ಅಭಿಪ್ರಾಯ / ಸಲಹೆಗಳು

ರಾಘವೇಂದ್ರ ನಗರ ಪೊಲೀಸ ಠಾಣೆ :- ದಿನಾಂಕ:07.12.2022 ರಂದು ಸಾಯಂಕಾಲ 6-00 ಗಂಟೆಗೆ ಶ್ರೀ ಹಣಮಂತ ಕಟ್ಟಿ ಎ.ಎಸ್.ಐ ಸಾಹೇಬರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಠಾಣೆಗೆ ಹಾಜರಾಗಿ ಒಬ್ಬ ಮಟಕಾ ಜೂಜಾಟ ನಿರತ ವ್ಯಕ್ತಿ, ಮುದ್ದೆಮಾಲು. ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನಾ ಪತ್ರ ನೀಡಿದ್ದರ ಸಾರಾಂಶವೆನೆಂದರೆ ನಾನು ಇಂದು ದಿನಾಂಕ:07.12.2022 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರಾದ ಶ್ರೀ ಉಮೇಶ ಸಿಪಿಸಿ-111, ಶ್ರೀ ರಮೇಶ ಸಿಪಿಸಿ-445 ರವರನ್ನು ಸಂಗಡ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಿರುವಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ಸಂಗಮೇಶ್ವರ ಕಾಲೋನಿಯ ಆನಂದ ಹೋಟೇಲ ಕ್ರಾಸ  ಹತ್ತಿರ  ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವ ಜನರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುತ್ತಿದ್ದಾನೆಅಂತ ಖಚಿತ ಬಾತ್ಮಿ ಬಂದಿರುತ್ತದೆ ಅಂತಾ ತಿಳಿಸಿರುವದರಿಂದ ಸದರಿ ಮಾಹಿತಿಯನ್ನು ಮಾನ್ಯ ಮೇಲಾಧಿಕಾರಿಯವರಿಗೆ ತಿಳಿಸಿ ಮಾನ್ಯ ಮೇಲಾಧಿಕಾರಿಯವರ ಮಾರ್ಗದರ್ಶನದಂತೆ ಖಚಿತವಾದ ಬಾತ್ಮಿಯಂತೆ ಸದರಿಯವರಮೇಲೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಇಬ್ಬರು ಪಂಚರನ್ನು ಶ್ರೀ ರಮೇಶ ಸಿಪಿಸಿ-445 ರವರ ಮುಖಾಂತರ ಬರಮಾಡಿಕೊಂಡು ಅವರಿಗೆ ತಿಳಿ ಹೇಳಿ ನಂತರ ಪಂಚರು ಮತ್ತು ನಾವು ಸಿಬ್ಬಂದಿಯವರು ನಮ್ಮ ನಮ್ಮ ಮೋಟಾರ ಸೈಕಲ್ ಮೇಲೆ ಸಾಯಂಕಾಲ್ 4-15 ಗಂಟೆಗೆ ಹೊರಟು 4-30 ಗಂಟೆಗೆ ಸ್ಥಳಕ್ಕೆ ತಲುಪಿ ಮರೆಯಾಗಿ ನಿಂತುಕೊಂಡು ನೋಡಲಾಗಿ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಕುಳಿತು ಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಅವರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೂಡುತ್ತಿರುವದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಪಂಚರ ಸಮಕ್ಷಮ ಸದರಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು, ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನಿಗೆ ಸಿಬ್ಬಂದಿಯವರ ಸಹಾಯದಿಂದ ವ್ಯಕ್ತಿಗೆ ಹಿಡಿದಿದ್ದು ಅವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಕರುಣಾನಂದ ತಂದೆ ಪ್ರಭು ಸಂಗೋಳಗಿ ವಯ-37 ವರ್ಷ ಜಾ||ಎಸ.ಸಿ ಉ||ಆಟೋ ಚಾಲಕ ಸಾ||ಬುದ್ದ ನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋದನೆ ಮಾಡಲು ಅವನ ಹತ್ತಿರ ನಗದು ಹಣ 2890 /-ರೂ ಸಿಕ್ಕಿದ್ದು ಮತ್ತು ಒಂದು ಬಾಲ ಪೆನ ಅಃಕಿಃ 00, ಒಂದು ಮಟಕಾ ಚೀಟಿ ಅಕಿ. 00/-ದೊರೆತಿದ್ದು, ಸದರಿ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ 2890/- ರೂಗಳು, ಬೆಲೆ ಬಾಳುವದನ್ನು ಸದರಿಯವನಿಂದ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿಕೊಂಡು ಮುಂದಿನ ಪುರಾವೆಗಾಗಿ ಸದರಿ ವ್ಯಕ್ತಿಯನ್ನು ನನ್ನ ತಾಬಾಕ್ಕೆ ತೆಗೆದುಕೊಂಡು ಸಾಯಂಕಾಲ 4-45 ಗಂಟೆಯಿಂದ 5-45 ಗಂಟೆಯವರೆಗೆ ಸ್ಥಳದಲ್ಲಿ ಕುಳಿತು ಜಪ್ತಿ ಪಂಚನಾಮೆಯನ್ನು ಕೈಕೊಂಡು ಜಪ್ತಿ ಮಾಡಿಕೊಂಡ ಮುದ್ದೆ ಮಾಲು ಮತ್ತು ಆರೋಪಿತನೊಂದಿಗೆ ಮರಳಿ 6-00 ಪಿ.ಎಂ ಕ್ಕೆ ಠಾಣೆಗೆ ಬಂದು ಸದರಿಯವನ ವಿರುಧ್ದ ಕಲಂ:78(3) ಕೆ.ಪಿ.ಆ್ಯಕ್ಟ ಅಡಿಯಲ್ಲಿ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಿ.ಇ.ಎನ್‌. ಪೊಲೀಸ್‌ ಠಾಣೆ :- ದಿನಾಂಕ: 07-12-2022  ರಂದು ೧೨:೦೦ ಗಂಟೆಗೆ ಫಿರ್ಯಾಧಿ ಶ್ರೀ  ಡಾ// ದೇವಾನಂದ ತಂದೆ ರಾಜೇಂದ್ರ ಬಿರಾದಾರ ವ;೪೩ ವರ್ಷ ಜಾತಿ: ಲಿಂಗಾಯತ ಉ|| ವ್ಯೆಧ್ಯರು  ಸಾ|| ಮನೆ ನಂ: 11-366/119/121 ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ರವರು ನೀಡಿದ ದೂರಿನ ಸಾರಾಂಶವೆನೆAದರೆ ದಿನಾಂಕ: 29-11-2022 ರಂದು ಮಧ್ಯಾಹ  ೧೨:೫೧ ಗಂಟೆಗೆ ನನ್ನ ಆಸ್ಪತ್ರೆಯಲ್ಲಿ ಇದ್ದಾಗ ನನಗೆ 9958989405 ನೇದ್ದರಿಂದ ಪೋನ್ ಮಾಡಿ ನನಗೆ ಹೇಳಿದ್ದೆನೆಂದರೆ, ನಾನು ಸುಭಾಷ ವರ್ಮಾ ಸಾ|| ಬೆಂಗಳೂರು ಇದ್ದು ರಿಲಾನ್ಸ್ ನಿಪ್ಪಾನ್ ಲೈಫ್ ಇನ್‌ಸೂರೆನ್ಸ್ ಕಂಪನಿ ಲಿಮಿಟೆಡ್ ಮ್ಯಾನೇಜರ್ ಇರುತ್ತೇನೆ, ಇನ್‌ಸುರೆನ್ಸ್ ಫಾಲಿಸಿ ಲಾಸ್ ಆಗಿದೆ ನಿಮ್ಮದು ಸೀಬಿಲ್ ಸ್ಕೋರ್ ಕಡಿಮೆ ಆಗಿದೆ, ಅದಕ್ಕೆ ಪಾಲಿಸಿ ರಿನೀವಲ್ ಮಾಡಿರಿ ಅಂತಾ ಹೇಳಿ  ನಾನು ಒಂದು ನಂಬರ ಕೊಡುತ್ತೇನೆ ಅದಕ್ಕೆ ನೀವು ಪೋನ್ ಮಾಡಿ ಎಲ್ಲಾ ಮಾಹಿತಿ ತಿಳಿಸುತ್ತಾರೆ ಅಂತಾ ಹೇಳಿ ನನಗೆ 8510861435 ನಂಬರನ್ನು ನೀಡಿರುತ್ತಾರೆ, ನಂತರ ನಾನು ಸದರಿ ನಂಬರಗೆ  ಪೋನ್ ಮಾಡಿದಾಗ ವಿಜಯ ಟಿ ಶ್ರೀನಿವಾಸನ್ ರಿಲಾನ್ಸ್ ನಿಪ್ಪಾನ್ ಲೈಫ್ ಇನ್‌ಸೂರೆನ್ಸ್ ಕಂಪನಿ ಲಿಮಿಟೆಡ್ ಕೋ-ಮ್ಯಾನೇಜರ್ ಅಂತಾ ಇದ್ದ ವ್ಯಕ್ತಿ ಪೋನ್ ರಿಸಿವ್ ಮಾಡಿ ಅವರು ತಿಳಿಸಿದ್ದೆನೆಂದರೆ, ನನ್ನ ಇನ್ಸ್ರೆನ್ಸ್ ಪಾಲಿಸಿ ಲಾಸ್ ಆಗಿದೆ ನಿಮ್ಮ ಸೀಬಿಲ್ ಸ್ಕೋರ್ ಕಡಿಮೆ ಆಗಿರುತ್ತದೆ, ನೀವು ರಿನಿವಲ್ ಮಾಡಿ ಅಂತಾ ಹೇಳಿ ನನ್ನ ಈ-ಮೆಲ್, ನನ್ನ ಹುಟ್ಟಿದ ದಿನಾಂಕ  ಹಾಗೂ ನನ್ನ ಆಧಾರ ಕಾರ್ಡ ನಂಬರ ಪ್ಯಾನ್ ಕಾರ್ಡ ನಂಬರ ಇತರೆ ದಾಖಲೆಗಳ ಬಗ್ಗೆ ಹೇಳಿದರು ಆತನು ಹೇಳಿದನ್ನು ಕಂಡು ಈತನು ನಿಜವಾದ ರಿಲಾನ್ಸ್ ನಿಪ್ಪಾನ್ ಲೈಫ್ ಇನ್‌ಸೂರೆನ್ಸ್ ಕಂಪನಿ ಲಿಮಿಟೆಡ್ ಕೋ-ಮ್ಯಾನೇಜರ್ ಇರಬಹುದು ನಂಬಿರುತ್ತೇನೆ, ನೀವು 3,50,000/- ಹಣವನ್ನು ಆರ್,ಟಿ,ಜಿ,ಎಸ್, ಮೂಲಕ ಜಮಾ ಮಾಡಿ ಅಂತಾ ತಮ್ಮ ಬ್ಯಾಂಕ ಖಾತೆಯನ್ನು ಸಂಖ್ಯೆ: 7319580161, IFSC CODE- IDIB000B198 ಇಂಡಿಯನ್ ಬ್ಯಾಂಕ ಬ್ರ್ಯಾಂಚ್ ಬೆಂಗಳೂರು ಇದ್ದ ಶಾಖೆಗೆ ಹಣ ಜಮಾ ಮಾಡಿ ಅಂತಾ ನನಗೆ ವಾಟ್ಸಪ್‌ನಲ್ಲಿ ಮೇಸೆಜ್ ಮಾಡಿರುತ್ತಾರೆ ಅದರಂತೆ ನಾನು ಅವರಿಗೆ ನಂಬಿ ನನ್ನ ಬ್ಯಾಂಕ ಖಾತೆ ಸಂಖ್ಯೆ: 11172111001033 ನೇದರದಿಂದ ಒಟ್ಟು 3,50,000/- ನೇದ್ದರಿಂದ ಜಮಾ ಮಾಡಿರುತ್ತೇನೆ. ನಂತರ ವಿಜಯ ಟಿ ಶ್ರೀನಿವಾಸನ್ ಇತನ ಮೋಬೈಲ್  8510861435 ನೇದ್ದಕ್ಕೆ ಪೋನ್ ಮಾಡಿ ನಾನು 3,50,000/- ರೂಪಾಯಿಗಳನ್ನು ಜಮಾ ಮಾಡಿದ ಬಗ್ಗೆ ಹಾಗೂ ವಾಟ್ಸ್ಪ್ ಮೂಲಕ ಯು,ಟಿ,ಆರ್ ನಂಬರ್ ಕೂಡಾ ತಿಳಿಸಿದೆನು.   ನಂತರ ದಿನಾಂಕ: 01-12-2022 ರಂದು ನನ್ನ ಅಳಿಯ ಗೀರಿರಾಜ ಸೀರವಾಳ್, ಹಾಗೂ ಗೆಳೆಯ ಪ್ರವೀಣ ಮಹೇಂಧ್ರಕರ್ ಇವರಿಗೆ ಪೋನ್ ಮಾಡಿ ಈ ಮೇಲೆ ನಡೆದ ಘಟನೆ ಬಗ್ಗೆ ತಿಳಿಸಿದೆನು ಅವರಿಬ್ಬರು ನನಗೆ ನೀವು ಮೋಸ ಹೋಗಿರುತ್ತೀರಿ ನೀವು ಸೈಬರ್ ಕಂಪ್ಲೇಂಟ್ ಕೊಡಿ ಅಂತಾ ಹೇಳಿದಾಗ ನಾನು ತಕ್ಷಣ 1930 ಹೆಲ್ಪ ಲೈನ್ ನಂಬರಗೆ ಪೋನ್ ಮಾಡಿ ನಡೆದ ಘಟನೆಯ ಬಗ್ಗೆ ಹೇಳಿ ಕಂಪ್ಲೇಂಟ್ ಮಾಡಿದೆನು. ನನಗೆ ಅಕ್ನಾಲೇಜಮೆಂಟ್ ಸಂಖ್ಯೆ: 31612220019708  ನೀಡಿರುತ್ತಾರೆ. ಇಂದು ದಿನಾಂಕ: 07-12-2022 ರಂದು ಸಿ,ಇ,ಎನ್ ಪೊಲೀಸ್ ಠಾಣೆಗೆ ಹಾಜರಾಗಿ ನನಗೆ ೦೧) ಸುಭಾಷ ವರ್ಮಾ ಸಾ|| ಬೆಂಗಳೂರು ೦೨) ವಿಜಯ ಟಿ, ಶ್ರೀನಿವಾಸನ್ ಸಾ|| ಬೆಂಗಳೂರು ರವರು ಕೂಡಿಕೊಂಡು  ರಿಲಾನ್ಸ್ ನಿಪ್ಪಾನ್ ಲೈಫ್ ಇನ್‌ಸೂರೆನ್ಸ್ ಕಂಪನಿ ಲಿಮಿಟೆಡ್ ಪಾಲಿಸಿ ರೀನಿವಲ್ ಅಂತಾ ಹೇಳಿ ಅಪ್ರಾಮಾಣಿಕತೆಯಿಂದ, ನಂಬಿಸಿ, ಮೋಸ ಮಾಡುವ ಉದ್ದೇಶದಿಂದ ನನ್ನಿಂದ ಒಟ್ಟು 3,50,000/- ಹಣವನ್ನು ಆರ್,ಟಿ,ಜಿ,ಎಸ್ ಮೂಲಕ ತಮ್ಮ ಬ್ಯಾಂಕ ಖಾತೆಗೆ ಜಮಾ ಮಾಡಿಕೊಂಡು ಮೋಸ ಮಾಡಿರುತ್ತಾರೆ. ಕಾರಣ ಸದರಿ ಆರೋಪಿತರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ನಾನು ಕಳೆದುಕೊಂಡು ಹಣವನ್ನು ಮರಳಿ ಕೊಡಿಸಬೇಕಾಗಿ  ತಮ್ಮಲ್ಲಿ ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರೋಜಾ ಪೊಲೀಸ ಠಾಣೆ :- ದಿನಾಂಕ: 07/12/2022 ರಂದು 16-00 ಗಂಟೆಗೆ ಅಲ್ ಫಾರುಖ ಮಜೀದಿ ಇಸ್ಲಾಮಾಬಾದ ಕಾಲೋನಿ ಕಲಬುರಗಿಯ ಸಾರ್ವಜನಿಕ ರಸ್ತೆಯ ಮೇಲೆ    ಸದರಿ ಆರೋಪಿತನು ಮಟಕಾ ಬರೆದುಕೊಳ್ಳುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದುಕೊಂಡು ಸದರಿಯವ ನಿಂದ ನಗದು 1120/- ರೂ , ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ್ ಪೆನ್  ಒಟ್ಟು 1120/- ರೂ ಜಪ್ತುಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 12-12-2022 03:37 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080