂನು ರೀತಿಯ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ಇಂದು ದಿನಾಂಕ ೦೮-೦೯-೨೦೨೧ ರಂದು ೧೨.೧೫ ಪಿಎಮ್ ಕ್ಕೆ ಪರ‍್ಯಾದಿ ಶ್ರೀ ಶಾಮರಾವ್ ತಂದೆ ನಾಗಮೂರ್ತಿ ಪೊದ್ದಾರ, ವಯ: ೪೬ ವರ್ಷ, ಉ: ಸಣ್ಣೂರು ಕ್ರಾಸ್ ಹತ್ತಿರ ಗೋಲ್ಡ್ ಅಂಗಡಿ, ಜಾತಿ:ವಿಶ್ವಕರ್ಮ, ಸಾ: ಮಹಾಗಾಂವ ತಾ:ಜಿ: ಕಲಬುರಗಿ, ಹಾವ: ಪ್ಲಾಟ ನಂ.೩೩ ಜ್ಯೋತಿ ನಗರ ಸೇಡಂ ರೋಡ ಕಲಬುರಗಿ ಇದ್ದು. ನಾನು ಸಣ್ಣುರ ಕ್ರಾಸ್ ಹತ್ತಿರ ಶಿವಶರಣಪ್ಪ ಸಾಹುಕಾರ ಇವರ ಶೆಟರ್ ದಲ್ಲಿ ಈಗ ಒಂದು ತಿಂಗಳ ಹಿಂದೆ ಹೊಸದಾಗಿ ಬಂಗಾರದ ಅಂಗಡಿ ಇಟ್ಟುಕೊಂಡು ಉಪ-ಜೀವಿಸುತ್ತೇನೆ. ದಿನಾಂಕ ೦೪-೦೯-೨೦೨೧ ರಂದು ಬೇಳಿಗ್ಗೆ  ಎಂದಿನಂತೆ ನಾನು ಸಣ್ಣೂರ ಕ್ರಾಸ್ ಗೆ ಹೋಗಿ ನನ್ನ ಬಂಗಾರದ ಅಂಗಡಿ ತೆಗೆದು ವ್ಯಾಪಾರ ಮಾಡಿ ನಂತರ ಸಾಯಂಕಾಲ ೬:೦೦ ಗಂಟೆ ಸುಮಾರಿಗೆ ನನ್ನ ಬಂಗಾರದ ಅಂಗಡಿಯಲ್ಲಿ ಬೆಳ್ಳಿ ಸಾಮಾನುಗಳು ಕಬ್ಬಿಣದ ಟ್ರಜರಿಯಲ್ಲಿಟ್ಟು ಲಾಕ್ ಮಾಡಿ ಶೆಟರ್‌ಗೆ ಕೀಲಿ ಹಾಕಿಕೊಂಡು ಕಲಬುರಗಿಗೆ ಬಂದಿರುತ್ತೇನೆ.ನಂತರ ದಿನಾಂಕ ೦೬-೦೯-೨೦೨೧ ರಂದು ಬೆಳಿಗ್ಗೆ ೧೦:೩೦ ಗಂಟೆ ಸುಮಾರಿಗೆ ಕಲಬುರಗಿಯಿಂದ ಸಣ್ಣುರ ಕ್ರಾಸ್ ಗೆ ಹೋಗಿ ನನ್ನ ಬಂಗಾರದ ಅಂಗಡಿಗೆ ಹೋದಾಗ ಆಗ ನನ್ನ ಬಂಗಾರದ ಅಂಗಡಿಯ ಶೆಟರ್ ಮುರಿದಿದ್ದು ಕಂಡು ಒಳಗೆ ಹೋಗಿ ನೋಡಲು ಅಂಗಡಿಯಲ್ಲಿದ್ದ ಕಬ್ಬಿಣದ ಟ್ರಜರಿ ಬಿಳಿಸಿ ಲಾಕ್ ಮುರಿದು ಅದರಲ್ಲಿಟ್ಟಿದ್ದ ಸುಮಾರು ೬ ಕೆ.ಜಿ ಬೆಳ್ಳಿ ಅ.ಕಿ-೨,೩೩,೨೭೧/- ರೂ ಕಾಣಲಿಲ್ಲ. ಯಾರೋ ಕಳ್ಳರು ದಿನಾಂಕ ೦೪-೦೯-೨೦೨೧ ರಂದು ೬:೦೦ ಪಿ.ಎಮ್ ದಿಂದ ದಿನಾಂಕ ೦೬-೦೯-೨೦೨೧ ರಂದು ೧೦:.೩೦ ಎ.ಎಮ್ ದ ಮಧ್ಯದ ಅವಧಿಯಲ್ಲಿ ನನ್ನ ಬಂಗಾರದ ಅಂಗಡಿಯ ಶೆಟರ್ ಕೀಲಿ ಮುರಿದು ಅಂಗಡಿಯೊಳಗೆ ಪ್ರವೇಶ ಮಾಡಿ, ಒಳಗೆ ಇದ್ದ ಕಬ್ಬಿಣದ ಟ್ರಜರಿ ಲಾಕ್ ಮುರಿದು ಅದರಲ್ಲಿದ್ದ ೬ ಕೆ.ಜಿ ಬೆಳ್ಳಿ ಅ.ಕಿ-೨,೩೩,೨೭೧/- ರೂ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ನಂತರ ನಾನು ಸದರಿ ಘಟನೆಯ ಬಗ್ಗೆ ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ತಡಮಾಡಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಇರುತ್ತದೆ.ಕಾರಣ ಕಳ್ಳತನವಾದ ಬೆಳ್ಳಿ, ಪತ್ತೆ ಮಾಡಿ, ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ಕೊಟ್ಟ ದೂರಿನ ಸಾರಾಂಶದ ಮೆಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 22-09-2021 01:01 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080