ಅಭಿಪ್ರಾಯ / ಸಲಹೆಗಳು

ರಾಘವೇಂದ್ರ ನಗರ ಪೊಲೀಸ್ ಠಾಣೆ:-  ದಿನಾಂಕ;02.07.2021 ರಂದು 12.10 ಪಿಎಮ್‍ಕ್ಕೆ ಶ್ರೀಮತಿ ಕಸ್ತೂರಿಬಾಯಿ ಗಂಡ ಶಂಕರ ಸಣ್ಣಮನಿ ವಯಃ 58 ವರ್ಷ ಜಾಃ ಕುರುಬ ಉಃ ಮನೆ ಕೆಲಸ ಸಾಃ ಸಂಗಮತಾಯಿ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ರಾಘವೇಂದ್ರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಸರಹದಿಯಲ್ಲಿ ಬರುವ  ಕನಕ ನಗರದಲ್ಲಿ ಅಪ್ಪಾಸಾಬ @ ಅಪ್ಪು ತಂದೆ ಶಂಕರ ಸಣ್ಣಮನಿ ವಯಃ30 ವರ್ಷ ಜಾಃ ಕುರುಬ ಉಃ ಲ್ಯಾಬ್ ಟೇಕನೆಷ್ನ ಸಾಃಸಂಗಮ ತಾಯಿ ಕಾಲೋನಿ ಕಲಬುರಗಿ ಇತನಿಗೆ ದಿನಾಂಕ:01.07.2021 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ಯಾರೋ ಅಪರಿಚಿತ ದುಷ್ಕರ್ಮಿಗಳು ಯಾಔಉದೋ ಒಂದು ಉದ್ದೇಶದಿಂದ ಹೊಡೆದು ಭಾರಿ ಗುಪ್ತಗಾಯಪಡಿಸಿ ಕೊಲೆ ಮಾಡಿದ ಬಗ್ಗೆ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ  ಗುನ್ನೆ ನಂ:139/2021 ಕಲಂ:302 ಐಪಿಸಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಸದರಿ ಪ್ರಕರಣದ ತನಿಖೆ ಕುರಿತು ಮಾನ್ಯ ಶ್ರೀ ಡಾ|| ವೈ.ಎಸ್. ರವಿಕುಮಾರ ಐಪಿಎಸ್ ಪೊಲಿಸ್ ಆಯುಕ್ತರು ಕಲಬುರಗಿ ನಗರ, ಶ್ರೀ.ಅಡ್ಡೂರು ಶ್ರೀನಿವಾಸಲು ಐಪಿಎಸ್ ಪೊಲೀಸ್ ಉಪ ಆಯುಕ್ತಕರು (ಕಾ&ಸು) ಕಲಬುರಗಿ ನಗರ, ಶ್ರೀ.ಅಂಶುಕುಮಾರ ಐಪಿಎಸ್ ಎ.ಸಿ.ಪಿ ‘ಎ’ ಉಪ-ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ರಾಘವೇಂದ್ರ ನಗರ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಶ್ರೀ ಅರುಣ.ಎಸ್.ಮುರುಗುಂಡಿ ಪಿಐ ನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಿಬ್ಬಂಧಿಯವರಾದ ಸಿಕ್ರೇಶ್ವರ ಹೆಚ್‍ಸಿ, ಮುಜಾಹಿದ ಪಿಸಿ, ರಮೇಶ ಪಿಸಿ,  ಕಿಶೋರ ಪಿಸಿ,  ರವರೊಂದಿಗೆ ಮಾಹಿತಿ ಕಲೆ ಹಾಕಿ ಖಚಿತ ಭಾತ್ಮಿ ಮೇರೆಗೆ ದಿನಾಂಕ:07.07.2021 ರಂದು 12-00 ಪಿಎಂ ಗಂಟೆಯ ಸುಮಾರಿಗೆ ಆರೋಪಿತರಾದ 1) ಸೋಮಶೇಖರ@ಸೋಮು ತಂದೆ ಕೆಂಚಪ್ಪಾ ಹದಗಲ ವಯ-28 ವರ್ಷ ಜಾ||ಕುರುಬ ಉ||ಸರಕಾರಿ ನೌಕರ ಸಾ||ಕನಕ ನಗರ ಬ್ರಹ್ಮಪೂರ ಕಲಬುರಗಿ 2) ರಾಹುಲ@ಡಬ್ಲ್ಯೂ@ಝೀಫ್ರೀ ತಲಿ ತಂದೆ ರಮೇಶ ಕುಲಕರ್ಣೀ ವಯ-21 ವರ್ಷ ಜಾ||ಬ್ರಾಹ್ಮಣ ಉ||ವಿಧ್ಯಾರ್ಥೀ ಸಾ||ಕನಕ ನಗರ ಬ್ರಹ್ಮಪೂರ ಕಲಬುರಗಿ ಇವರಿಗೆ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾಗ ಸದರಿಯವರು ತಿಳಿಸಿದೆನೆಂದರೆ ಹಣಕಾಸಿನ ಕೊಡು ತೆಗೆದುಕೊಳ್ಳುವ ವಿಷಯದಲ್ಲಿ ಮತ್ತು ಹಳೆಯ ವೈಷಮ್ಯದಿಂದ ಅಪ್ಪಾಸಾಬ @ ಅಪ್ಪು ತಂದೆ ಶಂಕರ ಸಣ್ಣಮನಿ ವಯಃ30 ವರ್ಷ ಜಾಃ ಕುರುಬ ಉಃ ಲ್ಯಾಬ್ ಟೇಕನೆಷ್ನ ಸಾಃಸಂಗಮ ತಾಯಿ ಕಾಲೋನಿ ಕಲಬುರಗಿ ಇತನಿಗೆ ಹೊಡೆದು ಕೊಲೆ ಮಾಡಿರುತ್ತೇವೆ ಅಂತಾ ತಿಳಿಸಿದ್ದು ಮತ್ತು ಅವರಿಂದ ಕೃತ್ಯಕ್ಕೆ ಉಪೋಗಿಸಿದ ಆಯುಧಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ. ಇನ್ನೂಳಿದ ಆರೋಪಿತರ ಪತ್ತೆ ಕುರಿತು ವ್ಯಾಪಕ ಜಾಲ ಬಿಸಿದ್ದು ಇರುತ್ತದೆ.

ಮಹಿಳಾ ಪೊಲೀಸ ಠಾಣೆ :- ಇಂದು ದಿನಾಂಕ 07.07.2021 ರಂದು ಸಾಯಂಕಾಲ 6 ಗಂಟೆಗೆ ಫಿರ್ಯಾದಿ ಶ್ರೀಮತಿ ಮಂಗಲಾ ಗಂಡ ವಿರೇಶ ಹಿರೇಮಠ ವಯಾ|| 28 ವರ್ಷ ಉ|| ಮನೆಗೆಲಸ ಸಾ|| ಕನಕ ನಗರ ಕೋರಿಮಠ ಬ್ರಹ್ಮಪೂರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ವಿರೇಶ ತಂದೆ ಕಲ್ಲಯ್ಯಾ ಹಿರೇಮಠ ಇವರೊಂದಿಗೆ ನನ್ನ ಮದುವೆಯಾಗಿ 6 ವರ್ಷಗಳಾಗಿದ್ದು, ಮದುವೆ ಕಾಲಕ್ಕೆ 2.5 ತೊಲೆ ಬಂಗಾರ ಮತ್ತು 1 ಲಕ್ಷ ರಪಾಯಿ ಹಣವನ್ನು ಕೊಟಟು ಕೊಟ್ಟಿರುತ್ತೇವೆ. ಆದರೂ ಕುಡಾ ನನ್ನ ಗಂಡ ನನಗೆ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತಾ ದಿನನಿತ್ಯ ಕುಡಿದು ಬಂದು ಜಗಳ ಮಾಡುತ್ತಾನೆ. ದಿನಾಂಕ 7.7.2021 ರಂದೆ ಬೆಳಗ್ಗೆ 7 ಗಂಟೆಗೆ ಹಣ ತರದೇ ಇದ್ದಲ್ಲಿ ನನಗೆ ಮತ್ತು ನನ್ನ ಮಗುವಿಗೆ ಹೊಡೆಬಡೆ ಮಾಡಿ ನನ್ನ ಮಗುವಿಗೆ ಎತ್ತಿ ಬಿಸಾಕಿರುತ್ತಾನೆ. ಸದರಿ ನನ್ನ ಗಂಡನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.162/2021 ಕಲಂ 498(ಎ) 323 504 ಐಪಿಸಿ ಮತ್ತು ಕಲಂ 3 & 4 ಡಿಪಿ ಎಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಅಂತಾ ವರದಿಯಾದ ಬಗ್ಗೆ ಮಾಹಿತಿ .

ಇತ್ತೀಚಿನ ನವೀಕರಣ​ : 08-07-2021 11:56 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080