ಅಭಿಪ್ರಾಯ / ಸಲಹೆಗಳು

ರಾಘವೇಂದ್ರ ನಗರ ಪೊಲೀಸ್‌ ಠಾಣೆ :-  ನಮ್ಮಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿಯೊಂದಿಗೆ ವಾಸವಾಗಿದ್ದು ನನ್ನ ಹೆಂಡತಿಯಾದ ಶ್ರೀಮತಿ ಜುಲೇಖಾಬೇಗಂ ಇವರಿಗೆ ಕ್ಯಾನ್ಸರ್ರೋಗ ಪ್ರಯುಕ್ತ ಎರಡು ತಿಂಗಳ ಹಿಂದೆ ನಮ್ಮ ಸಂಬಂಧಿಕರ ಮನೆಯಲ್ಲಿ ಬಿಟ್ಟಿರುತ್ತೇನೆ. ನಾನು ದಿನಾಲು ಇಂದಿರಾ ಆಸ್ಪತ್ರೆಯಲ್ಲಿ ಲ್ಯಾಬಟೇಕ್ನೇಷನ ಕೆಲಸ ಮಾಡಿಕೊಂಡು ನಾನು ದಿನಾಲು ಮನೆಗೆ ಬಂದು ಹೋಗುವದು ಮಾಡುತ್ತೇನೆ. ಹೀಗೆ ಇರುವಾಗ ದಿನಾಂಕಃ 04.10.2022 ರಂದುಮದ್ಯಾಹ್ನ 1.30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಗೆ ಸರಿಯಾಗಿ ಕೀಲಿ ಹಾಕಿಕೊಂಡು ನಾನು ಕೆಲಸಕ್ಕೆ ಹೋಗಿ ನನ್ನ ಹೆಂಡತಿ ಹತ್ತಿರ ಹೋಗಿ ದಿನಾಂಕಃ 05.10.2022 ರಂದುಬೆಳಿಗ್ಗೆ 7.30 ಗಂಟೆಗೆ ಬಂದು ನೋಡಿದ್ದಾಗ ನಮ್ಮ ಮನೆಯ ಬಾಗಿಲು ಖುಲ್ಲಾ ಇರುವದನ್ನು ನೋಡಿ ಗಾಬರಿಗೊಂಡು ಮನೆಯೋಳಗೆ ಹೋಗಿ ನೋಡಿದ್ದಾಗ ನಮ್ಮ ಮನೆಯ ಬಾಗಿಲಕ್ಕೆ ಹಾಕಿರುವ ಕೀಲಿ ಮುರಿದ್ದು ಕೆಳಗಡೆ ಬಿದಿದ್ದು ಒಳಗಡೆ ಹೋಗಿ ನೋಡಿದ್ದಾಗ ನಮ್ಮ ಮನೆ ಅಲಮಾರ ಒಡೆದಿರುವದನ್ನು ನೋಡಿ ಗಾಬರಿಗೊಂಡು ನೋಡಿದ್ದಾಗ ಅಲಮಾರಿಯಲ್ಲಿ ಇಟ್ಟಿರುವ 1) 30 ಗ್ರಾಂ ಬಂಗಾರದ ರಾಣಿ ಹಾರ ಅಂಕಿಃ 75000/-, 2) 20 ಗ್ರಾಂ ಬಂಗಾರದ ನಕ್ಲೇಸ್ ಅಃಕಿಃ 50,000/-, 3) 15 ಗ್ರಾಂ ಬಂಗಾರದ ಮಂಗಳ ಸೂತ್ರ ಅಃಕಿಃ 42500/-, 4) 10 ಗ್ರಾಂ ಬಂಗಾರದ ಮಂಗಳ ಸೂತ್ರ ಅಃಕಿಃ 25000/-, 5) 35 ಗ್ರಾಂ ಬಂಗಾರದ ಪಾಟಲಿ ಅಃಕಿಃ 87500/-6) 15 ಗ್ರಾಂ ಜುಮಕ್ಕಿ ಅಃಕಿಃ 42500/-, 7) 4 ಜೋತೆ 21 ಗ್ರಾಂ ಬಂಗಾರ ಆಭರಣಗಳು ಅಃಕಿಃ 55000/-, 8) 26 ಗ್ರಾಂ ಬಂಗಾರದ 3 ಗ್ರಾಂನ 8 ಉಂಗರುಗಳು ಅಃಕಿಃ 65,000/-9) 10 ಗ್ರಾಂ ಬಂಗಾರದ ಚೈನ್ಅಃಕಿಃ 25000/-, 10) 10 ಗ್ರಾಂ ಬಂಗಾರದ ಬ್ರಾಸ್ಲೇಟ್ ಅಃಕಿಃ 25000/- ಹಾಗೂ 280000/- ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದುಇರುತ್ತದೆ. ದಿನಾಂಕಃ- 4.10.2022 ರಂದು ಮದ್ಯಾಹ್ನ 1.30 ಗಂಟೆಯಿಂದ ದಿನಾಂಕಃ 05.10.2022 ರಬೆಳಿಗ್ಗೆ 7.30 ರ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯೋಳಗೆ ಅತಿಕ್ರಮ ಪ್ರವೇಶ ಮಾಡಿ ಮನೆಯ ಬಾಗಿಲ ಕೀಲಿಕೊಂಡಿ ಮುರಿದು ಮನೆಯಲ್ಲಿಟ್ಟಿರುವ 192 ಗ್ರಾಂ ಬಂಗಾರದ ಆಭರಣಗಳು ಅಃಕಿಃ 492500/- ರೂಪಾಯಿ ಬೆಲೆ ಬಾಳುವದು ಹಾಗೂ 280000 ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನಮ್ಮ ಮನೆಯಲ್ಲಿ ನಮ್ಮ ಕುಟುಂಬದೊಂದಿಗೆ ವಿಚಾರಿಸಿಕೊಂಡು ಬಂದು ಇಂದು ತಡವಾಗಿ ದೂರು ಕೊಡುತ್ತಿದ್ದೆನೆ.  ಕಾರಣ ನಮ್ಮ ಮನೆಯ ಬಾಗಿಲು ಕೀಲಿ ಮುರಿದು ಮನೆಯಲ್ಲಿಟ್ಟಿರುವ ಬಂಗಾರದ ಆಭರಣಗಳು ಪತ್ತೆಹಚ್ಚಿ ನಮ್ಮ ಮನೆ ಕಳ್ಳತನ ಮಾಡಿದವರ ವಿರುದ್ಧ ಕಾನೂನು ಕ್ರಮ ಜರಗಿಸಲು ವಿನಂತಿ. ಅಂತಾ ಇತ್ಯಾಧಿಯಾಗಿ ದೂರು ನೀಡಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರಾಘವೇಂದ್ರ ನಗರ ಪೊಲೀಸ್‌ ಠಾಣೆ:- ದಿನಾಂಕ;26/04/2021 ರಂದು ಪಿರ್ಯಾದಿದಾರರಾದ ಬಸವರಾಜ ತಂದೆ ನಾಗೇಂದ್ರ ಝಳಕಿ ವಯ;55ವರ್ಷ ಉ;ಪೇಂಟರ ಕೆಲಸ ಸಾ;ಧನಗರಗಲ್ಲಿ ಬ್ರಹ್ಮಪೂರ ಕಲಬುರಗಿ ಇವರಿಗೆ ಆರೋಪಿತರಾದ 1) ನಂದರಾಯ ತಂದೆ ಗುಣವಂತ 2)ಚಂದ್ರಶಾ ತಂದೆ ಆನಂದರಾಯ 3)ಗಜನಂದ ತಂದೆ ಚಂದ್ರಶಾ 4) ವೀರೇಶ ತಂದೆ ಚಂದ್ರಶಾ 5) ಬಾಬುರಾವ ತಂದೆ ಮಾರುತಿ 6)ಭೀಮಲಿಂಗ ತಂದೆ ಶರಣಪ್ಪಾ ಯಳಸಂಗಿ ಇವರೆಲ್ಲರೂ ಕಾರ್ಸಮೇತ ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರ ಹೆಂಡತಿ ಮತ್ತು ಮಕ್ಕಳಿಗೆ ಅಪಹರಿಸಿಕೊಂಡು ಹೋಗಿ ಊರಿಗೆ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದ ಬಗ್ಗೆ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ ಠಾಣೆ :- ದಿನಾಂಕ:05-10-2022 ರಂದು ಸಂಜೆ ೦೮-೦೦ ಗಂಟೆಯಲ್ಲಿಮನೆಯ ಒಂದು ಕೋಣೆಯನ್ನ್ಲು ಬೀಗವನ್ನು ಹಾಕಿಕೊಂಡು ಹೋಗಿರುತ್ತೇನೆ. ನಂತರ ದಿನಾಂಕ:೦೬-೧೦-೨೦೨೨ ರಂದು ಬೆಳಿಗ್ಗೆ ೦೬-೩೦ ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ನಮ್ಮ ಸದರಿ ಕೋಣೆಯ ಕಿಟಿಕಿಯ ಗ್ರೀಲ್ ಬೆಂಡ್ ಮಾಡಿ ಒಳಗಡೆ ಪ್ರವೇಶ ಮಾಡಿ ಅದರಲ್ಲಿ ಇಟ್ಟಿದ್ದ, ೧) ಹೈಂಡ್ವೇರ್ ವಾಲ ಮಿಕ್ಸ್ರ್ ೨ ಅ,ಕಿ ೧೧೦೦೦/-ರೂ ೨) ಸಿಂಕ್ ಕಾಕ್ ೨ ಅಕಿ ೩೩೦೦/-ರೂ ೩) ಪ್ಲೇನ್ ಜಾಲಿ ೩ ಅಕಿ ೩೬೦/-ರೂ  ೪) ಯಾಂಗಲ್ ಕಾಕ್ ೧೨ ಅ,ಕಿ ೫೦೦೦/-ರೂ ೫) ಶಾವರ್ ೨ ಅಕಿ ೨೦೦೦/-ರೂ ೬) ಟೂ ಇನ್ ಒನ್ ಟಾಪ್ ೨ ಅಕಿ ೩೦೦೦/-ರೂ ೭) ಪಾಸೆಟ್ ೨ ಅಕಿ ೧೦೦೦/-ರೂ  ೮) ೨ ಪೀಟ್ ಕನೆಕ್ಟ್ ಪೈಂಪ್ ೧೨ ಅಕಿ ೧೪೦೦/-ರೂ ೯) ಪಿಲರ್ ಕಾಕ್ ೨ ಅಕಿ ೮೦೦/-ರೂ ೧೦) ವಾಟರ್ ಟೈಕ್ ಟಾಪ್ ೩ ಅಕಿ ೮೦೦/-ರೂ ೧೧) ನಿಪ್ಪಾಲ್ ೧೫ ಅ,ಕಿ ೧೦೦೦/-ರೂ ೧೨) ಲೋನ್ ಟಾಪ್ ೩೬೦/-ರೂ ೧೩) ವೆಷ್ಟ್ ಕಂಪ್ಲಿಂಗ್ ೨ ಅ,ಕಿ ೩೦೦/-ರೂ ೧೪) ವೆಷ್ಟ್ ಪೈಪ್ ಅ,ಕಿ ೧೮೦/-ರೂ ೧೫) ರಾಕ್ ಬೋಲ್ಟ್ ೨ ಅ,ಕಿ ೨೪೦/-  ೧೬) ಪೈಪ್ ೨ ಅ,ಕಿ ೬೦೦/-ರೂ ೧೭) ಸಾಲಭಟ್ಟ ಕ್ವಾಟಿಟಿ ೭೨ ಅ,ಕಿ ೧೪೦೦/-ರೂ ೧೮) ೧೮ ಇಂಚಿನ ಹ್ಯಾಂಡಲ್ ೧ ಅ,ಕಿ ೨೪೦೦/-ರೂ ೧೯) ೧೦ ಇಂಚಿನ್ ಹ್ಯಾಂಡಲ್ ೧ ಅ.ಕಿ ೧೨೦೦/-ರೂ ೨೦) ಗೋದ್ರೇಜ್ ಲಾಕ್ ಅ,ಕಿ ೨೪೦೦/-ರೂ ೨೧) ೬ ಇಂಚಿನ್ ಹಿಂಜಸ್ಸ್ ಅಕಿ ೩೦೦೦-ರೂ ೨೨) ಅಬೌಟ್ ಕ್ಯಾಪ್ ೩ ಅಕಿ ೬೦೦/-ರೂ ೨೩) ಡಿ/ಸಿ ಅ,ಕಿ ೧೪೦೦/-ರೂ ೨೪) ೧೨ ಇಂಚಿನ ಹ್ಯಾಂಡಲ್ ೧೧ ಅಕಿ ೫೭೦೦/-ರೂ ೨೫) ೧೦ ಇಂಚಿನ ಹ್ಯಾಂಡಲ್ ೨ ಅಕಿ ೮೦೦/-ರೂ ೨೬) ೬ ಇಂಚಿನ್ ಹ್ಯಾಂಡಲ್ ೨೯ ಕ್ವಾಟಿಟಿ ಅಕಿ ೫೮೦೦/-ರೂ ೨೭) ಡ್ರಾ ಲಾಕ್ ೧೩ ಅ,ಕಿ ೩೮೦೦/-ರೂ ೨೮) ಅಪ್ಲೋ ೧೦ ಪೀಟ್ ೨ ಅ,ಕಿ ೪೪೦೦/-ರೂ ೨೯) ಟಿ ಪಟ್ಟಿ ೮ ಎಂ ಎಂ, ೨ ಅ,ಕಿ ೮೦೦ ೩೦) ಇರೋಪಾ ಲಾಕ್ ೨ ಅಕಿ ೧೪೦೦/-ರೂ ಹಾಗೂ ಇದು ಅಲ್ಲದೆ ಕೆಲಸ ಮಾಡುವ ಕಾರ್ಮಿಕರ ೩೧) ಪ್ಲೆöÊ ಕಟರ್ ಮೀಷನ್ ೧ ಅ,ಕಿ, ೧೫೦೦ ೩೨) ಪೇಪರ್ ಗ್ರಾಂಡರ್  ಕಟರ್ ಮಿಷನ್ ೧ ಅಕಿ ೧೫೦೦/-ರೂ ೩೩) ಹ್ಯಾಮರ್ ಮೀಷನ್ ೧ ಅ,ಕಿ ೩೦೦೦ ೩೪) ಪೇಟರ್ ಮೀಷನ್ ೧ ಅ,ಕಿ ೨೫೦೦/-ರೂ ೩೫) ಟೈಟರ್ ಮೀಷನ್ ೧ ಅಕಿ ೧೫೦೦/-ರೂ ಹೀಗೆ ಒಟ್ಟು ೭೬೪೪೦/-ರೂ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 31-10-2022 07:09 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080