Feedback / Suggestions

ಸಂಚಾರಿ ಪೊಲೀಸ ಠಾಣೆ -2 :- ದಿನಾಂಕ 06/12/2020 ರಂದು ಮುಂಜಾನೆ 08:30 ಗಂಟೆಗೆ ಶ್ರೀಮತಿ ಜ್ಯೋತಿ ಗಂಡ ಕಮಲಾಕರ್ ದೇಸಾಯಿ ಸಾ; ಆಶ್ರಯ ಕಾಲೋನಿ ಫಿಲ್ಟರ್ ಬೇಡ್ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕೈ ಬರಹದಿಂದ ಬರೆದ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ 05/12/2022 ರಂದು ರಾತ್ರಿ 10:30 ಗಂಟೆ ಸುಮಾರಿಗೆ ನನ್ನ ಗಂಡ ಕಮಲಾಕರ್ ಇವರು ಅಫಜಲಪೂರ ರೋಡಿನ ದತ್ತ ದಾಬಾದ ಕೆಲಸದಿಂದ ಮರಳಿ ತಮ್ಮ ಹೊಂಡಾ ಶೈನ್ ಮೋಟಾರ ಸೈಕಲದ ಮೇಲೆ ಶರಣಸಿರಸಗಿ ತಾಂಡಾದ ಕಮಾನದ ಹತ್ತಿರ ಬರುತ್ತಿರುವಾಗ ಎದುರುಗಡೆಯಿಂದ ಬುಲೇರೋ ಗೂಡ್ಸ್ ವಾಹನ ನಂ KA 32 D-5088 ನೇದ್ದರ ಸವಾರನಾದ ಲಕ್ಷ್ಮಿಕಾಂತ ತಂದೆ ಜಗಪ್ಪಾ ಈತನು  ಅತಿವೇಗದಿಂದ ಮತ್ತು ಅನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿದರಿಂದ ಭಾರಿಗಾಯಗೊಂಡ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ, ಅಪಘಾತ ಪಡಿಸಿದ ವಾಹನ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕೆಂದು ಅಂತಾ ಇತ್ಯಾದಿ ಕೊಟ್ಟ ಫಿರ್ಯಾಧಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರಾಘವೇಂದ್ರ ನಗರ ಪೊಲೀಸ ಠಾಣೆ :-  ದಿನಾಂಕಃ 06.12.2022 ರಂದು 00.30 ಗಂಟೆಯ ಸುಮಾರಿಗೆ ಶ್ರೀ ಬಸವರಾಜ ಪಿಸಿ 255 ರಾಘವೇಂದ್ರ ನಗರ ಪೊಲೀಸ್ ಠಾಣೆ ಕಲಬುರಗಿ ರವರು ಠಾಣಗೆ ಹಾಜರಾಗಿ ವರದಿ ನೀಡಿದರ ಸಾರಾಂಶವೆನೆಂದರೆ ದಿನಾಂಕಃ 05.12.2022 ರಂದು ಸಾಯಾಂಕಾಲ 5.30 ಗಂಟೆಯಿಂದ ನಾನು ಬಸವರಾಜ ಪಿಸಿ 255 ರಾಘವೇಂದ್ರ ನಗರ ಪೊಲೀಸ್ ಠಾಣೆ ಕಲಬುರಗಿ ಮತ್ತು ಶ್ರೀ ಚಂದ್ರಕಾಂತ ಪಿಸಿ 246  ರವರು ಕುಡಿಕೊಂಡು ಠಾಣಾ ವ್ಯಾಪ್ತಿಯಲ್ಲಿ ಚಿತ್ತಾ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿರುವಾಗ ಮಾನ್ಯರವರು ನಮಗೆ ಆದೇಶ ಮಾಡಿದೆನೆಂದರೆ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಮತ್ತು ಅಕ್ರಮ ಮಾದಕ ವಸ್ತುಗಳ ಮಾರಾಟ ಮಾಡುವವರ ಮತ್ತು ಗಾಂಜಾ ಸೇವನೆ ಮಾಡುವವರ ಮಾಹಿತಿ ಸಂಗ್ರಹಿಸಿಕೊಂಡು ಠಾಣೆಗೆ ಬರುವಂತೆ ಮಾನ್ಯರವರು ಆದೇಶ ಮಾಡಿದರ ಮೇರೆಗೆ ನಾವುಗಳು ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಮಾಡುತ್ತಾ ರಾತ್ರಿ 9.00 ಗಂಟೆಯ ಸುಮಾರಿಗೆ ಮಿರ್ಚಿ ಗೋದಾಮದ ಹತ್ತಿರ ಇರುವಾಗ ಚೆಡ್ಡಿ ಹೋಟೆಲ್ ಹತ್ತಿರ ಯಾರೋ ಒಬ್ಬ ವ್ಯಕ್ತಿ ಮಾದಕ ವಸ್ತು ಸೇವನೆ ಮಾಡಿದ ನಶೆಯಲ್ಲಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಸುತ್ತಿರುವ ಬಗ್ಗೆ ಖಚೀತವಾದ ಮಾಹಿತಿ ಬಂದ ಮೇರೆಗೆ ನಾವು ತಕ್ಷಣ ಸದರಿ ಸ್ಥಳಕ್ಕೆ ಹೋಗಿ ನೋಡಲು ಒಬ್ಬ ವ್ಯಕ್ತಿ ( ಯಾವದೋ ನಶೆಯಲ್ಲಿ) ಅಮಲಿನಲ್ಲಿ ಇರುವದು ಖಚಿತಪಡಿಸಿಕೊಂಡು ಸದರಿಯನಿಗೆ ನಾವಿಬ್ಬರು ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲು  ಆತನು ತನ್ನ ಹೆಸರು ಫಯಾಜ್ ತಂದೆ ಸೈಯದ ಕಲೀಮೋದ್ದಿನ ವಯಃ 17 ವರ್ಷ ಜಾಃ ಮುಸ್ಲಿಂ ಉಃ ಪ್ಲಂಬರ ಕೆಲಸ ಸಾಃ ಅಲಪಾ ಸಿಟಿ ಹತ್ತಿರ ಮಿಸ್ಬಾ ನಗರ ಕಲಬುರಗಿ ಅಂತ ತಿಳಿಸಿದ್ದು ಆತನ ಬಾಯಿಯಿಂದ ಯಾವುದೋ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಕೆಟ್ಟ ವಾಸನೆ ಬರುತ್ತಿದ್ದರಿಂದ ಸದರಿಯವನಿಗೆ ವಶಕೆಪಡೆದುಕೊಂಡು ಸಾಯಾಂಕಾಲ 9.30 ಗಂಟೆಗೆ ಠಾಣೆಗೆ ತಂದು ಸದರಿಯವನ ಮಾದಕ ವಸ್ತು ಸೇವೆನೆ ಮಾಡಿರುವನು ಹೇಗೆ ಎಂಬುವದರ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ ಕಲಬುರಗಿ ರವರಲ್ಲಿ ಪ್ರಪತ್ರದ ಮೂಲಕ ವಿನಂತಿಸಿಕೊಂಡು ಸದರಿಯವನಿಗೆ ಜೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸದರಿಯವನು ಮಾದಕ ವಸ್ತು ಸೇವೆನೆ ಮಾಡಿರುವ ಬಗ್ಗೆ ವೈದ್ಯಾದಿಕಾರಿಗಳು Positive for 1) coccaine, 2)AMP (Amphetamine), 3) BAR (Barbhmate)ಅಂತ ವರದಿ ನೀಡಿರುವದರಿಂದ ಸದರಿಯವನಿಗೆ ರಾತ್ರಿ 12.30 ಗಂಟೆಯ ಸುಮಾರಿಗೆ ಠಾಣೆಗೆ ತಂದು ಹಾಜರಪಡಿಸಿದ್ದು ಸದರಿಯವನು ಗಾಂಜಾ ಸೇವನೆ ಮಾಡಿರುವದು ಖಚಿತಪಟ್ಟಿದರಿಂದ ಸದರಿಯವನ ವಿರುದ್ಧ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ: 06-12-2022  ರಂದು ೧:೧೫ ಪಿ.ಎಮ್ ದಿಂದ ೨:೧೫ ಪಿ.ಎಮ್ ದ ವರೆಗೆ ಸದರಿ ಆರೋಪಿತರು  ಠಾಣೆಯ ವ್ಯಾಪ್ತಿಯ ಜೇವರ್ಗಿ ರಸ್ತೆಯ ರೇಣುಕಾ ಕಾಂಪ್ಲೆಕ್ಸ್ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ಯವರಿಗೆ ದಸ್ತಗಿರಿ ನಿಯಮಾವಳಿ ಪಾಲಿಸಿ ಆಟಕ್ಕೆ ಉಪಯೋಗಿಸಿದ ನಗದು ಹಣ 11650/- ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿ ದೂರು  ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 06-12-2022  ರಂದು ೮:೧೫ ಪಿ.ಎಂಕ್ಕೆ ಶ್ರೀ ಸಂತೋಷ ಎಸ್.ಡಿ.ಎ ತಹಸೀಲ್ ಕಾರ್ಯಾಲಯ ಕಲಬುರಗಿ ರವರು ಕಾರ್ಯಾಲಯದ ಪತ್ರ ಸಂ. ಕಂ/ಎಮ್.ಎ.ಜಿ/೨೬೦/೨೦೨೨-೨೩ ದಿನಾಂಕ: ೦೬/೧೨/೨೦೨೨ ನೇದ್ದನ್ನು ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ಶ್ರೀ ಗುರಪ್ಪ ತಂದೆ ಬಾಬುರಾಯ ಬರ್ಮಾ ಸಾ: ಫರತಬಾದ್ ಇವರು ಕೊಟ್ಟಿರುವ ಮನವಿ ಅರ್ಜಿ ಕುರಿತು ಈ ಕಛೇರಿಯಲ್ಲಿ ಪ್ರಕರಣವು ವಿಚಾರಣೆಯ ಹಂತದಲ್ಲಿರುತ್ತದೆ. ಶ್ರೀ ಗುರಪ್ಪ ತಂದೆ ಬಾಬುರಾಯ ಹಾಗೂ ಅವರ ಹೆಂಡತಿ ಭಾಗ್ಯಶ್ರೀ ಗಂಡ ಗುರಪ್ಪ ಇವರು ಪ್ರಕರಣದಲ್ಲಿಯ ವಿಚಾರಣೆಗೆ ಹಾಜರಾಗಿ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಹೇಳಿ ಕುಟುಂಬಸ್ಥರು ವಿಚಾರಣೆಯಲ್ಲಿ ಜಗಳ ಮಾಡುವದು ಸಾಮಾನ್ಯವಾಗಿರುತ್ತದೆ. ಸದರಿಯವರು ಪದೇ ಪದೇ ಕಛೇರಿಗೆ ಕಛೇರಿಯ ಕೆಲಸದಲ್ಲಿ ಅಡೆತಡೆ ಉಂಟು ಮಾಡುತ್ತಾ ತೊಂದರೆಯನ್ನು ನೀಡುತ್ತಾ ಬರುತ್ತಿದ್ದಾರೆ. ದಿನಾಂಕ: ೦೨/೧೧/೨೦೨೨ ರಂದು ತಹಸೀಲ್ ಕಛೇರಿ ಕಲಬುರಗಿಗೆ ಹಾಗೂ ಮಾನ್ಯ ಪ್ರಾದೇಶಿಕ ಆಯುಕ್ತರು ಕಲಬುರಗಿ, ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿ ಮತ್ತು ಮಾನ್ಯ ಸಹಾಯಕ ಆಯುಕ್ತರು ಕಲಬುರಗಿ ರವರಿಗೆ ಮನವಿ ಅರ್ಜಿಯನ್ನು ಕೊಟ್ಟಿದ್ದು ಸದರಿ ಮನವಿಯಲ್ಲಿ ತಹಸೀಲ್ ಕಛೆರಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿರುತ್ತಾರೆ. ಪ್ರಕರಣವು ವಿಚಾರಣೆ ಹಂತದಲ್ಲಿದ್ದರೂ ಸಹ ಈ ರೀತಿ ಬರಹದಲ್ಲಿ ಹೇಳಿಕೆಯನ್ನು ನೀಡಿ ಕಾನೂನಿನ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಅಧಿಕಾರಿಗಳಿಗೆ ಹೆದರಿಸುವ ಅಪರಾಧವನ್ನು ಎಸಗಿರುತ್ತಾರೆ. ಅಲ್ಲದೇ ಇಂದು ದಿನಾಂಕ: ೦೬/೧೨/೨೦೨೨ ರಂದು ಸಮಯ ಬೆಳಿಗ್ಗೆ ೧೧:೪೦ ಕ್ಕೆ ಶ್ರೀ ಗುರಪ್ಪ ತಂದೆ ಬಾಬುರಾಯ ಹಾಗೂ ಅವರ ಹೆಂಡತಿ ಭಾಗ್ಯಶ್ರೀ ಗಂಡ ಗುರಪ್ಪ ಬರ್ಮಾ ಇವರು ಕಛೇರಿಗೆ ಬಂದು ಇಂದೆ ಪ್ರಕರಣವು ಇತ್ಯರ್ಥ ಮಾಡಬೇಕೆಂದು ನನ್ನ ಛೇಂಬರಿನಲ್ಲಿ ಕೀರುಚಾಡುವುದು ಪ್ರಾರಂಬಿಸಿ ತನ್ನ ಜೇಬಿನಲ್ಲಿರುವ ಯಾವುದೋ ಬಾಟಲಿಯನ್ನು ತೆಗೆದು ನಿಮ್ಮ ಸಮಕ್ಷಮ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬಾಟಲಿ ಓಪನ್ ಮಾಡುವಾಗ ಆ ಸಮಯದಲ್ಲಿ ರೇವಣಸಿದ್ದಪ್ಪ ಕಂದಾಯ ನಿರೀಕ್ಷಕರು ಪಟ್ಟಣ ಹಾಗೂ ಹುಸೇನ ಪಾಷಾ ಶಿರಸ್ತೇದಾರ ಇವರು ಸದರಿಯವರ ಕೈಯಲ್ಲಿ ಇರುವ ಬಾಟಲಿಯನ್ನು ಒಗೆದಿರುತ್ತಾರೆ. ಈ ಸಮಯದಲ್ಲಿ ಅವರೊಂದಿಗೆ ಭಾಗ್ಯಶ್ರೀ ಗಂಡ ಗುರಪ್ಪ ಬರ್ಮಾ ಇವರ ಸಂಬಂದಿಕರಾದ ಸಿದ್ದು ತಂದೆ ಸೈಬಣ್ಣ ಬೂಸಾ ಸಾ: ಹೊನ್ನಕಿರಣಗಿ ಇತನು ನಮ್ಮ ಗಮನಕ್ಕೆ ಇಲ್ಲದೇ ಆತನು ತನ್ನ ಮೊಬೈಲನಲ್ಲಿ ಈ ಕೃತ್ಯದ ಬಗ್ಗೆ ವಿಡಿಯೋ ಮಾಡಿಕೊಂಡಿರುತ್ತಾರೆ. ಸದರಿಯವರ ಮೊಬೈಲ್‌ನಲ್ಲಿರುವ ವಿಡಿಯೋ ಪರೀಶಿಲಿಸಿದರೆ ನಿಜಾಂಶ ತಿಳಿಯುತ್ತದೆ. ನಾನು ಎದ್ದು ಹೊರಗಡೆ ಬರುವಾಗ ಭಾಗ್ಯಶ್ರೀ ಗಂಡ ಗುರಪ್ಪ ಸರ್ಕಾರಿ ಕೆಲಸಕ್ಕೆ ಅಡೆತಡೆ ಮಾಡಿರುತ್ತಾರೆ. ನಾನು ಹೊರಗಡೆ ಬಂದು ನನ್ನ ಸರ್ಕಾರಿ ವಾಹನದಲ್ಲಿ ಕುಂತು ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಗೆ ಚುನಾವಣಾ ಕೆಲಸಕ್ಕೆ ಹೊರಡುವ ಸಮಯದಲ್ಲಿಯೂ ಸಹ ಗುರಪ್ಪ ತಂದೆ ಬಾಬುರಾಯ ಬರ್ಮಾ ಹಾಗೂ ಅವರ ಹೆಂಡತಿ ಭಾಗ್ಯಶ್ರಿ ಗಂಡ ಗುರಪ್ಪ ಸದರಿಯವರು ವಾಹನಕ್ಕೆ ಅಡ್ಡಗಟ್ಟಿ ಅಡೆತಡೆ ಉಂಟು ಮಾಡಿರುತ್ತಾರೆ. ಸರ್ಕಾರಿ ಕೆಲಸ ನಿರ್ವಹಿಸುವ ಸಮಯದಲ್ಲಿ ತೊಂದರೆಯನ್ನು ನೀಡಿರುತ್ತಾರೆ. ಇಂದು ಗುರಪ್ಪ ತಂದೆ ಬಾಬುರಾಯ ಬರ್ಮಾ ಹಾಗೂ ಅವರ ಹೆಂಡತಿ ಭಾಗ್ಯಶ್ರೀ ಗಂಡ ಗುರಪ್ಪ ಬರ್ಮಾ ಸಾ: ಫರತಬಾದ, ಸಿದ್ದು ತಂದೆ ಸೈಬಣ್ಣ ಬೂಸಾ ಸಾ; ಹೊನ್ನಕಿರಣಗಿ ಇವರು ಪೂರ್ವನಿಯೋಜಿತ ಸಂಚನ್ನು ಮಾಡಿ ಈ ರೀತಿಯ ಕೃತ್ಯವನ್ನು ಎಸಗಿರುತ್ತಾರೆ. ಸದರಿ ಮೂರು ಜನರು ಮತ್ತು ಈ ಪೂರ್ವ ನಿಯೋಜಿತ ಸಂಚಿನ ಹಿಂದೆ ಯಾರದೋ ಹೇಳಿಕೆ ನಿರ್ದೇಶನ ಕೈವಾಡ ಇರುವುದು ಕಂಡು ಬರುತ್ತಿದೆ. ಕಾರಣ ಜೀವಹಾನಿ ಮಾಡಿಕೊಳ್ಳುವುದು ಕಾನೂನಿನಲ್ಲಿ ಅಪರಾದವಾಗಿರುತ್ತದೆ. ಅಲ್ಲದೇ ಸರ್ಕಾರಿ ಕಛೇರಿಗೆ ಬಂದು ಈ ಕರತ್ಯ ಎಸಗಿದ್ದು ಕಛೇರಿಯ ಕೆಲಸದಲ್ಲಿ ಅಡೆತಡೆ ಉಂಟು ಮಾಡಿ ತೊಂದರೆ ನೀಡಿದ್ದಲ್ಲದೇ ಜೀವ ಬೆದರಿಕೆ ಹಾಕಿದಂತಾಗಿರುತ್ತದೆ. ತಾಲೂಕಿನ ದಂಡಾದಿಕಾರಿಗಳ ಸಮಕ್ಷಮ ಹಾಗೂ ತಾಲೂಕಿನ ದಂಡಾದಿಕಾರಿಗೆ ಸರ್ಕಾರಿ ಕೆಲಸ ನಿರ್ವಹಿಸುವದಕ್ಕೆ ಅಡೆತಡೆ ಮಾಡಿರುವದರಿಂದ ಸದರಿಯವರ ವಿರುದ್ದ ಭಾರತಿಯ ದಂಡ ಸಂಹಿತೆ ಕಾಯ್ದೆ ಅಡಿಯಲ್ಲಿ ಸದರಿ ಗುರಪ್ಪ ತಂದೆ ಬಾಬುರಾಯ ಬರ್ಮಾ, ಭಾಗ್ಯಶ್ರೀ ಗಂಡ ಗುರಪ್ಪ ಬರ್ಮಾ, ಸಿದ್ದು ತಂದೆ ಸೈಬಣ್ಣ ಬೂಸಾ ಸಾ: ಹೊನ್ನಕಿರಣಗಿ ಇವರ ವಿರುದ್ದ ಕಾನೂನು ಪ್ರಕರಣವನ್ನು ದಾಖಲಿಸಲು ಮತ್ತು ಈ ಕೃತ್ಯದ ಹಿಂದೆ ಕೈವಾಡ ಇರುವವರನ್ನು ಪತ್ತೆ ಹಚ್ಚಿ ಅವರ ವಿರುದ್ದವು ಕಾನೂನಿನ ಪ್ರಕಾರ ಪ್ರಕರಣವನ್ನು ದಾಖಲಿಸಲು ಕೋರಲಾಗಿದೆ ಅಂತ ಕೊಟ್ಟ ಪತ್ರದ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ 06-12-2022  ರಂದು ಸರಕಾರಿ   ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೇನೆಂದರೆ ಸದರಿಯವರಿಗೆ ಖಚಿತ ಬಾತ್ಮಿ ಬಂದಿದ್ದೆನೆಂದರೆ ಸಿಂದಗಿ(ಬಿ) ಗ್ರಾಮದಲ್ಲಿ ಒಬ್ಬ ವ್ಯಕ್ತಿಯು ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ ಗೃಹ ಬಳಕೆಯ ಸಿಲಿಂಡರ್ ಗಳನ್ನು ಆಟೋಗಳಿಗೆ ತುಂಬುತ್ತಿದ್ದಾನೆಂದು ಬಾತ್ಮಿ ಬಂದಿದ್ದರಿಂದ ಸದರಿವರೊಂದಿಗೆ ಪೊಲೀಸ್ ಸಿಬ್ಬಂದಿಗಳು ದಾಳಿ ಮಾಡಲಾಗಿ ಸದರಿ ಮುದ್ದೆ ಮಾಲನ್ನು ವಶಕ್ಕೆ ಪಡೆದಿದ್ದು ಸದರಿ ಆರೋಪಿತನು ಓಡಿ ಹೋಗಿರುತ್ತಾನೆ ಸದರಿ ಆರೋಪಿತನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರೋಜಾ ಪೊಲೀಸ ಠಾಣೆ :- ದಿನಾಂಕ: 05/12/22 ರಂದು 8.00 ಗಂಟೆಗೆ ಹಳೆಯ ದ್ವೇಷದ ಹಿನ್ನಲೆಯಲ್ಲಿ , ಫಿರ್ಯಾದಿದಾರರಿಗೆ ಕೋರ್ಟನಲ್ಲಿ ಸಾಕ್ಷಿ ನುಡಿದರೆ , ಖಲ್ಲಾಸ್ ಮಾಡುತ್ತೇವೆಂದು ಹೆದರಿಸಿ, ಅವಾಚ್ಯ ಶಬ್ಧಗಳಿಂದ ಬೈಯ್ದು, ಚಾಕುವಿನಿಂದ ಫಿರ್ಯಾದಿಯ ಎಡಗಾಲಿನ ತೊಡೆಗೆ ಹೊಡೆದು ರಕ್ತಗಾಯ ಪಡಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 12-12-2022 03:25 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080