ಅಭಿಪ್ರಾಯ / ಸಲಹೆಗಳು

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ: 07-03-2023 ರಂದು 10:00 ಪಿಎಮ್‌ಕ್ಕೆ ಖಚಿತ ಬಾತ್ಮಿ ಮೇರೆಗೆ ಫಿರ್ಯಾದಿ ಮತ್ತು ಠಾಣಾ ಸಿಬ್ಬಂದಿಯವರೊಂದಿಗೆ ಹುಮನಾಬಾದ ರಿಂಗ್ ರೋಡಲ್ಲಿ ದಾಳಿ ಮಾಡಿ 35 ಕ್ವಿಂಟಾಲ ಪಡಿತರ ಅಕ್ಕಿ ಹಾಗು ಅ;ಕಿ 88,500/- ರೂ ಹಾಗೂ ವಾಹನ ಸಂ. ಎಮ್.ಎಚ್ 13 ಸಿಯು 5441 ಅ:ಕಿ: 1,50,000/- ರೂ ಒಟ್ಟು 2,38,500/-ರೂ ಮುದ್ದೆಮಾಲು ಮತ್ತು ಒಬ್ಬ ಆರೋಪಿತನನ್ನು ಪಂಚರ ಸಮಕ್ಷಮ ಮುದ್ದೆಮಾಲನ್ನು ಜಪ್ತಿ ಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ: 07-03-2023 ರಂದು 12:30 ಪಿಎಮ್ ಸುಮಾರಿಗೆ  ಫಿರ್ಯಾದಿಗೆ ಖಚಿತ ಬಾತ್ಮಿ ಮೇರೆಗೆ ಸಿಬ್ಬಂದಿ ಹಾಗೂ ಇಬ್ಬರು ಪಂಚರ ಸಮಕ್ಷಮ ದಾಳಿ ಮಾಡಿ  ಒಟ್ಟು 63,367/- ರೂ ಬೆಲೆಯುಳ್ಳ  ಮದ್ಯದ ಬಾಟಲಿಗಳು / ಪಾಕೇಟಗಳು  ಮತ್ತು ನಗದು ಹಣ ಒಟ್ಟು 27,800/- ರೂ ಹಾಗೂ ಇಬ್ಬರು ಆರೋಪಿಗಳನ್ನು ಠಾಣೆಗೆ ತಂದು ಹಾಜರುಪಡಿಸಿ ದೂರು ದಾಖಲಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ: 07-03-2023 ರಂದು 02:00 ಪಿಎಮ್‌ಕ್ಕೆ ಖಚಿತ ಬಾತ್ಮಿ ಮೇರೆಗೆ ಫಿರ್ಯಾದಿ ಮತ್ತು ಸಿಬ್ಬಂದಿ ಹಾಗೂ ಇಬ್ಬರೂ ಪಂಚರ ಸಮಕ್ಷಮ ದಾಳಿ ಮಾಡಿ 1] ಓರಿಜಿನಲ್ ಚೋಯ್ಸ್ 90 ಎಮ್.ಎಲ್ 82 ಪಾಕೇಟಗಳು     2] ಕಿಂಗ್ ಫಿಶರ್ ಸ್ಟ್ರಾಂಗ್ ಬೀಯರ್ 650 ಎಮ್.ಎಲ್ 10 ಬಾಟಲಗಳನ್ನು ಜಪ್ತಿಪಡಿಸಿಕೊಂಡು  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ: 07-03-2023 ರಂದು 02:00 ಪಿಎಮ್‌ಕ್ಕೆ ಖಚಿತ ಬಾತ್ಮಿ ಮೇರೆಗೆ ಫಿರ್ಯಾದಿ ಮತ್ತು ಸಿಬ್ಬಂದಿ ಹಾಗೂ ಇಬ್ಬರೂ ಪಂಚರ ಸಮಕ್ಷಮ ದಾಳಿ ಮಾಡಿ 1] ಓರಿಜಿನಲ್ ಚೋಯ್ಸ್ 90 ಎಮ್.ಎಲ್ 88 ಪಾಕೇಟಗಳು 2] ಕಿಂಗ್ ಫಿಶರ್ ಸ್ಟ್ರಾಂಗ್ ಬೀಯರ್ 650 ಎಮ್.ಎಲ್ 09 ಬಾಟಲಗಳನ್ನು ಜಪ್ತಿಪಡಿಸಿಕೊಂಡು  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ: 07-03-2023 ರಂದು 06:00 ಪಿಎಮ್‌ಕ್ಕೆ ಖಚಿತ ಬಾತ್ಮಿ ಮೇರೆಗೆ ಫಿರ್ಯಾದಿ ಮತ್ತು ಸಿಬ್ಬಂದಿ ಹಾಗೂ ಇಬ್ಬರೂ ಪಂಚರ ಸಮಕ್ಷಮ ದಾಳಿ ಮಾಡಿ 1] ಓರಿಜಿನಲ್ ಚೋಯ್ಸ್ 90 ಎಮ್.ಎಲ್ 83 ಪಾಕೇಟಗಳು  2] ಕಿಂಗ್ ಫಿಶರ್ ಸ್ಟ್ರಾಂಗ್ ಟಿನ್ ಬೀಯರ್ 330 ಎಮ್.ಎಲ್ 12 ಟಿನ್ ಗಳನ್ನು  ಜಪ್ತಿಪಡಿಸಿಕೊಂಡು  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸ್ಟೇಷನ್‌ ಬಜಾರ ಪೊಲೀಸ ಠಾಣೆ :- ದಿನಾಂಕ: 02-11-2022 ರಂದು ನನ್ನ ಹೆಸರಿನಲ್ಲಿರುವ HONDA DIO REG NO KA-32-EN-2928,CHASIS NO-ME4JF399HGUO44629, ENG NO-JF39EU1055933, COLOUR –BLACK ,MODEL- 2016, VALUVE-20000/- ದ್ವಿ-ಚಕ್ರ ವಾಹನವನ್ನು ನನ್ನ ಅಣ್ಣ ಸಿದ್ದಾರ್ಥ ರವರು ತೆಗೆದುಕೊಂಡು ಹೋಗಿ ಸಂಜೆ 07:00 ಗಂಟೆಯಲ್ಲಿ ಏಷಯನ್ ವ್ಯಾಪಾರ ಕೇಂದ್ರದ ಎದುರುಗಡೆ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ. ಏಷಯನ್ ವ್ಯಾಪಾರ ಕೇಂದ್ರದ ಒಳಹಡೆ ಹೋಗಿರುತ್ತಾನೆ. ನಂತರ ಸಂಜೆ 07:30 ಗಂಟೆಗೆ ಬಂದು ನೋಡಿದಾಗ ಸದರಿ ಸ್ಥಳದಲ್ಲಿ ನಿಲ್ಲಿಸಿದ್ದ ನನ್ನ ವಾಹನ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ-2 :- ದಿನಾಂಕ: 07-03-2023 ರಂದು ಮದ್ಯಾಹ್ನ 1-00 ಗಂಟೆಗೆ ಶ್ರೀ ನರಸಿಂಹಲು ತಂದೆ ಸಾಹಿಲು ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ನಿನ್ನೆ ದಿನಾಂಕ: 06-03-2023 ರಂದು ರಾತ್ರಿ ಸಮಯದಲ್ಲಿ ನಾನು ಚಲಾಯಿಸುತ್ತೀರುವ ಕಾರ ಟಿಪಿ ನಂಬರ ಟಿ.ಎಸ್-07,ಸಿಜೆ/ಟಿಆರ್-7856 ನೇದ್ದರಲ್ಲಿ ನನಗೆ ಪರಿಚಯದ ಅಶೋಕ ತಂದೆ ಶಂಕ್ರಯ್ಯಾ ಸುಪಾಲ, ಮಹೇಶ ತಂದೆ ನರಸಿಂಹಲು, ಸಾಯಿಕಿರಣ ತಂದೆ ಈಶ್ವರಯ್ಯಾ ಕೊಟೆ, ರಾಘವೇಂದ್ರ ತಂದೆ ರಾಮುಲು ಚಿಂತಾ ಹಾಗೂ ಶಂಕ್ರೇಯ್ಯಾ ತಂದೆ ಮಲ್ಲಯ್ಯಾ ರವರನ್ನು ಸಂಗಾರೆಡ್ಡಿಯಿಂದ ಕೂಡಿಸಿಕೊಂಡು ಕಲಬುರಗಿ ಜಿಲ್ಲೆಯ ಗಾಣಗಾಪೂರ ಶ್ರೀ ದತ್ತಾತ್ರೆಯ ದೇವರ ದರ್ಶನ ಕುರಿತು ಮದ್ಯ ರಾತ್ರಿ ಬಂದು ಇಂದು ದಿನಾಂಕ: 07-03-2023 ರಂದು ಬೆಳಿಗ್ಗೆ ದರ್ಶನ ಮಾಡಿಕೊಂಡು ವಾಪಸ್ಸ ಸಂಗಾರೆಡ್ಡಿಗೆ ಗಾಣಗಾಪೂರ ದೇವಸ್ಥಾನದಿಂದ ನಾನು ಚಲಾಯಿಸುತ್ತೀರುವ ಕಾರಿನಲ್ಲಿ ಮೇಲಿನ ಎಲ್ಲರನ್ನು ಕೂಡಿಸಿಕೊಂಡು ಗೊಬ್ಬರ (ಬಿ) ಗ್ರಾಮದ ಮುಖಾಂತರ ಕಲಬುರಗಿ ಕಡೆಗೆ ಬರುವಾಗ ದಾರಿ ಮದ್ಯ ಕಲಬುರಗಿ ನಗರದ ಸಮೀಪ ಬರುವ ಶರಣ ಸಿರಸಗಿ ಗ್ರಾಮದ ಮಡ್ಡಿ ಹತ್ತೀರ ರೋಡ ಮೇಲೆ ಒಬ್ಬ ಲಾರಿ ಚಾಲಕನು ಕಲಬುರಗಿ ಕಡೆಯಿಂದ ಅಫಜಲಪೂರ ಕಡೆಗೆ ಹೋಗುವ ಕುರಿತು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನಮ್ಮ ಕಾರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದನು. ನಮ್ಮ ಕಾರ ಪಲ್ಟಿಯಾಗಿ ರೋಡ ಪಕ್ಕದಲ್ಲಿ ಬಿದ್ದಿತ್ತು. ಆಗ ನಾನು ಮತ್ತು ಶಂಕ್ರೇಯ್ಯಾ ರಾಘವೇಂದ್ರ ರವರು ಕಾರಿನಿಂದ ಹೊರಗಡೆ ಬಂದು ಕಾರಿನಿಂದ ಸಾಯಿ ಕಿರಣ, ಮಹೇಶ, ಅಶೋಕ ರವರನ್ನು ಹೊರಗಡೆ ತಂದು ರೋಡ ಪಕ್ಕದಲ್ಲಿ ಕೂಡಿಸಿ ನಮ್ಮ ಕಾರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಲಾರಿ ನಂಬರ ನೋಡಲು ಕೆಎ-32/ಡಿ-3607 ಇದ್ದಿತ್ತು. ಅದರ ಚಾಲಕನ ಹೆಸರು ಮಾಳಪ್ಪಾ ಅಂತಾ ಗೋತ್ತಾಯಿತು ಸದರಿಯವನು ನಮ್ಮ ಹತ್ತೀರ ಬಂದನು ಸದರಿ ಘಟನೆ ಜರುಗಿದಾಗ ಬೆಳಿಗ್ಗೆ ಅಂದಾಜು 9-00 ಗಂಟೆ ಸಮಯವಾಗಿತ್ತು. ಸದರಿ ಘಟನೆಯಿಂದ ನನ್ನ ಬಲ ಭುಜಕ್ಕೆ ಗುಪ್ತಪೆಟ್ಟು ಅಶೋಕ ಇತನ ಎಡ ಭುಜಕ್ಕೆ ರಕ್ತಗಾಯ, ಎಡಗೈ ಮುಂಗೈ ಹತ್ತೀರ ರಕ್ತಗಾಯ ಹಾಗೂ ಮೈಯಲ್ಲಾ ಒಳಪೆಟ್ಟು, ಮಹೇಶ ಇತನ ನಡು ಹಣೆಗೆ ರಕ್ತಗಾಯ, ಸಾಯಿ ಕಿರಣ ಇತನ ಎಡಗೈ ಮುಂಗೈ ಹತ್ತೀರ ರಕ್ತಗಾಯ, ಬಲಗಾಲು ಮೊಳಕಾಲ ಕೆಳೆಗೆ ಗುಪ್ತಪೆಟ್ಟು  ಹಾಗೂ ಎಡ ಕಣ್ಣಿನ ಕೆಳೆಗೆ ತರಚಿದಗಾಯ, ರಾಘವೇಂದ್ರ ಇತನ ಎಡ ಎದೆಗೆ ಗುಪ್ತಪೆಟ್ಟು ಶಂಕ್ರೇಯ್ಯಾ ಇತನ ಬಲ ಗಲ್ಲದ ಮೇಲೆ ತರಚಿದಗಾಯವಾಗಿತ್ತು. ಘಟನೆ ಸ್ಥಳಕ್ಕೆ ಅಂಬುಲೇನ್ಸ ವಾಹನ ಬಂದಾಗ ನಾವೆಲ್ಲರೂ ಅದರಲ್ಲಿ ಕುಳಿತು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ಬಂದು ಹೊರ ರೋಗಿಯಾಗಿ ಉಪಚಾರ ಮಾಡಿಕೊಂಡು ನಾನು ಠಾಣೆಗೆ ಬಂದಿರುತ್ತೇನೆ. ನಮಗೆ ಗಾಯಗೊಳಿಸಿದ್ದು ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ದೂರು ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ-1 :- ದಿನಾಂಕ: 07-03-2023 ರಂದು ಮದ್ಯಾಹ್ನ 02:15 ಪಿ.ಎಂ ಕ್ಕೆ  ಶ್ರೀ. ಭೈರವಸಿಂಗ್ ತಂದೆ ಶುಭಕರಣಸಿಂಗ್ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿ ಸಹಿ ಮಾಡಿದ ಫಿರ್ಯಾದಿ ಅರ್ಜಿಯನ್ನು ಹಾಜರುಪಡಿಸಿದ್ದು ಸದರಿ ಫಿರ್ಯಾದಿ ಅರ್ಜಿ ಸಾರಾಂಶವೇನೆಂದರೆ ನಾನು ಭೈರವಸಿಂಗ್ ತಂದೆ ಶುಭಕರಣಸಿಂಗ್ ವಯ:25 ವರ್ಷ ಜಾ:ರಜಪೂತ ಉ:ಟ್ರಾನ್ಸಪೋರ್ಟರ್ ಕೆಲಸ ಸಾ: ಚಲ್ಕೋಯಿ, ತಾ: ತಾರಾನಗರ ಜಿ: ಚುರು, ರಾಜಸ್ಥಾನ ರಾಜ್ಯ ಇದ್ದು ಈ ಮೂಲಕ ನಾನು ದೂರು ಸಲ್ಲಿಸುವದೇನೆಂದರೆ ದಿನಾಂಕ: 05-03-2023 ರಂದು ಸಾಯಂಕಾಲ ಕರ್ನೂಲಿನ ಶ್ರೀ ರಾಯಲಸೀಮಾ ಹೈ-ಸ್ಟ್ರೇಂತ್ ಹೈಪೊ ಲಿಮಿಟೇಡ್ ಕಂಪನಿಯಿಂದ ನಮ್ಮ ಅಶ್ವಿನಿ ಲಾಜಿಸ್ಟೀಕ್ಸ್ ಟ್ರಾನ್ಸಪೋರ್ಟರ್ ನ ಲಾರಿ ಕಂಟೇನರ್ ಎಮ್.ಹೆಚ್-43/ಬಿ.ಎಕ್ಸ್-4346( ಕಂಟೇನರ್ ನಂಬರ ಅಗಐಗ6209993 ) ನೇದ್ದರಲ್ಲಿ ಬ್ಲಿಚಿಂಗ್ ಪೌಡರ್ ತುಂಬಿಕೊಂಡು ಮುಂಬೈಗೆ ಹೋಗುವ ಕುರಿತು ನಾನು ಮತ್ತು ನಮ್ಮ ವಾಹನದ ಚಾಲಕ ಗುಲಾಬ್ ಮೌರ್ಯ ಸೇರಿ ಇಬ್ಬರು ಸೇರಿ ಸದರಿ ವಾಹನವನ್ನು ಚಾಲು ಮಾಡಿಕೊಂಡು ಕಲಬುರಗಿ ಹೈಕೊರ್ಟ ದಾಟಿ ಹೋಗುವಾಗ ನಮ್ಮ ಕಂಟೇನರ ಚಾಲಕ ಗುಲಾಬ್ ಇತನು ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದನು ನಾನು ಆತನಿಗೆ ನಿಧಾನವಾಗಿ ಚಲಾಯಿಸುವಂತೆ ಹೇಳಿದರೂ ಸಹ ಅದೇ ವೇಗದಲ್ಲಿ ಚಲಾಯಿಸಿ ವಾಹನವನ್ನು ನಿಯಂತ್ರಿಸಲು ಆಗದೇ ನಿನ್ನೆ ದಿನಾಂಕ: 06-03-2023 ರಂದು ನಸುಕಿನ ಜಾವ 05:30 ಗಂಟೆಗೆ  ಕೊಳ್ಳೂರು ಸಿಮೇಯಲ್ಲಿ ರಸ್ತೆಯ ಮೇಲೆ ಓಮ್ಮೇಲೆ ಬಲಕ್ಕೆ ಕಟ್ ಹೋಡೆದು ವಾಹನವನ್ನು ರಸ್ತೆಯ ಬಲಭಾಗದಲ್ಲಿ ಪಲ್ಟಿ ಮಾಡಿದನು. ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿ ಗಾಯಗೊಳಿಸಿದ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೆಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಎಂ.ಬಿ. ನಗರ ಪೊಲೀಸ ಠಾಣೆ :- ದಿನಾಂಕ: 07-03-2023 ರಂದು 07:00 ಗಂಟೆ ಸುಮಾರಿಗೆ ಆರೋಪಿತನು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಹಿಡಿದು 1] 180 ML Orginalc choice 94 Tetra pccket value about 6580/- 2] 90 ML,192 Orginanal choice tetrapacket value about 9205/- ಒಟ್ಟು 15785 ರೂ ಕಿಮ್ಮತ್ತಿನ ಸರಾಯಿಯನ್ನು ಜಪ್ತಿಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಫರಹತಾಬಾದ ಪೊಲೀಸ ಠಾಣೆ :- ದಿನಾಂಕ: 07-03-2023  ರಂದು ಸಾಯಂಕಾಲ ೭.೧೫ ಗಂಟೆಯ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಫರಹತಾಬಾದ ಗ್ರಾಮದ ಬಸ ನಿಲ್ದಾಣದ ದುರ್ಗಾ ದಾಬಾ ಎದುರುಗಡೆ  ಸಾರ್ವಜನಿಕ ಸ್ಥಳದಲ್ಲಿ ನಾಲ್ಕು ವ್ಯಕ್ತಿಗಳು ಅಕ್ರಮವಾಗ ಸರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ತಕ್ಷಣ ಇಬ್ಬರು ಪಂಚ ಜನರಾದ ೧) ಶ್ರೀ. ದೀಪಕ ತಂದೆ ಶ್ರೀಮಂತ  ಹರಸೂರೆ ವಃ ೩೬ ವರ್ಷ ಜಾಃ ಹೊಲೆಯ ಉಃ ಕೂಲಿ ಕೆಲಸ ಸಾಃ ಫರಹತಾಬಾದ ಗ್ರಾಮ ತಾ.ಜಿಃ ಕಲಬುರಗಿ ೨) ಶ್ರೀ. ಪ್ರವಿಣ ತಂದೆ ರವಿಕುಮಾರ ಹತ್ತಿ ವ: ೧೯ ವರ್ಷ ಜಾಃ ಹೊಲೆಯ  ಉಃ ಕೂಲಿ ಕೆಲಸ  ಸಾಃ ಫರಹತಾಬಾದ ಗ್ರಾಮ ತಾಜಿ: ಕಲಬುರಗಿ ಇವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಜಪ್ತಿ ಪಂಚನಾಮೆ ಬರೆದುಕೊಡಲು ಒಪ್ಪಿಗೆ ಪಡೆದು ಠಾಣಾ ಸಿಬ್ಬಂದಿ ಜನರಾದ ಶ್ರೀ ಗಡ್ಡೆಪ್ಪ ಹೆಚ್‌ಸಿ-೧೩೮, ರೇವಣಸಿದ್ದ ಹೆಚ್‌ಸಿ-೧೩೦, ಪಾಂಡುರAಗ ಪಿಸಿ:೧೬೪, ದುರ್ಗೇಶ ಪಿಸಿ:೨೨೨ ರವರನ್ನು ಸಂಗಡ ಕರೆದುಕೊಂಡು ನಾವೇಲ್ಲರೂ ಕೂಡಿ ಇಂದೆ ೭.೩೦ ಪಿ.ಎಮಕ್ಕೆ ಠಾಣೆಯಿಂದ  ಸರ್ಕಾರಿ  ಜೀಪನಲ್ಲಿ ಕುಳಿತು ಹೊರಟು ೭.೩೫ ಪಿ.ಎಮಕ್ಕೆ ಫರಹತಾಬಾದ ಗ್ರಾಮದ ಬಾತ್ಮಿ ಇದ್ದ ಸ್ಥಳದ ಹತ್ತಿರ ಸ್ವಲ್ಪ ದೂರದಲ್ಲಿ ಹೋಗಿ ಜೀಪ ನಿಲ್ಲಿಸಿ ನಾವೆಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಫರಹತಾಬಾದ ಬಸ್ ಸ್ಟಾö್ಯಂಡ ಸಮೀಪ ಇರುವ ದುರ್ಗಾ ದಾಬಾದ ಮುಂದುಗಡೆ ಸಾರ್ವಜನಿಕ ಸ್ಥಳದ ಲೈಟಿನ ಕಂಬದ ಬೆಳಕಿನಲ್ಲಿ ನಾಲ್ಕು ವ್ಯಕ್ತಿಗಳು ಕುಳಿತುಕೊಂಡು ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ತನ್ನ ಹತ್ತಿರ ಇದ್ದ ಚೀಲದಿಂದ ಸರಾಯಿ ಬಾಟಲಗಳನ್ನು ತೆಗೆದು ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಇಂದೇ ೭.೪೫ ಪಿ.ಎಮಕ್ಕೆ ನಾನು ಸಿಬ್ಬಂದಿ ಜನರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಮದ್ಯ ಮಾರಾಟ ಮಾಡುತ್ತಿದ್ದ ನಾಲ್ಕು ಜನರನ್ನು ಸೆರೆ ಹಿಡಿದುಕೊಂಡಿದ್ದು, ಗಿರಾಕಿಗಳು ಓಡಿ ಹೋಗಿದ್ದು. ನಂತರ ಸಾರಾಯಿ ಮಾರುತ್ತಿದ್ದವರ ಹೆಸರು ವಿಚಾರಿಸಲಾಗಿ ೧) ಸೂರಜ ತಂದೆ ತೇಜು ರಾಠೋಡ ವಯ||೨೬ ವರ್ಷ ಉ||ಕೂಲಿ ಕೆಲಸ ಜಾ||ಲಂಬಾಣಿ ಸಾ||ಕಡಣಿ ತಾಂಡಾ ತಾಜಿ|| ಕಲಬುರಗಿ ೨) ಯಮನೇಶ ತಂದೆ ಬಾಬುರಾವ ಕೋಡಿ ವಃ ೨೦ ವರ್ಷ ಜಾಃ ಕಬ್ಬಲಿಗ ಉಃ ಕೂಲಿಕೆಲಸ ಸಾ|| ಇಟಗಾ(ಕೆ) ೩) ಪಿಂಟು ತಂದೆ ತಿಪ್ಪಯ್ಯ ಗುತ್ತೆದಾರ  ವಃ ೧೯ ವರ್ಷ ಜಾಃ ಇಡಿಗ ಉಃ ಕೂಲಿಕೆಲಸ ಸಾಃ ಹರಸೂರ ತಾಃ ಚಿತ್ತಾಪೂರ ೪) ಮಲ್ಲಿಕಾರ್ಜುನ ತಂದೆ ತಿಪ್ಪಣ್ಣ ಪೂಜಾರಿ ವಯ||೨೨ ವರ್ಷ ಜಾ||ಕುರುಬ ಉ||ಕೂಲಿ ಕೆಲಸ ಸಾ||ಫರಹತಾಬಾದ ತಾಜಿ||ಕಲಬುರಗಿ ಅಂತಾ ತಿಳಿಸಿದರು. ಸದರಿಯವರ ವಶದಲ್ಲಿದ್ದ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ ೧) ೧೮೦ ಎಮ್.ಎಲ್ ನ ಇಂಪೆರಿಯಲ್ ಬ್ಲೂ ಹೆಸರಿನ ೧೬ ಬಾಟಲಗಳು, ಒಂದರ ಕಿಮ್ಮತ್ತು ೨೨೦/- ರೂ (೧೬*೨೨೦=೩೫೨೦), ೨) ೧೮೦ ಎಮ್‌ಎಲ್ ನ, ಎಮ್‌ಸಿ ಡೊವೆಲ್ ನಂ ೧ ಓರಿಜಿನಲ್ ಹೆಸರಿನ ೫ ಬಾಟಲಗಳು ಒಂದರ ಕಿಮ್ಮತ್ತು ೨೨೦/- (೫*೨೨೦= ೧೧೦೦), ೩) ೯೦ ಎಮ್‌ಎಲ್‌ನ ಇಂಪೇರಲ್ ಬ್ಲೂ ಹೆಸರಿನ ೭ ಬಾಟಲಗಳು ಒಂದರ ಕಿಮ್ಮತ್ತು ೧೧೦/- (೭*೧೧೦=೭೭೦), ೪) ೧೮೦ ಎಮ್‌ಎಲ್ ನ ಎಮ್‌ಸಿ ಡೊವೆಲ್ಸ ರಮ್ ಹೆಸರಿನ ೨೬ ಟೆಟ್ರಾಪ್ಯಾಕೇಟಗಳು ಒಂದರ ಕಿಮ್ಮತ್ತು ೧೩೭/- ರೂ (೨೬*೧೩೭=೩೫೬೨), ೫) ೧೮೦ ಎಮ್‌ಎಲ್‌ನ ಬ್ಯಾಗಪೇಪರ ವಿಸ್ಕಿ ಹೆಸರಿನ ೮ ಟೆಟ್ರಾಪ್ಯಾಕೇಟಗಳು ಒಂದರ ಕಿಮ್ಮತ್ತು ೧೦೬/- ರೂ (೮*೧೦೬=೮೪೮) ೬) ೧೮೦ ಎಮ್‌ಎಲ್‌ನ ಓರಿಜಿನಲ್ ಚೈಸ್ ಹೆಸರಿನ ೨೬ ಟೆಟ್ರಾಪ್ಯಾಕೇಟಗಳು ಒಂದರ ಕಿಮ್ಮತ್ತು ೭೦/- ರೂ (೨೬*೭೦=೧೮೨೦) ೭) ೧೮೦ ಎಮ್‌ಎಲ್‌ನ ಆಪೀಸರ್ ಚೋಯಿಸ್ ಹೆಸರಿನ ೨೧ ಟೆಟ್ರಾಪ್ಯಾಕೇಟಗಳು ಒಂದರ ಕಿಮ್ಮತ್ತು ೧೦೬/- ರೂ (೨೧*೧೦೬=೨೨೨೬) ೮) ೯೦ ಎಮ್‌ಎಲ್‌ನ ಓರಿಜಿನಲ್ ಚೋಯಿಸ್ ಹೆಸರಿನ ೨೦ ಟೆಟ್ರಾಪ್ಯಾಕೇಟಗಳು ಒಂದರ ಕಿಮ್ಮತ್ತು ೩೫/- ರೂ (೨೦*೩೫=೭೦೦) ಒಟ್ಟು ಅಂದಾಜು ಕಿಮ್ಮತ್ತು ೧೪,೫೪೬/- ರೂ ಇದ್ದವು ನಂತರ ಸದರಿಯವರ ಮದ್ಯ ಮಾರಾಟ ಮಾಡುವ ಬಗ್ಗೆ ದಾಖಲಾತಿಗಳ ಇರುವ ಬಗ್ಗೆ ವಿಚಾರ ಮಾಡಲು ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತಾ ತಿಳಿಸಿದ್ದು. ನಂತರ ಅವರ ಅಂಗಶೋಧನೆ ಮಾಡಲು ಸೂರಜ ರಾಠೋಡ ಇತನ ಹತ್ತಿರ ಮದ್ಯ ಮಾರಾಟ ಮಾಡಿದ ನಗದು ಹಣ ೩೨೦/-ರೂ ಸಿಕ್ಕಿದ್ದು. ನಂತರ ಸದರಿ ಮದ್ಯದ ಬಾಟಲ ಮತ್ತು ಟೆಟ್ರಾಪ್ಯಾಕಗಳನ್ನು ೮ ಪ್ರತ್ಯೇಕವಾಗಿ ರಟ್ಟಿನ ಬಾಕ್ಸನಲ್ಲಿ ಹಾಕಿ ರಾಸಾಯನಿಕ ಪರೀಕ್ಷೆ ಕುರಿತು ಒಂದು ಬಿಳಿ ಬಟ್ಟೆಯನ್ನು ಸುತ್ತಿ ಹೊಲೆದು ಎಫ್ ಅಂತಾ ಇಂಗ್ಲೀಷ ಅಕ್ಷರದಿಂದ ಕೆಂಪು ಬಣ್ಣದ ಅರಗಿನಿಂದ ಶೀಲ್ ಮಾಡಿ ತೆಗೆದುಕೊಂಡಿದ್ದು. ಒಟ್ಟು ೧೪೫೪೬/- ರೂಪಾಯಿ ಕಿಮ್ಮತ್ತಿನ ಮದ್ಯದ ಬಾಟಲಗಳು ಮತ್ತು ಟೆಟ್ರಾಪ್ಯಾಕೇಟಗಳು ಹಾಗೂ ನಗದು ಹಣ ೩೨೦/- ರೂ ನೆದ್ದವುಗಳನ್ನು ಕೇಸಿನ ಮುಂದಿನ ಪರಾವೆ ಕುರಿತು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ್‌ ಠಾಣೆ :- ನಾನು ಗಣಪತಿ ಎ.ಎಸ್.ಐ. ಚೌಕ ಪೊಲೀಸ  ಕಲಬುರಗಿ ನಗರ ಈ ಮೂಲಕ ಸರ್ಕಾರಿ ತರ್ಫೆ ದೂರು  ಸಲ್ಲಿಸುವುದೇನಂದರೆ, ಇಂದು ದಿನಾಂಕ ೦೭-೦೩-೨೦೨೩ ರಂದು ಮಧ್ಯಾಹ್ನ ೪-೩೦ ಗಂಟೆಗೆ ನಾನು ಹೋಳಿ ಹಬ್ಬದ ನಿಮಿತ್ಯ ಏರಿಯಾದಲ್ಲಿ ಪೆಟ್ರೋಲಿಂಗ ಕರ್ತವ್ಯ ನಿರ್ವಹಿಸುತ್ತಾ ಚೌಕ ಸರ್ಕಲಕ್ಕೆ ಬಂದಾಗ ನನಗೆ ಖಚಿತವಾದ ಬಾತ್ಮಿ ಬಂದಿದ್ದೆನೆಂದೆರೆ, ನಮ್ಮ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ನಗರ ಶೇಖ ರೋಜಾ ಜುನೈದಿ ಕಾಲನಿಯಲ್ಲಿ ದರ್ಗಾದ ಹಿಂದುಗಡೆ ಇರುವ ಖುಲ್ಲಾ ಜಾಗೆಯಲ್ಲಿ ಅಕ್ರಮವಾಗಿ ಅಂದರ ಬಾಹರ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಈ ವಿಷಯ ನಮ್ಮ ಮೇಲಾಧಿಕಾರಿಯವರಿಗೆ ಮಾಹಿತಿ ತಿಳಿಸಿ, ನಮ್ಮ ಠಾಣೆಯ ಸಿಬ್ಬಂದಿಯವರಾದ ಸಿಹೆಚಸಿ ೨೨೨ ಸಿದ್ರಾಮಯ್ಯ, ಸಿಪಿಸಿ ೨೮೯ ಯಮನೂರ, ಫಿರೋಜ ಸಿಪಿಸಿ ೩೧೩, ಮೋಸಿನ ಸಿಪಿಸಿ ೨೮೫, ಸುರೇಶ, ಸಿಪಿಸಿ ೧೩೦,  ಅಶೋಕ ಸಿಪಿಸಿ ೦೬ ಇವರುಗಳು ಮತ್ತು ಇಬ್ಬರು  ಪಂಚರಾದ ೧) ಶ್ರೀ ತಯ್ಯಾಬ ತಂದೆ ಮಹೆಬೂಬಸಾಬ ಶೇಖ ವ:೩೯ ವರ್ಷ ಉ:ಹೂವಿನ ವ್ಯಾಪರ ಜಾತಿ ಮುಸ್ಲಿಂ ಸಾ: ಆಳಂದ ಕಾಲನಿ ಚಿಂಚೋಳಿ ಲೇಔಟ್ ಕಲಬುರಗಿ ೨) ಶ್ರೀ ಅಕ್ಬರ ತಂದೆ ಮೋದಿನ ಸಾಬ ಮುಲ್ಲಾ ವ: ೪೨ ವರ್ಷ ಉ:ಕೂಲಿ ಕೆಲಸ ಜಾತಿ ಮುಸ್ಲಿಂ ಸಾ; ಹುಸೇನಿ ನಗರ ಶೇಖ ರೋಜಾ ಕಲಬುರಗಿ ಇವರುಗಳನ್ನು ಸಂಜೆ ೦೪-೫೫ ಗಂಟೆಗೆ ಚೌಕ ಸರ್ಕಲಕ್ಕೆ ಬರಮಾಡಿಕೊಂಡು, ಪಂಚರಿಗೆ ನಮ್ಮ ಸಿಬ್ಬಂದಿಯವರನ್ನು ಪರಿಚಯಿಸಿ, ಅವರೆಲ್ಲರಿಗೆ ಈ ಮೇಲಿನ ಬಾತ್ಮಿ ವಿಷಯ ತಿಳಿಸಿ, ಪಂಚರಿಗೆ ನಾವು ಮಾಡುವ  ದಾಳಿ ಪಂಚನಾಮೆ ಸಹಕರಿಸಲು ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ನಾನು, ಪಂಚರು, ಮತ್ತು ನಮ್ಮ ಠಾಣಾ ಸಿಬ್ಬಂದಿಯವರಾದ ಸಿಹೆಚಸಿ ೨೨೨ ಸಿದ್ರಾಮಯ್ಯ, ಸಿಪಿಸಿ ೨೮೯ ಯಮನೂರ, ಫಿರೋಜ ಸಿಪಿಸಿ ೩೧೩, ಮೋಸಿನ ಸಿಪಿಸಿ ೨೮೫, ಸುರೇಶ, ಸಿಪಿಸಿ ೧೩೦, ಅಶೋಕ ಸಿಪಿಸಿ ೦೬  ರವರು ಕೂಡಿಕೊಂಡು ಎಲ್ಲರೂ ತಮ್ಮ ತಮ್ಮ ಮೋಟಾರ ಸೈಕಲಗಳ ಮೇಲೆ ಕುಳಿತುಕೊಂಡು ಸಾಯಂಕಾಲ ೫-೧೫ ಗಂಟೆಗೆ ಚೌಕ ಸರ್ಕಲದಿಂದ ಹೊರಟು ನಂತರ ಬಾತ್ಮಿ ಬಂದ ಸ್ಥಳವಾದ ಕಲಬುರಗಿ ನಗರ ಶೇಖ ರೋಜಾ ಜುನೈದಿ ಕಾಲನಿಯಲ್ಲಿ ದರ್ಗಾದ ಹಿಂದುಗಡೆ ಇರುವ ಖುಲ್ಲಾ ಜಾಗೆಯಲ್ಲಿ ಹತ್ತಿರ ಸಂಜೆ ೫-೩೦ ಗಂಟೆಗೆ ತಲುಪಿ ಮೋಟಾರ ಸೈಕಲಗಳನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಅಲ್ಲಿಯೇ ದರ್ಗಾದ ಗೋಡೆ ಮರೆಯಲ್ಲಿ ನಿಂತು ನೋಡಲಾಗಿ ಸದರಿ ಖುಲ್ಲಾ ಜಾಗೆಯಲ್ಲಿ ೦೬ ಜನರು ದುಂಡಾಗಿ ಕೆಳಗಡೆ ನೆಲದ ಮೇಲೆ ಕುಳಿತುಕೊಂಡು ಅಂದರ್ ೫೦ ರೂ ಮತ್ತು ಬಾಹರ್ ೫೦ ರೂಪಾಯಿಯಂತೆ ಅಂದರ ಬಾಹರ ಎನ್ನುವ ಇಸ್ಪೀಟ್ ಜೂಜಾಟ ಆಡುವುದನ್ನು ಪಂಚರ ಸಮಕ್ಷಮ ಖಚಿತಪಡಿಸಿಕೊಂಡು ಸಾಯಂಕಾಲ ೫-೪೫ ಗಂಟೆಗೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆಪಾದಿತರಿಗೆ ಹಿಡಿದು ವಿಚಾರಿಸಲು ಅವರು ಹಣ ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರಬಾಹರ ಎಂಬ ಜೂಜಾಟ ಆಡುವ ಬಗ್ಗೆ ತಪ್ಪೊಪ್ಪಿಕೊಂಡ ಬಳಿಕ ಸ್ವಾಧೀನಕ್ಕೆ ಪಡೆದುಕೊಂಡು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ

೧) ಅಹ್ಮದ ಅಲಿ ತಂದೆ ಮಹೆಬೂಬಸಾವ ನದಾಫ ವ:೪೪ ವರ್ಷ ಉ:ಗೌಂಡಿ ಕೆಲಸ ಜಾತಿ ಮುಸ್ಲಿಂ ಸಾ:ಜುನೈದಿ ಕಾಲನಿ ಶೇಖ ರೋಜಾ ಕಲಬುರಗಿ  ಅಂತಾ ತಿಳಿಸಿದನು. ಸದರಿಯವನ ಎದುರುಗಡೆ ನಗದು ಹಣ ೧೩೦/- ರೂ.ಗಳು ದೊರೆತವು.

೨) ಸೈಯ್ಯದ ಶಿರಾಜ ತಂದೆ ಸೈಯ್ಯದ ಶರಫೋದ್ದಿನ ವ:೨೫ ವರ್ಷ ಉ: ಸೆಂಟ್ರಿಂಗ ಕೆಲಸ ಸಾ:ಜುನೈದಿ ಕಾಲನಿ ಶೇಖ ರೋಜಾ ಕಲಬುರಗಿ  ಅಂತಾ ತಿಳಿಸಿದನು. ಸದರಿಯವನ ಎದುರುಗಡೆ ನಗದು ಹಣ ೧೭೦/- ರೂ.ಗಳು ದೊರೆತವು.

 ೩)ಹುಸೇನ ತಂದೆ ಮೌಲಾಸಾಬ ಜಮಾದಾರ  ವ:೨೯ ವರ್ಷ ಉ: ಹಮಾಲಿ ಕೆಲಸ ಸಾ:ಜುನೈದಿ ಕಾಲನಿ ಶೇಖ ರೋಜಾ ಕಲಬುರಗಿ  ಅಂತಾ ತಿಳಿಸಿದನು. ಸದರಿಯವನ ಎದುರುಗಡೆ ನಗದು ಹಣ ೯೦/- ರೂ.ಗಳು ದೊರೆತವು.

೪)ಹುಸೇನ ತಂದೆ ನಬೀಸಾಬ ಸುತಾರ ವ:೩೮ ವರ್ಷ ಉ: ಗೂಡ್ಸ ಚಾಲಕ ಸಾ:ಜುನೈದಿ ಕಾಲನಿ ಶೇಖ ರೋಜಾ ಕಲಬುರಗಿ  ಅಂತಾ ತಿಳಿಸಿದನು. ಸದರಿಯವನ ಎದುರುಗಡೆ ನಗದು ಹಣ ೧೨೦/- ರೂ.ಗಳು ದೊರೆತವು.

 ೫)ಇಸ್ಮಾಯಿಲ್ ತಂದೆ ಸಿಕಂದರಸಾಬ ವ:೫೨ ವರ್ಷ ಉ: ಆಟೋ ಚಾಲಕ ಸಾ:ಜುನೈದಿ ಕಾಲನಿ ಶೇಖ ರೋಜಾ ಕಲಬುರಗಿ  ಅಂತಾ ತಿಳಿಸಿದನು. ಸದರಿಯವನ ಎದುರುಗಡೆ ನಗದು ಹಣ ೧೪೦/- ರೂ.ಗಳು ದೊರೆತವು.

೬)ಮಕಬೂಲ್ ತಂದೆ ಗುಡುಸಾಬ ವ:೫೮ ವರ್ಷ ಉ: ಕೂಲಿಕೆಲಸ ಸಾ:ಜುನೈದಿ ಕಾಲನಿ ಶೇಖ ರೋಜಾ ಕಲಬುರಗಿ  ಅಂತಾ ತಿಳಿಸಿದನು. ಸದರಿಯವನ ಎದುರುಗಡೆ ನಗದು ಹಣ ೧೮೦/- ರೂ.ಗಳು ದೊರೆತವು.

ಕೆಳಗಡೆ ನೆಲದ ಮೇಲೆ ಒಟ್ಟು ನಗದು ಹಣ ೩೩೭೦/- ರೂ. ಗಳು ದೊರೆತಿದ್ದು, ಮತ್ತು ಇಸ್ಪೀಟ್ ಎಲೆಗಳು ದೊರೆತಿದ್ದು, ಮೊದಲು ನಗದು ಹಣ ಎಲ್ಲಾ ಸೇರಿಸಿ ಎಣಿಕೆ ಮಾಡಲಾಗಿ ಒಟ್ಟು ನಗದು ಹಣ ೪೨೦೦/- ರೂ. ಇದ್ದವು. ಅದರಂತೆ ಎಲ್ಲಾ ಇಸ್ಪೇಟ ಎಲೆಗಳು ಎಣಿಕೆ ಮಾಡಲಾಗಿ ೫೨ ಇಸ್ಪೇಟ ಎಲೆಗಳಿದ್ದವು. ಆಗ ನಾನು  ಕೇಸಿನ ಪುರಾವೆಗೋಸ್ಕರ ಒಂದು ದಸ್ತಿಯಲ್ಲಿ ಹಣ ಮತ್ತು ಇಸ್ಪೇಟ ಎಲೆಗಳು ಹಾಕಿ ಅದಕ್ಕೆ  ಪಂಚರು ಸಹಿಸಿದ ಚೀಟಿ ಅಂಟಿಸಿದ ಚೀಟಿ ನನ್ನ  ವಶಕ್ಕೆ ತೆಗೆದುಕೊಂಡು ಗುನ್ನೆ ದಾಖಲಿಸುವಂತೆ ನೀಡಿದ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಇತ್ತೀಚಿನ ನವೀಕರಣ​ : 08-03-2023 12:02 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080