ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ:08-07-2022 ರಂದು ರಾತ್ರಿ ೮:೪೫ ಗಂಟೆಗೆ ಶ್ರೀ ಧನರಾಜ ತಂದೆ ಭೀಮಸಿಂಗ್ ಪವಾರ ವಯ|| ವರ್ಷ ಜಾ|| ಲಂಬಾಣಿ ಸಾ|| ಓಜಾ ಲೇಔಟ ರಾಮಮಂದೀರ ಹತ್ತಿರ ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದೆನೆಂದರೆ, ನಾವು ೪ ಜನ ಅಣ್ಣ-ತಮ್ಮಂದಿರಿದ್ದು ೧) ಕಾನು ೨) ಮಾನು,  ಮೂರನೇಯವನು ನಾನು ಧನರಾಜ, ಕೊನೆಯವನು ಸಂಜು ಅಂತಾ ಇದ್ದೆವೆ. ನಾವು ಪರ್ಸಿ ಹಾಕುವ ಕೂಲಿಕೆಲಸ ಮಾಡಿ ಜೀವಿಸುತ್ತಿದ್ದೆವೆ. ಹೀಗಿದ್ದು ದಿನಾಂಕ ೦೬.೦೭.೨೦೨೨ ರಂದು ಮುಂಜಾನೆ ೯.೩೦ ಗಂಟೆಗೆ ಲೇಬರಗಳಾದ ಬಸ್ಸು ಮತ್ತು ಅವಿನಾಶ ಕೂಡಿ ಸಪ್ತಗಿರಿ ವೈನ್ ಶಾಪ್ ಹಿಂದುಗಡೆ ಇದ್ದ ಒಬ್ಬರ ಮನೆಯಲ್ಲಿ ಕೆಲಸ ಮಾಡಲು ಹೊಗಿ ಪರ್ಸಿ ಹಾಕಿ ನಂತರ ಸಾಯಂಕಾಲ ೬ ಗಂಟೆಗೆ ಕೆಲಸ ಮುಗಿಸಿ ೭ ಗಂಟೆಗೆ ನಾನು ಹಾಗೂ ೨ ಜನ ಲೇಬರ ಕೂಡಿ ಸಪ್ತಗಿರಿ ವೈನ್ ಶಾಪಗೆ ಹೊಗಿ ಮಧ್ಯಪಾನ ಸೇವನೆ ಮಾಡಲು ಗ್ಲಾಸನಲ್ಲಿ ಮದ್ಯಪಾನ ಹಾಕಿಕೊಳ್ಳುತ್ತಿರುವಾಗ ನಾನು ಅಲ್ಲಿ ಬಹಳ ಅವಾಜ ಕೇಳಿ ಇಲ್ಲಿ ಕುಡಿಯುವುದು ಬೇಡ ಹೊರಗಡೆ ಹೋಗೊಣ ಅಂತಾ ಲೇಬರಗೆ ಹೇಳುತ್ತಿದ್ದಾಗ ಅಲ್ಲಿಯೇ ದೂರದಲ್ಲಿ ೧) ದಾದು ೨) ಇಮ್ರಾನ್ ಸಾ:ಪಿ.ಎನ್.ಟಿ ಕಾಲೋನಿ ಹಾಗೂ ಸ್ಟೇಷನ್ ಬಜಾರ ಕಲಬುರಗಿ ಮತ್ತು ಇನ್ನಿತರರು ಒಬ್ಬ ಮುಸಲ್ಮಾನ ವ್ಯಕ್ತಿ ಏ ಭೊಸಡಿ ಕೇ ಸುಮ್ಮನೇ ಕುಳಿತು ಕುಡಿಯಿರಿ ಇಲ್ಲವಾದಲ್ಲಿ ನಿಮಗೆ ನೆಟ್ಟಗೆ ಆಗುವುದಿಲ್ಲಾ ಅಂದಾಗ ನಾನು ನಿಮಗೆನು ಅಂದಿಲ್ಲಾ ನೀವೆಕೆ ನಮಗೆ ಬಯ್ಯುತ್ತಿರಿ ಅಂದಾಗ ೪ ಜನರು ಬಂದು ಬೊಸಡಿಕೆ ನಮಗೆ ಎದುರು ಆಡತಿ ರಂಡಿ ಮಕ್ಕಳೆ ಅಂತಾ ಅಂದಾಗ ನಾನು ನಮ್ಮ ಲಂಬಾಣಿ ಭಾಷೆಯಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿದ್ದಾಗ ಈ ೪ ಜನರು ಇವರು ಲಂಬಾಣಿ ಜನ ಇದ್ದಾರೆ, ಲಂಬಾಣಿ ಜನರ ಸೊಕ್ಕು ಬಹಳ ಆಗಿದೆ ಅಂತಾ ಬೈದು ಹೊರಗಡೆ ನಿಲ್ಲಿಸಿದ ಕಾರ ನಂ. ಕೆಎ ೩೨ ಎನ್ ೩೦೬೯ ರಲ್ಲಿಯ ರಾಡ್ ತಂದು ನನಗೆ ಹೊಡೆಯ ಹತ್ತಿದ್ದಾಗ ನನಗೆ ಹೊಡೆಯುವುದನ್ನು ನೋಡಿ ನಮ್ಮ ತಮ್ಮನಾದ ಸಂಜು ಕೂಡಾ ಬಂದಿದ್ದು ಆ ೪ ಜನರು ತಮ್ಮ ಕೈಯಲ್ಲಿಯ ಬಾಟಲಿಯಿಂದ ನನ್ನ ತಕೆಗೆ ಹೊಡೆದು ರಕ್ತಗಾಯ ಗೊಳಿಸಿದ್ದು ಅಲ್ಲದೇ ಬಾಟಲಿ ಒಡೆದು ಹೋಗಿದ್ದರಿಂದ ಅದೇ ಬಾಟಲಿಯಿಂದ ನನ್ನ ಬಲ ಮುಖಕ್ಕೆ ತಿವಿದು ಹೊಡೆದು ಭಾರಿ ರಕ್ತಗಾಯಗೊಳಿಸಿದ್ದಲ್ಲದೇ ಬಲಗೈ ಮುಂಗೈ ಕೆಳಗಡೆ ಕಟ್ಟಿಗೆ, ಬಾಟಲಿಯಿಂದ ಹೊಡೆದು ರಕ್ತಗಾಯಗೊಳಿಸಿರುತ್ತಾರೆ. ಮತ್ತು ಇನ್ನೊಬ್ಬ ರಾಡಿನಿಂದ ಬಲ ಮೊಣಕಾಲಗೆ ಹೊಡೆದಿದ್ದರಿಂದ ಭಾರಿ ಗುಪ್ತಗಾಯ ಆಗಿದ್ದಲ್ಲದೇ ನಾನು ಕೆಳಗಡೆ ಬಿದ್ದಾಗ ೩ ಜನರು ನನಗೆ ಕಾಲಿನಿಂದ ಒದ್ದಿರುತ್ತಾರೆ. ಅದರಿಂದ ಟೊಂಕಕ್ಕೆ ಗುಪ್ತಗಾಯವಾಗಿದೆ. ಆಗ ನನ್ನ ತಮ್ಮನಾದ ಸಂಜೀವನಿಗೆ ಬಾಟಲಿಯಿಂದ ತಲೆಗೆ ಹೊಡೆದು ಭಾರಿರಕ್ತಗಾಯ ಮಾಡಿರುತ್ತಾರೆ. ಅಲ್ಲದೆ ಅವನಿಗೂ ಕೂಡಾ ಎಡ ಕಾಲಿನ ಮೊಳಕಾಲಿಗೆ ರಾಡಿನಿಂದ ಹೊಡೆದು ಗುಪ್ತಗಾಯ ಮಾಡಿದ್ದಲ್ಲದೇ ಬಲ ಟೊಂಕದ ಮೇಲೆ ಮತ್ತು ಎಡಗೈ ಮುಂಡನಿಯ ಮೇಲೆ ರಾಡಿನಿಂದ ಹೊಡೆದು ಗುಪ್ತಗಾಯಗೊಳಿಸಿದ್ದಲ್ಲದೇ ಎಡ ಮೊಳಕಾಲಿಗೆ ರಾಡಿನಿಂದ ಹೊಡೆದಿದ್ದು, ನಡೆಯಲು ಬರದಾಗಿದೆ. ಕಾಲು ಮುರಿದಿರಬೇಕು ಎಂಬ ಸಂಶಯ ಆಗಿದೆ. ನಮಗೆ ರಕ್ತಗಾಯ ಆಗಿದ್ದಕ್ಕೆ ಧನ್ವಂತರಿ ಆಸ್ಪತ್ರೆಗೆ ಹೋಗಿ ಪ್ರಥಮ ಉಪಚಾರ ಮಾಡಿಕೊಂಡು ನಂತರ ಅವರು ಜಯದೇವ ಆಸ್ಪತ್ರೆಗೆ ಹೋಗಿರಿ ಅಂತಾ ಹೇಳಿ ಕಳುಹಿಸಿದ್ದು, ಜಯದೇವ ಆಸ್ಪತ್ರೆಗೆ ಸೇರಿಕೆ ಆಗಿದ್ದು ಅದೆ. ಕಾರಣ ಕಾರ ನಂ. ಕೆಎ ೩೨ ಎನ್ ೩೦೬೯ ನೇದ್ದಕ್ಕೆ ಸಂಬಂಧ ೧) ದಾದು ೨) ಇಮ್ರಾನ ಸಾ:ಪಿ.ಎನ್.ಟಿ ಕಾಲೋನಿ ಹಾಗೂ ಸ್ಟಡೇಷನ್ ಬಜಾರ ಕಲಬುರಗಿ ಮತ್ತು ಇನ್ನಿತರರ ಜನರ ಮೇಲೆ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ಒದಗಿಸಿಕೊಡಬೇಕಾಗಿ ವಿನಂತಿ ಅದೆ ಅಂತಾ ನೀಡಿದ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ಫಿರ್ಯಾದಿದಾರರು ತಮ್ಮ ಮನೆಯಲ್ಲಿ ದಿನಾಂಕ: ೦೯/೦೬/೨೦೨೨ ರಂದು ಮಲಗಿಕೊಂಡಾಗ ಫಿರ್ಯಾದಿ ಗಂಡ ಸಿದ್ದರಾಜ ಇವರು ಬೆಳಿಗಿನ ಜಾವ ೬-೩೦ ಎಎಂ ಕ್ಕೆ  ಹೊಲಕ್ಕೆ ಹೋಗುವ ಕುರಿತು ಹೊರಟು ತನ್ನ ಹೆಂಡತಿಗೆ ಎಬ್ಬಿಸಿ ಮನೆ ಬಾಗಿಲು ಹಾಕಿಕೊ ಅಂತಾ ಹೇಳಿ ಹೋಗಿದ್ದು ಫಿರ್ಯಾದಿ ಮನೆ ಬಾಗಿಲು ಮುಂದೆ ಮಾಡಿ ಮಲಗಿಕೊಂಡಿದ್ದು ನಂತರ ೭-೩೦ ಗಂಟೆಗೆ ಎದ್ದು ನೋಡಲಾಗಿ ಮನೆಯಲ್ಲಿ ಶೆಲ್ಪನಲ್ಲಿ ಇಟ್ಟಿದ್ದ ೮೩ ಗ್ರಾಂ ಬಂಗಾರದ ಆಭರಣಗಳು ಮತ್ತು ಮೊಬೈಲ್ ಸೇರಿ ಒಟ್ಟು ೩೩೬೦೦೦/- ರೂ ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋದ ಬಗ್ಗೆ ಇತ್ಯಾದಿ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ 08-07-2022 ರಂದು ಬೆಳಿಗ್ಗೆ 10-15 ಗಂಟೆಗೆ ಸರ್ಕಾರಿ ಆಸ್ಪತ್ರೆಯ ಓಪಿ ಪಿಸಿ ರವರು ಠಾಣೆಗೆ ಪೋನ ಮಾಡಿ ಮಲ್ಲಿನಾಥ ಇವರು ರಸ್ತೆ ಅಪಘಾತ ಹೋಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಮಲ್ಲಿನಾಥ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆದರೆ ದಿನಾಂಕ 07-07-2022 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ನಾನು ಕಲಬುರಗಿಯಲ್ಲಿರುವ ನನ್ನ ಅಕ್ಕಳಾದ ಪಾರ್ವತಿಬಾಯಿ ಇವರ ಮನೆಗೆ ಮೋಟಾರ ಸೈಕಲ ಮೇಲೆ ಬಂದು ಸಾಯಂಕಾಲದವರೆಗೆ ರಾಣೇಶ ಪೀರ ದರ್ಗಾ ಹತ್ತೀರ ಬರುವ ಆಶ್ರಯ ಕಾಲೋನಿಯಲ್ಲಿನ ನನ್ನ ಅಕ್ಕನ ಮನೆಯಿಂದ ವಾಪಸ್ಸು ಸಮ್ಮೂರಿಗೆ ಹೋಗುವ ಸಲುವಾಗಿ ರಾಮ ಮಂದಿರ ಸರ್ಕಲ ಮುಖಾಂತರವಾಗಿ ನನ್ನ ಮೋಟಾರ ಸೈಕಲ ನಂಬರ ಕೆಎ-32/ಇವ್ಹಿ-3703 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ-50 ರ ಮೇಲೆ ಬರುವ ಶಹಾಬಾದ ಕ್ರಾಸ ಹತ್ತೀರ ರೋಡ ಮೆಲೆ ಲಾರಿ ನಂಬರ ಎಮ್.ಹೆಚ್-08/ಡಬ್ಲೂ-0981 ನೇದ್ದರ ಚಾಲಕ ಅರ್ಜುನ ಇತನು ಜೇವರ್ಗಿ ಕಡೆಯಿಂದ ಶಹಾಬಾದ ಪಟ್ಟಣ ಕಡೆಗೆ ಹೋಗುವ ಕುರಿತು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಶಹಾಬಾದ ಕಡೆಗೆ ಹೋಗುವ ಕುರಿತು ತನ್ನ ಲಾರಿಗೆ ಇಂಡಿಕೇಟರ್ ಹಾಕದೆ ಯಾವುದೆ ಸನ್ನೇ ಮಾಡದೆ ತನ್ನ ಎಡ ರೋಡಿನಿಂದ ಬಲಗಡೆ ರೋಡಿಗೆ ತಿರುಗಿಸಿ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿದ್ದು ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಂಶ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 17-07-2022 07:38 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080