Feedback / Suggestions

ಚೌಕ  ಪೊಲೀಸ್ ಠಾಣೆ :- ದಿನಾಂಕ 06-05-2022 ರಂದು ಬೆಳಿಗ್ಗೆ ೦೯-೦೦  ಗಂಟೆಗೆ  ಶ್ರೀ ಶರಣಬಸಪ್ಪ ತಂದೆ ರಾಜಶೇಖರ ಬಿರಾದಾರ ವ:೪೯ ವರ್ಷ ಉ: ಸೆಕುರಟಿ ಗಾರ್ಡ ಕೆಲಸ  ಜಾತಿ ಲಿಂಗಾಯತ ಸಾ: ಮನೆ ನಂಬರ ೯-೪೭೩ ಸ್ವಾದಿ ಗಲ್ಲಿ ಲಾಲ ಹನುಮಾನ ಗುಡಿ ಹತ್ತಿರ ಶಹಾಬಜಾರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ, ನಮ್ಮ ತಂದೆ, ತಾಯಿ ನಾವು ೦೫ ಜನ ಗಂಡು ಮಕ್ಕಳು ಒಬ್ಬ ಹೆಣ್ಣುಮಗಳು ಹೀಗೆ ಒಟ್ಟು ೦೬ ಜನ ಮಕ್ಕಳಿರುತ್ತಾರೆ. ಅವರಲ್ಲಿ ಕೊಲೆಯಾದ ಮಲ್ಲಿಕಾರ್ಜುನ ತಂದೆ ರಾಜಶೇಖರ ಬಿರಾದಾರ ವ:೪೫ ವರ್ಷ ಇತನು ನಾಲ್ಕನೆಯವನು ಇದ್ದು, ಪಾನಡಬ್ಬಿ ವ್ಯಾಪರ ಮಾಡಿಕೊಂಡು ಉಪಜೀವಿಸುತ್ತೇನೆ. ಎಲ್ಲರೂ ಒಂದೇ ಮನೆಯಲ್ಲಿ ಬೇರೆ ಬೇರೆಯಾಗಿ ಇರುತ್ತೇವೆ. ನಾಗೇಂದ್ರಪ್ಪ ಇವರ ಮನೆಯಲ್ಲಿ ತಮ್ಮ ಮಲ್ಲಿಕಾರ್ಜುನ ತಾಯಿ ಸಿದ್ಧಮ್ಮಾ ಇವರೊಂದಿಗೆ ವಾಸವಾಗಿರುತ್ತಾರೆ. ಅವನ ಹೆಂಡತಿ ಮಲ್ಲಮ್ಮಾ ಇವಳು ತನ್ನ ಮಗ ವಿಶಾಲ್ ಇತನೊಂದಿಗೆ ಸಂಸಾರಿಕ ವಿಷಯದಲ್ಲಿ ಮನ್ಸತಾಪವಾಗಿ ಸುಮಾರು ೪-೫ ವರ್ಷಗಳಿಂದ ಗಂಡನಿಗೆ ಬಿಟ್ಟು ತನ್ನ ತವರು ಮನೆಯಾದ ಯಳಸಂಗಿ ಗ್ರಾಮಕ್ಕೆ ಹೋಗಿ ತನ್ನ ತಂದೆ ತಾಯಿ ಮನೆಯಲ್ಲಿ ವಾಸವಾಗಿರುತ್ತಾಳೆ. ನಿನ್ನೆ ದಿನಾಂಕ ೫/೦೫/೨೦೨೨ ರಂದು ರಾತ್ರಿ ೦೯-೩೦ ಗಂಟೆ ಸುಮಾರಿಗೆ ನನ್ನ ತಮ್ಮ ಮಲ್ಲಿಕಾರ್ಜುನ ಇತನು ನಮ್ಮ ತಾಯಿ ಸಿದ್ಧಮ್ಮಾ ಇವಳಿಗೆ ಹೊರಗಡೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರೆಗೆ ಹೋಗಿರುತ್ತಾರೆ. ಅವನು ಸರಾಯಿ ಕುಡಿಯವ ಚಟದವನಿದ್ದು, ಕುಡಿದ ಅಮಲಿನಲ್ಲಿ ಮಧ್ಯರಾತ್ರಿ ಅಥವಾ ಬೆಳಗಿನ ಜಾವ ಸಮಯದಲ್ಲಿ ಮನೆಗೆ ಬರುತ್ತಿದ್ದರಿಂದ ಅವನು ಮನೆಗೆ ಬರಬಹುದೆಂದು ತಿಳಿದುಕೊಂಡು ರಾತ್ರಿ ೧೦-೦೦ ಗಂಟೆಯ ಸುಮಾರಿಗೆ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡೇವು. ಇಂದು ದಿನಾಂಕ 06-05-2022 ರಂದು ಬೆಳಿಗ್ಗೆ ೦೬-೦೦ ಗಂಟೆ ಸುಮಾರಿಗೆ ನನಗೆ ಪರಿಚಯದ ಆಟೋ ಚಾಲಕರಾದ ಬಾಬು ತಂದೆ ಶಂಕರರಾವ ಬಿರಾದಾರ ಮತ್ತು ಲಕ್ಷ್ಮೀಪುತ್ರ ಇವರು ಮನೆಗೆ ಬಂದು ಶಹಾಬಜಾರ ನಾಕಾ ಹತ್ತಿರ ಇರುವ ಡಾ: ಎಂ.ಎಸ್. ಧಡವೆ ಇವರ ಆಸ್ಪತ್ರೆಯ ಗಲ್ಲಿಯ ಸಿಸಿ ರೋಡಿನ ಮೇಲೆ ನಿಮ್ಮ ತಮ್ಮ ಮಲ್ಲಿಕಾರ್ಜುನ ಇತನು ರಕ್ತ ಗಾಯಗಳಾಗಿ ಸತ್ತಂತೆ ಕಂಡು ಬರುತ್ತದೆ ಅಂತಾ ಹೇಳಿದಾಗ ನಾನು ಮತ್ತು ನಮ್ಮ ಅಣ್ಣ ನಾಗೇಂದ್ರ, ತಮ್ಮ ಮಾಹಾಂತಪ್ಪ, ಅಂಬಾರಾಯ ಎಲ್ಲರೂ ಕೂಡಿಕೊಂಡು ಮನೆಯಿಂದ ನನ್ನ ತಮ್ಮ ಮಲ್ಲಿಕಾರ್ಜುನ ರಕ್ತಗಾಯಗಳಾಗಿ ಬಿದ್ದಿರುವ ಸ್ಥಳಕ್ಕೆ ಹೋಗಿ ನೋಡಲಾಗಿ ಅವನು ಹೋಳು ಮೈಯಾಗಿ ಸತ್ತು ಬಿದ್ದಿದ್ದನು. ಅವನ ಬಲ ಮತ್ತು ಎಡ ಮೆಲಕಿನ ಹತ್ತಿರ, ಬಲ ಕಿವಿ ಹಿಂಭಾಗ  ಹೊಟ್ಟೆ, ಎದೆ. ಎರಡು ಕೈಗಳ ಮೇಲೆ ಅಲ್ಲಿಲ್ಲಿ  ಬೆನ್ನಿನ ಹಿಂಭಾಗದಲ್ಲಿ, ಎಡ ತೊಡೆಗೆ, ಬಲ ಸೊಂಟದ ಮೇಲೆ ಅಲ್ಲಿಲ್ಲಿ ರಕ್ತಗಾಯ ಮತ್ತು ತರಚಿದ ರಕ್ತಗಾಯಗಳಾಗಿದ್ದು ಕಂಡು ಬಂತು.  ಸ್ಥಳದಲ್ಲಿ ಸಿಸಿ ರೋಡಿನ ಮೇಲೆ ರಕ್ತ ಬಿದ್ದಿದ್ದು, ಇದನ್ನೆಲ್ಲಾ ಗಮನಿಸಿ ನೋಡಲಾಗಿ ಯಾರೋ ಅಪರಿಚಿತರು ಯಾವುದೋ ಕಾರಣಕ್ಕಾಗಿ ಮತ್ತು ಯಾವುದೋ ದುರುದ್ದೇಶದಿಂದ ದಿನಾಂಕ ೦೫/೦೫/೨೦೨೨ ರಂದು ರಾತ್ರಿ ೦೯-೩೦ ಗಂಟೆಯಿಂದ ಇಂದು ದಿನಾಂಕ ೦೬/೦೫/೨೦೨೨ ರಂದು ಬೆಳಿಗ್ಗೆ ೦೬-೦೦ ಗಂಟೆ ಅವಧಿಯಲ್ಲಿ ನನ್ನ ತಮ್ಮ ಮಲ್ಲಿಕಾರ್ಜುನನಿಗೆ ಹೊಡೆದು ಕೊಲೆ ಮಾಡಿರುತ್ತಾರೆ.  ಕಾರಣ ನನ್ನ ತಮ್ಮ ಮಲ್ಲಿಕಾರ್ಜುನ ಇತನಿಗೆ ಕೊಲೆ ಮಾಡಿದ ಯಾರೋ ಅಪರಿಚಿತ ಜನರನ್ನು ಪತ್ತೆ ಮಾಡಿ ಅವರುಗಳ ಮೇಲೆ ಕಾನೂನು  ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಅಂತಾ ಕೊಟ್ಟ ಪಿರ್ಯದಿಯ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಚೌಕ ಪೊಲೀಸ್ ಠಾಣೆ :-  ದಿನಾಂಕ: 06-05-2022 ರಂದು ಮಧ್ಯರಾತ್ರಿ ೦೧-೦೦  ಗಂಟೆಗೆ ಶ್ರೀ ರಾಜಶೇಖರ ವ್ಹಿ. ಹಳಗೋಧಿ ಪಿ.ಐ. ಚೌಕ ಪೊಲೀಸ್ ಠಾಣೆ ಕಲಬುರಗಿ ರವರು ಅಂದರ ಬಾಹರ ಇಸ್ಪೇಟ ಜೂಜಾಟದಲ್ಲಿ ನಿರತರಾದ ೧೦ ಜನ   ಆರೋಪಿತರನ್ನು  ಜಪ್ತಿ ಪಂಚನಾಮೆ ಹಾಗು ಮುದ್ದೆ ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ಸರ್ಕಾರಿ ತರ್ಪೆ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ, ದಿನಾಂಕ ೦೫/೦೫/೨೦೨೨ ರಂದು ರಾತ್ರಿ ೧೦-೦೦  ಗಂಟೆಗೆ ನಾನು ಚೌಕ ಪೊಲೀಸ ಠಾಣೆಯಲ್ಲಿ ಇದ್ದಾಗ ನನಗೆ ನಮ್ಮ ಚೌಕ  ಠಾಣಾ ವ್ಯಾಪ್ತಿಯ ಬರುವ ಕಲಬುರಗಿ ನಗರದ ಶಹಾಬಜಾರ ತಾಂಡಾದಲ್ಲಿ ಇರುವ ರಾಮು ತಂದೆ ಹೇಮು ಚವ್ಹಾಣ ಇವರ ಮನೆ ಎದುರಿನ ಖುಲ್ಲಾ ಜಾಗೆಯಲ್ಲಿ ಇರುವ ಸಾರ್ವಜನಿಕ ಕಟ್ಟೆಯ ಮೇಲೆ  ಲೈಟಿನ ಬೆಳಕಿನಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ದೈವ ಲೀಲೆ ಇಸ್ಪೇಟ ಜೂಜಾಟದಲ್ಲಿ ಆಡುತ್ತಿದ್ದಾರೆಂದು ಖಚಿತ ಬಾತ್ಮಿ ಬಂದ ಮೇರೆಗೆ, ಅಸಂಜ್ಞೇಯ ಕಲಂ ೮೭ ಕೆ.ಪಿ.ಎಕ್ಟ  ಅಡಿಯಲ್ಲಿ ಅಂದರ ಬಾಹರ ದೈವ ಲೀಲೆಯ  ಇಸ್ಪೇಟ ಜೂಜಾಟದಲ್ಲಿ ತೊಡಗಿದವರ ಮೇಲೆ ದಾಳಿ ಮಾಡಿ ಕ್ರಮ ಕೈ ಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿ ಕೋರಿ ಪತ್ರದ ಮೂಲಕ ವಿನಂತಿಸಿಕೊಂಡೆನು. ತದನಂತರ ದಾಳಿ ಕುರಿತು ಇಬ್ಬರು  ಪಂಚರಾದ ೧)ಶ್ರೀ ಶರಣಪ್ಪ ತಂದೆ ಮಲ್ಕಪ್ಪ ಮಾಡಬೂಳಕರ ವ:೪೧ ವರ್ಷ ಉ:ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಜಾತಿ ಪ.ಜಾತಿ (ಹೊಲೆಯ) ಸಾ:ವಿಷ್ಣು ನಗರ ಫೀಲ್ಟರ ಬೇಡ ಕಲಬುರಗಿ ೨)ಶ್ರೀ ದೇವಿಂದ್ರ ತಂದೆ ಜಗನಾಥ ಅಟ್ಟೂರಕರ ವ:೨೦ ವರ್ಷ ಉ:ಟೈಯರ ಪಂಕ್ಚರ ಅಂಗಡಿಯಲ್ಲಿ ಕೆಲಸ ಜಾತಿ ಪ.ಜಾತಿ. (ಮಾದಿಗ) ಸಾ:ವಿಷ್ಣು ನಗರ ಫೀಲ್ಟರ ಬೇಡ ಕಲಬುರಗಿ ಇವರನ್ನು ಮತ್ತು  ಶ್ರೀ ಬಸವರಾಜ ಪಿ.ಎಸ್.ಐ. (ಕಾ.ಸು.) ಮತ್ತು ಸಿಬ್ಬಂದಿಯವರಾದ  ಶ್ರೀ ಹುಸೇನಬಾಷಾ ಎ.ಎಸ್.ಐ. ಸಿಪಿಸಿ ೧೧೧ ಉಮೇಶ, ಸಿಪಿಸಿ ೧೦ ಅಶೋಕ, ಸಿಪಿಸಿ ೪೮೬ ದಯಾನಂದ, ಸಿಪಿಸಿ ೭೯ ನಾಗೇಂದ್ರ,  ಹಾಗೂ ಜೀಪು ಚಾಲಕ ಎಪಿಸಿ ೦೭ ಮಾಳಪ್ಪ ಇವರುಗಳನ್ನು ಬರಮಾಡಿಕೊಂಡು ಈ ಮೇಲಿನ ಬಾತ್ಮಿ ವಿಷಯ  ತಿಳಿಸಿ ಪಂಚರಿಗೆ ನಾವು ಮಾಡುವ ಅಂದರ ಬಾಹರ ಇಸ್ಪೇಟ ಜೂಜಾಟ ದಾಳಿ ಜಪ್ತಿ ಪಂಚನಾಮೆಯ ಪಂಚರಾಗಿ ಜಪ್ತಿ ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಪಂಚರು ಒಪ್ಪಿಕೊಂಡರು. ಮತ್ತು ಸಿಬ್ಬಂದಿಯವರಿಗೆ ನಮ್ಮ ಜೊತೆಯಲ್ಲಿ ದಾಳಿಗೆ ಬರಲು ಸೂಚಿಸಿದಾಗ ಅವರು ಕೂಡಾ ಒಪ್ಪಿಕೊಂಡರು. ಆಗ ನಾನು ಅಂದರ ಬಾಹರ ಇಸ್ಪೇಟ ಜೂಜಾಟ ದಾಳಿ ಕುರಿತು ಠಾಣೆಯ ಜೀಪು ಕೆಎ ೩೨ ಜಿ ೮೭೪ ರಲ್ಲಿ ನಾನು ಮತ್ತು ಪಂಚರು ಹಾಗೂ ಈ ಮೇಲಿನ ಸಿಬ್ಬಂದಿಯವರು ಕುಳಿತುಕೊಂಡೇವು. ಜೀಪು ಎಪಿಸಿ ೦೭ ಮಾಳಪ್ಪ ಇವರು ಚಾಲನೆ ಮಾಡುತ್ತಿದ್ದರು ಮಾನ್ಯ ಎ.ಸಿ.ಪಿ.(ಎನ್) ಉಪವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ  ದಾಳಿ ಕುರಿತು  ಠಾಣೆಯಿಂದ ರಾತ್ರಿ ೧೧-೦೦ ಗಂಟೆಗೆ ಹೊರಟಿದ್ದು, ಬಾತ್ಮಿ ಸ್ಥಳವಾದ ಕಲಬುರಗಿ ನಗರದ ಶಹಾಬಜಾರ ತಾಂಡಾದಲ್ಲಿ ರಾಮು ತಂದೆ ಹೇಮು ಚವ್ಹಾಣ ಇವರ ಮನೆ ಇನ್ನೂ ಸ್ವಲ್ಪ ದೂರ ಇರುವಂತೆ ಜೀಪು ನಿಲ್ಲಿಸಿದಾಗ ಎಲ್ಲರೂ ಜೀಪು ಇಳಿದು ಸ್ವಲ್ಪ ದೂರದಿಂದ ಒಂದು ಮನೆಯ ಗೋಡೆ ಮರೆಯಲ್ಲಿ ನಿಂತು ನೋಡಲಾಗಿ ಕಲಬುರಗಿ ನಗರದ ಶಹಾಬಜಾರ ತಾಂಡಾದಲ್ಲಿ ಇರುವ ರಾಮು ತಂದೆ ಹೇಮು ಚವ್ಹಾಣ  ಇವರ ಮನೆ ಎದುರಿನ ಖುಲ್ಲಾ ಜಾಗೆಯಲ್ಲಿ ಇರುವ ಸಾರ್ವಜನಿಕ ಕಟ್ಟೆಯ ಮೇಲೆ  ಲೈಟಿನ ಬೆಳಕಿನಲ್ಲಿ೧೦  ಜನರು ದುಂಡಾಗಿ ಕುಳಿತುಕೊಂಡು, ಅವರಲ್ಲಿ ಒಬ್ಬನು  ಇಸ್ಪೇಟ ಎಲೆಗಳು ಪೀಸ ಮಾಡಿ ತನ್ನ ಕೈಯಲ್ಲಿ ಹಿಡಿದಾಗ ಮತ್ತೊಬ್ಬನು  ಸ್ವಲ್ಪ ಎಲೆಗಳು ಕಟ್ಟ ಮಾಡಿ “ಎಕ್ಕಾ”  ಎಲೆ ಅಂಗಾಂತವಾಗಿ ಇಟ್ಟಾಗ ಎಲೆಗಳು ಕೈಯಲ್ಲಿ ಹಿಡಿದವನು ಎಲೆಗಳು ಅಂಗಾಂತವಾಗಿ ನೆಲಕ್ಕೆ ಒಗೆಯುತ್ತಿದ್ದಾಗ ಉಳಿದವರೆಲ್ಲರೂ ಅಂದರ ಬಾಹರಕ್ಕೆ ಎಂದು ಹಣವನ್ನು ಪಣಕ್ಕೆ ಹಚ್ಚುತ್ತಿದ್ದು ಲೈಟಿನ ಬೆಳಕಿನಲ್ಲಿ ನೋಡಿ ನನ್ನ ಜೊತೆಯಲ್ಲಿ ಬಂದಿದ್ದ ಪಂಚರಿಗೆ ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ತೋರಿಸಿ ಖಚಿತಪಡಿಸಿಕೊಂಡು, ಪಂಚರ ನಮ್ಮ ಸಮಕ್ಷಮದಲ್ಲಿ ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ರಾತ್ರಿ ೧೧-೩೦  ಗಂಟೆಗೆ ದಾಳಿ ಮಾಡಿ ಅಂದರ ಬಾಹರ ಇಸ್ಪೇಟ ಜೂಜಾಟದಲ್ಲಿ ತೊಡಗಿದ ೧೦ ಜನರನ್ನು ನಾನು ಮತ್ತು ಸಿಬ್ಬಂದಿಯವರು ಹಿಡಿದು ಅವರಿಗೆ ವಶಕ್ಕೆ ತೆಗೆದುಕೊಂಡು, ಅವರ ಹೆಸರು ವಿಳಾಸ ವಿಚಾರಿಸಲೂ ಅವರಲ್ಲಿ ಒಬ್ಬನು ತನ್ನ ಹೆಸರು  ೧)ಗುಂಡಪ್ಪ ತಂದೆ ಅಣ್ಣೆಪ್ಪ ದೇಸಾಯಿ ವ:೩೬ವರ್ಷ ಉ:ಪೇಟಿಂಗ ಕೆಲಸ ಜಾತಿ ಲಿಂಗಾಯತ ಸಾ: ರಾಜೀವಗಾಂಧಿ ನಗರ ಕಲಬುರಗಿ ಹಾ:ವ: ಎಕಲವ್ಯ ಶಾಲೆ ಹತ್ತಿರ ಶಿವಶಕ್ತಿ ನಗರ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ ಕೆಲವು ಇಸ್ಪೇಟ ಎಲೆಗಳು ನಗದು ಹಣ ೧೩೦೦/- ರೂ. ದೊರೆತವು ೨)ಶಿವುಕುಮಾರ ತಂದೆ ರೇವಣಸಿದ್ಧಪ್ಪ ಬಿರಾದಾರ ವ:೪೦ ವರ್ಷ ಉ:ಬೇಕರಿ ಕೆಲಸ ಜಾತಿ ಲಿಂಗಾಯತ ಸಾ:ಮಾಹಾದೇವ ನಗರ ಕಮಾನ ಹತ್ತಿರ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ ನಗದು ಹಣ ೧೧೦೦/- ರೂ. ದೊರೆತವು. ೩)ಸೇನಾಪತಿ @ಜಯ ತಂದೆ ಶಾಮರಾವ  ರಾಠೋಡ ವ:೪೨ ವರ್ಷ ಉ:ಮುನೀಮ ಕೆಲಸ ಜಾತಿ ಲಂಬಾಣಿ ಸಾ;ಶಹಾಬಜಾರ ತಾಂಡಾ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ ನಗದು ಹಣ ೮೦೦/- ರೂ. ದೊರೆತವು. ೪)ಕಲ್ಯಾಣಪ್ಪ ತಂದೆ ಶಿವರುದ್ರಪ್ಪ ಸಂಗೋಳಗಿ @ ಸಂಗೋಗಿ  ವ:೪೧ ವರ್ಷ ಉ: ಮುನೀಮ ಕೆಲಸ ಜಾತಿ ಲಿಂಗಾಯತ ಸಾ; ಸೈಯ್ಯದ ಚಿಂಚೋಳಿ ಗ್ರಾಮ ತಾ:ಜಿ: ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ ನಗದು ಹಣ ೧೬೦೦/- ರೂ. ದೊರೆತವು. ೫) ನಂದಕುಮಾರ ತಂದೆ ಮಾಣಿಕ ರಾಠೋಡ ವ:೩೮ ವರ್ಷ ಉ:ಕೂಲಿಕೆಲಸ ಜಾತಿ ಲಂಬಾಣಿ ಸಾ:ಶಹಾಬಜಾರ ತಾಂಡಾ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ ನಗದು ಹಣ ೧೦೫೦/- ರೂ. ದೊರೆತವು. ೬)ರಾಜು ತಂದೆ ಮಾಣಿಕ ರಾಠೋಡ ವ:೪೨ ರ‍್ಷ ಉ:ಇಟ್ಟಂಗಿ ಭಟ್ಟಿ ವ್ಯಾಪರ ಜಾತಿ ಲಂಬಾಣಿ ಸಾ: ಶಹಾಬಜಾರ ತಾಂಡಾ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ ನಗದು ಹಣ ೧೨೫೦/- ರೂ. ದೊರೆತವು. ೭)ಪ್ರಕಾಶ ತಂದೆ ಪುಲಚಂದ ಪವಾರ ವ:೪೪ ವರ್ಷ ಉ:ಕೂಲಿಕೆಲಸ ಜಾತಿ ಲಂಬಾಣಿ ಸಾ:ಶಹಾಬಜಾರ ತಾಂಡಾ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ ನಗದು ಹಣ ೯೫೦/- ರೂ. ದೊರೆತವು. ೮)ದಶರಥ  ತಂದೆ ಹರಿಶ್ಚಂದ್ರ ರಾಠೋಡ ವ:೪೦ ವರ್ಷ ಉ: ಸುಪರವೈಜರ ಕೆಲಸ ಜಾತಿ ಲಂಬಾಣಿ ಸಾ: ಶಹಾಬಜಾರ ತಾಂಡಾ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ ನಗದು ಹಣ ೧೫೦೦/- ರೂ. ದೊರೆತವು ೯)ಮಲ್ಲಿಕಾರ್ಜುನ ತಂದೆ  ಹಣಮಂತರಾಯ ಈಕನೂರ ವ:೩೨ ವರ್ಷ ಉ: ಕೂಲಿಕೆಲಸ ಜಾತಿ ಲಿಂಗಾಯತ ಸಾ; ಸೈಯ್ಯದ ಚಿಂಚೋಳಿ ಗ್ರಾಮ ತಾ:ಜಿ: ಕಲಬುರಗಿ ಹಾ:ವ: ಚನ್ನವೀರ ನಗರ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ ನಗದು ಹಣ ೮೫೦/- ರೂ. ದೊರೆತವು. ೧೦)ವಿಲಾಸ ತಂದೆ ಧನಸಿಂಗ ಆಡೆ ವ:೩೯ ವರ್ಷ ಉ: ಇಟ್ಟಂಗಿ ಭಟ್ಟಿ ವ್ಯಾಪರ  ಜಾತಿ ಲಂಬಾಣಿ ಸಾ:ಶಹಾಬಜಾರ ತಾಂಡಾ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ ನಗದು ಹಣ ೧೪೦೦/- ರೂ. ದೊರೆತವು. ಮತ್ತು ಇಸ್ಪೇಟ ಜೂಜಾಟ ಸ್ಥಳದಲ್ಲಿ  ಕೆಲವು  ಇಸ್ಪೇಟ ಎಲೆಗಳು ಮತ್ತು ನಗದು ೩೨,೨೮೦/- ರೂ. ದೊರೆತವು. ಆಗ ನಾನು ಕೇಸಿನ ಪುರಾವೆಗೋಸ್ಕರ ಒಂದು ದಸ್ತಿಯಲ್ಲಿ ನಗದು ಹಣ ೪೪,೦೮೦/- ರೂ.  ಮತ್ತು ೫೨ ಇಸ್ಪೇಟ ಎಲೆಗಳು ಪಂಚರು ಸಹಿಸಿದ ಚೀಟಿ ಅಂಟಿಸಿ ವಶಕ್ಕೆ ತೆಗೆದುಕೊಂಡು ಜಪ್ತಪಡಿಸಿಕೊಂಡೆನು. ಮತ್ತು ಈ ಮೇಲಿನ ೧೦ ಜನರು ಅಂದರ ಬಾಹರ ಇಸ್ಪೇಟ ಜೂಜಾಟದಲ್ಲಿ ನಿರತರಾದ ಬಗ್ಗೆ ಖಚಿತಪಟ್ಟಿದ್ದರಿಂದ ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ವಶಕ್ಕೆ ತೆಗೆದುಕೊಂಡೇವು. ಸದರ ಜಪ್ತಿ ಪಂಚನಾಮೆ ದಿನಾಂಕ ೦೫/೦೫/೨೦೨೨ ರಂದು  ರಾತ್ರಿ ೧೧-೩೦ ಗಂಟೆಯಿಂದ ಇಂದು ದಿನಾಂಕ ೦೬/೦೫/೨೦೨೨ ರಂದು ಮಧ್ಯರಾತ್ರಿ ೧೨-೩೦  ಗಂಟೆಯವರೆಗೆ  ಸದರ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮಲ್ಲಿ ಬರೆದು ಮುಗಿಸಲಾಯಿತು. ಸದರಿ ಅಂದರ ಬಾಹರ ಇಸ್ಪೇಟ ಜೂಜಾಟದಲ್ಲಿ ನಿರತರಾದ  ಈ ಮೇಲೆ ನಮೂದು ಮಾಡಿದ ೧೦ ಜನರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆರೋಪಿ ಮತ್ತು ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ ಸರ್ಕಾರ  ಪರ ದೂರು ಎಸ್.ಎಚ.ಓ. ರವರಿಗೆ ಕೊಟ್ಟಿರುತ್ತೇನೆ. ಎಂದು  ಕೊಟ್ಟ ಸರ್ಕಾರ ಪರ ದೂರು ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

Last Updated: 24-05-2022 01:46 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080