ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್‌ ಠಾಣೆ :-  ದಿನಾಂಕ: 07-08-2022  ರಂದು ಸಾಯಂಕಾಲ ೧೮.೧೫ ಗಂಟೆಗೆ  ಫಿರ್ಯಾದಿದಾರಳಾದ ಶ್ರೀಮತಿ ಸುಮಂಗಲಾ ಗಂಡ ಪ್ರಭುಲಿಂಗ ಕೋತಲಿ ವ:೪೦ ವರ್ಷ ಉ:ಮನೆಕೆಲಸ ಜಾ:ಲಿಂಗಾಯತ ಸಾ:ದಿಕ್ಸಂಗಿ ಗ್ರಾಮ ತಾ:ಅಫಜಲಪೂರ ಹಾ:ವಾ:ಕಮಲಾಬಾಯಿ ಸಂಗಯ್ಯ ಇವರ ಮನೆಯಲ್ಲಿ ಬಾಡಿಗೆ ಗುರುಬಸವ ನಗರ ಶೇಖರೋಜಾ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಫರ‍್ಯಾದಿ ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಯ ಸಂಕ್ಷಿಪ್ತ ಸಾರಾಂಶವೆನೆಂದರೆ ಈ ಮೂಲಕ ತಮಗೆ ಫರ‍್ಯಾದಿ ಅರ್ಜಿ ಸಲ್ಲಿಸುವುದೇನೆಂದರೆ ನಾನು ಮನೆಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನ್ನ ಗಂಡ ಪ್ರಭುಲಿಂಗ ತಂದೆ ಶಿವಶರಣಪ್ಪಾ ಕೋತಲಿ ವ:೪೫ ವರ್ಷ ಉ:ಟಂಟಂ ಚಾಲಕ & ಮಾಲೀಕನಿದ್ದು ಇವರು ಕಳೆದ ೦೩ ವರ್ಷಗಳ ಹಿಂದೆ ಟಂಟಂ ನಂ.ಕೆಎ ೩೨ ಸಿ-೬೦೭೯ ನೇದ್ದು ಖರೀದಿಸಿದ್ದು ಈ ಟಂಟಂದಲ್ಲಿ ಬಾಡಿಗೆ ಹೊಡೆಯುತ್ತಾ ಬಂದಿರುತ್ತಾರೆ. ಇಂದು ದಿನಾಂಕ:೦೭.೦೮.೨೦೨೨ ರಂದು ಬೆಳಿಗ್ಗೆ ೯.೦೦ ಗಂಟೆಗೆ ನನ್ನ ಗಂಡ ಪ್ರಭುಲಿಂಗ ಇವರು ತಮ್ಮ ಟಂಟಂ ತೆಗೆದುಕೊಂಡು ಬಾಡಿಗೆಗಾಗಿ ಹೋಗಿರುತ್ತಾರೆ. ನಾನು ಮಧ್ಯಾಹ್ನ ೨.೦೦ ಗಂಟೆ ಸುಮಾರಿಗೆ ನನ್ನ ಗಂಡ ಪ್ರಭುಲಿಂಗ ಇವರಿಗೆ ಫೋನ ಮಾಡಲಾಗಿ ಆ ಸಮಯದಲ್ಲಿ ಅವರು ನಾನು ಒಂದು ಕಡೆ ಬಾಡಿಗೆಗೆ ಬಂದಿರುತ್ತೇನೆ. ಸಾಯಂಕಾಲ ಮನೆಗೆ ಬರುವುದಾಗಿ ತಿಳಿಸಿದ್ದು ಅಲ್ಲದೇ ಬರುವಾಗ ಮನೆಯ ಫತ್ರಾಗಳು ಮತ್ತು ರಾಡ್ಗಳನ್ನು ಹಾಕಿಕೊಂಡು ಬರುತ್ತೇನೆ ಅಂತಾ ತಿಳಿಸಿರುತ್ತಾರೆ. ಹೀಗಿದ್ದು ಇಂದು ದಿನಾಂಕ:೦೭.೦೮.೨೦೨೨ ರಂದು ಸಾಯಂಕಾಲ ೪.೧೦ ಗಂಟೆಗೆ ಮನೆಯಲ್ಲಿದ್ದಾಗ ನಮ್ಮ ಓಣಿಯ ಹುಡುಗರು ಪ್ರಭುಲಿಂಗ ಇವರಿಗೆ ಕರೆಂಟ ಹತ್ತಿದೆ ಅಂತಾ ಚಿರುತ್ತಾ ಮನೆಯ ಎದುರುಗಡೆಯಿಂದ ಓಡುತ್ತಾ, ಹೇಳುತ್ತಾ ಓಡುತ್ತಾ ರೋಡಿನ ಕಡೆಗೆ ಹೋಗುವುದನ್ನು ನೋಡಿ ನಾನು ಗಾಭರಿಯಾಗಿ ಓಡಿ ಹೋಗುತ್ತಿದ್ದ ಒಬ್ಬ ಹುಡುಗನಿಗೆ ವಿಚಾರಿಸಿದಾಗ ನಿಮ್ಮ ಗಂಡ ಪ್ರಭುಲಿಂಗ ಇವರಿಗೆ ಕರೆಂಟ ಹತ್ತಿ ರೋಡಿನ ಬದಿಯಲ್ಲಿ ಬಿದ್ದಿರುತ್ತಾರೆ ಅಂತಾ ತಿಳಿಸಿದಾಗ ನಾನು ಕೂಡಾ ಚಿರುತ್ತಾ ವಿಜಯನಗರ ಕಾಲೋನಿಯ ಕ್ರಾಸಿನ ಹತ್ತಿರ ಸಾಯಂಕಾಲ ೪.೧೫ ಗಂಟೆಗೆ ಬಂದು ನೋಡಿದಾಗ ನನ್ನ ಗಂಡ ಪ್ರಭುಲಿಂಗ ತಂದೆ ಶಿವಶರಣಪ್ಪಾ ಕೋತಲಿ ವ:೪೫ ವರ್ಷ ಇವರಿಗೆ ಕರೆಂಟ ಹತ್ತಿ ಸ್ಥಳದಲ್ಲಿಯೇ ಟಂಟಂ ಹತ್ತಿರ ಬಿದಿದ್ದನ್ನು ನೋಡಿದಾಗ ನನ್ನ ಗಂಡ ತಮ್ಮ ಟಂಟಂ ನಂ.ಕೆಎ ೩೨ ಸಿ-೬೦೭೯ ನೇದ್ದರಲ್ಲಿ ಅಂದಾಜು ೨೦-೨೫ ಫೀಟ ಎತ್ತರದಲ್ಲಿ ಮನೆಗೋಸ್ಕರ ಫತ್ರಾ ಮತ್ತು ಕಬ್ಬಿಣದ ರಾಡ್ಗಳನ್ನು ಟಂಟಂದಲ್ಲಿ ಹಾಕಿಕೊಂಡು ಬರುತ್ತಿದ್ದಾಗ ಆಕಸ್ಮೀಕವಾಗಿ ಕಬ್ಬಿಣದ ರಾಡುಗಳು ರಸ್ತೆಯ ಬದಿಯಲ್ಲಿರುವ ಕೆಇಬಿ ಕಂಬದ ಕರೆಂಟಿನ ರ‍್ವಿಸ ವೈರಿಗೆ ತಗುಲಿದ್ದರಿಂದ ಕರೆಂಟ ಹರಿದು ನನ್ನ ಗಂಡನಿಗೆ ಕರೆಂಟ ಹತ್ತಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ವಿಷಯದಲ್ಲಿ ನನ್ನದು ಯಾರ ಮೇಲೆಯೂ ಸಂಶಯ ದೂರು ಇರುವುದಿಲ್ಲಾ. ಮುಂದಿನ ಕಾನೂನು ಕ್ರಮ ಜರೂಗಿಸಿ ನನ್ನ ಗಂಡನ ಶವ ನನಗೆ ಕೊಡಲು ವಿನಂತಿ. ಸದರಿ ಘಟನೆಯು ಸಾಯಂಕಾಲ ೪.೦೫ ಗಂಟೆಗೆ ಜರೂಗಿರುತ್ತದೆ ಅಂತಾ ಕೊಟ್ಟ ಫರ‍್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 07-08-2022 ರಂದು ೨:೩೦ ಎ.ಎಮ ದಿಂದ ೬:೦೦ ಎ.ಎಮ ಮದ್ಯದ ಅವಧಿಯಲ್ಲಿ ಅಜಾದಪೂರ ಗ್ರಾಮದಲ್ಲಿ ಮೋಹರಂ ಹಬ್ಬದ ಪ್ರಯುಕ್ತ ಉತ್ಸವ ಸಮಯದಲ್ಲಿ ಆರೋಪಿತರು ಗುಂಪು ಕಟ್ಟಿಕೊಂಡು ಬಂದು ಉತ್ಸವದಲ್ಲಿ ಹಲಿಗೆ ಭಾರಿಸುವ ಮತ್ತು ಮನೋರಂಜನೆ ಮಾಡುತ್ತಿರುವ ಜನರ ಮೇಲೆ ದಂಗ ಮಸ್ತಿ ಮಾಡಿ ಚಾಕು ತೋರಿಸಿ ಹೆದರಿಸಿದ ಬಗ್ಗೆ.

 

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 07-08-2022  ರಂದು ೧೧.೩೦ ಪಿ.ಎಮ್ ಕ್ಕೆ ಮಹಮ್ಮದ ಅಲಿ ಖಾನ್ ತಂದೆ ಕರೀಮುಲ್ಲಾ ಖಾನ್  ಸಾ; ಸಿಟಿ ಆಕಾಡೆಮಿ ಶಾಲೆಯ ಹತ್ತಿರ ಜಂಜಂ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿ ಅರ್ಜಿಯನ್ನು ಹಾಜರು ಪಡಿಸಿದ್ದು ಸಾರಂಶವೆನೆಂದರೆ,  ದಿನಾಂಕ-೦೫/೦೮/೨೦೨೨ ರಂದು ಮದ್ಯಾಹ್ನ ನಮ್ಮ ಮನೆಗೆ ನನ್ನ ಹೆಂಡತ್ತಿಯ ಅಕ್ಕರಾದ ರಫಿಕ ಉನ್ನಿಸಾ ಗಂಡ ಮಹ್ಮದ ಸಲಿಂ ಇವರು ನಮ್ಮ ಮನೆಗೆ ಬಂದಿದ್ದು ನಂತರ ರಾತ್ರಿ ಊಟ ಮಾಡಿಕೊಂಡು ಶೇಖ ರೋಜಾ ಕಲಬುರಗಿದಲ್ಲಿರುವ ಅವರ ಮನೆಗೆ ಅವರಿಗೆ ಬಿಡಲು ನನ್ನ ಮೋಟಾರ ಸೈಕಲ ನಂ ಕೆಎ-೩೨ ಇ.ವಿ-೭೫೧೩ ನೇದ್ದರ ಮೇಲೆ ಅವರಿಗೆ ಕೂಡಿಸಿಕೊಂಡು ನಾನು ಸರಾಫ್ ಬಜಾರ ಮುಖಾಂತರ ನಿಧಾನವಾಗಿ ರಸ್ತೆಯ ಬದಿಯಿಂದ ಹೋಗುವಾಗ ರಾತ್ರಿ ೧೧:೪೦ ಗಂಟೆ ಸುಮಾರಿಗೆ ಒಂದು ಮೋಟಾರ ಸೈಕಲ ಸವಾರನು ಚೌಕ್ ಸರ್ಕಲ್ ಕಡೆಯಿಂದ ಸರಾಫ್ ಬಜಾರ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಕಪಡಾ ಬಜಾರ ಒಳಗಿನಿಂದ ನಮ್ಮ ರಸ್ತೆಯ ಬದಿಗೆ ಬಂದು ಮಾರ್ಕೇಟ್ ಮಜ್ಜೀದ್ ಹತ್ತಿರದ ಅಮ್ಜದ ಸಾಹೇಬ ಅಂಗಡಿ ಹತ್ತಿರ ನಮ್ಮ ಮೋಟಾರ ಸೈಕಲಗೆ ಎದುರಿನಿಂದ ಬಂದು ಡಿಕ್ಕಿ ಪಡಿಸಿದನು. ಆಗ ನಾನು ಮತ್ತು  ರಫಿಕ ಉನ್ನಿಸಾ ಇವರು ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು ಅದನ್ನು ನೋಡಿದ ಅಲ್ಲಿಯೇ ಹೋಗುತ್ತಿದ್ದ ಮಹಮ್ಮದ ಅಮ್ಜದ್ ಹಾಗೂ ಮಹಮ್ಮದ ಅಜೀಜ ಎಂಬುವರು ಬಂದು ನಮಗೆ ಎಬ್ಬಿಸಿ ರಸ್ತೆಯ ಬದಿಯಲ್ಲಿ ಕೂಡಿಸಿ ಬಿದಿ ದೀಪದ ಬೆಳಕಿನಲ್ಲಿ ನೋಲಡು ಸದರ ಘಟನೆಯಿಂದ ನನ್ನ ಎಡಗಡೆ ಭುಜಕ್ಕೆ ಹಾಗೂ ಕಾಲಿಗೆ ಗುಪ್ತಗಾಯವಾಗಿದ್ದು ಮತ್ತು ರಫಿಕ ಉನ್ನಿಸಾ ಇವರಿಗೆ ನೋಡಲು ಎಡಭುಜಕ್ಕೆ, ಸೊಂಟಕ್ಕೆ ಗುಪ್ತಗಾಯ ಹಾಗೂ ಎಡಗೈ ಮುಂಗೈ ಕೆಳಭಾಗದಲ್ಲಿ ಭಾರಿ ಒಳಪೆಟ್ಟಾಗಿದ್ದು ನಮ್ಮ ಮೋ.ಸೈಕಲಗೆ  ಡಿಕ್ಕಿಪಡಿಸಿದ ಮೋಟಾರ ಸೈಕಲ ನಂಬರ ನೋಡಲು ಕೆಎ-೩೨ ಹೆಚ್.ಬಿ-೨೨೦೯ ನೇದ್ದು ಇದ್ದು ಅದರ ಸವಾರನಿಗೆ ನೋಡಲು  ಆತನು ನಿಲ್ಲುವ ಹಾಗೆ ಮಾಡಿ ನಮ್ಮ ಕಡೆಗೆ ನೋಡುತ್ತಾ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ. ಆತನಿಗೆ ನೋಡಿರುತ್ತೇವೆ ಆತನಿಗೆ ಮುಂದೆ ನೋಡಿದರೆ ಗುರುತ್ತಿಸುತ್ತೇವೆ, ನಾನು ಅಲ್ಲಿಯೇ ಹೋಗುತ್ತಿದ್ದ ಒಂದು ಆಟೋರಿಕ್ಷಾದಲ್ಲಿ ರಫಿಕ ಉನ್ನಿಸಾ ಇವರಿಗೆ ಕೂಡಿಸಿಕೊಂಡುಉಪಚಾರ ಕುರಿತು ಸೌದಾಗರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಅಲ್ಲಿನ ವೈದ್ಯರು ನಾವು ಎಮ್.ಎಲ್.ಸಿ ಮಾಡುವುದಿಲ್ಲಾ ಅಂತಾ ಹೇಳಿದಕ್ಕೆ ನಾನು ಅಲ್ಲಿಂದ ರಫಿಕ ಉನ್ನಿಸಾ ರವರಿಗೆ ನಿನ್ನೆ ದಿನಾಂಕ-೦೬/೦೮/೨೦೨೨ ರಂದು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆರ್.ಟಿ.ಎ ಎಮ್.ಎಲ್.ಸಿ ಮಾಡಿಸಿ ಮತ್ತೆ ಹೆಚ್ಚಿನ ಉಪಚಾರ ಕುರಿತು ಸೌದಾಗರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ, ನನಗೆ ಸಣ್ಣಪುಟ್ಟ ಗಾಯವಾಗಿದರಿಂದ ಆಸ್ಪತ್ರೆಗೆ ತೋರಿಸಿಕೊಂಡಿರುವುದಿಲ್ಲಾ, ನನ್ನ ನಮ್ಮ ಮನೆಯವರೊಂದಿಗೆ ವಿಚಾರ ಮಾಡಿ ಇಂದು ಠಾಣೆಗೆ ಬಂದು ದೂರು ನೀಡಲು ವಿಳಂಬ ಆಗಿರುತ್ತದೆ. ಕಾರಣ ಮೋಟಾರ ಸೈಕಲ ನಂ ಕೆಎ-೩೨ ಹೆಚ್.ಬಿ-೨೨೦೯ ನೇದ್ದರ ಸವಾರನ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಈ ಫಿರ್ಯಾದಿಯನ್ನು ಸಲ್ಲಿಸಿರುತ್ತೆನೆ.  ಅಂತಾ ಕೊಟ್ಟು ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -2 :-   ದಿನಾಂಕ  07-08-2022 ರಂದು ೮:೧೫ ಪಿ.ಎಮ್ ಕ್ಕೆ ಶ್ರೀ ಶರಣುಕುಮಾರ ತಂದೆ ಭೀಮರಾಯ ಪೂಜಾರಿ ವಯಃ ೩೪ ವರ್ಷ ಜಾತಿಃ ಕುರುಬ ಉಃ ಗೌಂಡಿ ಕೆಲಸ ಸಾಃ ಇಟಗಾ ಅಹ್ಮದಾಬಾದ ಹಾ.ವಃ ಸರ್ವೋದಯ ನಗರ ಲಕ್ಷ್ಮಿ ಗುಡಿ ಹತ್ತೀರ ಶಹಾಬಾದ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾಧಿ ನೀಡಿದ್ದು ಸಾರಂಶವೆನೆಂದರೆ,  ಇಂದು ದಿನಾಂಕ-೦೭/೦೮/೨೦೨೨ ರಂದು ನಮ್ಮ ತಂದೆಯವರು ಕುರಿಗಳಿಗೆ ತಪ್ಪಲು, ಮೇವನ್ನು ತರುವ ಕುರಿತು ಬೆಳಿಗ್ಗೆ ೧೦:೦೦ ಗಂಟೆ ಸುಮಾರಿಗೆ ಮನೆಯಿಂದ ಹೋದರು. ಮುಂದೆ ೧೨:೦೦ ಗಂಟೆ ನಂತರ ಕಾರ ಸರ್ವೀಸ ಸೆಂಟರದ ಮಾರುತಿ ತಂದೆ ಉಮೇಶ ರಾಠೋಡ ಇವರಿಂದ ಮಾಹಿತಿ ಗೊತ್ತಾಗಿದ್ದೆನೆಂದರೆ, ಬೆಳಿಗ್ಗೆ ೧೧:೨೭ ನಿಮಿಷಕ್ಕೆ ನಿಮ್ಮ ತಂದೆ ಭೀಮರಾಯ ಪೂಜಾರಿ ಇವರು ಶಹಾಬಾದ ರೋಡಿನ ಮಾರುತಿ ಕಾರ ವಾಟರ್ ಸರ್ವೀಸದ ಹತ್ತೀರ ರೋಡಿನ ಬದಿಯಿಂದ ನಡೆದುಕೊಂಡು ಶಹಾಬಾದ ರೋಡಿನ ಕಡೆಗೆ ಹೋಗುವಾಗ ಒಳಗಡೆ ಕಚ್ಚಾ ರಸ್ತೆಯಿಂದ ಒಂದು ಟಿಪ್ಪರದ ಚಾಲಕನು ವೇಗವಾಗಿ ನಡೆಯಿಸಿಕೊಂಡು ಮುಖ್ಯ ರಸ್ತೆಗೆ ಒಮ್ಮೇಲೆ ಅಲಕ್ಷತನದಿಂದ ಶಹಾಬಾದ ರೋಡಿನ ಕಡೆಗೆ ತಿರುಗಿಸಿಕೊಂಡವನೆ ನಿಮ್ಮ ತಂದೆಯವರು ಈ ಟಿಪ್ಪರದ ಸೈಡಿನ ಹಿಂದಿನ ಟೈರದಲ್ಲಿ ಸಿಲುಕಿಕೊಂಡಿದಕ್ಕೆ ಅವರ ಎಡಗಾಲಿನ ತೊಡೆಯಿಂದ ಪಾದದ ವರೆಗೆ ಹಾಗು ಬಲಗೈ ರಟ್ಟೆಯಿಂದ ಮುಂಗೈವರೆಗೆ ಭಾರಿ ಪ್ರಮಾಣದ ಗಾಯವಾಗಿ ಕೈ ಕಾಲು ಮುರಿದಿದ್ದು, ರಕ್ತಗಾಯವಾಗಿ ಅವರು ಬೆಹೋಶ ಸ್ಧಿತಿಯಲ್ಲಿದ್ದು, ಟಿಪ್ಪರ ಚಾಲಕನು ಶಹಾಬಾದ ರೋಡಿನ ಕಡೆಗೆ ಓಡಿಸಿಕೊಂಡು ಹೋಗಿರುತ್ತಾನೆ. ಆತನಿಗೆ ಮತ್ತು ಆ ಟಿಪ್ಪರ ನೋಡಿರುತ್ತೆವೆ & ೧೦೮ ಅಂಬುಲೇನ್ಸದವರು ಬಂದು ಸರಕಾರಿ ಆಸ್ಪತ್ರೆ ಕಲಬುರಗಿಗೆ ಉಪಚಾರ ಕುರಿತು ತೆಗೆದುಕೊಂಡು ಹೋಗಿರುತ್ತಾರೆ. ನಿಮ್ಮ ತಂದೆಯವರೆಂದು ನನಗೆ ಮತ್ತು ಘಟನೆ ನೋಡಿದ‍ ಧರ್ಮೇಂದ್ರನಿಗೆ ಈಗ ವಿಷಯಗೊತ್ತಾಗಿ ನಿಮಗೆ ಮಾಹಿತಿ ತಿಳಿಸಿರುತ್ತೆನೆ ಅಂತಾ ತಿಳಿಸಿದಕ್ಕೆ, ನಾನು ಗಾಬರಿಗೊಂಡು ನಾನು ಮತ್ತು ನಮ್ಮ ತಾಯಿ ಗುರುಬಾಯಿ ಕೂಡಿಕೊಂಡು ಸರಕಾರಿ ಆಸ್ಪತ್ರೆಗೆ ಹೋಗಿ ತಂದೆಯವರಿಗೆ ನೋಡಲಾಗಿ ತಂದೆಯವರಿಗೆ ಮೇಲಿನಂತೆ ಗಾಯಗಳಾಗಿ ಮಾತನಾಡುವ ಪರಸ್ಧಿತಿಯಲ್ಲಿರಲಿಲ್ಲಾ. ನಾವು ತಂದೆಯವರ ಉಪಚಾರದಲ್ಲಿ ಇರುವಾಗ ಅವರಿಗೆ ಆದ ಭಾರಿಗಾಯದ ಬಾಧೆಯಿಂದ ಮಧ್ಯಾಹ್ನ ೩:೪೭ ಗಂಟೆ ಸುಮಾರಿಗೆ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಮೃತ ಪಟ್ಟಿರುತ್ತಾರೆ.  ಕಾರಣ ನಮ್ಮ ತಂದೆಯವರು ಶಹಾಬಾದ ರೋಡಿನ ಎಡಬದಿಯಿಂದ ನಡೆದುಕೊಂಡು ಬರುತ್ತಿರುವಾಗ ಟಿಪ್ಪರದ ಚಾಲಕನು ಒಳಕಚ್ಚಾ ರಸ್ತೆಯಿಂದ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಒಮ್ಮೇಲೆ ಮುಖ್ಯ ರಸ್ತೆಗೆ ಬಂದು ತನ್ನ ಟಿಪ್ಪರನ್ನು ಶಹಾಬಾದ ರೋಡಿನ ಕಡೆಗೆ ತಿರುಗಿಸಿಕೊಂಡು ಹೋಗುವಾಗ ನಮ್ಮ ತಂದೆಯವರಿಗೆ ಅಪಘಾತ ಪಡಿಸಿದ್ದರಿಂದ ಅವರ ಕಾಲು ಕೈಗೆ ಭಾರಿ ಪ್ರಮಾಣದ ಗಾಯವಾಗಿ ಹಾಗು ಇತರೆ ಕಡೆಗಳಲ್ಲಿಯು ಕೂಡಾ ಗಾಯವಾಗಿದ್ದರಿಂದ ಉಪಚಾರ ಪಡೆಯುವ ಕಾಲಕ್ಕೆ ಸರಕಾರಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಈ ಬಗ್ಗೆ ಅಪಘಾತ ಪಡಿಸಿದ ಟಿಪ್ಪರ & ಅದರ ಚಾಲಕನನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 19-08-2022 02:37 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080