ಅಭಿಪ್ರಾಯ / ಸಲಹೆಗಳು

ಸಬ್‌-ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ: 07/01/2023 ರಂದು ಫಿರ್ಯಾದಿಯು ಆಸ್ಪತ್ರೆಯಲ್ಲಿ ನೀಡಿದ ಫಿರ್ಯಾದಿಯೇನೆಂದರೆ ಪ್ಲಾಟ್ ವಿಚಾರವಾಗಿ ಸದರಿ ಆರೋಪಿತರು ಮತ್ತು ಫಿರ್ಯಾದಿಯ ನಡುವೆ ಆಗಾಗ ತಕರಾರು ನಡೆಯುತ್ತಿದ್ದು ಇರುತ್ತದೆ. ಅಲ್ಲದೆ ಇದು ಮಾನ್ಯ ನ್ಯಾಯಾಲಯದಲ್ಲಿ ಫಿರ್ಯಾದಿಯಂತೆ ಪ್ಲಾಟಗಳಿಗೆ ಸಂಬಂದಿಸಿದಂತೆ ತೀರ್ಮಾನವಾಗಿರುತ್ತದೆ. ಆದರೆ ಆರೋಪಿತರು ಕೊಲೆ ಮಾಡುವ ಉದ್ದೇಶದಿಂದ ರಿವಾಲ್ವಾರ್‌ನಿಂದ ಹೊಡೆದಿದ್ದು ಫಿರ್ಯಾದಿಗೆ ತಾಕಿ ಗಾಯವಾಗಿದ್ದು ಸದರಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಬೆಕೇಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ನಾನು ಈಗ ಸುಮಾರು 20 ವರ್ಷಗಳಿಂದ ಬೆಂಗಳೂರು ನಗರದ ಇನ್‌ಟ್ಯೂಟ್ ಕಂಪನಿಯಲ್ಲಿ ಸಾಪ್ಟವೇರ ಇಂಜಿನಿಯರ್ ಅಂತ ಕೆಲಸ ಮಾಡಿಕೊಂಡು ಬೆಂಗಳೂರಿನಲ್ಲಿ ವಾಸ ಇರುತ್ತೇನೆ. ನಾನು ಸುಮಾರು 10-11 ವರ್ಷಗಳ ಹಿಂದೆ ವಿಜಯಲಕ್ಷ್ಮೀ ತಂದೆ ಸಿದ್ದರಾಮ ಆಲಮೇಲ ಸಾ: ಪ್ಲಾನಂ. 31 ಸದಾಶಿವ ನಗರ ಹಳೆ ಜೇವರ್ಗಿ ರಸ್ತೆ ಕಲಬುರಗಿ ಇವರೊಂದಿಗೆ ಮದುವೆ ಮಾಡಿಕೊಂಡಿರುತ್ತೇನೆ. ನನಗೆ ಸಿದ್ದಾಂತ ವಯ: 9 ವರ್ಷ ಅಂತ ಒಬ್ಬ ಮಗ ಇರುತ್ತಾನೆ. ನನ್ನ ಹೆಂಡತಿ ವಿಜಯಲಕ್ಷ್ಮೀ ಇವರು 2020 ನೇ ಸಾಲಿನಲ್ಲಿ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ನನ್ನ ಮೇಲೆ ಕೇಸ ದಾಖಲಿಸಿ ಕಲಬುರಗಿಗೆ ತಮ್ಮ ತಾಯಿಯ ಹತ್ತಿರ ಬಂದಿದ್ದಳು.  ನಂತರ ನನ್ನ ಹೆಂಡತಿ ವಿಜಯಲಕ್ಷ್ಮೀ ಇವರು ಬೆಂಗಳೂರಿನ ನ್ಯಾಯಾಲಯದಲ್ಲಿ ನನ್ನ ಮೇಲೆ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಖಾಸಗಿ ದೂರು ಸಲ್ಲಿಸಿರುತ್ತಾರೆ. ನಮ್ಮಿಬ್ಬರ ಸಂಸಾರಿಕ ಜೀವನದಲ್ಲಿ ಹೊಂದಾಣಿಕೆ ಆಗದೇ ಇದ್ದುದರಿಂದ ನಾನು  ಬೆಂಗಳೂರಿನ ಕೋರ್ಟನಲ್ಲಿ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿರುತ್ತೇನೆ. ಬೆಂಗಳೂರಿನ ಹಳೆ ಏರಫೋರ್ಟ ರೋಡಿನ ಹೆಚ್.ಡಿ.ಎಫ್.ಸಿ. ಬ್ಯಾಂಕನಲ್ಲಿ ನಾನು  ಎಸ್,ಬಿ. ಖಾತೆ ಸಂ. 18521610028476 ಹೊಂದಿದ್ದು ಈ ಖಾತೆಯಿಂದಲೆ  ನಾನು ಹಣದ ವ್ಯವಹಾರ ಮಾಡುತ್ತೇನೆ.  ದಿನಾಂಕ: 01/09/2022 ರಂದು ಬೆಂಗಳೂರಿನ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯ ಕಾಯ್ದೆ ಪ್ರಕರಣದಲ್ಲಿ ವಿಚಾರಣೆ ಇದ್ದ ಪ್ರಯುಕ್ತ ನಾನು ನ್ಯಾಯಾಲಯಕ್ಕೆ ಹಾಜರಾಗಿದ್ದೆನು.  ಅಲ್ಲಿ ನನ್ನ ಹೆಂಡತಿ ವಿಜಯಲಕ್ಷ್ಮೀ ಇವರ ಪರವಾಗಿ ಕೆಲಸ ಮಾಡುವ ವಕೀಲರು ನನ್ನ ಹೆಚ್.ಡಿ.ಎಫ್.ಸಿ. ಬ್ಯಾಂಕಿನ   ಖಾತೆ ಸಂ. 18521610028476 ನೇದ್ದರ ೭ ವರ್ಷದ ಬ್ಯಾಂಕ ಸ್ಟೇಟಮೆಂಟ್‌ನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಮರುದಿವಸ ನಾನು ಬೆಂಗಳೂರಿನ ಹಳೆ ಏರಫೋರ್ಟ ರೋಡಿನ ಹೆಚ್.ಡಿ.ಎಫ್.ಸಿ. ಬ್ಯಾಂಕಿಗೆ ಹೋಗಿ ಬ್ಯಾಂಕ ಮ್ಯಾನೇಜರರವರಿಗೆ ನಾನು ನನ್ನ ಖಾತೆಯ ಸ್ಟೇಟಮೆಂಟ್ ತೆಗೆದುಕೊಂಡಿರುವದಿಲ್ಲ ನೀವು ಯಾರಿಗೆ ಕೊಟ್ಟಿರುತ್ತೀರಿ ಅಂತ ವಿಚಾರಿಸಲು ಅವರು ಪರೀಶೀಲನೆ ಮಾಡಿ ನಿಮ್ಮ ಖಾತೆಯ ಸ್ಟೇಟಮೆಂಟನ್ನು ನಾವು ಕೊಟ್ಟಿರುವದಿಲ್ಲ ಈ ಸ್ಟೇಟಮೆಂಟನ್ನು  ಕಲಬುರಗಿ ನಗರದ ಜಗತ್ ಹತ್ತಿರ ಇರುವ ಹೆಚ್.ಡಿ.ಎಫ್.ಸಿ. ಬ್ಯಾಂಕ ಶಾಖೆಯಿಂದ ಕೊಟ್ಟಿರುತ್ತಾರೆ ಅಂತ ತಿಳಿಸಿ ನನಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಲು ತಿಳಿಸಿದ್ದರಿಂದ ನಾನು ಅವರಿಗೆ ಲಿಖಿತ ರೂಪದಲ್ಲಿ ಒಂದು ದೂರು ಬರೆದುಕೊಟ್ಟೆನು. ದಿನಾಂಕ: ೦೫/೦೯/೨೦೨೨ ರಂದು ಕಲಬುರಗಿ ನಗರದ ಜಗತ್ ಹತ್ತಿರ ಇರುವ ಹೆಚ್.ಡಿ.ಎಫ್.ಸಿ. ಬ್ಯಾಂಕ ಶಾಖೆಯ ಮ್ಯಾನೇಜರವರು ನನಗೆ ಪೋನ ಮಾಡಿ ನಿಮ್ಮ ಹೆಂಡತಿ ವಿಜಯಲಕ್ಷ್ಮೀ ಮತ್ತು ಅವರ ಸಂಬಂದಿ ಪದ್ಮಾಜಿ ಗುಂಡೆರಾವ ರವರು ದಿನಾಂಕ; 19/08/2021  ರಂದು ನಮ್ಮ ಬ್ಯಾಂಕಿಗೆ ಬಂದು ನನ್ನ ಗಂಡ ರಾಜಶೇಖರವರಿಗೆ ಕೋವೀಡ್-೧೯ ಆಗಿರುತ್ತದೆ. ಅವರು ಸದ್ಯ ಉಪಚಾರದಲ್ಲಿರುತ್ತಾರೆ ನಮಗೆ ತುರ್ತಾಗಿ ಅವರ ಬ್ಯಾಂಕ ಖಾತೆ ಸಂ. 18521610028476 ನೇದ್ದರ  ೭ ವರ್ಷದ ಬ್ಯಾಂಕ ಸ್ಟೇಟಮೆಂಟ್ ಅವಶ್ಯಕತೆ ಇರುತ್ತದೆ ನೀಡಿರಿ ಅಂತ ಅವರಿಬ್ಬರು ನಮಗೆ ಕೇಳಿಕೊಂಡಿದ್ದರಿAದ ನಿಜ ಇರಬಹುದು ಅಂತ ತಿಳಿದು ನಾವು ನಿಮ್ಮ ಖಾತೆಯ ಬ್ಯಾಂಕ ಸ್ಟೇಟಮೆಂಟ ನಿಮ್ಮ ಹೆಂಡತಿಗೆ ಕೊಟ್ಟಿರುತ್ತೇವೆ. ನೀವು ಲಿಖಿತವಾಗಿ ನೀಡಿರುವ ದೂರನ್ನು ವಾಪಸ್ಸು ಪಡೆದುಕೊಳ್ಳಿರಿ ಅಂತ ಹೇಳಿದರು. ನಾನು ಅವರಿಗೆ ಈ ಬಗ್ಗೆ ನೀವು ಲಿಖಿತವಾಗಿ ಬರೆದುಕೊಡಬೇಕು ಅಂತ ಹೇಳಿದ್ದರಿಂದ ಅವರು ನನಗೆ ಲಿಖಿತವಾಗಿ ಬರೆದುಕೊಟ್ಟಿರುತ್ತಾರೆ. ನನಗೆ ಮೋಸ ಮಾಡುವ ಉದ್ದೇಶದಿಂದ ನನ್ನ ಹೆಂಡತಿ ವಿಜಯಲಕ್ಷಿö್ಮÃ ಮತ್ತು ಅವರ ಸಂಬಂಧಿ ಪದ್ಮಾಜಿ ಗುಂಡೇರಾವ ಇವರು ಹೆಚ್.ಡಿ.ಎಫ್.ಸಿ ಬ್ಯಾಂಕಿನಲ್ಲಿ ನನಗೆ ಕೋವಿಡ್-೧೯ ಆಗಿರುತ್ತದೆ ಅಂತಾ ಸುಳ್ಳು ಹೇಳಿ ಬ್ಯಾಂಕಿಗೆ ನಂಬಿಕೆ ಬರುವಂತೆ ಮಾಡಿ ದುರುದ್ದೇಶದಿಂದ ನನ್ನ ಬ್ಯಾಂಕಿನ ಎಸ್.ಬಿ.ಖಾತೆ ಸಂಖ್ಯೆ. 18521610028476 ನೇದ್ದರ 7 ವರ್ಷದ ಸ್ಟೇಟ್‌ಮೆಂಟ್ ದಾಖಲೆಯನ್ನು ಅಪ್ರಮಾಣಿಕವಾಗಿ ಪಡೆದುಕೊಂಡು ಮೋಸ ಮಾಡಿರುತ್ತಾರೆ. ನನ್ನ ಬ್ಯಾಂಕ್ ಎಸ್.ಬಿ.ಖಾತೆಯ ಸ್ಟೇಟ್‌ಮೆಂಟ್ ದಾಖಲೆಯನ್ನು ನನಗೆ ಹೊರತು ಪಡಿಸಿ ಬೇರೆ ಯಾವುದೇ ವ್ಯಕ್ತಿಗೆ ಯಾವುದೇ ಕಾರಣಕ್ಕೂ ನೀಡಲು ಅವಕಾಶ ಇರುವದಿಲ್ಲ. ಅದಾಗಿಯೂ ಹೆಚ್.ಡಿ.ಎಫ್.ಸಿ ಬ್ಯಾಂಕ್ ಕಲಬುರಗಿ ಜಗತ್ತ್ ಶಾಖೆಯ ಅಧಿಕಾರಿಗಳು ನಿಯಮ ಬಾಹಿರವಾಗಿ ನನ್ನ ಬ್ಯಾಂಕ್ ಎಸ್.ಬಿ. ಖಾತೆಯ ಸ್ಟೇಟ್‌ಮೆಂಟ್‌ನ್ನು ನನ್ನ ಹೆಂಡತಿ ವಿಜಯಲಕ್ಷ್ಮೀ ಇವರಿಗೆ ನೀಡಿರುತ್ತಾರೆ. ನಾನು ಬ್ಯಾಂಕಿಗೆ ಕೊಟ್ಟ ದೂರಿನ ಪ್ರತಿ ಮತ್ತು ಬ್ಯಾಂಕಿನವರು ಕೊಟ್ಟ ಪತ್ರದ ಪ್ರತಿ ಈ ದೂರಿನೊಂದಿಗೆ ಲಗತ್ತಿಸಿರುತ್ತೇನೆ. ಕಾರಣ ನನ್ನ ಹೆಂಡತಿ ವಿಜಯಲಕ್ಷ್ಮೀ ಮತ್ತು ಅವರ ಸಂಬಂದಿ ಪದ್ಮಾಜಿ ಗುಂಡೇರಾವ ಹಾಗೂ ಹೆಚ್.ಡಿ.ಎಫ್.ಸಿ ಬ್ಯಾಂಕಿನ ಅಧಿಕಾರಿಗಳ ಮೇಲೆ  ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಲಿಖಿತ ದೂರು ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ 07/01/2023 ರಂದು ಮದ್ಯಾಹ್ನ 12:10 ಗಂಟೆಗೆ ಧೂಳಪ್ಪಾ ತಂದೆ ಗುಂಡಪ್ಪಾ ಕೊಳಾರ ವಯ: 34ವರ್ಷ ಜಾ:ಮಾದಿಗ (ಎಸ್.ಸಿ) ಉ:ಬಸ ಚಾಲಕ /ನಿರ್ವಾಹಕ(5476 ಬಳ್ಳಾರಿ ಘಟಕ-2) ಸಾ: ಸಿರ್ಸ (ಎ) ತಾ;ಜಿ:ಬೀದರ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ಅರ್ಜಿ ಸಲ್ಲಿಸಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ 06/01/2023 ರಂದು ನನಗೆ ಕರ್ತವ್ಯದ ಕುರಿತು ಬಸ್ ನಂ.ಕೆಎ-34 ಎಫ್-1351 ನೇದ್ದರಲ್ಲಿ ನೇಮಿಸಿದ್ದು ಮತ್ತು ನನ್ನ ಜೊತೆಗೆ ಕಂಡಕ್ಟರ ಅಂತಾ ಶಾಂತಗೌಡ ಚಾಲಕ/ನಿರ್ವಾಹ (3062) ನೇದ್ದವರಿಗೆ ನೇಮಿಸಿದ್ದು. ಸದರಿ ಬಸ್ ಬಳ್ಳಾರಿ ದಿಂದ ಬೀದರ ಮಾರ್ಗಸಂಖ್ಯೆ 77/78 ಹೋಗುವದಿದ್ದು. ನಾವು ಇಬ್ಬರು ಕೂಡಿ ಸಾಯಂಕಾಲ 7-20 ಗಂಟೆಗೆ ಬಳ್ಳಾರಿ ಬಸ್ ನಿಲ್ದಾಣದಿಂದ ಬೀದರಗೆ ಹೋಗುವ ಕುರಿತು ಪ್ರಯಾಣಿಕರಿಗೆ ಕೂಡಿಸಿಕೊಂಡು ಇಂದು ದಿನಾಂಕ 7/01/2022 ರಂದು ನಸುಕಿನಲ್ಲಿ  2-50 ಗಂಟೆ ಸುಮಾರಿಗೆ ಕಲಬುರಗಿ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ ಮತ್ತು ಕೂಡಿಸಿಕೊಂಡು ಬೀದರಗೆ ಹೋಗುವ ಕುರಿತು ನಾನು ನಗರದ ಗಂಜ್ ಮುಖಾಂತರ ರಸ್ತೇಯ ಬದಿಯಿಂದ ಬಸನ್ನು ಚಲಾಯಸಿಕೊಂಡು ಹುಮನಾಬಾದ ರಿಂಗ್ ರೋಡ ಮುಖಾಂತರ ಎಡಬಲ ನೋಡಿಕೊಂಡು ನಿಧಾನವಾಗಿ ರಿಂಗ್ ರೋಡ ಕ್ರಾಸ ಮಾಡುವಾಗ ಬೆಳಿಗ್ಗೆ 03:25 ಗಂಟೆಗೆ ಒಂದು ಲಾರಿ ಚಾಲಕನು ಕಲಬುರಗಿ ಸೇಡಂ ರಿಂಗ್ ರೋಡ ದಿಂದ ಆಳಂದ ರಿಂಗ್ ರೋಡ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತನ್ನ ವಾಹನವನ್ನು ನಿಯಂತ್ರಿಸಲು ಆಗದೆ ನಮ್ಮ ಬಸ್ಸಿನ ಹಿಂದಿನ ಭಾಗವಾದ ಎಮರಜೆನ್ಸಿ ಡೋರ ಹತ್ತೀರ ಡಿಕ್ಕಿಪಡಿಸಿದನು. ಆಗ ನಾನು ಒಮ್ಮೆಲೆ ಗಾಬರಿಗೊಂಡು ನನ್ನ ವಶದಲ್ಲಿದ್ದ ಬಸ್ಸನ್ನು ನಿಲ್ಲಿಸಿ ಕೆಳಗೆ ಇಳಿದು ನೋಡಲು ನನ್ನ ಬಸ್ಸಿನ ಹಿಂದಿನಭಾಗ ಜಖಂ ಗೊಂಡಿದ್ದು. ಸದರ ಘಟನೆಯಿಂದ ನನಗೆ ಹಾಗೂ ಯಾವೂದೇ ಪ್ರಯಾಣಿಕರಿಗೆ ಗಾಯಗಳು ಕಂಡುಬಂದಿರುವದಿಲ್ಲ ನಮ್ಮ ಬಸ್ಸಿಗೆ ಡಿಕ್ಕಿಪಡಿಸಿದ ಲಾರಿ ನಂ.ನೋಡಲು ಎಮ್‌.ಹೆಚ್-25 ಯು-8946 ನೇದ್ದು ಇದ್ದು ಅದರ ಚಾಲಕನ ಹೆಸರು ನಿಜಾಮ ಅಂತಾ ಗೊತ್ತಾಗಿದ್ದು ಸದರಿ ಲಾರಿಯ ಎದುರಿನ ಕ್ಯಾಬಿನ್ ಭಾಗ ಜಖಂಗೊಂಡಿದ್ದು ಇರುತ್ತದೆ. ಕಾರಣ ನಮ್ಮ ಮೇಲಾಧಿಕಾರಿಗಳಿಗೆ ಸದರಿ ವಿಷಯ ತಿಳಿಸಿ ಈಗ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ಸದರಿ ನಮ್ಮ ಬಸ್ಸಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಲಾರಿ ನಂ.ಎಮ್ಹೆಚ್-25 ಯು-8946 ನೇದ್ದರ ಚಾಲಕ  ನಿಜಾಮ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು  ಫಿರ್ಯಾದಿ‌ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ 07/01/2023 ರಂದು 6:00 ಪಿ.ಎಮ್ ಕ್ಕೆ ಕಾಮರೆಡ್ಡಿ ಆಸ್ಪತ್ರೆಯಿಂದ ಕುಮಾರಿ ಮೋನಿಕಾ ತಂದೆ ಮಲ್ಲಿಕಾರ್ಜುನ ಭಾವಿಮನಿ ಇವರ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಕಾಮರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಎಮ್.ಎಲ್.ಸಿ ಪತ್ರ ವಸೂಲ ಮಾಡಿಕೊಂಡು ಗಾಯಾಳು ಮೋನಿಕಾ ಇವಳಿಗೆ ನೋಡಲು ಅವಳು ಮೂಕಳಾಗಿದ್ದು, ಅಲ್ಲಿಯೆ ಇದ್ದ ಅವರ ತಾಯಿಯಾದ ಶೀಲಾಬಾಯಿ ಇವರಿಗೆ ವಿಚಾರಿಸಿ ಹೇಳಿಕೆ ಪಡೆದುಕೊಂಡ ಸಾರಂಶವೆನೆಂದರೆ, ಫಿರ್ಯಾದಿ ಮತ್ತು ಅವಳ ಮಗಳಾದ ಮೋನಿಕಾ ಇಬ್ಬರೂ ಸುಪರ ಮಾರ್ಕೆಟ ಸಿಟಿ ಬಸ ಸ್ಟ್ಯಾಂಡಿಗೆ ಬಂದು ಮಾರ್ಕೆಟನಲ್ಲಿ ಮಧ್ಯಾಹ್ನ 3:30 ಗಂಟೆ ಸುಮಾರಿಗೆ ಜವಳಕರ ಅಂಗಡಿ ಕಡೆಯಿಂದ ಚಪ್ಪಲ ಬಜಾರ ಕಡೆಗೆ ಹೋಗುವ ಕುರಿತು ಜನತಾ ಬಜಾರ ಕ್ರಾಸ್ ಹತ್ತೀರ ರಸ್ತೆ ದಾಟುತ್ತಿರುವಾಗ ಒಂದು ಮೋಟರ ಸೈಕಲ ಸವಾರನು ಸಿಟಿ ಬಸ ಸ್ಟ್ಯಾಂಡ ಕಡೆಯಿಂದ ಚೌಕ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ಮೋಟರ ಸೈಕಲ ನಂ. ಕೆಎ 32 ವಿ 1154 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನಮ್ಮ ಹಿಂದಿನಿಂದ ಬಂದು ಫಿರ್ಯಾದಿ ಮಗಳಾದ ಮೋನಿಕಾಳಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತನ್ನ ಮೋಟರ ಸೈಕಲ ಸಮೇತ ಓಡಿ ಹೋಗಿದ್ದು, ಮೋಟರ ಸೈಕಲ ಸವಾರನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 09-01-2023 12:14 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080