ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-2 :-  ದಿನಾಂಕ 08/01/2023 ರಂದು 10:00 ಎ.ಎಮ್ ಕ್ಕೆ ಯುನೈಟೆಡ ಆಸ್ಪತ್ರೆಯಿಂದ ಶಿವಾನಂದ ಹಾಗು ಶಿವಕುಮಾರ ತಂದೆ ಬಸವರಾಜ ಎಂಬುವರ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಯುನೈಟೆಡ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶಿವಕುಮಾರ ಈತನಿಗೆ ನೋಡಲು ಮಾತನಾಡುವ ಸ್ಧಿತಿಯಲ್ಲಿ ಇರಲಿಲ್ಲಾ, ಅಲ್ಲಿಯೇ ಇದ್ದ ಸ್ನೇಹಿತ ಶಿವಾನಂದ ಇವರಿಗೆ ನೋಡಿ ವಿಚಾರಿಸಿ ಹೇಳಿಕೆ ಪಡೆದುಕೊಂಡ ಸಾರಂಶವೆನೆಂದರೆ, ದಿನಾಂಕ:07/01/2023 ರಂದು ಫಿರ್ಯಾದಿ ಹಾಗು ಅವರ ಸ್ನೇಹಿತನಾದ ಶಿವಕುಮಾರ ರಟಕಲ ಇಬ್ಬರು ಮೋಟರ ಸೈಕಲ ನಂ. ಕೆಎ 32 ಎಕ್ಸ 4110 ನೇದ್ದರ ಮೇಲೆ ಫಿರ್ಯಾದಿ ಹೊಲಕ್ಕೆ ಹೋಗಿ ಅಲ್ಲಿಂದ ಶಿವಕುಮಾರ ರಟಕಲ ಇವರ ಮಾವನ ಹೊಲಕ್ಕೆ ಹೋಗುವಾಗ ಶಿವಕುಮಾರ ಈತನು ಮೋಟರ ಸೈಕಲ ನಿಧಾನವಾಗಿ ರಸ್ತೆ ಬದಿಯಿಂದ ಮೋಟರ ಸೈಕಲ ಚಲಾಯಿಸಿಕೊಂಡು ಹೋಗುವಾಗ ಗೌತಮ ಶಾಲೆ ಹತ್ತೀರ ಸಾಯಂಕಾಲ 7:00 ಗಂಟೆ ಸುಮಾರಿಗೆ ಮೋಟರ ಸೈಕಲ ನಂ. ಕೆಎ 56 ಕೆ 3649 ನೇದ್ದರ ಸವಾರನು ಜಮಗಾ ಪಾಟಿ ಕಡೆಯಿಂದ ಕಲಬುರಗಿ ಕಡೆ ಬರುವ ಕುರಿತು ತನ್ನ ಮೋಟರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಎಡಬಲ ಕಟ್ ಹೊಡೆಯುತ್ತಾ ಫೀರ್ಯಾದಿ ಮೋಟರ ಸೈಕಲ ರಸ್ತೆ ಬದಿಯಿಂದ ಬಂದು ಫಿರ್ಯಾದಿ ಕುಳಿತು ಹೊರಟ ಮೋಟರ ಸೈಕಲಗೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಹಾಗು ಶಿವಕುಮಾರ ರಟಕಲ ಇವರಿಗೆ ಭಾರಿಗಾಯಗೊಳಸಿ ತಾನು ಕೂಡಾ ಗಾಯಗೊಂಡ ಮೋಟರ ಸೈಕಲ ನಂ. ಕೆಎ 56 ಕೆ 3649 ನೇದ್ದರ ಸವಾರನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 24/12/2022 ರಂದು ಬೆಳಗ್ಗೆ 6:20 ಪಿ.ಎಂ ಸುಮಾರಿಗೆ ಸದರಿ ಫಿರ್ಯಾದಿದಾರರು ಮರಗಮ್ಮಾ ಗುಡಿ ಹತ್ತಿರ ರಾಮ ಮಂದಿರ ಸರ್ಕಲ ಹತ್ತಿರ ನಿಲ್ಲಿಸಿದ ಮೋಟಾರ ಸೈಕಲ್ ನಂ.ಕೆ.ಎ.32, ಇಎಂ.7284 ನೆದ್ದನ್ನು ಅ.ಕಿ 30,000/- ನೇದ್ದು ಹಚ್ಚಿದ್ದು ನಂತರ ಬಂದು ನೋಡಲು ಯಾರೋ ಕಳ್ಳರು ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಲು ವಿನಂತಿ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 08/01/2023 ರಂದು ಮಧ್ಯಾಹ್ನ 1:30 ಪಿ.ಎಮ್ ಸುಮಾರಿ ಸದರಿ ಸ.ತ ಫಿರ್ಯಾದಿದಾರರು ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಸದರಿ ಆರೋಪಿಯು ಕಲಬುರಗಿ ನಗರ ನೃಪತುಂಗಾ ಕಾಲೋನಿ ಕಮಾನ ಹತ್ತಿರ ಹೋಗಿ ಬರುವ ಸಾರ್ವಜನಿಕರಿಗೆ ಹೆದರಿಸಿ ತನಗೆ ಹಣ ಕೊಡುವಂತೆ ಗುಂಡಾ ಪ್ರವೃತ್ತಿಯಲ್ಲಿ ತೊಡಗಿ ತೊಂದರೆ ಕೊಡುತ್ತಿರುವದನ್ನು ನೋಡಿ ಆತನಿಗೆ ನಾವು ಹಿಡಿದು ವಶಕ್ಕೆ ಪಡೆದು ಮುಂಜಾಗ್ರತಾ ಕ್ರಮ ಜರುಗಿಸಲಾಗಿದೆ. ಎಂದು ದೂರು ನೀಡಿದ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌-ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ: 08/01/2023 ರಂದು ಸರಕಾತಿ ತರಫೆ ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೇನೆಂದರೆ ಸದರಿಯವರು ಏರಿಯಾದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ವಿಶ್ವರಾಧ್ಯ ದೇವಸ್ಥಾನದ ಹತ್ತಿರ ಕೆಲವು ಜನರು ಅಂದರ್ ಬಾಹರ್ ಎಂಬ ದೈವಾಲೀಲೆಯ ಆಟವನ್ನು ಆಡುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ದೂರದಲ್ಲಿ ನಿಂತು ಖಚಿತ ಪಡಿಸಿಕೊಂಡು ದಾಳಿ  ಮಾಡಲಾಗಿ  ಸದರಿ ಆರೋಪಿತರ ಮತ್ತು ಮುದ್ದೆ ಮಾಲನ್ನು ವಶಕ್ಕೆ ಪಡೆದು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌-ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ: 08/01/2023 ರಂದು ಸರಕಾರಿ ತರ್ಪೇ ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೇನೆಂದರೆ ಸದರಿಯವರು ಏರಿಯಾದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಅಲ್ ಖಮರ್ ಫಂಕ್ಷನ ಹಾಲ್ ಹತ್ತಿರ ಕೆಲವು ಜನರು ಅಂದರ್ ಬಾಹರ್ ಎಂಬ ದೈವಾಲೀಲೆಯ ಆಟವನ್ನು ಆಡುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ದೂರದಲ್ಲಿ ನಿಂತು ಖಚಿತ ಪಡಿಸಿಕೊಂಡು ದಾಳಿ  ಮಾಡಲಾಗಿ  ಸದರಿ ಆರೋಪಿತರ ಮತ್ತು ಮುದ್ದೆ ಮಾಲನ್ನು ವಶಕ್ಕೆ ಪಡೆದು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ದಿನಾಂಕ 08-01-2023  ರಂದು ಪಿರ್ಯಾದಿದಾರರು ನಿಡಿದ  ಫಿರ್ಯಾದಿ ಸಾರಾಂಶವೇನೆಂದರೆ,  ಫಿರ್ಯಾಧಿದಾರರು ತಮ್ಮ ಹೆಸರಿನಲ್ಲಿರುವ ಬಿಳಿ ಬಣ್ಣದ ಹೊಂಡಾ ಅವೆಟರ್ ಮೊ.ಸೈಕಲ್ ನಂ ಕೆಎ-೩೨ ಈ.ಎನ್-೩೪೮೨ ಅ.ಕಿ ೩೦,೦೦೦/- ನೇದ್ದನ್ನು ದಿನಾಂಕ ೧೪/೧೧/೨೦೨೨ ರಂದು ರಾತ್ರಿ ೦೮:೩೦ರ ಸುಮಾರಿಗೆ ನಿಲ್ಲಿಸಿದ್ದು ಮರುದಿನ ಬೆಳಿಗ್ಗೆ ೦೫:೩೦ರ ಸುಮಾರಿಗೆ ಎದ್ದು ನೊಡುವಷ್ಟರಲ್ಲಿ  ಮನೆಯಮುಂದೆ ಸಿಲ್ಲಿಸಿದ ಮೊ.ಸೈಕಲ್ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡ ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ದಿನಾಂಕ 08-01-2023  ಪಿರ್ಯಾದಿದಾರರು ನಿಡಿದ  ಫಿರ್ಯಾದಿ ಸಾರಾಂಶವೇನೆಂದರೆ,  ಆಪಾಧಿತನಾದ ಬಸವರಾಜ ತಂ/ ಗಣಪತ ರಾವ್ ಮಾಲಗತ್ತಿ ಇವರು ತನ್ನ ಜಮೀನು ಸರ್ವೆ ನಂ ೧೮೫/೨ ವಿಸ್ತೀರ್ಣ 4 ಎ 33 ಗು ಜಮೀನು ಮಾರುವುದಿದೆ ಎಂದು ಫಿರ್ಯಾಧಿ ಇಂದ ಮುಂಗಡವಾಗಿ ೨೦,೦೦,೦೦೦/- ರೂ ಪಡೆದುಕೊಂಡು ಉಳಿದ ೧೦,೦೦,೦೦೦/- ರೂ ನಂತರ ಕೊಡಬೇಕು ಅಂತಾ ಹೇಳಿ ಸದರಿ ಜಮೀನನ್ನು ಇನ್ನೊಬ್ಬರಿಗೆ ಮಾರಾಟ ಮಾಡಿ ಫಿರ್ಯಾಧಿ ಕೊಟ್ಟ ಹಣ ವಾಪಸ್ ಕೊಡದೆ ಜಮೀನು ಕೂಡಾ ಕೊಡದೆ ಹಣ ಕೊಡು ಎಂದರೆ ಸತಾಯಿಸುತ್ತಿರುತ್ತಾನೆ ಮೋಸದಿಂದ ಹಣ ಪಡೆದ ಆರೋಪಿತರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 09-01-2023 12:16 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080