ಅಭಿಪ್ರಾಯ / ಸಲಹೆಗಳು

ಎಂ.ಬಿ.ನಗರ ಪೊಲೀಸ ಠಾಣೆ :- ನಾನು, ಸತೀಷ ತಂದೆ ಶ್ರೀಮಂತ ಹೊಸಮನಿ ವ:೨೮ ರ‍್ಷ ಉ:ಗೌಂಡಿ ಕೆಲಸ ಜಾತಿ ಪ.ಜಾತಿ. (ಹೊಲೆಯ) ಸಾ:ಕಾಟಮ್ಮ ದೇವರಹಳ್ಳಿ ಗ್ರಾಮ ತಾ: ಚಿತ್ತಾಪೂರ ಹಾ:ವ:ಮನೆ ನಂ.ಎಲ್.ಐ.ಜಿ. ೨೧ ಹೌಸಿಂಗ ಬರ‍್ಡ ಕಾಲನಿ ಸೇಡಂ ರೋಡ ಕಲಬುರಗಿ ಹೇಳಿ ಗಣಕೀಕೃತ ಮಾಡಿಸಿದ ಹೇಳಿಕೆ ನಾನು, ಮೇಲಿನ ವಿಳಾಸದವನಿದ್ದು, ಗೌಂಡಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಮ್ಮ ತಂದೆ, ತಾಯಿಗೆ ನಾವು ೦೪ ಜನ ಗಂಡು ಮಕ್ಕಳು ೦೩ ಜನ ಹೆಣ್ಣು ಮಕ್ಕಳು ಹೀಗೆ ಒಟ್ಟು ೦೭ ಜನ ಮಕ್ಕಳಿರುತ್ತೇವೆ. ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಗಾಯತ್ರಿ ಅಣ್ಣ ಸಂತೋಷ, ತಾಯಿ ಭಾಗಮ್ಮಾ, ತಮ್ಮ ಕಿರಣ ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿರುತ್ತೇನೆ. ನಮ್ಮ ತಂದೆ ತೀರಿಕೊಂಡು ಸುಮಾರು ೧೦ ರ‍್ಷಗಳಾಗಿರುತ್ತೇವೆ. ಎಲ್ಲಾ ತಂಗಿಯರ ಮದುವೆಯಾಗಿದ್ದು, ಅವರುಗಳು ತಮ್ಮ ತಮ್ಮ ಗಂಡನ ಮನೆಯಲ್ಲಿ ಇರುತ್ತಾರೆ. ತಮ್ಮ ಕಿರಣ ವ:೧೮ ರ‍್ಷ ಇತನು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ.ನಿನ್ನೆ ದಿನಾಂಕ ೦೫/೧೦/೨೦೨೧ ರಂದು ರಾತ್ರಿ ೧೦-೩೦ ಗಂಟೆ ಸುಮಾರಿಗೆ ನಾನು ಮನೆಯಲ್ಲಿ ಇದ್ದಾಗ ನಮ್ಮ ತಮ್ಮ ಕಿರಣ ಇತನು ನಮ್ಮ ತಾಯಿ ಭಾಗಮ್ಮಾ ಇವರಿಗೆ ಮೈಲಾಪೂರ ಮಲ್ಲಯ್ಯ ಗುಡಿ ರ‍್ಶನಕ್ಕೆ ನಮ್ಮ ಓಣಿಯ ನಮಗೆ ಪರಿಚಯದ ಗುರು ಇತನೊಂದಿಗೆ ಹೋಗಿ ಬರುತ್ತೇನೆ  ಎಂದು ಹೇಳಿ ಅವಳಿಂದ ನಗದು ೪೦೦/- ರೂ. ಹಣ ಮತ್ತು ಒಂದು ಜೊತೆ ಬಟ್ಟೆ ತೆಗೆದುಕೊಂಡು ಮನೆಯಿಂದ ಹೋದನು.ಇಂದು ದಿನಾಂಕ ೦೬/೧೦/೨೦೨೧ ರಂದು ಬೆಳಿಗ್ಗೆ ೦೭-೩೦ ಗಂಟೆ ಸುಮಾರಿಗೆ ಮನೆಯಲ್ಲಿ ಇದ್ದಾಗ ನನ್ನ ತಮ್ಮ ಸುನೀಲನಿಗೆ ಇತನಿಗೆ ಯಾರೋ ಓಣಿ ಜನರು ನಿನ್ನ ತಮ್ಮ ಕಿರಣ ನಮ್ಮ ಕಾಲನಿಯ ಅಂಬೇಡ್ಕರ ಗರ‍್ಡನ ಒಳಗಡೆ ಇರುವ ನೀರಿನ ಟ್ಯಾಂಕಿನ ಪಕ್ಕದಲ್ಲಿ ಇರುವ ಕಟ್ಟೆಯ ಕೆಳೆಗೆ ಅಂಗಾಂತವಾಗಿ ಮಲಗಿದ್ದಾನೆ ಎಂಬ ವಿಷಯ ಗೊತ್ತಾಗಿ, ನನ್ನ ತಮ್ಮ ಸುನೀಲ ಸ್ಥಳಕ್ಕೆ ಹೋಗಿ ನನ್ನ ತಮ್ಮ ಕಿರಣ ಇತನಿಗೆ ನೋಡಲಾಗಿ ಅವನು ಸತ್ತಿರುವುದಾಗಿ ಗೊತ್ತಾಗಿ, ಅವನ ಮೃತ ದೇಹ ಮನೆಯ ಮುಂದಿನ ಬಾಗಿಲ ಮುಂದೆ ಮೇಲೆ ಮಲಗಿಸಿ, ಈ ವಿಷಯ ನನಗೆ ಮತ್ತು ಮನೆಯವರಿಗೆ ತಿಳಿಸಿದಾಗ ನನ್ನ ತಮ್ಮ ಕಿರಣ ನೋಡಲಾಗಿ ಅವನ ಬಲ ಗಲ್ಲದ ಮೇಲೆ, ಬಲಗಣ್ಣಿನ ಮೇಲೆ ಅಲ್ಲಿಲ್ಲಿ ಸಣ್ಣ ಸಣ್ಣ ಕಲ್ಲುಗಳು ಮತ್ತು ಬಲ ಎದೆಯ ಮೇಲೆ ಕೂಡಾ ಸಣ್ಣ ಸಣ್ಣ ಕಲ್ಲುಗಳು ಅಲ್ಲಿಲ್ಲಿ ನಟ್ಟಿದ ಕಂದು ಗಾಯಗಳು ಕಂಡು ಬಂದವು. ಮತ್ತು ಮೈಮೇಲ್ಲಾ ಪರಿಶೀಲಿಸಿ ನೋಡಲಾಗಿ ಈ ಗಾಯಗಳು ಹೊರತುಪಡಿಸಿ ಬರ‍್ಯಾವ ಗಾಯಗಳು ಕಂಡು ಬಂದಿರುವುದಿಲ್ಲಾ. ದಿನಾಂಕ ೦೫/೧೦/೨೦೨೧ ರಂದು ರಾತ್ರಿ ೧೦-೩೦ ಗಂಟೆಯಿಂದ ದಿನಾಂಕ ೦೬/೧೦/೨೦೨೧ ರಂದು ಬೆಳಗಿನ ೦೭-೩೦ ಗಂಟೆ ಸುಮಾರಿಗೆ ಅವಧಿಯಲ್ಲಿ ಯಾರೋ ಅಪರಿಚಿತರು ಯಾವುದೋ ಕಾರಣಕ್ಕಾಗಿ ಮತ್ತು ಯಾವುದೋ ದುರುದ್ಧೇಶದಿಂದ ಹೊಡೆದು ಒಳಪೆಟ್ಟು ಮಾಡಿ ಕೊಲೆ ಮಾಡಿ, ನಮ್ಮ ಓಣಿಯ ನೀರಿನ ಟ್ಯಾಂಕದ ಪಕ್ಕದಲ್ಲಿ ಇರುವ ಕಟ್ಟೆ ಕೆಳೆಗೆ ಮಲಗಿಸಿ ಹೋಗಿರುತ್ತಾರೆ ಎಂದು ಕಂಡು ಬರುತ್ತದೆ. ಕಾರಣ ನನ್ನ ತಮ್ಮ ಕಿರಣ ಇತನಿಗೆ ಕೊಲೆ ಮಾಡಿದ ಯಾರೋ ಅಪರಿಚಿತ ಜನರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿ ಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಇತ್ತೀಚಿನ ನವೀಕರಣ​ : 08-10-2021 03:46 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080