ಅಭಿಪ್ರಾಯ / ಸಲಹೆಗಳು

   ಚೌಕ ಪೊಲೀಸ್ ಠಾಣೆ :-   ದಿನಾಂಕ 08-06-2022  ರಂದು ರಾತ್ರಿ ೯-೪೫  ಗಂಟೆಗೆ  ಶ್ರೀ ಎ. ವಾಜೀದ ಪಟೇಲ್ ಪೊಲೀಸ ನಿರೀಕ್ಷಕರು ಸಿಸಿಬಿ ಘಟಕ ಕಲಬುರಗಿ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿದ ಸರಕಾರಿ ತರ್ಪೇ  ದೂರು ಮತ್ತು ಟೈಪ ಮಾಡಿದ  ಮಟಕಾ ಜೂಜಾಟ ದಾಳಿ ಜಪ್ತಿ ಪಂಚನಾಮೆ  ಹಾಜರಪಡಿಸಿದ್ದರ  ಸಾರಾಂಶವೆನೆಂದೆರೆ, ಎ. ವಾಜೀದ ಪಟೇಲ ಪಿ.ಐ., ಸಿ.ಸಿ.ಬಿ. ಘಟಕ, ಕಲಬುರಗಿ ನಗರ ಸರಕಾರಿ ತರ್ಪೇ   ದೂರು ಸಲ್ಲಿಸುವುದೇನೆಂದರೆ, ಇಂದು ದಿನಾಂಕ:೦೮-೦೬-೨೦೨೨ ರಂದು ಸಾಯಂಕಾಲ ೬-೦೦ ಗಂಟೆಗೆ ನಾನು ಸಿ.ಸಿ.ಬಿ. ಕಛೇರಿಯಲ್ಲಿದ್ದಾಗ ಕಲಬುರಗಿ ನಗರದ ಕೃಷಿ ಮಾರುಕಟ್ಟೆ ಸಮಿತಿ ಗಂಜನಲ್ಲಿ ಸಂಗಮೇಶ್ವರ ಟ್ರೇಡಿಂಗ್ ಕಂಪನಿ ಅಕ್ಕಿ ದುಕಾನ ಎದುರುಗಡೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ತನ್ನ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದು ೦೧ ರೂಪಾಯಿಗೆ ೮೦ ರೂಪಾಯಿ ಕೊಡುವುದಾಗಿ ಹೇಳಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಯನ್ನು ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ವಿಷಯವನ್ನು ಮೇಲಾಧಿಕಾರಿಗಳಾದ ಮಾನ್ಯ ಆಯುಕ್ತರು, ಮಾನ್ಯ ಉಪ ಆಯುಕ್ತರು (ಕಾ&ಸು) ಕಲಬುರಗಿ ನಗರ ಮತ್ತು ಮಾನ್ಯ ಉಪ ಆಯುಕ್ತರು (ಅಪರಾಧ & ಸಂಚಾರಿ) ಕಲಬುರಗಿ ನಗರ ರವರಿಗೆ ತಿಳಿಸಿ, ಮಾನ್ಯ ಉಪ ಆಯುಕ್ತರು, (ಅಪರಾಧ ಮತ್ತು ಸಂಚಾರಿ) ವಿಭಾಗ, ಕಲಬುರಗಿ ನಗರ ಅವರ ಮರ‍್ಗರ‍್ಶನದಲ್ಲಿ ದಾಳಿ ಮಾಡುವ ಕುರಿತು ಇಬ್ಬರೂ ಪಂಚರಾದ ೧) ಶ್ರೀ ಕಿಶೋರ ತಂದೆ ರಾಜು ರಾಠೋಡ, ವ:೩೧ ರ‍್ಷ, ಜಾತಿ:ಲಂಬಾಣಿ, ಉ:ಖಾಸಗಿ ಕೆಲಸ, ಸಾ:ಭರತನಗರ ತಾಂಡಾ, ಕಲಬುರಗಿ ಮೊ.ನಂ. ೯೬೧೧೧೮೮೮೮೬. ೨) ಶ್ರೀ ಅರವಿಂದ ತಂದೆ ಶರಣಬಸಪ್ಪ ರೆಡ್ಡಿ, ವ:೨೨ ವರ್ಷ, ಜಾತಿ:ಲಿಂಗಾಯತ, ಉ:ಖಾಸಗಿ ಕೆಲಸ, ಸಾ:ಶಾಸ್ತ್ರಿ ನಗರ ಕಲಬುರಗಿ ಮೊ.ನಂ.೭೪೧೧೪೪೫೮೩೦ ಇವರನ್ನು ಸಿ.ಸಿ.ಬಿ. ಘಟಕಕ್ಕೆ ಸಾಯಂಕಾಲ ೬-೩೦ ಗಂಟೆಗೆ ಬರಮಾಡಿಕೊಂಡು ಸದರಿ ಪಂಚರಿಗೆ ವಿಷಯ ತಿಳಿ ಹೇಳಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ನಾನು, ಪಂಚರು, ಮತ್ತು ಸಿ.ಸಿ.ಬಿ ಘಟಕ ಸಿಬ್ಬಂದಿಯವರಾದ ೧) ಶರಣಬಸಪ್ಪ ಹೆಚ್.ಸಿ-೯೪, ೨) ಸುನೀಲಕುಮಾರ ಹೆಚ್ಸಿ-೧೬೭, ೩) ಯಲ್ಲಪ್ಪ ಸಿಪಿಸಿ-೨೨೦, ೪) ಶಿವಕುಮಾರ ಸಿಪಿಸಿ-೧೬೭೧೫, ೫)ಅಶೋಕ ಕಟಕೆ ಸಿಪಿಸಿ-೯೬೬, ೬) ನಾಗರಾಜ ಸಿಪಿಸಿ-೧೨೫೭ ಎಲ್ಲರೂ ಕೂಡಿ ಸರ್ಕಾರಿ ಜೀಪ ನಂ.ಕೆಎ-೩೨-ಜಿ-೧೨೪೯ ನೇದ್ದರಲ್ಲಿ ಮತ್ತು ಕೆಲವು ಸಿಬ್ಬಂದಿಯವರು ತಮ್ಮ ತಮ್ಮ ಮೋಟಾರಸೈಕಲಗಳ ಸಾಯಂಕಾಲ ೬-೪೫ ಗಂಟೆಗೆ ಹೊರಟು ಬಾತ್ಮಿ ಬಂದ ಸ್ಥಳವಾದ ಕಲಬುರಗಿ ನಗರದ ಕೃಷಿ ಮಾರುಕಟ್ಟೆ ಸಮಿತಿ ಗಂಜನಲ್ಲಿ ಸಂಗಮೇಶ್ವರ ಟ್ರೇಡಿಂಗ್ ಕಂಪನಿ ಅಕ್ಕಿ ದುಕಾನ ಹತ್ತಿರ ಸಾಯಂಕಾಲ ೭-೧೫ ಗಂಟೆಗೆ ತಲುಪಿ ಸ್ವಲ್ಪ ದೂರದಲ್ಲಿ ಜೀಪನ್ನು ಮತ್ತು ಮೋಟಾರಸೈಕಲಗಳನ್ನು ನಿಲ್ಲಿಸಿ ಎಲ್ಲರೂ ವಾಹನದಿಂದ ಇಳಿದು ಅಲ್ಲಿಯೇ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಗಂಜನಲ್ಲಿ ಸಂಗಮೇಶ್ವರ ಟ್ರೇಡಿಂಗ್ ಕಂಪನಿ ಅಕ್ಕಿ ದುಕಾನ ಎದುರುಗಡೆ ಸರ‍್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಅಲ್ಲಿ ಹೋಗಿ ಬರುವ ಸಾರ್ವಜನಿಕರಿಂದ ೧ ರೂ.ಗೆ ೮೦ ರೂ. ಕೊಡುವುದಾಗಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿ ಬರೆದುಕೊಳ್ಳುವುದನ್ನು ನಾನು ಮತ್ತು ಪಂಚರು ನೋಡಿ ಖಚಿತಪಡಿಸಿಕೊಂಡು ಸಾಯಂಕಾಲ ೭-೩೦ ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ಒಮ್ಮಲ್ಲೇ ಎಲ್ಲರೂ ಸುತ್ತುವರೆದು ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲಾಗಿ ಆತನ ಹೆಸರು ಕಾಶಿನಾಥ ತಂದೆ ವೆಂಕಟರಾವ ರೂಡೇ, ವ:೩೩ ರ‍್ಷ, ಜಾತಿ:ಮರಾಠಾ, ಉ:ಹೊಟೇಲ ಕೆಲಸ, ಸಾ:ಚೆನ್ನವೀರ ನಗರ ಕಲಬುರಗಿ ಅಂತಾ ತಿಳಿಸಿದನು. ನಂತರ ಆರೋಪಿಯ ಅಂಗ ಶೋಧನೆ ಮಾಡಲಾಗಿ ಈತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ರೂ.೮,೨೦೦/- ನಗದು ಹಣ, ಮತ್ತು ಮಟಕಾ ಚೀಟಿಗಳು ಅ.ಕಿ.ರೂ.೦೦/-, ಒಂದು ಬಾಲ ಪೆನ್ ಅ.ಕಿ.ರೂ.೦೦/-, ದೊರೆತಿದ್ದುಇರುತ್ತದೆ. ಸದರಿ ಜಪ್ತುಪಡಿಸಿಕೊಂಡ ಮುದ್ದೇಮಾಲುಗಳಿಗೆ ಪಂಚರು ಸಹಿ ಮಾಡಿದ ಚೀಟಿಯನ್ನುಅಂಟಿಸಿ ಒಂದು ಕವರನಲ್ಲಿ ಹಾಕಲಾಯಿತು. ಸದರಿ ಜಪ್ತಿ ಪಂಚನಾಮೆಯನ್ನು ಸಾಯಂಕಾಲ ೭-೩೦ ಗಂಟೆಯಿಂದ ರಾತ್ರಿ ೮-೩೦ ಗಂಟೆಯವರೆಗೆ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮದಲ್ಲಿ ಲೈಟಿನ ಬೆಳಕಿನಲ್ಲಿ ಲ್ಯಾಪಟ್ಯಾಪನಲ್ಲಿ ಟೈಪ ಮಾಡಿ ಮುಗಿಸಲಾಯಿತು.ನಂತರ ಚೌಕ ಪೊಲೀಸ ಠಾಣೆಗೆ ಬಂದು ನನ್ನ ವರದಿಯನ್ನು ತಯಾರಿಸಿ, ಜಪ್ತಿಪಂಚನಾಮೆ, ಮತ್ತು ಮುದ್ದೇಮಾಲು ಹಾಗೂ ಒಬ್ಬ ಆರೋಪಿಯನ್ನು ಹಾಜರಪಡಿಸಿದ್ದು, ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ.  ಎಂದು ಕೊಟ್ಟ ಕಂಪ್ಯೂಟರನಲ್ಲಿ ಟೈಪ ಮಾಡಿದ ಸರಕಾರಿ ತರ್ಪೇ  ದೂರು ಮತ್ತು ಟೈಪ ಮಾಡಿದ  ಮಟಕಾ ಜೂಜಾಟ ದಾಳಿ ಜಪ್ತಿ ಪಂಚನಾಮೆ  ಸರಕಾರಿ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 18-06-2022 02:44 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080