ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ:07/07/2022 ರಂದು ಸಂಜೆ 7:00 ಗಂಟೆಗೆ ಫಿರ್ಯಾದಿ ಶ್ರೀ ಮಾಣಿಕ ತಂದೆ ಬಲಭಿಮ ಗೊಂದಳಿ ವಯ:49 ವರ್ಷ ಜಾ:ಗೊಂದಳಿ ಉ:ವಕೀಲರ ಹತ್ತಿರ ಖಾಸಗಿ ಕೆಲಸ ಸಾ:ಕೊಹಿನೂರ ಹಾವ:ಐಯ್ಯರವಾಡಿ ಭವಾನಿ ಮಂದಿರ ಹಿಂದಗಡೆ ಕಲಬುರಗಿ ಇವರು ಪೊಲೀಸ್ ಠಾಣೆಗೆ ಬಂದು ನೀಡಿದ ದೂರು ಅರ್ಜಿಯ ಸಾರಾಂಶವೇನಂದರೆ, ನಾನು ನಮ್ಮ ಪೂರ್ವಜರ ಆಸ್ತಿಗಳು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕ ಕೊಹಿನೂರಲ್ಲಿದ್ದು, ಈ ಆಸ್ತಿಗಳ ಸಂಬಂದ ನಾನು ಬೀದರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ದಾವೆ ನೋಟಿಸ್ ಎದುರುದಾರರಾದ ಶ್ರೀ ವಾರ್ಕಲೆ ಅರವಿಂದ ಎಂಬ ವ್ಯಕ್ತಿಗೆ ನೋಟಿಸ್ ಮುಟ್ಟಿದೆ ನಂತರ ಇವನು ದಿನಾಂಕ:05/07/2022 ರಂದು ಸುಮಾರು 11:09 ಎ.ಎಮ್ ಕ್ಕೆ ಕಛೇರಿ ನಿಮಿತ್ಯ ಕಲಬುರಗಿ ಜಿಲ್ಲಾ ಕೊರ್ಟ ಆವರಣದಲ್ಲಿ ಇರುವಾಗ ನನ್ನ ಮೊಬೈಲ್ ನಂ. 9972449943 ಗೆ ಈ ವೈಯಕ್ತಿಕ ಮೊಬೈಲ್ 9922288466 ರಿಂದ ಕರೆ ಬಂದಿರುತ್ತದೆ. ಇವನು ವಾರ್ಕಲೆ ಅರವಿಂದ ಎಂದು ಹೇಳಿ ಬೊಸಡಿ ಮಗನೆ ನಮಗೆ ಕೇಸ್ ಹಾಕಿ ನೋಟಿಸ್ ಕಳುಹಿಸುತ್ತಿ ಏನು? ಇನ್ನೊಮ್ಮೆ ನೋಟಿಸ್ ಬಂದರೆ ನಿನ್ನ ನೋಡ್ಕೊತಿನಿ ಬಾ ನೀನು ತಹಸೀಲ್ ಕಛೇರಿ ಬಂದರೆ ನಿನ್ನ ತಲೆ ಒಡೆದು ಹಾಕಿ ಮುಗಿಸುತ್ತೆನೆ ಎಂದು ಬೆದರಿಕೆ ಹಾಕಿರುತ್ತಾರೆ. ನಾನು ಕೆಲಸ ನಮೀತ್ಯ ನಮ್ಮ ಊರಿಗೆ ಹೋಗಿ ಇಂದು ಬಂದು ದೂರು ಸಲ್ಲಿಸುತ್ತಿದ್ದೆನೆ. ಈ ವ್ಯಕ್ತಿಯು ರಾಜಕೀಯ ಮತ್ತು ಆರ್ಥಿಕವಾಗಿ ಪ್ರಭಲನಾಗಿದ್ದು ಇವನಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಬಂದಿರುವದರಿಂದ ಇವನ ವಿರುದ್ದ ಸೂಕ್ತ ಕೇಸ್ ನ್ನು ಹಾಕಿ ಕಾನೂನು ಕ್ರಮ ಕೈಕೊಳ್ಳಬೇಕೆಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ ೩೦-೦೬-೨೦೨೨ ರಂದು ರಾತ್ರಿ ೮:೦೦ ಪಿ.ಎಮ್ ದಿಂದ ದಿನಾಂಕ ೦೧-೦೭-೨೦೨೨ ರಂದು ಬೆಳಿಗ್ಗೆ ೬:೩೦ ಗಂಟೆಯ ಮಧ್ಯದ ಅವಧಿಯಲ್ಲಿ  ಕಲಬುರಗಿಯಲ್ಲಿ ಅವನು ವಾಸವಿರುವ ಸಾಯಿಮಂದಿರ ಹತ್ತಿರ ಇರುವ ಆನಂದೇಶ್ವರ ನಗರಕ್ಕೆ ಅವನ ರೂಮಿಗೆ ಬಂದು ರಾತ್ರಿ ಹೋರಗಡೆ ಮೋಟರ ಸೈಕಲ ನಿಲ್ಲಿಸಿ ನಾವು ಊಟ ಮಾಡಿಕೊಂಡು ಮಲಗಿಕೊಂಡಿರುತ್ತೆವೆ. ದಿನಾಂಕ ೦೧-೦೭-೨೦೨೨ ರಂದು ಬೆಳಿಗ್ಗೆ ೬:೩೦ ಗಂಟೆಗೆ ಎದ್ದು ನೋಡಲು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟರ ಸೈಕಲ ಇರಲಿಲ್ಲ, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ದೂರು ಇರುತ್ತದೆ.ದಿನಾಂಕ ೨೪-೦೬-೨೦೨೨ ರಂದು ೧೦.೩೦ ಗಂಟೆಯಿಂದ ೫.೩೦ ಗಂಟೆ ಮಧ್ಯದ ಅವಧಿಯಲ್ಲಿ ಸದರಿ ಆರೋಪಿಯು ಅಂಕಪಟ್ಟಿಯನ್ನು ದೂರುಪಯೋಗ ಪಡಿಸಿಕೊಂಡು ಇಲಾಖೆಗೆ ವಂಚನೆ ಮಾಡಿದ ಬಗ್ಗೆ ಅಪರಾಧ ಇರುತ್ತದೆ.

ಇತ್ತೀಚಿನ ನವೀಕರಣ​ : 17-07-2022 07:31 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080