ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ ಠಾಣೆ :-   ದಿನಾಂಕ: 08-08-2022  ರಂದು ೧೧:೦೦ ಎಮ್.ಎಂ. ಕ್ಕೆ ಫರ‍್ಯಾದಿ ಶ್ರೀಮತಿ ಅಶೋದಾ ವೆಂಕಟ ರಮಣ ಗಂಡ ಅಶೋದಾ ಪ್ರಸಾದ ಬಾಬು ವಯ: ೩೯ ವರ್ಷ ಜಾ: ಎಸ್.ಸಿ( ಹಿಂದೂ ಮಾಲಾ) ಸಾ|| ಭವಾನಿಪೂರ ಬಡಾವಣೆ ವಿಜಯವಾಡಾ ರಾಜ್ಯ ಆಂಧ್ರಪ್ರದೇಶ ಹಾ|| ವ|| ಅಕ್ಕ ಮಹಾದೇವಿ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫರ‍್ಯಾದಿ ಅರ್ಜಿಯ ಸಾರಾಂಶವೆನೆಂದರೆ, ನಾವು ಮೂಲತಃ ಆಂದ್ರ ಪ್ರದೇಶದವರಿದ್ದು, ನನ್ನ ಗಂಡ ಪ್ರಸಾದ ಇವರು ಕಲಬುರಗಿ ನಗರ ಎಸ್.ಬಿ.ಐ. ಬ್ಯಾಂಕ್  ಮೇನ್ ಬ್ರ‍್ಯಾಂಚ್ ಸುಪರ ಮರ‍್ಕೆಟ ಕಲಬುರಗಿಯಲ್ಲಿ ಬ್ಯಾಂಕ ಮ್ಯಾನೇಜರ ಅಂತ ಕೆಲಸ ನಿರ್ವಹಿಸುತ್ತಿರುತ್ತಾರೆ. ನಾವು ಕಳೆದ ೨ ವರ್ಷಗಳಿಂದ ಅಕ್ಕ ಮಹಾದೇವಿ ಕಾಲೋನಿಯಲ್ಲಿಯೇ ಸವಾಗಿರುತ್ತೇವೆ. ನಮಗೆ ರೀತಿಕಾ ಅಂತ ೧೧ ವರ್ಷದ ಒಬ್ಬಳು ಹೆಣ್ಣು ಮಗಳು ಇರುತ್ತಾಳೆ. ನಾವು ನಮ್ಮ ಮನೆಯಲ್ಲಿ ಅಡುಗೆ ಮಾಡುವುದಕ್ಕಾಗಿ ಮತ್ತು ಮನೆ ಕೆಲಸಕ್ಕಾಗಿ ಒಬ್ಬ ಹೆಣ್ಣು ಮಗಳಿಗೆ ನೇಮಿಸಿಕೊಂಡಿದ್ದು ಅವಳು ದಿನಾಲು ಬಂದು ತನ್ನ ಕೆಲಸ ಮಾಡಿಕೊಂಡು ಹೋಗುತ್ತಾಳೆ. ನಾನು ಯಾವಾಗಲಾದರು ಮನೆಯಿಂದ ಕೆಲಸದ ನಿಮಿತ್ಯ ಹೊರಗೆ ಹೋಗಬೇಕಾದಾಗ ಮನೆಗೆ ಬೀಗ ಹಾಕಿ ಬೀಗದ ಕೈಯನ್ನು ಮೇನ್ ಡೋರ ಪಕ್ಕದಲ್ಲಿ ಇರುವ ಶೂ ಸೇಲ್ಫನಲ್ಲಿ ಇಟ್ಟು ಹೋಗುತ್ತೇನೆ. ಹೀಗಿದ್ದು ದಿನಾಂಕ:೧೩.೦೬.೨೦೨೨ ರಂದು ೦೧:೦೦ ಪಿ.ಎಮ್.ಕ್ಕೆ ನಾನು ನನ್ನ ಮಗಳ ಶಾಲೆಗೆ ಹೋಗುವ ಕುರಿತು ಮನೆಗೆ ಬೀಗ ಹಾಕಿ ಎಂದಿನಂತೆ ಮನೆಯ ಬೀಗವನ್ನು ಶೂ ಸೇಲ್ಫನಲ್ಲಿ ಇಟ್ಟು ಹೋಗಿರುತ್ತೇನೆ. ನಂತರ ಸಾಯಂಕಾಲ ೦೬:೦೦ ಪಿ.ಎಂ. ಸುಮಾರಿಗೆ ಮನೆಗೆ ಬಂದು ಶೂ ಸೇಲ್ಫನಲ್ಲಿ ಇಟ್ಟಿದ್ದ ಬೀಗದ ಕೈ ತೆಗೆದುಕೊಂಡು ಬೀಗ ತೆಗೆದು ಒಳಗೆ ಹೋದೆನು. ಬೀಗದ ಕೈ ತೆಗೆಯುವ ಕಾಲಕ್ಕೆ ಅದು ಎಂದಿನಂತೆ ಸರಳವಾಗಿ ತೆಗೆದಿರುವುದಿಲ್ಲ ಆಗಲೆ ನನಗೆ ಅನುಮಾನ ಬಂದಿರುತ್ತದೆ. ನಂತರ ದಿನಾಂಕ:೧೫.೦೬.೨೦೨೨ ರಂದು ಸಾಯಂಕಾಲ ೦೭:೦೦ ಗಂಟೆ ಸುಮಾರಿಗೆ ನನ್ನ ಗಂಡ ಪ್ರಸಾದ ಇವರಿಗೆ ಬೇರೆ ಊರಿಗೆ ವರ್ಗಾವಣೆ ಆದ ಪ್ರಯುಕ್ತ ಅವರ ಲಗೇಜ ಪ್ಯಾಕ ಮಾಡುತ್ತಿದ್ದ ಕಾಲಕ್ಕೆ ನಮ್ಮ ಮನೆಯ ಕಟ್ಟಿಗೆ ಅಲ್ಮಾರಾದಲ್ಲಿ ಇಟ್ಟಿದ್ದ ೧) ಒಂದು ಬಂಗಾರದ ಚೈನ್  ೧೬ ‍ಗ್ರಾಂ ಅ.ಕಿ. ೫೦,೦೦೦/- ೨) ಒಂದು ಬಂಗಾರದ ಬ್ರಾಸಲೇಟ್ ೧೭ ಗ್ರಾಂ ಅ.ಕಿ. ೬೦,೦೦೦/- ೩) ತಲಾ ೮ ಗ್ರಾಂ ನ ೨ ಉಂಗುರಗಳು ಒಟ್ಟು ೧೬ ಗ್ರಾಂ ಅ.ಕಿ. ೭೦,೦೦೦/- ೪) ಒಂದು ಬಂಗಾರದ ಲಾಕೇಟ್ ಪೆಂಡೆಂಟ್ ಇದ್ದದ್ದು ೧೧ ಗ್ರಾಂ ಅ.ಕಿ. ೪೦,೦೦೦/- ೫) ಕಿವಿ ಓಲೆಗಳು ೪ ಗ್ರಾಂ ಅ.ಕಿ. ೧೫,೦೦೦/- ೬) ಕಿವಿ ಹೂಗಳು ೪ ಗ್ರಾಂ ಅ.ಕಿ. ೧೫,೦೦೦/- ೭) ದೊಡ್ಡ ಕಿವಿ ಓಲೆಗಳು ೬ ಗ್ರಾಂ ಅ.ಕಿ. ೨೫,೦೦೦/-  ಮತ್ತು ೮) ಒಂದು ರೇಡ್ಮಿ ಕಂಪನಿ ಮೊಬೈಲ್ ಸಿಮ್ ಕಾರ್ಡ ಇಲ್ಲದ್ದು ಅ.ಕಿ. ೫,೦೦೦/- ಹೀಗೆ ಒಟ್ಟು ೭೪ ಗ್ರಾಂ ಬಂಗಾರದ ಆಭರಣಗಳು ಮತ್ತು ಒಂದು ಮೊಬೈಲ್  ಎಲ್ಲಾ ಸೇರಿ ಒಟ್ಟು ೨,೮೦,೦೦೦/- ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ನಮ್ಮ ಮನೆಯ ಬೀಗದ ಕೈ ಉಪಯೋಗಿಸಿ ಮನೆಯ ಒಳಗೆ ಪ್ರವೇಶಮಾಡಿ ಮನೆಯಲ್ಲಿದ್ದ ಬಂಗಾರ ಮತ್ತು ಮೊಬೈಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಘಟನೆಯ ಬಗ್ಗೆ ನಾನು ನನ್ನ ಗಂಡನೊಂದಿಗೆ ಮನೆಯಲ್ಲಿ ವಿಚಾರಿಸಿ ತಡಮಾಡಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ನಮ್ಮ  ಮನೆಯಲ್ಲಿ ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆಮಾಡಿ ನಮ್ಮ ಸಾಮಾನುಗಳನ್ನು ನಮಗೆ ದೊರಕಿಸಿ ಕೊಡಲು ವಿನಂತಿ, ಅಂತ ಇತ್ಯಾದಿ ಇದ್ದ ಫರ‍್ಯಾದಿಯ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ: ೦೭/೦೮/೨೦೨೨ ರಂದು ಬೆಳಿಗ್ಗೆ ೦೯ ೦೦ ಘಂಟೆಗೆ ಕೆಲಸಕ್ಕೆ ಹೋಗಿ ಮರಳಿ ೨.೫೦ ಪಿಎಂ ಕೆ ಮನೆಗೆ ಬಂದು ನೋಡಲು ಯಾರೋ ಮನೆ ಬಾಗಿಲು ಮುರಿದು ಮನೆಯಲ್ಲಿದ್ದ ೦೧. ೨೦ ಗ್ರಾಂ ಬಂಗಾರದ ಚಪಲಾರ ಅಂ. ಕಿ. ೬೦೦೦೦/- ರೂ ೦೨). ತಲಾ ೫  ಗ್ರಾಂ  ನಂತೆ ೨ ಬಂಗಾರದ ಗುರಗಳು ಅಂ.ಕಿ. ರೂ ೩೦೦೦೦/- ೦೩). ೫ ಗ್ರಾಂ. ಒಂದು ಜೋತೆ ಕಿವಿ ಓಲೆ ಅಂ.ಕಿ. ರೂ. ೧೫೦೦೦/-  ೦೪). ೪೦ ಗ್ರಾಂ. ಬೆಳ್ಳಿ ಕಾಲ ಚೇನ ಅಂ.ಕಿ.ರೂ. ೨೦೦೦/- ಹಿಗೆ ಒಟ್ಟು ರೂ. ೧,೦೭೦೦೦/- ಮೊತ್ತದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಎಂ.ಬಿ.ನಗರ ಪೊಲೀಸ್‌ ಠಾಣೆ :-  ದಿನಾಂಕ: ೦೮/೦೮/೨೦೨೨ ರಂದು ೧೧.೧೦ ಎ ಎಮ್ ಗಂಟೆಗೆ ಶ್ರೀ ಮಲ್ಲಿಕಾರ್ಜುನ ತಂದೆ ತಂದೆ ಕ್ಷೆಮಲಿಂಗ ಲಾಡವತ್ತಿ ವ|| ೩೦ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಚನ್ನವೀರ ನಗರ ನರೋಣಾ ತಾ|| ಆಳಂದ ಜಿ|| ಕಲಬುರಗಿ ರವರು ಠಾಣೆಗೆ ಹಾಜರಾಗಿ ಸಲ್ಲಿಸಿದ ದೂರು ಅರ್ಜಿಯ ಸಾರಾಂಶವೆನೆಂದರೆ,ಹೀಗಿದ್ದು ದಿನಾಂಕ: ೨೪/೦೬/೨೦೨೨ ರಂದು ನನಗೆ ಅನಾರೋಗ್ಯವಿದ್ದ ಪ್ರಯುಕ್ತ ಆಸ್ಪತ್ರೆಗೆ ಉಪಚಾರ ಸಲುವಾಗಿ ನರೋಣಾ ಗ್ರಾಮದಿಂದ ಬೆಳೇಗ್ಗೆ ೦೮.೩೦ ಗಂಟೆ ಸುಮಾರಿಗೆ ಹೋರಟು ಕಲಬುರಗಿಯಲ್ಲಿರುವ ಬಸವೇಶ್ವರ ಆಸ್ಪತ್ರೆಗೆ ಬೆಳೇಗ್ಗೆ ೧೦.೦೦ ಗಂಟೆಯ ಸುಮಾರಿಗೆ ಬಂದು ಬಸವೇಶ್ವರ ಆಸ್ಪತ್ರೆಯ ಪಾರ್ಕಿಂಗ ಜಾಗದಲ್ಲಿ ನಿಲ್ಲಿಸಿ ಉಪಚಾರ ಪಡೆಯುವದಕ್ಕಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಹೋಗಿ ಚಿಕಿತ್ಸೆ ಪಡೆದುಕೊಂಡು ಮಧ್ಯಾಹ್ನ ೦೪.೦೦ ಗಂಟೆಗೆ ಬಂದು ಬೆಳೆಗ್ಗೆ ನಿಲ್ಲಿಸಿದ ಸ್ಥಳದಲ್ಲಿ ನನ್ನ ಮೋಟಾರ ಸೈಕಲ ನೋಡಿದಾಗ ಸದರಿ ಸ್ಥಳದಲ್ಲಿ ನನ್ನ ಮೋಟಾರ ಸೈಕಲ ಕಾಣಲಿಲ್ಲಾ ಗಾಬರಿಯಾಗಿ ಆಸ್ಪತ್ರೆಯ ಸುತ್ತಾ-ಮುತ್ತಾ ನೋಡಿ ಚೆಕ್ ಮಾಡಲಾಗಿ ಅಲ್ಲಿಯ ಜನರಿಗೆ ವಿಚಾರಿಸಲಾಗಿ ಅವರಿಂದ ನನ್ನ ಮೋಟಾರ ಸೈಕಲ ಬಗ್ಗೆ ಮಾಹಿತಿ ಗೊತ್ತಾಗಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮತ್ತು ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಲಾಗಿ  ಎಲ್ಲಿಯೂ ನನ್ನ ಮೋಟಾರ ಸೈಕಲ ಸಿಕ್ಕಿರುವುದಿಲ್ಲ. ನಂತರ ಇಂದು ಮನೆಯಲ್ಲಿ ವಿಚಾರಿಸಿ ತಡಮಾಡಿ ಠಾಣೆಗೆ ಬಂದು  ದೂರು ಸಲ್ಲಿಸುತ್ತಿದ್ದು ಮಾನ್ಯರವರು ಕಳ್ಳತನವಾದ ನನ್ನ ಹೆಸರಿನಲ್ಲಿರುವ ಕಪ್ಪು ಬಣ್ಣದ ಹಿರೋ ಹೊಂಡಾ ಸ್ಪ್ಲೆಂಡರ ಪ್ಲಸ ಮೋಟಾರ ಸೈಕಲ ನಂ. ಕೆಎ-೩೨, ಇಜಿ-೪೫೫೦ ನ ಅ:ಕಿ: ೧೫,೦೦೦/- ರೂಪಾಯಿ ನೇದ್ದನ್ನು ದಿನಾಂಕ:- ೨೪/೦೬/೨೦೨೨ ರಂದು ಬೆಳೆಗ್ಗೆ ೧೦.೦೦ ಗಂಟೆಯಿAದ ಮಧ್ಯಾಹ್ನ ೦೪.೦೦ ಗಂಟೆಯ ಮಧ್ಯದಲ್ಲಿ ಕಳ್ಳತನ ಮಾಡಿದ ಮೊಟಾರ ಸೈಕಲ ಪತ್ತೆ ಮಾಡಿ ಕಳ್ಳರ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು,ಅಂತಾ ಇತ್ಯಾದಿ ದೂರಿನ ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ: 08-08-2022  ರಂದು ೧೨:೩೦ ಪಿ.ಎಂ. ಕ್ಕೆ  ಫಿರ್ಯಾದಿ ಶ್ರೀ ನಾಗೇಶ್ ತಂದೆ ಮೋನಪ್ಪ ಸಾತನೂರಕರ ವಯ: ೪೬ ವರ್ಷ ಜಾ: ಲಿಂಗಾಯತ ಉ: ಖಾಸಗಿ ಕೆಲಸ ಸಾ|| ಮನೆ ನಂ. ೦೧-೮೬೭/ಎ-೩ ವೆಂಕಟೇಶ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ  ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ, ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ ೨೦೧೬ ನೇ ಸಾಲಿನಲ್ಲಿ ಒಂದು ಹೊಂಡಾ ಡಿಯೋ  ಮೋಟಾರ ಸೈಕಲ್ ನಂ ಕೆ.ಎ-೩೨ ಇ.ಎನ್.-೨೮೯೪ ಗ್ರೇ ಕಲರ್ ನೇದ್ದರ ಚೆಸ್ಸಿ ನಂ ME4JF39AKGU023103  ಇಂಜಿನ್ ನಂ JF39EU1102656       ಅ. ಕಿ.೩೨,೦೦೦ /-  ರೂಪಾಯಿ ನೇದ್ದು ಖರೀದಿಸಿದ್ದು ಇರುತ್ತದೆ.   ಹೀಗಿದ್ದು ದಿನಾಂಕ: ೦೩.೦೭.೨೦೨೨ ರಂದು ಬೆಳಿಗ್ಗೆ ೦೭:೦೦ ಗಂಟೆಗೆ ತರಕಾರಿ ತರಲು ಕಣ್ಣಿ  ಮಾರ್ಕೇಟಗೆ  ಬಂದು ವಾಹನ ನಿಲ್ಲಿಸಿ ತರಕಾರಿ ತರಲು ಒಳಗಡೆ ಹೋಗಿದ್ದು ಮರಳಿ  ೦೭:೩೦ ಎ.ಎಮ್. ಸುಮಾರಿಗೆ  ನಾನು ಹೊರಗಡೆ ಬಂದು ನೋಡಲಾಗಿ ನನ್ನ ದ್ವಿಚಕ್ರ ವಾಹನ ಇದ್ದಿರುವುದಿಲ್ಲ. ನಾನು ಗಾಬರಿಯಾಗಿ ಎಲ್ಲಾ ಕಡೆ ಹುಡುಕಾಡಲಾಗಿ ನನ್ನ ವಾಹನ ಸಿಕ್ಕಿರುವುದಿಲ್ಲ. ನಂತರ ಈ ಘಟನೆ ಬಗ್ಗೆ ಮನೆಯಲ್ಲಿ ತಿಳಿಸಿ ಕಲಬುರಗಿ ನಗರದಲ್ಲಿ ಮತ್ತು ಹೊರವಲಯಗಳಲ್ಲಿ ಎಲ್ಲಾ ಕಡೆಗಳಲ್ಲಿ  ಇಲ್ಲಿಯವರೆಗೆ  ಹುಡಿಕಾಡಿದರು ಸಹ ನನ್ನ  ವಾಹನ ಸಿಕ್ಕಿರುವುದಿಲ್ಲ. ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿತ್ತಿದ್ದು ಕಳವುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಲು ವಿನಂತಿ ಅಂತಾ ಇತ್ಯಾದಿ ಇದ್ದ ಫಿರ್ಯಾದಿಯ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 19-08-2022 03:05 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080