ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ:06.09.2022 ರಂದು 11:00  ಎ.ಎಂ. ಕ್ಕೆ ಫಿರ್ಯಾದಿ ಶ್ರೀ ಹಣಮಂತ ತಂದೆ ಗಣಪತಿ ರಡ್ಡಿ ವಯ: 26 ವರ್ಷ ಜಾ: ರಡ್ಡಿ ಉ: ಸಿವಿಲ್ ಇಂಜಿನಿಯರ್, ಸಾ|| ವರದಾ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ, ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ 2016 ನೇ ಸಾಲಿನಲ್ಲಿ ಒಂದು ಹೋಂಡಾ ಶೈನ್  ಮೋಟಾರ ಸೈಕಲ್ ನಂ ಕೆ.ಎ-32 ಇ.ಎಂ-6529 ಕಪ್ಪು ಬಣ್ಣದ ಹೊಂಡಾ ಡಿಯೋ ಚೆಸ್ಸಿ ನಂ ME4JF399GG8007144 ಇಂಜಿನ್ ನಂ JF39E81080609  ಅ.ಕಿ. 27,502/- ನೇದ್ದು ನನ್ನ ಅಕ್ಕ ಸುಹಾಸಿನಿ ಇವರ ಹೆಸರಿನಿಂದ ಖರೀದಿಸಿದ್ದು ಇರುತ್ತದೆ. ಸದ್ಯ ನಮ್ಮ ಅಕ್ಕ ಸುಹಾಸಿನಿ ಇವಳ ಮದುವೆ ಆಗಿದ್ದು ಅವಳು ತನ್ನ ಕುಟುಂಬದೊಂದಿಗೆ ಮುಂಬೈನಲ್ಲಿ ವಾಸವಾಗಿದ್ದು ನಾನೆ ದ್ದಿ-ಚಕ್ರ ವಾಹನವನ್ನು ಬಳಸುತ್ತಿರುತ್ತೇನೆ. ಹೀಗಿದ್ದು ದಿನಾಂಕ:28.06.2022 ರಂದು ರಾತ್ರಿ 09:00 ಗಂಟೆ ಸುಮಾರಿಗೆ ದಿನಿತ್ಯದಂತೆ ನನ್ನ ಕೆಲಸ ಮುಗಿಸಿಕೊಂಡು ಮನೆಗೆ ಬಂದು, ನಮ್ಮ ಮನೆಯ ಮುಂದೆ ವಾಹನ ನಿಲ್ಲಿಸಿ ಊಟ ಮಾಡಿ ಮಲಗಿಕೊಂಡಿರುತ್ತೇನೆ. ಮರುದಿವಸ ದಿನಾಂಕ:29.06.2022 ರಂದು ಬೆಳಿಗ್ಗೆ 07:00 ಗಂಟೆಗೆ ನಾನು ಎದ್ದು ಹೊರಗಡೆ ಬಂದು ನೋಡಲಾಗಿ ನನ್ನ ದ್ವಿ-ಚಕ್ರ ವಾಹನ ಇದ್ದಿರುವುದಿಲ್ಲ.  ನಾನು ಗಾಬರಿಯಾಗಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ನನ್ನ ಮೊಟಾರ ಸೈಕಲ ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ಮೋಟರ್ ಸೈಕಲ್ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಇಲ್ಲಿಯ ವರೆಗೆ ಕಳುವಾದ ನನ್ನ ವಾಹನವನ್ನು ಕಲಬುರಗಿ ನಗರದಲ್ಲಿ ಹಾಗೂ ಹೊರ ವಲಯಗಳಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ನನ್ನ ಮೋಟಾರ ಸೈಕಲ ನನಗೆ ದೊರಕಿರುವುದಿಲ್ಲ, ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ಕಳವುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಲು ವಿನಂತಿ ಅಂತಾ ಇತ್ಯಾದಿ ಇದ್ದ ಫಿರ್ಯಾದಿಯ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ:06.09.2022 ರಂದು 07:00 ಪಿ.ಎಂ.ಕ್ಕೆ ಫಿರ್ಯಾದಿ ಜ್ಞಾನೋಬಾ ತಂದೆ ರಾಮ ಸಿಂಧೆ ವಯ: 60 ವರ್ಷ ಜಾ: ಎಸ್.ಸಿ.(ಮಾದಿಗ) ಉ: ನಿವೃತ್ತ ಪ್ರಾಂಶುಪಾಲರು ಸಾ|| ಪ್ಲಾಟ ನಂ. 427, ಸಿ.ಐ.ಬಿ ಕಾಲೋನಿ, ಕಲಬುರಗಿ ಮೊ.ನಂ. 9980313982 ಇವರ ಫಿರ್ಯಾದಿಯ ಸಾರಾಂಶವೆನೆಂದರೆ, ನಾನು ನಿವೃತ್ತ ಪ್ರಾಂಶುಪಾಲರು ಅಂತ ಇದ್ದು ನನ್ನ ಹೆಂಡತಿ ಕಮಲಾಬಾಯಿಯೊಂದಿಗೆ  ವಾಸವಾಗಿದ್ದು ಇರುತ್ತದೆ. ನಮಗೆ 04 ಜನ ಮಕ್ಕಳಿದ್ದು ಅದರಲ್ಲಿ ನನ್ನ ದೊಡ್ಡ ಮಗಳಾದ ಸೌಮ್ಯಶ್ರೀ ಇವಳಿಗೆ ಮದುವೆ ಮಾಡಿದ್ದು ಅವಳು ಪೂನಾದಲ್ಲಿ ತನ್ನ ಗಂಡನ ಮನೆಯಲ್ಲಿ ಇರುತ್ತಾಳೆ. ನನ್ನ ಮಕ್ಕಳಾದ ಸುದರ್ಶನ, ಅಕ್ಷತಾ ಮತ್ತು ಅಂಕಿತಾ ಇವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಅಂತ ಕೆಲಸ ಮಾಡಿಕೊಂಡು ಇರುತ್ತಾರೆ. ನನ್ನ ಹೆಂಡತಿ ಕಮಲಾಬಾಯಿ ಇವಳು ಸುಮಾರು 15 ದಿವಸಗಳ ಹಿಂದೆ ನಮ್ಮ ಸ್ವಂತ ಊರಾದ ಬೀದರಗೆ ಹೋಗಿದ್ದು ಇರುತ್ತದೆ. ನಾನು ದಿನಾಂಕ: 02.09.2022 ರಂದು 08:30 ಪಿ.ಎಮ್.ಕ್ಕೆ  ನನ್ನ ವೈಯಕ್ತಿಕ ಕೆಲಸಕ್ಕಾಗಿ ನಾನು ಬೆಂಗಳೂರಿಗೆ ಯಶವಂತಪುರ-ಸೋಲಾಪೂರ ಏಕ್ಸಪ್ರೇಸಗೆ ನಾನು ಬೆಂಗಳೂರಿಗೆ ಹೋಗಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ:06.09.2022 ರಂದು 04:00 ಎ.ಎಮ್.ಕ್ಕೆ ನಾನು ಬೆಂಗಳೂರಿನಿಂದ ಕಲಬುರಗಿಗೆ ಬಸವ ಏಕ್ಸಪ್ರೇಸ ಮೂಲಕ ಬಂದು ಸಿ.ಐ.ಬಿ. ಕಾಲೋನಿಯಲ್ಲಿರುವ ನಮ್ಮ ಮನೆಗೆ ಬೆಳಿಗ್ಗೆ 04:30 ಎ.ಎಮ್.ಕ್ಕೆ ಮನೆಗೆ ಹೋಗಿ ನೋಡಲಾಗಿ ಮನೆಯ ಬೀಗ ಮುರಿದು ಬಿದ್ದಿದ್ದು ನೋಡಿ ನಾನು ಗಾಬರಿಯಾಗಿ ಮನೆಯ ಒಳಗೆ ಹೋಗಿ ನೋಡಲಾಗಿ ಬೆಡರೂಮಿನ ಅಲ್ಮಾರಾದಲ್ಲಿದ್ದ ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಲಮಾರದಲ್ಲಿ ಇಟ್ಟಿದ್ದ ನಗದು ಹಣ 20,000/-ರೂ, ಸುಮಾರು 25 ವರ್ಷಗಳ ಹಿಂದೆ ಖರೀದಿಸಿದ್ದ ಬಂಗಾರದ ಆಭರಣಗಳ ಪೈಕಿ 1) 50 ಗ್ರಾಮನ ಒಂದು ಬಂಗಾರದ ಮಂಗಳಸೂತ್ರ  ಆಗಿನ ಅ.ಕಿ.60,000/-ರೂ 2)  10 ಗ್ರಾಮನ ಒಂದು ಬಂಗಾರದ ಉಂಗುರ ಆಗಿನ ಅ.ಕಿ.15,000/-ರೂ 3) ತಲಾ 05 ಗ್ರಾಮನ 02 ಬಂಗಾರದ ಉಂಗುರಗಳು ಆಗಿನ ಅ.ಕಿ.15,000/-ರೂ 4) 10 ಗ್ರಾಮನ ಬಂಗಾರದ ಕಿವಿ ಬೆಂಡೊಲೆಗಳು ಆಗಿನ ಅ.ಕಿ. 10,000/-ರೂ 5) 10 ಗ್ರಾಮನ ಬಂಗಾರದ ಮಣಿಗಳು ಆಗಿನ ಅ.ಕಿ. 10,000/-ರೂ ಹಾಗೂ 6) ಒಂದು ಬಂಗಾರದ ಮೂಗುತಿ ಮತ್ತು ಬಂಗಾರದ ಚೈನ್ ಆಗಿನ ಅ.ಕಿ. 10,000/-ರೂ ಹಾಗೂ 100 ಗ್ರಾಮನ ಬೆಳ್ಳಿ ಆಭರಣಗಳಾದ ಕಾಲಚೈನ್, ಕಾಲೂಂಗರ ಹಾಗೂ ಉಂಗುರು  ಅ.ಕಿ.5,000/-ರೂ ಹಾಗೂ ಒಂದು ಟೈಟಾನ ಕಂಪನಿಯ ಕೈ ಗಡಿಯಾರ ಅ.ಕಿ.1,000/-ರೂ ಹೀಗೆ ನಗದು ಹಣ, ಬಂಗಾರ ಆಭರಣಗಳು, ಬೆಳ್ಳಿಯ ಆಭರಣಗಳು ಮತ್ತು ಕೈಗಡಿಯಾರ ಹೀಗೆ ಒಟ್ಟು ಎಲ್ಲಾ ಸೇರಿ ಒಟ್ಟು ಅ.ಕಿ. 1,46,000/-ರೂ ನೇದ್ದವುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಕಾರಣ ನಮ್ಮ ಮನೆಯ ಬೀಗ ಮುರಿದು ನಗದು ಹಣ, ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ಧ ಕ್ರಮ ಜರುಗಿಸಿ ನಮ್ಮ ವಸ್ತುಗಳನ್ನು ನಮಗೆ ದೊರಕಿಸಿಕೊಡಲು ವಿನಂತಿ ಅಂತ ಇತ್ಯಾದಿಯಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 16-09-2022 07:05 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080