ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 03-11-2022  ರಂದು ರಾತ್ರಿ ೧೧:೦೦ ಗಂಟೆಯಿಂದ ದಿನಾಂಕ: ೦೪-೧೧-೨೦೨೨ ರಂದು ಬೆಳಿಗ್ಗೆ ೦೫:೦೦ ಗಂಟೆಯ ಅವದಿಯಲ್ಲಿ ಯಾರೋ ಕಳ್ಳರು ಪರ‍್ಯಾದಿ ನಂದೂರ ಇಂಡಸ್ಟ್ರೀಯಲದಲ್ಲಿ ಓಂ ಶ್ರೀ ರಾಯಿರಾಮ ದಾಲ ಇಂಡಸ್ಟ್ರೀಜ ಕಾರ್ಖಾನೆಯಲ್ಲಿದ ತಲಾ ೫೦ ಕೆ.ಜಿ ಒಟ್ಟು ೧೦ ಪಾಕೇಟ ಬೆಳೆ ಚೀಲಗಳು ಅ.ಕಿ ೫೯೦೦೦/-ರೂ ಕಿಮ್ಮತಿವುಗಳು ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ: 06-11-2022  ರಂದು ಸಾಯಂಕಾಲ ೦೭:೨೩ ಪಿ.ಎಮ್ ಕ್ಕೆ ಫಿರ್ಯಾದಿದಾರರಾದ ಹಣಮಂತ್ರಾಯ ತಂದೆ ಕರಬಸಪ್ಪ ಹಡಪದ ವಯ:೨೫ವರ್ಷ ಜಾ:ಲಿಂಗಾಯತ ಉ:ಕ್ಷೌರಿಕ ಸಾ//ಉದನೂರ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರು ಅರ್ಜಿ ಎನೆಂದರೆ ನನ್ನದೊಂದು ಸ್ವಂತ ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟಾರ್ ಸೈಕಲ್ ನಂ ಏಂ-೩೨-ಇಕಿ-೬೯೦೧ ನೇದ್ದು ಇದ್ದು ಸದರಿ ಮೋಟಾರ್ ಸೈಕಲ್ ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ: ೨೯/೧೦/೨೦೨೨ ರಂದು ಮದ್ಯಾಹ್ನ ೧೨:೦೦ ಪಿಎಮ್ ಗಂಟೆಗೆ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯ ಎದುರುಗಡೆ ಇರುವ ವಾಹನ ನಿಲ್ಲಿಸುವ ಸ್ಥಳದಲ್ಲಿ ನಿಲ್ಲಿಸಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಒಳಗಡೆ ಹೋಗಿ ನಮ್ಮ ಸಂಬಂದಿಕರನ್ನು ಮಾತನಾಡಿಸಿಕೊಂಡು ಮದ್ಯಾಹ್ನ ೦೩:೦೦ ಪಿಎಮ್ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಂಚಾರಿ ಪೊಲೀಸ ಠಾಣೆ -1 :- ದಿನಾಂಕ 06.11.2022 ರಂದು ಬೆಳಿಗ್ಗೆ 10-00 ಗಂಟೆಗೆ ಶ್ರೀ ಶಾಂತಪ್ಪಾ ತಂದೆ ಶರಣಪ್ಪಾ ಪೂಜಾರಿ ಸಾ: ಸಂತೋಷ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ 03-11-2022 ರಂದು ಮದ್ಯಾಹ್ನ ನಾನು ಕೆ.ಕೆ.ಆರ.ಟಿ.ಸಿ ಬಸ್ಸ ಡ್ರೈವರ ಕೆಲಸ ಮುಗಿಸಿಕೊಂಡು ಹಳೆ ಜೇವರ್ಗಿ ರೋಡ ಮುಖಾಂತರ ಮನೆಗೆ ಹೋಗುವಾಗ ದಾರಿ ಮದ್ಯ ಇರುವ ಮಹಿಳಾ  ಕಾಲೇಜನಲ್ಲಿ ನನ್ನ ಕೆಲಸ ಇರುವದರಿಂದ ನಾನು ಮೋಟಾರ ಸೈಕಲ ನಂಬರ ಕೆಎ-32/ಇಎಕ್ಸ-0359 ನೇದ್ದನ್ನು ಚಲಾಯಿಸಿಕೊಂಡು ಮೋಹನ ಲಾಡ್ಜ್ ಕ್ರಾಸ ಮುಖಾಂತರ ಮಹಿಳಾ ಕಾಲೇಜ ಹತ್ತೀರ ಹೋಗಿ ಎಡ ರೋಡಿನಿಂದ ಬಲಗಡ ಬರುವ ಕಾಲೇಜಕ್ಕೆ ನಾನು ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ಮದ್ಯಾಹ್ನ 3-30 ಗಂಟೆ ಸುಮಾರಿಗೆ ರಾಮ ಮಂದಿರ ಸರ್ಕಲ ಕಡೆಯಿಂದ ಮೋಹನ ಲಾಡ್ಜ ಕ್ರಾಸ ಕಡೆಗೆ ಹೋಗುವ ಕುರಿತು ಮೋಟಾರ ಸೈಕಲ ನಂಬರ ಕೆಎ-32/ವ್ಹಿ-7024 ನೇದ್ದರ ಸವಾರ ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಾನು ನನ್ನ ಮೋಟಾರ ಸೈಕಲದೊಂದಿಗೆ ಕೆಳಗಡೆ ಬಿದ್ದಾಗ ನಂದಪ್ಪ ತಂದೆ ಮುದ್ದಪ್ಪ ಜಮಾದಾರ ಹಾಗೂ ಮಲ್ಲಿನಾಥ ತಂದೆ ಹಣಮಂತರಾವ ಸನಗುಂದಿ ಇಬ್ಬರೂ ಬಂದು ನನಗೆ ಎಬ್ಬಿಸಿ ರೋಡ ಪಕ್ಕದಲ್ಲಿ ಕೂಡಿಸಿದರು. ಅಪಘಾತ ಪಡಿಸಿದ ಮೋಟಾರ ಸೈಕಲ ಸವಾರ ತನ್ನ ಮೋಟಾರ ಸೈಕಲ ನಿಲ್ಲಿಸಿದಂತೆ ಮಾಡಿ ಓಡಿ ಹೋಗಿದ್ದು ಸದರ ಘಟನೆಯಿಂದ ನನ್ನ ಎಡಗಾಲು ರಿಸ್ಟ ಹತ್ತೀರ ಗುಪ್ತಪೆಟ್ಟು ಬಲಗಾಲು ಪಾದದ ಮೇಲ್ಬಾಗದಲ್ಲಿ ರಕ್ತಗಾಯವಾಗಿತ್ತು. ನಂದಪ್ಪಾ ಮತ್ತು ಮಲ್ಲಿನಾಥ ಇಬ್ಬರೂ ನನಗೆ ಪರಿಚಯದ ವೈದ್ಯರ ಹತ್ತೀರ ಹೋಗಿ ಉಪಚಾರ ಮಾಡಿಸಿದ್ದು ನಾನು ಮನೆಗೆ ಹೋಗಿ ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ತಡವಾಗಿ ಪೊಲೀಸ ಠಾಣೆಗೆ ಬಂದಿದ್ದು ತಾವುಗಳು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಗಾಯಗೊಳಿಸಿದ ಮೋಟಾರ ಸೈಕಲ ನಂಬರ ಕೆಎ-32/ವ್ಜಿ-7024 ನೇದ್ದರ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಆತನ ಹೆಸರು ಗೋತ್ತಾಗಿರುವದಿಲ್ಲ. ಆತನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೆನೆ. ಮತ್ತು ನನಗೆ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲು ವಿನಂತಿ ಅಂತಾ ಫಿರ್ಯಾದಿ ದೂರು ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 22-11-2022 01:36 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080