ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :-  ದಿನಾಂಕ: 06-08-2022  ರಂದು ಫರ‍್ಯಾದಿ ನಜಮೋದ್ದಿನ್ ಎ ಎಸ್ ಐ ರವರು  ಠಾಣೆಗೆ ಹಾಜರಾಗಿ ಮುದ್ದೆಮಾಲು, ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ಕೊಟ್ಟಿದ್ದರ ಸಾರಾಂಶವೇನೆಂದರೆ: ಇಂದು ಸಯಂಕಾಲ ೦೪:೧೫   ಗಂಟೆ ಸುಮಾರಿಗೆ ಠಾಣೆಯಲ್ಲಿದ್ದಾಗ ಮಾಹಿತಿ ತಿಳಿದು ಬಂದಿದ್ದೆನಂದರೆ, ಠಾಣಾ ವ್ಯಾಪ್ತಿಯ ಪಿಡಿಎ ಕಾಲೇಜು ಅಂಡರ್ ಬ್ರಿಡ್ಜ್ ಹತ್ತಿರ ಯಾರೋ ಇಬ್ಬರು ವ್ಯಕ್ತಿಗಳು ಸರ‍್ವಜನಿಕ ಸ್ಥಳದಲ್ಲಿ ಕುಳಿತು ರಸ್ತೆಯ ಮೇಲೆ ಹೋಗಿ ಬರುವ ಸರ‍್ವಜನಿಕರಿಗೆ ಒಂದು ರೂಪಾಯಿಗೆ ೮೦ ರೂಪಾಯಿ ಕೊಡುವದಾಗಿ ಹೇಳುತ್ತಾ ಹಣವನ್ನು ಪಡೆದುಕೊಂಡು ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಂಡು ಚೀಟಿ ಕೊಡುತ್ತಿದ್ದಾನೆ ಅಂತ ಮಾಹಿತಿ ತಿಳಿದು ಬಂದ ಮೇರೆಗೆ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು ದಕ್ಷಿಣ ಉಪ ವಿಭಾಗ ರವರ ಮರ‍್ಗರ‍್ಶನದಲ್ಲಿ ನಾನು ಠಾಣೆಯ ಸಿಬ್ಬಂದಿಗಳಾದ ಫಿರೋಜ್ ಪಿಸಿ ೨೦೫,ಭೋಗೇಶ ಪಿಸಿ ೨೧೦ ರವರಿಗೆ ವಿಷಯ ತಿಳಿಸಿ ಮತ್ತು ಇಬ್ಬರು ಪಂಚರಾದ ೧] ಶ್ರೀ ಜಾಪರಖಾನ ತಂದೆ ಅಮೀರಖಾನ ವಯ:-೨೫ ವರ್ಷ ಸಾ:ಹಮಲವಾಡಿ ಕಲಬುರಗಿ. ೨].ಶ್ರೀ ಮಹ್ಮದ ಇರ್ಫಾನ್‌  ತಂದೆ ಅಬ್ದುಲ್ ಅಜೀಮ್ ವಯ:೨೩ ವರ್ಷ ಉ:ಹಾಲಿನ ವ್ಯಾಪಾರ ಸಾ:ಸೈದುಮಿಯಾ ಕಂಪೌಂಡ ಸ್ಟೇಷನ ಏರಿಯಾ ಕಲಬುರಗಿ ಇವರನ್ನು ಕರೆಯಿಸಿ ದಾಳಿ ಬಗ್ಗೆ ತಿಳಿಸಿ ನಂತರ ಸಯಂಕಾಲ ೦೪:೪೫ ಗಂಟೆ ಸುಮಾರಿಗೆ ಖಾಸಗಿ ಮೋಟಾರ್ ಸೈಕಲಗಳ ಮೇಲೆ ಹೊರಟು ವಾಹನಗಳನ್ನು ಎಸ್ ಎಸ್ ಎಲ್ ಲಾ ಕಾಲೇಜು ಹತ್ತಿರ ವಾಹನಗಳನ್ನು  ನಿಲ್ಲಿಸಿ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲು ಸಯಂಕಾಲ ೦೫ ಗಂಟೆಯ ಸುಮಾರಿಗೆ ನೊಡಲು ಪಿಡಿಎ ಕಾಲೇಜು ಅಂಡರ್ ಬ್ರಿಡ್ಜ್ ಪಕ್ಕದಲ್ಲಿ ಕಟ್ಟೆ ಮೇಲೆ ಕುಳಿತು ಇಬ್ಬರು ವ್ಯಕ್ತಿಗಳು ರಸ್ತೆಯ ಮೇಲೆ ಹೋಗಿ ಬರುವ ಜನರಿಗೆ ೧ ರೂಪಾಯಿಗೆ ೮೦ ರೂಪಾಯಿ ಕೊಡುವದಾಗಿ ಹೇಳುತ್ತಾ ನಂಬರಗಳನ್ನು ಬರೆದುಕೊಂಡು ಒಂದು ಚೀಟಿಯು ಜನರಿಗೆ ಕೊಟ್ಟು ಇನ್ನೊಂದು ಚೀಟಿಯ ಮೇಲೆ  ಮಟಕಾ ನಂಬರಗಳನ್ನು ಬರೆದುಕೊಡುತ್ತಿರುದನ್ನು ನೋಡಿ ಪಂಚರನ್ನು ತೊರಿಸಿ ಖಚಿತ ಪಡಿಸಿಕೊಸಿಕೊಂಡು ಸಿಬ್ಬಂದಿಗಳ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಏಕಕಾಲಕ್ಕೆ ದಾಳಿ ಮಾಡಲು ಮಟಕಾ ನಂಬರಗಳನ್ನು ಬರೆಸುವವರು ಓಡಿ ಹೋಗಿದ್ದು, ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದ ವ್ಯಕ್ತಿಗಳನ್ನು ಹಿಡಿದು ಅಂಗ ಶೋಧನೆ ಮಾಡಿ ಹೆಸರು ಮತ್ತು  ವಿಳಾಸ ಕೇಳಲಾಗಿ ೧)  ರವಿ ತಂದೆ ವಿಜಯಕುಮಾರ ಶಾಬಾದಿ ವಯ: ೪೧ ವರ್ಷ ಜಾ: ಇಡಿಗ ಉ: ಖಾಸಗಿ ಕೆಲಸ ಸಾ: ಬಸವಣ್ಣಗುಡಿ ಹತ್ತಿರ ಬಸವೇಶ್ವರ ಕಾಲೋನಿ ಕಲಬುರಗಿ ಅಂತ ತಿಳಿಸಿದ್ದು ಇತನಿಗೆ ಚೆಕ್ ಮಾಡಲು ಇತನ ಹತ್ತಿರ ನಗದು ಹಣ ೧೧೦೦/- ರೂಗಳು ಒಂದು ಮಟಕಾ ಚೀಟಿ ಅ.ಕಿ:೦೦/-,ಒಂದು ಬಾಲ್ ಪೆನ್ ಅ.ಕಿ:೦೦/-,ದೊರೆತಿರುತ್ತದೆ.೨) ರಾಘವೇಂದ್ರ ತಂದೆ ಪ್ರಕಾಶ  ಕೊರೆ ವಯ: ೩೬ ವರ್ಷ ಜಾ: ಪೂಜಾರಿ ಉ: ಜೆರಾಕ್ಸ ಅಂಗಡಿ ಸಾ: ಕನಕ ನಗರ ಚೌಕ ಗಂಗಾ ನಗರ ಅಂತ ತಿಳಿಸಿದ್ದು,  ಇತನಿಗೆ ಚೆಕ್ ಮಾಡಲು ಕೃತ್ಯದಲ್ಲಿ ಬಾಗಿಯಾದ ೧) ನಗದು ಹಣ ೧೦೫೦/- ರೂಗಳು, ೨) ಒಂದು ಮಟಕಾ ನಂಬರಗಳನ್ನು ಬರೆದ ಚೀಟಿ ಅ.ಕಿ:೦೦/- ೩) ಒಂದು ಬಾಲ್ ಪೆನ್ ಅ.ಕಿ:೦೦/- ರೂಗಳು ಹೀಗೆ ಒಟ್ಟು ನಗದು ಹಣ ೨೧೫೦ ರೂಗಳು ಮತ್ತು ೨ ಬಾಲ್ ಪೆನ್ನು ಮತ್ತು ೨ ಮಟಕಾ ಚೀಟಿ ದೊರಕಿದ್ದು ಇರುತ್ತದೆ. ಈ ಬಗ್ಗೆ ಜಪ್ತಿ ಪಂಚನಾಮೆಯನ್ನು ದಿನಾಂಕ:-೦೬/೦೮/೨೦೨೨ ರಂದು ೦೫ ಪಿಎಮ್ ದಿಂದ ೦೬ ಪಿಎಮ್ ವರೆಗೆ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮದಲ್ಲಿ ಪಂಚನಾಮೆಯನ್ನು ಬರೆದು ಮುಗಿಸಿ ಕೇಸಿನ ಮುಂದಿನ ಪುರಾವೆಗಾಗಿ ನಗದು ಹಣ ಮತ್ತು ಮಟಕಾ ಚೀಟಿ, ಬಾಲ್ ಪೆನ್ ವಶಕ್ಕೆ ತೆಗೆದುಕೊಂಡು ಕಾಗದ ಕವರನಲ್ಲಿ ಹಾಕಿ ಪಂಚರ ಸಹಿ ಮಾಡಿದ ಚೀಟಿಯನ್ನ ಅಂಟಿಸಿ ತಾಬೆಗೆ ತೆಗೆದುಕೊಂಡು ಮುಂದಿನ ಕ್ರಮ ಕುರಿತು ಮುದ್ದೆಮಾಲು, ಜಪ್ತಿ ಪಂಚನಾಮೆಯೊಂದಿಗೆ ಆರೋಪಿತರನ್ನು ಠಾಣೆಗೆ ತಂದು ಜ್ಞಾಪನಾ ಪತ್ರವನ್ನು ನೀಡಿದ್ದು. ಸದರಿ ಜ್ಞಾಪನಾ ಪತ್ರ ಮತ್ತು ಜಪ್ತಿ ಪಂಚನಾಮೆಯ ಸಾರಾಂಶವು ಅಸಂಜ್ಞೆಯ ಅಪರಾದ ಕಲಂ ೭೮(೩) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ ೨೦೨೧ ನೇದ್ದರಡಿಯಲ್ಲಿ ಅಪರಾದವಾಗುತ್ತಿದ್ದು ಅಸಂಜ್ಞೆ ಅಪರಾದ ಕಲಂ ೭೮(೩) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ ೨೦೨೧ ಪ್ರಕರಕಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ಪಡೆದುಕೊಂಡು ಸಾಯಂಕಾಲ ೦೭:೦೦ ಗಂಟೆಗೆ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ 06-08-2022  ರಂದು ಮದ್ಯಾಹ್ನ ೧೨-೧೫ ಗಂಟೆಗೆ ಶ್ರೀ ಕಲ್ಯಾಣಕುಮಾರ ತಂದೆ ವೀರಣ್ಣಾ ಪೂಜಾರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ ೦೬-೦೮-೨೦೨೨ ರಂದು ನಾನು ಬೆಳಿಗ್ಗೆ ಭೀಮರಾಯನ ಗುಡಿಯಲ್ಲಿ ನನ್ನ ಇಂಜನಿಯರ ಕೆಲಸಕ್ಕೆ ಹೋಗುವ ಕುರಿತು ಮನೆಯಿಂದ ಕಾರ ನಂಬರ ಕೆಎ-೩೨/ಎನ್-೨೧೮೨ ನೇದ್ದನ್ನು ರಾಮ ಮಂದಿರ ಮುಖಾಂತರ ಎಡ ರೋಡಿನಿಂದ ಚಲಾಯಿಸಿಕೊಂಡು ಹೋಗುವಾಗ ರಾಷ್ಟ್ರೀಯ ಹೆದ್ದಾರಿ-೫೦ ರ ಮೇಲೆ ಬರುವ ಫರಹತಾಬಾದ ಜೇಸ್ಕಾಂ ಸಮೀಪ ರೋಡ ಮೇಲೆ ಜೇರ‍್ಗಿ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ  ನನ್ನ ಕಾರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದನು. ಸದರಿ ಘಟನೆ ನೋಡಿದ ನನಗೆ ಪರಿಚಯದ ಆನಂದ ತಂದೆ ಬಸಣ್ಣಾ ದುಲಂಗೆ ಹಾಗೂ ಶಂಕರ ತಂದೆ ರಾಯಪ್ಪಾ ರಾಮಜಿ ಇಬ್ಬರೂ ನನ್ನ ಹತ್ತೀರ ಬಂದು ನನಗೆ ಕಾರಿನಿಂದ ಹೊರಗಡೆ ತಂದರು. ನಾನು ಅಪಘಾತ ಪಡಿಸಿದ ಕಾರ ನೋಡಲು ಕಾರ ಚಾಲಕ ಹಾಗೂ ಕಾರಿನಲ್ಲಿ ಕುಳಿತವರು ಕಾರ ಅಲ್ಲೆ ಬಿಟ್ಟು ಹೋದರು. ಕಾರ ನಂಬರ ಎಮ,.ಹೆಚ್-೦೪/ಡಿಡಬ್ಲೂ-೧೫೧೬ ಇದ್ದಿತ್ತು. ಸದರ ಘಟನೆ ಜರುಗಿದಾಗ ಬೆಳಿಗ್ಗೆ ಅಂದಾಜು ೧೦-೦೦ ಗಂಟೆ ಸುಮಯವಾಗಿತ್ತು. ಸದರ ಘಟನೆಯಿಂದ ನನಗೆ ಯಾವುದೆ ಪೆಟ್ಟು ಬಿದ್ದಿರಲಿಲ್ಲ, ಅಪಘಾತ ಪಡಿಸಿದ ಕಾರ ಚಾಲಕನಿಗೆ ಪೆಟ್ಟು ಬಿದ್ದಿತ್ತು. ನನ್ನ ಕಾರ ನೋಡಲು ಕಾರಿನ ಮುಂದಿನ ಬಲಗಡೆ ಸೈಡಿನ ವ್ಹಿಲ್ ಸಸ್ಪೇನ್ಸನ ಬಲಗಡೆ ಡೋರ ಮುಂದಿನ ಗ್ಲಾಸ ಇಂಜಿನ ಬಂಪರ ಮುಂದಿನ ರೆಡ್ ಲೈಟ ಬಾನೆಟ್ ಡ್ಯಾಮೇಜ್ ಆಗಿತ್ತು. ಅಪಘಾತ ಪಡಿಸಿದ ಕಾರ ಚಾಲಕನ ಹೆಸರು ಗೋತ್ತಾಗಿರುವದಿಲ್ಲ ಆತನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರುತ್ತಿಸುತ್ತೆನೆ.  ಕಾರ ನಂಬರ ಎಮ,.ಹೆಚ್-೦೪/ಡಿಡಬ್ಲೂ-೧೫೧೬ ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾನು ಚಲಾಯಿಸಿಕೊಂಡು ಹೋಗುತ್ತೀರುವ ನನ್ನ ಕಾರ ನಂಬರ ಕೆಎ-೩೨/ಎನ್-೨೧೮೨ ನೇದ್ದಕ್ಕೆ ಎದುರಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಕಾರ ಡ್ಯಾಮೇಜ ಮಾಡಿ ಕಾರ ಚಾಲಕ ತನ್ನಿಂದ ತಾನೆ ಗಾಯ ಹೊಂದಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕುಅಂತಾ ಫಿರ್ಯಾದಿ ದೂರು ಅರ್ಜಿ ಸಾರಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

      

ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ 06-08-2022  ರಂದು ಬೆಳಿಗ್ಗೆ ೫-೧೫  ಗಂಟೆಗೆ ಖಾಸಗಿ ಕುರಾಳ ಆಸ್ಪತ್ರೆ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ಜಿನಿಸಾಬಿವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಶ್ರೀ ಜಾನಿಸಾಬ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳೀಕೆ ಸಾರಂಶವೆನೆಂದರೆ ದಿನಾಂಕ: ೦೫-೦೮-೨೦೨೨ ರಂದು ಮದ್ಯಾಹ್ನ ೩-೦೦ ಗಂಟೆ ಸುಮಾರಿಗೆ ನಾನು ಹಸನಾಪೂರ ಗ್ರಾಮದಲ್ಲಿ ಸೆಂಟ್ರಿಂಗ ಕೆಲಸ ಕುರಿತು ಮೋಟಾರ ಸೈಕಲ ನಂಬರ ಕೆಎ-೩೨/ಇಯು-೪೭೫೬ ನೇದ್ದನ್ನು ಚಲಾಯಿಸಿಕೊಂಡು ಹೋಗಿ ಮದ್ಯಾಹ್ನ ವಾಪಸ್ಸ ಕಟ್ಟಿ ಸಂಗಾವಿ ಗ್ರಾಮಕ್ಕೆ ಹೋಗುವ ಕುರಿತು ನಾನು ಹಸನಾಪೂರ ಕ್ರಾಸ ರಾಷ್ಟ್ರೀಯ ಹೆದ್ದಾರಿ-೫೦ ರ ಮೇಲಿಂದ ಕಟ್ಟಿ ಸಂಗಾವಿ ಗ್ರಾಮದ ಕಡೆಗೆ ನನ್ನ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುತ್ತೀರುವಾಗ ಹಸನಾಪೂರ ಸಿಮಾಂತರದಲ್ಲಿ ಬರುವ ಚಾಂದಾಪಾಶಾ ಇವರ ದಾಬಾ ಎದುರು ರೋಡ ಮೇಲೆ ಹಿಂದಿನಿಂದ ಶರಣಪ್ಪಾ ಇತನು ಖಾಸಗಿ ಅಂಬುಲೇನ್ಸ ನಂಬರ ಕೆಎ-೩೨/ಸಿ-೧೨೪೬ ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಗಾಯಗೊಳಿಸಿ ತನ್ನ ವಾಹನ ಪಲ್ಟಿ ಮಾಡಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫರ‍್ಯಾದಿ ದೂರು ಅರ್ಜಿ ಸಾರಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 06-08-2022  ರಂದು ಫರ‍್ಯಾದುದಾರು ಬಂದು ಸಲ್ಲಿಸಿದ ಪರ‍್ಯಾದಿ ಏನೆಂದರೆ ದಿನಾಂಕ:೦೫/೦೮/೨೦೨೨ ರಂದು ಮಲ್ಲಿಕಾರ್ಜುನ ತಂದೆ ಜಗನ್ನಾಥ ಹಿರಾಣಿ ಮತ್ತು ಭೀಮ ತಂದೆ ನಾಗಪ್ಪ ದಂಡುಳರ್ ಇವರು ಜಗಳವಾಡುತ್ತಿದ್ದ ಸಂಧರ್ಭದಲ್ಲಿ ನನ್ನ ಮಗ ಅವಿನಾಶ ಈತನು ಜಗಳ ಬಿಡಿಸಿದ್ದು ಸದರಿ ಆರೋಪಿತನು ಅತನ ಮೇಲೆ ಸಿಟ್ಟನ್ನಿಟ್ಟುಕೊಂಡು ನಾನು ಮತ್ತು ನನ್ನ ಮಗ ನಮ್ಮ ಊರಿನ ಅಂಭಾಭವಾನಿ ದೇವಸ್ಥಾನದ ಹತ್ತಿರ ಕುಳಿತಂತ ಸಮಯದಲ್ಲಿ ಅವನೊಂದಿಗೆ ಇನ್ನು ೩ ಜನರು ಸೇರಿಕೊಂಡು ಬಂದು ಏನೋ ನಮ್ಮೂರಿಗೆ ಬಂದು ನನಗೆ ಜಗಳ ತೆಗೆಯುತ್ತಿ ಅಂತಾ ನನ್ನ ಮಗ ಅವಿನಾಶನಿಗೆ ಹೊಡೆ ಬಡೆ ಮಾಡಿದ್ದು ಅವನ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತಾ ಫಿರ್ಯಾದಿ ದೂರು ಅರ್ಜಿ ಸಾರಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 06-08-2022  ರಂದು ೫.೧೫ ಪಿ.ಎಮ್ ದಿಂದ ೬.೧೫ ಪಿ.ಎಮ ಕ್ಕೆ ಸದರಿ ಆರೋಪಿತರು ಜಗದ ಜ್ಯೋತಿ ನಗರದ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಇಸ್ಪೀಟ ಜೂಜಾಟ ಆಡುತ್ತಿದ್ದು ಸದರಿಯವರನ್ನು ದಸ್ತಗಿರಿ ಮಾಡಿ ಆಟಕ್ಕೆ ಉಪಯೋಗಿಸಿದ ೫೨ ಇಸ್ಪೀಟ ಎಲೆಗಳು ಮತ್ತು ೧೩೫೦೦/- ರೂ ನಗದನ್ನು ಜಪ್ತಿ ಮಾಡಿದ ಬಗ್ಗೆ ದೂರು ಇರುತ್ತದೆ.

 

ಎಂ.ಬಿ.ನಗರ ಪೊಲೀಸ್‌ ಠಾಣೆ :-  ದಿನಾಂಕ 06-08-2022  ರಂದು ೦೮.೩೦ ಪಿ.ಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ ಪರ‍್ಯಾಧಿ ಶ್ರೀ ಶರಣಕುಮಾರ ತಂದೆ ಮಲ್ಲಿಕರ‍್ಜುನ ಮೋದಿ ವ|| ೪೯ ಜಾ|| ಲಿಂಗಾಯತ ಉ|| ಸಮಾಜ ಸೇವೆ ಸಾ|| ಮ.ನಂ.೨೫, ವಿಶ್ವೇಶ್ವರಯ್ಯಾ ಕಾಲೋನಿ ಸೇಡಂ ರೋಡ ಕಲಬುರಗಿ ಪೊ.ನಂ ೯೬೧೧೬೭೭೭೭೭ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ  ದೂರು ರ‍್ಜಿ ಸಲ್ಲಿಸಿದ್ದು ಸದರಿ ದೂರಿನ ಸಂಕ್ಷಿಪ್ತ ಸಾರಾಂಶವೆನೆಂದರೆ,  ನಾನು ನನ್ನ ಕುಟುಂಬ ಸ್ವಂತ ಮನೆ ಮಾಡಿಕೊಂಡು ಸದರಿ ವಿಳಾಸದಲ್ಲಿ ಸಮಾಜ ಸೇವೆ ಮಾಡಿಕೊಂಡು ವಾಸವಾಗಿರುತ್ತೆವೆ.     ಹೀಗಿದ್ದು ದಿನಾಂಕ ೦೫/೦೮/೨೦೨೨ ರಂದು ಮೋದಲ ಶ್ರಾವಣ ಶುಕ್ರವಾರವಿದ್ದ ಪ್ರಯುಕ್ತ ನಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜಾ ಮಾಡುವಾಗ ಲಕ್ಷ್ಮಿಯ ಮರ‍್ತಿಗೆ ಮನೆಯಲ್ಲಿ ನಾವು ಉಪಯೋಗಿಸುವ ವಿವಿದ ಬಂಗಾರದ ಆಭರಣಗಳು ಹಾಕಿದ್ದು ಇರುತ್ತದೆ. ಅದರಂತೆ ನಾವು ಮನೆಯ ಅಡುಗೆ ಕೋಣೆಯ ಎದುರುಗಡೆ ಈರುವ ಹಾಲಿನಲ್ಲಿ ಶ್ರೀ ವರಮಹಾಲಕ್ಷ್ಮಿ ಮರ‍್ತಿ ಇಟ್ಟು ಎಲ್ಲಾ ರೀತಿಯ ಬೇಳ್ಳಿಯ ಪೂಜಾ ಸಮಾನುಗಳು ಮತ್ತು ಮೂರ್ತಿಯ ಮೇಲೆ ವಿವಿದ ಬಂಗಾರದ ಆಭರಣಗಳು ಹಾಕಿ ಸಿಂಗಾರ ಮಾಡಿ ಸಾಯಾಂಕಾಲ ನಮ್ಮ ಮನೆಯ ಸುತ್ತಮುತ್ತಲಿನ ಬೇಕಾದ ಸಂಬಂಧಿಕರನ್ನು ಬರಮಾಡಿಕೊಂಡು ಪೂಜಾ ಕಾರ್ಯಕ್ರಮ ಮೂಗಿಸಿ ಎಲ್ಲಾ ಸಂಬಂಧಿಕರು ಹೋದ ಮೇಲೆ ನಾವು ದಿನಾಂಕ ೦೬/೦೮/೨೦೨೨ ರಂದು ೦೦.೩೦ ಎ.ಎಮ್ ಗಂಟೆಗೆ ದೆವರ ಮೈಮೇಲೆ ಹಾಗೂ ಮುಂದೆ ಇಟ್ಟ ಎಲ್ಲಾ ಬಂಗಾರದ ಆಭರಣಗಳು, ಬೆಳ್ಳಿಯ ಸಾಮಾನುಗಳು ಮತ್ತು ಹಣವನ್ನು ಹಾಗೇಯೆ ಬಿಟ್ಟು ಮನೆಯವರು ಮನೆಯ ಎಲ್ಲಾ ಬಾಗಿಲುಗಳನ್ನು ಕೊಂಡಿ ಹಾಕಿಕೊಂಡು ಮೊದಲನೇಯ ಮಹಡಿಯಲ್ಲಿ ಮಲಗಿಕೊಂಡಿದ್ದು ಇರುತ್ತದೆ. ಇಂದು ದಿನಾಂಕ: ೦೬/೦೮/೨೦೨೨ ರಂದು ಬೆಳೆಗ್ಗೆ ೦೬.೩೦ ಗಂಟೆಯ ಸುಮಾರಿಗೆ ನನ್ನ ಹೆಂಡತಿಯಾದ ಶ್ರೀಮತಿ ಜಾನವಿ ಎಂದಿನಂತೆ ಬೆಳೆಗ್ಗೆ ಎದ್ದು ನಿನ್ನೆ ಪೋಜಾ ಮಾಡಿದ ಶ್ರೀ ಲಕ್ಷ್ಮಿ ದೇವತೆಯ ಹತ್ತೀರ ಬಂದು ಕೈಮುಗಿಯವ ಸಮಯದಲ್ಲಿ ನಿನ್ನೆ ಪೂಜಾ  ಹಾಕಿದ ಬಂಗಾರದ ಆಭರಣಗಳಲ್ಲಿ ಒಂದು ೪೦ ಗ್ರಾಮದ ಬಂಗಾರದ ಸರ ಮತ್ತು ನಗದು ಹಣ ೨೦೦೦/-ರೂ  ಕಾಣದೆ ಉಳಿದ ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ಸಾಮಾನುಗಳು ಹಾಗೂ ಒಂದುಸಾವಿರ ಹಾಗೇಯೆ ಬಿಟ್ಟು ಹೋಗಿದ್ದು ಆಗ ಗಾಭರಿಯಾಗಿ ಮನೆಯಲ್ಲಿರುವ ಎಲ್ಲರನ್ನು ಎಬ್ಬಿಸಿ ಸದರಿ ವಿಷಯವನ್ನು ನನಗೆ ತಿಳಿಸಿದರು.   ನಂತರ ನಾನು ಮನೆಯನ್ನು ಚೆಕ್ ಮಾಡಿದಾಗ ನಮ್ಮ ಮನೆಯ ಒಂದು ಬೆಡರೂಮಿನ ಕಿಡಕಿಯ ರಾಡ ಬೆಂಡ ಮಾಡಿದ್ದು ಕಂಡಿತ್ತು . ಆಗ ನಾನು ಯಾವುದೋ ಖಾಸಗಿ ಕೆಲಸದ ಪ್ರಯುಕ್ತ ಬೇರೆ ಕಡೆ ಹೋಗಿದ್ದು ಮನೆಗೆ ಬಂದ ನಂತರ ಮನೆಯವರೊಂದಿಗೆ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದಿನಾಂಕ ೦೬/೦೮/೨೦೨೨ ರಂದು ೦೦.೩೦ ಎ ಎಮ್ ಗಂಟೆಯಿಂದ ೦೬.೩೦ ಎ ಎಮ್ ಗಂಟೆಯ ಒಳಗಿನ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬೆಡರೂಮಿನ ಕಿಡಕಿಯ ರಾಡ ಬೆಂಡ ಮಾಡಿ ಅಲ್ಲಿಂದ ಬೆಡರೂಮಿನ ಮುಕಾಂತರ ಅಡುಗೆ ಕೊಣೆಯ ಮುಂದೆ ಇರುವ ಹಾಲಿನಲ್ಲಿ ಶ್ರೀ ಲಕ್ಷ್ಮಿ ಪೂಜಾ ಮಾಡುವ ಸಮಯದಲ್ಲಿ ಹಾಕಿದ ಹಳೆಯ ಬಂಗಾರದ ಆಭರಣಗಳಲ್ಲಿ ಒಂದು ೪೦ ಗ್ರಾಮ ಬಂಗಾರದ ಸರ ಅಂ.ಕಿ.೧,೨೦,೦೦೦/- ರೂ , ಒಂದು ಐ-ಪೋನ-೧೦  ಅಂ.ಕಿ. ೨೦,೦೦೦/- ಮತ್ತು ನಗದು ಹಣ ೨೦೦೦/- ರೂ ಹೀಗೆ ಒಟ್ಟು  ೧,೪೨,೦೦೦.೦೦ ರೂಪಾಯಿ ಕಿಮ್ಮತ್ತಿನ ಬೆಲೆಬಾಳುವ ಆಭರಣ ಮತ್ತು ನಗದು ಹಣ ಕಳ್ಳತನ ವಾಗಿದ್ದು ಸದರಿ ನಮ್ಮ ಬಂಗಾರದ ಆಭರಣ, ಮೊಬೈನ ಮತ್ತು ನಗದು ಹಣ ಪತ್ತೆ ಮಾಡಿ ಕಳ್ಳತನ ಮಾಡಿದ ಕಳ್ಳರ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು   ನೀಡಿದ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಇತ್ತೀಚಿನ ನವೀಕರಣ​ : 19-08-2022 02:18 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080