ಅಭಿಪ್ರಾಯ / ಸಲಹೆಗಳು

ಬ್ರಹ್ಮಪೂರ ಪೊಲೀಸ ಠಾಣೆ :- ದಿನಾಂಕ:07-02-2023  ರಂದು ಮದ್ಯಾಹ್ನ ೧:೦೦ ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸಿದ್ದಾರಾಮ ತಂದೆ ಕಾಶಿನಾಥ ಪಾಟೀಲ್ ವಯ:೫೧ ವರ್ಷ ಜಾ:ಲಿಂಗಾಯತ ಉ:ವ್ಯವಸಾಯ ಸಾ//ಗುಲಹಳ್ಳಿ ಗ್ರಾಮ ತಾ:ಆಳಂದ ಜಿ:ಕಲಬರುಗಿ ಹಾಲಿವಾಸ:-ಬಸ್ ಡೀಪೋ ಘಟಕ-೨ರ ಹತ್ತಿರ ವಿಧ್ಯಾನಗರ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದರ ಸಾರಾಂಶವೆನೆಂದರೆ ನನ್ನದೊಂದು ಸ್ವಂತ ಹೊಂಡಾ ಆಕ್ಟಿವಾ ಸ್ಕೂಟರ್ ನಂ. KA-32-EE-3859 ನೇದ್ದು ಇದ್ದು ಸದರಿ ಸ್ಕೂಟರ್ ನನ್ನ ಹೆಸರಿನಲ್ಲಿರುತ್ತದೆ. ದಿನಾಂಕ:೦೫/೦೨/೨೦೨೩ ರಂದು ಕಲಬುರಗಿ ನಗರದ ರೋಟರಿ ಶಾಲೆಯಲ್ಲಿ ಶ್ರೀ ಬಿ.ಆರ್ ಪಾಟೀಲ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ಎರ್ಪಡಿಸಿರುವುದರಿಂದ ನಾನು ಸಾಯಂಕಾಲ ೬:೩೦ ಗಂಟೆ ಸುಮಾರಿಗೆ ನನ್ನ ಸ್ಕೂಟರನ್ನು ತೆಗೆದುಕೊಂಡು ಹೋಗಿ ರೋಟರಿ ಶಾಲೆಯ ಕಾಂಪೌಂಡ ಹತ್ತಿರ ನಿಲ್ಲಿಸಿ ರೋಟರಿ ಶಾಲೆಯಲ್ಲಿ ನೆಡೆಯುತ್ತಿರುವ ಕಾರ್ಯಕ್ರಮಕ್ಕೆ ಹೋಗಿ ಅಲ್ಲಿ ಬಹಳಷ್ಟು ಜನ ನೇರೆದಿದ್ದು ಸದರಿ ಕಾರ್ಯಕ್ರವನ್ನು ಮುಗಿಸಿಕೊಂಡು ಮರಳಿ ರಾತ್ರಿ ೧೦:೦೦ ಗಂಟೆ ಸುಮಾರಿಗೆ ನಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ಸ್ಕೂಟರ್ ನೋಡಲಾಗಿ ಸ್ಕೂಟರ್ ಇರಲಿಲ್ಲಾ, ಕಾರಣ ಕಳುವಾದ ನನ್ನ ಸ್ಕೂಟರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಬ್ರಹ್ಮಪೂರ ಪೊಲೀಸ ಠಾಣೆ :- ದಿನಾಂಕ 07/02/2023 ರಂದು ಸೆನ್ ಪೊಲೀಸ್ ಠಾಣೆ ಗುನ್ನೆ ನಂ 03/2023 ಕಲಂ 120(ಬಿ),384,503,504,506, 507,469,471 ಐ,ಪಿ.ಸಿ ಪ್ರಕರಣದ ಮೂಲ ಕಡತ ಘಟನಾ ಸ್ಥಳದ ಆಧಾರದ ಮೇಲಿಂದ ಮುಂದಿನ ತನಿಖೆ ಕುರಿತು ಮಾನ್ಯ ಪೊಲೀಸ್ ಆಯುಕ್ತರು ಕಲಬುರಗಿ ರವರ ಜ್ಞಾಪನ ಪತ್ರ ಸಂಖ್ಯೆ;ಸಿ-4/ಸಿಸಿಆರ್ ಬಿ/ಕ/ವರ್ಗಾವಣೆ/03/ಕ.ನ/2023/05 ದಿನಾಂ 06/02/2023 ರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳುವಂತೆ ಆದೇಶಿಸಿದ್ದರಿಂದ ಇಂದು ದಿನಾಂಕ 07/02/2023 ರಂದು 8-15 ಪಿ.ಎಂಕ್ಕೆ ಸದರಿ ಪ್ರಕರಣದ ಪಿರ್ಯಾದಿ ಸಾರಾಂಶವೆನೆಂದರೆ  ದಿನಾಂಕ: 08/01/2023 ರಂದು 21:00 ಗಂಟೆಗೆ ಪಿರ್ಯಾದಿ ಶ್ರೀ ಡಾ// ಜಗದೀಶ ಎಸ್,ಬಿ ತಂದೆ ಎಸ್ ಬಸವರಾಜ ವಯ// 55 ವರ್ಷ ಜಾತಿ// ಲಿಂಗಾಯತ ಉ// ಪ್ರಾಧ್ಯಾಪಕರು ಸಾ// ಮನೆ ನಂ// 144, ಗೋದುತಾಯಿ ನಗರ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶದವೇನೆಂದರೆ ನನ್ನ ಧರ್ಮ ಪತ್ನಿ ಡಾ// ಕವಿತಾ ಪಾಟೀಲ್ ಇವರು ಡಿಸೆಂಬರ್ ತಿಂಗಳಲ್ಲಿ 2019ರಲ್ಲಿ ಗುಲ್ಬರ್ಗ ವೈಧ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಿರ್ದೆಶಕರು ಹಾಗೂ ಡೀನ್ ಅಂತಾ ಸರಕಾರದ ನಿರ್ದೆಶನದ ಮೇರೆಗೆ ಕರ್ತವ್ಯ ವಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಹೀಗೆ ದಿನಾಂಕ: 03/08/2022 ರಂದು ನಮ್ಮ ಗೆಳೆಯರಾದ ಶ್ರೀ ಶಿವಾನಂದ ಪಾಟೀಲ್ ಸಾ// ಕಲಬುರಗಿ ಇವರು ಪೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ದಾವಣೆಗೆರೆಯಲ್ಲಿ ಒಂದು ಪತ್ರಿಕೆ ಅಂಗಡಿಯಲ್ಲಿ ಬೇರೆ ಪತ್ರಿಕೆ ಖರೀದಿಸುವಾಗ ಪೊಲೀಸ್ ಮಿರರ್ ಪತ್ರಿಕೆಯನ್ನು ನೋಡಿ ಅದನ್ನು ಖರೀದಿಸಿ ಒಳ ಪುಟ ನೋಡಿ ನಿಮ್ಮ ಕುಟುಂಬದ ಬಗ್ಗೆ ಕೆಟ್ಟದಾಗಿ ಲೇಖನ ಪ್ರಕಟವಾಗಿರುತ್ತದೆ ಅಂತಾ ಹೇಳಿದನು ನಂತರ ದಿನಾಂಕ: 06/08/2022 ರಂದು ಮಧ್ಯಾಹ್ನ 2-30 ನನ್ನ ಪತ್ನಿ ಡಾ// ಕವಿತಾ ಪಾಟೀಲ್ ಇವರು ಜಿಮ್ಸ್ ಆಸ್ಪತ್ರೆಯ ತಮ್ಮ ಕಛೇರಿಯಲ್ಲಿದ್ದಾಗ ನನ್ನ ಗೆಳೆಯನಾದ ಶ್ರೀ ಶಿವಾನಂದ ಪಾಟಿಲ್ ಈತನು ಹೋಗಿ, ದಿನಾಂಕ:10/08/2022ರ ಮುದ್ರಿತ ಪೊಲೀಸ್ ಮಿರರ್ ಪತ್ರಿಕೆ RNI: KARKAN 45677/1989  ಎಸ್ಸೆನ್ ಕುಂಜಾಲ್ ಸಾರಥ್ಯದಲ್ಲಿ ಇರುವ ಪತ್ರಿಕೆಯನ್ನು ತಂದು ಕೊಟ್ಟಿರುತ್ತಾರೆ, ಅದನ್ನು ನಾನು ನಂತರ ನನ್ನ ಪತಿಯಿಂದ ಪಡೆದುಕೊಂಡು ನೋಡಲಾಗಿ, ಪತ್ರಿಕೆಯ ಮುಖ ಪುಟದಲ್ಲಿ  ಗುಲ್ಬರ್ಗ ಜಿಮ್ಸ್ ಡೈರೆಕ್ಟರ್ ಕವಿತಾ ಸುಧಾಕರ್ಗೆ ಕೊಟ್ರು 1 ಕೋಟಿ, ಬಿಲ್ಡಿಂಗ್ ಗೋಲ್ ಮಾಲ್ ಅಂತಾ ಮುದ್ರಿಸಿದ್ದು ನಂತರ ಒಳ ಪುಟ 13 ನೋಡಲಾಗಿ  ಜಿಮ್ಸ್ ಬಿಲ್ಡಿಂಗ್ ಈ ಹಿಂದೆ ಐದು ಅಂತಸ್ತಿನದ್ದಾಗಿದ್ದು ಅದನ್ನು ಹನ್ನೊಂದನೇ ಪ್ಲೋರಿಗೆ ರೈಸ್ ಮಾಡುವ ಕಾಮಗಾರಿಯಲ್ಲಿ ಕೋಟ್ಯಾಂತರ ಹಣ ಬಂದಿದ್ದು ಈ ಲಂಚದ ಹಣದಲ್ಲಿ ಒಂದು ಕೋಟಿ ರೂಪಾಯಿಯನ್ನು ಸುಧಾಕರನಿಗೆ ಕಳ್ಸಿದ್ದಾಳಂತೆ ಅದಕ್ಕೆ ಖುಷಿಯಾದ ಹೆಲ್ತ್ ಮಿನಿಸ್ಟರ್ ಜಿಮ್ಸ್ ಡೈರೆಕ್ಟರ್ ಆಗಿ ಇನ್ನೂ ಮೂರು ವರ್ಷ ಕಂಟಿನ್ಯೂ ಆರ್ಡರ್ ಮಾಡಿದ್ದಾನಂತೆ ಇನ್ನೂ ಬೇರೆ ಬೇರೆ ಪಚರ್ೇಸಲ್ಲಿ ಕೋವಿಡ್ನಲ್ಲಿ ಕೋಟ್ಯಾಂತರ ಕೊಳ್ಳೆ ಹೊಡೆದು ಮನೆಯಲ್ಲಿಟ್ಟಿರುವುದು ಬೇರೆಯೆ ಸಂಗತಿ ವೈಯಕ್ತಿಕ ವಿಚಾರದಲ್ಲೂ ಮುಸಲ್ಮಾನನೊಂದಿಗೆ ಓಡಿ ಹೋಗಿದ್ದು ಈಕೆ ವೀರಶೈವ್ ಲಿಂಗಾಯತ ಸ್ವಾಮಿಯೊಂದಿಗೆ ಮದುವೆಯಾಗಿದ್ದಾಳೆ ಅಂತಾ ಬರೆದಿರುತ್ತಾರೆ. ಅಲ್ಲದೇ ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಂದ ವಿವಿಧ ರೀತಿಯ ಸೇವೆಗೆ ಹಣ ಕೇಳುತ್ತಾರೆ ಅಂತಾ ಆಧಾರ ರಹಿತ ಸುಳ್ಳು ವಿಷಯವನ್ನು ಸೃಷ್ಟಿ ಮಾಡಿ ಚಾರಿತ್ರ್ಯ ವಧೆ ಮಾಡುವ ಉದ್ದೇಶದಿಂದ ಖೋಟ್ಟಿ ಪೊಲೀಸ್ ಮಿರರ್ ಪತ್ರಿಕೆಯಲ್ಲಿ ಮುದ್ರಿಸಿ ಪ್ರಕಟಿಸಿರುತ್ತಾರೆ.  ದಿನಾಂಕ: 16/12/2022 ರಂದು ನನ್ನ ಧರ್ಮ ಪತ್ನಿ ಡಾ// ಕವಿತಾ ಪಾಟೀಲ್ ಇವರು ಜಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯದ ಮೇಲೆ ತಮ್ಮ ಕೋಣೆಯಲ್ಲಿ ಇದ್ದಾಗ ಯಾರೋ ಅಪರಿಚಿತ ವ್ಯಕ್ತಿ ಒಬ್ಬರು ಆಡಳಿತ ಕಛೇರಿಯಲ್ಲಿ, ಆಸ್ಪತ್ರೆಯಲ್ಲಿ, ವೈಧ್ಯಕೀಯ ಅಧೀಕ್ಷಕರು ಕೋಣೆಯಲ್ಲಿ, ಬಯೋಕೇಮಿಸ್ಟಿರಿ ವಿಭಾಗದಲ್ಲಿ ಎಸೆದು ಹೋಗಿರುತ್ತಾನೆ. ಅದನ್ನು ನನ್ನ ಪತ್ನಿ ನೋಡಲಾಗಿ ಖೋಟ್ಟಿ ಪೊಲೀಸ್ ಮಿರರ್ ಪತ್ರಿಕೆಯ RNI: KARKAN 45677/1989, ಮುದ್ರಿತ     ದಿನಾಂಕ: 02 ಡಿಸೆಂಬರ್ 2022 ನೇದ್ದು ಇರುತ್ತದೆ. ಸದರಿ ಪತ್ರಿಕೆಯ ಹಿಂಬದಿಯ ಸಂಪೂರ್ಣ ಪುಟದಲ್ಲಿ ನನ್ನ ಧರ್ಮ ಪತ್ನಿಯ ಭಾವ ಚಿತ್ರದೊಂದಿಗೆ ಇದು ಮುಸಲ್ಮಾನನೊಂದಿಗೆ  ಮುಂಬೈಗೆ ಓಡಿದ್ದ ನಿರ್ದೆಶಕಿ ಡಾ//ಕವಿತಾ ಪಾಟೀಲ್ಳ ಕರಾಮತ್ತು! ಅಂತಾ ಸುಳ್ಳು ಸೃಷ್ಟಿ ಮಾಡಿ ಮುದ್ರಿಸಿರುತ್ತಾರೆ,  ಕಲಬುರಗಿ ಜಿಮ್ಸ್ನಲ್ಲಿ ಅಡ್ಮಿಟ್ಟಾದರೆ ಸಾವೇ ಗತಿ! ಅಂತಾ ಆಧಾರ ರಹಿತ ವಿಷಯವನ್ನು ಮುದ್ರಿಸಿರುತ್ತಾರೆ. ಸದರಿ ಪತ್ರಿಕೆಯ 6 ನೇ ಪುಟ ನೋಡಲಾಗಿ, ಈ ಮೇಲೆ ಮಾಡಿದ ಆಪಾದನೇಗಳನ್ನು ಮತ್ತೆ ಮುದ್ರಿಸಿರುತ್ತಾರೆ, ಇನ್ನೂ ಮುಂದುವರೆದು ಈ ಹಿಂದೆ ನಮ್ಮ ತಂದೆಯಾದ ಶ್ರೀ ಎಸ್ ಎಸ್ ಪಾಟೀಲ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿದ್ದರು ದೊಡ್ಡ ಇಸ್ಪೇಟ್ ಆಟಗಾರ, ಮಹಾನ್ ಕುಡುಕ, ಇದೇ ಹೊತ್ತಿಗೆ ಅವರ ಮಗಳಾದ ಡಾ// ಕವಿತಾ ಪಾಟೀಲ್ ಮುಸಲ್ಮಾನೊಂದಿಗೆ ಮುಂಬೈಗೆ ಓಡಿ ಹೋಗಿರುವುದರ ಬಗ್ಗೆ ಕೂಡಾ ಸ್ಥಳಿಯರು ಮಾತಾಡುತ್ತಿರುತ್ತಾರೆ. ಆನಂತರ ಎಸ್ ಎಸ್ ಪಾಟೀಲ್ರೊಂದಿಗೆ ಇಸ್ಪೇಟ್ ಆಡುತ್ತಿದ್ದ ರೀಟೈರಡ್ ಎಸ್.ಪಿ ಬಸವರಾಜ, ಅವಳನ್ನು ಮುಂಬೈನಿಂದ ಮುಸಲ್ಮಾನನ ಕೈಯಿಂದ ಈ ಕಡೆ ತಂದು ತನ್ನ ಮಗನಿಗೆ ಕೊಟ್ಟು ಮದುವೆ ಮಾಡಿಸಿದ್ದು ಗತವೈಭವ ಎಂದು ಬರೆದಿರುತ್ತಾರೆ. ಇದನ್ನು ನೋಡಿದ ನನ್ನ ಧರ್ಮ ಪತ್ನಿಯವರು ಸದರಿ ಪತ್ರಿಕೆಯನ್ನು ನನಗೆ ನೀಡಿ ನನ್ನೊಂದಿಗೆ ಸಮಾಲೋಚನೆ ಮಾಡಿರುತ್ತಾರೆ. ನಾನು ಅದನ್ನು ನೋಡಲಾಗಿ ನನ್ನ ಪತ್ನಿಯ ಬಗ್ಗೆ ಹಾಗೂ ನಮ್ಮ ಕುಟುಂಬದ ಮಾನ ಹಾಳು ಮಾಡುವ ಉದ್ದೇಶದಿಂದ ಮುದ್ರಿಸಿದ್ದು ನಿಜ ಇರುತ್ತದೆ. ನಂತರ ದಿನಾಂಕ: 25-12-2022 ರಂದು ಈ ಮೇಲೆ ಮುದ್ದಿಸಿದ ದಿನಾಂಕ: 02/12/2022ರ ಪತ್ರಿಕೆಯನ್ನು ಇನ್ನಷ್ಟು ಪ್ರತಿಗಳನ್ನು ಖರೀದಿಸಲು ಬಸ್ಸ ಸ್ಟಾಂಡ ಮುಂಬಾಗ ಇರುವ ಪತ್ರಿಕೆಯ ಅಂಗಡಿಯಲ್ಲಿ ಹೋದಾಗ ದಿನಾಂಕ: 23-ಡಿಸೆಂಬರ್-2022ರ ಮುದ್ರಿತ  ಪೊಲೀಸ್ ಮಿರರ್ ಪತ್ರಿಕೆ ಇರುವುದನ್ನು ಕಂಡ ನಾನು ಅದನ್ನು ಖರೀದಿಸಿದೆನು, ಅದನ್ನು ನೋಡಲಾಗಿ ಪೊಲೀಸ್ ಮಿರರ್ ಪತ್ರಿಕೆಯ RNI: KARKAN 45677/1989,  ಇದ್ದು ಅದರ ಹಿಂಬದಿಯ ಪುಟದಲ್ಲಿ ಮತ್ತೆ ನನ್ನ ಹೆಂಡತಿಯ ಭಾವ ಚಿತ್ರ ಸಮೇತ ಡಾ// ಸುಧಾಕರ್ ಡಾ// ಜಾಧವ, ಹೆಸರು ಥಳುಕು ಅಂತಾ  ಮುದ್ರಿಸಿದ್ದು ಅಲ್ಲದೆ ಗುಲ್ಬರ್ಗಾ ಜಿಮ್ಸ್ ಬ್ರಹ್ಮಾಂಡ ಭ್ರಷ್ಟಾಚಾರ!, ಕವಿತಾಳದ ದಿವ್ಯಾ ಹಾಗರಗಿ ಮೀರಿದ ಹಗರಣ ಅಂತಾ ಮುದ್ರಿಸಿದ್ದು ಇರುತ್ತದೆ. ಒಳ ಪುಟ ನಂ: 5 ರಲ್ಲಿ ನೋಡಲಾಗಿ ಈ ಮೇಲನಂತೆ ಮಾಡಿದ ಸುಳ್ಳು ಆಪಾಧನೆಯನ್ನೆ ಮತ್ತೆ ಮತ್ತೆ ಮುದ್ರಿಸಿ ಮುಂದುವರೆದು ನನ್ನ ಭಾವ ಚಿತ್ರವನ್ನು ಮುದ್ರಿಸಿ ಜಿಮ್ಸ್ ಡೈರೆಕ್ಟರ್‌ ಕವಿತಾ ಪಾಟೀಲ್ ಹಾಗೂ ಅವಳ ಪತಿ ಜಗದೀಶ ಶಿರೂರು ಜೈಲು ಸೇರುವುದು ಖಾತರಿಯಾಗಿದೆ ಅಂತಾ ಮುದ್ರಿಸಿದ್ದು. ಅಲ್ಲದೇ ಡಾ// ಉಮೇಶ ಜಾಧವ ಇವರೊಂದಿಗೆ ಸಂಭಂಧ ಕಲ್ಪಿಸಿ ಚಾರಿತ್ರವಧೆ(ಮಾನ ಹಾನಿ) ಮಾಡುವ ಉದ್ದೇಶದಿಂದ ಮುದ್ದಿಸಿರುತ್ತಾರೆ.  ಈ ಪತ್ರಿಕೆಯ ಬಗ್ಗೆ ವಿಚಾರರಿಸಲು ನಾನು ಬೆಂಗಳೂರಿನ, ನಂ:170 ಅಲಂಕಾರ್ ಪರ್ಲಪ್ಲಾಜ್, ಕೆ,ಜಿ ರೋಡ್ ಬೆಂಗಳೂರು 560009 ನೇದ್ದ ವಿಳಾಸಕ್ಕೆ ಬೇಟಿ ನೀಡಿ ನೋಡಲಾಗಿ ಅಂಗಡಿಗೆ ಬಿಗಾ ಹಾಕಿದ್ದು ಇರುತ್ತದೆ, ಇದರ ಅಸಲು ವಿಳಾಸ ಪತ್ತೆ ಮಾಡಲು RNI ವೇಬ್ ಸೈಟ್ನಲ್ಲಿ ನೋಡಲಾಗಿ ಪೊಲೀಸ್ ಮಿರರ್ ಪತ್ರಿಕೆ RNI: KARKAN 03413  ಎಂಬ ಸಂಖ್ಯೆಯಲ್ಲಿ ನೊಂದಣಿಯಾಗಿದ್ದು. ವಿಳಾಸ ನಂ 9 ಕಾಪರ್ೊರೆಷನ್ ಮಾರ್ಕೆಟ್ ಶ್ರೀರಾಮಂಜನೇಯ ರಸ್ತೆ, ಶ್ರೀ ನಗರ ಬೆಂಗಳೂರು ಎಂದು ವಿಳಾಸ ಇರುತ್ತದೆ. ಹಾಗೂ ಪಿ,ಜೆ, ಮೋಹನ್ ರಾವ್ ಎನ್ನುವರ ಹೆಸರಿನಲ್ಲಿ ಈ ಪತ್ರಿಕೆ ಪ್ರಕಾಶಿಸಲ್ಪಡುತ್ತದೆ. ಹಾಗೂ ಈ ವಿಷಯದ ಕುರಿತು ಪೊಲೀಸ್ ಮಿರರ್ ಯುಟೂಬ್ ಚಾನಲ್ನಲ್ಲಿ ನಮ್ಮ ಕುಟುಂಬದ ಬಗ್ಗೆ ಚಾರಿತ್ರ್ಯ ಹರಣ ಮತ್ತು ಮಾನಹರಾಜು ಆಗುವಂತ ಶಬ್ದಗಳನ್ನು ಉಪಯೋಗಿಸಿ ವಿಡಿಯೋವನ್ನು ಅಪಲೋಡ್ ಮಾಡಿರುತ್ತಾರೆ.   ಪೊಲೀಸ್ ಮಿರರ್ ಪತ್ರಿಕೆಯ ಪ್ರಧಾನ ಸಂಪಾದಕ 1) ಎಸ್ಸೆನ್ ಕುಂಜಾಲ್, ಮತ್ತು 2) ಶ್ರೀಮತಿ ಓಲಿವಿಯಾ 3) ಹೆಚ್,ಕೆ ಮಹಾದೇವ ಮತ್ತು ಜಿಮ್ಸನಲ್ಲಿ ಕೆಲಸ ಮಾಡುತ್ತಿರುವ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೂಡಿಕೊಂಡು ಅಪರಾಧಿಕ ಉದ್ದೇಶದಿಂದ ನನಗೂ ಮತ್ತು ನಮ್ಮ ಕುಟುಂಬಕ್ಕೆ ಅಪಾಯ, ಭೀತಿ ಹುಟ್ಟಿಸುವ ಉದ್ದೇಶದಿಂದ ಈ ರೀತಿಯಾಗಿ ನಮ್ಮ ವ್ಯಕ್ತಿತ್ವಕ್ಕೆ ಅವಮಾನ ಮಾಡಿ, ನಮಗೆ ಉದ್ರೇಕವನ್ನುಂಟು ಮಾಡಿ ಅವರೊಂದಿಗೆ ನಾವು ಅಪರಾಧಿಕ ಕೃತ್ಯ ಮಾಡಲು ನಮಗೆ ಉದ್ರೇಕಗೊಳಿಸುವ ಉದ್ದೇಶ ಪೂರಕವಾಗಿ ಈ ರೀತಿಯಾಗಿ ಸುಳ್ಳು ವಿಷಯಗಳನ್ನು ಸೃಷ್ಠಿ ಮಾಡಿ ಪ್ರಕಟಿಸಿರುತ್ತರೆ. ಸದರಿ ಪತ್ರಿಕೆ ಸಂಬಂಧ ಪಡುವ ಕಾನೂನ್ವಯ ನೊಂದಣಿಯಾಗದೇ ಇದ್ದು ನಮ್ಮಂತಹ ಉನ್ನತ ಸ್ಥಾನ ಜವಾಬ್ದಾರಿಯುತ ಹುದ್ದೆಯಲ್ಲಿರು ವ್ಯಕ್ತಿಗಳ ಹೆಸರುಗಳಿಗೆ ಇಲ್ಲಸಲ್ಲದ ವಿಷಯ ಸೃಷ್ಠಿ ಮಾಡಿ ಖೋಟ್ಟಿ ಪೊಲೀಸ್ ಮಿರರ್  ಎಂಬ ವಾರ ಪತ್ರಿಕೆ ಹೆಸರಿನಲ್ಲಿ ಸಾರ್ವಜನಿಕರಿಗೆ ಪುಕ್ಕಟ್ಟೆಯಾಗಿ ಹಂಚಿ ನಮ್ಮ ಚಾರಿತ್ರೆ ವಧೆ ಮಾಡುವ ಭಯವನ್ನುಂಟು ಮಾಡಿ ಈ ಅಪರಾಧವನ್ನು ಎಸಗುವ ವ್ಯಕ್ತಿಗಳು ಒಳ ಸಂಚು ರೂಪಿಸಿಕೊಂಡು ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಮುನ್ನಚ್ಚರಿಕೆ ಕ್ರಮ ವಹಿಸಿಕೊಂಡು ತಾವು ಮಾಡಿದ ಅಪರಾದವನ್ನು ಪೊಲೀಸ ಅಧಿಕಾರಿಗಳಿಗೆ ಸಿಕ್ಕು ಬಿಳದಂತೆ ತಮ್ಮ ಅಪರಾಧಿಕ ಚಟುವಟಿಕೆಗಳನ್ನು ಉಯೋಗಿಸಿಕೊಂಡು ತಾವು ಸೃಷ್ಠಿಸಿದ ಸುಳ್ಳು ಪತ್ರಿಕೆಯಲ್ಲಿ ನಮ್ಮ ಹೆಸರು ನಮೂದಿಸಿ ನಮಗೆ ಮಾನಸಿಕ ನೆಮ್ಮದಿ, ಭಯವನ್ನುಂಟು ಮಾಡಿ ಅವರಿಂದ ಹೆರಳ ಮೊತ್ತದ ಹಣವನ್ನು ಬಲದಗ್ರಹಣ ಮಾಡುವ ಅಪರಾಧಿಕ ಉದ್ಧೇಶದಿಂದ ನಮಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ, ನನಗೂ ಹಾಗೂ ನಮ್ಮ ಕುಟುಂದದ ಬಗ್ಗೆ ಖೋಟ್ಟಿ ಪೊಲೀಸ್ ಮಿರರ್ ವಾರದ ಪತ್ರಿಕೆಯಲ್ಲಿ ಇಲ್ಲಸಲ್ಲದ ವಿಷಯವನ್ನು ಸೃಷ್ಠಿ ಮಾಡಿ ಅವಮಾನ ಮಾಡುವ ಉದ್ದೇಶದಿಂದ ಮುದ್ರಿಸಿ ಪತ್ರಿಕೆಯಲ್ಲಿ ಪ್ರಕಟಣೆ ಮಾಡಿದವರ ವಿರುದ್ದ ಸೂಕ್ತ ಕಾನೂನು  ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ ಠಾಣೆ :-  ದಿನಾಂಕ 07/02/2023 ರಂದು ಸಂಜೆ 07-25 ಗಂಟೆಗೆ ನಮ್ಮ ಠಾಣೆಯ ಶ್ರೀ ಗಣಪತಿ ಎ.ಎಸ್.ಐ.  ಚೌಕ ಪೊಲೀಸ ಠಾಣೆ ಕಲಬುರಗಿ ರವರು ಮಟಕಾ ಜೂಜಾಟ ನಿರತ ಒಬ್ಬ ಆರೋಪಿ ಮತ್ತು ಮುದ್ದೆಮಾಲು ಹಾಗೂ  ಮಟಕಾ ಜೂಜಾಟ ದಾಳಿ ಮಾಡಿದ  ಸರಕಾರಿ ತರ್ಫೇ ದೂರು ಮತ್ತು ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ತಮ್ಮ ಸರಕಾರಿ ತರ್ಫೇ ದೂರು ಕೊಟ್ಟಿದ್ದರ  ಸಾರಾಂಶವೆನೆಂದೆರೆ, ನಾನು, ಗಣಪತಿ ಎ.ಎಸ್.ಐ. ಚೌಕ ಪೊಲೀಸ ಠಾಣೆ ಕಲಬುರಗಿ ಸರ್ಕಾರಿ ತರ್ಫೇ ದೂರು ಕೊಡುವದೆನೆಂದೆರೆ, ಇಂದು ದಿನಾಂಕ 07/02/2023 ರಂದು ಮಧ್ಯಾಹ್ನ 04-30 ಗಂಟೆಗೆ ಕಲಬುರಗಿ ನಗರ ಸುಪರ ಮಾರ್ಕೇಟ ಚೌಕ ಸರ್ಕಲದಲ್ಲಿ ಇದ್ದಾಗ, ನಮ್ಮ ಚೌಕ ಠಾಣೆಯ ಶ್ರೀ ವಿಜಯಕುಮಾರ ಸಿನ್ನೂರು ಪಿ.ಐ. ರವರು  ನನಗೆ ಕಲಬುರಗಿ ನಗರದ ಶಿವಾಜಿ ನಗರ ಅಂಭಾಬಾಯಿ ಗುಡಿ ಎದುರುಗಡೆ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಒಬ್ಬನು ನಿಂತುಕೊಂಡು ಹೋಗಿ-ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದಿದೆ.  ನೀವು ದಾಳಿ ಮಾಡಿ ಮುಂದಿನ ಕಾನೂನು ಕ್ರಮ ಕೈ ಕೊಳ್ಳಲು ಆದೇಶಿಸಿದ ಪ್ರಕಾರ ನಾನು, ಪಿ.ಐ. ಸಾಹೇಬರ ಬಾತ್ಮಿ ಮೇರೆಗೆ ಮಟಕಾ ಜೂಜಾಟದಲ್ಲಿ ನಿರತನಾದವನ ಮೇಲೆ ದಾಳಿ ಮಾಡಿ ಹಿಡಿದು ಅವನ ವಿರುದ್ಧ ಅಸಂಜ್ಞೇಯ ಕಲಂ 78 (3) ಕೆ.ಪಿ.ಎಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಕೋರಿ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಕೋರಿಕೊಂಡು, ಇಬ್ಬರು ಪಂಚರಾದ 1)ಶ್ರೀ ಶಿವುಕುಮಾರ ತಂದೆ ಚನ್ನವೀರಪ್ಪ  ಹಿರಿಮನಿ ವ:55 ವರ್ಷ ಉ: ಕೂಲಿ ಕೆಲಸ ಜಾತಿ ಲಿಂಗಾಯತ ಸಾ: ಯಕ್ಕಂಚಿ ಗ್ರಾಮ ಹಾ:ವ: ಗಾಜಿಪೂರ ಕಲಬುರಗಿ 2)ಶ್ರೀ ಸೈಯ್ಯದ ರಹೂಫ ತಂದೆ ಸೈಯ್ಯದ ಶಮ್ಮಸೋದ್ದಿನ ವ:50 ವರ್ಷ ಉ:ಮೆಕ್ಯಾನಿಕ ಕೆಲಸ ಜಾತಿ ಮುಸ್ಲಿಂ ಸಾ:ಭವಾನಿ ನಗರ ಕಲಬುರಗಿ ಇವರುಗಳನ್ನು ಮತ್ತು ನಮ್ಮ ಠಾಣಾ ಸಿಬ್ಬಂದಿಯವರಾದ ಶ್ರೀ ಸುರೇಶ ಸಿಪಿಸಿ 130, ಶ್ರೀ ಅಶೋಕ ಸಿಪಿಸಿ 06 ಶ್ರೀ ಮೋಸಿನ ಸಿಪಿಸಿ 285 ಇವರಿಗೂ ಬರಮಾಡಿಕೊಂಡು ಈ ಮೇಲಿನ ಮಟಕಾ ಜೂಜಾಟದ ಬಾತ್ಮಿ ವಿಷಯ ತಿಳಿಸಿ, ಪಂಚರಿಗೆ ನಾವು ಮಾಡುವ ದಾಳಿ ಜಪ್ತಿ ಪಂಚನಾಮೆಯ ಪಂಚರಾಗಿ ಜಪ್ತಿ ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಪಂಚರು ಒಪ್ಪಿಕೊಂಡರು. ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ನಮ್ಮ ಜೊತೆಯಲ್ಲಿ ದಾಳಿಗೆ ಬರಲು ಸೂಚಿಸಿದಾಗ ಅವರು ಕೂಡಾ ಒಪ್ಪಿಕೊಂಡರು. ಆಗ ನಾನು ಮಟಕಾ ಜೂಜಾಟ ದಾಳಿ ಕುರಿತು ನಾನು ಮತ್ತು ಸಿಬ್ಬಂದಿಯವರು ಹಾಗೂ ಪಂಚರು ನಮ್ಮ ನಮ್ಮ ಮೋಟಾರ ಸೈಕಲಗಳ ಮೇಲೆ ಕುಳಿತುಕೊಂಡೇವು. ಮಾನ್ಯ ಎ.ಸಿ.ಪಿ.(ಎನ್) ಉಪವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು, ಚೌಕ ಸರ್ಕಲದಿಂದ ಸಂಜೆ 05-00  ಗಂಟೆಗೆ ಹೊರಟಿದ್ದು, ಬಾತ್ಮಿ ಸ್ಥಳವಾದ ಶಿವಾಜಿ ನಗರ ಅಂಭಾಬಾಯಿ ಗುಡಿ ಇನ್ನೂ ಸ್ವಲ್ಪ ದೂರ ಇರುವಂತೆ  ಎಲ್ಲರೂ ನಮ್ಮ ನಮ್ಮ ಮೋಟಾರ ಸೈಕಲಗಳನ್ನು ನಿಲ್ಲಿಸಿ  ಎಲ್ಲರೂ ಇಳಿದು ಅಂಭಾಬಾಯಿ ಗುಡಿ ದಕ್ಷಿಣ ದಿಕ್ಕಿನ ಗೋಡೆ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬನು ಕಲಬುರಗಿ ನಗರ ಶಿವಾಜಿ ನಗರ ಅಂಭಾಬಾಯಿ ಗುಡಿ ಎದುರಿನ ಸಾರ್ವಜನಿಕ ರಸ್ತೆ ಬದಿಯಲ್ಲಿ ನಿಂತುಕೊಂಡು ಹೋಗು-ಬರುವ ಸಾರ್ವಜನಿಕರಿಗೆ 1 ರೂ.ಗೆ 80 ರೂ. ಗೆಲ್ಲಿರಿ ಕಲ್ಯಾಣ ಮಟಕಾ ಇದೆ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ ನನ್ನ ಜೊತೆಯಲ್ಲಿ ಬಂದಿದ್ದ ಪಂಚರಿಗೆ ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ತೋರಿಸಿ ಖಚಿತಪಡಿಸಿಕೊಂಡು, ಪಂಚರ ನಮ್ಮ ಸಮಕ್ಷಮದಲ್ಲಿ ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ಸಂಜೆ 5-30 ಗಂಟೆಗೆ ದಾಳಿ ಮಾಡಿದಾಗ ಮಟಕಾ ಚೀಟಿಗಳು ಬರೆಯಿಸಲು ಬಂದಿದ್ದ ಸಾರ್ವಜನಿಕರು ಅಲ್ಲಿಂದ ಓಡಿ ಹೋದರು. ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲೂ ಅವನು ತನ್ನ ಬಸವರಾಜ ತಂದೆ ರೇವಪ್ಪ ಕಂಠಿ ವ:70 ವರ್ಷ ಉ:ಖಾಸಗಿ ಕೆಲಸ ಜಾತಿ ಲಿಂಗಾಯತ ಸಾ: ಬಸವಣ್ಣ ಗುಡಿ ಹತ್ತಿರ ಶಿವಾಜಿ ನಗರ ಕಲಬುರಗಿ ಅಂತಾ ತಿಳಿಸಿದನು. ಆತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ:ಕಿ:00 ರೂ. ಮತ್ತು ಒಂದು ಬಾಲಪೆನ್ನು ಅ:ಕಿ:00 ರೂ. ಹಾಗೂ ನಗದು ಹಣ 1830/- ರೂ. ದೊರೆತವು. ನಂತರ ಅವನಿಗೆ ಮಟಕಾ ಚೀಟಿ ಯಾರಿಗೆ ಒಯ್ದು ಕೊಡುತ್ತೀ ಅಂತಾ ವಿಚಾರಿಸಿದಾಗ, ಅವನು ರಾಜಶೇಖರ ತಂದೆ ಮಲ್ಲಿಕಾರ್ಜುನ ಉಮಾಶೆಟ್ಟಿ ಸಾ: ರೇವಣಸಿದ್ದೇಶ್ವರ ಕಾಲನಿ ಕಲಬುರಗಿ ಇತನಿಗೆ ಕೊಡುವುದಾಗಿ ತಿಳಿಸಿದನು. ಆಗ ನಾನು ಕೇಸಿನ ಪುರಾವೆಗೋಸ್ಕರ ಒಂದು ದಸ್ತಿಯಲ್ಲಿ ಮಟಕಾ ಚೀಟಿ, ಬಾಲಪೆನ್ನು, ಹಣ ಹಾಕಿ ಗಂಟು ಕಟ್ಟಿ ಅದಕ್ಕೆ ಪಂಚರು ಸಹಿಸಿದ ಚೀಟಿ ಅಂಟಿಸಿ ವಶಕ್ಕೆ ತೆಗೆದುಕೊಂಡು ಜಪ್ತಪಡಿಸಿಕೊಂಡೆನು. ಮತ್ತು ಬಸವರಾಜ ತಂದೆ ರೇವಪ್ಪ ಕಂಠಿ ವ:70 ವರ್ಷ ಉ:ಖಾಸಗಿ ಕೆಲಸ ಜಾತಿ ಲಿಂಗಾಯತ ಸಾ: ಬಸವಣ್ಣ ಗುಡಿ ಹತ್ತಿರ ಶಿವಾಜಿ ನಗರ ಕಲಬುರಗಿ ಇತನು ಮಟಕಾ ಜೂಜಾಟದಲ್ಲಿ ನಿರತರಾದ ಖಚಿತಪಟ್ಟಿದ್ದರಿಂದ ಅವನಿಗೆ  ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ವಶಕ್ಕೆ ತೆಗೆದುಕೊಂಡೇವು. ಸದರ ಜಪ್ತಿ ಪಂಚನಾಮೆ ಸದರ ಜಪ್ತಿ ಪಂಚನಾಮೆ ಇಂದು ದಿನಾಂಕ 07/02/2023 ರಂದು ಸಂಜೆ 05-30 ಗಂಟೆಯಿಂದ ಸಂಜೆ 6-30 ಗಂಟೆಯವರೆಗೆ ಸದರ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮಲ್ಲಿ ಲ್ಯಾಪಟ್ಯಾಪನಲ್ಲಿ ಗಣಕೀಕೃತ ಮಾಡಿ ಮುಗಿಸಲಾಯಿತು. ಸದರಿ ಜಪ್ತಿ ಪಂಚನಾಮೆ ಸಿಪಿಸಿ 06 ಅಶೋಕ ಇವರ ಕಡೆಯಿಂದ ಗಣಕೀಕೃತ ಮಾಡಿಸಲಾಯಿತು ಸದರಿ ಮಟಕಾ ಜೂಜಾಟದಲ್ಲಿ ನಿರತನಾದ ಬಸವರಾಜ ತಮದೆ ರೇವಪ್ಪ ಕಂಠಿ ವ:70 ವರ್ಷ ಉ:ಖಾಸಗಿ ಕೆಲಸ ಜಾತಿ ಲಿಂಗಾಯತ ಸಾ: ಬಸವಣ್ಣ ಗುಡಿ ಹತ್ತಿರ ಶಿವಾಜಿ ನಗರ ಕಲಬುರಗಿ ಮತ್ತು  ರಾಜಶೇಖರ ತಂದೆ ಮಲ್ಲಿಕಾರ್ಜುನ್  ಉಮಾಶೆಟ್ಟಿ ಸಾ: ರೇವಣಸಿದ್ದೇಶ್ವರ ಕಾಲನಿ ಕಲಬುರಗಿ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಿಕ್ಕಿ ಬಿದ್ದ ಆರೋಪಿ ಬಸವರಾಜ ಕಂಠಿ  ಮತ್ತು ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ ಸರ್ಕಾರ ಪರ ದೂರು ಎಸ್.ಎಚ.ಓ. ರವರಿಗೆ ಕೊಟ್ಟಿರುತ್ತೇನೆ ಎಂದು ಕೊಟ್ಟ ಸರ್ಕಾರ ತರ್ಫೇ ಮತ್ತು ಮಟಕಾ ಜೂಜಾಟ ದಾಳಿ ಜಪ್ತಿ ಪಂಚನಾಮೆ  ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :-  ದಿನಾಂಕ 07-02-2023 ರಂದು ರಾತ್ರಿ 8-15 ಗಂಟೆಗೆ ಶ್ರೀ ನಾಗರಾಜ ತಂದೆ ರಾಮಲಿಂಗ ಇವರು ಠಾಣೆಗೆ ಹಾಜರಾಗಿ ಅವರ ತಂದೆ ರಾಮಲಿಂಗ ಇವರ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ 05.02.2023 ರಂದು ಸಾಯಂಕಾಲದ ಸಮಯದಲ್ಲಿ ನಾನು ಮತ್ತು ನನ್ನ ಹೆಂಡತಿ ಮಹಾನಂದ ಇಬ್ಬರೂ ರಾಷ್ಟ್ರೀಯ ಹೆದ್ದಾರಿ-50 ರ ಮೇಲೆ ಬರುವ ಸಿರಗಾಪೂರ ದೇವಿ ದರ್ಶನಕ್ಕೆ ಹೋಗುವ ಕುರಿತು ಭವಾನಿ ನಗರದಿಂದ ನಾನು ಚಲಾಯಿಸುತ್ತೀರುವ ಮೋಟಾರ ಸೈಕಲ ನಂಬರ ಕೆಎ-32/ಇಜೆಡ್-3574 ನೇದ್ದರ ಹಿಂದುಗಡೆ ನನ್ನ ಹೆಂಡತಿ ಮಹಾನಂದ ಇವರನ್ನು ಕೂಡಿಸಿಕೊಂಡು ಭವಾನಿ ನಗರದಿಂದ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗಿ ಭಿಮಳ್ಳಿ ದಾಲ ಮಿಲ ಎದುರಿನ ರೋಡ ಮೇಲೆ ಒಬ್ಬ ಸಫಾರಿ ಕಾರ ಚಾಲಕನು ಆಳಂದ ಸರ್ಕಲ ಕಡೆಯಿಂದ ಹುಮನಾಬಾದ ರಿಂಗ ರೋಡ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರೆ ಸೈಕಲ ಹಿಂದುಗಡೆ ಡಿಕ್ಕಿಪಡಿಸಿ ಅಪಘಾತ ಮಾಡಿದನು. ನಾವಿಬ್ಬರೂ ಮೋಟಾರ ಸೈಕಲ ಸಮೇತ ಕೆಳಗಡೆ ಬಿದ್ದಾಗ ಸದರ ಘಟನೆ ನೋಡಿದ ಸುರೇಶ ತಂದೆ ಶಂಕರ ಕುಮಸಿ ಹಾಗೂ ಸಂಜುಕುಮಾರ ತಂದೆ ರಾಜಶೇಖರ ಜಿಂಗಾಡೆ ರವರು ಬಂದು ನಮ್ಮಿಬ್ಬರನ್ನು ಎಬ್ಬಿಸಿ ರೋಡ ಪಕ್ಕದಲ್ಲಿ ಕೂಡಿಸಿದಾಗ ನಾನು ನಮಗೆ ಅಪಘಾತ ಮಾಡಿದ ಕಾರ ನಂಬರ ನೋಡಲು ಟಿ.ಎಸ್-10/ಇಜೆ-9484 ಇದ್ದಿತ್ತು. ಅದರ ಚಾಲಕ ತನ್ನ ವಾಹನದಿಂದ ಇಳಿದು ನಮ್ಮ ಹತ್ತೀರ ಬಂದನು. ಸದರ ಘಟನೆ ಜರುಗಿದಾಗ ಸಾಯಂಕಾಲ ಅಂದಾಜು 4-30 ಗಂಟೆ ಸಮಯವಾಗಿತ್ತು. ಸದರ ಘಟನೆಯಿಂದ ನನ್ನ ಎಡ ಮತ್ತು ಬಲಗೈ ಹಸ್ತದ ಹಿಂಧುಗಡೆ ತರಚಿದಗಾಯ ಎಡಗಾಲು ಮೊಳಕಾಲಿಗೆ ಬಲಗಾಲು ಮೊಳಕಾಲಿಗೆ ರಕ್ತಗಾಯ, ಎಡಗಾಲು ಹಿಮ್ಮಡಿಗೆ ಎಡಗಾಳು ಹೆಬ್ಬರಳಿಗೆ ರಕ್ತಗಾಯವಾಗಿತ್ತು. ನನ್ನ ಹೆಂಡತಿ ಮಹಾನಂದ ಇವರ ಎಡ ತೆಲೆಗೆ ಭಾರಿ ಗುಪ್ತಪೆಟ್ಟು ಬಲಗೈ ಮುಂಗೈ ಹತ್ತೀರ ತರಚಿದಗಾಯ ಸೊಂಟಕ್ಕೆ ಗುಪ್ತಪೆಟ್ಟು ಎಡರು ಮೊಳಕಾಲಿಗೆ ಮತ್ತು ಮೊಳಕಾಲ ಕೆಳೆಗೆ ತರಚಿದಗಾಯವಾಗಿ ಇಬ್ಬರಿಗೂ ತ್ರಾಸ ಆಗುತ್ತಿದ್ದರಿಂದ ಅಪಘಾತ ಪಡಿಸಿದ ಕಾರ ಚಾಲಕನು ನಾನು ಆಸ್ಪತ್ರೆಯಲ್ಲಿ ನಿಮ್ಮ ಉಪಚಾರ ಮಾಡಿಸುತ್ತೇನೆ ಅಂತಾ ಒಂದು ಆಟೋರಿಕ್ಷಾ ವಾಹನದಲ್ಲಿ ಕೂಡಿಸಿ ನೀವು ಮುಂದೆ ನಡೆಯಿರಿ ನಾನು ನಿಮ್ಮ ಹಿಂದಿನಿಂದ ಆಸ್ಪತ್ರೆಗೆ ಬರುತ್ತೇನೆ. ಅಂತಾ ತಿಳಿಸಿದನು ನಾವು ನಮ್ಮ ಉಪಚಾರ ಕುರಿತು ಖಾಸಗಿ ಮಣೂರ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇವೆ. ಅಪಘಾತ ಪಡಿಸಿದ ಕಾರ ಚಾಲಕ ಆಸ್ಪತ್ರೆಗೆ ಬರೆದೆ ಹಾಗೆ ಓಡಿ ಹೋದ ಬಗ್ಗೆ ಗೋತ್ತಾಯಿತು. ಅಪಘಾತ ಪಡಿಸಿದ ಕಾರ ಚಾಲಕನ ಹೆಸರು ಗೋತ್ತಾಗಿರುವದಿಲ್ಲ ಆತನನ್ನ ನೋಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೆನೆ. ನಾವು ಉಪಚಾರದಲಿದ್ದು ನಮ್ಮ ಮಕ್ಕಳು ಬೇರೆ ಊರಿಗೆ ಹೋಗಿದ್ದರಿಂದ ಇಂದು ಆಸ್ಪತ್ರೆಗೆ ಬಂದಿದ್ದರಿಂದ ನನ್ನ ಮಗ ನಾಗರಾಜ ಇವರು ಆಸ್ಪತ್ರೆಗೆ ಬಂದಿದ್ದರಿಂದ ನಾನು ದೂರು ಬರೆಯಿಸಿ ಅವರ ಮುಖಾಂತರ ಪೊಲೀಸ ಠಾಣೆಗೆ ಕಳುಹಿಸಿರುತ್ತೇನೆ. ಕಾರಣ ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಸಫಾರಿ ಕಾರ ನಂಬರ ಟಿ.ಎಸ್-10/ಇಜೆ-9484 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಫಿರ್ಯಾದಿ ದೂರು ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಫರಹತಾಬಾದ ಪೊಲೀಸ ಠಾಣೆ :- ದಿನಾಂಕ:07-02-2023 ರಂದು 6:30 ಪಿಎಮ್ ಕ್ಕೆ ಜಿಜಿಹೆಚ್ ಕಲಬುರಗಿಯಲ್ಲಿ ಸೋಮಲಿಂಗ @ ಸೊಮಣ್ಣ ತಂದೆ ಮನಗಿನಸಿದ್ದ ಒಡೆಯರ ವಯಸ್ಸು 34 ವರ್ಷ, ಉದ್ಯೋಗಃ ಒಕ್ಕಲುತನ ಜಾತಿಃ ಕುರುಬ ಸಾಃ ಮೇಳಕುಂದಾ (ಬಿ) ತಾಜಿ|| ಕಲಬುರಗಿ ರವರು ನೀಡಿದ ಹೇಳಿಕೆ ಫಿರ್ಯಾದಿ ಸಾರಾಶವೇನೆಂದರೆ, ನಮ್ಮ ಊರಿನಲ್ಲಿರುವ ಮಾಳಿಂಗರಾಯ ದೇವಸ್ಥಾನದ ಮಾಲಿಕತ್ವ ಕುರಿತು ವಿವಾದ ಇರುತ್ತದೆ. ಹೀಗಿದ್ದು ಇಂದು ದಿನಾಂಕಃ 07-02-2023 ರಂದು ಬೆಳಗ್ಗೆ 07-30 ಗಂಟೆಗೆ ಮಾಳಿಂಗರಾಯ ದೇವಸ್ಥಾನಕ್ಕೆ ದರ್ಶನ ಮಾಡಲು ನಾನ ಹೋಗುತ್ತಿದ್ದಾಗ ಗುಡಿಯ ಹತ್ತಿರ ನಿಂತ್ತಿದ್ದ 1) ಭೀಮರಾಯ ತಂದೆ ಶರಣಪ್ಪ ಕೊಳ್ಳುರ 2) ಸಿದ್ದು ತಂದೆ ಭೀಮರಾಯ ಕೊಳ್ಳುರ 3) ಶಿವರಾಜ ತಂದೆ ಅಶೋಕ ಕೊಳ್ಳುರ 4) ನಾಗಣ್ಣ ತಂದೆ ಶಿವಲಿಂಗಪ್ಪ ಮಳ್ಳಿ 5) ಅಶೋಕ ತಂದೆ ಶರಣಪ್ಪ ಕೊಳ್ಳುರ ಎಲ್ಲರೂ ಸೇರಿಕೊಂಡು ಕೈಯಲ್ಲಿ ಬಡಿಗೆ, ಕಬ್ಬಿಣದ ರಾಡು ಹಿಡಿದುಕೊಂಡು ಗುಡಿಗೆ ಬಂದರೆ ನಿನಗೆ ಹೊಡೆದು ಖಲಾಸ ಮಾಡುತ್ತೆವೆ ಕುರುಬ ಸೂಳೆ  ಮಗನೆ ಅಂದವರೆ ಭೀಮರಾಯ ಈತನು ನನಗೆ ಹಿಡಿದುಕೊಂಡಿದ್ದು ಸಿದ್ದು ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬಲಗಾಲಿಗೆ, ಎಡಗೈ ಭುಜಕ್ಕೆ ಹೊಡೆದಿದ್ದರಿಂದ ಭಾರಿ ರಕ್ತಗಾಯವಾಗಿರುತ್ತದೆ. ಶಿವರಾಜ ಮತ್ತು ನಾಗಣ್ಣ ಇವರು ನನಗೆ ನೂಕಿಕೊಂಡು ಭೀಮರಾಯ ಕಂಪ್ಲೆಕ್ಸ ಎದುರುಗಡೆ ತೆಗೆದುಕೊಂಡು ಹೋಗಿ ಬಡಿಗೆಯಿಂದ, ರಾಡಿನಿಂದ ಬೆನ್ನಿನ ಮೇಲೆ ತಲೆಯ ಮೇಲೆ, ಬಾಯಿ ಮೇಲೆ ಹೊಡೆದಿದ್ದರಿಂದ ನನಗೆ ರಕ್ತಗಾಯವಾಗಿರುತ್ತದೆ ನನಗೆ ಹೊಡೆಯುತ್ತಿರುವದನ್ನು ನೋಡಿದ ನನ್ನ ಚಿಕ್ಕಪನ ಮಗನಾದ ಮಾಹದೇವ ಇತನು ಬಿಡಿಸಲು ಬಂದಾಗ ಆತನಿಗೂ ಸಹ ಭೀಮರಾಯ ಕೊಳ್ಳುರ ಅಲ್ಲಿಯೆ ಸೇರಿದ್ದ ಚೇತನ ತಂದೆ ಮಹಾದೇವಪ್ಪ ಕಲಬುರಗಿ, ಕುಮಾರ ತಂದೆ ಅಣ್ಣರಾವ ಗುಡೆದಮನಿ, ಮಂಜುನಾಥ ತಂದೆ ಬಸ್ಸು ಕೊಳ್ಳುರ, ಬಸ್ಸು ತಂದೆ ಅಂಬರಾಯ ಚೋಳಾಬಧರಿ ಎಲ್ಲರೂ ತಮ್ಮ ಕೈಯಲ್ಲಿದ್ದ ಬಡಿಗೆ, ರಾಡುಗಳನ್ನು ಮೇಲೆ ಎತ್ತುತ್ತಾ ಗುಡಿಯ ಹತ್ತಿರ ಬಂದರೆ ನೋಡಲೆ ಕುರುಬ ಸೂಳೆ  ಮಕ್ಕಳೆ ಅನ್ನುತ್ತ ಚೇತನ ಮಹಾದೇವನಿಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಭೀಮರಾಯ ಮತ್ತು ಕುಮಾರ ತಮ್ಮ ಕೈಯಲ್ಲಿ ಇದ್ದ ಬಡಿಗೆಯಿಂದ ಆತನ ಕಾಲಿಗೆ ಭುಜಕ್ಕೆ ಜೊರಾಗಿ ಹೊಡೆದಿದ್ದರಿಂದ ರಕ್ತಗಾಯವಾಗಿರುತ್ತದೆ. ಮಂಜುನಾಥ ಮತ್ತು ಬಸ್ಸು ಇವರು ತಮ್ಮ ಕೈಯಲ್ಲಿದ್ದ ರಾಡಿನಿಂದ ನನಗೆ ಮತ್ತು ಮಹಾದೇವನಿಗೆ ಹೊಡೆದಿದ್ದಿರಿಂದ ನಮ್ಮಿಬ್ಬರಿಗೆ ರಕ್ತಗಾಯವಾಗಿರುತ್ತದೆ ಅಲ್ಲಿಯೇ ಗುಡಿಯ ಮುಂದೆ ನಿಂತ್ತಿದ್ದ 1) ಸಿದ್ದಣ್ಣ ಒಡೆಯರ 2) ಶಾಮರಾಯ ಒಡೆಯರ ನಮಗೆ ಹೊಡೆಯುವುದರಿಂದ ಬಿಡಿಸಿರುತ್ತಾರೆ. ಆಗ ಅವರೆಲ್ಲರೂ ಈಗ ಉಳಿದಿದ್ದಿ ಇನ್ನೊಂದು ಸಾರಿ ಗುಡಿಯ ಹತ್ತಿರ ಬಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತ ಬೆದರಿಕೆ ಹಾಕಿರುತ್ತಾರೆ. ನಂತರ ನನಗೆ ಮತ್ತು ಮಹಾದೇವನಿಗೆ ಉಪಚಾರ ಕುರಿತು ನನ್ನ ಹೆಂಡತಿ ನಾಗಮ್ಮಾ ಹಾಗೂ ಲಕ್ಷ್ಮಣ ಪೂಜಾರಿ ರವರು ಅಂಬುಲೇನ್ಸನಲ್ಲಿ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ದೇವಸ್ಥಾನ ದರ್ಶನಕ್ಕೆ ಹೋದ ನನಗೆ ಹೊಡೆಬಡೆ ಮಾಡುತ್ತಿರುವಾಗ ಬಿಡಿಸಲು ಬಂದ ಮಹಾದೇವಪ್ಪನಿಗೆ ಹೊಡೆಬಡೆ ಮಾಡಿದ್ದ ಮೇಲ್ಕಂಡ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಹೇಳಿ ಬರೆಯಿಸಿದ ಹೇಳಿಕೆ ನಿಜವಿರುತ್ತದೆ. ಹಿರಿಯರಿಗೆ ವಿಚಾರಿಸಿ ದೂರ ನೀಡಲು ವಿಳಂಭವಾಗಿರುತ್ತದೆ ಅಂತ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ:07-02-2023 ರಂದು 7:45 ಪಿಎಮ್ ಕ್ಕೆ ಶ್ರೀ ಹಣಮಂತ್ರಾಯ ಹೆಚ್.ಸಿ:126 ಫರಹತಾಬಾದ ಠಾಣೆ ರವರು ಜಿಜಿಹೆಚ್ ಕಲಬುರಗಿಯಲ್ಲಿ ಸಿದ್ದು ತಂದೆ ಬಾಬುರಾವ ಪೂಜಾರಿ ವಯಸ್ಸು:16 ವರ್ಷ ಉದ್ಯೋಗಃ ವಿದ್ಯಾರ್ಥಿ ಜಾತಿಃ ಕುರುಬ ಸಾಃ ಮೇಳಕುಂದಾ (ಬಿ) ತಾಜಿ|| ಕಲಬುರಗಿ ರವರು ನೀಡಿದ ಹೇಳಿಕೆ ಫಿರ್ಯಾದಿ ತಂದು ಹಾಜರುಪಡಿಸಿದ್ದರ ಸಾರಾಶವೇನೆಂದರೆ, ನಾನು ನಮ್ಮೂರಿನ ಶ್ರೀ ಸೇವಾನಿಕೇತನ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದೇನೆ. ಹೀಗಿದ್ದು ಎಂದಿನಂತೆ ಇಂದು ದಿನಾಂಕ:07-02-2023 ರಂದು ಬೆಳೆಗ್ಗೆ 10:00 ಗಂಟೆಗೆ ಶಾಲೆಗೆ ಹೋಗಿ ಕೋಣೆಯಲ್ಲಿ ಪರೀಕ್ಷೆ ಬರೆಯುತ್ತಿರುವಾಗ 1) ಭೀಮರಾಯ ಕೊಳ್ಳೂರು 2) ಚೇತನ ಮಹಾದೇವಪ್ಪ ಕಲಬುರಗಿ 3) ಗುರಪ್ಪ ಮಲ್ಲೇಶಗೋಳ ರವರು ನಮ್ಮ ಶಾಲೆಯ ಮುಂದೆ ಬಂದು ನಿಂತುಕೊಂಡು ಚೇತನು ಈತನು ಪರೀಕ್ಷೆ ಕೋಣೆಯ ಹತ್ತಿರ ಬಂದು ನನಗೆ ಹೊರಗೆ ಕರೆದು ಭೀಮರಾಯ ಕೊಳ್ಳೂರ ನಿಂತಲ್ಲಿಗೆ ಕರೆದುಕೊಂಡು ಹೋಗಿ ಏ ಕುರುಬ ಸೂಳೆಮಗನೆ ಸಿದ್ದೇಶ್ವರ ದೇವಸ್ಥಾನದಲ್ಲಿ ಬರ ಬೇಡ ಅಂದರೂ ಬರ್ತಿರಿ ಮಕ್ಕಳೆ ಅಂತ ಗಟ್ಟಿಯಾಗಿ ಹಿಡಿದುಕೊಂಡು ತಮ್ಮ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಹೆಚ್.ಡಿ ಪೈಪಗಳಿಂದ ನನ್ನ ಬೆನ್ನಿಗೆ ಚೇತನ ಜೋರಾಗಿ ಹೊಡೆದಿರುತ್ತಾನೆ. ಗುರಪ್ಪನು ಪೈಪಿನಿಂದ ನನ್ನ ಸೊಂಟಕ್ಕೆ ಎಡ ಮೊಣಕಾಲು,ಬೆರಳಿಗೆ ಜೋರಾಗಿ ಹೊಡೆದಿದ್ದರಿಂದ ರಕ್ತಗಾಯ ಆಗಿರುತ್ತವೆ. ಇನ್ನೊಂದು ಸಾರಿ ಗುಡಿಯಕಡೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತ ಬೇದರಿಸಿ ನನಗೆ ಅಲ್ಲಿಯೇ ಬಿಟ್ಟು ಹೋಗಿರುತ್ತಾರೆ. ನಂತರ ನಮ್ಮೂರಿನ ಅಪ್ಪಾರಾಯ ನನಗೆ ಉಪಚಾರ ಕುರಿತು ತಂದು ಜಿಲ್ಲಾ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾನೆ. ಕಾರಣ ಮೇಲ್ಕಂಡವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 08-02-2023 11:45 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080