ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ ಠಾಣೆ :- ದಿನಾಂಕ: 08-03-2023 ರಂದು 01:45 ಪಿ.ಎಂ.ಕ್ಕೆ ಸ್ವತ ಫಿರ್ಯಾದಿ ಶ್ರೀ ಶಿವಪ್ಪ ಪಿ.ಎಸ್.ಐ.(ಕಾ.ಸು) ಅಶೋಕ ನಗರ ಪೊಲೀಸ್ ಠಾಣೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 08-03-2023 ರಂದು ಬೆಳಿಗ್ಗೆ 08:00 ಗಂಟೆಗೆ ಹೊಳಿ ಹಬ್ಬದ ಪ್ರಯುಕ್ತ ಠಾಣಾ ವ್ಯಾಪ್ತಿಯಲ್ಲಿ ಸಂಗಡ ಶಿವಲಿಂಗ್ ಸಿ.ಪಿ.ಸಿ-446 ಮತ್ತು ನೀಲಕಂಠ ಸಿ.ಪಿ.ಸಿ.-531 ಇವರಿಗೆ ಸಂಗಡ ಕರೆದುಕೊಂಡು ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಾ, ಕೇಂದ್ರ ಬಸ್ ನಿಲ್ದಾಣ, ಬಸವ ನಗರ, ಅಶೋಕ ನಗರ, ಶಾಂತಿ ನಗರ, ಭಗವತಿ ನಗರ, ಮುಖಾಂತರ 01:00 ಪಿ.ಎಂ. ಕ್ಕೆ ಕೇಂದ್ರ ಬಸ್ ನಿಲ್ದಾಣದ ಹಿಂದುಗಡೆ ಬಂದಾಗ 3 ಜನ ವ್ಯಕ್ತಿಗಳು ದುಂಡಾಗಿ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಮದ್ಯ ಸೇವನೆ ಮಾಡುತ್ತಾ ರಸ್ತೆಯ ಮೇಲೆ ಹೋಗಿ ಬರುವ ಜನರಿಗೆ ಅವಾಚ್ಯವಾಗಿ ಬೈಯುತ್ತಾ ಸಾರ್ವಜನಿಕ ಶಾಂತತೆಗೆ ಭಂಗವುಂಟು ಮಾಡುತ್ತಿದ್ದಾಗ, ಸದರಿಯವರಿಗೆ ವಶಕ್ಕೆ ಪಡೆದುಕೊಂಡ ಹೆಸರು ವಿಳಾಸ ವಿಚಾರಿಸಲಾಗಿ ಅವರು ತಮ್ಮ ಹೆಸರು 1) ಕಿರಣ ತಂದೆ ಮಲ್ಲಿಕಾರ್ಜುನ ಝಳಕಿ ವಯ: 27 ವರ್ಷ ಉ: ಹಾಲಿನ ವ್ಯಾಪಾರ ಸಾ|| ಸಿ.ಐ.ಬಿ. ಕಾಲೋನಿ ಕಲಬುರಗಿ 2) ಸಾಗರ ತಂದೆ ಭೀಮಾಶಂಕರ ನಾಟೀಕರ ವಯ: 24 ವರ್ಷ ಉ: ಕಾಂಟ್ರ್ಯಾಕ್ಟರ ಸಹಾಯಕ ಸಾ|| ಅಂಬೀಗರ ಚೌಡಯ್ಯ ನಗರ ಹೈಕೋರ್ಟ ಹತ್ತಿರ ಕಲಬುರಗಿ ಮತ್ತು 3) ಕಿರಣ ತಂದೆ ಶಿವಶರಣಪ್ಪ ಯನಗುಂಟಿ ವಯ: 24 ವರ್ಷ ಉ: ಟೀ ಪಾಯಿಂಟ್ ಸಾ|| ಸಿ.ಐ.ಬಿ. ಕಾಲೋನಿ ಕಲಬುರಗಿ ಅಂತ ತಿಳಿಸಿದ್ದು, ಸದರಿಯವರು ತಮ್ಮ ಮುಂದೆ 3 ಉಪಯೋಗಿಸಿ ಎಸೆಯುವ ಪ್ಲಾಸ್ಟೀಕ್ ಗ್ಲಾಸಗಳನ್ನು, ಒಂದು ಕಿಂಗ್ ಫೀಶರ್ ಸ್ಟ್ರಾಂಗ್ ಬೀಯರ ಬಾಟಲಿ ಮತ್ತು ಒಂದು ಓಲ್ಡಮಂಕ್ ತ್ರಿಬಲ್ ಎಕ್ಸ ರಮ್ ಬಾಟಲಿ ಮತ್ತು ಖಾರಾ ಇಟ್ಟುಕೊಂಡು ಕುಳಿತಿದ್ದು ಇರುತ್ತದೆ. ಸದರಿವರಿಗೆ ಇಂದು ಅಬಕಾರಿ ನಿಷೇಧಿಸಿ ಆದೇಶ ಹೊರಡಿಸಿದ್ದರು ಸಹ ನೀವು ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಈ ರೀತಿಯಾಗಿ ಮದ್ಯ ಸೇವನೆ ಏಕೆ ಮಾಡುತ್ತಿದ್ದಿರಿ ಅಂತ ಕೇಳಿದಾಗ ಸಮರ್ಪಕವಾದ ಉತ್ತರ ನೀಡದೆ ಇದ್ದುದ್ದರಿಂದ, ಅವರಿಗೆ ಹಾಗೆ ಬಿಟ್ಟಲ್ಲಿ ಹೋಳಿ ಹಬ್ಬದಂದು ಸಾರ್ವಜನಿಕ ಶಾಂತತೆಗೆ ಭಂಗವುಂಟು ಮಾಡಬಹುದು ಅಂತ ಇಬ್ಬರು ಪಂಚರನ್ನು ಸ್ಥಳಕ್ಕೆ ಬರಮಾಡಿಕೊಂಡು 1) ಒಂದು ಕಿಂಗ್ ಫೀಶರ್ ಸ್ಟ್ರಾಂಗ್ ಬೀಯರ ಬಾಟಲಿ (ಅರ್ಧ ಬಳಸಿದ್ದು) ಅ.ಕಿ. 00/- 2) ಒಂದು ಓಲ್ಡಮಂಕ್ ತ್ರಿಬಲ್ ಎಕ್ಸ ರಮ್ ಬಾಟಲಿ (ಅರ್ಧ ಬಳಸಿದ್ದು) ಅ.ಕಿ. 00/- 3) ಒಂದು ಖಾಲಿಯಾದ ನೀರಿನ ಪ್ಲಾಸ್ಟಿಕ್ ಬಾಟಲ್ ಅ.ಕಿ. 00/- 4) ಉಪಯೋಗಿಸಿ ಎಸೆಯುವ 3 ಪ್ಲಾಸ್ಟೀಕ್ ಗ್ಲಾಸಗಳು ಅ.ಕಿ. 00/- 5) ಸುಮಾರು 100 ಗ್ರಾಂ ಖಾರಾ ಅ.ಕಿ. 00/- ಇವುಗಳನ್ನು ಪಂಚರ ಸಮಕ್ಷಮ, ಜಪ್ತಿ ಪಡಿಸಿಕೊಂಡು  ವರದಿ ಸಲ್ಲಿಸಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ: 08-03-2023 ರಂದು 02:00 ಪಿಎಮ್ ಸುಮಾರಿಗೆ  ಪಿರ್ಯಾದಿಗೆ ಬೀಟ್ ಪಿಸಿ-269 ರವರು  ತಿಳಿಸಿದ  ಖಚಿತ ಬಾತ್ಮಿ ಮೇರೆಗೆ ಸಿಬ್ಬಂದಿ ಹಾಗೂ ಇಬ್ಬರು ಪಂಚರ ಸಮಕ್ಷಮ ದಾಳಿ ಮಾಡಿ 1] ಪವರ್ ಕೂಲ್ ಸ್ಟ್ರಾಂಗ್ ಬೀಯರ್ 650 ಎಮ್.ಎಲ್ ನ 11 ಬಾಟಲಿಗಳು ಒಂದಕ್ಕೆ 100/- ರೂ ನಂತೆ ಒಟ್ಟು 11 ಬಾಟಲಿಗಳ ಮೌಲ್ಯ 1100/- ರೂ 2] ಓರಿಜಿನಲ್ ಚಾಯ್ಸ್ 90 ಎಮ್.ಎಲ್ ನ 3 ಕಾಟನ ಬಾಕ್ಸ್ ಪ್ರತಿಯೊಂದು ಕಾಟನ ಬಾಕ್ಸನಲ್ಲಿ ಒಟ್ಟು 96 ಟೆಟ್ರಾ ಪಾಕೇಟಗಳು ಹೀಗೆ ಒಟ್ಟು 288 ಟೆಟ್ರಾ  ಪಾಕೇಟಗಳು ಹೀಗೆ ಒಟ್ಟು 11180/- ರೂ ಮೌಲ್ಯದ ಮದ್ಯದ ಬಾಟಲಿ/ಪಾಕೇಟಗಳನ್ನು ಜಪ್ತಿ ಪಡಿಸಿಕೊಂಡು, ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಎಂ.ಬಿ. ನಗರ ಪೊಲೀಸ ಠಾಣೆ :-  ಶ್ರೀ ರಾಜಾ ಬಿರಾದರ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದೆನೆಂದರೆ, ಸಿಬ್ಬಂದಿ ಜನರಾದ 1) ಹಣಮಂತ ತೋಟದ ಹೆಚ್‌ಸಿ-218 2) ಮಹೇಶ ಸಿಪಿಸಿ-399 3) ದಸ್ತಯ್ಯ ಸಿಪಿಸಿ-515 ರವರ ಜೊತೆ ಗೂಡಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಮದ್ಯ ಮಾರಾಟದ ಖಚಿತ ಭಾತ್ಮಿ ಬಂದ ಮೇರೆಗೆ ದಾಳಿ ಮಾಡಿ 157 ಓರಿಜಿನಲ್ ಚಾಯಿಸ್ ಪಾಕೇಟ ವಶಕ್ಕೆ ಪಡೆದುಕೊಂಡು 2 ಜನ ಆರೋಪಿತರನ್ನು ವಶಕ್ಕೆ ಪಡೆದು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ ಠಾಣೆ :- ದಿನಾಂಕ: 08/03/2023 ರಂದು ರಾತ್ರಿ 10:30 ಗಂಟೆ ಸುಮಾರಿಗೆ ಸರಕಾರದ ಪರವಾಗಿ ಫಿರ್ಯಾದಿ ಶ್ರೀ ಮಂಜುನಾಥ ಬಡಿಗೇರ ಪೊಲೀಸ್ ಇನ್ಸಪೆಕ್ಟರ್ ಕಲಬುರಗಿ ಇವರು ಪೊಲೀಸ್ ಠಾಣೆಗೆ ಬಂದು ಒಬ್ಬ ಆರೋಪಿ ಮತ್ತು ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನಾ ಪತ್ರ ಕೊಟ್ಟು ಕಾನೂನು ಕ್ರಮಕ್ಕಾಗಿ ಸೂಚಿಸಿದ್ದು, ಸದರಿ ಜ್ಞಾಪನಾ ಪತ್ರದ ಸಾರಾಂಶವೇನಂದರೆ, ಇಂದು ದಿನಾಂಕ:08/03/2023 ರಂದು ರಾತ್ರಿ 08:30 ಗಂಟೆಗೆ ನಾನು ಠಾಣೆಯಲ್ಲಿರುವಾಗ ಖಚಿತ ಬಾತ್ಮಿ ಬಂದಿದ್ದು ಏನೆಂದರೆ, ಐವಾನ್ ಶಾಹಿಯಲ್ಲಿರುವ ಆಫೀಸರಸ್ ಕ್ಲಬ್ ಹತ್ತಿರ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಇಟ್ಟುಕೊಂಡು  ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತ ಬಾತ್ಮಿ ಬಂದ ಕೂಡಲೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಗಳಾದ ಮಲ್ಲನಗೌಡ ಹೆಚ್.ಸಿ-159, ಮೋಸಿನ್ ಪಿಸಿ-86, ಹಾಗು ಇಬ್ಬರು ಪಂಚರಾದ 1)ರಾಣೋಜಿ ತಂದೆ ಅಂಬಾಜಿ ವಯ:31 ವರ್ಷ ಉ: ಖಾಸಗಿ ಕೆಲಸ ಸಾ: ಹೇರೂರ್ ಕಾಂಪೌಂಡ್ ಐವಾನ್ ಶಾಹಿ ಏರಿಯಾ ಕಲಬುರಗಿ 2) ಪ್ರಕಾಶ ತಂದೆ ಸೈಬಣ್ಣ ವಯ: 51 ವರ್ಷ : ಖಾಸಗಿ ಕೆಲಸ ಸಾ: ರಾಮನಗರ ಕಲಬುರಗಿರವರನ್ನು ಠಾಣೆಗೆ ಬರಮಾಡಿಕೊಂಡು ಅಕ್ರಮ ಮದ್ಯ ಮಾರಾಟದ ಮೇಲೆ ದಾಳಿ ಮಾಡುವದಿದ್ದು ಸಂಗಡ ಬಂದು ಹಕೀಕತ ನೋಡಿ ಪಂಚನಾಮೆಯನ್ನು ಕೈಗೊಳ್ಳಲು ಪಂಚರಾಗಲು ಕೋರಿಕೊಂಡ ಮೇರೆಗೆ ಉಭಯ ಜನರು ಒಪ್ಪಿಕೊಂಡಿರುತ್ತಾರೆ. ನಂತರ ನಾನು ಮತ್ತು ಮೇಲೆ ನಮೂದು ಮಾಡಿದ ನಮ್ಮ ಸಿಬ್ಬಂದಿಯವರು ಹಾಗು ಪಂಚರು ಕೂಡಿಕೊಂಡು ಮೇಲಾಧೀಕಾರಿಗಳ ಆದೇಶ ಮತ್ತು ಸೂಚನೆಯ ಮೇರೆಗೆ ಠಾಣೆಗೆ ಒದಗಿಸಿದ ಸರಕಾರಿ ಜೀಪಿನಲ್ಲಿ ಕುಳಿತು ಐವಾನ್ ಶಾಹಿಯ ಹತ್ತಿರವಿರುವ ಆಫೀಸರಸ್ ಕ್ಲಬ್ ಹತ್ತಿರ ಹೋಗಿ ದೂರದಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಆಫೀಸರಸ್ ಕ್ಲಬ್ ಮುಂದುಗಡೆ ಖುಲ್ಲಾ ಜಾಗೆಯಲ್ಲಿ ಒಂದು ಬ್ಲಾಕ್ ಕಲರ್ ಹೊಂಡಾ ಆಕ್ಟೀವ್ ಮೋಟಾರ್ ಸೈಕಲ್ ನಂ:ಕೆ ಎ-32 ವೈ-2885 ನೇದ್ದರಲ್ಲಿ ಅಕ್ರಮವಾಗಿ ಮದ್ಯವನ್ನು ಸಂಗ್ರಹಿಸಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರಿಗೆ ತೋರಿಸಿ ರಾತ್ರಿ 08:45 ಗಂಟೆಗೆ ಸುಮಾರಿಗೆ ಏಕಕಾಲಕ್ಕೆ ದಾಳಿ ಮಾಡಲು ಮದ್ಯ ಖರೀದಿ ಮಾಡಲು ಬಂದಿದ್ದ 2-3 ಜನರು ಓಡಿ ಹೋಗಿದ್ದು ಸಿಕ್ಕಿ ಬಿದ್ದ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಸಗೀರ ತಂದೆ ಜಹೀರ ಶೇಖ ವಯ: 37 ವರ್ಷ ಉ: ಆಫೀಸರಸ್ ಫ್ಯಾಮಿಲಿ ಬಾರ ಮ್ಯಾನೇಜರ್ ಸಾ: ಕೇಂದ್ರ ಪಾಡ (ಓಡಿಸ್ಸಾ ರಾಜ್ಯ ) ಹಾ.ವ: ಖಾನ್ ಅಪಾರ್ಟಮೆಂಟ್ ತಿಮ್ಮಾಪುರಿ ಸರ್ಕಲ್ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಹೊಂಡಾ ಆಕ್ಟೀವ್ ಮೋಟಾರ್ ಸೈಕಲಿನ ಡಿಕ್ಕಿಯಲ್ಲಿ 1) 180 ಎಮ್.ಎಲ್ ನ ಒಂದು ಬ್ಲೆಂಡರ್ಸ ಪ್ರೈಡ್ ಮದ್ಯದ ಕ್ವಾಟರ್ ಬಾಟಲಿ ಅ.ಕಿ: 455 ರೂ 2) 180 ಎಮ್ ಎಲ್ ಎರಡು ಓಲ್ಡ ಮಂಕ್ ರಮ್ ಮದ್ಯದ  ಬಾಟಲಿಗಳು ಅ.ಕಿ: 400 ರೂ 3) 180 ಎಮ್.ಎಲ್ ನ ಒಂದು ಮೆಕ್ ಡೊವೆಲ್ಸ್ ನಂ:01 ರಮ್ ಮದ್ಯದ ಟೆಟ್ರಾ ಪ್ಯಾಕೇಟ್ ಅ.ಕಿ: 140 ರೂ  ದೊರೆತಿದ್ದು ನಂತರ ಸದರಿಯವನ ಹತ್ತಿರ ಮದ್ಯ ಮಾರಾಟ ಮಾಡಿದ 4) ನಗದು ಹಣ 250 ರೂ ದೊರೆತಿದ್ದು ಇರುತ್ತದೆ. ಆರೋಪಿ ಸಗೀರ ಇತನಿಗೆ ವಿಚಾರಿಸಲು ಮದ್ಯದ ಬಾಟಲಿಗಳನ್ನು ಅಫೀಸರಸ್ ಕ್ಲಬಿನಿಂದ ತಂದು ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ. ನಂತರ  ಸದರಿ ಮದ್ಯದ ಬಾಟಲಿಗಳು ಮತ್ತು ಟೆಟ್ರಾ ಪ್ಯಾಕೇಟನ್ನು ತಜ್ಞರ ಪರೀಕ್ಷೆಗೆ ಕಳುಹಿಸಿ ಕೊಡುವ ಕುರಿತು ಪ್ರತ್ಯೇಕವಾಗಿ ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಬಾಯಿ ಹೊಲೆದು ಎಸ್ ಎಂಬ ಇಂಗ್ಲೀಷ್ ಅಕ್ಷರದಿಂದ ಅರಗಿನಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಟಿಸಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ನಂತರ ಮದ್ಯ ಮಾರಾಟಕ್ಕಾಗಿ ಬಳಸಿದ ಒಂದು ಬ್ಲಾಕ್ ಕಲರ್ ಹೊಂಡಾ ಆಕ್ಟೀವ್ ಮೋಟಾರ್ ಸೈಕಲ್ ನಂ:ಕೆ.ಎ-32 ವೈ-2885 ಅ.ಕಿ:25,000 ರೂ ನೇದ್ದನ್ನು ಕೂಡ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನು ಹೋಳಿ ಹುಣ್ಣಿಮೆ ಹಬ್ಬದ ನಿಮಿತ್ಯ ಮಾನ್ಯ ಜಿಲ್ಲಾಧಿಕಾರಿಗಳು ಮದ್ಯ ಮಾರಾಟ ನೀಷೇಧಿಸಿದರು ಕೂಡ ಸರಕಾರದ ಅದೇಶ ಉಲ್ಲಂಘನೆ ಮಾಡಿ ತನ್ನ ಸ್ವಂತ ಲಾಭಕ್ಕಾಗಿ ಅಕ್ರಮವಾಗಿ ಮದ್ಯ ಮಾರಾಟದಲ್ಲಿ ತೊಡಗಿರುವುದರಿಂದ ಸದರಿ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 09-03-2023 11:25 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080