ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 06/07/2022 ರಂದು 6:00 ಪಿ.ಎಮ್ ಕ್ಕೆ ಶ್ರೀ. ಇಮಾಮ ತಂದೆ ಅಲ್ಲಾವುದ್ದೀನ್ ಲದಾಫ್ ವ; 28 ವರ್ಷ ಜಾ; ಮುಸ್ಲಿಂ ಉ; ಖಾಸಗಿ ಕೆಲಸ ಸಾ; ಶ್ರೀನಿವಾಸ ಸರಡಗಿ ತಾ;ಜಿ; ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿ ಅರ್ಜಿಯನ್ನು ಹಾಜರು ಪಡಿಸಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ-05/07/2022 ರಂದು ರಾತ್ರಿ 10:00 ಗಂಟೆ ಸುಮಾರಿಗೆ ನಮ್ಮ ಅಣ್ಣನಾದ ಖಾಸಿಂ ತಂದೆ ಅಲ್ಲಾವುದ್ದೀನ್ ಲದಾಫ್ ವ; 30 ವರ್ಷ ಈತನು ನಮ್ಮ ಮನೆಯಿಂದ ಊಟ ಮಾಡಿಕೊಂಡು ಹೋರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ರಾತ್ರಿ 10:00 ಗಂಟೆ ಸುಮಾರಿಗೆ ಹೋದನು ಆತನು ರಾತ್ರಿ ನಾವು ಎಲ್ಲರೂ ಆತನ ದಾರಿ ಕಾಯುತ್ತಾ ಇಡಿ ರಾತ್ರಿ ಹೋದರು ಆತನು ಮನೆಗೆ ಬರಲಿಲ್ಲಾ ಬೆಳಿಗ್ಗೆ ನಾವು ಎಲ್ಲರೂ ಹುಡುಕಾಡಿ ಸಣ್ಣೂರ ಕ್ರಾಸ್ ಹತ್ತಿರ ಹೋಗಿಸಿ ವಿಚಾರಿಸಲು ಅಲ್ಲಿನ ಜನರು ಒಬ್ಬ ವ್ಯಕ್ತಿ ರಸ್ತೆ ಬದಿಯಿಂದ ಟೂಲನಾಕಾ ಕಡೆಗೆ ನಡೆದುಕೊಂಡು ಹೋಗುವಾಗ ಹದನೂರ ಕ್ರಾಸ್ ಹತ್ತಿರ ಯಾವುದೋ ಒಂದು ವಾಹನ ಚಾಲಕನು ದಿನಾಂಕ-06/07/2022 ರಂದು ಬೆಳಗಿನ ಜಾವ 03:30 ಗಂಟೆ ಸುಮಾರಿಗೆ ಸೇಡಂ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ವಾಹನ ನಿಲ್ಲಿಸದೆ ಹಾಗೆ ಓಡಿ ಹೋಗಿರುತ್ತಾನೆ ಆತನಿಗೆ ಟೂಲನಾಕಾ ಅಂಬುಲೈನ್ಸ್ ವಾಹನದವರು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗಿರುತ್ತಾರೆ ಅಂತಾ ಹೇಳಿದರು ಆಗ ನಾವು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ನೋಡಲು ನಮ್ಮ ಅಣ್ಣ ಖಾಸಿಂನೆ ಇದ್ದು ಆತನು ಮೃತ ಪಟ್ಟಿದ್ದು ಆತನ ತೆಲೆಗೆ ಎಡಗಡೆ ಭಾರಿ ರಕ್ತಗಾಯ ಹಾಗೂ ಎಡಗೈ ಹಸ್ತದ ಹತ್ತಿರ, ಆಗಿ ಕಿವಿಯಿಂದ ಹಾಗೂ ಮೂಗಿನಿಂದ ರಕ್ತ ಸ್ರಾವವಾಗಿದ್ದು ಇರುತ್ತದೆ, ಅಲ್ಲಿನ ವೈದ್ಯರಿಗೆ ವಿಚಾರಿಸಲು ಖಾಸಿಂ ಈತನು ರಸ್ತೆ ಅಪಘಾತದಿಂದ ಆದ ಗಾಯದ ಬಾದೆಯಿಂದ ಉಪಚಾರ ಪಡೆಯುತ್ತಾ ಬೆಳಗಿನ ಜಾವ 05:00 ಗಂಟೆ ಸುಮಾರಿಗೆ ಮರಣ ಹೊಂದಿರುತ್ತಾರೆ ಅಂತಾ ತಿಳಿಸಿದ್ದು ಇರುತ್ತದೆ. ಕಾರಣ ಯಾವುದೋ ಒಂದು ವಾಹನ ಹಾಗೂ ಚಾಲಕನನ್ನು ಪತ್ತೆ ಮಾಡಿ ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟು ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ  ದಾಖಲು ಮಾಡಿಕೊಂಡ ಬಗ್ಗೆ ವರದಿ.  

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 06/07/2022 ರಂದು 9:00 ಪಿ.ಎಮ್ ಕ್ಕೆ ಶ್ರೀ. ಶಿವರಾಜ ತಂದೆ ಶಿವಣ್ಣ ದೇವರಮನಿ ವಯಃ 27 ವರ್ಷ ಜಾತಿಃ ಕಬ್ಬಲಿಗ ಉಃ ಕ್ಲೀನರ ಸಾಃ ಮಲ್ಲಾ ತಾಃ ಸುರಪೂರ ಜಿಲ್ಲಾಃ ಯಾದಗೀರ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿ ಅರ್ಜಿಯನ್ನು ಹಾಜರು ಪಡಿಸಿದ್ದು ಸಾರಂಶವೆನೆಂದರೆ, ದಿನಾಂಕ 02/07/2022 ರಂದು ನಾನು ರಾತ್ರಿ ಟಿಪ್ಪರ ಚಾಲಕ ರುದ್ರಪ್ಪಾ ಈತನ ಜೊತೆಗೆ ಟಿಪ್ಪರನಲ್ಲಿ ಉಸುಕು ತುಂಬಿಕೊಂಡು ಕಲಬುರಗಿ ಹುಮ್ನಾಬಾದ ರಿಂಗರೋಡಿ ಹತ್ತೀರ ಒಂದು ಏರಿಯಾದಲ್ಲಿ ಉಸುಕು ಖಾಲಿ ಮಾಡಿ ಮರಳಿ ಸೇಡಂ ರಿಂಗರೋಡ ಕಡೆಗೆ ಹೋಗುವಾಗ ರುದ್ರಪ್ಪಾ ಈತನು ಟಿಪ್ಪರ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದನು. ನಾನು ಆತನಿಗೆ ನಿಧಾನವಾಗಿ ಚಲಾಯಿಸಲು ಹೇಳಿದರು ಸಹ ಆತನು ಅದೆ ವೇಗದಲ್ಲಿ ಚಲಾಯಿಸಿ ರಾತ್ರಿ 10:00 ಗಂಟೆ ಸುಮಾರಿಗೆ ಕರೊನಾ ಟೊಯಾಟೊ ಶೋ ರೂಮ ಹತ್ತೀರ ರಸ್ತೆ ದಾಟುತ್ತಿದ್ದ ಒಬ್ಬ ಪಾದಚಾರಿಗೆ ಡಿಕ್ಕಿ ಪಡಿಸಿದನು. ಆಗ ಸದರಿ ಪಾದ ಚಾರಿಯು ಪುಟಿದು ರಸ್ತೆಯ ಮೇಲೆ ಬಿದ್ದನು. ನಾನು ಕೆಳಗೆ ಇಳಿದು ನೋಡಲು ಸದರಿ ಪಾದಚಾರಿ ಅಂದಾಜು 32 ವರ್ಷದವನಿದ್ದು, ಆತನ ಹೆಸರು ವಿಳಾಸ ಗೊತ್ತಿರುವುದಿಲ್ಲಾ. ಸದರ ಘಟನೆಯಿಂದ ಆತನಿಗೆ ಹಣೆಗೆ ಎಡಗಡೆ ಭಾರಿ ರಕ್ತಗಾಯ ಹಾಗು ಎಡಗಾಲಿನ ಮೊಳಕಾಲಿನ ಕೆಳಭಾಗದಲ್ಲಿ ರಕ್ತಗಾಯವಾಗಿ ಆತನು ಮಾತನಾಡುವ ಸ್ಧಿತಿಯಲ್ಲಿರಲಿಲ್ಲಾ. ಸದರ ವಿಷಯಗೊತ್ತಾಗಿ ಸ್ಧಳಕ್ಕೆ ಅಂಬುಲೇನ್ಸ ವಾಹನ ಬಂದಿದ್ದು, ಸದರಿ ಗಾಯಾಳುವಿಗೆ ಅಂಬುಲೇನ್ಸನಲ್ಲಿ ಹಾಕಿಕೊಂಡು ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಇರುತ್ತದೆ. ಸದರಿ ಗಾಯಾಳುವಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ ಅಂತಾ ಗೊತ್ತಾಗಿದ್ದು, ಇಂದು ದಿನಾಂಕ 06/07/2022 ರಂದು ಬೆಳಿಗ್ಗೆ 9:15 ಗಂಟೆ ಸುಮಾರಿಗೆ ಸದರಿ ಅಪಘಾತದಿಂದ ಆದ ಗಾಯದ ಭಾಧೆಯಿಂದ ಗಾಯವಾಸಿಯಾಗದೆ ಉಪಚಾರ ಹೊಂದುತ್ತಾ ಸದರಿ ಗಾಯಾಳು ಮೃತ ಪಟ್ಟಿರುತ್ತಾನೆ ಅಂತಾ ಗೊತ್ತಾಗಿದ್ದು, ಇಲ್ಲಿ ತನಕ ಸದರಿ ಅಪಘಾತದ ಬಗ್ಗೆ ಯಾವುದೇ ಕೇಸು ಆಗಿಲ್ಲಾ ಅಂತಾ ಗೊತ್ತಾಯಿತು. ನಮ್ಮ ಮಾಲಕನ ಜೊತೆ ವಿಚಾರಿಸಿ ಇಂದು ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಟಿಪ್ಪರ ನಂ. ಕೆಎ 51 ಎ.ಬಿ 3704 ನೇದ್ದರ ಚಾಲಕ ರುದ್ರಪ್ಪಾ ಕುಂಬಾರ ಈತನು ಹುಮ್ನಾಬಾದ ರಿಂಗರೋಡ ಕಡೆಯಿಂದ ಸೇಡಂ ರಿಂಗರೋಡ ಕಡೆಗೆ ಹೋಗುವ ಕುರಿತು ಟಿಪ್ಪರ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ನಡೆದುಕೊಂಡು ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಪಡಿಸಿದ್ದು, ಸದರಿ ಪಾದಚಾರಿ ಭಾರಿಗಾಯಗೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಮೃತ ಪಟ್ಟಿದ್ದು, ಕಾರಣ ಸದರಿ ಟಿಪ್ಪರ ಚಾಲಕ ರುದ್ರಪ್ಪಾ ಕುಂಬಾರ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ  ಮೇಲಿಂದ ಗುನ್ನೆ  ದಾಖಲು ಮಾಡಿಕೊಂಡ ಬಗ್ಗೆ ವರದಿ.  

 

ಸಂಚಾರಿ ಪೊಲೀಸ್‌ ಠಾಣೆ -2  :- ದಿನಾಂಕ 06/07/2022 ರಂದು ಮದ್ಯಾಹ್ನ 12:00 ಗಂಟೆಗೆ  ಜೈಭೀಮ ಭರತ ತಂದೆ ಸಿದ್ರಾಮ ಚಾರಿ ಸಾ; ಸಿ.ಐ.ಬಿ ಕಾಲೋನಿ ಕಲಬುರಗಿ, ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿದ ಫೀರ್ಯಾದಿ ಅರ್ಜಿಯನ್ನು ಹಾಜರು ಪಡಿಸಿದರ ಸಾರಂಶವೆನೆಂದರೆ,  ದಿನಾಂಕ 01/07/2022 ರಂದು ಫಿರ್ಯಾಧಿ ಮತ್ತು ಜೇಲೆಂದ್ರ  ಕಾವಲೆ ಹಾಗೂ ಅವಿನಾಶ ಧಾರತ ಮೂವರು ಸೇರಿಕೊಂಡು ಕಾರ ನಂ ಕೆಎ-41 ಪಿ-8853 ನೇದ್ದರಲ್ಲಿ ಕುಳಿತುಕೊಂಡು ಕಾರಿನ ಮಾಲಿಕರಾದ ಸಿದ್ದಲಿಂಗ ಇವರ ಸಂಭಂದಿಕರ ಕಾರ್ಯಾಕ್ರಮ ಕುರಿತು ಗೊಬ್ಬುರ ಗ್ರಾಮಕ್ಕೆ ಹೋಗುವಾಗ ಕಾರನ್ನು ಜೇಲೆಂದ್ರ ಈತನು ನಡೆಸುತ್ತಿದ್ದನು ನಾಗನಹಳ್ಳಿ ದಾಟಿದ ನಂತರ ಜೇಲೆಂದ್ರ ಈತನು ಕಾರನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ರಾತ್ರಿ 10:30 ಗಂಟೆ ಸುಮಾರಿಗೆ ಬನಶಂಕರಿ ಆಸ್ಪತ್ರೆ ಹತ್ತಿರ ಡಿವೈಡರಗೆ ಡಿಕ್ಕಿ ಪಡಿಸಿ ಕಾರ ಪಲ್ಟಿ ಮಾಡಿ  ಫಿರ್ಯಾದಿಗೆ ಹಾಗೂ ಅವಿನಾಶನಿಗೆ ಭಾರಿ ಗಾಯಗೊಳಿಸಿ ಡಿವೈಡರ್ ಹಾಗೂ ಕಾರ ಪೂರ್ತಿಯಾಗಿ ಜಕಂಗೊಳಿಸಿ ತಾನು ಕೂಡಾ ಸಾದಾಗಾಯಹೊಂದಿದ್ದು  ಕಾರ ಚಾಲಕ ಜೇಲೆಂದ್ರ  ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಗೆಳೆಯನಾದ ಸಿದ್ದಲಿಂಗ ಇವರ ಸಂಬಂದಿಕರ ಕಾಯಾಕ್ರಮಕ್ಕೆ ಹೋಗಿದ್ದರಿಂದ   ತಡಮಾಡಿ ದೂರು ಸಲ್ಲಿಸಿದ್ದು ಇರುತ್ತದೆ, ಅಂತಾ ಇತ್ಯಾದಿ ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ  ಗುನ್ನೆ  ದಾಖಲು ಮಾಡಿಕೊಂಡ ಬಗ್ಗೆ ವರದಿ.  

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 06-07-2022 ರಂದು ಫಿರ್ಯಾದಿಯಾದ ಸೈಯದ್ ಅಹ್ಮದ್ ರವರು ಅವರ ಅಕ್ಕ ಅಂಜುಮ ಹಾಗೂ ಮಾವ ಮಿಲ್ಲತ್ ನಗರದಲ್ಲಿ ವಾಸವಾಗಿದ್ದು ಅವರು ದಿನಾಂಕ ೦೫-೦೬-೨೦೨೨ ರಂದು ಸಾಯಂಕಾಲ ೪:೧೫ ಪಿಎಮ್ ಕ್ಕೆ ನಮ್ಮ ತಾಂಯಿಯ ಮನೆಗೆ ಬಂದವರು ಸಂಜೆ ೯:೦೦ ಪಿಎಮ್ ಕ್ಕೆ ಮರಳಿ ಮನೆಗೆ ಹೋಗಿ ನೋಡಲು ಅವರ ಮನೆಯಲ್ಲಿದ್ದ ಬೆಳ್ಳಿ ಮತ್ತು ಬಂಗಾರದ ಒಟ್ಟು ಅಂ.ಕಿ.೪,೨೮,೪೦೦ ರೂ ಮೌಲ್ಯದ ಆಭರಣಗಳು ಕಳುವಾಗಿದ್ದ ಬಗ್ಗೆ ದೂರು ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ  ಮೇಲಿಂದ ಗುನ್ನೆ  ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 05-07-2022  ರಂದು ಮುಂಜಾನೆ ಸಮಯದಲ್ಲಿ ಸದರಿಯ ಪರ‍್ಯಾದಿಯ ಗಂಡನಾದ ಶಿವರಾಜ ಚವ್ಹಾಣ ವಯ: ೨೯ ವರ್ಷ ಇವನು ಕೆಲಸಕ್ಕೆ ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಎಷ್ಟು ಹುಡುಕಾಡಿದರೂ ಮನೆಗೆ ಬರದ ಕಾರಣ  ಫಿರ್ಯಾದಿ ಅರ್ಜಿ ಸಾರಂಶದ  ಮೇಲಿಂದ ಗುನ್ನೆ  ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ  :- ದಿನಾಂಕ 06-07-2022  ರಂದು ಪರ‍್ಯಾದಿಯಾದ  ಖಾದರ್ ಬೀ ಇವರಿಗೆ ೨ ಜನ ಗಂಡು ಮಕ್ಕಳಿದ್ದು ೧ ಹೆಣ್ಣು ಮಗಳಿದ್ದು ಇವರ ಮಗನಾದ ಮಹ್ಮದ್ ಇರ್ಪಾನ್ ಈತನಿಗೆ ೧೩ ವರ್ಷವಾಗಿದ್ದು ೮ ನೇ ತರಗತಿಯಲ್ಲಿ ಓದುತ್ತಿದ್ದು ಈತನು ದಿನಾಂಕ ೨೮-೦೬-೨೦೨೨ ರಂದು ಬೆಳೀಗ್ಗೆ ೮:೩೦ ಹುಸೇನ್ ಗಾರ್ಡನ್ ಪಬ್ಲಿಕ್ ಶಾಲೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಮತ್ತೆ ಬಂದಿರುವುದಿಲ್ಲ ಆತನನ್ನು ಎಲ್ಲಾ ಕಡೆ ಹುಡುಕಾಡಿದರು ಆತ ಪತ್ತೆಯಾಗಿರುವುದಿಲ್ಲಾ ಅಂತಾ ಫಿರ್ಯಾದಿ ಅರ್ಜಿ ಸಾರಂಶದ  ಮೇಲಿಂದ ಗುನ್ನೆ  ದಾಖಲು ಮಾಡಿಕೊಂಡ ಬಗ್ಗೆ ವರದಿ.  

ಇತ್ತೀಚಿನ ನವೀಕರಣ​ : 16-07-2022 07:29 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080