ಅಭಿಪ್ರಾಯ / ಸಲಹೆಗಳು

ಮಹಿಳಾ ಪೊಲೀಸ್‌ ಠಾಣೆ :- ದಿನಾಂಕ 07-09-2022  ರಂದು ಸಾಯಂಕಾಲ ೫ ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಶಿವನಂದಮ್ಮ ಅಧೀಕ್ಷಕರು ಅಮೂಲ್ಯ ಶಿಶು ಗೃಹ ದೇವಿ ನಗರ ಆಳಂದ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ ದಿನಾಂಕ ೧೦.೦೮.೨೦೨೨ ರಂದು ಸಾಯಂಕಾಲ ೬ ಗಂಟೆ ಸುಮಾರಿಗೆ ನಂದೂರ(ಕೆ) ಗ್ರಾಮದ ಹತ್ತಿರ ಇರುವ ಬ್ರಿಡ್ಜ ಹತ್ತಿರ ಒಂದು ದಿನದ ಹೆಣ್ಣು ಶಿಶುವನ್ನು ಯಾರೋ ಅಪರಿಚಿತರು ಬಿಸಾಕಿ ಹೋಗಿರುತ್ತಾರೆ ಎಂದು ಸಾರ್ವಜನಿಕರು ಮಕ್ಕಳ ಸಹಾಯ ವಾಣಿಗೆ ತಿಳಿಸಿದಾಗ ಮಕ್ಕಳ ಸಹಾಯವಾಣಿಯ ಸಿಬ್ಬಂದಿಯವರಾದ ಮಲ್ಲಯ್ಯ ಗುತ್ತೆದಾರ ಮತ್ತು ವಿಜಯಕುಮಾರ ರಾಠೋಡ ಇವರು ಸ್ಥಳಕ್ಕೆ ಹೋಗಿ ನವಜಾತ ಶಿಶುವನ್ನು ತೆಗೆದುಕೊಂಡು ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ಸೇರಿಕೆ ಮಾಡಿ ಮಗುವಿಗೆ ಉಪಚಾರ ನಂತರ ಅಮೂಲ್ಯ ಶಿಶು ಗೃಹಕ್ಕೆ ದಾಖಲಿಸಿಕೊಂಡಿರುತ್ತೆನೆ. ಕಾರಣ ಸದರಿ ಶಿಶು ಆರೋಗ್ಯವಾಗಿದ್ದು, ಶಿಶುವಿಗೆ ಹೆತ್ತ ತಂದೆ ತಾಯಿಯವರು ಪಾಲನೆ ಪೋಷಣೆ ಮಾಡದೆ ನಿರ್ಗತಿಕವಾಗಿ ಬಿಸಾಕಿ ಹೋಗಿದ್ದು, ಅವರ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ್‌ ಠಾಣೆ :-   ದಿನಾಂಕ:07.09.2022 ರಂದು 03:00 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ಶ್ರೀನಿವಾಸ ತಂದೆ ಕರಬಸಪ್ಪ ಮಂಡಿ, ವ:31 ವರ್ಷ, ಜಾತಿ:ಕುರುಬ, ಉ:ಆಹಾರ ನಿರೀಕ್ಷಕರು, ಸಹಾಯಕ ನಿರ್ದೇಶಕರ ರವರ ಕಛೇರಿ, ಅನೌಪಚಾರಿಕ ಪಡಿತರ ಪ್ರದೇಶ, ಕಲಬುರಗಿ ಸರ್ಕಾರಿ ತರ್ಫೆ ಫಿರ್ಯಾದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ:07-09-2022 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನಾನು ಕಛೇರಿಯಲ್ಲಿದ್ದಾಗ ಕಲಬುರಗಿ ನಗರದ ಹೀರಾಪೂರ ಕಾಲೋನಿಯಲ್ಲಿ ಅಮರ ಫಂಕ್ಷನ ಹಾಲ ಹತ್ತಿರ ಖುಲ್ಲಾ ಜಾಗೆಯಲ್ಲಿ ಅಕ್ರಮವಾಗಿ ಗ್ಯಾಸ ಸಿಲೆಂಡರಗಳನ್ನು ಸಂಗ್ರಹಿಸಿಕೊಂಡು ಯಾವುದೇ ಲೈಸೆನ್ಸ್ ಪರವಾನಿಗೆ ಇಲ್ಲದೇ ಅಡುಗೆಗೆ ಉಪಯೋಗಿಸುವ ಸಿಲೆಂಡರಗಳನ್ನು ಅಟೋರಿಕ್ಷಾಗಳಿಗೆ ತುಂಬುತ್ತಿದ್ದಾರೆ ಅಂತಾ ಬಂದ ಬಾತ್ಮಿ ಮೇರೆಗೆ ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ದಾಳಿ ಮಾಡುವ ಕುರಿತು ನಾನು ಶ್ರೀ ಶಿವಪ್ಪ ಪಿ.ಎಸ್.ಐ., ಸಿ.ಸಿ.ಬಿ. ಘಟಕ, ಮತ್ತು ಸಿ.ಸಿ.ಬಿ. ಘಟಕ ಸಿಬ್ಬಂದಿಯವರಾದ 1) ಶರಣಬಸಪ್ಪ ಹೆಚ್.ಸಿ-94, 2) ಮಲ್ಲಿಕಾರ್ಜುನ ಹೆಚ್.ಸಿ-79, 3) ಸುನೀಲಕುಮಾರ ಹೆಚ್.ಸಿ-167, 4) ಅಶೋಕ ಕಟಕೆ ಸಿಪಿಸಿ-966, 5) ಯಲ್ಲಪ್ಪ ಸಿಪಿಸಿ-220, 6) ನಾಗರಾಜ ಸಿಪಿಸಿ-1257, ರವರಿಗೆ ಕಛೇರಿಗೆ ಬರಮಾಡಿಕೊಂಡು ಅವರಿಗೆ ಮಾಹಿತಿ ತಿಳಿಸಿ ನಂತರ ಇಬ್ಬರೂ ಪಂಚರಾದ 1) ಶ್ರೀ ಶಿವರಾಜ ತಂದೆ ಗುರುರಾಜ ಪೂಜಾರಿ, ವ:32 ವರ್ಷ, ಜಾತಿ:ಕುರುಬ, ಉ:ಖಾಸಗಿ ಕೆಲಸ, ಸಾ:ಬಿದ್ದಾಪೂರ ಕಾಲೋನಿ ಕಲಬುರಗಿ 2) ಶ್ರೀ ಮುಸಾಪಟೇಲ ತಂದೆ ಮಹ್ಮದ ಪಟೇಲ, ವ:30 ವರ್ಷ, ಜಾತಿ:ಮುಸ್ಲಿಂ, ಉ:ಖಾಸಗಿ ಕೆಲಸ, ಸಾ:ಶಹಾಬಜಾರ ಕಲಬುರಗಿ ಇವರನ್ನು ಕೂಡಾ ಕಛೇರಿಗೆ ಬೆಳಿಗ್ಗೆ 11-30 ಗಂಟೆಗೆ ಬರಮಾಡಿಕೊಂಡು ದಾಳಿ ಕಾಲಕ್ಕೆ ಹಾಜರಿದ್ದು ಪಂಚರಾಗುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ.  ನಂತರ ನಾನು, ಶ್ರೀ ಯಲ್ಲಾಲಿಂಗ ಆಹಾರ ನಿರೀಕ್ಷಕರು, ಮತ್ತು ಪಂಚರು ಹಾಗೂ ಶ್ರೀ ಶಿವಪ್ಪ ಪಿ.ಎಸ್.ಐ., ಸಿ.ಸಿ.ಬಿ. ಘಟಕ, ಮತ್ತು ಸಿ.ಸಿ.ಬಿ. ಘಟಕ ಸಿಬ್ಬಂದಿಯವರಾದ 1) ಶರಣಬಸಪ್ಪ ಹೆಚ್.ಸಿ-94, 2) ಮಲ್ಲಿಕಾರ್ಜುನ ಹೆಚ್.ಸಿ-79, 3) ಸುನೀಲಕುಮಾರ ಹೆಚ್.ಸಿ-167, 4) ಅಶೋಕ ಕಟಕೆ ಸಿಪಿಸಿ-966, 5) ಯಲ್ಲಪ್ಪ ಸಿಪಿಸಿ-220, 6) ನಾಗರಾಜ ಸಿಪಿಸಿ-1257 ರವರೊಂದಿಗೆ ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ಬೆಳಿಗ್ಗೆ 11-45 ಗಂಟೆಗೆ ಕಛೇರಿಯಿಂದ ಹೊರಟಿದ್ದು, ಬಾತ್ಮಿ ಬಂದ ಸ್ಥಳವಾದ ಹೀರಾಪೂರ ಕಾಲೋನಿಯಲ್ಲಿ ಅಮರ ಫಂಕ್ಷನ ಹಾಲ ಹತ್ತಿರ ಮಧ್ಯಾಹ್ನ 12-20 ಗಂಟೆಗೆ ತಲುಪಿ ಅಲ್ಲಿಯೇ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಅಮರ ಫಂಕ್ಷನ ಹಾಲ ಎದುರುಗಡೆ ಒಂದು ಖುಲ್ಲಾ ಪ್ಲಾಟನಲ್ಲಿ ಒಬ್ಬ ವ್ಯಕ್ತಿ ಗ್ಯಾಸ ಸಿಲೆಂಡರಗಳಿಂದ ಅಟೋರೀಕ್ಷಾಗಳಿಗೆ ತುಂಬುತ್ತಿದ್ದು, ನೋಡಿ ಖಚಿತಪಡಿಸಿಕೊಂಡು ಮಧ್ಯಾಹ್ನ 12-30 ಗಂಟೆಗೆ ಪಂಚರ ಸಮಕ್ಷಮ ನಾನು ಮತ್ತು ಸಿ.ಸಿ.ಬಿ. ಘಟಕದ ಪಿ.ಎಸ್.ಐ ಹಾಗೂ ಸಿಬ್ಬಂದಿಯವರ ಸಹಾಯದಿಂದ ಎಲ್ಲರೂ ಕೂಡಿ ಒಮ್ಮಲ್ಲೇ ದಾಳಿ ಮಾಡಿ ಅಟೋರಿಕ್ಷಾಗಳಿಗೆ ಗ್ಯಾಸ ತುಂಬುತ್ತಿದ್ದ ವ್ಯಕ್ತಿಗೆ ಹಿಡಿದಿದ್ದು, ಆ ಸಮಯದಲ್ಲಿ ಅಟೋರಿಕ್ಷಾ ಚಾಲಕರು ಓಡಿ ಹೋಗಿದ್ದು, ನಂತರ ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಜಾ ಪಟೇಲ ತಂದೆ ಲಾಡ್ಲಾ ಪಟೇಲ ಪೊಲೀಸ್ ಪಟೇಲ, ವ:46 ವರ್ಷ, ಜಾತಿ:ಮುಸ್ಲಿಂ, ಉ:ಖಾಸಗಿ ಕೆಲಸ, ಸಾ:ಹೀರಾಪೂರ ಅಂತಾ ತಿಳಿಸಿದನು. ಸದರಿಯವನ ಹತ್ತಿರ ಯಾವುದಾದರೂ ಲೈಸೆನ್ಸ್ ಪರವಾನಿಗೆ ವಗೈರೆ ತೋರಿಸುವಂತೆ ಕೇಳಿದಾಗ ತಮ್ಮ ಹತ್ತಿರ ಯಾವುದೇ ಲೈಸೆನ್ಸ್ ಪರವಾನಿಗೆ ಇರುವುದಿಲ್ಲ ಅಂತಾ ತಿಳಿಸಿದನು.  ಅವನ ಹತ್ತಿರ ಇದ್ದ ಗ್ಯಾಸ ಸಿಲೆಂಡರಗಳನ್ನು ಪರಿಶೀಲಿಸಲಾಗಿ 1) 03 ಹೆಚ್.ಪಿ. ಕಂಪನಿಯ ಖಾಲಿ ಸಿಲೆಂಡರಗಳು ದೊರೆತಿದ್ದು, ಅದರ ಅ.ಕಿ. ಒಂದಕ್ಕೆ ರೂ.1000/- ರಂತೆ ಒಟ್ಟು 03 ಸಿಲೆಂಡರಗಳಿಗೆ ರೂ.3000/- ಇದ್ದು, 2) 01 ಹೆಚ್.ಪಿ. ಕಂಪನಿಯ ಸಿಲೆಂಡರ ಇದ್ದು ಅದು (½) ಅರ್ಧ ತುಂಬಿದ್ದು ದೊರೆತಿದ್ದು, ಅದರ ಅ.ಕಿ. ಒಂದಕ್ಕೆ ರೂ.1500/- ಇದ್ದು, 3) 1 ವಿಡಿಯೋಕಾನ ಕಂಪನಿಯ ತೂಕದ ಯಂತ್ರದ ಮಷೀನ ದೊರೆದಿದ್ದು, ಅದರ ಅ.ಕಿ. ರೂ.3,000/-, 4) ½ ಹೆಚ್.ಪಿ. ಮೋಟಾರ ಅದರ ಅ.ಕಿ. ರೂ.2,000/- ಹೀಗೆ ಒಟ್ಟು ಅ.ಕಿ.ರೂ9,500/- ಕಿಮ್ಮತ್ತಿನ ಮುದ್ದೇಮಾಲುಗಳನ್ನು ದೊರೆತಿದ್ದು, ಪಂಚರ ಸಮಕ್ಷಮ ಜಪ್ತು ಮಾಡಿಕೊಂಡಿದ್ದು ಇರುತ್ತದೆ. ಸ್ಥಳದಲ್ಲಿಯೇ ಕುಳಿತು ಜಪ್ತಿ ಪಂಚನಾಮೆಯನ್ನು ಮಧ್ಯಾಹ್ನ 12-30 ಗಂಟೆಯಿಂದ 1-30 ಗಂಟೆಯವರೆಗೆ ಲ್ಯಾಪಟಾಪದಲ್ಲಿ ಟೈಪ ಮಾಡಿದ್ದು ಇರತ್ತದೆ. ನಂತರ ಆರೋಪಿ, ಜಪ್ತಿ ಮಾಡಿದ ಮುದ್ದೇಮಾಲಿನೊಂದಿಗೆ ಅಶೋಕನಗರ ಪೊಲೀಸ್ ಠಾಣೆಗೆ ಬಂದು ಜಪ್ತಿ ಮುದ್ದೇಮಾಲುಗಳನ್ನು ಮತ್ತು ಆರೋಪಿಯನ್ನು ತಮ್ಮ ತಾಬೆಗೆ ಒಪ್ಪಿಸಿದ್ದು ಇರುತ್ತದೆ.  ನಂತರ ನನ್ನ ವರದಿಯನ್ನು ತಯಾರಿಸಿ ಸದರಿ ಆರೋಪಿತನ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆ 1955, 3&7 ಆಕ್ಟ್ ಮತ್ತು ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ ಆರ್ಡರ 2000, 6 & 7 ಆಕ್ಟ್ ಅಡಿಯಲ್ಲಿ ಕಾನೂನು ಕ್ರಮ ಜರುಗಿಸುವಂತೆ ಕೋರಲಾಗಿದೆ ಅಂತ ಇತ್ಯಾದಿಯಾಗಿ ಇದ್ದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಎಂ.ಬಿ.ನಗರ ಪೊಲೀಸ ಠಾಣೆ :- ಫಿರ್ಯಾದಿ ತನ್ನ ಮೊಟರ್ ಸೈಕಲ ನಂ ಕೆಎ ೩೨ ಇಕೆ ೨೫೪೭ ಅ.ಕಿ ೨೦೦೦೦/- ನೇದ್ದನ್ನು ಗಣೇಶ ನಗರ ಕ್ರಾಸ್ ಮಣೂರ್ ಆಸ್ಪತ್ರೆ ಎದರುಗಡೆ ದಿನಾಂಕ: ೧೧/೦೮/೨೦೨೨ ರಂದು ರಾತ್ರಿ ನಿಲ್ಲಿಸಿ ಹೋಗಿದ್ದು ಮರಳಿ ಮುಂಜಾನೆ ಬಂದು ನೋಡಲಾಗಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 16-09-2022 07:11 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080