ಅಭಿಪ್ರಾಯ / ಸಲಹೆಗಳು

 ಚೌಕ ಪೊಲೀಸ್ ಠಾಣೆ :- ದಿನಾಂಕ:08-05-2022  ರಂದು ಮದ್ಯಾಹ್ನ ೩.೩೦ ಗಂಟೆಗೆ ಫರ‍್ಯಾದಿದಾರನಾದ ಶ್ರೀ ಪ್ರಶಾಂತ ತಂದೆ ಭವಾನಿ ಕಲಕೇರಿ ವ:೩೨ ವರ್ಷ ಜಾ:ಪ.ಜಾತಿ(ಹೊಲೆಯ) ಉ:ಮಹಾನಗರ ಪಾಲಿಕೆಯಲ್ಲಿ ದಿನಗೂಲಿ ನೌಕರ ಸಾ:ಬಸವಲಿಂಗ ನಗರ ಹರಿಜನವಾಡಾ ಶಹಾಬಜಾರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ಫರ‍್ಯಾದಿ ದೂರು ಅರ್ಜಿ ಹಾಜರ ಪಡಿಸಿದ್ದು ಸದರಿ ಫರ‍್ಯಾದಿ ದೂರಿನ ಸಾರಾಂಶ ಈ ಕೆಳಗಿನಂತಿರುತ್ತದೆ. ನಮ್ಮ ತಂದೆ, ತಾಯಿಗೆ ಇಬ್ಬರು ಗಂಡ ಮಕ್ಕಳಿರುತ್ತೇವೆ. ನಾನು ಹಿರಿಯವನಿದ್ದು, ಎರಡನೆಯವನು ಕೊಲೆಯಾದ ರಘು @ ರಘುವೀರ ತಂದೆ ಭವಾನಿ ಕಲಕೇರಿ ವ:೨೫ ವರ್ಷ ಇತನು ಇದ್ದು, ಅವನ ಬಿ.ಎ. ಡಿಗ್ರಿ ಮುಗಿದಿದ್ದು, ಎನು ಕೆಲಸ ಮಾಡದೇ ತಿರುಗಾಡುತ್ತಾ ಇರುತ್ತಾನೆ. ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಜ್ಯೋತಿ ತಾಯಿ ರಾಧಾಬಾಯಿ ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿರುತ್ತೇವೆ.  ಇಂದು ದಿನಾಂಕ ೦೮/೦೫/೨೦೨೨ ರಂದು ಮಧ್ಯಾಹ್ನ ೨-೦೦ ಗಂಟೆ ಸುಮಾರಿಗೆ ಕೆಲಸದಿಂದ ಮನೆಗೆ ಬಂದಾಗ ನಮ್ಮ ಮನೆ ಎದುರು ನನ್ನ ತಮ್ಮ ರಘು @ ರಘುವೀರ ಮತ್ತು ಅವನ ಗೆಳೆಯರಾದ ಬಾಬು ತಂದೆ ಮೇಘರಾಜ ರಾಠೋಡ ಮತ್ತು ಕಿರಣ ಅರ್.ಜೆ. ಮೂವರು ಇದ್ದರು. ಎನ್.ಎಸ್. ಗಾಡಿಯನ್ನು ರಘು ಓಡಿಸುತ್ತಿದ್ದು, ಅತನ ಜೊತೆ ಕಿರಣ ಅರ್.ಜೆ. ಇಬ್ಬರು ಒಂದೇ ಗಾಡಿಯ ಮೇಲೆ ಹೋದರು. ಬಾಬು ಇತನು ಡಿಯೋ ಗಾಡಿ ಮೇಲೆ ಒಬ್ಬನೇ ಕುಳಿತುಕೊಂಡು ಹೋದನು. ಸ್ವಲ್ಪ ಸಮಯದಲ್ಲಿ ಅಂದಾಜ ೧೫ ನಿಮಿಷದಲ್ಲಿ ಬಾಬು ರಾಠೋಡ ಇತನು ಓಡುತ್ತಾ ನಮ್ಮ ಮನೆಗೆ ಬಂದು ತಿಳಿಸಿದ್ದೆನೆಂದೆರೆ, ತಾನು ಮತ್ತು  ರಘು @ ರಘುವೀರ, ಕಿರಣ ಅರ್.ಜೆ. ಮೂವರು ತಮ್ಮ ಮನೆ ಹತ್ತಿರ ಇದ್ದಾಗ ಅಮರ ತಿವಾರಿ ಇತನು ನಿನ್ನ ತಮ್ಮ ರಘು ಇತನಿಗೆ ಪೋನ ಮಾಡಿ ನಿನ್ನ ಹತ್ತಿರ ಸ್ವಲ್ಪ ಮಾತನಾಡುವದಿದೆ ಗೋಕುಲ ನಗರ ಜಿ.ಡಿ.ಎ. ಗರ‍್ಡನ ಹತ್ತಿರ ಬಾ ಅಂತಾ ಹೇಳಿದಾಗ ನಾವುಗಳು ಮೋಟಾರ ಸೈಕಲ ಮೇಲೆ ಹೊರಟಿದ್ದು, ನನ್ನಕ್ಕಿಂತ ಸ್ವಲ್ಪ ಮುಂದೆ ರಘು ಮತ್ತು ಕಿರಣ ಇಬ್ಬರು ಎನ್.ಎಸ್. ಗಾಡಿ ಮೇಲೆ ಹೋಗಿದ್ದು, ಅವರ ಹಿಂದೆ ನಾನು ಡಿಯೋ ಗಾಡಿ ಮೇಲೆ ಹೊರಟಿದ್ದು ಮಧ್ಯಾಹ್ನ ೨-೧೫ ಗಂಟೆ ಸುಮಾರಿಗೆ ಗೋಕುಲ ನಗರ ಜಿ.ಡಿ.ಎ. ಗರ‍್ಡನ ಎದುರುಗಡೆ ಇರುವ ನಾಲಿಯ ರೋಡಿನ ಮೇಲೆ ಬಂದಾಗ ಅಮರ ತಿವಾರಿ, ಗಣಪತಿ, ಸುನೀಲ ಸಂಗಡ ಇತರರು ರಘು ನಡೆಸುತ್ತಿದ್ದ ಎನ್.ಎಸ್. ಗಾಡಿಗೆ ಅಡ್ಡಗಟ್ಟಿ ನಿಲ್ಲಿಸಿ ೧) ಅಮರ ತಿವಾರಿ ೨) ಕಿರಣ ಅರ್.ಜೆ. ೩) ಹಣಮಂತ ತಳವಾರ ೪) ವಿಶಾಲ ತಿವಾರಿ ೫) ಗಣೇಶ @ ಗಣಪತಿ ೬)ಸುನೀಲ್ ಸಂಗಡ ಇತರರು ಕೂಡಿಕೊಂಡು ಚಾಕು, ತಲವಾರ, ಕಲ್ಲುಗಳಿಂದ ನಿಮ್ಮ ತಮ್ಮ ರಘು  ತಲೆಯ ಮೇಲೆ ಮುಖದ ಮೇಲೆ ಕುತ್ತಿಗಿಗೆ, ಎದೆ, ಹೊಟ್ಟೆ, ಎರಡು ಕೈಗಳ ಮೇಲೆ, ಬೆನ್ನಿಗೆ ಸಿಕ್ಕಾ ಪಟ್ಟೆ ಹೊಡೆದು ಭಾರಿ ರಕ್ತಗಾಯಗೊಳಿಸಿರುತ್ತಾರೆ. ಇದನ್ನು ನೋಡಿದಾಗ ಅವರು ನನಗೆ ಕೂಡಾ ಹೊಡೆಯಲು ಬೆನ್ನು ಹತ್ತಿದ್ದರಿಂದ ಡಿಯೋ ಗಾಡಿ ಸ್ಥಳದಲ್ಲಿ ಬಿಟ್ಟು ಬಂದಿರುತ್ತೇನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಬಾಬು ಹಾಗೂ ನನ್ನ ಹೆಂಡತಿ ಜ್ಯೋತಿ, ಸಣ್ಣವ್ವ ಲತಾಬಾಯಿ, ನಮ್ಮ ಸಂಬಂಧಿಕರಾದ ತಂಗಿ ಆರತಿ ತಮ್ಮ ಶ್ರೀನಿವಾಸ ಎಲ್ಲರೂ ಕೂಡಿಕೊಂಡು ಅಲ್ಲೇ ಹತ್ತಿರದಲ್ಲಿ ಇರುವ ಗೋಕುಲ ನಗರ ಜಿ.ಡಿ.ಎ.ಕಾಲನಿ ಗಾರ್ಡನ್‌  ಎದುರುಗಡೆ ಇರುವ ನಾಲಿಯ ರೋಡಿನ ಮೇಲೆ ನನ್ನ ತಮ್ಮ ರಘು ರಕ್ತದ ಮಡುವಿನಲ್ಲಿ ಕೊಲೆಯಾಗಿ ಬಿದ್ದಿದ್ದನು. ಸ್ಥಳದಲ್ಲಿ ಎರಡು ಕಲ್ಲುಗಳು ಬಿದ್ದಿದ್ದು ಅವುಗಳಿಗೆ ರಕ್ತ ಹತ್ತಿದ್ದು ಅವನಿಗೆ ನೋಡಲಾಗಿ ಅವನ ತಲೆಯ ಮೇಲೆ ಮುಖದ ಮೇಲೆ ಕುತ್ತಿಗಿಗೆ, ಎದೆ, ಹೊಟ್ಟೆ, ಎರಡು ಕೈಗಳ ಮೇಲೆ, ಬೆನ್ನಿಗೆ ಸಿಕ್ಕಾ ಪಟ್ಟೆ  ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಿದ್ದು ಕಂಡು ಬಂತು. ಈ ಕೊಲೆ ಯಾವ ಕಾರಣಕ್ಕಾಗಿ ಮಾಡಿದ್ದಾರೆ ಎಂದು ಬಾಬು ಇತನಿಗೆ ವಿಚಾರಿಸಿದಾಗ ಯಾವುದೋ ಹಳೇ ದ್ವೇಷದಿಂದ ಕೊಲೆ ಮಾಡಿರುವುದಾಗಿ ತಿಳಿಸಿದನು. ಅಮರ ತಿವಾರಿ ಮತ್ತು ವಿಶಾಲ ತಿವಾರಿ ಹಾಗೂ ಹಣಮಂತ ತಳವಾರ ಸಾ:ಶಹಾಬಜಾರ ಕಲಬುರಗಿ ಇವರುಗಳು ಸವರ್ಣಿಯ ರಜಪೂತ ಮತ್ತು ಕಬ್ಬಲಿಗ ಜನಾಂಗದವರಿದ್ದು, ಅವನು ನನ್ನ ತಮ್ಮ ರಘು ಇತನು ಪರಿಶಿಷ್ಟ ಜಾತಿಗೆ ಸೇರಿದವನು ಇರುತ್ತಾನೆಂದು ಗೊತ್ತಿದ್ದರೂ ಸಹಾ ಯಾವುದೋ ಹಳೇ ದ್ವೇಷದಿಂದ ೧) ಅಮರ ತಿವಾರಿ ೨) ಕಿರಣ ಅರ್.ಜೆ. ೩) ಹಣಮಂತ ತಳವಾರ ೪) ವಿಶಾಲ ತಿವಾರಿ ೫) ಗಣೇಶ @ ಗಣಪತಿ ೬) ಸುನೀಲ್ ಸಂಗಡ ಇತರರು ಸಾ:ಎಲ್ಲರೂ ಶಹಾಬಜಾರ ಕಲಬುರಗಿ ಸಂಗಡ ಇತರರು ಕೂಡಿಕೊಂಡು ರಘು ನಡೆಸುತ್ತಿದ್ದ ಎನ್.ಎಸ್. ಗಾಡಿಗೆ ಅಡ್ಡಗಟ್ಟಿ ನಿಲ್ಲಿಸಿ ಚಾಕು, ತಲವಾರ, ಕಲ್ಲುಗಳಿಂದ, ನನ್ನ ತಮ್ಮ ರಘು  ತಲೆಯ ಮೇಲೆ ಮುಖದ ಮೇಲೆ ಕುತ್ತಿಗಿಗೆ, ಎದೆ, ಹೊಟ್ಟೆ, ಎರಡು ಕೈಗಳ ಮೇಲೆ, ಬೆನ್ನಿಗೆ ಸಿಕ್ಕಾ ಪಟ್ಟೆ ಹೊಡೆದು ಭಾರಿ ರಕ್ತಗಾಯಗೊಳಿಸಿ ದರ‍್ಜನ್ಯ ಮಾಡಿ ಕೊಲೆ ಮಾಡಿರುತ್ತಾರೆ. ಕಾರಣ ನನ್ನ ತಮ್ಮ ರಘು ಕಲಕೇರಿ ಇತನಿಗೆ ಕೊಲೆ ಮಾಡಿದ ೧) ಅಮರ ತಿವಾರಿ ೨) ಕಿರಣ ಅರ್.ಜೆ. ೩) ಹಣಮಂತ ತಳವಾರ ೪) ವಿಶಾಲ ತಿವಾರಿ ೫) ಗಣೇಶ @ ಗಣಪತಿ ೬) ಸುನೀಲ್ ಸಂಗಡ ಇತರರು ಸಾ:ಎಲ್ಲರೂ ಶಹಾಬಜಾರ ಕಲಬುರಗಿ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಅಂತಾ ಕೊಟ್ಟ ದೂರು ಫರ‍್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 24-05-2022 02:14 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080