Feedback / Suggestions

ಎಂ.ಬಿ.ನಗರ ಪೊಲೀಸ್‌ ಠಾಣೆ:- ದಿನಾಂಕ-08-02-2023  ರಂದು ಫಿರ್ಯಾಧಿದಾರರು ಫಿರ್ಯಾದಿ ನಿಡಿದ ಸಾರಾಂಶವೆನೆಂದರೆ ಫಿರ್ಯಾಧಿದಾರರು ಮಾರ್ಕೆಟ್ ಹೊಗುವ ಸಲುವಾಗಿ ಆದರ್ಶನಗರದ ಬ್ರಹ್ಮಕುಮಾರಿ ಆಶ್ರಮದ ಹತ್ತಿರ ಆಟೋದಲ್ಲಿ ಹತ್ತಿ ಸ್ವಲ್ಪ ದೂರದಲ್ಲಿಯೇ ಒಬ್ಬ ಸುಮಾರು ೧೬-೧೭ ವರ್ಷದ ಹುಡುಗ ಬಂದು ಪಕ್ಕದಲ್ಲಿ ಕುಳಿತನು ನಂತರ ಆ ಹುಡಗ ಮುದ್ದಾಕಿಡ್ನಿ ಆಸ್ಪತ್ರೆಯ ಸಮೀಪ ಆಟೋದಿಂದ ಇಳಿಯುತ್ತಿರುವಾಗ ಏಕಾ-ಏಕಿ ಫಿರ್ಯಾಧಿದಾರರ ಕುತ್ತಿಗೆಯಲ್ಲಿದ್ದ 15 ಗ್ರಾಂ ಬಂಗಾರದ ಲಾಕಿಟ್‌ನ್ನು ಜಬರದಸ್ತಿಯಿಂದ ಕಿತ್ತುಕೊಂಡು ಹೊಗಿದ್ದು ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ನೀಡಿದ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ಆರೋಪಿತರಾದ ಮಲ್ಲಿಕಾರ್ಜುನ @ ದತ್ತು ತಂದೆ  ಹಣಮಂತ ಪಟ್ಟೇದಾರ ವಯ;೩೯ ವರ್ಷ ಜ್ಯಾತಿ;ಎಸ್.ಸಿ ಉ; ಆಟೋಚಾಲಕ ಸಾ; ಕುಸನೂರ ಇತನು  ಫಿರ್ಯಾದಿಯ ಗಂಡ ಮತ್ತು ಮೈದುನ ಅವರ ಸಂಸಾರ ಹಾಳು ಮಾಡಿರುತ್ತಾರೆ ಅಂತಾ ಭಾವಿಸಿ ಫಿರ್ಯಾದಿಯ ಗಂಡನಿಗೆ ಕೊಲೆ ಮಾಡುವ ದ್ವೇಷಸಾಧಿಸಿ   ದಿನಾಂಕ.08-02-2023 ರಂದು ರಾತ್ರಿ ೧೦-೨೫ ಪಿ.ಎಂ.ಕ್ಕೆ ನನ್ನ ಗಂಡನಿಗೆ ಚಾಕುದಿಂದ ಹೊಡೆದು ಕೊಲೆ ಮಾಡಿರುತ್ತಾರೆ ಎಂದು ಫಿರ್ಯಾದಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :-  ದಿನಾಂಕ:08/02/2023 ರಂದು ಜಿಲ್ಲಾ ಸರಕಾರಿ ಆಸ್ಪತ್ರಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀ ಅವಿನಾಶ ತಂದೆ ಶಂಕರ ಹಯ್ಯಾಳಕರ ವಯ:19 ವಷ್ ಉ:ಪಿಯುಸಿ 2 ನೇ ವರ್ಷದಲ್ಲಿ ವಿದ್ಯಾಭ್ಯಾಸ. ಜಾ: ಎಸ್.ಸಿ ಮಾದಿಗ ಸಾ:10 ನೇ ಕ್ರಾಸ್ ತಾರಪೈಲ ಕಲಬುರಗಿರವರು ಸರಕಾರಿ ಆಸ್ಪತ್ರೆಯಲ್ಲಿ ಲಿಖಿತವಾಗಿ ನೀಡಿದ ದೂರು ಅರ್ಜಿಯ  ಸಾರಾಂಶವೇನೆಂದರೆ ನಾನು ವಿದ್ಯಾಭ್ಯಾಸ ಮಾಡಿಕೊಂಡು ತಂದೆ ತಾಯಿಯೊಂದೆ ವಾಸವಾಗಿರುತ್ತೇನೆ. ಕಳೆದ 4 ದಿವಸಗಳ ಹಿಂದೆ ನಮಗು ಹಾಗೂ ನಮ್ಮ ಬಡಾವಣೆಯ ಥಾಮಸ್ ತಂದೆ ಜ್ಞಾನಮಿತ್ರಪ್ಪಾ ಶಿವನೂರ ಇವರಿಗು ಕ್ಷುಲ್ಲಕ ವಿಷಯದಲ್ಲಿ ತಂಟೆ ತಕರಾರು ಆಗಿದ್ದು ಅವಾಗಿನಿಂದ ಥಾಮಸ್ ಇತನು ನಮ್ಮೊಂದಿಗೆ ವೈಮನಸ್ಸು ಬೆಳಸಿಕೊಂಡು ಬಂದಿದ್ದು ಇರುತ್ತದೆ.ಹೀಗಿದ್ದು ನಿನ್ನೆ ದಿನಾಂಕ: 07/02/2023 ರಂದು ರಾತ್ರಿ 10:30 ಗಂಟೆ ಸುಮಾರಿಗೆ ನಾನು ಮೇಡಿಕಲ್ ಅಂಗಡಿಗೆ ಹೋಗುತ್ತಿರುವಾಗ ತಾರಫೈಲ್  13 ನೇ ಕ್ರಾಸ್ ಹತ್ತಿರ ಹೋಗುತ್ತಿದ್ದಂತೆ ಥಾಮಸ್ ಇತನು ತನ್ನೊಂದಿಗೆ, ಪ್ರಜ್ವಲ್ ತಂದೆ ಮಲ್ಲಿಕಾಜರ್ುನ್ ಜಿನಕೇರಿ, ಶಂಕರ ತಂದೆ ಸುಮಂತಪ್ಪಾ ಶಿವನೂರ, ಲಿಂಗಣ್ಣ ತಂದೆ ಸುಮಂತಪ್ಪ ಶಿವನೂರ, ನವೀನ ತಂದೆ ನಿರ್ಮಲ್ ಶಿವನೂರ, ಡ್ಯಾನಿಲ್ ತಂದೆ ಕಮಾಲಕರ್, ಪುಟ್ಟು @ಪೌಡರಾಜ ತಂದೆ ಪ್ರಕಾಶ ಶಿವನೂರ, ಮ್ಯಾಥೂ ತಂದೆ ಸ್ಯಾಮುಯಲ್ ಬೆಳಗುಂದಿ, ಜೇಮ್ಸ್ ತಂದೆ ಮ್ಯಾಥೀವ್ ಹಾಗು ಇತರರೊಂದಿಗೆ ಬಂದು ಥಾಮಸ್ ಇತನು ನನಗೆ ತಡೆದು ನಿಲ್ಲಿಸಿ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಅವಾಚ್ಯ ಶಬ್ದಗಳಿಂದ ಬೈಯುತ್ತ ಸೂಳೆ ಮಗನೆ ನೀನು ಕಳೆದ ನಾಲ್ಕು ದಿವಸಗಳ ಹಿಂದೆ ವಿನಾಃ ಕಾರಣ ನಮ್ಮೊಂದಿಗೆ ತಂಟೆ ತಕರಾರು ಮಾಡಿದ್ದೀಯಲ್ಲ ಈಗ ಬಾ ಮಗನ ಅನ್ನುತ್ತಾ ಕೈಯಿಂದ ನನ್ನ ಮುಖದ ಮೇಲೆ ಹೋಡಿದಿದ್ದು ಮತ್ತು ಮ್ಯಾಥೂ, ಶಂಕರ್,ಮತ್ತು ಲಿಂಗಣ್ಣ ಮೂರು ಜನರು ನನಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಅಲ್ಲದೆ ಮೂರು ಜನರು ಕೂಡಿ ಕೈಯಿಂದ  ನನ್ನ ಹೊಟ್ಟೆಗೆ ಬೆನ್ನಿಗೆ ಸೊಂಟದ ಮೇಲೆ ಹೊಡೆದಿದ್ದು ಇದರಿಂದ ಗುಪ್ತಗಾಯ ಅಗಿದ್ದು ಇರುತ್ತದೆ.ಆಗ ನಾನು ಚೀರಾಡುವುದನ್ನು ಕೇಳಿ ನಮ್ಮ ಗೆಳೆಯರಾದ ಪ್ರವೀಣ್ ತಂದೆ ದೊಡ್ಡ ಸೈಬಣ್ಣ ಮತ್ತು ರಂಗಪ್ಪ ತಂದೆ ಸಣ್ಣ ಸೈಬಣ್ಣ ಇವರುಗಳು ಜಗಳ ಬಿಡಿಸಲು ಬಂದಾಗ ಅವರಿಗೂ ಕೂಡ ನವೀನ, ಡ್ಯಾನಿಲ್, ಪುಟ್ಟು @ಪೌಡರಾಜ ಇವರುಗಳು ಕೂಡ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ. ಮತ್ತು ಥಾಮಸ್ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ರಂಗಪ್ಪ ಇತನಿಗೆ ಬಲಗೈಗೆ ಹೊಡೆದಿದ್ದು ಇದರಿಂದ ಗುಪ್ತ ಪೆಟ್ಟಾಗಿದ್ದು ಇರುತ್ತದೆ. ಆಗ ಅಲ್ಲೆ ಇದ್ದ ಪ್ರಜ್ವಲ್, ಜೇಮ್ಸ್ ಹಾಗೂ ಇತರರು ಕೂಡ ಇನ್ನು ಚೆನ್ನಾಗಿ ಹೊಡೆಯರಿ ಅಂತ ಪ್ರಚೋದನೆ ಮಾಡಿರುತ್ತಾರೆ. ನಂತರ ಎಲ್ಲರು ಕೂಡಿ ಅಲ್ಲಿಂದ ಹೋಗುವಾಗ ಇವತ್ತು ನಿಮಗೆ ಜೀವಂತ ಬಿಟ್ಟಿದ್ದೇವೆ, ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಅವರು ಹೋದ ನಂತರ ನಾನು ಪ್ರವೀಣ್ ಮತ್ತು ರಂಗಪ್ಪ ಮೂರು ಜನರು ಕೂಡಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿರುತ್ತೇವೆ.ಈ ಬಗ್ಗೆ ಮನೆಯಲ್ಲಿ ನಮ್ಮ ತಂದೆಯೊಂದಿಗೆ ವಿಚಾರಿಸಿ ಇಂದು ತಡವಾಗಿ ದೂರು ಅರ್ಜಿ ನೀಡಿದ್ದು ಇರುತ್ತದೆ. ಕಾರಣ ನಮಗೆ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅಂತ ನೀಡಿದ ದೂರು ಅರ್ಜಿಯನ್ನು ಆಸ್ಪತ್ರೆಯಲ್ಲಿ ಪಡೆದುಕೊಂಡು ಮರಳಿ ಠಾಣೆಗೆ ಸಾಯಂಕಾಲ 07:00 ಗಂಟೆಗೆ ಬಂದು ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರಾಘವೇಂದ್ರ ನಗರ ಪೊಲೀಸ ಠಾಣೆ :- ದಿನಾಂಕ: 08.02.2023 ರಂದು 9.00 ಎ.ಎಮ್ ಕ್ಕೆ ಶ್ರೀ ಮುಜಾಹಿದ ತಂದೆ ಅಬ್ದುಲ್ ಸತ್ತಾರ ವಯ-25 ವರ್ಷ ಜಾ|| ಮುಸ್ಲಿಂ ಉ|| ಅಟೋ ಚಾಲಕ ಸಾ|| ಮಹ್ಮದ ಹುಸೇನ ಫಂಕ್ಷನ ಹಾಲ್ ಹಿಂದುಗಡೆ ಮದಿನಾ ಕಾಲೋನಿ ಕಲಬುರಗಿ ರವರು ಠಾಣೆಗೆ ಹಾಜರಾಜಿ ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು ನೀಡಿದ್ದು ಸಾರಾಂಶವೆನೆಂದರೆ ನಾನು ಅಟೋ ಚಲಾಯಿಸಿಕೊಂಡು ಮದಿನಾ ಕಾಲೋನಿಯಲ್ಲಿ ವಾಸವಾಗಿರುತ್ತೇನೆ. ನಾನು ಸುಮಾರು ಶ್ರೀ ಸಂಜಯಕುಮಾರ ತಂದೆ ರಾಮಣ್ಣ ಸಾ; ಇ.ಡಬ್ಲ್ಯು.ಎಸ್. 32 ಕೆ.ಹೆಚ.ಬಿ. ಕಾಲೋನಿ ಹಳೆ ಜೇವಗರ್ಿ ರಸ್ತೆ ಕಲಬುರಗಿ ರವರ ಬಜಾಜ ಅಟೋ ನಂ ಕೆಎ-32 ಎ-7830 ನೇದ್ದನ್ನು ನಾನು ಒಂದು ತಿಂಗಳಿಂದ ಅಟೋ ಬಾಡಿಗೆಯಿಂದ ತೆಗೆದುಕೊಂಡು ನಡೆಸಿಕೊಂಡು ಬಂದಿರುತ್ತೇನೆ. ನಾನು ದಿನಾಲು ನಮ್ಮ ಮನೆಯ ಮುಂದೆ ನಿಲ್ಲಿಸುತ್ತಾ ಬಂದಿರುತ್ತೇನೆ.   ಹೀಗೆ ಇರುವಾಗ ದಿನಾಂಕಃ 07/02/2023 ರಂದು ನಾನು ರಾತ್ರಿ 9.00 ಗಂಟೆ ಸುಮಾರಿಗೆ ನಾನು ಅಟೋ ನಂ ಕೆಎ-32 ಎ-7830 ನೇದ್ದನ್ನು ನನ್ನ ಮನೆ ಮುಂದೆ ನಿಲ್ಲಿಸಿದ್ದು ನಂತರ ಬೆಳಿಗ್ಗೆ 7-30 ಗಂಟೆ ಸುಮಾರಿಗೆ ನಾನು ಅಟೋ ತೆಗೆದುಕೊಂಡು ಹೋಗಬೇಕು ಅಂತ ಮನೆಯ ಹೊರಗೆ ಬಂದು ನೋಡಲಾಗಿ ನಮ್ಮ ಮನೆ ಎದುರುಗಡೆ ನಿಲ್ಲಿಸಿರುವ ಬಜಾಜ ಅಟೋ ನಂ ಕೆಎ-32 ಎ-7830 ಅ||ಕಿ|| 50000/- ರೂ ನೇದ್ದು ಇರಲಿಲ್ಲಾ ಯಾರೋ ಕಳ್ಳರು ಅಟೋವನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ

ಸದರಿ ಅಟೋ ವಿವರ ಈ ಕೆಳಗಿನಂತೆ ಇರುತ್ತದೆ.

1)            ಅಟೋ ವಿಧಃ         :ಬಜಾಜ ಅಟೋ ಥ್ರೀ ವ್ಹೀಲರ್

2)            ಮೋಟಾರ ಸೈಕಲ್ ನಂ; ನಂ ಕೆಎ-32 ಎ-7830   

3)            ಚಸ್ಸಿ ನಂ                      ; MD2AA24ZZPWH48233

4)            ಇಂಜಿನ ನಂ                 ; AEMBPH51790,

5)            ಮಾಡಲ್ ನಂ              : 2007

6)            ಬಣ್ಣ              : ಕಪ್ಪು ಬಣ್ಣ

7)            ಅ.ಕಿ.                            : 50000/-ರೂ

     ಈ ಮೇಲ್ಕಾಣಿಸಿದ ಅಟೋ ನಂ ಕೆಎ-32 ಎ-7830 ನೇದ್ದನ್ನು ಕಳ್ಳತನವಾಗಿದ್ದು ಮಾನ್ಯರವರು ಕಳೆದು ಹೋದ ಅಟೋ ನೇದ್ದನ್ನು ಪತ್ತೆಮಾಡಿ ಕೊಡಬೇಕೆಂದು ವಿನಂತಿ ಇರುತ್ತದೆ.  ಅಂತ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 08/02/2023 ರಂದು ಮದ್ಯಾಹ್ನ 01:00  ಗಂಟೆಗೆ  ಶ್ರೀ. ಗೋರಖನಾಥ ತಂದೆ ಶಂಕರ ಜಾಧವ ಸಾ; ಸಣ್ಣೂರ ತಾ;ಜಿ; ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ್ ಮಾಡಿದ ಲಿಖಿತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸಾರಂಶವೆನೆಂದರೆ, ದಿನಾಂಕ-06/02/2023 ರಂದು ಮದ್ಯಾಹ್ನ 1:00 ಗಂಟೆಗೆ ಫಿರ್ಯಾಧಿ ತನ್ನ ತಂದೆಯವರನ್ನು ಕರೆದುಕೊಂಡು ಮೋ.ಸೈಕಲ ನಂ KA-32 ES 6628 ನೇದ್ದರ ಮೇಲೆ ಸಣ್ಣೂರ ಕ್ರಾಸ ಮೇಲೆ ಹೋಗುವಾಗ ಸಣ್ಣೂರ ಶಾಲೆಯ ಹತ್ತಿರ ರೋಡಿನ ಮೇಲೆ ಒಂದು ಮೋ.ಸೈಕಲ ನಂ KA32 EE 5936 ನೇದ್ದರ ಸವಾರ ಸಂಜೀವ ತಂದೆ ಮನ್ನು ರಾಠೋಡ ಈತನು  ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾಧಿ ಮೋಟಾರ ಸೈಕಲಗೆ ಅಪಾಘತ ಪಡಿಸಿದ್ದರಿಂದ ಫಿರ್ಯಾಧಿ ತಂದೆ ಶಂಕರ ಜಾಧವ ಈತನು ಮೋಟಾರ ಸೈಕಲ ಮೇಲಿಂದ ಪುಟ್ಟಿದು ಬಿದಿದ್ದರಿಂದ ಆತನ ಕಾಲಿಗೆ ಭಾರಿ ಪ್ರಮಾಣದ ಗಾಯವಾಗಿರುತ್ತದೆ, ಮೋಟಾರ ಸೈಕಲ ಸವಾರ ಸಂಜೀವ ರಾಠೋಡ  ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಂತಾ ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಸಂಚಾರಿ ಪೊಲೀಸ ಠಾಣೆ -2 :-   ದಿನಾಂಕ 08/02/2023 ರಂದು ರಾತ್ರಿ 8:15 ಗಂಟೆಗೆ ಕಲಬುರಗಿ ಸರಕಾರಿ ಆಸ್ಪತ್ರೆಯಿಂದ ಓಪಿ ಠಾಣೆಯ ಪಿಸಿ ರವರು ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಕಲಬುರಗಿ ಕಲ್ಯಾಣ ಮಂಟಪದ ಹತ್ತೀರ ರಿಂಗರೋಡ ರಸ್ತೆಯ ಮೇಲೆ ರಸ್ತೆ ಅಪಘಾತವಾದ ಬಗ್ಗೆ ಆರ್.ಟಿ.ಎ ಎಮ್.ಎಲ್.ಸಿ ವಸೂಲಾಗಿರುತ್ತದೆಂದು ಮಾಹಿತಿ ತಿಳಿಸಿದ್ದಕ್ಕೆ ನಾನು ಕೂಡಲೆ ಸರಕಾರಿ ಆಸ್ಪತ್ರೆಗೆ ಹೋಗಿ  ಆರ್.ಟಿ.ಎ ಎಮ್.ಎಲ್.ಸಿ ಪಡೆದುಕೊಂಡು ಪರಿಶೀಲಿಸಲು ಅಪರಿಚತ ಎಮ್.ಎಲ್.ಸಿ ಇದ್ದು, ಈ ಆರ್.ಟಿ.ಎ ಎಮ್.ಎಲ್.ಸಿ ವ್ಯಕ್ತಿಗೆ ವಿಚಾರಿಸಲು ಆತನು ಮಾತನಾಡದ ಪರಸ್ಧಿತಿಯಲ್ಲಿ ಇರದಕ್ಕೆ ಆತನ ಜೊತೆಯಲ್ಲಿರುವ ಆತನ ತಮ್ಮ ಮಹಮ್ಮದ ಜಹೀರ ತಂದೆ ಖಾಜಾಮೈನೊದ್ದೀನ ಈತನಿಗೆ ವಿಚಾರಿಸಲು ಈತನು ರಾತ್ರಿ 8:45 ಗಂಟೆಯಿಂದ 9:30 ಗಂಟೆ ವರೆಗೆ ಹೇಳಿಕೆ ನೀಡಿದರ ಸಾರಂಶವೆನೆಂದರೆ, ತನ್ನ ಅಣ್ಣ ಮಹಮ್ಮದ ಕುತ್ಬೊದ್ದೀನ ವಯಃ 38 ವರ್ಷದವನಿದ್ದು, ಈತನು ಐಚರ ಲಾರಿಯನ್ನು ನಡೆಯಿಸಿಕೊಂಡಿದ್ದು, ಇಂದು ದಿನಾಂಕ 08/02/2023 ರಂದು ಈತನು ಲಾರಿ ತಂಗುದಾಣದಿಂದ ತಮ್ಮ ಪರಿಚಯದವರ ಮೋಟರ ಸೈಕಲ ನಂ. ಕೆಎ 32 ಹೆಚ್.ಎ 1274 ನೇದ್ದರ ಮೇಲೆ ಆಳಂದ ಚಕ್ ಪೋಸ್ಟ ಕಡೆಗೆ ಹೋಗುವಾಗ ರಾತ್ರಿ 7:15 ಗಂಟೆ ಸುಮಾರಿಗೆ ಹಿಂದಿನ ರಿಂಗರೋಡಿನಿಂದ ಒಂದು ಬಲ್ಕರ ಲಾರಿ ನಂ. ಎಮ್.ಹೆಚ್ 12 ಟಿ.ವಿ 7376 ನೇದ್ದರ ಚಾಲಕನು ಭಾರಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ತಮ್ಮನಿಗೆ ಡಿಕ್ಕಿ ಹೊಡೆದ ಪರಿಣಾಮ ಆತನ ಕಾಲುಗಳೆರಡು ಲಾರಿಯ ಟೈರಿಗೆ ಸಿಲುಕಿದ್ದರಿಂದ ಎರಡು ಕಾಲುಗಳು ಭಾರಿ ಪ್ರಮಾಣದ ಗಾಯಗಳಾಗಿ ಮೌಂಸಖಂಡ ಹೊರಬಂದಿದ್ದು, ಅಲ್ಲದೆ ಇತರೆ ಕಡೆಗಳಲ್ಲಿ ಗಾಯಗಳಾಗಿದ್ದು, ಘಟನೆಯನ್ನು ಶಾಂತು ತಂದೆ ನಾಗಪ್ಪಾ ಹಾಗು ಮೈನೊದ್ದೀನ ಇವರು ನೋಡಿದ್ದು, ಲಾರಿ ಚಾಲಕನು ಓಡಿ ಹೋಗಿರುತ್ತಾನೆ. ಗಾಯಾಳುವಿಗೆ ನೋಡಿದವರು ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ಲಾರಿ ಚಾಲಕನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಫಿರ್ಯಾದಿ ಹೇಳಿಕೆ ಮೇಲಿಂದ ಮರಳಿ ಠಾಣೆಗೆ 9:45 ಗಂಟೆಗೆ ಬಂದು ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ 08-02-2023  ರಂದು ಬೆಳಿಗ್ಗೆ ೧೦-೦.೦ ಗಂಟೆಗೆ ಫಿರ್ಯಾದಿ ತಮ್ಮ ಹೋಲದಲ್ಲಿ ಹುಂಚಿನ ಕಾಯಿ ಬಡಿಯಲು ಹೋದಾಗ ಆಪಾದಿತರು ಫಿರ್ಯಾದಿಯ ಹೋಲದಲ್ಲಿ ಗುಂಪು ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಹೋಡೆ ಬಡೆ ಮಾಡಿ ಜೀವ ಬೇದರಿಕೆ ಹಾಕಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :-  ದಿನಾಂಕ 08-02-2023  ರಂದು ಬೆಳಿಗ್ಗೆ ೧೦-೦.೦ ಗಂಟೆಗೆ ಫಿರ್ಯಾದಿ ಹಾಗೂ ಫಿರ್ಯಾದಿಯ ಮಗ ಹೋಲದಲ್ಲಿ ಇದ್ದಾಗ ಆಪಾದಿತರು ಹೊಲದಲ್ಲಿ ಹುಣಸೆಕಾಯಿ ಬಿಡಿಸುವಾಗ ಫಿರ್ಯಾದಿ ಯ ಮಗ ಹುಣಸೆ ಗಿಡದ ಟೋಂಗ್ಯಾ ನಮ್ಮ ಹೋಲದಲ್ಲಿ ಬಂದಿವೆ ಕಡೆದುಕೊಳ್ಳಿರಿ ಅಂತಾ ಅಂದಾಗ ಆಪಾದಿತರು ಫಿರ್ಯಾದಿಗೆ ಕೈ ಹಿಡಿದು ಎಳೆದಾಡಿ ಫಿರ್ಯಾದಿಯ ಮಗನಿಗೆ ಕಟ್ಟಿಗೆಯಿಂದ ಹೋಡೆದು ಜೀವ ಬೇದರಿಕೆ ಹಾಕಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಎಂ.ಬಿ.ನಗರ ಪೊಲೀಸ ಠಾಣೆ :- ಸದರಿ ಫಿರ್ಯಾದಿದಾರರು ತಮ್ಮ ವ್ಯಾಪಾರಕ್ಕಾಗಿ ಒಂದು ಕಪ್ಪು ಬಣ್ಣದ ಹೊಂಡಾ ಅವೇಟರ ಮೋಟರ ಸೈಕಲ ನಂ ಕೆಎ ೩೨ ಈಎಸ್ ೬೭೪೭ ನೇದ್ದನ್ನು ತೆಗೆದುಕೊಂಡಿದ್ದು ದಿನಾಂಕ ೦೫-೧೨-೨೦೨೩ ರಂದು ತಮ್ಮ ಸಂಬಂದಿಕರ ಮದುವೆಯ ವಲೀಮಾ ಇದ್ದ ಪ್ರಯುಕ್ತ ಕೆಎನ್‌ಝಡ್ ಫಂಕ್ಷನ ಹಾಲ್  ಎದುರುಗಡೆ ನಿಲ್ಲಿಸಿ ಕಾರ್ಯಕ್ರಮಕ್ಕೆ ಹೋಗಿ ಬರುವಷ್ಟರಲ್ಲಿ ಯಾರೋ ಕಳ್ಳರು ತಮ್ಮ ಮೋಟರ ಸೈಕಲ ತೆಗೆದು ಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ -1 :-    ದಿನಾಂಕ 08-02-2023  ರಂದು ೯:೦೦ ಪಿ.ಎಂ ಕ್ಕೆ ಯುನೈಟೇಡ್ ಆಸ್ಪತ್ರೆಯಿಂದ ರವಿಕುಮಾರ ತಂದೆ ಜಕಣಾಚಾರಿ ಇವರ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಯುನೈಟೇಡ್ ಆಸ್ಪತ್ರೆಗೆ ಭೇಟಿ ನೀಡಿ ಎಂ.ಎಲ್.ಸಿ ಪತ್ರ ವಸೂಲು ಮಾಡಿಕೊಂಡು ಗಾಯಾಳು ರವಿಕುಮಾರನಿಗೆ ನೋಡಲು ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಅಂತ ವೈದ್ಯರು ತಿಳಿಸಿದ ಮೇರೆಗೆ ನಾನು ಅಲ್ಲಿಯೇ ಇದ್ದ ಆತನ ತಂದೆಯಾದ ಜಕಣಾಚಾರಿ ರವರನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡ ಸಾರಾಂಶವೇನೆಂದರೆ ಫಿರ್ಯಾದಿ ಇವರು ಮನೆಯಲ್ಲಿ ಇರುವಾಗ ಅವರ ಮಗನಾದ ರವಿಕುಮಾರ ಇತನು ವೆಂಕಟೇಶ ಪ್ಯಾಲೇಸ್ ಬಾರ್ ಮತ್ತು ರೆಸ್ಟೂರಂಟ್ ನಲ್ಲಿ ಕೆಲಸ ಮಾಡುವ ಕುರಿತು ಸಾಯಾಂಕಾಲ ಮನೆಯಿಂದ ಮೋಟಾರ್ ಸೈಕಲ್ ನಂ-ಕೆ.ಎ-೩೨/ಇ.ವಿ-೦೪೬೫ ನೇದ್ದರ ಮೇಲೆ ಹೋಗುವಾಗ ಸಾಯಾಂಕಾಲ ೬:೫೦ ಗಂಟೆ ಸುಮಾರಿಗೆ ಫರಹತಾಬಾದ್ ಸೀಮೆಯ ಕೆರಂಗಳ ಹೋಲದ ಹತ್ತಿರ ರಸ್ತೆಯ ಮೇಲೆ  ಲಾರಿ ನಂಬರ ಕೆ.ಎ-೩೨/೯೭೦೫ ನೇದ್ದರ ಚಾಲಕನು ಕಲಬುರಗಿ ಕಡೆಯಿಂದ ಜೇವರ್ಗಿ ಕಡೆಗೆ ಹೋಗುವ ಕುರಿತು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಯಾವುದೋ ಒಂದು ವಾಹನಕ್ಕೆ ಓವರ್ ಟೇಕ್ ಮಾಡಲು ಹೋಗಿ ಪರ‍್ಯಾದಿ ಮಗನ ಮೋಟಾರ್ ಸೈಕಲ್‌ನ ಬಲಗಡೆಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಪರ‍್ಯಾದಿ ಮಗ ರವಿಕುಮಾರನಿಗೆ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿಳಿಸಿ ಭಾರಿಗಾಯಗೊಳಿಸಿ ತನ್ನ ಲಾರಿ ಸಮೇತ ಒಡಿಹೋಗಿದ್ದು ಕಾರಣ ಸದರಿ ಲಾರಿ ನಂಬರ ಕೆ.ಎ-೩೨/೯೭೦೫ ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 09-02-2023 12:31 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080