ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್‌ ಠಾಣೆ:- ದಿನಾಂಕ:08-03-2022 ರಂದು ಮಧ್ಯಾಹ್ನ ೪.೦೦ ಗಂಟೆಗೆ ಚೌಕ ಪೊಲೀಸ ಠಾಣೆಯಲ್ಲಿ ಇದ್ದಾಗ ನನಗೆ ಖಚಿತವಾದ ಬಾತ್ಮಿ ಬಂದಿದ್ದೆನೆಂದೆರೆ ಚೌಕ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ನಗರದ ರಾಜೀವಗಾಂಧಿ ನಗರ ಫೀಲ್ಟರ ಬೇಡ ಕೆ.ಬಿ.ಇ. ಖಜಾನೆ ಎದುರುಗಡೆ ಕನ್ನಯ್ಯ ಹೋಟಲ ಎದುರುಗಡೆ ಖುಲ್ಲಾ ಜಾಗೆಯಲ್ಲಿ ಒಬ್ಬನು ನಿಂತುಕೊಂಡು ಹೋಗಿ-ಬರುವ ಸರ‍್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾರೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ ೧) ಶ್ರೀ ನಾಗೇಶ ತಂದೆ ಶರಣಪ್ಪಾ  ಹಾಬನೂರ ವ:೨೧ವರ್ಷ ಉ:ಕೂಲಿ ಕೆಲಸ  ಜಾತಿ:ಕಬ್ಬಲೀಗ ಸಾ:ಗಂಗಾನಗರ ಹನುಮಾನ ಗುಡಿಯ ಹತ್ತಿರ ಕಲಬುರಗಿ ೨) ಶ್ರೀ ಶ್ರೀನಿವಾಸ ತಂದೆ ಚಂದ್ರಕಾಂತ ಕಾಡ್ಲಾ ವ:೨೦ವರ್ಷ ಉ:ಕೂಲಿ ಕೆಲಸ ಜಾತಿ:ಲಿಂಗಾಯತ ಸಾ:ಗಂಗಾನಗರ ಹನುಮಾನ ಗುಡಿಯ ಹತ್ತಿರ ಕಲಬುರಗಿ ಮತ್ತು ಸಿಬ್ಬಂದಿಯವರಾದ ಹೆಚಸಿ ೨೨೨ ಸಿದ್ರಾಮಯ್ಯ ಸಿಪಿಸಿ ೧೧೧ ಉಮೇಶ, ಸಿಪಿಸಿ ೭೯ ನಾಗೇಂದ್ರ, ಸಿಪಿಸಿ ೧೦ ಅಶೋಕ ಇವರುಗಳನ್ನು ಬರಮಾಡಿಕೊಂಡು ಪಂಚರಿಗೆ ನಾವು ಮಾಡುವ ದಾಳಿ ಜಪ್ತಿ ಪಂಚನಾಮೆಯ ಪಂಚರಾಗಿ ಜಪ್ತಿ ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಪಂಚರು ಒಪ್ಪಿಕೊಂಡರು. ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ನಮ್ಮ ಜೊತೆಯಲ್ಲಿ ದಾಳಿಗೆ ಬರಲು ಸೂಚಿಸಿದಾಗ ಅವರು ಕೂಡಾ ಒಪ್ಪಿಕೊಂಡರು. ನಂತರ ದಾಳಿ ಕುರಿತು ಸರಕಾರಿ ಜೀಪ್ ನಂ. ಕೆಎ ೩೨ ಜಿ-೮೭೪ ರಲ್ಲಿ ನಾನು ಮತ್ತು ಪಂಚರು ಹಾಗೂ ಈ ಮೇಲಿನ ಸಿಬ್ಬಂದಿಯವರು ಕುಳಿತುಕೊಂಡು ಮಾನ್ಯ ಎ.ಸಿ.ಪಿ.(ಎನ್)ಉಪವಿಭಾಗ ಕಲಬುರಗಿರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಠಾಣೆಯಿಂದ ಮಧ್ಯಾಹ್ನ ೪.೧೫ಗಂಟೆಗೆ ಹೊರಟಿದ್ದು, ಜೀಪು ಹೆಚ.ಸಿ.೨೨೨ ಸಿದ್ರಾಮಯ್ಯ ಇವರು ಚಾಲನೆ ಮಾಡುತ್ತಿದ್ದರು. ತದ ನಂತರ ಚೌಕ ರ‍್ಕಲ್ ಮುಖಾಂತರವಾಗಿ ಬಾತ್ಮಿ ಸ್ಥಳವಾದ ಕಲಬುರಗಿ ನಗರದ ರಾಜೀವಗಾಂಧಿ ನಗರ ಫೀಲ್ಟರ ಬೇಡ ಕೆ.ಬಿ.ಇ. ಖಜಾನೆ ಇನ್ನೂ ಸ್ವಲ್ಪ ಮುಂದೆ ಇರುವಂತೆ ಜೀಪು ನಿಲ್ಲಿಸಿದಾಗ ಎಲ್ಲರೂ ಜೀಪು ಇಳಿದು ಕನ್ನಯ್ಯ ಹೋಟಲ ಹತ್ತಿರ ಇರುವ ಪಾಳು ಬಿದ್ದ ಮನೆಯ ಮರೆಯಲ್ಲಿ ನಾನು ಮತ್ತು ಪಂಚರು ಹಾಗೂ ಈ ಮೇಲಿನ ಸಿಬ್ಬಂದಿಯವರು ನಿಂತು ನೋಡಲಾಗಿ ಒಬ್ಬನು ಕಲಬುರಗಿ ನಗರದ ರಾಜೀವಗಾಂಧಿ ನಗರ ಫೀಲ್ಟರ ಬೇಡ ಕೆ.ಬಿ.ಇ. ಖಜಾನೆ ಎದುರುಗಡೆ ಇರುವ ಕನ್ನಯ್ಯ ಹೋಟಲ ಎದುರುಗಡೆ ಖುಲ್ಲಾ ಜಾಗೆಯಲ್ಲಿ ನಿಂತುಕೊಂಡು ಹೋಗಿ-ಬರುವ ಸಾರ್ವಜನಿಕರಿಗೆ ೧ ರೂ.ಗೆ ೮೦ ರೂ. ಗೆಲ್ಲಿರಿ ಕಲ್ಯಾಣ ಮಟಕಾ ಇದೆ ಅಂತಾ ಕೂಗುತ್ತಾ ಸರ‍್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಬರೆದು ಕೊಡುತ್ತಿದ್ದನ್ನು ಮತ್ತು ತನ್ನ ಹತ್ತಿರವಿದ್ದ ಮೋಬಾಯಿಲನಿಂದ ಕೂಡಾ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದನ್ನು ನೋಡಿ ನನ್ನ ಜೊತೆಯಲ್ಲಿ ಬಂದ ಪಂಚರಿಗೆ ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು, ಪಂಚರ ಸಮಕ್ಷಮದಲ್ಲಿ ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ಮಧ್ಯಾಹ್ನ ೪.೪೫ ಗಂಟೆಗೆ ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲೂ ಅವನು ತನ್ನ ಹೆಸರು ಗಂಗಾಧರ ತಂದೆ ಕಾಶಿನಾಥ ಭುಯೆ ವ:೪೨ವರ್ಷ ಉ:ಹೋಟಲ ವ್ಯಾಪರ ಜಾತಿ:ಹಿಂದುಖಾಟಿಕ  ಸಾ:ಕೆ.ಇ.ಬಿ. ಖಜಾನೆ ಎದುರುಗಡೆ ರಾಜೀವಗಾಂಧಿ ನಗರ ಫೀಲ್ಟರ ಬೇಡ ಕಲಬುರಗಿ ಅಂತಾ ತಿಳಿಸಿದನು. ಆತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ:ಕಿ:೦೦ರೂ ಮತ್ತು ಒಂದು ಬಾಲಪೆನ್ನು ಅ:ಕಿ:೦೦ರೂ ಹಾಗೂ ನಗದು ಹಣ ೪೭೦೦/-ರೂ ಮತ್ತು ಟೈಟಲ್ ಅಂತಾ ಬರೆದ ಕೀ ಪ್ಯಾಡ ಮೋಬಾಯಿಲ್ ಅ:ಕಿ:೧೦೦/- ರೂ ದೊರೆತವು. ನಂತರ ಅವನಿಗೆ ಮಟಕಾ ಚೀಟಿ ಯಾರಿಗೆ ಒಯ್ದುಕೊಡುತ್ತೀ ಅಂತಾ ವಿಚಾರಿಸಿದಾಗ ಅವನು ರಾಜಶೇಖರ ತಂದೆ ಮಲ್ಲಿಕರ‍್ಜುನ ಉಮಾಶೆಟ್ಟಿ ಸಾ;ರೇವಣಸಿದ್ಧೇಶ್ವರ ಕಾಲೋನಿ ಕಲಬುರಗಿ ಇತನಿಗೆ ಕೊಡುವುದಾಗಿ ತಿಳಿಸಿದನು. ಆಗ ಕೇಸಿನ ಪುರಾವೆಗೋಸ್ಕರ ಒಂದು ದಸ್ತಿಯಲ್ಲಿ ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ, ಒಂದು ಬಾಲಪೆನ್ನು, ನಗದು ಹಣ, ಟೈಟಲ ಕೀ ಪ್ಯಾಡ ಮೋಬಾಯಿಲ್ಹಾಕಿ ಗಂಟು ಕಟ್ಟಿ ಅದಕ್ಕೆ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ನನ್ನ ವಶಕ್ಕೆ ತೆಗೆದುಕೊಂಡು ಜಪ್ತಪಡಿಸಿಕೊಂಡೆನು. ಮತ್ತು ಗಂಗಾಧರ ತಂದೆ ಕಾಶಿನಾಥ ಭುಯೆ ಸಾ:ಕೆ.ಇ.ಬಿ.ಖಜಾನೆ ಎದುರುಗಡೆ ರಾಜೀವಗಾಂಧಿ ನಗರ ಫೀಲ್ಟರ ಬೇಡ ಕಲಬುರಗಿ ಮತ್ತು ರಾಜಶೇಖರ ತಂದೆ ಮಲ್ಲಿಕಾರ್ಜುನ ಉಮಾಶೆಟ್ಟಿ ಸಾ:ರೇವಣಸಿದ್ಧೇಶ್ವರ ಕಾಲೋನಿ ಕಲಬುರಗಿ ಇವರುಗಳು ಮಟಕಾ ಜೂಜಾಟದಲ್ಲಿ ನಿರತರಾದ ಬಗ್ಗೆ ಖಚಿತಪಟ್ಟಿದ್ದರಿಂದ ಸಿಕ್ಕಿಬಿದ್ದ ಗಂಗಾಧರ ತಂದೆ ಕಾಶಿನಾಥ ಭುಯೆ ಸಾ:ಕೆ.ಇ.ಬಿ. ಖಜಾನೆ ಎದುರುಗಡೆ ರಾಜೀವಗಾಂಧಿ ನಗರ ಫೀಲ್ಟರ ಬೇಡ ಕಲಬುರಗಿ ಇತನಿಗೆ ನಾನು ಮತ್ತು ಅವರ ಈ ಮೇಲಿನ ಸಿಬ್ಬಂದಿಯವರು ವಶಕ್ಕೆ ತೆಗೆದುಕೊಂಡೇವು. ಸದರ ಜಪ್ತಿ ಪಂಚನಾಮೆ ಇಂದು ದಿನಾಂಕ: ೦೮/೦೩/೨೦೨೨ ರಂದು ಸಂಜೆ ೪.೪೫ ಗಂಟೆಯಿಂದ ಸಂಜೆ ೫.೪೫ ಗಂಟೆಯವರೆಗೆ ಸದರ ಸ್ಥಳದಲ್ಲಿ ಕುಳಿತು ಬರೆದು ಮುಗಿಸಲಾಯಿತು. ಮಟಕಾ ಜೂಜಾಟದಲ್ಲಿ ನಿರತನಾದ ಗಂಗಾಧರ ತಂದೆ ಕಾಶಿನಾಥ ಭುಯೆ ಸಾ:ಕೆ.ಇ.ಬಿ. ಖಜಾನೆ ಎದುರುಗಡೆ ರಾಜೀವಗಾಂಧಿ ನಗರ ಫೀಲ್ಟರ ಬೇಡ ಕಲಬುರಗಿ ಮತ್ತು ರಾಜಶೇಖರ ತಂದೆ ಮಲ್ಲಿಕರ‍್ಜುನ ಉಮಾಶೆಟ್ಟಿ ಸಾ:ರೇವಣಸಿದ್ಧೇಶ್ವರ ಕಾಲೋನಿ ಕಲಬುರಗಿ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಿಕ್ಕಿಬಿದ್ದ ಗಂಗಾಧರ ತಂದೆ ಕಾಶಿನಾಥ ಭುಯೆ ಸಾ:ಕೆ.ಇ.ಬಿ. ಖಜಾನೆ ಎದುರುಗಡೆ ರಾಜೀವಗಾಂಧಿ ನಗರ ಫೀಲ್ಟರ ಬೇಡ ಕಲಬುರಗಿ ಇತನಿಗೆ ಹಾಜರಪಡಿಸಿ ಆತನಿಂದ ಜಪ್ತಪಡಿಸಿಕೊಂಡ ಮುದ್ದೆ ಮಾಲು ಮತ್ತು ಅಸಲು ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಸರ್ಕಾರದ ಪರ ಫರ‍್ಯಾದಿ ಕೊಟ್ಟಿರುತ್ತೇನೆ ಅಂತಾ ಕೋಟ್ಟ ವರದಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 19-03-2022 02:52 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080